Showing posts with label ಬೆಂಗಳೂರು. Show all posts
Showing posts with label ಬೆಂಗಳೂರು. Show all posts

Sunday, April 13, 2025

ಹೊಸ ವರ್ಷದ ಮೊದಲ ಸತ್ಯನಾರಾಯಣ ಪೂಜೆ

 ಹೊಸ ವರ್ಷದ ಮೊದಲ ಸತ್ಯನಾರಾಯಣ ಪೂಜೆ 

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶ್ವಾವಸು ನಾಮ ಸಂವತ್ಸರದ ಮೊದಲ ಸತ್ಯನಾರಾಯಣ ಪೂಜೆಯನ್ನು ಚಿತ್ರಾ ಪೂರ್ಣಿಮಾ ದಿನವಾದ ೨೦೨೫ ಏಪ್ರಿಲ್‌ ೧೨ರ ಶನಿವಾರ ಶ್ರದ್ಧಾ ಭಕ್ತಿಯೊಂದಿಗೆ ನೆರವೇರಿಸಲಾಯಿತು.

ಅಪಾರ ಸಂಖ್ಯೆಯಲ್ಲಿ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದ ವಿಡಿಯೋ ಮತ್ತು ಕೆಲವು ಚಿತ್ರಗಳು ಇಲ್ಲಿವೆ.

ವಿಡಿಯೋ ನೋಡಲು ಯು ಟ್ಯೂಬ್‌ ಲಿಂಕ್‌  - https://youtu.be/QET2JtezdEo

ಅಥವಾ  ಕೆಳಗಿನ ಚಿತ್ರವನ್ನು ಕ್ಲಿಕ್‌ ಮಾಡಿರಿ.

👇👇👇




ಇವುಗಳನ್ನೂ ಓದಿರಿ:

ಶ್ರೀ ರಾಮ ನವಮಿ ಆಚರಣೆ

ವಿಶ್ವಾವಸು ಸಂವತ್ಸರದ ಚಾಂದ್ರ ಯುಗಾದಿ ಆಚರಣೆ

ಮಹಾಶಿವರಾತ್ರಿ ಸಂಭ್ರಮ- ರುದ್ರಾಭಿಷೇಕ

ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಗಣೇಶೋತ್ಸವ

ವಿನಾಯಕ ಚತುರ್ಥಿ ಆಚರಣೆ

ಮೂವತ್ತೇ ದಿನಗಳಲ್ಲಿ ಮೇಲೆದ್ದ ದೇವಾಲಯ...

ಅಂಗಾರಕ ಸಂಕಷ್ಟಿ ಏಕೆ ಮಹತ್ವಪೂರ್ಣ?
10ನೇ ಸತ್ಯನಾರಾಯಣ ಪೂಜೆ

ವೈಕುಂಠ ಏಕಾದಶಿ ಮಹೋತ್ಸವ

೨೦೨೫ಕ್ಕೆ ಸ್ವಾಗತವಿಶೇಷ ಪೂಜೆ Welcome to 2025

ದೇಗುಲ ವಾರ್ಷಿಕೋತ್ಸವ: ಪಂಚಹೋಮ

ಮಾಘ ಸತ್ಯನಾರಾಯಣ ಪೂಜೆ

ವರ್ಷದ ಕೊನೆಯ ಸಂಕಷ್ಟಿ ಪೂಜಾ

Sunday, April 6, 2025

ಶ್ರೀ ರಾಮ ನವಮಿ ಆಚರಣೆ

 ಶ್ರೀ ರಾಮ ನವಮಿ ಆಚರಣೆ

ಬೆಂಗಳೂರು: ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯಸ್ವಾಮಿ ದೇವಾಲಯದಲ್ಲಿ ೨೦೨೫ರ ಏಪ್ರಿಲ್‌ ೬ರ ಭಾನುವಾರ ಶ್ರದ್ಧಾ ಭಕ್ತಿಯೊಂದಿಗೆ ಶ್ರೀರಾಮ ನವಮಿಯನ್ನು ಆಚರಿಸಲಾಯಿತು.

