Showing posts with label Bombay. Show all posts
Showing posts with label Bombay. Show all posts

Monday, November 9, 2020

ಗೋಸ್ವಾಮಿಗೆ ಜಾಮೀನು: ಬಾಂಬೆ ಹೈಕೊರ್ಟ್ ನಕಾರ

 ಗೋಸ್ವಾಮಿಗೆ ಜಾಮೀನು: ಬಾಂಬೆ ಹೈಕೊರ್ಟ್ ನಕಾರ

ಮುಂಬೈ: ೨೦೧೮ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಅವರಿಗೆ ಮಧ್ಯಂತರ ಜಾಮೀನು ನೀಡಲು ಬಾಂಬೆ ಹೈಕೋರ್ಟ್ 2020 ನವೆಂಬರ್ 09ರ ಸೋಮವಾರ  ನಿರಾಕರಿಸಿತು.

ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ೨೦೧೮ ಅಪರಾಧ ಪ್ರಕರಣದಲ್ಲಿ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಜಾಮೀನು ಕೋರಿರುವುದನ್ನು ಬಾಂಬೆ ಹೈಕೋರ್ಟ್ ಸೋಮವಾರ ತಿರಸ್ಕರಿಸಿತು.

ಗೋಸ್ವಾಮಿ ಅವರ ಮನವಿಯ ಮೇರೆಗೆ ಹೈಕೋರ್ಟ್ ತನ್ನ ಆದೇಶವನ್ನು ಶನಿವಾರ ಕಾಯ್ದಿರಿಸಿತ್ತು.

ವಾಸ್ತುಶಿಲ್ಪಿ-ಒಳಾಂಗಣ ವಿನ್ಯಾಸಕ ಅನ್ವಯ್ ನಾಯಕ್ ಮತ್ತು ಅವರ ತಾಯಿಯ ಆತ್ಮಹತ್ಯೆಗೆ ಸಂಬಂಧಿಸಿದಂತೆ ಗೋಸ್ವಾಮಿ ಮತ್ತು ಫಿರೋಜ್ ಶೇಖ್ ಮತ್ತು ನಿತೀಶ್ ಸರ್ದಾ ಅವರನ್ನು ನವೆಂಬರ್ ರಂದು ಬಂಧಿಸಲಾಗಿತ್ತು.

ಮುಂಬೈಯ ಲೋವರ್ ಪ್ಯಾರೆಲ್ ನಿವಾಸದಿಂದ ಬಂಧನಕ್ಕೊಳಗಾದ ನಂತರ, ಗೋಸ್ವಾಮಿ ಅವರನ್ನು  ಅಲಿಬಾಗ್‌ಗೆ ಕರೆದೊಯ್ಯಲಾಗಿತ್ತು. ಅಲ್ಲಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ರು ಗೋಸ್ವಾಮಿ ಮತ್ತು ಇನ್ನಿಬ್ಬರನ್ನು ನವೆಂಬರ್ ೧೮ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದರು.

ಗೋಸ್ವಾಮಿ ಅವರನ್ನು ಅಲಿಬಾಗ್ ಜೈಲಿಗೆ ಕೋವಿಡ್ -೧೯ ಕೇಂದ್ರವೆಂದು ಗೊತ್ತುಪಡಿಸಲಾಗಿದ್ದ ಸ್ಥಳೀಯ ಶಾಲೆಯಲ್ಲಿ ಇರಿಸಲಾಗಿತ್ತು. ಅವರನ್ನು ಭಾನುವಾರ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ತಾಲೋಜ ಜೈಲಿಗೆ ಸ್ಥಳಾಂತರಿಸಲಾಯಿತು. ನ್ಯಾಯಾಂಗ ಬಂಧನದಲ್ಲಿದ್ದಾಗ ಮೊಬೈಲ್ ಫೋನ್ ಬಳಸಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಗೋಸ್ವಾಮಿಯನ್ನು ತಲೋಜ ಜೈಲಿಗೆ ಸ್ಥಳಾಂತರಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ನವೆಂಬರ್ ರಂದು ಬಂಧನಕ್ಕೊಳಗಾದಾಗ ಗೋಸ್ವಾಮಿ ಅವರ ವೈಯಕ್ತಿಕ ಮೊಬೈಲ್ ಫೋನನ್ನು ಪೊಲೀಸರು ವಶಪಡಿಸಿಕೊಂಡಿದ್ದರೂ, ಬೇರೆಯವರ ಮೊಬೈಲ್ ಫೋನ್ ಬಳಸಿ ಗೋಸ್ವಾಮಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದುದನ್ನು ರಾಯಗಡ್ ಅಪರಾಧ ವಿಭಾಗವು ಕಂಡುಹಿಡಿದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಗೋಸ್ವಾಮಿ ಅವರು ಇದಕ್ಕೂ ಮುನ್ನ ಬಾಂಬೆ ಹೈಕೋರ್ಟ್‌ಗೆ ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು, ಆಗ ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಹೈಕೋರ್ಟ್ ಅವರಿಗೆ ಅವಕಾಶ ನೀಡಿತ್ತು. ಪತ್ರಕರ್ತ ಅದರಂತೆ ಸೋಮವಾರ ಸೆಷನ್ಸ್ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು.

