Showing posts with label Janata Curfew. Show all posts
Showing posts with label Janata Curfew. Show all posts

Tuesday, March 31, 2020

ವಿಶ್ವಾದ್ಯಂತ ಒಂದೇ ದಿನ1 ಲಕ್ಷ ಹೊಸಬರಿಗೆ ಸೋಂಕು ಜಾಗತಿಕ ಸಾವಿನ ಸಂಖ್ಯೆ 39,074, ಸೋಂಕು 8,04,073

ವಿಶ್ವಾದ್ಯಂತ ಒಂದೇ ದಿನ1 ಲಕ್ಷ ಹೊಸಬರಿಗೆ ಸೋಂಕು
ಜಾಗತಿಕ ಸಾವಿನ ಸಂಖ್ಯೆ 39,074, ಸೋಂಕು 8,04,073
ಭಾರತ: 2000 ಸೋಂಕು ಪ್ರಕರಣ, ಒಟ್ಟು ಸಾವು 35
ನವದೆಹಲಿ: ವಿಶ್ವಾದ್ಯಂತ ಕೊರೋನಾವೈರಸ್ ಸಾಂಕ್ರಾಮಿಕ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ 2020 ಮಾರ್ಚ್ 31ರ ಮಂಗಳವಾರ  ಒಂದೇ ದಿನದಲ್ಲಿ ಒಂದು ಲಕ್ಷಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿದ್ದು ಜಾಗತಿಕ ಸೋಂಕಿತರ ಸಂಖ್ಯೆ ,೦೪,೦೭೩ಕ್ಕೆ ಏರಿದೆ. ಸೋಂಕಿಗೆ ಬಲಿಯಾದವರ ಸಂಖ್ಯೆ ಜಗತ್ತಿನಲ್ಲಿ ೩೯,೦೭೪ಕ್ಕೆ ಏರಿತು.
ಭಾರತದಲ್ಲಿ ಒಂದೇ ದಿನದಲ್ಲಿ 146  ಮಂದಿ ಕೊರೋನಾವೈರಸ್ ಪಾಸಿಟಿವ್ ವರದಿ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆಯನ್ನು 2000ಕ್ಕೆ ಏರಿಸಿದೆ. ಒಟ್ಟು ಸಾವಿನ ಸಂಖ್ಯೆ 35ಕ್ಕೆ ಏರಿತು.
ಯುರೋಪಿನಲ್ಲಿ ಶೀಘ್ರವೇ ಪರಿಸ್ಥಿತಿ ಸ್ಥಿರಗೊಳ್ಳಲು ಆರಂಭವಾಗಲಿದೆ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯೂ ಎಚ್ ) ಹೇಳಿದ್ದರೂ, ಕೊರೋನಾವೈರಸ್ ಸೋಂಕಿನಲ್ಲಿ ಅಮೆರಿಕ ಮತ್ತು ಇಟಲಿಯ ಬಳಿಕ ಚೀನಾವನ್ನು ಮೀರಿಸಿದ ಮೂರನೇ ರಾಷ್ಟ್ರದ ಸ್ಥಾನಕ್ಕೆ ಸ್ಪೇನ್ ಏರಿತು.
ಅಮೆರಿಕದಲ್ಲಿ ವರ್ಜಿನಿಯಾ, ಮೇರಿಲ್ಯಾಂಡ್ ರಾಜ್ಯಗಳಲ್ಲಿ ತುರ್ತುಪರಿಸ್ಥಿತಿ ಜಾರಿಗೊಳಿಸಿ ಜನರಿಗೆ ಮನೆಗಳ ಒಳಗೇ ಇರುವಂತೆ ಆಜ್ಞಾಪಿಸಲಾಯಿತು. ಬೆನ್ನಲ್ಲೇ ವಾಷಿಂಗ್ಟನ್ ನಗರದಲ್ಲೂ ತುರ್ತು ಪರಿಸ್ಥಿತಿ ಜಾರಿಗೊಳಿಸಲಾಯಿತು. ಒಂದು ಮಿಲಿಯ (೧೦ ಲಕ್ಷ) ಅಮೆರಿಕನ್ನರನ್ನು ಕೊರೋನಾವೈರಸ್ ಸೋಂಕು ಪತ್ತೆ ಸಲುವಾಗಿ ಪರೀಕ್ಷಿಸಲಾಗುತ್ತಿದ್ದು ಇದೊಂದು ಮೈಲಿಗಲ್ಲು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿದರು.

