Showing posts with label Adithyanath. Show all posts
Showing posts with label Adithyanath. Show all posts

Monday, April 20, 2020

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಪಿತೃ ವಿಯೋಗ

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ಗೆ ಪಿತೃ ವಿಯೋಗ
ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಂದೆ ಆನಂದ ಸಿಂಗ್ ಬಿಶ್ತ್ ಅವರು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಸಂಸ್ಥೆಯಲ್ಲಿ (ಏಮ್ಸ್) 2020 ಏಪ್ರಿಲ್ 20ರ ಸೋಮವಾರ ನಿಧನರಾಗಿದ್ದು, ರಾಷ್ಟ್ರವ್ಯಾಪಿ ಕೊರೋನಾ ದಿಗ್ಬಂಧನದ (ಲಾಕ್ ಡೌನ್) ಕಾರಣ ಆದಿತ್ಯನಾಥ್ ಅವರು ಮಂಗಳವಾರ ನಡೆಯುವ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪ್ರಕಟಿಸಿದರು.

ಕೊರೋನಾವೈರಸ್ ಲಾಕ್ಡೌನ್ ಕಾರಣ ತಮ್ಮ ತಂದೆಯ ಅಂತ್ಯಕ್ರಿಯೆಯಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ಜನರು ಪಾಲ್ಗೊಳ್ಳಬೇಕು ಎಂದು ಮುಖ್ಯಮಂತ್ರಿ ಮನವಿ ಮಾಡಿದರು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಂದೆ ಬೆಳಗ್ಗೆ ೧೦.೪೪ಕ್ಕೆ ಸ್ವರ್ಗಸ್ಥರಾದರು. ನಾವು ಗಾಢವಾದ ಶೋಕ ವ್ಯಕ್ತ ಪಡಿಸುತ್ತೇವೆ ಎಂದು ರಾಜ್ಯದ ಹೆಚ್ಚುವರಿ ಮುಖ್ಯಕಾರ್ಯದರ್ಶಿ (ಗೃಹ) ಅವನೀಶ್ ಕೆ ಅವಸ್ಥಿ ಹೇಳಿದರು.

೮೯ರ ಹರೆಯದ ಬಿಶ್ತ್ ಅವರು ಅರಣ್ಯ ರೇಂಜರ್ ಆಗಿದ್ದು ೧೯೯೧ರಲ್ಲಿ ನಿವೃತ್ತರಾಗಿದ್ದರು. ದೆಹಲಿಯ ಏಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬಹುಅಂಗಾಂಗ ವೈಫಲ್ಯದ ಕಾರಣ ಕೊನೆಯುಸಿರು ಎಳೆದರು ಎಂದು ವೈದ್ಯರೊಬ್ಬರು ಹೇಳಿದರು. ಬಿಶ್ತ್ ಅವರನ್ನು ಮಾರ್ಚ್ ೧೩ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ತೀವ್ರ ನಿಗಾಘಟಕದಲ್ಲಿ ಅವರಿಗೆ ಜೀವ ರಕ್ಷಕ ಬೆಂಬಲ ಒದಗಿಸಲಾಗಿತ್ತು.

ಅವರಿಗೆ ಬಹು ಸಮಸ್ಯೆಗಳಿದದವು. ಯಕೃತ್ತು ಮತ್ತು ಮೂತ್ರಕೋಶಗಳು ತೃಪ್ತಿಕರವಾಗಿ ಕಾರ್ ನಿರ್ವಹಿಸುತ್ತಿರಲಿಲ್ಲ. ಅವರು ಡಯಾಲಿಸಿಸ್ ಮತ್ತು ಜೀವರಕ್ಷಕ ಕ್ರಮಗಳಿಗೆ ಒಳಪಟ್ಟಿದ್ದರು. ತಜ್ಞರ ತಂಡ ಅವರನ್ನ ನೋಡಿಕೊಳ್ಳುತ್ತಿತ್ತು ಎಂದು ಹಿರಿಯ ವೈದ್ಯರೊಬ್ಬರು ಹೇಳಿದರು.

ಉತ್ತರಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್, ಕಾಂಗ್ರೆಸ್ ನಾಯಕಿ ಪ್ರಿಯಾಂಕಾಗಾಂಧಿ ವಾದ್ರ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್ ಸೇರಿದಂತೆ ಹಲವಾರು ಮಂದಿ ರಾಜಕೀಯ ನಾಯಕರು ಮತ್ತು ರಾಜತಾಂತ್ರಿಕರು ಬಿಶ್ತ್ ನಿಧನಕ್ಕೆ ಸಂತಾಪ ವ್ಯಕ್ತ ಪಡಿಸಿದರು.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿ ಅವರ ತಂದೆ ಆನಂದ ಸಿಂಗ್ ಬಿಶ್ತ್ ಜಿ ಅವರ ನಿಧನಕ್ಕೆ ನನ್ನ ಅತೀವ ಸಂತಾಪಗಳು.ಅವರ ಆತ್ಮಕ್ಕೆ ಶಾಂತಿ ಸಿಗಲಿ. ಯೋಗಿ ಜಿ ಮತ್ತು ಅವರ ಕುಟುಂಬ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಪರಮಾತ್ಮನು ದಯಪಾಲಿಸಲಿ ಎಂದು ಕಮಲನಾಥ್ ಟ್ವೀಟ್ ಮಾಡಿದರು.

"ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೀ ಅವರ ತಂದೆ ಆನಂದ್ ಬಿಶ್ತ್ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಲು ಇಷ್ಟಪಡುತ್ತೇನೆ ಹಾಗೂ ಆನಂದ್ ಸಿಂಗ್ ಅವರ ಸಾವಿನ ದುಃಖ ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ಕರುಣಿಸಲಿ," ಎಂದು ಪ್ರಿಯಾಂಕ ಗಾಂಧಿ ವಾದ್ರ ಟ್ವೀಟ್ ಮಾಡಿದರು.

ತಮ್ಮ ತಂದೆ ಕೊನೆಯುಸಿರೆಳದ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್ ಅವರು ಕೊರೊನಾ ನಿಯಂತ್ರಣ ಕುರಿತು ಅಧಿಕಾರಿಗಳ ಜತೆ ತುರ್ತು ಸಭೆ ನಡೆಸುತ್ತಿದ್ದರು. ಕೊರೊನಾ ಅಟ್ಟಹಾಸದ ಸಂದರ್ಭದಲ್ಲಿ ನಿಯಮ ಪಾಲನೆ ಮಹತ್ವದ್ದಾಗಿದೆ. ಅಂತ್ಯ ಸಂಸ್ಕಾರದ ವಿಧಿಯಲ್ಲಿ ನಾನು ಪಾಲ್ಗೊಂಡರೆ ಜನಸಂದಣಿ ಹೆಚ್ಚಾಗುವ ಸಾಧ್ಯತೆ ಇದೆ. ಕಾರಣಕ್ಕೆ ಪಾಲ್ಗೊಳ್ಳುವುದು ಸೂಕ್ತವಲ್ಲ ಎಂದು ಯೋಗಿ ಆದಿತ್ಯನಾಥ್ ತಿಳಿಸಿದರು.

Wednesday, April 15, 2020

ಮೊರಾದಾಬಾದ್: ಆರೋಗ್ಯ ಕಾರ್ಯಕರ್ತರು, ಪೊಲೀಸರಿಗೆ ಕಲ್ಲು

ಮೊರಾದಾಬಾದ್: ಆರೋಗ್ಯ ಕಾರ್ಯಕರ್ತರು, ಪೊಲೀಸರಿಗೆ ಕಲ್ಲು
ಲಕ್ನೋ: ಉತ್ತರಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ ಶಂಕಿತ ಕೊರೋನಾವೈರಸ್ ಸೋಂಕಿತ ರೋಗಿಯೊಬ್ಬರನ್ನು ಆಸ್ಪತ್ರೆಗೆ ಒಯ್ಯಲು ಹೋದ ಆರೋಗ್ಯ ಕಾರ್ಯಕರ್ತರು ಮತ್ತು ಪೊಲೀಸರ ಮೇಲೆ ಕುಟುಂಬ ಸದಸ್ಯರು ಮತ್ತು ಆಸುಪಾಸಿನ ನಿವಾಸಿಗಳು ಕಲ್ಲೆಸೆದ ಘಟನೆ 2020 ಏಪ್ರಿಲ್ 15ರ ಬುಧವಾರ ಬಿಡುಗಡೆ ಘಟಿಸಿತು.

ಮೊರಾದಾಬಾದ್ ಜಿಲ್ಲೆಯ ನವಾಬ್ ಪುರದ ನಾಗಫಾನಿಯಲ್ಲಿ ಈ ಘಟನೆ ಘಟಿಸಿತು. ಸ್ಥಳೀಯರ ಕಲ್ಲು ತೂರಾಟದಿಂದ ಹಲವಾರು ಮಂದಿ ಆರೋಗ್ಯ ಕಾರ್ಯಕರ್ತರು ಮತ್ತು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು ಆಂಬುಲೆನ್ಸ್ ಮತ್ತು ಎರಡು ಪೊಲೀಸ್ ವಾಹನಗಳೂ ಹಾನಿಗೊಂಡವು.

ಘಟನೆಯನ್ನು ಅನುಸರಿಸಿ ರಾಷ್ಟ್ರೀಯ ಭದ್ರತಾ ಕಾಯ್ದೆಯ (ಎನ್‌ಎಸ್‌ಎ) ಅಡಿಯಲ್ಲಿ ದಾಳಿಕೋರರ ವಿರುದ್ಧ ಕಠಿಣ ಆರೋಪಗಳನ್ನು ಹೊರಿಸಿ ಕ್ರಮ ಕೈಗೊಳ್ಳಲು ಆಡಳಿತವು ನಿರ್ಧರಿಸಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು.

