ಮಳಿವಾಲ್ ʼದ್ರೌಪದಿʼ ಪೋಸ್ಟ್ ವೈರಲ್
ಇದನ್ನೂ ಓದಿರಿ:
ದೆಹಲಿ ಯಾರಿಗೆ?
ಅರುಣಾಚಲ ಪ್ರದೇಶ: ಬಿಜೆಪಿ ಹ್ಯಾಟ್ರಿಕ್, ಸಿಕ್ಕಿಂನಲ್ಲಿ ಎಸ್‌ಕೆಎಂ ಜಯಭೇರಿ
ನವದೆಹಲಿ: ಅರುಣಾಚಲ
ಪ್ರದೇಶದಲ್ಲಿ ಬಿಜೆಪಿ 2024 ಜೂನ್ 2ರ ಭಾನುವಾರ ಮತ್ತೆ ಅಧಿಕಾರಕ್ಕೆ ಬರುವ
ಮೂಲಕ ಹ್ಯಾಟ್ರಿಕ್ ಸಾಧಿಸಿತು. ಇದೇ ವೇಳೆಗೆ ಸಿಕ್ಕಿಂನಲ್ಲಿ ಆಡಳಿತಾರೂಢ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಎಂ)
ಎರಡನೇ ಅವಧಿಗೆ ಅಧಿಕಾರವನ್ನು ಪಡೆದುಕೊಂಡಿತು.
2024 ರ ಏಪ್ರಿಲ್ 19 ರಂದು ಅರುಣಾಚಲ ಪ್ರದೇಶದ 60 ವಿಧಾನಸಭಾ ಸ್ಥಾನಗಳಿಗೆ ಮತ್ತು ಸಿಕ್ಕಿಂನ 32 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆದಿತ್ತು.
ಚುನಾವಣಾ ಆಯೋಗದ ಪ್ರಕಾರ, ಅರುಣಾಚಲ ಪ್ರದೇಶದಲ್ಲಿ ಬಿಜೆಪಿ 46 ಸ್ಥಾನಗಳನ್ನು ಗೆದ್ದು, ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಮರಳಿದೆ. 60 ವಿಧಾನಸಭಾ ಸ್ಥಾನಗಳ ಪೈಕಿ 50 ಸ್ಥಾನಗಳಿಗೆ ಭಾನುವಾರ ಫಲಿತಾಂಶ ಪ್ರಕಟವಾಗಿದ್ದು, ಆಡಳಿತ ಪಕ್ಷ ಈಗಾಗಲೇ ಹತ್ತು ಸ್ಥಾನಗಳನ್ನು ಅವಿರೋಧವಾಗಿ
ಗೆದ್ದುಕೊಂಡಿದೆ. ಈ ಹಿಂದೆ ಅವಿರೋಧವಾಗಿ ಗೆದ್ದಿದ್ದ ಹತ್ತು ಪಕ್ಷದ ಅಭ್ಯರ್ಥಿಗಳಲ್ಲಿ
ಮುಖ್ಯಮಂತ್ರಿ ಪೆಮಾ ಖಂಡು ಕೂಡ ಒಬ್ಬರು.
ನ್ಯಾಷನಲ್ ಪೀಪಲ್ಸ್ ಪಾರ್ಟಿ
(ಎನ್‌ಪಿಪಿ) ಐದು ಸ್ಥಾನಗಳನ್ನು ಗೆದ್ದರೆ, ಅರುಣಾಚಲದ ಪೀಪಲ್ಸ್ ಪಾರ್ಟಿ ಎರಡು ಸ್ಥಾನಗಳನ್ನು ಮತ್ತು ಎನ್‌ಸಿಪಿ
ಮೂರು ಸ್ಥಾನಗಳನ್ನು ಪಡೆದುಕೊಂಡಿವೆ.
ಕಾಂಗ್ರೆಸ್ ಕೇವಲ ಒಂದು ಸ್ಥಾನವನ್ನು ಮಾತ್ರ ಪಡೆದಿದೆ. ಮೂರು
ಕ್ಷೇತ್ರಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ವಿಜಯಶಾಲಿಗಳಾಗಿದ್ದಾರೆ.
ಸಿಕ್ಕಿಂನಲ್ಲಿ ಮುಖ್ಯಮಂತ್ರಿ
ಪ್ರೇಮ್ ಸಿಂಗ್ ತಮಾಂಗ್ ನೇತೃತ್ವದ ಎಸ್‌ಕೆಎಂ 31 ಸ್ಥಾನಗಳನ್ನು ಗೆದ್ದರೆ, ಎಸ್‌ಡಿಎಫ್ ಒಂದು ಸ್ಥಾನವನ್ನು ಗೆದ್ದಿದೆ.
ಪವನ್ ಚಾಮ್ಲಿಂಗ್ ಸೋಲು
ಐದು ಬಾರಿ ಗೆದ್ದಿದ್ದ ಸಿಕ್ಕಿಂನ ಮಾಜಿ ಮುಖ್ಯಮಂತ್ರಿ ಮತ್ತು
ಎಸ್‌ಡಿಎಫ್ ಮುಖ್ಯಸ್ಥ ಪವನ್ ಕುಮಾರ್ ಚಾಮ್ಲಿಂಗ್ ಅವರು ಪೊಕ್ಲೋಕ್ ಕಮ್ರಾಂಗ್ ಮತ್ತು ನಾಮ್‌ಚೆಯ್‌ಬಂಗ್
ವಿಧಾನಸಭಾ ಕ್ಷೇತ್ರಗಳಲ್ಲಿ ಸೋತಿದ್ದಾರೆ.
ಎಂಟು ಬಾರಿ ಶಾಸಕರಾಗಿರುವ ಚಾಮ್ಲಿಂಗ್
ಅವರು ತಮ್ಮ ಹುಟ್ಟೂರು ನಾಮ್ಚಿ ಜಿಲ್ಲೆಯ ಪೊಕ್ಲೋಕ್ ಕಮ್ರಾಂಗ್ ಕ್ಷೇತ್ರದಲ್ಲಿ ಸಿಕ್ಕಿಂ
ಕ್ರಾಂತಿಕಾರಿ ಮೋರ್ಚಾದ ಭೋಜ್ ರಾಜ್ ರೈ ವಿರುದ್ಧ 3,063 ಮತಗಳಿಂದ ಸೋತರು.
ಪ್ರಧಾನಿ ಮೋದಿ ಧನ್ಯವಾದ
ಈಶಾನ್ಯ ರಾಜ್ಯದಲ್ಲಿ ನಡೆದ
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ ಅರುಣಾಚಲ ಪ್ರದೇಶಕ್ಕೆ
ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಹೇಳಿದರು.
ಎಕ್ಸ್
(ಹಿಂದಿನ ಟ್ವಿಟ್ಟರ್) ಮೂಲಕ ಸಂದೇಶ ನೀಡಿದ ಮೋದಿ, "ಧನ್ಯವಾದಗಳು ಅರುಣಾಚಲ ಪ್ರದೇಶ! ಈ ಅದ್ಭುತ ರಾಜ್ಯದ ಜನರು
ಅಭಿವೃದ್ಧಿಯ ರಾಜಕೀಯಕ್ಕೆ ನಿಸ್ಸಂದಿಗ್ಧವಾದ ಜನಾದೇಶವನ್ನು ನೀಡಿದ್ದಾರೆ. @BJP4Arunachal
ನಲ್ಲಿ ಮತ್ತೊಮ್ಮೆ ತಮ್ಮ ನಂಬಿಕೆಯನ್ನು ವ್ಯಕ್ತ ಪಡಿಸಿದ್ದಕ್ಕಾಗಿ ನನ್ನ ಕೃತಜ್ಞತೆಗಳು.
ರಾಜ್ಯದ ಬೆಳವಣಿಗೆಗೆ ಹೆಚ್ಚಿನ ಶಕ್ತಿಯೊಂದಿಗೆ ನಮ್ಮ
ಪಕ್ಷವು ಕೆಲಸ ಮಾಡುತ್ತದೆ” ಎಂದು ಹೇಳಿದ್ದಾರೆ.
ಸಿಕ್ಕಿಂ ವಿಧಾನಸಭಾ
ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಕ್ಕಾಗಿ
ಎಸ್‌ಕೆಎಂ ಮತ್ತು ಅದರ ಮುಖ್ಯಸ್ಥ ಪ್ರೇಮ್ ಸಿಂಗ್ ತಮಾಂಗ್ ಅವರನ್ನು ಕೂಡಾ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದರು.
"ಮುಂಬರುವ
ದಿನಗಳಲ್ಲಿ ಸಿಕ್ಕಿಂನ ಪ್ರಗತಿಯನ್ನು ಮತ್ತಷ್ಟು ಹೆಚ್ಚಿಸಲು ರಾಜ್ಯ ಸರ್ಕಾರದೊಂದಿಗೆ ಕೆಲಸ ಮಾಡುವುದನ್ನು ನಾನು ಎದುರು ನೋಡುತ್ತಿದ್ದೇನೆ"
ಎಂದು ಅವರು X ನಲ್ಲಿ ಸಂದೇಶ ಪೋಸ್ಟ್ ಮಾಡಿದರು.
ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ವಿಧಾನಸಭಾ ಚುನಾವಣೆಗಳಲ್ಲಿ
ಬಿಜೆಪಿಗೆ ಮತ ಹಾಕಿದ ಎಲ್ಲರಿಗೂ ಪ್ರಧಾನಿ
ಧನ್ಯವಾದ ಸಲ್ಲಿಸಿದರು.
ಶನಿವಾರ ಪ್ರಕಟವಾದ ಲೋಕ ಸಭಾ ಚುನಾವಣೆ ಸಂಬಂಧಿತ
ಮತದಾನೋತ್ತರ ಸಮೀಕ್ಷೆಗಳು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೂರನೇ ಭಾರಿಗೆ ಭಾರೀ ಬಹುಮತದೊಂದಿಗೆ
ಅಧಿಕಾರಕ್ಕೆ ಬರುವುದಾಗಿ ಭವಿಷ್ಯ ನುಡಿದಿರುವುದನ್ನು ಇಲ್ಲಿ ಸ್ಮರಿಸಬಹುದು.
ಕೃಷಿ ಕಾಯಿದೆ ವಿವಾದ: ಎನ್‌ಡಿಎ ತೊರೆದ ಆರ್‌ಎಲ್‌ಪಿ
ಜೈಪುರ: ನೂತನ ಕೃಷಿ-ಮಾರುಕಟ್ಟೆ ಕಾನೂನುಗಳ ಬಗ್ಗೆ ನಡೆಯುತ್ತಿರುವ ಬೃಹತ್ ರೈತ ಆಂದೋಲನದ ಮಧ್ಯೆ ರಾಜಸ್ಥಾನದಲ್ಲಿ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟದ (ಎನ್‌ಡಿಎ) ಅಂಗ ಪಕ್ಷವಾಗಿ ಬಿಜೆಪಿಯ ಏಕೈಕ ಮಿತ್ರ ಪಕ್ಷ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ (ಆರ್‌ಎಲ್‌ಪಿ) 2020 ಡಿಸೆಂಬರ್ 26ರ ಶನಿವಾರ ಮೈತ್ರಿಕೂಟದಿಂದ ಹೊರನಡೆಯಿತು.
ಕೃಷಿ ಸುಧಾರಣಾ ಕಾಯ್ದೆಗಳ ಹಿನ್ನೆಲೆಯಲ್ಲಿ ಶಿರೋಮಣಿ ಅಕಾಲಿದಳ ಹೊರಗೆ ಬಂದ ಬಳಿಕ ಅದನ್ನು ಅನುಸರಿಸಿದ ಎನ್‌ಡಿಎಯ ಎರಡನೇ ಮಿತ್ರ ಪಕ್ಷ ಇದಾಗಿದೆ.
ಎನ್‌ಡಿಎ ತ್ಯಜಿಸುವ ನಿರ್ಧಾರವನ್ನು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ ಆರ್‌ಎಲ್‌ಪಿ ನಾಯಕ, ನಾಗೌರ್ ಸಂಸತ್ ಸದಸ್ಯ ಹನುಮಾನ್ ಬೆನಿವಾಲ್ ಅವರು ತಮ್ಮ ಪಕ್ಷವು "ಫೆವಿಕೋಲ್ ಹಚ್ಚಿಕೊಂಡು ಮೈತ್ರಿಗೆ ಅಂಟಿಕೊಂಡಿಲ್ಲ" ಎಂದು ಹೇಳಿದರು.
ವಿವಾದಾತ್ಮಕ ಕಾನೂನುಗಳನ್ನು ಕೇಂದ್ರವು ಹಿಂತೆಗೆದುಕೊಳ್ಳದಿದ್ದರೆ ಲೋಕಸಭೆಗೆ ರಾಜೀನಾಮೆ ನೀಡುತ್ತೇನೆ ಎಂದೂ ಬೆನಿವಾಲ್ ಹೇಳಿದರು.
"ನಾನು ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಎನ್‌ಡಿಎಎಯನ್ನು ತೊರೆದಿದ್ದೇನೆ. ಈ ಕಾನೂನುಗಳು ರೈತ ವಿರೋದಿಯಾಗಿವೆ. ನಾನು ಎನ್‌ಡಿಎಯನ್ನು ತೊರೆದಿದ್ದೇನೆ, ಆದರೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ’ ಎಂದು ಬೆನಿವಾಲ್ ಅವರನ್ನು ಉಲ್ಲೇಖಿಸಿದ ಸುದ್ದಿ ಸಂಸ್ಥೆ ವರದಿ ತಿಳಿಸಿದೆ.
ಇದಕ್ಕೂ ಮುನ್ನ ಶನಿವಾರ ಬೆನಿವಾಲ್ ಅವರು ಜೈಪುರ ಬಳಿ ತಮ್ಮ ‘ದೆಹಲಿ ಚಲೋ’ ಪ್ರತಿಭಟನಾ ಮೆರವಣಿಗೆಯನ್ನು ಪ್ರಾರಂಭಿಸಿದ ಸಾವಿರಾರು ರೈತರೊಂದಿಗೆ ಸೇರಿಕೊಂಡರು.
ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳದಿದ್ದರೆ ಬಿಜೆಪಿಯೊಂದಿಗಿನ ಮೈತ್ರಿಯನ್ನು ಮರುಪರಿಶೀಲಿಸುವುದಾಗಿ ಬೆದರಿಕೆ ಹಾಕಿದ್ದ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಈ ಹಿಂದೆ ಈ ಬಗ್ಗೆ ಪತ್ರ ಬರೆದಿದ್ದರು.
ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಅವರು ಈ ವಾರ ಮೂರು ಸಂಸದೀಯ ಸಮಿತಿಗಳಿಂದಲೂ ಹೊರಬಂದಿದ್ದರು.
ಬೆನಿವಾಲ್ ಅವರು ಕೈಗಾರಿಕೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ಗಳ ಸಂಸದೀಯ ಸಮಿತಿಗಳ ಸದಸ್ಯರಾಗಿದ್ದರು; ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ; ಮತ್ತು ಅರ್ಜಿಗಳ ಸಂಸದೀಯ ಸಮಿತಿಗಳ ಸದಸ್ಯರಾಗಿದ್ದರು.
ದೆಹಲಿ ಜಲ ಮಂಡಳಿ ಕಚೇರಿ ಮೇಲೆ ಬಿಜೆಪಿ ದಾಳಿ: ಕೇಜ್ರಿವಾಲ್ ಆರೋಪ
ನವದೆಹಲಿ: ಆಮ್ ಆದ್ಮಿ ಪಕ್ಷವು ರೈತರ ಪ್ರತಿಭಟನೆಯನ್ನು ಬೆಂಬಲಿಸಿದ್ದಕ್ಕಾಗಿ ದೆಹಲಿ ಜಲ ಮಂಡಳಿಯ ಕಚೇರಿಯನ್ನು ಬಿಜೆಪಿ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ ಎಂದು ಎಎಪಿ ಮುಖಂಡ ರಾಘವ್ ಛಡ್ಡಾ ಮತ್ತು ಎಎಪಿ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ 2020 ಡಿಸೆಂಬರ್ 24ರ ಗುರುವಾರ ಆರೋಪಿಸಿದರು.
ದೆಹಲಿ
ಜಲ ಮಂಡಳಿಯ ಉಪಾಧ್ಯಕ್ಷರೂ ಆಗಿರುವ ರಾಘವ್ ಛಡ್ಡಾ ಗುರುವಾರ ’ವಿಡಿಯೊ ಟ್ವೀಟ್’ ಮಾಡುವ ಮೂಲಕ ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಎಎಪಿ
ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ದಾಳಿಯನ್ನು ನಾಚಿಕೆಗೇಡು
ಎಂದು ಕರೆದರು. ಇಂತಹ ಹೇಡಿತನದ ದಾಳಿಗೆ ತಾನು ಮತ್ತು ಅವರ ಪಕ್ಷ ಹೆದರುವುದಿಲ್ಲ ಎಂದು ಕೇಜ್ರಿವಾಲ್ ಹೇಳಿದರು.
“ಆಮ್
ಆದ್ಮಿ ಪಕ್ಷ ಮತ್ತು ನನ್ನ ಸರ್ಕಾರ ತಮ್ಮ ಕೊನೆಯ ಉಸಿರಾಟದವರೆಗೂ ರೈತರೊಂದಿಗೆ ಸಂಪೂರ್ಣವಾಗಿ ಇರುತ್ತವೆ ಎಂಬುದನ್ನು ಬಿಜೆಪಿ ಅರ್ಥಮಾಡಿಕೊಳ್ಳಬೇಕು. ಇಂತಹ ಹೇಡಿತನದ ದಾಳಿಗೆ ನಾವು ಹೆದರುವುದಿಲ್ಲ. ಬಿಜೆಪಿಯ ಇಂತಹ ದಾಳಿಯಿಂದ ಪ್ರಚೋದನೆಗೆ ಒಳಗಾಗಬಾರದು ಎಂದು ನಾನು ಎಲ್ಲ ಕಾರ್ಯಕರ್ತರಿಗೆ ಮನವಿ
ಮಾಡುತ್ತೇನೆ ಮತ್ತು ರೈತರಿಗೆ ಬೆಂಬಲವನ್ನು ವ್ಯಕ್ತಪಡಿಸುತ್ತೇನೆ’ ಎಂದು
ಎಎಪಿ ಮುಖ್ಯಸ್ಥ ಹಿಂದಿಯಲ್ಲಿ ಟ್ವೀಟ್ ಮಾಡಿದರು.
’ಬಿಜೆಪಿ
ಗೂಂಡಾಗಳು ದೆಹಲಿ ಜಲಮಂಡಳಿಯ ಪ್ರಧಾನ ಕಚೇರಿಯ ಮೇಲೆ ದಾಳಿ ಮಾಡಿದ್ದಾರೆ. ಕಚೇರಿಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದ್ದಾರೆ. ಕಚೇರಿ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾರೆ’ ಎಂದು
ಛಡ್ಡಾ ಹೇಳಿದರು.
ಈ
ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ’ಬಿಜೆಪಿಯ ಗೂಂಡಾಗಳು ದೆಹಲಿ ಜಲ ಮಂಡಳಿ ಕಚೇರಿಗೆ
ಪ್ರವೇಶಿಸಿ ಅದನ್ನು ಧ್ವಂಸ ಮಾಡಿದರು.
ರೈತರಿಗೆ
ಬೆಂಬಲ ನೀಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಎಎಪಿ
ನಾಯಕರು ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಬೆದರಿಕೆ ಹಾಕಿದರು. ಇದೆಲ್ಲವೂ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ. ದೆಹಲಿ ಪೊಲೀಸರ ಸಹಾಯದಿಂದಲೇ ಈ ಘಟನೆ ನಡೆದಿರುವುದು
ಸ್ಪಷ್ಟವಾಗಿದೆ’ ಎಂದು
ಅವರು ಹೇಳಿದರು.
ಇದಕ್ಕೆ
ಮುನ್ನ ನವದೆಹಲಿಯ ಖಂಡೇವಾಲನ್ನಲ್ಲಿರುವ ಡಿಜೆಬಿಯ ಪ್ರಧಾನ ಕಚೇರಿಯಲ್ಲಿ ನೆಲದ ಮೇಲೆ ಮುರಿದ ಬಾಗಿಲುಗಳು, ಗಾಜು, ಮಡಿಕೆಗಳು, ಪೀಠೋಪಕರಣಗಳು ಮತ್ತು ರಕ್ತದ ಕಲೆಗಳನ್ನು ತೋರಿಸುವ ವೀಡಿಯೊ ಕ್ಲಿಪ್ ಅನ್ನು ಚಾಧಾ ಟ್ವೀಟ್ ಮಾಡಿದ್ದರು.
ಕೇಂದ್ರ
ಸರ್ಕಾರದ ಕೃಷಿ ಸುಧಾರಣೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಬೆಂಬಲಿಸದಂತೆ ದಾಳಿಕೋರರು ಎಎಪಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಆರೋಪಿಸಿದ ಘಟನೆಯ ನಂತರ ಡಿಜೆಬಿ ಉಪಾಧ್ಯಕ್ಷರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮೂರು ಕೃಷಿ ಕಾಯ್ದೆ ರದ್ದಿಗಾಗಿ ಪಕ್ಷದ ಬೆಂಬಲ ಮುಂದುವರಿಯುತ್ತದೆ ಎಂದು ಛಡಾ ಪುನರುಚ್ಚರಿಸಿದರು.
ಮತ್ತೊಂದೆಡೆ,
ಬಿಜೆಪಿ ವಕ್ತಾರ ವೀರೇಂದ್ರ ಬಾಬರ್ ಅವರು ಆರೋಪಗಳನ್ನು ನಿರಾಕರಿಸಿದರು. ಕೇಜ್ರಿವಾಲ್ ಅವರ ಪಕ್ಷವು ಸ್ವತಃ ದಾಳಿಯನ್ನು ಯೋಜಿಸಿದೆ ಮತ್ತು ಈಗ ಬಿಜೆಪಿಯನ್ನು ದೂಷಿಸುತ್ತಿದೆ.
"ದೆಹಲಿ ಪೊಲೀಸರು ಪಕ್ಷದ ಘಟಕದ ಮುಖ್ಯಸ್ಥ ಆದೇಶ್ ಗುಪ್ತಾ ಮತ್ತು ಅನೇಕ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ, ಆದರೆ ಈ ತಂತ್ರಗಳಿಗೆ ನಾವು
ಹೆದರುವುದಿಲ್ಲ" ಎಂದು ಬಾಬರ್ ಹೇಳಿದರು.