ನಿಜಾಮುದ್ದೀನ್: ೪೪೧ ಮಂದಿಗೆ ರೋಗಲಕ್ಷಣ:
ಭಾರತದಲ್ಲಿ ದೆಹಲಿಯ ನಿಜಾಮುದ್ದೀನ್ ಪ್ರದೇಶದ ಮರ್ಕಜ್ ಮಸೀದಿಯಿಂದ ತಬ್ಲಿಘಿ ಸಮಾವೇಶದಲ್ಲಿ ಪಾಲ್ಗೊಂಡಿದ್ದ ೧೫೦೦ ಮಂದಿಯನ್ನು ಮಂಗಳವಾರ ಸ್ಥಳಾಂತರಗೊಳಿಸಲಾಗಿದ್ದು ಅವರ ಪೈಕಿ ೨೪ ಜನರು, ೪೧ ಮಂದಿ ವಿದೇಶೀ ಯಾತ್ರಿಕರು ಮತ್ತು ೨೨ ಮಂದಿ ವಿದೇಶೀ ಯಾತ್ರಿಕರ ನಿಕಟ ಬಂಧುಗಳು ಸೇರಿದಂತೆ ೯೭ ಪ್ರಕರಣಗಳನ್ನು ವಿಶ್ಲೇಷಿಸಲಾಗಿದ್ದು ಪರಿಸ್ಥಿತಿ ನಿಯಂತ್ರಣದಲ್ಲಿದೆ, ಯಾವುದೇ ಸಮುದಾಯ ವರ್ಗಾವಣೆ ಕಂಡು ಬಂದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದರು.

ಕೊರೋನಾವೈರಸ್ ವಿರುದ್ಧದ  ನಮ್ಮ ಸಾಮೂಹಿಕ ಹೋರಾಟದಲ್ಲಿ ಸರ್ಕಾರವನ್ನು ಬೆಂಬಲಿಸುವಂತೆ ಜನರಿಗೆ ಮನವಿ ಮಾಡಿದ ಅವರು ಧಾರ್ಮಿಕ ನಾಯಕರು ಸಾಮೂಹಿಕ ಸಮಾವೇಶಗಳನ್ನು ಸಂಘಟಿಸುವುದರಿಂದ ದೂರ ಉಳಿಯಬೇಕು ಎಂದು ಆಗ್ರಹಿಸಿದರು.

ನವರಾತ್ರಿ (ಹಿಂದೂ ಉತ್ಸವ) ನಡೆಯುತ್ತಿದೆ, ಆದರೆ ಯಾರೂ ದೇವಾಲಯದಲ್ಲಿ ಇಲ್ಲ, ಗುರುದ್ವಾರಗಳು ಖಾಲಿ ಖಾಲಿಯಾಗಿವೆ. ಮೆಕ್ಕಾ ಖಾಲಿಯಾಗಿದೆ, ವೆಟಿಕನ್ ನಗರ ಖಾಲಿಯಾಗಿದೆ. ರೋಗವು ಮುಂದುವರೆದ ರಾಷ್ಟ್ರಗಳನ್ನು ಕೂಡಾ ಬಿಟ್ಟಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವು ಬೇಜವಾಬ್ದಾರಿಯುತವಾಗಿ ವರ್ತಿಸಿದರೆ, ನಾವು ಸಮಸ್ಯೆಗಳನ್ನು ಆಹ್ವಾನಿಸಿಕೊಳ್ಳುತ್ತೇವೆ ಎಂದು ಕೇಜ್ರಿವಾಲ್ ಹೇಳಿದರು.

ನಿಜಾಮುದ್ದೀನ್ ಮಸೀದಿ ಪ್ರಕರಣದ ಬಗ್ಗೆ ವಿವರಗಳನ್ನು ನೀಡಿದ ಮುಖ್ಯಮಂತ್ರಿ ಒಟ್ಟು ,೫೪೮ ಜನರನ್ನು ಮರ್ಕಜ್ ಕಟ್ಟಡದಿಂದ ಹೊರತರಲಾಗಿದ್ದು ಅವರ ಪೈಕಿ ೪೪೧ ಜನರಲ್ಲಿ ರೋಗ ಲಕ್ಷಣಗಳು ಕಂಡು ಬಂದಿವೆ ಎಂದು ಹೇಳಿದರು.