ರಾಜ್ಯಪಾಲರ ಆತಂಕ:

ಮಧ್ಯೆ, ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ರಾಜ್ಯ ಗೃಹ ಸಚಿವ ಅನಿಲ್ ದೇಶಮುಖ್  ಅವರೊಂದಿಗೆ ಮಾತನಾಡಿ, ಬಂಧಿತ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರ ಭದ್ರತೆ ಮತ್ತು ಆರೋಗ್ಯದ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತ ಪಡಿಸಿದ್ದಾರೆ ಎಂದು ರಾಜಭವನದ ಪ್ರಕಟಣೆ ತಿಳಿಸಿದೆ.

ಗೋಸ್ವಾಮಿ ಅವರ ಕುಟುಂಬಕ್ಕೆ ಅವರನ್ನು ಭೇಟಿ ಮಾಡಲು ಅವಕಾಶ ನೀಡುವಂತೆಯೂ ರಾಜ್ಯಪಾಲರು ಗೃಹ ಸಚಿವರಿಗೆ ಸೂಚಿಸಿದರು.

ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ೨೦೧೮ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ ರಂದು ಮುಂಬೈ ಪೊಲೀಸರಿಂದ ಬಂಧಿಸಲ್ಪಟ್ಟಿರುವ ಅರ್ನಾಬ್ ಗೋಸ್ವಾಮಿ ಅವರು ತಮಗೆ ಚಿತ್ರಹಿಂಸೆ ನೀಡಲಾಗುತ್ತಿದೆ ಮತ್ತು ತಮ್ಮ ವಕೀಲರೊಂದಿಗೆ ಮಾತನಾಡಲು ಅವಕಾಶ ನೀಡಲಾಗುತ್ತಿಲ್ಲ ಎಂದು ಆಪಾದಿಸಿದ್ದಾರೆ.

ಅವರು ರಿಪಬ್ಲಿಕ್ ಟಿವಿ ವರದಿಗಾರರೊಂದಿಗೆ ವ್ಯಾನ್ ನಿಂದ ಮಾತನಾಡುತ್ತಿದ್ದರು,

ನಾನು (ನನ್ನ ವಕೀಲರೊಂದಿಗೆ) ಮಾತನಾಡಲು ಅವಕಾಶ ಮಾಡಿಕೊಡಿ ಎಂದು ಅವರಿಗೆ ವಿನಂತಿಸಿದ್ದೆ. ಆದರೆ ಅವರು ನಿರಾಕರಿಸಿದರು. ನನ್ನ ಜೀವನವು ಅಪಾಯದಲ್ಲಿದೆ ಎಂದು ನಾನು ಎಲ್ಲರಿಗೂ ಹೇಳುತ್ತಿದ್ದೇನೆ. ನನ್ನ ಪೊಲೀಸ್ ಕಸ್ಟಡಿಯನ್ನು ತಿರಸ್ಕರಿಸಲಾಗಿದೆ. ಅವರು ರಾತ್ರಿಯಲ್ಲಿ ನನ್ನನ್ನು ಸ್ಥಳಾಂತರಿಸಲು ಪ್ರಯತ್ನಿಸಿದರು. ಇಂದು ಬೆಳಗ್ಗೆ ಅವರು ನನ್ನನ್ನು ಎಳೆದಾಡಿದ್ದಾರೆ. ನನಗೆ ಏನಾಗುತ್ತಿದೆ ಎಂದು ಎಲ್ಲರೂ ನೋಡುತ್ತಿದ್ದಾರೆ. ಅವರು ಪ್ರಕ್ರಿಯೆಯನ್ನು ವಿಳಂಬಗೊಳಿಸಲು ಮತ್ತು ನನ್ನನ್ನು ಜೈಲಿನಲ್ಲಿಡಲು ಬಯಸುತ್ತಾರೆ. ದಯವಿಟ್ಟು ನನಗೆ ಜಾಮೀನು ನೀಡಿ, ನಾನು ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸುತ್ತಿದ್ದೇನೆ ಅರ್ನಾಬ್ ಗೋಸ್ವಾಮಿ ಕೈ ಮುಗಿದುಕೊಂಡು ಹೇಳುತ್ತಿದ್ದ ವಿಡಿಯೋದಲ್ಲಿ ಕಂಡು ಬಂತು.

