Showing posts with label Flash News. Show all posts
Showing posts with label Flash News. Show all posts

Wednesday, June 12, 2024

ಕುವೈತ್ ಅಗ್ನಿ ದುರಂತ: 40 ಭಾರತೀಯರ ಸಾವು

 ಕುವೈತ್ ಅಗ್ನಿ ದುರಂತ: 40 ಭಾರತೀಯರ ಸಾವು

ವದೆಹಲಿ: ಕುವೈತ್‌ನಲ್ಲಿ ಡಜನ್‌ಗಟ್ಟಲೆ ಕಾರ್ಮಿಕರು ವಾಸಿಸುತ್ತಿದ್ದ ಆರು ಅಂತಸ್ತಿನ ಕಟ್ಟಡಕ್ಕೆ 2024 ಜೂನ್‌ 12ರ ಬುಧವಾರ ನಸುಕಿನಲ್ಲಿ ಬೆಂಕಿ ತಗುಲಿದ ಪರಿಣಾಮವಾಗಿ ಕನಿಷ್ಠ 40 ಭಾರತೀಯರು ಸೇರಿದಂತೆ ಸುಮಾರು 49 ಮಂದಿ ಸಾವನ್ನಪ್ಪಿದ್ದಾರೆ ಮತ್ತು 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ನಸುಕಿನಲ್ಲಿ ಬೆಂಕಿ ಕಾಣಿಸಿಕೊಂಡಾಗ ನಿವಾಸಿಗಳು ಮಲಗಿದ್ದ ಕಾರಣ ಹೊಗೆಯಿಂದ ಉಸಿರುಗಟ್ಟಿ ಹೆಚ್ಚಿನ ಸಾವುಗಳು ಸಂಭವಿಸಿವೆ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುವೈತ್‌ನ ದಕ್ಷಿಣ ಅಹ್ಮದಿ ಗವರ್ನರೇಟ್‌ನ ಮಂಗಾಫ್ ಪ್ರದೇಶದಲ್ಲಿ ಕಟ್ಟಡದ ಕೆಳ ಮಹಡಿಯಲ್ಲಿನ ಅಡುಗೆಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅರಬ್ ಟೈಮ್ಸ್ ಪ್ರಕಾರ, ಮೃತರಲ್ಲಿ ಹೆಚ್ಚಿನವರು ಕೇರಳ, ತಮಿಳುನಾಡು ಮತ್ತು ಉತ್ತರ ಭಾರತದ ರಾಜ್ಯಗಳವರು, ಅವರ ವಯಸ್ಸು 20 ರಿಂದ 50 ವರ್ಷಗಳು.
ತಲಾ 2 ಲಕ್ಷ ರೂ ಪರಿಹಾರ: ಮೃತರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತಲಾ 2 ಲಕ್ಷ ರೂಪಾಯಿಗಳ ಎಕ್ಸ್‌ ಗ್ರಾಷಿಯಾ ಪರಿಹಾರ ಘೋಷಿಸಿದ್ದಾರೆ. ಪ್ರಧಾನಿಯವರ ಸೂಚನೆ ಮೇರೆಗೆ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್‌ ಸಿಂಗ್‌ ಅವರು ತುರ್ತಾಗಿ ಕುವೈತಿಗೆ ಪಯಣಿಸಿದ್ದಾರೆ.  
ಕುವೈತ್‌ನ ಉಪ ಪ್ರಧಾನ ಮಂತ್ರಿ ಹಾಗೂ ಆಂತರಿಕ ಸಚಿವ ಶೇಖ್ ಫಹಾದ್ ಅಲ್-ಯೂಸುಫ್ ಅಲ್-ಸಬಾಹ್ ಅವರು ಅಗ್ನಿ ದುರಂತವು "ಕಂಪೆನಿ ಮತ್ತು ಕಟ್ಟಡ ಮಾಲೀಕರ ದುರಾಸೆಯ ಪರಿಣಾಮವಾಗಿದೆ" ಎಂದು ಹೇಳಿದ್ದಾರೆ.
ಕಟ್ಟಡವನ್ನು ಎನ್‌ಬಿಟಿಸಿ ಗ್ರೂಪ್ ಬಾಡಿಗೆಗೆ ಪಡೆದಿದ್ದು, ಮಲಯಾಳಿ ಉದ್ಯಮಿ ಕೆ.ಜಿ.ಅಬ್ರಹಾಂ ಒಡೆತನದಲ್ಲಿದೆ. ಗಲ್ಫ್‌ನಲ್ಲಿ ಕಡಿಮೆ ಸಂಬಳದ, ನೀಲಿ ಕಾಲರ್ ಕೆಲಸಗಾರರು ಹೆಚ್ಚಾಗಿ ಕಿಕ್ಕಿರಿದ ವಸತಿಗಳಲ್ಲಿ ವಾಸಿಸುತ್ತಾರೆ.
ಅಗ್ನಿ ದುರಂತ ಸಂಭವಿಸಿದ ಕಟ್ಟಡದ ಹೊರಗೆ ಕುವೈಟ್ ಅಗ್ನಿಶಾಮಕ ಸಿಬ್ಬಂದಿ ಮತ್ತು ಆಂಬ್ಯುಲೆನ್ಸ್‌ಗಳು ಜಮಾಯಿಸಿವೆ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿವೆ.
ಪರಿಸ್ಥಿತಿ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಹಿರಿಯ ಅಧಿಕಾರಿಗಳ ತುರ್ತು ಸಭೆ ನಡೆಸಿದರು. ಸಭೆಯ ನಂತರ ಶೀಘ್ರದಲ್ಲೇ ಕುವೈತ್‌ಗೆ ತೆರಳುವುದಾಗಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ (MoS) ಕೀರ್ತಿ ವರ್ಧನ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.

