Showing posts with label ಟ್ರೂಡೋ. Show all posts
Showing posts with label ಟ್ರೂಡೋ. Show all posts

Friday, November 15, 2024

ಈಗ ಕೆನಡಾದ ಟ್ರೂಡೋ ಬುಡಕ್ಕೇ ಬಂತು …...!

ಈಗ ಕೆನಡಾದ ಟ್ರೂಡೋ ಬುಡಕ್ಕೇ ಬಂತು …...!

ಮ್ಮೆಲ್ಲ ಸಮಸ್ಯೆಗಳಿಗೂ ಭಾರತವೇ ಮೂಲ ಎಂಬುದಾಗಿ ಹೇಳುತ್ತಾ ಭಾರತದ ವಿರುದ್ಧ ಕೆಂಗಣ್ಣು ಬೀರುತ್ತಿದ್ದ ಖಲಿಸ್ಥಾನಿ ಉಗ್ರಗಾಮಿಗಳು ಇದೀಗ ಕೆನಡಾದ ಸ್ಥಳೀಯರ ಬುಡಕ್ಕೇ ಬತ್ತಿ ಇಡಲು ಹೊರಟಿದ್ದಾರೆ. ಕೆನಡಾದ ಸ್ಥಳೀಯರನ್ನೇ ಇಂಗ್ಲೆಂಡಿಗೆ ಅಟ್ಟುವ ಯೋಚನೆ ಮಾಡಹೊರಟಿದ್ದಾರೆ.

ʼತಲೆಗೆ ಹಾಕಿಕೊಂಡ ನೀರು ಬೇರೆ ಎಲ್ಲಿಗೂ ಹೋಗುವುದಿಲ್ಲ, ತನ್ನ ಕಾಲ ಬುಡಕ್ಕೇ ಇಳಿಯುತ್ತದೆʼ ಎಂಬ ಸತ್ಯ ಕೆನಡಾ ಪ್ರಧಾನ ಮಂತ್ರಿ ಜಸ್ಟಿನ್‌ ಟ್ರುಡೋ ಅರಿವಿಗೆ ಈಗಲಾದರೂ ಬರಲಾರಂಭ ಆಗಿರಬಹುದು.

ಏನಿದು ವಿಚಾರ ಎಂಬ ಪ್ರಶ್ನೆ ಎದ್ದಿರಬಹುದಲ್ಲವೇ?

ಖಲಿಸ್ಥಾನಿ ಉಗ್ರಗಾಮಿಗಳು ಇದೀಗ ಕೆನಡಾದ ಸ್ಥಳೀಯರನ್ನೇ ಆಕ್ರಮಣಕಾರರು ಎಂಬುದಾಗಿ ಕರೆದು 'ಇಂಗ್ಲೆಂಡ್, ಯುರೋಪಿಗೆ ವಾಪಸಾಗಿʼ ಎಂದು ಹೇಳಲು ಹೊರಟಿದ್ದಾರೆ.

ಖಲಿಸ್ಥಾನಿ ಉಗ್ರಗಾಮಿಗಳ ಹೊಸ ವರಸೆ ಇದೀಗ ಅಲ್ಲಿ ನಡೆದ ʼನಗರ ಕೀರ್ತನ್‌ʼ ಕಾರ್ಯಕ್ರಮದ ಎರಡು ನಿಮಿಷಗಳ ವಿಡಿಯೋ ಒಂದರಲ್ಲಿ ಬೆಳಕಿಗೆ ಬಂದಿದೆ. ಈ ಕಾರ್ಯಕ್ರಮದ ಮೆರವಣಿಗೆಯಲ್ಲಿ ಖಲಿಸ್ಥಾನಿ ಉಗ್ರಗಾಮಿಗಳು ತಮ್ಮ ಧ್ವಜಗಳನ್ನು ಪ್ರದರ್ಶಿಸುತ್ತಾ ʼ “ಇದು ಕೆನಡಾ, ನಮ್ಮದೇ ದೇಶ. ನೀವು [ಕೆನಡಿಯನ್ನರು] ಹಿಂತಿರುಗಿ, ಇಂಗ್ಲೆಂಡಿಗೆ, ಯುರೋಪಿಗೆ ಹೋಗಿ" ಎಂದು ಧ್ವನಿವರ್ಧಕದಲ್ಲಿ ಕೂಗಿ ಹೋಗಿ ಹೇಳುತ್ತಿರುವ ದೃಶ್ಯದ ಈ ವಿಡಿಯೋ ಇದೀಗ ವೈರಲ್ ಆಗಿದೆ.