Friday, October 30, 2020

ಮುಂಬೈಯಲ್ಲಿ ಫ್ರಾನ್ಸ್ ವಿರೋಧಿ ಪ್ರತಿಭಟನೆ

 ಮುಂಬೈಯಲ್ಲಿ  ಫ್ರಾನ್ಸ್ ವಿರೋಧಿ ಪ್ರತಿಭಟನೆ

ನವದೆಹಲಿ: ಶಿಕ್ಷಕನೊಬ್ಬನ ಶಿರಚ್ಛೇದ ಘಟನೆಯ ಬಳಿಕ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರ ಮೇಲೆ ವೈಯಕ್ತಿಕ ದಾಳಿಗಳು ನಡೆದುದನ್ನು ಅನುಸರಿಸಿ ಭಾರತವು ಫ್ರಾನ್ಸ್ ಜೊತೆ ಒಗ್ಗಟ್ಟು ವ್ಯಕ್ತ ಪಡಿಸಿದ ಒಂದು ದಿನದ ಬಳಿಕ ಮುಂಬೈ ಮತ್ತು ಭೋಪಾಲ್ನಲ್ಲಿ ಪ್ರತಿಭಟನೆಗಳು ನಡೆದಿದ್ದು, ಪ್ರತಿಭಟನಕಾರರ ತುಳಿತಕ್ಕೆ ಒಳಗಾಗಿದ್ದ ಮ್ಯಾಕ್ರೋನ್ ಪೋಸ್ಟರುಗಳನ್ನು ಪೊಲೀಸರು 2020 ಅಕ್ಟೋಬರ್ 30 ಶುಕ್ರವಾರ ರಸ್ತೆಗಳಿಂದ ತೆಗೆದುಹಾಕಿದರು.

ಮ್ಯಾಕ್ರೋನ್ ಪೋಸ್ಟರುಗಳ ಮೇಲೆ ಜನರು ವಾಕಿಂಗ್ ಮಾಡುವ, ವಾಹನಗಳು ಸಂಚರಿಸುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಪ್ರತಿಭಟನೆಯ ಹಿಂದೆ ರಝಾ ಅಕಾಡೆಮಿ ಮುಸ್ಲಿಂ ಸಂಘಟನೆ ಇದೆ ಎಂದು ವರದಿಗಳು ತಿಳಿಸಿದವು.

ಫ್ರೆಂಚ್ ಶಿಕ್ಷಕನ ಹತ್ಯೆ ಮತ್ತು ಮ್ಯಾಕ್ರೋನ್ ಮೇಲೆ ವೈಯಕ್ತಿಕ ದಾಳಿಯನ್ನು ಖಂಡಿಸಿ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, "ಅಂತಾರಾಷ್ಟ್ರೀಯ ಭಾಷಣದ ಅತ್ಯಂತ ಮೂಲಭೂತ ಮಾನದಂಡಗಳನ್ನು ಉಲ್ಲಂಘಿಸಿ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರ ಮೇಲೆ ಸ್ವೀಕಾರಾರ್ಹವಲ್ಲದ ಭಾಷೆಯಲ್ಲಿ ನಡೆದಿರುವ ವೈಯಕ್ತಿಕ ದಾಳಿಯನ್ನು ನಾವು ಬಲವಾಗಿ ವಿವರಿಸುತ್ತೇವೆ ಎಂದು ಹೇಳಿದೆ.