Monday, June 10, 2024

ಪ್ರಧಾನಿ ಮೋದಿ 3.0 ಸರ್ಕಾರ: ಯಾರಿಗೆ ಏನು ಖಾತೆ?

 ಪ್ರಧಾನಿ ಮೋದಿ 3.0 ಸರ್ಕಾರ: ಯಾರಿಗೆ ಏನು ಖಾತೆ?

ವದೆಹಲಿ:  ಐತಿಹಾಸಿಕ ಮೂರನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ ಒಂದು ದಿನದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು 2024 ಜೂನ್‌ 10ರ ಸೋಮವಾರ ತಮ್ಮ 71 ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದರು.

ಹೊಸ ಕೇಂದ್ರ ಸಚಿವ ಸಂಪುಟವು ಸಂಜೆ ಪ್ರಧಾನಿ ನಿವಾಸದಲ್ಲಿ ತನ್ನ ಮೊದಲ ಸಭೆಯನ್ನು ನಡೆಸಿತು. ಆ ಬಳಿಕ ಪೂರ್ಣ ಪ್ರಮಾಣದ ಖಾತೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು.

ಸಚಿವರ ಖಾತೆಗಳ ವಿವರಗಳು ಹೀಗಿವೆ:
ಸಂಪುಟ ದರ್ಜೆ ಸಚಿವರು

1. ಪ್ರಧಾನಿ ನರೇಂದ್ರ ಮೋದಿ - ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ; ಅಣು ಶಕ್ತಿ ಇಲಾಖೆ; ಬಾಹ್ಯಾಕಾಶ ಇಲಾಖೆ; ಪ್ರಮುಖ ನೀತಿ ನಿರೂಪಣೆ ಮತ್ತು ಹಂಚಿಕೆಯಾಗದ ಎಲ್ಲ ಖಾತೆಗಳು.