ನಾವು ಅವರನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸಿದ್ದು ಅವರನ್ನು ಪರೀಕ್ಷೆಗಳಿಗೆ ಒಳಪಡಿಸಲಾಗಿದೆ. ರೋಗಲಕ್ಷಣಗಳು ಕಂಡು ಬರದ ,೧೦೭ ಮಂದಿಯನ್ನು ಏಕಾಂತವಾಸಕ್ಕೆ (ಕ್ವಾರಂಟೈನ್) ಕಳುಹಿಸಲಾಗಿದೆ ಎಂದು ಅವರು ನುಡಿದರು.

ತಬ್ಲಿಘಿ ಜಮಾತ್: ಪ್ರಕರಣ ದಾಖಲು
ದಕ್ಷಿಣ ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ಧಾರ್ಮಿಕ ಸಮಾವೇಶವನ್ನು ಸಂಘಟಿಸಿದ್ದಕ್ಕಾಗಿ ತಬ್ಲಿಘಿ ಜಮಾತ್‌ನ ಮೌಲಾನಾ ಸಾದ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸ್ ಕಮೀಷನರ್ ಮಂಗಳವಾರ ರಾತ್ರಿ ಪ್ರಕಟಿಸಿದರು.

ಸರ್ಕಾರದ ನಿರ್ದೇಶನಗಳನ್ನು ಉಲ್ಲಂಘಿಸಿದ್ದಕ್ಕಾಗಿ ೧೮೯೭ರ ಸಾಂಕ್ರಾಮಿಕ ರೋಗಗಳ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಇತರ ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು.

ಬಸ್ತಿ ನಿಜಾಮುದ್ದೀನ್ನ ಮರ್ಕಜ್ ನಿರ್ವಹಣೆಯಲ್ಲಿ ಸರ್ಕಾರ ನೀಡಿದ್ದ ನಿರ್ದೇಶನಗಳನ್ನು ಉಲ್ಲಂಘಿಸಲಾಗಿದೆ ಎಂದು ಅವರು ನುಡಿದರು. ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸುಮಾರು ೧೫೦೦ ಜನರ ಪೈಕಿ ೪೪೧ ಮಂದಿಯಲ್ಲಿ ಕೊರೋನಾವೈರಸ್ ರೋಗ ಲಕ್ಷಣಗಳು ಕಂಡು ಬಂದಿವೆ ಎಂದು ಅವರು ನುಡಿದರು.

