Showing posts with label ಯುಜಿಐಟಿ. Show all posts
Showing posts with label ಯುಜಿಐಟಿ. Show all posts

Tuesday, December 17, 2024

ಭವಿಷ್ಯದ ನಗರಗಳ ಸುಸ್ಥಿರತೆ: ಬೆಂಗಳೂರಿನಲ್ಲಿ ಯುಜಿಐಟಿ ಸಮ್ಮೇಳನ

 ಭವಿಷ್ಯದ ನಗರಗಳ ಸುಸ್ಥಿರತೆ: ಬೆಂಗಳೂರಿನಲ್ಲಿ ಯುಜಿಐಟಿ ಸಮ್ಮೇಳನ


ಬೆಂ
ಗಳೂರು:  ಭವಿಷ್ಯದ ನಗರಗಳ ಸುಸ್ಥಿರ ಅಭಿವೃದ್ಧಿಗಾಗಿ ಬಹುಶಿಸ್ತಿನ ವಿಧಾನ ಮತ್ತು ನವೀನ ಉದಯೋನ್ಮುಖ ತಂತ್ರಜ್ಞಾನ ಬಳಕೆ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನವೊಂದು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದ ಭೌಗೋಳಿಕ ಮತ್ತು ಭೌಗೋಳಿಕ ಮಾಹಿತಿ ವಿಭಾಗದಲ್ಲಿ ಡಿಸೆಂಬರ್‌ 19 ಮತ್ತು 20ರಂದು ನಡೆಯಲಿದೆ.

ಇದು ಯೂನಿಯನ್ ಆಫ್ ಜಿಯೋಗ್ರಾಫಿಕ್ ಇನ್ಫರ್ಮೇಷನ್ ಟೆಕ್ನಾಲಜಿಸ್ಟ್ಸ್ (UGIT) ಸಂಘಟಿಸುತ್ತಿರುವ 13ನೇ ಅಂತಾರಾಷ್ಟ್ರೀಯ ಸಮ್ಮೇಳನವಾಗಿದ್ದು, ಭಾರತದ ಬೆಂಗಳೂರು ವಿಶ್ವವಿದ್ಯಾಲಯ, ಇಂಗ್ಲೆಂಡಿನ  ವಾಲ್ವರ್‌ಹ್ಯಾಂಪ್ಟನ್ ವಿಶ್ವವಿದ್ಯಾಲಯ,  ದಿ ಆರ್ಟ್ ಆಫ್ ಲಿವಿಂಗ್, ಎನ್ವಿರಾನ್ಮೆಂಟಲ್ ಮ್ಯಾನೇಜ್ಮೆಂಟ್ & ಪಾಲಿಸಿ ರಿಸರ್ಚ್ ಇನ್ಸ್ಟಿಟ್ಯೂಟ್ (EMPRI), ಮತ್ತು ಪ್ರಧಾನ ಮಂತ್ರಿ ಉನ್ನತ ಶಿಕ್ಷಾ ಅಭಿಯಾನ (PM-USHA) ಭೌಗೋಳಿಕ ಮತ್ತು  ಭೌಗೋಳಿಕ ಮಾಹಿತಿ ಈ ಸಂಸ್ಥೆಗಳು ಸಹಯೋಗ ನೀಡಿವೆ.

ಬೆಂಗಳೂರು ವಿಶ್ವ ವಿದ್ಯಾಲಯದ ಉಪ ಕುಲಪತಿ ಪ್ರೊ. ಎಸ್.‌ ಎಂ. ಜಯಕರ, ಶೇಖ್‌ ಲತೀಫ್‌, ಪ್ರೊ. ಡಾ. ಅಶೋಕ ಡಿ. ಹಂಜಗಿ, ಡಾ.ಎಚ್.ಪಿ. ರವಿ, ವಿ. ರಶ್ಮಿ, ಡಾ. ಪ್ರಸನ್ನ ಪ್ರಭು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಮುಖ್ಯ ಭಾಷಣಕಾರರಾಗಿ  ವಾಲ್ವರ್‌ಹ್ಯಾಂಪ್ಟನ್ ವಿಶ್ವವಿದ್ಯಾಲಯದ ಪ್ರೊ. ಸುಭಾಷಿಣಿ ಸುರೇಶ್‌, ಡಾ. ಸುರೇಶ ರೇಣುಕಪ್ಪ, , ಪ್ರೊ.ಪನಾಜಿಯೋಟಿಸ್ ಜಾರ್ಗಲ್ಸಿಸ್, ಇಸ್ರೋದ ಡಾ. ಗಣೇಶ ರಾಜ್‌, ಇನ್ಫೋಸಿಸ್‌ನ ಡಾ. ಗುರುಪ್ರಸಾದ್‌ ಶಾಸ್ತ್ರಿ, ಸಂಪೂರ್ಣ ಸ್ವರಾಜ್‌ ಫೌಂಡೇಶನ್ನಿನ ಡಾ. ಶಂಕರ ಪ್ರಸಾದ್‌, ಗಾಂಧಿನಗರ ಐಐಪಿಎಚ್‌ನ  ಡಾ. ಮಹಾವೀರ ಗೋಲೆಚ್ಛ, ಬೆಂಗಳೂರು ಐಐಟಿ-ಬಿಯ ಡಾ. ರಮೇಶ ಕೆ.ಎನ್, ವಿಪ್ರೋ ಫೌಂಡೇಷನ್ನಿನ ಡಾ. ಅರ್ಚನಾ ಅಶೋಕ, ಇ ಎಸ್‌ ಜಿ ಮತ್ತು ಸಸ್ಟೈನಿಬಿಲಿಟಿಯ ಉಪಾಧ್ಯಕ್ಷ ನಿರ್ಭಯ್‌ ಲುಮ್ಡೆ ಅವರು ಪಾಲ್ಗೊಳ್ಳಲಿದ್ದಾರೆ.

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ:



 

 Get the Pass Word to continue the reading of above  E-Book by Payment of Fifty percent of the Price of Printed Book. Contact: Dr. Shankara K. Prasad - 9845049970 or Nethrakere Udaya Shankara - 9480215706. You can visit: https://www.sampoornaswaraj.org/ and get your copy through it also.

Advertisement