ಶ್ರೀರಾಮ ನವಮಿಯ ಪ್ರಯುಕ್ತ ಎಲ್ಲ ದೇವರಿಗೂ ಅಭಿಷೇಕ, ಅಭಯ ಆಂಜನೇಯ ಸ್ವಾಮಿಗೆ ವಿಶೇಷ ಅಭಿಷೇಕ, ಶ್ರೀರಾಮ ಪೂಜಾ, ವೆಂಕಟೇಶ್ವರ ಅಷ್ಟೋತ್ತರ, ಚಾಮರ ಸೇವೆಯನ್ನು ಸಲ್ಲಿಸಲಾಯಿತು.

ರಾತ್ರಿ ಭಜನೆ, ಮಹಾಮಂಗಳಾರತಿ ನೆರವೇರಿತು. ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.

ಪೂಜಾ ಕಾರ್ಯಕ್ರಮದ ಬಳಿಕ ಭಕ್ತರೆಲ್ಲರಿಗೂ ಪಾನಕ, ಕೋಸಂಬರಿ, ಮಜ್ಜಿಗೆ ಪ್ರಸಾದ ವಿತರಿಸಲಾಯಿತು.

ಯೂ ಟ್ಯೂಬ್‌ ವಿಡಿಯೋ ನೋಡಲು ಕೆಳಗಿನ ಚಿತ್ರ ಅಥವಾ ಲಿಂಕ್‌ ಕ್ಲಿಕ್‌ಮಾಡಿರಿ: {https://youtu.be/XmvpPci20JM }

ಶ್ರೀರಾಮನ ಪ್ರವರ ತಿಳಿಯಲು ಈ ವಿಡಿಯೋ ನೋಡಿರಿ:

ಇವುಗಳನ್ನೂ ಓದಿರಿ:

ವಿಶ್ವಾವಸು ಸಂವತ್ಸರದ ಚಾಂದ್ರ ಯುಗಾದಿ ಆಚರಣೆ

ಮಹಾಶಿವರಾತ್ರಿ ಸಂಭ್ರಮ- ರುದ್ರಾಭಿಷೇಕ

ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಗಣೇಶೋತ್ಸವ

ವಿನಾಯಕ ಚತುರ್ಥಿ ಆಚರಣೆ

ಮೂವತ್ತೇ ದಿನಗಳಲ್ಲಿ ಮೇಲೆದ್ದ ದೇವಾಲಯ...

ಅಂಗಾರಕ ಸಂಕಷ್ಟಿ ಏಕೆ ಮಹತ್ವಪೂರ್ಣ?
10ನೇ ಸತ್ಯನಾರಾಯಣ ಪೂಜೆ

ವೈಕುಂಠ ಏಕಾದಶಿ ಮಹೋತ್ಸವ

೨೦೨೫ಕ್ಕೆ ಸ್ವಾಗತವಿಶೇಷ ಪೂಜೆ Welcome to 2025

ದೇಗುಲ ವಾರ್ಷಿಕೋತ್ಸವ: ಪಂಚಹೋಮ

ಮಾಘ ಸತ್ಯನಾರಾಯಣ ಪೂಜೆ

ವರ್ಷದ ಕೊನೆಯ ಸಂಕಷ್ಟಿ ಪೂಜಾ

Sunday, March 30, 2025

ವಿಶ್ವಾವಸು ಸಂವತ್ಸರದ ಚಾಂದ್ರ ಯುಗಾದಿ ಆಚರಣೆ

 ವಿಶ್ವಾವಸು ಸಂವತ್ಸರದ ಚಾಂದ್ರ ಯುಗಾದಿ ಆಚರಣೆ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೫ ಮಾರ್ಚ್‌ ೩೦ರ ಭಾನುವಾರ ವಿಶ್ವಾವಸು ಸಂವತ್ಸರ ಆರಂಭದ ಚಾಂದ್ರ ಯುಗಾದಿಯನ್ನು ಸಡಗರದೊಂದಿಗೆ ಆಚರಿಸಲಾಯಿತು.