ಕೊರೋನಾ ಸೋಂಕು ಪ್ರಸಾರ ಕೇಂದ್ರವಾದ ದೆಹಲಿ ನಿಜಾಮುದ್ದೀನ್ ಮಸೀದಿ

ಕೊರೋನಾ ಸೋಂಕು ಪ್ರಸಾರ ಕೇಂದ್ರವಾದ ದೆಹಲಿ ನಿಜಾಮುದ್ದೀನ್ ಮಸೀದಿ
ಜನರ ಸಾವು, ೩೭ ಮಂದಿಗೆ ಸೋಂಕು, ೮೦೦ಕ್ಕೂ ಹೆಚ್ಚು ಮಂದಿಗೆ ಕ್ವಾರಂಟೈನ್
ನವದೆಹಲಿ: ಕೊರೋನಾವೈರಸ್ (ಕೋವಿಡ್-೧೯) ಹರಡದಂತೆ ತಡೆಯುವ ಸಲುವಾಗಿ ದೆಹಲಿ ಸರ್ಕಾರ ೨೦೦ಕ್ಕಿಂತ ಹೆಚ್ಚು ಮಂದಿಯ ಸಮಾವೇಶಗಳನ್ನು ನಿಷೇಧಿಸಿದ್ದ ಅವಧಿಯಲ್ಲೇ  ಸುಮಾರು ೨೦೦೦ ಮಂದಿ ಸಮಾವೇಶಗೊಂಡಿದ್ದ  ದೆಹಲಿಯ ನಿಜಾಮುದ್ದೀನ್ ಪ್ರದೇಶದ ಮರ್ಕಜ್ ನಿಜಾಮುದ್ದೀನ್ ಮಸೀದಿ ಇದೀಗ ಭಾರತದಲ್ಲಿ ಕೊರೋನಾವೈರಸ್ ಸೋಂಕು ಪ್ರಸರಣ ಕೇಂದ್ರವಾಗಿ ಪರಿಣಮಿಸಿದ್ದು, ಇಲ್ಲಿನ ಸಮಾವೇಶದಲ್ಲಿ ಪಾಲ್ಗೊಂಡಿದ್ದವರಲ್ಲಿ ಮಂದಿ ಸಾವನ್ನಪ್ಪಿದ್ದು, ೩೭ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ. ೩೩೪ ಮಂದಿಯನ್ನು ಆಸ್ಪತ್ರೆಗೆ, ೮೦೦ಕ್ಕೂ ಹೆಚ್ಚು ಮಂದಿಯನ್ನು  2020 ಮಾರ್ಚ್ 31ರ ಮಂಗಳವಾರ ಏಕಾಂತವಾಸಕ್ಕೆ ಒಳಪಡಿಸಲಾಯಿತು.
ತಬ್ಲಿಘ್ -- ಜಮಾತ್ ಸಮಾವೇಶವನ್ನು ಸಂಘಟಿಸಿದ ಧಾರ್ಮಿಕ ಕೇಂದ್ರಕ್ಕೆ  2020 ಮಾರ್ಚ್ 31ರ ಮಂಗಳವಾರ ಬೀಗಮುದ್ರೆ ಹಾಕಲಾಗಿದ್ದು, ಇಲ್ಲಿದ್ದ 1500ಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಿಸಿ ಅವರ ಪೈಕಿ ೮೦೦ ಮಂದಿಯನ್ನು ದೆಹಲಿಯ ವಿವಿಧ ಭಾಗಗಳಲ್ಲಿನ ಏಕಾಂತ ವಾಸದ ವ್ಯವಸ್ಥೆಗಳಿಗೆ ಬಸ್ಸುಗಳ ಮೂಲಕ ರವಾನಿಸಲಾಯಿತು.ಮಾರ್ಚ್ ಮಧ್ಯಾವಧಿಯಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡಿದ್ದವರಲ್ಲಿ ಇನ್ನೂ ಹಲವರಲ್ಲಿ ಸೋಂಕು ಖಚಿತಗೊಂಡಿರುವ ಬಗ್ಗೆ ವರದಿಗಳು ಬರುತ್ತಿವೆ.  ಸಮಾವೇಶದಲ್ಲಿ ಭಾಗಿಯಾಗಿದ್ದವರು ಕರ್ನಾಟಕ, ತೆಲಂಗಾಣ, ಬಿಹಾರ ಹಾಗೂ ಒಡಿಶಾ ರಾಜ್ಯಗಳಲ್ಲಿ ಸಂಚರಿಸಿರುವುದು ತಿಳಿದು ಬಂದಿತು.
ನಿಜಾಮುದ್ದೀನ್ ಪೂರ್ವ ವಲಯದಲ್ಲಿ ಮರ್ಕಜ್ ಅಥವಾ ಬಂಗ್ಲೇವಾಲಿ ಮಸೀದಿಗೆ ಕಟ್ಟಡಕ್ಕೆ ಹೊಂದಿ ಕೊಂಡಂತೆ ನಿಜಾಮುದ್ದೀನ್ ಪೊಲೀಸ್ ಠಾಣೆ ಇದೆ. ವಲಯದಲ್ಲಿ ಸುಮಾರು ೨೫,೦೦೦ ಮಂದಿ ವಾಸಿಸುತ್ತಿದ್ದಾರೆ.