ಡಿಡಿಸಿ: ಗುಪ್ಕರ್ ಮೈತ್ರಿಕೂಟಕ್ಕೆ ಜಯ, ಏಕೈಕ ದೊಡ್ಡ ಪಕ್ಷ ಬಿಜೆಪಿ
ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವಾಗಿ ಪರಿವರ್ತಿಸಿದ ಬಳಿಕ ನಡೆದ ಮೊದಲ ಚುನಾವಣೆಯಾದ ಜಿಲ್ಲಾ ಅಭಿವೃದ್ಧಿ ಮಂಡಳಿಯ (ಡಿಡಿಸಿ) ಚೊಚ್ಚಲ ಚುನಾವಣೆಯಲ್ಲಿ ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳ ಮೈತ್ರಿಕೂಟವಾದ ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕರ್ ಡಿಕ್ಲರೇಷನ್ (ಪಿಎಜಿಡಿ) ಪ್ರಚಂಡ ಜಯಗಳಿಸಿದೆ.ಆದರೂ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ), ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ), ಪೀಪಲ್ಸ್ ಕಾನ್ಫರೆನ್ಸ್ (ಪಿಸಿ), ಪೀಪಲ್ಸ್ ಮೂವ್‌ಮೆಂಟ್ (ಪಿಎಂ), ಸಿಪಿಐ (ಎಂ), ಅವಾಮಿ ನ್ಯಾಷನಲ್ ಕಾನ್ಫರೆನ್ಸ್ (ಎಎನ್‌ಸಿ) ಮತ್ತು ಕಾಂಗ್ರೆಸ್ ಒಟ್ಟಿಗೆ ೧೧೦ ಸ್ಥಾನಗಳನ್ನು ಗೆದ್ದಿವೆ. ಈ ಪಕ್ಷಗಳ ಮೈತ್ರಿಕೂಟದ ವಿರುದ್ಧ ಹೋರಾಟ ನೀಡಿದ್ದ ಭಾರತೀಯ ಜನತಾ ಪಕ್ಷ (ಬಿಜೆಪಿ) ೭೫ ಸ್ಥಾನಗಳನ್ನು ಪಡೆದು ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು.
ಪಿಎಜಿಡಿಯ ಪ್ರಭಾವವು ಹೆಚ್ಚಾಗಿ ಕಾಶ್ಮೀರ ಪ್ರದೇಶಕ್ಕೆ ಸೀಮಿತವಾಗಿತ್ತು. ಅದರ ಶೇಕಡಾ ೭೬ ಸ್ಥಾನಗಳು ಕಾಶ್ಮೀರ ಕಣಿವೆ ಪ್ರದೇಶದಿಂದಲೇ ಬಂದಿವೆ, ಶೇಕಡಾ ೨೪ರಷ್ಟು ಸ್ಥಾನಗಳು ಮಾತ್ರ ಜಮ್ಮು ಪ್ರದೇಶದಿಂದ ಬಂದವು. ಜಮ್ಮು ಪ್ರದೇಶದಲ್ಲಿ ಗುಪ್ಕರ್ ಮೈತ್ರಿಕೂಟದ ಮಿತ್ರ ಪಕ್ಷಗಳು ಸೀಟು ಹಂಚಿಕೆಯಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಮೈತ್ರಿಕೂಟದ ಮುಖ್ಯ ವಿರೋಧಿಗಳು ಬಿಜೆಪಿ ಮತ್ತು ಹೊಸದಾಗಿ ರೂಪುಗೊಂಡ ಅಪ್ನಿ ಪಕ್ಷ, ಇದು ಪಿಡಿಪಿ ಮಾಜಿ ಸಚಿವ ಅಲ್ತಾಫ್ ಬುಖಾರಿ ನೇತೃತ್ವದಲ್ಲಿದೆ, ಅವರು ಸಂವಿಧಾನದ ವಿಧಿ ೩೭೦ ಬೇಡಿಕೆಯಿಂದ ಆಚೆಗೆ ಸಾಗಿ ಬರಬೇಕು ಎಂದು ಸಲಹೆ ನೀಡುತ್ತಾರೆ.
ಬಿಜೆಪಿ ಜಮ್ಮು ಪ್ರದೇಶದಲ್ಲಿ ತನ್ನ ಬೇರನ್ನು ಭದ್ರವಾಗಿ ಉಳಿಸಿಕೊಂಡಿದೆ ಮತ್ತು ಮೂರು ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಶ್ಮೀರದಲ್ಲಿ ತನ್ನ ಖಾತೆಯನ್ನು ತೆರೆದಿದೆ. ದಕ್ಷಿಣ ಕಾಶ್ಮೀರದ ಕಾಕಪೋರಾದಲ್ಲಿ ಒಂದು, ಶ್ರೀನಗರದ ಖನ್ಮೋದಲ್ಲಿ ಒಂದು ಮತ್ತು ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೆಜ್ ಕಣಿವೆಯ ತುಲೇಲ್ ಪ್ರದೇಶದಲ್ಲಿ ಇನ್ನೊಂದು ಹೀಗೆ ೩ ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಕಾಶ್ಮೀರ ಪ್ರದೇಶದಲ್ಲಿ ಕೆಲವು ಸ್ಥಾನಗಳನ್ನು ಗೆಲ್ಲಲು ಬಿಜೆಪಿ ತೀವ್ರ ಪ್ರಯತ್ನ ಮಾಡಿತು ಮತ್ತು ಮಾಜಿ ನಾಗರಿಕ ವಿಮಾನಯಾನ ಸಚಿವ ಶಾನವಾಜ್ ಹುಸೇನ್ ಅವರಂತಹ ತಾರಾ ಪ್ರಚಾರಕರನ್ನು ನಿಯೋಜಿಸಿತ್ತು, ಅವರು ಸುಮಾರು ಒಂದು ತಿಂಗಳ ಕಾಲ ಕಣಿವೆಯಲ್ಲಿ ಶಿಬಿರ ಹೂಡಿದ್ದರು.
ಕಣಿವೆಯಲ್ಲಿ ಬಿಜೆಪಿ ಗೆದ್ದ ಸ್ಥಾನಗಳ ಸಂಖ್ಯೆ ದೊಡ್ಡದಾಗಿರದೆ ಇರಬಹುದು ಆದರೆ ಕಣಿವೆಗೆ ನುಗ್ಗಿರುವುದು ಹಲವು ವಿಧಗಳಲ್ಲಿ ಗಮನಾರ್ಹವಾಗಿದೆ.
ಕಣದಲ್ಲಿ ೨,೨೦೦ ಅಭ್ಯರ್ಥಿಗಳಿದ್ದು, ಈ ಪೈಕಿ ಪಿಎಜಿಡಿ ಸದಸ್ಯರಾದ ಎನ್‌ಸಿ ೧೬೯, ಪಿಡಿಪಿ ೬೮, ಅಪ್ನಿ ಪಾರ್ಟಿ ೧೬೬, ಕಾಂಗ್ರೆಸ್ ೧೫೭, ಪೀಪಲ್ಸ್ ಕಾನ್ಫರೆನ್ಸ್ ಮತ್ತು ಪೀಪಲ್ಸ್ ಮೂವ್‌ಮೆಂಟ್ ತಲಾ ೧೧, ಸಿಪಿಐ (ಎಂ) ಎಂಟು, ಎಲ್‌ಜೆಪಿ ಆರು ಮತ್ತು ಪ್ಯಾಂಥರ್ಸ್ ಪಾರ್ಟಿ ೫೪. ಹಾಗೂ ಇವುಗಳಿಗೆ ವಿರುದ್ಧವಾಗಿ ಬಿಜೆಪಿ ೨೩೫ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಚುನಾವಣೆಯಲ್ಲಿ ೧,೨೩೮ ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ಜಮ್ಮು - ಕಾಶ್ಮೀರದ ರಾಜಕೀಯದ ವಿಭಜಿತ ದೃಶ್ಯವದ ಆಸಕ್ತಿದಾಯಕ ಕಥೆಯನ್ನು ಸಂಖ್ಯೆಗಳು ನಿರೂಪಿಸುತ್ತವೆ. ನ್ಯಾಷನಲ್ ಕಾನ್ಫರೆನ್ಸ್ ೬೭ ಸ್ಥಾನ, ಪಿಡಿಪಿ ೨೭, ಕಾಂಗ್ರೆಸ್ ೨೬, ಪೀಪಲ್ಸ್ ಕಾನ್ಫರೆನ್ಸ್ ೮, ಸಿಪಿಐ (ಎಂ) ೫ ಮತ್ತು ಅಪ್ನಿ ಪಕ್ಷ ೧೨ ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.