ಹೊಸ ವರ್ಷಾರಂಭದ ಪ್ರಯುಕ್ತ ವಿಶೇಷ ಅಲಂಕಾರ, ಅಭಿಷೇಕ, ಅರ್ಚನೆ, ಮಹಾಮಂಗಳಾರತಿ, ಪಂಚಾಂಗ ಶ್ರವಣ ಕಾರ್ಯಕ್ರಮಗಳು ನಡೆದವು. ಬಡಾವಣೆಯ ಶ್ರೀ ನಾರಾಯಣ ಸ್ವಾಮಿ ಮತ್ತು ಕುಟುಂಬದವರು ದೇವರಿಗೆ ಈ ದಿನದ ವಸ್ತ್ರಾಲಂಕಾರ ಸೇವೆಯನ್ನು, ಶ್ರೀ ಮುನಿರಾಜು ಮತ್ತು ಕುಟುಂಬದವರು ಪ್ರಸಾದ ಹಾಗೂ ಹೂವಿನ ಅಲಂಕಾರವನ್ನು ವಹಿಸಿಕೊಂಡಿದ್ದರು.

ಈ ಸಂದರ್ಭದ ಕೆಲವು ಚಿತ್ರಗಳು ಮತ್ತು ವಿಡಿಯೋಗಳು ಇಲ್ಲಿವೆ. ವಿಡಿಯೋ ನೋಡಲು ವಿಶೇಷ ವಸ್ತ್ರಾಲಂಕಾರದಲ್ಲಿ ಇರುವ ಎಡಬದಿಯ ಶ್ರೀ ವೆಂಕಟೇಶ್ವರ ಅಥವಾ ಕೆಳಗೆ ಇರುವ ಶ್ರೀ ಮಹಾಗಣಪತಿ ಇಲ್ಲವೇ ಅಭಯ ಆಂಜನೇಯ ಸ್ವಾಮಿ ಚಿತ್ರಗಳನ್ನು ಕ್ಲಿಕ್‌ ಮಾಡಿರಿ.

ಇವುಗಳನ್ನೂ ಓದಿರಿ:

ಮಹಾಶಿವರಾತ್ರಿ ಸಂಭ್ರಮ- ರುದ್ರಾಭಿಷೇಕ

ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಗಣೇಶೋತ್ಸವ

ವಿನಾಯಕ ಚತುರ್ಥಿ ಆಚರಣೆ

ಮೂವತ್ತೇ ದಿನಗಳಲ್ಲಿ ಮೇಲೆದ್ದ ದೇವಾಲಯ...

ಅಂಗಾರಕ ಸಂಕಷ್ಟಿ ಏಕೆ ಮಹತ್ವಪೂರ್ಣ?

10ನೇ ಸತ್ಯನಾರಾಯಣ ಪೂಜೆ


ವೈಕುಂಠ ಏಕಾದಶಿ ಮಹೋತ್ಸವ

೨೦೨೫ಕ್ಕೆ ಸ್ವಾಗತವಿಶೇಷ ಪೂಜೆ Welcome to 2025

ದೇಗುಲ ವಾರ್ಷಿಕೋತ್ಸವ: ಪಂಚಹೋಮ

ಮಾಘ ಸತ್ಯನಾರಾಯಣ ಪೂಜೆ

ವರ್ಷದ ಕೊನೆಯ ಸಂಕಷ್ಟಿ ಪೂಜಾ


ರಾತ್ರಿ ಜ್ಯೋತಿಯ ಮಂದ ಬೆಳಕಿನಲ್ಲಿ ನಡೆದ ಪಂಚಾರತಿ, ಮಹಾರತಿ, ಮಹಾ ಮಂಗಳಾರತಿ ವೀಕ್ಷಣೆಯ ಅನಿರ್ವಚನೀಯ ಆನಂದವನ್ನು ಭಕ್ತರು ಪಡೆದರು. ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.



Saturday, March 1, 2025

ಸಪ್ತ ಕಲಾವಿದೆಯರ ʼಪ್ರಥಮ ಪ್ರವೇಶʼ

 ಸಪ್ತ ಕಲಾವಿದೆಯರ ʼಪ್ರಥಮ ಪ್ರವೇಶʼ

ಲಾಂಜಲಿ ಆರ್ಟ್ ಅಕಾಡೆಮಿಯ‌ ಖ್ಯಾತ ನೃತ್ಯ ಕಲಾವಿದೆ ಶ್ರೀಮತಿ ಪ್ರತಿಭಾ ಸತ್ಯವಣ್ಣನ್ ಅವರಿಂದ ತರಬೇತಿ ಪಡೆದ ಏಳು ಪ್ರತಿಭಾವಂತ ಭರತನಾಟ್ಯ ಕಲಾವಿದರಿಂದ “ಪ್ರಥಮ ಪ್ರವೇಶ” ಕಾರ್ಯಕ್ರಮ.

ಮುಖ್ಯ ಅತಿಥಿಗಳು:

ಶ್ರೀಮತಿ ಅನುಷಾ ಕೆ ವಿ

ಭೂದೇವಿ ನಾಟ್ಯಶಾಲಾ ಸಂಸ್ಥಾಪಕಿ

ಶ್ರೀ ರಾಮಕೃಷ್ಣ ಉಪಾಧ್ಯ

ಲೇಖಕ, ಹಿರಿಯ ಪತ್ರಕರ್ತ

ಸ್ಥಳ: ಎ ಡಿ ಎ ರಂಗಮಂದಿರ

ಜೆ ಸಿ ರಸ್ತೆ, ರವೀಂದ್ರ ಕಾಲಕ್ಷೇತ್ರ ಎದಿರು

ದಿನಾಂಕ: ಭಾನುವಾರ, ಮಾರ್ಚ್ 2

ಸಮಯ: ಬೆಳಿಗ್ಗೆ 10.15 ಕ್ಕೆ

Tuesday, February 11, 2025

ಇದು ಹಕ್ಕಿಯಲ್ಲ.. ಶತಕೋಟಿ ಅವಕಾಶಗಳ ರನ್‌ ವೇ…!

 ಇದು ಹಕ್ಕಿಯಲ್ಲ.. ಶತಕೋಟಿ ಅವಕಾಶಗಳ ರನ್‌ ವೇ…!

ಇದು ಸುವರ್ಣ ನೋಟ

ಬೆಂಗಳೂರಿನಲ್ಲಿ ಏರೋ ಇಂಡಿಯಾದ 15 ನೇ ಆವೃತ್ತಿ ಭಾರತದ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರಿಂದ 2025ರ ಫೆಬ್ರುವರಿ 10ರಂದು ಬೆಂಗಳೂರಿನ ಯಲಹಂಕ ಏರ್‌ ಫೋರ್ಸ್‌ ಸ್ಟೇಷನ್ನಿನಲ್ ಉದ್ಘಾಟನೆಗೊಂಡಿದೆ. ಇದರೊಂದಿಗೆ ಏಷ್ಯಾದ ಅತಿದೊಡ್ಡ ಏರೋಸ್ಪೇಸ್‌ ಮತ್ತು ರಕ್ಷಣಾ ಪ್ರದರ್ಶನ ಅನಾವರಣಗೊಂಡಿವೆ.

ʼದಿ ರನ್‌ ವೇ ಟು ಎ ಬಿಲಿಯನ್‌ ಅಪರ್ಚುನಿಟೀಸ್‌ʼ ಎಂಬ ವಿಶಾಲ ಥೀಮಿನೊಂದಿಗೆ ಆರಂಭವಾಗಿರುವ ಈ ʼಲೋಹದ ಹಕ್ಕಿಗಳʼ ಐದು ದಿನಗಳ ಮೇಳದಲ್ಲಿ ಭಾರತ ಸೇರಿದಂತೆ 90 ದೇಶಗಳ 900 ಕ್ಕೂ ಹೆಚ್ಚು ಪ್ರದರ್ಶಕರು ಪಾಲ್ಗೊಂಡಿದ್ದಾರೆ. ಅಂದಾಜು 30 ರಕ್ಷಣಾ ಮಂತ್ರಿಗಳು ಮತ್ತು 100 ಕ್ಕೂ ಹೆಚ್ಚು OEM ಗಳು (ಮೂಲ ಸಲಕರಣೆ ತಯಾರಕರು) ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಜಾಗತಿಕ ಏರೋಸ್ಪೇಸ್‌ ಕಂಪೆನಿಗಳ ಅತ್ಯಾಧುನಿಕ ವಿಮಾನಗಳು, ಹೆಲಿಕಾಪ್ಟರ್‌ ಇತ್ಯಾದಿ ಉತ್ಪನ್ನಗಳ ಜೊತೆಗೆ ಅತ್ಯಾಧುನಿಕ ಆವಿಷ್ಕಾರಗಳಿಗೆ ಸಂಬಂಧಿಸಿದಂತೆ, ದೇಶೀ ಉತ್ಪನ್ನಗಳ ಉತ್ಪಾದನೆಯಲ್ಲಿ ಅಂತಾರಾಷ್ಟ್ಟೀಯ ಸಹಯೋಗ ಸಾಧನೆಯ ವೇದಿಕೆ ರೂಪಿಸಲು ಈ ಮೇಳ ಅನುವು ಮಾಡಿಕೊಡಲಿದೆ. ತನ್ಮೂಲಕ ʼಆತ್ಮ ನಿರ್ಭರ ಭಾರತʼ ಮತ್ತು ʼಮೇಕ್‌ ಇನ್‌ ಇಂಡಿಯಾ, ಮೇಕ್‌ ಫಾರ್‌ ದಿ ವರ್ಲ್ಡ್‌ʼ ದೃಷ್ಟಿಗೆ ಅನುಗುಣವಾಗಿ 2047 ರ ವೇಳೆಗೆ ಪ್ರಧಾನಿ ನರೇಂದ್ರ ಮೋದಿಯವರ ಕನಸಿಗೆ ಅನುಗಣವಾದ ʼವಿಕಸಿತ ಭಾರತʼದ ಗುರಿ ಸಾಧನೆಗೆ ಒತ್ತು ಸಿಗಲಿದೆ.

ಗಡಚಿಕ್ಕುವ ಸದ್ದಿನೊಂದಿಗೆ ಬಾನಿನಲ್ಲಿ ಮೋಡಿ ಮಾಡುವ ವೈವಿಧ್ಯಮಯ ವಿಮಾನ, ಹೆಲಿಕಾಪ್ಟರುಗಳ ʼಬಾನಿನಾಟʼ ನೋಡಲು ತೆರಳಿದ್ದ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರ ಕ್ಯಾಮರಾದಲ್ಲಿ ಈ ʼವೈಮಾನಿಕ ಮೇಳʼ ಮೂಡಿ ಬಂದ ಬಗೆ ಇಲ್ಲಿದೆ.

ಚಿತ್ರಗಳ ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್‌ ಮಾಡಿ.

-ನೆತ್ರಕೆರೆ ಉದಯಶಂಕರ

















ಕೆಳಗಿನವುಗಳನ್ನೂ ಓದಿರಿ: 

ನಾಗರ ʼಹೊಳೆʼಯಲ್ಲಿ ಹಿಮ-ಚಳಿ ಮೇಳ!

ಪಕ್ಷಿ ಕಂಡರೆ ಸಾಕು… ʼಶೂಟ್‌ʼ…! ಇದು ʼಸುವರ್ಣ ನೋಟʼ

೨೦೨೪ರ ಕೊನೆಯ ಸೂರ್ಯಾಸ್ತಮಾನ... ʼಸುವರ್ಣʼ ನೋಟ..!