ಭಾರತೀಯ ಗುಪ್ತಚರ ಮೂಲಗಳು ಈ ಘಟನೆಯನ್ನು ಕೆನಡಾದ "ಹೊಸ ಸಾಮಾನ್ಯ ಸ್ಥಿತಿ" ಎಂದು ಕರೆದಿವೆ. ʼಖಲಿಸ್ಥಾನಿಗಳು ನಿಧಾನವಾಗಿ ದೇಶದ ಎಲ್ಲಾ ಕ್ಷೇತ್ರಗಳನ್ನೂ ವಶಪಡಿಸಿಕೊಳ್ಳುತ್ತಿದ್ದಾರೆ. ಸರಿಯಾದ ಕಣ್ಗಾವಲು ಇಲ್ಲ. ಹೀಗಾಗಿ ಈ ಗುಂಪುಗಳು ಸ್ಥಳೀಯ ಕೆನಡಿಯನ್ನರಿಂದಲೂ ನಿಯಂತ್ರಣವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಿವೆ. ಹಿಂದೂಗಳಿಂದ ರಕ್ಷಣೆ ಒದಗಿಸಲು ಹಣ ಕೀಳಲಾಗುತ್ತದೆ. ಈಗ ಸ್ಥಳೀಯ ಕೆನಡಿಯನ್ನರಿಗೆ ಅವರ ಕಾಲೋನಿಗಳಲ್ಲೇ ಬೆದರಿಕೆ ಇದೆʼ ಎಂದು ಭಾರತೀಯ ಗುಪ್ತಚರ ಮೂಲಗಳು ಹೇಳಿವೆ.

ಕಳೆದ ವರ್ಷ ಭಾರತವು ʼಭಯೋತ್ಪಾದಕʼ ಎಂಬುದಾಗಿ ಘೋಷಿಸಿದ್ದ ಖಲಿಸ್ಥಾನಿ ಸಹಾನುಭೂತಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ನಂತರ ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ಹದಗೆಟ್ಟಿವೆ.

ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರು ಜೂನ್ 2023ಲ್ಲಿ, ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರು ಮತ್ತು ಭಾರತ ಸರ್ಕಾರದ ನೇರ ಪಾತ್ರವಿದೆ ಎಂದು ಆಪಾದಿಸಿ ಆ ಕುರಿತು ತನಿಖೆಗೆ ಆಜ್ಞಾಪಿಸಿದ್ದರು. ಈ ಘಟನೆಯ ಬಳಿಕ ಉಭಯ ದೇಶಗಳೂ ಪರಸ್ಪರರ ಉನ್ನತ ರಾಜತಾಂತ್ರಿಕರನ್ನು ಹೊರಹಾಕಿದ್ದವು.

ಭಾರತವು ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕಿದೆ.  ಟ್ರೂಡೊ ಭಾರತದ ವಿರುದ್ಧ ಸಂಚು ಹೂಡುತ್ತಿರುವ ಖಲಿಸ್ಥಾನಿಗಳಿಗೆ ಆಶ್ರಯ ನೀಡುತ್ತಿದೆ ಎಂದು ಆರೋಪಿಸಿದೆ.

ಇದೇ ವೇಳೆಯಲ್ಲಿ ಕೆನಡಾ ನೆಲದಲ್ಲಿ ಹಿಂದೂಗಳ ಮೇಲೆ ಖಲಿಸ್ಥಾನಿಗಳಿಂದ ಹಲ್ಲೆ ನಡೆಯುತ್ತಿದೆ. ಇತ್ತೀಚಿಗೆ, ಕೆನಡಾದಲ್ಲಿ ಹಿಂದೂಗಳ ಮೇಲೆ ದಾಳಿ ಘಟನೆಗಳೂ ನಡೆದಿವೆ. ದೇವಸ್ಥಾನದಲ್ಲಿ ಹಿಂದೂ  ಭಕ್ತರ ಮೇಲೆ ಹಲ್ಲೆ ನಡೆದಿದೆ. ದೇವಾಲಯಗಳಲ್ಲಿ ಹಿಂದೂ ಭಕರ ಮೇಲಿನ "ಉದ್ದೇಶಪೂರ್ವಕ ದಾಳಿ"ಯನ್ನು ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನೂ ನೀಡಿದ್ದಾರೆ.

