Showing posts with label Ayurveda. Show all posts
Showing posts with label Ayurveda. Show all posts

Sunday, November 22, 2020

ಆಯುರ್ವೇದ ವೈದ್ಯರೂ ಈಗ ಶಸ್ತ್ರ ಚಿಕಿತ್ಸೆ ಮಾಡಬಹುದು

 ಆಯುರ್ವೇದ ವೈದ್ಯರೂ ಈಗ ಶಸ್ತ್ರ ಚಿಕಿತ್ಸೆ ಮಾಡಬಹುದು

Ayurvedic doctors now allowed to do surgeries

ನವದೆಹಲಿ: ಆಲೋಪಥಿ ವೈದ್ಯರಿಂದ ತೀಕ್ಷ್ಣವಾದ ಪ್ರತಿಕ್ರಿಯೆಗಳನ್ನು ಸೃಷ್ಟಿಸಬಹುದಾದ ಕ್ರಮ ಒಂದರಲ್ಲಿ, ಆಯುರ್ವೇದ ಸ್ನಾತಕೋತ್ತರ ಪದವಿ ಪಡೆದವರಿಗೆ ಸಾಮಾನ್ಯ ಶಸ್ತ್ರಚಿಕಿತ್ಸೆ, ಮೂಳೆಚಿಕಿತ್ಸೆ, ನೇತ್ರಶಾಸ್ತ್ರ, ಇಎನ್ಟಿ ಮತ್ತು ದಂತ ವಿಧಾನಗಳು ಮತ್ತು ಶಸ್ತ್ರಚಿಕಿತ್ಸೆಗಳು ಸೇರಿದಂತೆ ವಿವಿಧ ಶಸ್ತ್ರಚಿಕಿತ್ಸಾ (ಸರ್ಜರಿ) ವಿಧಾನಗಳನ್ನು ನಿರ್ವಹಿಸಲು ಈಗ ಅವಕಾಶ ನೀಡಲಾಗಿದೆ.

ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ (ಸಿಸಿಐಎಂ) ತನ್ನ ಗೆಜೆಟ್ ಅಧಿಸೂಚನೆಯಲ್ಲಿ ಆಯುರ್ವೇದ ಸ್ನಾತಕೋತ್ತರ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಇಂತಹ ಕಾರ್ಯವಿಧಾನಗಳ ಔಪಚಾರಿಕ ತರಬೇತಿ ಪಡೆಯಲು ಅವಕಾಶ ಮಾಡಿಕೊಟ್ಟಿದೆ. ಈ ಬೆಳವಣಿಗೆಯು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಅಡಿಯಲ್ಲಿ ಪಾರಂಪರಿಕ ಔಷಧಕ್ಕೆ ಹೆಚ್ಚುತ್ತಿರುವ ಒತ್ತನ್ನು ಸೂಚಿಸಿದೆ.

ಹೊಸ ಗೆಜೆಟ್ ಅಧಿಸೂಚನೆಯ ಪ್ರಕಾರ ಶಸ್ತ್ರಚಿಕಿತ್ಸಾ ವಿಧಾನಗಳ ತರಬೇತಿ ಮಾಡ್ಯೂಲ್ಗಳನ್ನು ಆಯುರ್ವೇದ ಅಧ್ಯಯನಗಳ ಪಠ್ಯಕ್ರಮಕ್ಕೆ ಸೇರಿಸಲಾಗುತ್ತದೆ. ಆಯುರ್ವೇದದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಾಮಾನ್ಯ ಶಸ್ತ್ರಚಿಕಿತ್ಸೆಯನ್ನು ಅಭ್ಯಾಸ ಮಾಡಲು ಅನುವು ಮಾಡಿಕೊಡುವ ನಿಯಮಾವಳಿಯನ್ನು ಸೇರಿಸಲು ಸಿಸಿಐಎಂ ಇಂಡಿಯನ್ ಮೆಡಿಸಿನ್ ಸೆಂಟ್ರಲ್ ಕೌನ್ಸಿಲ್ (ಪಿಜಿ ಆಯುರ್ವೇದ ಶಿಕ್ಷಣ) ನಿಯಮಗಳು, ೨೦೧೬ಕ್ಕೆ ತಿದ್ದುಪಡಿ ಮಾಡಿದ ನಂತರ ಬೆಳವಣಿಗೆ ನಡೆದಿದೆ.