2. ರಾಜನಾಥ್ ಸಿಂಗ್ - ರಕ್ಷಣೆ

3. ಅಮಿತ್ ಶಾ - ಗೃಹ ವ್ಯವಹಾರಗಳು ಹಾಗೂ ಸಹಕಾರ

4. ನಿತಿನ್ ಗಡ್ಕರಿ - ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು: ರಾಸಾಯನಿಕಗಳು ಮತ್ತು ರಸಗೊಬ್ಬರಗಳು

5. ಜೆಪಿ ನಡ್ಡಾ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ

6. ಶಿವರಾಜ್ ಸಿಂಗ್ ಚೌಹಾಣ್ - ಕೃಷಿ ಮತ್ತು ರೈತರ ಕಲ್ಯಾಣ; ಗ್ರಾಮೀಣಾಭಿವೃದ್ಧಿ

7. ನಿರ್ಮಲಾ ಸೀತಾರಾಮನ್ - ಹಣಕಾಸು; ಕಾರ್ಪೊರೇಟ್ ವ್ಯವಹಾರಗಳು

8. ಸುಬ್ರಹ್ಮಣ್ಯಂ ಜೈಶಂಕರ್ - ವಿದೇಶಾಂಗ ವ್ಯವಹಾರ

9. ಮನೋಹರ್ ಲಾಲ್ ಖಟ್ಟರ್ - ವಸತಿ ಮತ್ತು ನಗರ ವ್ಯವಹಾರಗಳು, ಇಂಧನ

10. ಜೆಡಿ (ಎಸ್)‌ ನಾಯಕ ಎಚ್‌ಡಿ ಕುಮಾರಸ್ವಾಮಿ - ಭಾರೀ ಕೈಗಾರಿಕೆ; ಕ್ಕು

11. ಪಿಯೂಷ್ ಗೋಯಲ್ - ವಾಣಿಜ್ಯ ಮತ್ತು ಕೈಗಾರಿಕೆ

12. ಧರ್ಮೇಂದ್ರ ಪ್ರಧಾನ್ - ಶಿಕ್ಷಣ

13. HAM ನಾಯಕ ಜಿತನ್ ರಾಮ್ ಮಾಂಝಿ - ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು

14. JD(U) ನಾಯಕ ಲಾಲನ್ ಸಿಂಗ್ (ರಾಜೀವ ರಂಜನ್‌ ಸಿಂಗ್)- ಪಂಚಾಯತ್ ರಾಜ್‌; ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ

15. ಸರ್ಬಾನಂದ ಸೋನೊವಾಲ್ - ಬಂದರುಗಳು, ಹಡಗು ಮತ್ತು ಜಲಮಾರ್ಗಗಳು

16. ವೀರೇಂದ್ರ ಕುಮಾರ್ - ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ

17. ಟಿಡಿಪಿ ನಾಯಕ ಕಿಂಜರಾಪು ರಾಮ್ ಮೋಹನ್ ನಾಯ್ಡು - ನಾಗರಿಕ ವಿಮಾನಯಾನ

18. ಪ್ರಹ್ಲಾದ್ ಜೋಶಿ - ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ; ಹೊಸ ಮತ್ತು ನವೀಕರಿಸಬಹುದಾದ ಇಂಧನ

19. ಜುಯಲ್ ಓರಮ್ - ಬುಡಕಟ್ಟು ವ್ಯವಹಾರಗಳು

20. ಗಿರಿರಾಜ್ ಸಿಂಗ್ - ಜವಳಿ

21. ಅಶ್ವಿನಿ ವೈಷ್ಣವ್ - ರೈಲ್ವೆ; ಮಾಹಿತಿ ಮತ್ತು ಪ್ರಸಾರ; ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ

22. ಜ್ಯೋತಿರಾದಿತ್ಯ ಸಿಂಧಿಯಾ - ಸಂವಹನ; ಈಶಾನ್ಯ ಪ್ರದೇಶದ ಅಭಿವೃದ್ಧಿ

23. ಭೂಪೇಂದ್ರ ಯಾದವ್ - ಪರಿಸರ ಮತ್ತು ಅರಣ್ಯ

24. ಗಜೇಂದ್ರ ಸಿಂಗ್ ಶೇಖಾವತ್ – ಪ್ರವಾಸೋದ್ಯಮ; ಸಂಸ್ಕೃತಿ

25. ಅನ್ನಪೂರ್ಣ ದೇವಿ - ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ

26. ಕಿರಣ್ ರಿಜಿಜು - ಸಂಸದೀಯ ವ್ಯವಹಾರಗಳು; ಅಲ್ಪಸಂಖ್ಯಾತ ವ್ಯವಹಾರಗಳು

27. ಹರ್ದೀಪ್ ಸಿಂಗ್ ಪುರಿ - ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ

28. ಮನ್ಸುಖ್ ಮಾಂಡವಿಯಾ - ಕಾರ್ಮಿಕ ಮತ್ತು ಉದ್ಯೋಗ; ಯುವ ವ್ಯವಹಾರಗಳು ಮತ್ತು ಕ್ರೀಡೆ

29. ಜಿ ಕಿಶನ್ ರೆಡ್ಡಿ – ಕಲ್ಲಿದ್ದಲು; ಗಣಿ

30. LJP(RV) ಚಿರಾಗ್ ಪಾಸ್ವಾನ್ - ಆಹಾರ ಸಂಸ್ಕರಣಾ ಕೈಗಾರಿಕೆಗಳು

31. ಸಿ ಆರ್ ಪಾಟೀಲ್ - ಜಲ ಸಂಪನ್ಮೂಲ

 ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ)

1. ರಾವ್ ಇಂದರ್‌ಜಿತ್ ಸಿಂಗ್ - ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ; ಯೋಜನೆ; ಸಂಸ್ಕೃತಿ

2. ಜಿತೇಂದ್ರ ಸಿಂಗ್ - ವಿಜ್ಞಾನ ಮತ್ತು ತಂತ್ರಜ್ಞಾನ; ಭೂ ವಿಜ್ಞಾನ; ಪ್ರಧಾನ ಮಂತ್ರಿ ಕಚೇರಿಯಲ್ಲಿ ರಾಜ್ಯ ಸಚಿವ; ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯದ ರಾಜ್ಯ ಸಚಿವ; ಪರಮಾಣು ಶಕ್ತಿ ಇಲಾಖೆಯಲ್ಲಿ ರಾಜ್ಯ ಸಚಿವ; ಬಾಹ್ಯಾಕಾಶ ಇಲಾಖೆಯಲ್ಲಿ ರಾಜ್ಯ ಸಚಿವ

3. ಅರ್ಜುನ್ ರಾಮ್ ಮೇಘವಾಲ್ - ಕಾನೂನು ಮತ್ತು ನ್ಯಾಯ; ಸಂಸದೀಯ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ

4. ಪ್ರತಾಪ ರಾವ್ ಗಣಪತ್‌ ರಾವ್‌ ಜಾಧವ್ - ಆಯುಷ್ ಸಚಿವಾಲಯ; ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವ

5. RLD ಮುಖ್ಯಸ್ಥ ಜಯಂತ್ ಚೌಧರಿ - ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯ; ಶಿಕ್ಷಣ ಸಚಿವಾಲಯದ ರಾಜ್ಯ ಸಚಿವ

 ರಾಜ್ಯ ಸಚಿವರು (ಸಹಾಯಕ ಸಚಿವರು)

1. ಜಿತಿನ್ ಪ್ರಸಾದ - ವಾಣಿಜ್ಯ ಮತ್ತು ಕೈಗಾರಿಕೆ;  ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ.