ವರದಿಗಳ ಪ್ರಕಾರ ವ್ಯಕ್ತಿಯೊಬ್ಬ ಅಸ್ವಸ್ಥನಾಗಿದ್ದು ಆತನ್ನು ತೀರ್ಥಂಕರ ಮಹಾವೀರ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಆತನ ಗಂಟಲ ದ್ರವದ ಮಾದರಿಗಳನ್ನು ಏಪ್ರಿಲ್ ೯ರಂದು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಏಪ್ರಿಲ್ ೧೨ರಂದು ವರದಿ ಬಂದಾಗ ಆತನಿಗೆ ಕೊರೋನಾವೈರಸ್ ಸೋಂಕು ತಗುಲಿದ್ದ ದೃಢಪಟ್ಟಿತ್ತು. ಅಸ್ವಸ್ಥ ವ್ಯಕ್ತಿ ಅದೇ ದಿನ ರಾತ್ರಿ ಮೃತನಾಗಿದ್ದ. ಆತನ ಕುಟುಂಬದ ಕೆಲವು ಸದಸ್ಯರನ್ನು ಐಎಫ್ ಟಿಎಂ ವಿಶ್ವವಿದ್ಯಾಲಯದ ಘಟಕದಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು.

ಆರೋಗ್ಯ ಕಾರ್ಯಕರ್ತರು ಮತ್ತು ಪೊಲೀಸರ ತಂಡ ಬುಧವಾರ ಮೃತ ರೋಗಿಯ ತಮ್ಮ ಜ್ವರದಿಂದ ನರಳುತ್ತಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಒಯ್ಯಲು ಆತನ ಮನೆಗೆ ಆಗಮಿಸಿತ್ತು.

ಆರೋಗ್ಯ ಕಾರ್ಯಕರ್ತರ ಮೇಲೆ ನಡೆದ ದಾಳಿಯನ್ನು ಖಂಡಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು.

ತಪ್ಪಿತಸ್ಥರನ್ನು ಗುರುತಿಸಿ ಅವರ ವಿರುದ್ಧ ಎನ್‌ಎಎ ಅಡಿಯಲ್ಲಿ ಪ್ರಕರಣ ದಾಖಲಿಸಿ ಎಂದು ಮುಖ್ಯಮಂತ್ರಿ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.

‘ಶಂಕಿತ ರೋಗಿ ಮತ್ತು ಆತನ ಕುಟುಂಬ ಸದಸ್ಯರನ್ನು ಆಸ್ಪತ್ರೆಗೆ ಕರೆದೊಯ್ಯುವ ಸಲುವಾಗಿ ನಾವು ಹೋಗಿದ್ದಾಗ, ದಿಢೀರನೆ ಜನರ ದೊಡ್ಡ ಗುಂಪೊಂದು ಅಲ್ಲಿಗೆ ಬಂದು ಕ್ವಾರಂಟೈನ್ ಘಟಕದಲ್ಲಿ ಇರುವವರಿಗೆ ಆಹಾರ ಕೊಡುತ್ತಿಲ್ಲ, ಆದ್ದರಿಂದ ರೋಗಿಯನ್ನು ಒಯ್ಯಲು ತಾವು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು ಎಂದು ಹಾನಿಗೀಡಾದ ಅಂಬುಲೆನ್ಸ್ ಚಾಲಕ ತಿಳಿಸಿದರು.

ಕೆಲವು ಪೊಲೀಸರು ಮಧ್ಯಪ್ರವೇಶ ಮಾಡಿದಾಗ ಪರಿಸ್ಥಿತಿ ವಿಷಮಿಸಿತು ಮತ್ತು ಗುಂಪು ಕಲ್ಲೆಸೆಯಲು ಆರಂಭಿಸಿತು ಎಂದು ಅವರು ನುಡಿದರು.

ಮುಜಾಫ್ಫರನಗರದ ಮೊರ್‍ನಾ ಗ್ರಾಮದಲ್ಲೂ ನಿವಾಸಿಗಳು ಬಡಿಗೆ ಮತ್ತು ಕಬ್ಬಿಣದ ಸರಳುಗಳೊಂದಿಗೆ ಪೊಲಿಸ್ ಸಿಬ್ಬಂದಿಯ ಮೇಲೆ ದಾಳಿ ನಡೆಸಿದ ಘಟನೆ ಘಟಿಸಿತ್ತು. ಲಾಕ್ ಡೌನ್ ಸಮಯದಲ್ಲಿ ಗುಂಪುಸೇರುವುದನ್ನು ಆಕ್ಷೇಪಿಸಿದಾಗ ಪೊಲೀಸರ ಮೇಲೆ ಈ ದಾಳಿ ನಡೆದಿತ್ತು.