"ಫ್ರೆಂಚ್ ಶಿಕ್ಷಕನ ಪ್ರಾಣವನ್ನು ಭಯಂಕರ ರೀತಿಯಲ್ಲಿ ತೆಗೆದ ಕ್ರೂರ ಭಯೋತ್ಪಾದಕ ದಾಳಿಯನ್ನು ನಾವು ಖಂಡಿಸುತ್ತೇವೆ, ಅದು ಜಗತ್ತನ್ನು ಬೆಚ್ಚಿಬೀಳಿಸಿದೆ. ಯಾವುದೇ ಕಾರಣಕ್ಕೂ ಅಥವಾ ಯಾವುದೇ ಸಂದರ್ಭದಲ್ಲೂ ಭಯೋತ್ಪಾದನೆಗೆ ಯಾವುದೇ ಸಮರ್ಥನೆ ಇಲ್ಲ ಎಂದು ಹೇಳಿಕೆ ತಿಳಿಸಿದೆ.

ನೈಸ್ನಲ್ಲಿ ಗುರುವಾರ ನಡೆದ ಭಯೋತ್ಪಾದಕ ಕೃತ್ಯದಲ್ಲಿ ಮಹಿಳೆಯ ಶಿರಚ್ಛೇದ ನಡೆದಿದ್ದು ಇದೇ ವೇಳೆಗೆ ಇನ್ನಿಬ್ಬರು ಚೂರಿ ಇರಿತದಿಂದ ಸಾವನ್ನಪ್ಪಿದ್ದಾರೆ. ಪ್ರತ್ಯೇಕ ಘಟನೆಯೊಂದರಲ್ಲಿ, ಫ್ರೆಂಚ್ ನಗರ ಅವಿಗ್ನಾನ್ನಲ್ಲಿ ಬಂದೂಕು ಚಲಾಯಿಸುವ ವ್ಯಕ್ತಿಯನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ದಾಳಿಯನ್ನು ಖಂಡಿಸಿದ್ದು, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಫ್ರಾನ್ಸಿಗೆ ಭಾರತದ ಬೆಂಬಲವನ್ನು ಪ್ರತಿಪಾದಿಸಿದರು.

ನೈಸ್ ನಗರದ ಚರ್ಚ್ನೊಳಗೆ ನಡೆದ ಭೀಕರ ದಾಳಿ ಸೇರಿದಂತೆ ಫ್ರಾನ್ಸ್ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ, ದಾಳಿ ಸಂತ್ರಸ್ತರ ಕುಟುಂಬಗಳಿಗೆ ಮತ್ತು ಫ್ರಾನ್ಸ್ ಜನರಿಗೆ ನಮ್ಮ ಆಳವಾದ ಮತ್ತು ಹೃತ್ಪೂರ್ವಕ ಸಂತಾಪಗಳು. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ ಫ್ರಾನ್ಸ್ ಜೊತೆ ನಿಂತಿದೆ ಎಂದು ಪ್ರಧಾನಿ ಮೋದಿ ಗುರುವಾರ ಟ್ವೀಟ್ ಮಾಡಿದ್ದರು.

ಅಕ್ಟೋಬರ್ ೧೬ ರಂದು, ಫ್ರೆಂಚ್ ಶಿಕ್ಷಕ ಸ್ಯಾಮ್ಯುಯೆಲ್ ಪ್ಯಾಟಿ ತಮ್ಮ ತರಗತಿಯಲ್ಲಿ ಪ್ರವಾದಿಯ ವ್ಯಂಗ್ಯಚಿತ್ರವನ್ನು ತೋರಿಸಿದ ಆರೋಪದ ಮೇಲೆ ಅವರ ಶಿರಚ್ಛೇದನ ಮಾಡಲಾಯಿತು. ಶೋಕಾಚರಣೆಯಲ್ಲಿ ಪಾಲ್ಗೊಂಡ ಮ್ಯಾಕ್ರೋನ್ , ಫ್ರಾನ್ಸ್ ವ್ಯಂಗ್ಯಚಿತ್ರಗ ಹಕ್ಕುಗಳನ್ನು ಬಿಟ್ಟುಕೊಡುವುದಿಲ್ಲ ಎಂಬುದಾಗಿ ಹೇಳಿದ್ದು, ಪಾಕಿಸ್ತಾನ ಸೇರಿದಂತೆ ವಿಶ್ವನಾಯಕರ ವಿಭಜನೆಗೆ ಕಾರಣವಾಗಿದೆ. ಟರ್ಕಿಯು ಮ್ಯಾಕ್ರೋನ್ ಅವರನ್ನು ತೀವ್ರವಾಗಿ ಖಂಡಿಸಿದೆ.

Advertisement