2. ಶ್ರೀಪಾದ್ ಯೆಸ್ಸೋ ನಾಯಕ್ – ವಿದ್ಯುತ್; ಹೊಸ ಮತ್ತು ನವೀಕರಿಸಬಹುದಾದ ಇಂಧನ

3. ಪಂಕಜ್ ಚೌಧರಿ - ಹಣಕಾಸು

4. ಕ್ರಿಶನ್ ಪಾಲ್ -  ಸಹಕಾರ

5. RPI(A) ನಾಯಕ ಅಠವಳೆ ರಾಮದಾಸ್ ಬಂಡು -  ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ

6. ರಾಮ್ ನಾಥ್ ಠಾಕೂರ್ - ಕೃಷಿ ಮತ್ತು ರೈತರ ಕಲ್ಯಾಣ

7. ನಿತ್ಯಾನಂದ ರೈ - ಗೃಹ ವ್ಯವಹಾರ

8. ಅನುಪ್ರಿಯಾ ಸಿಂಗ್ ಪಟೇಲ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ; ರಾಸಾಯನಿಕಗಳು ಮತ್ತು ರಸಗೊಬ್ಬರ

9. ವಿ ಸೋಮಣ್ಣ - ಜಲ ಸಂಪನ್ಮೂಲ; ರೈಲ್ವೆ

10. ಟಿಡಿಪಿ ಸಂಸದ ಚಂದ್ರಶೇಖರ್ ಪೆಮ್ಮಸಾನಿ – ಗ್ರಾಮೀಣಾಭಿವೃದ್ಧಿ; ಸಂವಹನ

11. S. P. ಸಿಂಗ್ ಬಘೇಲ್ - ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ;  ಪಂಚಾಯತ್ ರಾಜ್

12. ಶೋಭಾ ಕರಂದ್ಲಾಜೆ - ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ; ಕಾರ್ಮಿಕ ಮತ್ತು ಉದ್ಯೋಗ

13. ಕೀರ್ತಿ ವರ್ಧನ್ ಸಿಂಗ್ - ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ; ವಿದೇಶಾಂಗ ವ್ಯವಹಾರಗಳು

14. ಬಿಎಲ್ ವರ್ಮಾ - ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ; ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ

15. ಶಂತನು ಠಾಕೂರ್ - ಬಂದರು, ಹಡಗು ಮತ್ತು ಜಲಮಾರ್ಗ

16. ಸುರೇಶ್ ಗೋಪಿ - ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ; ಪ್ರವಾಸೋದ್ಯಮ

17. L. ಮುರುಗನ್ - ಮಾಹಿತಿ ಮತ್ತು ಪ್ರಸಾರ; ಸಂಸದೀಯ ವ್ಯವಹಾರ

18. ಅಜಯ್ ತಮ್ತಾ - ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು

19. ಬಂಡಿ ಸಂಜಯ್ ಕುಮಾರ್ - ಗೃಹ ವ್ಯವಹಾರ

20. ಕಮಲೇಶ್ ಪಾಸ್ವಾನ್ - ಗ್ರಾಮೀಣಾಭಿವೃದ್ಧಿ

21. ಭಗೀರಥ ಚೌಧರಿ - ಕೃಷಿ ಮತ್ತು ರೈತರ ಕಲ್ಯಾಣ.

22. ಸತೀಶ್ ಚಂದ್ರ ದುಬೆ – ಕಲ್ಲಿದ್ದಲು; ಗಣಿ

23. ಸಂಜಯ್ ಸೇಠ್ - ರಕ್ಷಣೆ

24. ರವನೀತ್ ಸಿಂಗ್ ಬಿಟ್ಟು - ಆಹಾರ ಸಂಸ್ಕರಣಾ ಉದ್ಯಮ; ರೈಲ್ವೆ

25. ದುರ್ಗಾ ದಾಸ್ ಯುಕೆ - ಬುಡಕಟ್ಟು ವ್ಯವಹಾರ

26. ರಕ್ಷಾ ನಿಖಿಲ್ ಖಡ್ಸೆ - ಯುವ ವ್ಯವಹಾರಗಳು ಮತ್ತು ಕ್ರೀಡೆ

27. ಸುಕಾಂತ ಮಜುಂದಾರ್ – ಶಿಕ್ಷಣ; ಈಶಾನ್ಯ ಪ್ರದೇಶದ ಅಭಿವೃದ್ಧಿ.