ಮೂವರು ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಜಿಲ್ಲಾ ಆಸ್ಪತೆಗೆ ಒಯ್ಯಬೇಕಾಗಿ ಬಂದಿತ್ತು. ಅವರ ಪೈಕಿ ಇಬ್ಬರನ್ನು ಬಳಿಕ ಮೀರತ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮೊರಾದಾಬಾದ್ ಜಿಲ್ಲೆಯಲ್ಲಿ ಈವರೆಗೆ ೧೯ ಮಂದಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು. ಒಬ್ಬ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದಾನೆ. ರಾಜ್ಯದಲ್ಲಿ ಕೊರೋನಾವೈರಸ್ ಸೋಂಕು ತಗುಲಿದವರ ಸಂಖ್ಯೆ ೬೬೦ಕ್ಕೆ ಏರಿದೆ. ೧೦೨ ಹೊಸ ಕೊರೋನಾವೈರಸ್ ಪಾಸಿಟಿವ್ ಪ್ರಕರಣಗಳು ಮಂಗಳವಾರ ವರದಿಯಾಗಿದ್ದವು.

ರಾಜ್ಯಾದ್ಯಂತ ಎಂಟು ಸಾವುಗಳು ದಾಖಲಾಗಿದ್ದು, ಬಸ್ತಿ, ಮೀರತ್, ವಾರಾಣಸಿ, ಬುಲಂದಶಹರ, ಮೊರಾದಾಬಾದಿನಲ್ಲಿ ತಲಾ ಒಬ್ಬರು ಮತ್ತು ಆಗ್ರಾದಲ್ಲಿ ಮೂವರು ಅಸು ನೀಗಿದ್ದರು.

ಗುಂಪು ಪರೀಕ್ಷೆ: ಈ ಮಧ್ಯೆ, ಸಮುದಾಯ ವರ್ಗಾವಣೆ ಸಾಧ್ಯತೆಯ ಹಿನ್ನೆಲೆಯಲ್ಲಿ ಮಾದರಿಗಳ ಗುಂಪು ಪರೀಕ್ಷೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಿಂದ (ಐಸಿಎಂಆರ್) ಅನುಮತಿ ಪಡೆದ ಮೊದಲ ರಾಜ್ಯ ಎಂಬ ಹೆಸರಿಗೆ ಉತ್ತರ ಪ್ರದೇಶ ಭಾಜನವಾಗಿದೆ.

‘ಹಲವಾರು ಮಾದರಿಗಳನ್ನು ಒಂದೇ ಸಲಕ್ಕೆ ಪರೀಕ್ಷೆ ಮಾಡಲು ಐಸಿಎಂಆರ್ ಅನುಮತಿ ನೀಡಿದೆ. ಇದು ರಾಜ್ಯದ ಆರೋಗ್ಯ ಇಲಾಖೆಯ ಪರೀಕ್ಷಾ ಸಾಮರ್ಥ್ಯಕ್ಕೆ ಒತ್ತು ಕೊಡಲಿದೆ. ಇದಕ್ಕೆ ಸಂಬಂಧಿಸಿದ ಶಿಷ್ಟಾಚಾರವನ್ನು ಶೀಘ್ರವೇ ನಿರ್ಧರಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮುಖ್ಯ ಕಾರ್‍ಯದರ್ಶಿ ಅಮಿತ್ ಮೋಹನ್ ಪ್ರಸಾದ್ ಮಂಗಳವಾರ ಹೇಳಿದ್ದರು.

Monday, February 3, 2020

ಯೋಗಿ ಆದಿತ್ಯನಾಥ್ ಚುನಾವಣಾ ಪ್ರಚಾರ ನಿಷೇಧಕ್ಕೆ ಆಪ್ ಆಗ್ರಹ

ಯೋಗಿ ಆದಿತ್ಯನಾಥ್ ಚುನಾವಣಾ ಪ್ರಚಾರ
ನಿಷೇಧಕ್ಕೆ ಆಪ್ ಆಗ್ರಹ
ನವದೆಹಲಿ: ಶಾಹೀನ್ ಬಾಗ್ ಪ್ರತಿಭಟನೆ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅರು ದೆಹಲಿಯಲ್ಲಿ ಚುನಾವಣಾ ಪ್ರಚಾರಕ್ಕೆ ನಡೆಸದಂತೆ ನಿಷೇಧಿಸಬೇಕು ಎಂದು ಆಮ್ ಆದ್ಮಿ ಪಕ್ಷವು (ಎಎಪಿ-ಆಪ್) ಚುನಾವಣೆ ಆಯೋಗವನ್ನು  2020 ಫೆಬ್ರುವರಿ 02ರ ಭಾನುವಾರ ಒತ್ತಾಯಿಸಿತು.

ವಾಯುವ್ಯ ದೆಹಲಿಯ ರೋಹಿಣಿ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರು ಚುನಾವಣಾ ಸಭೆಯೊಂದರಲ್ಲಿ  ಪಾಲ್ಗೊಂಡು ಕಾಶ್ಮೀರದಲ್ಲಿ ಉಗ್ರರಿಗೆ ಬೆಂಬಲ ನೀಡುವವರು ಶಾಹೀನ್ ಬಾಗ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ ಮತ್ತು ಆಜಾದಿ ಪರವಾಗಿ ಘೋಷಣೆ ಕೂಗುತ್ತಿದ್ದಾರೆ ಎಂದು ಹೇಳಿದ್ದರು.

ಅಲ್ಲದೆ ಭಿನ್ನಮತೀಯರೊಂದಿಗೆ ವ್ಯವಹರಿಸಲು ಗುಂಡುಗಳ ಬಳಕೆ ಬಗ್ಗೆ ಒಲವು ವ್ಯಕ್ತ ಪಡಿಸಿದ್ದರು ಎನ್ನಲಾಗಿತ್ತು.

ನಾವು ಯಾರೊಬ್ಬರ ಉತ್ಸವ ಅಥವಾ ನಂಬಿಕೆಗೆ ಅಡ್ಡಿ ಪಡಿಸುವುದಿಲ್ಲ. ಪ್ರತಿಯೊಬ್ಬರೂ ಕಾನೂನಿನ ಚೌಕಟ್ಟಿನಲ್ಲಿ ತಮ್ಮ ಉತ್ಸವಗಳನ್ನು ಆಚರಿಸಲಿ. ಆದರೆ ಶಿವಭಕ್ತರ ಮೇಲೆ ಯಾರೇ ವ್ಯಕ್ತಿ ಗುಂಡು ಹಾರಿಸಿದರೆ, ದಂಗೆ ಎಬ್ಬಿಸಿದರೆ.. ಅವರು ಮಾತುಗಳನ್ನು ಆಲಿಸದೇ ಇದ್ದರೆ, ಅವರು ಖಂಡಿತವಾಗಿ ಗುಂಡುಗಳಿಗೆ ಆಲಿಸುತ್ತಾರೆಎಂದು ಆದಿತ್ಯನಾಥ್ ಸಭೆಯಲ್ಲಿ ಹೇಳಿದರು ಎನ್ನಲಾಗಿತ್ತು.

ಆದಿತ್ಯನಾಥ್ ಅವರು ಭಾಷಣ ಮಾಡುತ್ತಿದ್ದ ವೇಳೆಯಲ್ಲಿಯೇ ಶಾಹೀನ್ ಬಾಗ್ ಪ್ರತಿಭಟನೆ ನಡೆಯುತ್ತಿದ್ದ ಸ್ಥಳದಲ್ಲಿ ವ್ಯಕ್ತಿಯೊಬ್ಬ ಹಿಂದೂಗಳು ಮಾತ್ರವೇ ಆಳ್ವಿಕೆ ನಡೆಸಬೇಕು ಎಂದು ಘೋಷಣೆ ಮೊಳಗಿಸುತ್ತ ಗುಂಡಿನ ದಾಳಿ ನಡೆಸಿದ ಘಟನೆ 2020 ಫೆಬ್ರುವರಿ 01ರ ಶನಿವಾರ ಘಟಿಸಿತ್ತು.

 ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶಾಹೀನ್ ಬಾಗ್   ಪ್ರತಿಭಟನಾಕಾರರಿಗೆ ಬಿರಿಯಾನಿ ಪೂರೈಸುತ್ತಿದ್ದಾರೆಎಂದು ಕೂಡಾ ತಮ್ಮ ಭಾಷಣಗಳಲ್ಲಿ ಯೋಗಿ ಆದಿತ್ಯನಾಥ್ ಆರೋಪಿಸಿದ್ದರು.

ಬಿಜೆಪಿಯ ತಾರಾ ಪ್ರಚಾರಕರಾಗಿರುವ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಎಎಪಿಯ ಸಂಜಯ್ ಸಿಂಗ್ ಅವರು ದೂರು ದಾಖಲಿಸಿದ್ದು, ಪ್ರಚೋದನಕಾರಿ ಭಾಷಣ ಮಾಡುವವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಒತ್ತಾಯಿಸಿದರು.

ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಜಯ್ ಸಿಂಗ್, ಚುನಾವಣಾ ಆಯೋಗವನ್ನು ಭೇಟಿ ಮಾಡಲು ಎಎಪಿ ಕಳೆದ ೪೮ ಗಂಟೆಗಳಿಂದಲೂ ಅನುಮತಿ ಕೇಳಿದ್ದರೂ ಕೂಡ ಪ್ರಯೋಜನವಾಗಿಲ್ಲ. ಒಂದು ವೇಳೆ ಚುನಾವಣಾ ಆಯೋಗವು ನಮಗೆ ಭೇಟಿಗೆ ಅನುಮತಿ ನೀಡಲಿಲ್ಲವಾದರೆ ಚುನಾವಣಾ ಆಯೋಗದ ಕಚೇರಿ ಮುಂದೆ ಸೋಮವಾರ ಧರಣಿ ಕೂರುವುದಾಗಿ ಹೇಳಿದರು.

Tuesday, December 24, 2019

ಉತ್ತರಪ್ರದೇಶ: ’ಪೌರತ್ವ’ ದಂಗೆ ಆರೋಪಿಗಳ 67 ಅಂಗಡಿಗಳಿಗೆ ಬೀಗಮುದ್ರೆ

ಉತ್ತರಪ್ರದೇಶ: ’ಪೌರತ್ವದಂಗೆ ಆರೋಪಿಗಳ 67 ಅಂಗಡಿಗಳಿಗೆ ಬೀಗಮುದ್ರೆ
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎಚ್ಚರಿಕೆ ಅನುಷ್ಠಾನ
ಮುಜಾಫ್ಫರನಗರ: ನೂತನ ಪೌರತ್ವ ಕಾಯ್ದೆ ವಿರೋಧೀ ಪ್ರತಿಭಟನೆಗಳ ವೇಳೆಯಲ್ಲಿ ಹಿಂಸೆಯಲ್ಲಿ ತೊಡಗಿದವರಿಂದ ಆಸ್ತಿಪಾಸ್ತಿ ನಷ್ಟವನ್ನು ವಸೂಲು ಮಾಡುವುದಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನೀಡಿದ್ದ ಭರವಸೆ ಕಾರ್ಯಗತಗೊಂಡಿದ್ದು, ರಾಜ್ಯ ಸರ್ಕಾರವು ಹಿಂಸಾತ್ಮಕ ಚಳವಳಿಯಲ್ಲಿ ಶಾಮೀಲಾದವರನ್ನು ಗುರುತಿಸಲು ಆರಂಭಿಸುತ್ತಿದ್ದಂತೆಯೇ ಮುಜಾಫ್ಫರನಗರದಲ್ಲಿ ೬೭ಕ್ಕೂ ಹೆಚ್ಚು ಅಂಗಡಿಗಳಿಗೆ  2019 ಡಿಸೆಂಬರ್ 23ರ ಸೋಮವಾರ ಬೀಗಮುದ್ರೆ ಜಡಿಯಲಾಯಿತು.

ಬೀಗಮುದ್ರೆ ಹಾಕಲಾಗಿರುವ ಅಂಗಡಿಗಳು ಹಿಂಸಾತ್ಮಕ ಪ್ರತಿಭಟನಕಾರರಿಗೆ ಸೇರಿದವುಗಳು ಎಂದು ಹೇಳಲಾಗಿದ್ದು, ತನಿಖೆಯ ವೇಳೆಯಲ್ಲಿ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಶಾಮೀಲಾದದ್ದು ದೃಢಪಟ್ಟರೆ ಅವರ ಅಂಗಡಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಸರ್ಕಾರೀ ವಕ್ತಾರರು ತಿಳಿಸಿದರು.

‘ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿವೆ ಮತ್ತು ಸರ್ಕಾರಿ ಮತ್ತು ಖಾಸಗಿ ಆಸ್ತಿಪಾಸ್ತಿಗಳನ್ನು ನಾಶಪಡಿಸಲಾಗಿದೆ. ನಾವು ವಿಚಾರದಲ್ಲಿ ಕಟ್ಟುನಿಟ್ಟಾಗಿ ವ್ಯವಹರಿಸುತ್ತೇವೆ. ಸಾರ್ವಜನಿಕ ಸೊತ್ತುಗಳ ಹಾನಿಯಲ್ಲಿ ತೊಡಗಿದವರ ಆಸ್ತಿಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಹರಾಜು ಹಾಕುವ ಮೂಲಕ ನಷ್ಟವನ್ನು ತುಂಬಿಸಿಕೊಳ್ಳಲಾಗುವುದುಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಕಟಿಸಿದ ಕೆಲವೇ ದಿನಗಳಲ್ಲಿ ಸರ್ಕಾರ ಕಾರ್ಯಾಚರಣೆ ಕೈಗೊಂಡಿತು.
ಹಿಂಸಾತ್ಮಕ ಘಟನಾವಳಿಗಳ ಸಿಸಿಟಿವಿ ಮತ್ತು ವಿಡಿಯೋ ದಾಖಲೆಗಳನ್ನು ಆಧರಿಸಿ ಬಹುತೇಕ ತಪ್ಪಿತಸ್ಥರನ್ನು ಗುರುತಿಸಲಾಗಿದೆ ಎಂದು ಅವರು ನುಡಿದರು.

ಮುಜಾಫ್ಫರನಗರದಲ್ಲಿ ಅಂಗಡಿಗಳ ಮಾಲೀಕರನ್ನು ಆಡಳಿತವು ತಪ್ಪಿತಸ್ಥರು ಎಂಬುದಾಗಿ ಗುರುತಿಸಿದೆಯೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ’ ಅಂಗಡಿಗಳ ಹೊರಭಾಗಗಳಲ್ಲಿ ಗುಂಪುಗಳಿದ್ದವು. ಹಿಂಸೆಗೆ ಕಾರಣರಾದವರು ಯಾರು ಎಂಬುದಾಗಿ ನಾವು ಇನ್ನೂ ತನಿಖೆ ನಡೆಸುತ್ತಿದ್ದೇವೆಎಂದು ಮಜಾಫ್ಫರನಗರದ ಹಿರಿಯ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಎಸ್ಎಸ್ಪಿ) ಹೇಳಿದರು.