ಪಿಎಜಿಡಿಯ ಭಾಗವಾಗಿರುವ ಜಮ್ಮುನಲ್ಲಿ ಜೆ & ಕೆ ಪೀಪಲ್ಸ್ ಮೂವ್ ಮೆಂಟ್, ಅವಾಮಿ ನ್ಯಾಷನಲ್ ಕಾನ್ಫರೆನ್ಸ್, ಪ್ಯಾಂಥರ್ಸ್ ಪಾರ್ಟಿ ಸೇರಿದಂತೆ ಸಣ್ಣ ಪಕ್ಷಗಳು ಇತರ ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದವು.
ಚುನಾವಣೆಯಲ್ಲಿ ಮತ್ತೊಂದು ಮಹತ್ವದ ಪಾಲನ್ನು ಪಕ್ಷೇತರ ಅಭ್ಯರ್ಥಿಗಳು ತೆಗೆದುಕೊಂಡಿದ್ದು, ಒಟ್ಟು ೫೦ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಶ್ರೀನಗರದ ೧೪ ಕ್ಷೇತ್ರಗಳಲ್ಲಿ ಸ್ವತಂತ್ರರು ಏಳು ಸ್ಥಾನಗಳನ್ನು ಗೆದ್ದರು, ಬಿಜೆಪಿಗೆ ಶ್ರೀನಗರ ಸ್ಥಾನವನ್ನು ಗೆಲ್ಲಿಸಿಕೊಟ್ಟ ಇಜಾಜ್ ಹುಸೇನ್ ರಾಥರ್, ಬಿಜೆಪಿ ಯುವ ವಿಭಾಗದ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದಾರೆ ಮತ್ತು ಪಕ್ಷಕ್ಕೆ ಪಶ್ಚಿಮ ಬಂಗಾಳದ ಉಸ್ತುವಾರಿಗಳಲ್ಲಿ ಒಬ್ಬರು.
"ಬಿಜೆಪಿಯನ್ನು ಸೋಲಿಸಲು ಅನೇಕ ರಾಜಕೀಯ ಪಕ್ಷಗಳು ಒಗ್ಗೂಡಬೇಕಾಗಿರುವುದು ನಾಚಿಕೆಗೇಡಿನ ಸಂಗತಿ ಮತ್ತು ನಾವು ಕಾಶ್ಮೀರದಲ್ಲಿ ಮೂರು ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರೂ ಸಹ, ನಮ್ಮ ಪಕ್ಷವು ಕಣಿವೆಯಲ್ಲಿ ಮಹತ್ವದ ಛಾಪು ಮೂಡಿಸಿದೆ ಎಂದು ನಾನು ನಂಬುತ್ತೇನೆ" ಎಂದು ಬಿಜೆಪಿ ಮಾಧ್ಯಮ ಉಸ್ತುವಾರಿ ಮಂಜೂರ್ ಭಟ್ ಹೇಳಿದರು.
ಹೆಚ್ಚು ತೊಂದರೆಗೀಡಾದ ಪ್ರದೇಶಗಳಲ್ಲಿ ಒಂದಾಗಿರುವ ಪುಲ್ವಾಮಾ ಜಿಲ್ಲೆಯೂ ಆಸಕ್ತಿದಾಯಕ ಫಲಿತಾಂಶಗಳನ್ನು ನೀಡಿತು. ಪಿಡಿಪಿ ೧೪ ಸ್ಥಾನಗಳಲ್ಲಿ ಒಂಬತ್ತು ಸ್ಥಾನಗಳನ್ನು ಗೆದ್ದಿದೆ, ನಾಲ್ಕು ಸ್ಥಾನಗಳನ್ನು ಪಕ್ಷೇತರರು ಪಡೆದುಕೊಂಡರು ಮತ್ತು ಒಂದು ಸ್ಥಾನ ಬಿಜೆಪಿಗೆ ಸಿಕ್ಕಿತು. ಪುಲ್ವಾಮಾ ೨೦೧೯ ರ ಫೆಬ್ರವರಿಯಲ್ಲಿ ೪೦ ಸಿಆರ್‌ಪಿಎಫ್ ಸೈನಿಕರು ತಮ್ಮ ಬೆಂಗಾವಲು ಮೇಲೆ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಮೃತರಾದಾಗ ಸುದ್ದಿಯ ಪಟ್ಟಾಗ ಮುಂಚೂಣಿಗೆ ಬಂದಿತ್ತು. ಕುತೂಹಲಕಾರಿಯಾಗಿ, ಯುವ ಬಾಂಬರ್ ಆದಿಲ್ ದಾರ್‌ನನ್ನು ಪ್ರಶಂಸಿಸಿದ್ದ ಪ್ರದೇಶದಿಂದ ಬಿಜೆಪಿ ವಿಜಯ ಸಾಧಿಸಿತು.