28. ಸಾವಿತ್ರಿ ಠಾಕೂರ್ - ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ.

29. ತೋಖಾನ್ ಸಾಹು - ವಸತಿ ಮತ್ತು ನಗರ ವ್ಯವಹಾರ

30. ರಾಜ್ ಭೂಷಣ್ ಚೌಧರಿ - ಜಲ ಸಂಪನ್ಮೂಲ

31. ಭೂಪತಿ ರಾಜು ಶ್ರೀನಿವಾಸ ವರ್ಮ - ಭಾರೀ ಕೈಗಾರಿಕೆ; ಕ್ಕು

32. ಹರ್ಷ್ ಮಲ್ಹೋತ್ರಾ - ರಸ್ತೆ ಸಾರಿಗೆ ಮತ್ತು ಹೆದ್ದಾರಿ; ಕಾರ್ಪೊರೇಟ್ ವ್ಯವಹಾರಗಳು

33. ನಿಮುಬೆನ್ ಬಂಭಾನಿಯಾ - ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ

34. ಮುರಳೀಧರ್ ಮೊಹೋಲ್ - ಸಹಕಾರ ಸಚಿವಾಲಯ; ನಾಗರಿಕ ವಿಮಾನಯಾನ

35. ಜಾರ್ಜ್ ಕುರಿಯನ್ - ಅಲ್ಪಸಂಖ್ಯಾತ ವ್ಯವಹಾರಗಳು; ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ 36. ಪಬಿತ್ರಾ ಮಾರ್ಗರಿಟಾ - ವಿದೇಶಾಂಗ ವ್ಯವಹಾರ; ಜವಳಿ.

ಇವುಗಳನ್ನೂ ಓದಿ:

ಮೂರನೇ ಅವಧಿ: ಪ್ರಧಾನಿ ಮೋದಿ ಮೊದಲ ಕೆಲಸ ಯಾವುದು?
ನರೇಂದ್ರ ದಾಮೋದರದಾಸ್‌ ಮೋದಿ 3.0 ಯುಗಾರಂಭ
ಮೋದಿ 3.0 ಯುಗ: 5 ವರ್ಷಗಳ ಕಾರ್ಯಸೂಚಿ ಸಿದ್ಧ
ಮೋದಿ 3.0 ಆಡಳಿತ ಆರಂಭ: ನೆರೆ ರಾಷ್ಟ್ರಗಳಿಂದ ಯಾರು ಬರ್ತಿದ್ದಾರೆ?
ದೆಹಲಿ ಹಾರಾಟ ನಿಷೇಧ ವಲಯ, ಜೂನ್‌ 9ಕ್ಕೆ ಮೋದಿ ಪ್ರಮಾಣ
ಮೋದಿಗೆ ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಲಿಖಿತ ಬೆಂಬಲ
ಪ್ರಧಾನಿ ಮೋದಿ ರಾಜೀನಾಮೆ, ಶನಿವಾರ ಪ್ರಮಾಣ ವಚನ?
ಇವರೆಲ್ಲ ಭಾರತದ ಈವರೆಗಿನ ಪ್ರಧಾನಿಗಳು, ಮುಂದಿನ ಪ್ರಧಾನಿ …… ?
ಕನ್ಯಾಕುಮಾರಿಯ ಧ್ಯಾನ: ಪ್ರಧಾನಿ ಮೋದಿ ಹೊಸ ಸಂಕಲ್ಪಗಳು
ಅರುಣಾಚಲ ಪ್ರದೇಶ: ಬಿಜೆಪಿ ಹ್ಯಾಟ್ರಿಕ್, ಸಿಕ್ಕಿಂನಲ್ಲಿ ಎಸ್‌ಕೆಎಂ ಜಯಭೇರಿ


Advertisement