ರಾಜ್ಯದ ೧೨ ಇತರ ಜಿಲ್ಲೆಗಳ ಜೊತೆಗೆ ಮುಜಾಫ್ಫರನಗರದಲ್ಲಿ ಕೂಡಾ ಶುಕ್ರವಾರ ಹಿಂಸಾಕೃತ್ಯಗಳು ಸಂಭವಿಸಿದ್ದವು. ಸುಮಾರು ೧೦ ಮೋಟಾರು ಬೈಕುಗಳು ಮತ್ತು ಹಲವಾರು ಕಾರುಗಳಿಗೆ ಕಿಚ್ಚಿಡಲಾಗಿತ್ತು. ಅನೇಕ ಸರ್ಕಾರಿ ಆಸ್ತಿಪಾಸ್ತಿಗಳೂ ಧ್ವಂಸಗೊಂಡಿದ್ದವು. ೧೨ ಮಂದಿ ಪೊಲೀಸ್ ಅಧಿಕಾರಿಗಳು ಸೇರಿದಂತೆ ೩೦ ಮಂದಿ ಗಾಯಗೊಂಡಿದ್ದರು.

ರಾಜ್ಯದ ಹಲವು ಭಾಗಗಳಲ್ಲಿ ಇನ್ನೂ ಪ್ರತಿಬಂಧಕಾಜ್ಞೆಗಳು ಜಾರಿಯಲ್ಲಿದ್ದು, ಇಂಟರ್ ನೆಟ್ ಸ್ಥಗಿತಗೊಳಿಸಲಾಗಿದೆ. ಈವರೆಗೆ ೮೭೯ ಮಂದಿಯನ್ನು ಬಂಧಿಸಲಾಗಿದ್ದು ಪೊಲೀಸರು ೧೩೧ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಲಕ್ನೋ ಮತ್ತು ಸಂಭಲ್ನಲ್ಲಿ ಆಸ್ತಿ ಬೀಗಮುದ್ರೆ ಪ್ರಕ್ರಿಯೆ ಇನ್ನೂ ಆರಂಭವಾಗಬೇಕಾಗಿದ್ದು ಜಿಲ್ಲಾ ಮ್ಯಾಜಿಸ್ಟ್ರೇಟರ ಮೂಲಕ ೩೦ ದಿನಗಳ ಒಳಗಾಗಿ ಪ್ರಕ್ರಿಯೆ ಪೂರ್ಣಗೊಳಿಸಲು ನಾಲ್ಕು ಸದಸ್ಯರ ಸಮಿತಿಯೊಂದರನ್ನು ರಚಿಸಲಾಗಿದೆ.

ದೆಹಲಿಯಲ್ಲಿ ೪೬ ವಿದ್ಯಾರ್ಥಿಗಳ ಬಂಧನ: ಮಧ್ಯೆ, ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಕಾಲದಲ್ಲಿ ನಡೆಸಲಾದ ಪೊಲೀಸ್ ಕಾರ್ಯಾಚರಣೆಯನ್ನು ಪ್ರತಿಭಟಿಸಿ ನವದೆಹಲಿಯ ಉತ್ತರಪ್ರದೇಶ ಭವನದ ಎದುರು ಸೋಮವಾರ ಪ್ರತಿಭಟನಾ ಪ್ರದರ್ಶನ ನಡೆಸಿದ ಸುಮಾರು ೪೬ ಮಂದಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರತಿಭಟನಕಾರರು ವಿಷಯಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತಿದ್ದರು. ಬಂಧಿತರಲ್ಲಿ ೨೭ ಮಂದಿ ಮಹಿಳೆಯರು ಸೇರಿದ್ದಾರೆ.

ಸ್ಥಳಕ್ಕೆ ತಲುಪುತ್ತಿದ್ದಂತೆಯೇ ವಿದ್ಯಾರ್ಥಿಗಳನ್ನು ಬಂಧಿಸಿ ಮಂದಿರಮಾರ್ಗ್ ಪೊಲೀಸ್ ಠಾಣೆಗೆ ಒಯ್ಯಲಾಯಿತು ಎಂದು ಹೇಳಲಾಯಿತು.

ಮೊದಲಿಗೆ ಸ್ಥಳಕ್ಕೆ ತಲುಪುತ್ತಿದ್ದಂತೆಯೇ ಮಾಜಿ ಜೆಎನ್ಯು ವಿದ್ಯಾರ್ಥಿಗಳ ಯೂನಿಯನ್ ಅಧ್ಯಕ್ಷ ಎನ್. ಸಾಯಿ ಬಾಲಾಜಿ ಮತ್ತು ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಶನ್ (ಎಐಎಸ್ ) ದೆಹಲಿ ಘಟಕದ ಅಧ್ಯಕ್ಷೆ ಕವಲ್ ಪ್ರೀತ್ ಕೌರ್ ಅವರನ್ನು ಬಂಧಿಸಲಾಯಿತು.

