ಮಾಘ ಪೂರ್ಣಿಮೆ ಪವಿತ್ರ ಸ್ನಾನ: ಭಕ್ತರ ಮೇಲೆ ಹೂ ಮಳೆ
ಮಾಘ ಹುಣ್ಣಿಮೆಯ ದಿನವಾದ ಬುಧವಾರ (2025 ಫೆಬ್ರುವರಿ
12) ಲಕ್ಷಾಂತರ ಭಕ್ತರು ʼಮಾಘ ಪೂರ್ಣಿಮೆ ಪವಿತ್ರ ಸ್ನಾನʼ ಆರಂಭಿಸುವುದರೊಂದಿಗೆ ಉತ್ತರ ಪ್ರದೇಶದ ಪ್ರಯಾಗರಾಜ್ ನ ಗಂಗಾ, ಯುಮುನಾ,
ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ 2025ರ ಮಹಾಕುಂಭವು ಉತ್ತುಂಗಕ್ಕೆ ಏರಿದೆ.
ತ್ರಿವೇಣಿ ಸಂಗಮದಲ್ಲಿ ಮಾಘ ಪೂರ್ಣಿಮಾ ಪವಿತ್ರ
ಸ್ನಾನ ಮಾಡುತ್ತಿದ್ದ ಭಕ್ತರ ಮೇಲೆ ಹೆಲಿಕಾಪ್ಟರ್ ಮೂಲಕ ʼಪುಷ್ಪ ವೃಷ್ಟಿʼ ಮಾಡಲಾಯಿತು.
ಪುಷ್ಪ ವೃಷ್ಟಿಯ ANI ವಿಡಿಯೋ ಇಲ್ಲಿದೆ.
ಕಲ್ಪವಾಸಿಗಳಿಗೆ ಮಾಘ
ಪೂರ್ಣಿಮವು ಮತ್ತೊಂದು ಪವಿತ್ರ ಸ್ನಾನದ ಸಂದರ್ಭವಾಗಿದ್ದು ಸ್ನಾನ, ದಾನ ಮತ್ತು ಪೂಜೆಯ ಧಾರ್ಮಿಕ ಮಹತ್ವದ
ಬಗ್ಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಒತ್ತಿ ಹೇಳಿದ್ದಾರೆ.
ಒಂದು ತಿಂಗಳ ಕಲ್ಪವಾಸದ ಅವಧಿಯು ಮಾಘ ಪೂರ್ಣಿಮೆಯಂದು ಕೊನೆಗೊಳ್ಳುತ್ತದೆ.
ಜನವರಿ 13ರಿಂದ ಈವರೆಗೆ 45 ಕೋಟಿ ಭಕ್ತರು ಪವಿತ್ರ
ಸ್ನಾನ ಮಾಡಿದ್ದು, ಎರಡು ಪ್ರಮುಖ ಸ್ನಾನ ಹಬ್ಬಗಳು ಉಳಿದಿರುವುದರಿಂದ, ಪವಿತ್ರ ಸ್ನಾನ ಮಾಡುವ ಒಟ್ಟು ಭಕ್ತರ ಸಂಖ್ಯೆ 50 ಕೋಟಿ ಮೀರುವ ನಿರೀಕ್ಷೆಯಿದೆ.
ಜನವರಿ 13 ರಂದು ಪ್ರಾರಂಭವಾದ ಮಹಾ ಕುಂಭವು ಫೆಬ್ರವರಿ 26 ರವರೆಗೆ ಮುಂದುವರಿಯಲಿದೆ. ಫೆಬ್ರವರಿ 3ರಂದು ಬಸಂತ್
ಪಂಚಮಿ - ಮೂರನೇ ಶಾಹಿ ಸ್ನಾನ ನಡೆದಿದ್ದು, ಇಂದು-, ಫೆಬ್ರವರಿ 12 ರಂದು ಮಾಘಿ ಪೂರ್ಣಿಮಾ ಶಾಹಿ ಸ್ನಾನ ನಡೆಯುತ್ತಿದೆ.
ಫೆಬ್ರವರಿ 26ರ ಮಹಾ
ಶಿವರಾತ್ರಿಯಂದು ಇನ್ನೊಂದು ಪವಿತ್ರ ಸ್ನಾನ ನೆರವೇರಲಿದೆ.
ಈ ಕೆಳಗಿನವುಗಳನ್ನೂ ಓದಿರಿ: