Showing posts with label Human caliculator. Show all posts
Showing posts with label Human caliculator. Show all posts

Tuesday, August 25, 2020

ಭಾರತೀಯನಿಗೆ ವಿಶ್ವ ದ ಅತಿ ವೇಗದ ಮಾನವ ಕ್ಯಾಲ್ಕುಲೇಟರ್ ಪ್ರ ಶಸ್ತಿ

 ಭಾರತೀಯನಿಗೆ ವಿಶ್ವ ಅತಿ ವೇಗದ
ಮಾನವ ಕ್ಯಾಲ್ಕುಲೇಟರ್ ಪ್ರ ಶಸ್ತಿ


ನವದೆಹಲಿ: ಮಾನವ ಕಂಪ್ಯೂಟರ್ ಎಂದು ಖ್ಯಾತರಾಗಿದ್ದ ಕರ್ನಾಟಕದ ಶಕುಂತಲಾ ದೇವಿ ಅವರ ಪ್ರತಿಭೆಗೆ ಸಮನಾದ ಮತ್ತೊಬ್ಬ ಬುದ್ದಿ ವಂತ ಯುವಕ ದೇಶದಲ್ಲಿ ಉದಯವಾಗಿದ್ದಾನೆ. ಕೆಲ ದಿನಗಳ ಹಿಂದೆ ಲಂಡನ್ನಲ್ಲಿ ಮೈಂಡ್ ಸ್ಪೋರ್ಟ್ಸ್ ಒಲಿಂಪಿಯಾಡ್ (ಎಂಎಸ್)ನಲ್ಲಿ ನಡೆದಿದ್ದ ಮೆಂಟಲ್ ಕೌಂಟ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಮೊದಲ ಚಿನ್ನ ಗೆಲಿಸಿಕೊಟ್ಟಿದ್ದ ಹೈದರಾಬಾದಿನ ನೀಲಕಂಠ ಭಾನುಪ್ರಕಾಶ (೨೦) ವಿಶ್ವದ ಅತಿ ವೇಗದ ಮಾನವ ಕ್ಯಾಲ್ಕುಲೇಟರ್ ಆಗಿ ಹೊರಹೊಮ್ಮಿದ್ದಾರೆ.

ದೆಹಲಿ ವಿಶ್ವವಿದ್ಯಾನಿಲಯದ ಸೇಂಟ್ ಸ್ಟೀಫನ್ಸ್ ಕಾಲೇಜಿನ ಗಣಿತ ವಿದ್ಯಾರ್ಥಿ ನೀಲ ಕಂಠ ಭಾನುಪ್ರಕಾಶ ಅವರು ವಿಶ್ವ ದಾಖಲೆಯೊಂದಿಗೆ ವಿಶ್ವದ ಅತಿ ವೇಗದ ಮಾನವ ಕ್ಯಾಲ್ಕುಲೇಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಭಾರತವನ್ನು ಜಾಗತಿಕ ಮಟ್ಟದಲ್ಲಿ ಗಣಿತ ದಲ್ಲಿ ಮುಂಚೂಣಿಯಲ್ಲಿರಿಸಲು ನಾನು ನನ್ನ ಕೈಲಾದಷ್ಟು ಪ್ರಯತ್ನ ಮಾಡಿದ್ದೇನೆ ಎಂದು ಭಾನು ಪ್ರಕಾಶ ತಿಳಿಸಿದರು.  ವಿಶ್ವದ ಅತಿ ವೇಗದ ಮಾನವ ಕ್ಯಾಲ್ಕುಲೇಟರ್ ಎಂದು ಖ್ಯಾತರಾಗಿರುವ ಅವರು ವಿಶ್ವ ದಾಖಲೆ ಮತ್ತು ೫೦ ಲಿಮ್ಕಾ ದಾಖಲೆ ಹೊಂದಿದ್ದಾರೆ.

ಭಾನುಪ್ರಕಾಶ  ಅವರ ಮೆದುಳು ಕ್ಯಾಲ್ಕು ಲೇಟರ್ ವೇಗಕ್ಕಿಂತ ವೇಗವಾಗಿ ಲೆಕ್ಕಾಚಾರ ಮಾಡುತ್ತದೆ. ದಾಖಲೆಗಳನ್ನು ಮುರಿಯುವ ಶಕ್ತಿ ಮಾನವ ಕಂಪ್ಯೂಟರ್ ಎಂದೇ ಖ್ಯಾತ ವಾದ ಶಕುಂತಲಾ ದೇವಿ ಅವರ ಬಳಿ ಇದ್ದಿತು. ಯುಕೆ, ಜರ್ಮನಿ, ಯುಎಇ, ಫ್ರಾನ್ಸ್ ಗ್ರೀಸ್ ಮತ್ತು ಲೆಬನಾನ್ ಸೇರಿದಂತೆ ೧೩ ದೇಶಗಳಿಂದ ೫೭ ಸ್ಪರ್ಧಿಗಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ಭಾನುಪ್ರಕಾಶ ಗೆಲುವು ಸಾಧಿಸಿದರು..

೧೯೯೮
ರಲ್ಲಿ ಸ್ಪರ್ಧೆ ಮೊದಲ ಬಾರಿಗೆ ಆಯೋಜಿಸಲ್ಪಟ್ಟಿತ್ತು. ಯಾವುದೇ ದೇಶವು ಜಾಗತಿಕವಾಗಿ ಬೆಳೆಯಲು ಮತ್ತು ಅಭಿವೃದ್ಧಿ ಹೊಂದಲು, ಸಾಕ್ಷರತೆಯು ಕೌಶಲ್ಯದಷ್ಟೇ ಸಂಖ್ಯಾಶಾಸ್ತ್ರವೂ ಮುಖ್ಯ ವಾಗಿದೆ. ಸರ್ಕಾರದ ಪಟ್ಟಿಮಾಡಿದ ಗುರಿಗಳ ಅಡಿ ಹೆಚ್ಚುತ್ತಿರುವ ಸಾಕ್ಷರತೆಗೆ ಒತ್ತು ನೀಡುವ ಹಲವಾರು ಕಾರ್ಯಕ್ರಮಗಳಿವೆ, ಆದರೆ ಇಲ್ಲಿಯವರೆಗೆ ಯಾವುದೇ ಮಹತ್ವದ ಕಾರ್ಯಕ್ರಮಗಳು ಕಾರ್ಯರೂಪಕ್ಕೆ ಬಂದಿಲ್ಲ. ಗಣಿತದ ಸಾಮರ್ಥ್ಯ ಮತ್ತು ಸಂಖ್ಯಾಶಾಸ್ತ್ರದ ಪ್ರಚಾರ ಹೆಚ್ಚಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ನಮ್ಮನ್ನು ಮುಂದಿರಿಸಬಹುದು. ಪ್ರಧಾನಿ ನರೇಂದ್ರ ಮೋದಿ ಅವರು ಬಗ್ಗೆ ನಿರ್ಧರಿಸಬೇಕು ಎಂದು ಭಾನು ಪ್ರಕಾಶ ಕೋರಿದ್ದಾರೆ.

Advertisement