ಸಿಸಿಐಎಂ, ಕೇಂದ್ರ ಸರ್ಕಾರದ ಹಿಂದಿನ ಅನುಮೋದನೆಯೊಂದಿಗೆ, ಭಾರತೀಯ ಔಷಧ ಕೇಂದ್ರ ಮಂಡಳಿ (ಸ್ನಾತಕೋತ್ತರ ಆಯುರ್ವೇದ ಶಿಕ್ಷಣ) ನಿಯಮಗಳು, ೨೦೧೬ಕ್ಕೆ ತಿದ್ದುಪಡಿ ಮಾಡಲು ಕೆಳಗಿನ ನಿಯಮಗಳನ್ನು ಸೇರ್ಪಡೆ ಮಾಡುತ್ತದೆ" ಎಂದು ಗೆಜೆಟ್ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಕಾಯಿದೆಯನ್ನು ಭಾರತೀಯ ವೈದ್ಯಕೀಯ ಕೇಂದ್ರೀಯ ಮಂಡಳಿ (ಸ್ನಾತಕೋತ್ತರ ಆಯುರ್ವೇದ ಶಿಕ್ಷಣ)/ ಇಂಡಿಯನ್ ಮೆಡಿಸಿನ್ ಸೆಂಟ್ರಲ್ ಕೌನ್ಸಿಲ್ (ಪೋಸ್ಟ್ ಗ್ರಾಜುಯೇಟ್ ಆಯುರ್ವೇದ ಎಜುಕೇಷನ್) ತಿದ್ದುಪಡಿ ನಿಯಮಗಳು, ೨೦೨೦ ಎಂದು ಮರುನಾಮಕರಣ ಮಾಡಲಾಗಿದೆ.

ವಿದ್ಯಾರ್ಥಿಗಳಿಗೆ ಎರಡು ಹಂತದ ಶಸ್ತ್ರಚಿಕಿತ್ಸೆಯಲ್ಲಿ ತರಬೇತಿ ನೀಡಲಾಗುವುದು ಮತ್ತು ಎಂಎಸ್ (ಆಯುರ್ವೇದ) ಶಲ್ಯ ತಂತ್ರ ಸಾಮಾನ್ಯ ಶಸ್ತ್ರಚಿಕಿತ್ಸೆ ಮತ್ತು ಎಂಎಸ್ ( ಆಯುರ್ವೇದ) ಶಾಲಾಕ್ಯ ತಂತ್ರ (ಕಣ್ಣು, ಕಿವಿ, ಮೂಗು, ಗಂಟಲು, ತಲೆ ಮತ್ತು  ಮತ್ತು ಒರೊಡೆಂಟಿಸ್ಟ್ರಿ ರೋಗ ಪದವಿಗಳನ್ನು ಪ್ರದಾನ ಮಾಡಲಾಗುವುದು.

Thursday, May 7, 2020

ಕೋವಿಡ್ ವಿರುದ್ಧ ಆಯುರ್ವೇದ ಕಷಾಯ ಪರಿಣಾಮಕಾರಿ; ಗುಜರಾತ್ ಪ್ರತಿಪಾದನೆ

ಕೋವಿಡ್ ವಿರುದ್ಧ ಆಯುರ್ವೇದ ಕಷಾಯ ಪರಿಣಾಮಕಾರಿ; ಗುಜರಾತ್ ಪ್ರತಿಪಾದನೆ

ನವದೆಹಲಿ: ಕ್ವಾರಂಟೈನಿನಲ್ಲಿ ಇದ್ದ ಕೋವಿಡ್ -೧೯ ರೋಗಿಗಳಲ್ಲಿ ಸೋಂಕು ನಿವಾರಣೆಯಾಗುವಲ್ಲಿ ಆಯುರ್ವೇದೀಯ ಔಷಧ ಮತ್ತು ಹೋಮಿಯೋಪಥಿ ಔಷಧ ಪರಿಣಾಮಕಾರಿಯಾಗಿದೆ ಎಂಬುದಾಗಿ ಗುಜರಾತ್ ಸರ್ಕಾರವು 2020 ಮೇ 07ರ ಗುರುವಾರ ಪತ್ರಿಕಾಗೋಷ್ಠಿಯೊಂದರಲ್ಲಿ ಪ್ರತಿಪಾದಿಸಿತು..


