ಹೈದರಾಬಾದ್: ಪಟಾಕಿ ಅಂಗಡಿಯಲ್ಲಿ ಅಗ್ನಿ ಅನಾಹುತ
ಹೈದರಾಬಾದ್: ಹನುಮಾನ್ ತೆಕ್ಡಿಯ ಪ್ರಗತಿ ಮಹಾ ವಿದ್ಯಾಲಯದಲ್ಲಿ ೨೦೨೪ ಅಕ್ಟೋಬರ್ ೨೭ರ ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಪರವಾನಗಿ ಇಲ್ಲದ ಪಟಾಕಿ ಅಂಗಡಿಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತು.ಪಕ್ಕದ ಟಿಫಿನ್ ಸೆಂಟರ್‌ಗೆ
ಬೆಂಕಿ ವ್ಯಾಪಿಸಿ, ಅದು ಸುಟ್ಟು ಕರಕಲಾಯಿತು. ಬೆಂಕಿಯ ಬಗ್ಗೆ ಮಾಹಿತಿ
ಪಡೆದ ಅಬಿಡ್ಸ್ ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದರು. ನಾಲ್ಕು ಅಗ್ನಿಶಾಮಕ ಎಂಜಿನ್‌ಗಳು ಕಾರ್ಯಾಚರಣೆಗೆ ಇಳಿದು, ಅಂತಿಮವಾಗಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದವು.
ಬೆಂಕಿ ಅನಾಹುತ ಸಂಭವಿಸುತ್ತಿದ್ದಂತೆ
ಪಟಾಕಿ ಅಂಗಡಿಯಿಂದ ಜನ ಹೊರಕ್ಕೋಡಿ ಬರುತ್ತಿದ್ದ ದೃಶ್ಯ ಹಾಗೂ ಪಟಾಕಿಗಳು ಪಟಪಟನೆ ಸಿಡಿಯುತ್ತಿದ್ದ
ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದೆ.
ಕಟ್ಟಡ
ನಿವಾಸಿಗಳು,
ಪ್ರಯಾಣಿಕರು ಮತ್ತು ಇತರ ಅಂಗಡಿ ಮಾಲೀಕರು ದುರಂತದಿಂದ ಭಯಭೀತರಾಗಿದ್ದರು. 23 ಕ್ಕೂ ಅಗ್ನಿ ಶಾಮಕ ವಾಹನಗಳು ಕಟ್ಟಡವನ್ನು ತೆರವು ಮಾಡಿಸಿ, 12 ಜನರನ್ನು ರಕ್ಷಿಸಿದರು. ಕೈಗಳಿಗೆ ಸುಟ್ಟಗಾಯಗಳಾಗಿರುವ ಇಬ್ಬರು
ಮಹಿಳೆಯರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.