ಕೆನಡಾದಲ್ಲಿ ನಡೆಯಲಿರುವ ಮುಂದಿನ ವರ್ಷದ ಚುನಾವಣೆಯಲ್ಲಿ ಸಂಸದ ಜಗ್ಮೀತ್ ಸಿಂಗ್ ಅವರ ಬೆಂಬಲವನ್ನು ಖಚಿತಪಡಿಸಿಕೊಳ್ಳಲು ಪ್ರಧಾನಿ ಟ್ರೂಡೊ ಖಲಿಸ್ತಾನಿ ಗುಂಪುಗಳನ್ನು ಬೆಂಬಲಿಸುತ್ತಿದ್ದಾರೆ ಎಂದು ಭಾರತೀಯ ಗುಪ್ತಚರ ಮತ್ತು ಸರ್ಕಾರಿ ಏಜೆನ್ಸಿಗಳು ಅಭಿಪ್ರಾಯಪಟ್ಟಿವೆ. ತನ್ನ ಜನಪ್ರಿಯತೆಯ ಶ್ರೇಯಾಂಕದಲ್ಲಿ ಕುಸಿತವಾಗಿರುವುದನ್ನು ಕಂಡಿರುವ ಟ್ರೂಡೋ, ತನ್ನ ಸರ್ಕಾರ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ ಎಂದು ಬಹಿರಂಗ ಪಡಿಸಿವೆ. ಆ ಬಳಿಕ ತನ್ನ ಭಾರತ ವಿರೋಧೀ ಆರೋಪಗಳು ಕೇವಲ ಗುಪ್ತಚರ ಮಾಹಿತಿ ಮಾತ್ರ ಅದಕ್ಕೆ ಯಾವುದೇ ದೃಢವಾದ ಪುರಾವೆಗಳಿಲ್ಲ" ಎಂದು ಟ್ರೂಡೋ ಒಪ್ಪಿಕೊಂಡಿದ್ದರು.

 “ಟ್ರೂಡೊ ಅವರು ತಾನು ಹೇಗೆ ಐಎಸ್‌ಐ ಮತ್ತು ಖಲಿಸ್ಥಾನಿಗಳ ಕೈಗೊಂಬೆಯಾಟ ಆಡುತ್ತಿದ್ದೇನೆ ಎಂಬುದನ್ನು ಅರ್ಥ ಮಾಡಿಕೊಳ್ಳದೆ, ಎಲ್ಲದಕ್ಕೂ ಭಾರತದ ಮೇಲೆ ಗೂಬೆ ಕೂರಿಸುವ ಮೂಲಕ ಬಾಲಿಶ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಈ ಆರೋಪಗಳು ದ್ವಿಪಕ್ಷೀಯ ಸಂಬಂಧಗಳನ್ನು ಹಾಳುಮಾಡುತ್ತಿವೆ ಮತ್ತು ಅವರ ವೈಯಕ್ತಿಕ ಇಮೇಜ್ ಅನ್ನು ಹಾಳುಮಾಡುತ್ತಿವೆ ಎಂದು ಗುಪ್ತಚರ ಮೂಲಗಳು ಹೇಳಿದ್ದವು.

ಕೆನಡಾದಲ್ಲಿನ ಖಲಿಸ್ಥಾನಿಗಳ ಹೊಸ ಹುನ್ನಾರವನ್ನು ತೋರಿಸುವ ವಿಡಿಯೋ ಇಲ್ಲಿದೆ.


ವಿಡಿಯೋದ ʼಎಕ್ಸ್‌ʼ ಕೊಂಡಿ ನೋಡಲು ಇಲ್ಲಿ ಕ್ಲಿಕ್‌ ಮಾಡಿ:
https://twitter.com/i/status/1856837451697844720

Advertisement