ಕ್ವಾರಂಟೈನಿನಲ್ಲಿ ಇದ್ದ ,೫೮೫ ಮಂದಿಗೆ ಆಯುರ್ವೇದ ಕಷಾಯ (ಆಯುರ್ವೇದಿಕ್ ಕಧ) ನೀಡಿದರೆ, ,೬೨೫ ಮಂದಿಗೆ ಹೋಮಿಯೋಪಥಿ ಔಷಧ ನೀಡಲಾಗಿತ್ತು. ಪೈಕಿ ೧೧ ಮಂದಿಯಲ್ಲಿ ಮಾತ್ರ ವರದಿ ಪಾಸಿಟಿವ್ ಆಗಿತ್ತು. ಏಕೆಂದರೆ ಅವರು ಸೂಚಿತ ಪ್ರಮಾಣದಲ್ಲಿ ಔಷಧ ಸೇವಿಸುವಲ್ಲಿ ವಿಫಲರಾಗಿದ್ದರು ಎಂದು ಗುಜರಾತಿನ ಮುಖ್ಯ ಆರೋಗ್ಯ ಕಾರ್ಯದರ್ಶಿ ಜಯಂತಿ ರವಿ ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಪ್ರಯೋಗವು ಕ್ವಾರಂಟೈನಿನಲ್ಲಿ ಇರುವವರಿಗೆ ಆಯುರ್ವೇದ ಮತ್ತು ಹೋಮಿಯೋಪಥಿ ಚಿಕಿತ್ಸೆ ಇಲ್ಲವೇ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಚಿಕಿತ್ಸೆ ನೀಡುವುದು ಪರಿಣಾಮಕಾರಿಯಾಗುತ್ತದೆ ಎಂಬುದನ್ನು ತೋರಿಸಿದೆ ಎಂದು ಜಯಂತಿ ರವಿ ಹೇಳಿದರು.
ಜಯಂತಿ ರವಿ ಅವರ ಭಾಷಣವನ್ನು ಡಿಡಿ ನ್ಯೂಜ್ ಗುಜರಾತಿಯ ಟ್ವಿಟ್ಟರಿನಲ್ಲೂ ಹಂಚಿಕೊಳ್ಳಲಾಗಿತ್ತು. ’ಕ್ವಾರಂಟೈನಿನಲ್ಲಿ ಇದ್ದ ೬೦೦೦ ಮಂದಿಗೆ ಆಯುರ್ವೇದ ಕಷಾಯದಿಂದ ಅನುಕೂಲವಾಗಿರುವುದಕ್ಕೆ ಸಂಬಂಧಿಸಿದಂತೆ ಆಯುಷ್ ಸಚಿವಾಲಯದ ಯಶೋಗಾಥೆಯನ್ನು ಗುಜರಾತ್ ಸರ್ಕಾರವು ಹಂಚಿಕೊಳ್ಳುತ್ತದೆ ಎಂಬ ಬರಹದೊಂದಿಗೆ ಭಾಷಣವನ್ನೂ ಟ್ವೀಟ್ ಮಾಡಲಾಗಿತ್ತು. ಸೂಚಿತ ಆಯುರ್ವೇದ ಕಷಾಯವನ್ನು ಸೇವಿಸಿದ ಕ್ವಾರಂಟೈನಿನಲ್ಲಿ ಇದ್ದ ಜನರ ಕೋವಿಡ್-೧೯ ಪರೀಕ್ಷೆಯು ನೆಗೆಟಿವ್ ಆಗಿ ಬಂದಿದೆ ಎಂದು ಟ್ವೀಟ್ ತಿಳಿಸಿತ್ತು.

ಜಯಂತಿ ರವಿ ಅವರ ಭಾಷಣವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು (ನೆಟಿಜನ್ಸ್) ಹೇಳಿಕೆಯನ್ನು ಟೀಕಿಸಿ ಅದರಅಧಿಕೃತತೆಯನ್ನು ಪ್ರಶ್ನಿಸಿದರು.

ಕೋವಿಡ್-೧೯ ಸೋಂಕನ್ನು ಕಾಯಂ ಆಗಿ ವಾಸಿ ಮಾಡುವಂತಹ ಲಸಿಕೆ ಕಂಡು ಹಿಡಿಯಲು ಅಂತಾರಾಷ್ಟ್ರೀಯ ಸಂಸ್ಥೆಗಳು ಶತಾಯಗತಾಯ ಪ್ರಯತ್ನಗಳನ್ನು ನಡೆಸುತ್ತಿವೆ. ಆದರೆ ಇದು ಭಾರತೀಯರನ್ನು ವೈರಸ್ ವಿರುದ್ಧ ಪರಿಹಾರಗಳ ಸರಣಿ ಹೇಳುವುದನ್ನು ತಡೆದಿಲ್ಲ. ಇಂತಹ ಅನೇಕ ಮನೆಮದ್ದುಗಳು ಕೊರೋನಾವೈರಸ್ಸನ್ನು ತಡೆಯುವಲ್ಲಿ ಅಥವಾ ಗುಣಪಡಿಸುವಲ್ಲಿ ವಿಫಲವಾಗಿವೆ ಎಂದು ಹಲವಾರು ನೆಟ್ಟಿಗರು ಟೀಕಿಸಿದ್ದಾರೆ.

