Showing posts with label ಧಾನ್ಯ. Show all posts
Showing posts with label ಧಾನ್ಯ. Show all posts

Sunday, August 11, 2024

109 ಹೊಸ ಕೃಷಿ ತಳಿಗಳ ಬಿಡುಗಡೆ

 109  ಹೊಸ ಕೃಷಿ ತಳಿಗಳ ಬಿಡುಗಡೆ

ವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 2024 ಆಗಸ್ಟ್‌ 11ರ ಭಾನುವಾರ ನದೆಹಲಿಯ ಭಾರತ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಹೆಚ್ಚು ಇಳುವರಿ ನೀಡುವ, ಹಾಗೂ ಜೈವಿಕ ಬಲವರ್ಧಿತ ಹಾಗೂ ಯಾವುದೇ ಹವಾಮಾನಕ್ಕೆ ಹೊಂದಿಕೊಳ್ಳಬಲ್ಲ 109 ಬೆಳೆ ತಳಿಗಳ ಬೀಜಗಳನ್ನು ಬಿಡುಗಡೆ ಮಾಡಿದರು.

ಪ್ರಧಾನಿಯವರು ಬಿಡುಗಡೆ ಮಾಡಿದ 109 ತಳಿಗಳಲ್ಲಿ  34 ಧಾನ್ಯ ಬೆಳೆಗಳಾಗಿದ್ದು 27 ತೋಟಗಾರಿಕಾ ಬೆಳೆ ತಳಿಗಳಾಗಿವೆ. ಹೊಲಗಳಲ್ಲಿ  ಬೆಳೆಯುವ ಬೆಳೆ ತಳಿಗಳಲ್ಲಿ ರಾಗಿ, ಮೇವು ಬೆಳೆಗಳು, ಎಣ್ಣೆಕಾಳುಗಳು, ದ್ವಿದಳ ಧಾನ್ಯಗಳು, ಕಬ್ಬು, ಹತ್ತಿ, ನಾರು ಮತ್ತು ಇತರ ಸಂಭಾವ್ಯ ಬೆಳೆಗಳು ಸೇರಿವೆ.

ತೋಟಗಾರಿಕಾ ಬೆಳೆಗಳ ಪೈಕಿ ವಿವಿಧ ಬಗೆಯ ಹಣ್ಣುಗಳು, ತರಕಾರಿ ಬೆಳೆಗಳು, ತೋಟದ ಬೆಳೆಗಳು, ಗಡ್ಡೆ ಬೆಳೆಗಳು, ಸಾಂಬಾರು ಪದಾರ್ಥಗಳು, ಹೂವುಗಳು ಮತ್ತು ಔಷಧೀಯ ಬೆಳೆ ತಳಿಗಳ ಬೀಜಗಳು ಸೇರಿವೆ.

ಈ ಸಂದರ್ಭದಲ್ಲಿ ಪ್ರಧಾನಿಯವರು ರೈತರು ಮತ್ತು ವಿಜ್ಞಾನಿಗಳೊಂದಿಗೆ ಮಾತುಕತೆ ನಡೆಸಿದರು. ಈ ಹೊಸ ಬೆಳೆ ತಳಿಗಳ ಪ್ರಾಮುಖ್ಯತೆಯನ್ನು ಚರ್ಚಿಸಿದ ಪ್ರಧಾನಮಂತ್ರಿಯವರು ಕೃಷಿಯಲ್ಲಿ ಮೌಲ್ಯವರ್ಧನೆಯ ಮಹತ್ವದ ಬಗ್ಗೆ ಒತ್ತಿ ಹೇಳಿದರು. ಈ ಹೊಸ ತಳಿಗಳು ಹೆಚ್ಚು ಪ್ರಯೋಜನಕಾರಿಯಾಗುತ್ತವೆ, ಇದು ಅವರ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ರೈತರು ಹೇಳಿದರು.

ಪ್ರಧಾನಮಂತ್ರಿಯವರು ರಾಗಿಯ ಮಹತ್ವವನ್ನು ಚರ್ಚಿಸಿದರು ಮತ್ತು ಜನರು ಪೌಷ್ಟಿಕ ಆಹಾರದ ಕಡೆಗೆ ಹೇಗೆ ಸಾಗುತ್ತಿದ್ದಾರೆ ಎಂಬುದನ್ನು ಒತ್ತಿ ಹೇಳಿದರು. ನೈಸರ್ಗಿಕ ಕೃಷಿಯಿಂದ ಆಗುವ ಪ್ರಯೋಜನಗಳು ಮತ್ತು ಸಾವಯವ ಕೃಷಿಯತ್ತ ಜನಸಾಮಾನ್ಯರಲ್ಲಿ ಹೆಚ್ಚುತ್ತಿರುವ ನಂಬಿಕೆಯ ಬಗ್ಗೆ ಅವರು ಮಾತನಾಡಿದರು. ಜನರು ಸಾವಯವ ಆಹಾರವನ್ನು ಸೇವಿಸಲು ಮತ್ತು ಬೇಡಿಕೆಯಿಡಲು ಪ್ರಾರಂಭಿಸಿದ್ದಾರೆ. ನೈಸರ್ಗಿಕ ಕೃಷಿಗೆ ಉತ್ತೇಜನ ನೀಡಲು ಸರ್ಕಾರ ಕೈಗೊಂಡಿರುವ ಪ್ರಯತ್ನಗಳಿಗೆ ರೈತರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಅವರು ನುಡಿದರು.

ನೈಸರ್ಗಿಕ ಕೃಷಿ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಕೃಷಿ ವಿಜ್ಞಾನ ಕೇಂದ್ರಗಳು (ಕೆವಿಕೆ) ವಹಿಸಿದ ಪಾತ್ರವನ್ನು ರೈತರು ಶ್ಲಾಘಿಸಿದರು. ಕೆವಿಕೆಗಳು ಪ್ರತಿ ತಿಂಗಳು ಅಭಿವೃದ್ಧಿಪಡಿಸುತ್ತಿರುವ ಹೊಸ ತಳಿಗಳ ಪ್ರಯೋಜನಗಳ ಬಗ್ಗೆ ರೈತರಿಗೆ ಅವುಗಳ ಪ್ರಯೋಜನಗಳ ಬಗ್ಗೆ ಅರಿವು ಹೆಚ್ಚಿಸಲು ಪೂರ್ವಭಾವಿಯಾಗಿ ತಿಳಿಸಬೇಕು ಎಂದು ಪ್ರಧಾನಮಂತ್ರಿ ಸಲಹೆ ನೀಡಿದರು.

ಈ ಹೊಸ ಬೆಳೆ ತಳಿಗಳ ಅಭಿವೃದ್ಧಿಗಾಗಿ ವಿಜ್ಞಾನಿಗಳನ್ನು ಪ್ರಧಾನಿ ಶ್ಲಾಘಿಸಿದರು. ಬಳಕೆಯಾಗದ ಬೆಳೆಗಳನ್ನು ಮುಖ್ಯವಾಹಿನಿಗೆ ತರಲು ಪ್ರಧಾನಿ ನೀಡಿದ ಸಲಹೆಗೆ ಅನುಗುಣವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದರು.

Advertisement