ಹಿಂಗಾರು ಮಳೆಗೆ ತೊಯ್ದ ವಿಧಾನಸೌಧ.. ಸುವರ್ಣ ನೋಟ

ಈ ಹಕ್ಕಿ ಕೊಕ್ಕಿನ ಬಣ್ಣ ಬದಲಾಯಿಸುತ್ತದೆ..!

ಎಲ್ಲಿ ಮಾರಾಯರೇ ಈ ಆಟ? ಇದು ಸುವರ್ಣ ನೋಟ

ಗಗನಗಾಮಿ ಕೃಷ್ಣಮೃಗ..! (ಇದು ಸುವರ್ಣ ನೋಟ)

ಇನ್ನೂ ಓದಿಲ್ಲವೇ?

ಬೆಂಗಳೂರಿನ ಭೂ ಮಾಫಿಯಾ- ಭ್ರಷ್ಟಾಚಾರದ ಚಕ್ರವ್ಯೂಹ

(ಮೇಲಿನ ಚಿತ್ರ ಕ್ಲಿಕ್‌ ಮಾಡಿ ನೋಡಿ. ಯುಪಿಐ ಮೂಲಕ ಕೇವಲ ಶೇಕಡಾ 50 ರಷ್ಟು ಪಾವತಿಸಿ ಈ👆 ಡಿಜಿಟಲ್‌ ಪುಸ್ತಕ ಪಡೆಯಿರಿ. ಸಂಪರ್ಕಿಸಿ: 9480215706/ 9845049970)

Saturday, December 28, 2024

ವಿಶ್ವ ಹವ್ಯಕ ಸಮ್ಮೇಳನ ೨ನೇ ದಿನ

ವಿಶ್ವ ಹವ್ಯಕ ಸಮ್ಮೇಳನ ೨ನೇ ದಿನ

ವಿಶ್ವ ಹವ್ಯಕ ಸಮ್ಮೇಳನ ೨ನೇ ದಿನದ ಸಂಭ್ರಮಕ್ಕೆ ಕಾಲಿಟ್ಟಿದೆ. ಈ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಮೇಲಿನ ಚಿತ್ರ ಕ್ಲಿಕ್‌ ಮಾಡಿರಿ



ವಿವಿಧ ಬ್ರಾಹ್ಮಣ ಸಂಸ್ಥೆಗಳಿಗೆ ಸನ್ಮಾನ


 ಕೆಳಗಿನದ್ದನ್ನೂ ನೋಡಿರಿ: 

ವಿಶ್ವ ಹವ್ಯಕ ಸಮ್ಮೇಳನ ಪಾರ್ಶ್ವನೋಟಗಳು

Friday, December 27, 2024

ವಿಶ್ವ ಹವ್ಯಕ ಸಮ್ಮೇಳನ ಪಾರ್ಶ್ವನೋಟಗಳು

ವಿಶ್ವ  ಹವ್ಯಕ ಸಮ್ಮೇಳನ ಪಾರ್ಶ್ವನೋಟಗಳು

ಬೆಂಗಳೂರಿನ ಅರಮನೆ ಮೈದಾನದಲ್ಲಿ ೨೧.೧೨.೨೦೨೪ರ ಶುಕ್ರವಾರ ಆರಂಭವಾದ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಕೆಲವು ಪಾರ್ಶ್ವನೋಟಗಳ ಚಿತ್ರಗಳು ಇಲ್ಲಿವೆ.

































ಸಮೀಪ ನೋಟಕ್ಕೆ ಚಿತ್ರಗಳನ್ನು ಕ್ಲಿಕ್‌ ಮಾಡಿರಿ.

ಸಮ್ಮೇಳನದ ನೇರ ಪ್ರಸಾರ ವೀಕ್ಷಣೆಗೆ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿರಿ:

Advertisement