ಸೌರ ಯುಗಾದಿ ʼವಿಶು-ಕಣಿʼ ಆಚರಣೆ
ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ
ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಈದಿನ ೨೦೨೬ ಏಪ್ರಿಲ್
೧೪ರಂದು ವಿಶ್ವಾವಸು ನಾಮ ಸಂವತ್ಸರದ ಸೌರ ಯುಗಾದಿ ʼವಿಶು-ಕಣಿʼಯನ್ನು
ಆಚರಿಸಲಾಯಿತು.
ದೇವಸ್ಥಾನದಲ್ಲಿ ದೇವರ ಮುಂದೆ ಸಕಲ ಸಮೃದ್ಧಿಯ ಸಂಕೇತವಾದ ಹಲ-ಫಲ, ಹೂವು-ಹಣ್ಣು ಹಾಗೂ ನಾಣ್ಯಗಳನ್ನು ಒಳಗೊಂಡ ʼಕಣಿʼಯನ್ನು ಇರಿಸಲಾಗಿತ್ತು.
ಭಕ್ತರು ʼಕಣಿʼ ದರ್ಶನ
ಪಡೆದು, ಮಹಾ ಪೂಜೆಯ ಬಳಿಕ ʼಕಣಿʼಯ ತರಕಾರಿ, ಹಣ್ಣು ಹಾಗೂ ನಾಣ್ಯಗಳನ್ನು ಪಡೆದರು. ವಿಶೇಷವಾಗಿ
ʼಉಣ್ಣಿ ಅಪ್ಪಂʼ, ಖಾರ ಪೊಂಗಲ್ ಪ್ರಸಾದದ
ವ್ಯವಸ್ಥೆ ಮಾಡಲಾಗಿತ್ತು.
ಇವುಗಳನ್ನೂ ಓದಿ:
'ಯುಗಾವತಾರ': ಇದು ಹೊಸ ವರ್ಷದ ಆರಂಭ..!
ವಾರೇ ವಾಹ್ ಕೇರಳದ ಓಣಂ ಮತ್ತು ತುಳುವರ ದೀಪಾವಳಿ..!