ವರದಿಗಳ ಪ್ರಕಾರ ಗುಜರಾತಿನಲ್ಲಿ ಬುಧವಾರ ೩೮೨ ಹೊಸ ಕೋವಿಡ್-೧೯ ಪ್ರಕರಣಗಳು ವರದಿಯಾಗಿದ್ದು, ಪೈಕಿ ೨೯೧ ಪ್ರಕರಣಗಳು ಕೇವಲ ಅಹಮದಾಬಾದಿನಲ್ಲಿ ದಾಖಲಾಗಿವೆ.

Sunday, November 24, 2019

ಆಯುರ್ವೇದ ಅಭಿವೃದ್ಧಿ: ಸಿಡ್ನಿ ವಿಶ್ವವಿದ್ಯಾಲಯ ಜೊತೆಗೆ ಒಪ್ಪಂದಕ್ಕೆ ಸಹಿ

ಆಯುರ್ವೇದ ಅಭಿವೃದ್ಧಿ: ಸಿಡ್ನಿ ವಿಶ್ವವಿದ್ಯಾಲಯ ಜೊತೆಗೆ ಒಪ್ಪಂದಕ್ಕೆ ಸಹಿ
ನವದೆಹಲಿ: ಆಯುರ್ವೇದ ಸೂತ್ರಗಳನ್ನು ಆಧುನಿಕ ಔಷಧದ ಜೊತೆಗೆ ಸಂಯೋಜಿಸುವ ನಿಟ್ಟಿನಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲು ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಸಹಯೋಗಕ್ಕಾಗಿ ಆಸ್ಟ್ರೇಲಿಯಾದ ಪಶ್ಚಿಮ ಸಿಡ್ನಿ ವಿಶ್ವ ವಿದ್ಯಾಲಯದ ಜೊತೆಗೆ ತಿಳುವಳಿಕೆ ಪತ್ರಕ್ಕೆ (ಎಂಒಯು) ಅಖಿಲ ಭಾರತ ಆಯುರ್ವೇದ ಸಂಸ್ಥೆಯು (ಎಐಐಎ) ಸಹಿ ಹಾಕಿತು.

ಪಶ್ಚಿಮ ಸಿಡ್ನಿ ವಿಶ್ವ ವಿದ್ಯಾಲಯದ ಉಪ ಕುಲಪತಿ ಪ್ರೊಫೆಸರ್ ಬರ್ನಿ ಗ್ಲೋವರ್  ಮತ್ತು ಅಖಿಲ ಭಾರತ ಆಯುರ್ವೇದ ಸಂಸ್ಥೆಯ ನಿರ್ದೇಶಕರಾದ ಪ್ರೊಫೆಸರ್ ತನುಜಾ ನೇಸರಿ ಅವರು ಆಸ್ಟ್ರೇಲಿಯಾ ಸರ್ಕಾರದ ಶಿಕ್ಷಣ ಸಚಿವ ಡ್ಯಾನ್ ಟೆಹನ್ ನೇತೃತ್ವದ ನಿಯೋಗದ ಭಾರತ ಭೇಟಿ ಕಾಲದಲ್ಲಿ 2019 ನವೆಂಬರ್ 22ರ ಶುಕ್ರವಾರ ತಿಳುವಳಿಕೆ ಪತ್ರಕ್ಕೆ ಸಹಿ ಮಾಡಿದರು.

ನವದೆಹಲಿಯ ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆದಭಾರತ-ಆಸ್ಟ್ರೇಲಿಯಾ ಅಂತಾರಾಷ್ಟ್ರೀಯ ಶಿಕ್ಷಣ ಮತ್ತು ಸಂಶೋಧನಾ ಕಾರ್ಯಾಗಾರದ ಸಂದರ್ಭದಲ್ಲಿ ತಿಳುವಳಿಕೆ ಪತ್ರಕ್ಕೆ ಒಪ್ಪಿ ದಾಖಲೆ ವಿನಿಮಯ ಮಾಡಿಕೊಳ್ಳಲಾಯಿತು.