ಉತ್ತರ ಪ್ರದೇಶ ಭವನಕ್ಕೆ ಇನ್ನೂ ಕೆಲವು ಮೀಟರುಗಳಷ್ಟು ದೂರದಲ್ಲಿ ಇರುವಾಗಲೇ ತಮ್ಮನ್ನು ಬಂಧಿಸಲಾಯಿತು ಎಂದು ಎಐಎಸ್ ಸುಚೇತಾ ಡೇ ಹೇಳಿದರು. ಬಂಧನ ವೇಳೆಯಲ್ಲಿ ಪೊಲೀಸ್ ಸಿಬ್ಬಂದಿ ತಮ್ಮ ಮೇಲೆ ಹಲ್ಲೆ ನಡೆಸಿದರು ಎಂದು ಕೌರ್ ಪ್ರತಿಪಾದಿಸಿದರು.

ಹಿರಿಯ ಎಐಎಸ್ ಸದಸ್ಯರ ಬಂಧನದ ಬಳಿಕ ಸ್ಥಳಕ್ಕೆ ತಲುಪಿದ ಕೆಲವು ವಿದ್ಯಾರ್ಥಿಗಳನ್ನೂ ಪೊಲೀಸರು ವಶಕ್ಕೆ ಪಡೆದರು. ಪೊಲೀಸ್ ವ್ಯಾನಿನಲ್ಲಿ ಕುಳಿತುಕೊಳ್ಳುತ್ತಿದ್ದಂತೆಯೇ ಪ್ರತಿಭಟನಕಾರರುದಿಲ್ಲಿ ಪೊಲೀಸ್ ಮುರ್ದಾಬಾದ್ಘೋಷಣೆಗಳನ್ನು ಕೂಗಿದರು.

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಪುರುಷ ವಿದ್ಯಾರ್ಥಿಗಳನ್ನು ಮಂದಿರ ಮಾರ್ಗ್ ಪೊಲೀಸ್ ಠಾಣೆಗೆ ಒಯ್ಯಲಾಯಿತು ಮತ್ತು ಮಹಿಳಾ ವಿದ್ಯಾಥಿಗಳನ್ನು ಅವರ ವಿಶ್ವ ವಿದ್ಯಾಲಯಗಳ ಬಳಿ ಬಿಟ್ಟು ಬಿಡಲಾಯಿತು.

ನವದೆಹಲಿ ಪೊಲೀಸ್ ಜಿಲ್ಲೆಯಲ್ಲಿ ಸೆಕ್ಷನ್ ೧೪೪ ಜಾರಿಯಲ್ಲಿದ್ದು, ಅಥವಾ ಅದಕ್ಕಿಂತ ಹೆಚ್ಚು ಮಂದಿ ಒಂದು ಸ್ಥಳದಲ್ಲಿ ಸೇರುವಂತಿಲ್ಲ, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಲು ಅನುಮತಿ ಪಡೆದಿರಲಿಲ್ಲ ಎಂದು ಪೊಲೀಸ್ ಅಧಿಕಾರಿ ನುಡಿದರು.

ತಾನು ಪ್ರತಿಭಟನಕಾರರ ಜೊತೆ ಇಲ್ಲದೇ ಇದ್ದರೂ ತನ್ನನ್ನು ಪೊಲೀಸರು ಬಂಧಿಸಿದರು ಎಂದು ಪಲ್ಲವಿ ರೆಬ್ಬಪ್ರಗಾಡ ಎಂಬ ಮಹಿಳೆ ಆಪಾದಿಸಿದರು.

ನನ್ನನ್ನು ಪೊಲೀಸರು ಬಂಧಿಸಿದರು. ಅವರು ನನ್ನನ್ನು ಬಸ್ಸಿಗೆ ದಬ್ಬಿದರು ಮತ್ತು ನನ್ನನ್ನು ಮಂದಿರಮಾರ್ಗ್ ಪೊಲೀಸ್ ಠಾಣೆಯಲ್ಲಿ ಬಂಧಿಸಿ ಇಟ್ಟರು. ನನಗೂ ಪ್ರತಿಭಟನೆಗೂ ಯಾವುದೇ ಸಂಬಂಧವೂ ಇರಲಿಲ್ಲ. ಕಚೇರಿ ಕೆಲಸದ ಮೇಲೆ ಅಲ್ಲಿಗೆ ಹೋಗಿದ್ದೆ. ಆಘಾತಕ್ಕೆ ಒಳಗಾದೆಎಂದು ಆಕೆ ಟ್ವೀಟ್ ಮಾಡಿದರು.

Advertisement