ಆಯುರ್ವೇದ ಮತ್ತು ತಂತ್ರಜ್ಞಾನಗಳನ್ನು ಆಧರಿಸಿದ ಮಾಹಿತಿಗಳನ್ನು ಒಗ್ಗೂಡಿಸುವುದು ಅದರಲ್ಲೂ ನಿರ್ದಿಷ್ಟವಾಗಿ ಪರಂಪರಾಗತ ಮತ್ತು ಪೂರಕ ಔಷಧ ಪದ್ಧತಿಯನ್ನು ಪರಿಣಾಮಕಾರಿಯಾಗಿ ಸಂಯೋಜಿಸುವುದು ಉತ್ತಮ ಮತ್ತು ಸುರಕ್ಷಿತ ಆರೋಗ್ಯ ವ್ಯವಸ್ಥೆಯನ್ನು ವಿಶ್ವಕ್ಕಾಗಿ ರೂಪಿಸುವ ನಿಟ್ಟಿನ ಗುರಿ ಸಾಧನೆಗೆ ಮೌಲ್ಯಯುತವಾದ ಕಾಣಿಕೆಯಾಗಬಲ್ಲುದುಎಂದು  ಪ್ರೊಫೆಸರ್ ಗ್ಲೋವರ್ ಹೇಳಿದರು.

ಆಧುನಿಕ ಔಷಧದ ಸಾಂಪ್ರದಾಯಿಕ ಕಲ್ಪನೆಗಳ ಜೊತೆಗೆ ಪರಂಪರಾಗತ ಆಯುರ್ವೇದ ಔಷಧವನ್ನು ಜೋಡಿಸುವುದರಿಂದ ಜಾಗತಿಕ ಆರೋಗ್ಯ ಕಾಳಜಿಗೆ ಇನ್ನಷ್ಟು ನೆರವಾಗುವಂತಹ ವೈಜ್ಞಾನಿಕ ಸಾಕ್ಷ್ಯಾಧಾರಗಳ ಸೃಷ್ಟಿಗೆ ಅನುಕೂಲವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಕಾರ್ಯಾಗಾರದಲ್ಲಿ ಬಿಡುಗಡೆ ಮಾಡಲಾದ ಹೇಳಿಕೆ ತಿಳಿಸಿತು.

ಶಿಕ್ಷಣ, ಸಂಶೋಧನೆ ಮತ್ತು ಪರಂಪರಾಗತ ಔಷಧ ಸಂಶೋಧನೆ ಮತ್ತು ಅನ್ವಯದ ನಿರ್ದಿಷ್ಟ ಕ್ಷೇತ್ರಗಳಲ್ಲಿ ಉಭಯ ಸಂಸ್ಥೆಗಳೂ ಸಹಯೋಗವನ್ನು ಇನ್ನಷ್ಟು ಎತ್ತರಕ್ಕೆ ಒಯ್ಯಲು ಬದ್ಧವಾಗಿವೆ ಮತ್ತು ಇದೇ ವೇಳೆಗೆ ಗುಣಮಟ್ಟ ಖಚಿತತೆ ಮತ್ತು ಪರಂಪರಾಗತ ಔಷಧ ಸಂಬಂಧಿತ ಮೂಲಭೂತ ಸವಲತ್ತುಗಳಿಗೆ ಹೂಡಿಕೆಗೆ ಪ್ರೋತ್ಸಾಹ ನೀಡಲೂ ಖಾತರಿ ನೀಡುತ್ತವೆಎಂದು ಹೇಳಿಕೆ ತಿಳಿಸಿತು.

ಆಸ್ಟ್ರೇಲಿಯಾದ ಅಂತಾರಾಷ್ಟ್ರೀಯ ಪಾಲುದಾರಿಕೆಗಳಲ್ಲಿ ಭಾರತವು ಅಗ್ರ ಪ್ರಾಶಸ್ತ್ಯವನ್ನು ಹೊಂದಿರುವ ರಾಷ್ಟ್ರವಾಗಿದೆ. ತಿಳುವಳಿಕೆ ಪತ್ರವು ಆರೋಗ್ಯ ಕಾಳಜಿ ಕೈಗಾರಿಕೆಯಲ್ಲಿ ಇನ್ನೊಂದು ಮೈಲಿಗಲ್ಲು ಆಗಿದೆ ಎಂದೂ ಹೇಳಿಕೆ ತಿಳಿಸಿತು.

Advertisement