ದೆಹಲಿಯ ಲೋಕನಾಯಕ ಆಸ್ಪತ್ರೆಗೆ ಸೇರಿಸಿದ ಬಳಿಕ ನಡೆಸಲಾದ ಪರೀಕೆಯಲ್ಲಿ ೧೦೨ ಮಂದಿಯ ಪೈಕಿ ೨೪ ಮಂದಿಗೆ ಕೊರೋನಾವೈರಸ್ ಸೋಂಕು ತಗುಲಿದ್ದು ದೃಢಪಟ್ಟಿದೆ. ಇತರ ಎರಡು ಆಸ್ಪತ್ರೆಗಳಿಗೆ ಸೇರಿಸಲಾಗಿರುವ ಇತರ ೨೦೦ ಮಂದಿಯ ಪರೀಕ್ಷಾ ವರದಿಗಳು ಇನ್ನೂ ಬಂದಿಲ್ಲ. ತಬ್ಲಿಘ್--ಜಮಾತ್ ನಲ್ಲಿ ಪಾಲ್ಗೊಂಡಿದ್ದ ೧೧ ಮಂದಿಗೆ ಸೋಂಕು ತಗುಲಿರುವುದು ದೃಢ ಪಟ್ಟಿದೆ ಎಂದು ಆಂದ್ರ ಪ್ರದೇಶ ಸರ್ಕಾರ ತಿಳಿಸಿದೆ. sಸಮಾವೇಶದಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಯ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದ ಒಬ್ಹ ವ್ಯಕ್ತಿಗೂ ಸೋಂಕು ತಟ್ಟಿದೆ ಎಂದು ರಾಜ್ಯ ಸರ್ಕಾರ ತಿಳಿಸಿತು.
ಮಹಾ ಅಪರಾಧ: ಮಹಾ ಅಪರಾಧ ಎಸಗಲಾಗಿದೆ ಎಂದು ದೆಹಲಿಯ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಹೇಳಿದ್ದಾರೆ. ಸಂಸ್ಥೆಯ ನಿಸ್ಸೀಮ ನಿರ್ಲಕ್ಷ್ಯಕ್ಕಾಗಿ ಮಸೀದಿಯ ಮೌಲಾನಾ ವಿರುದ್ಧ ಎಫ್ ಐಆರ್ ದಾಖಲಿಸಲು ದೆಹಲಿ ಸರ್ಕಾರ ಯೋಜಿಸುತ್ತಿದೆ ಎಂದು ಅವರು ನುಡಿದರು. ಮಸೀದಿಯಿಂದ ನಿರ್ಲಕ್ಷ್ಯ ಸಂಭವಿಸಿದೆ ಎಂಬುದನ್ನು ನಿರಾಕರಿಸಿದ ಮೌಲಾನಾ, ಯಾವುದೇ ದಿಗ್ಬಂಧನ (ಲಾಕ್ ಡೌನ್) ನಿಯಮಗಳನ್ನು ಉಲ್ಲಂಘಿಸಲಾಗಿಲ್ಲ ಎಂಬುದಾಗಿ ಹೇಳಿಕೆ ನೀಡಿದರು.
ಈವರೆಗೆ ಮಸೀದಿಯಲ್ಲಿ ನಡೆದ ಸಮಾವೇಶಕ್ಕೆ ಸಂಬಂಧಿಸಿದಂತೆ ಸಂಪರ್ಕ ಇದ್ದ ಮಂದಿ ದೇಶದ ವಿವಿಧ ಕಡೆ ಸಾವನ್ನಪ್ಪಿದ್ದಾರೆ. ತೆಲಂಗಾಣದಲ್ಲಿ ಮಂದಿ, ಶ್ರೀನಗರದಲ್ಲಿ ಒಬ್ಬ ವ್ಯಕ್ತಿ, ಮುಂಬೈಯಲ್ಲಿ ಒಬ್ಬ ವ್ಯಕ್ತಿ ಮತ್ತು ಕರ್ನಾಟಕದ ತುಮಕೂರಿನಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ.
ತೆಲಂಗಾಣದಲ್ಲಿ
ಸಾವನ್ನಪ್ಪಿದ ಮಂದಿಯ ಪೈಕಿ ಇಬ್ಬರು ಗಾಂಧಿ ಆಸ್ಪತ್ರೆಯಲ್ಲಿ, ತಲಾ ಒಬ್ಬರು ನಿಜಾಮಾಬಾದ್ ಮತ್ತು ಗಡ್ವಾಲಿನ ಅಪೋಲಾ ಆಸ್ಪತ್ರೆ ಮತ್ತು ಗ್ಲೋಬಲ್ ಆಸ್ಪತ್ರೆಯಲ್ಲಿ ಅಸು ನೀಗಿದ್ದಾರೆ.  ಸಮಾವೇಶದಲ್ಲಿದ್ದ ಒಬ್ಬ ಧಾರ್ಮಿಕ ಪ್ರವಚನಕಾರ ಕಳೆದ ವಾರ ಶ್ರೀನಗರದಲ್ಲಿ ಸಾವನ್ನಪ್ಪಿದ್ದ. ವ್ಯಕ್ತಿ ಉತ್ತರ ಪ್ರದೇಶದ ದೇವಬಂದ್ ಮತ್ತು ಕಾಶ್ಮೀರಕ್ಕೆ ಹಿಂದಿರುಗಿದ ಬಳಿಕ ಹಲವಾರು ಧಾರ್ಮಿಕ ಸಭೆಗಳಲ್ಲಿ ಪಾಲ್ಗೊಂಡಿದ್ದ. ಕರ್ನಾಟಕದಿಂದ ೪೫ ಮಂದಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು ಎನ್ನಲಾಯಿತು.
ಸಮಾವೇಶದ ಜೊತೆಗೆ ಸಂಪರ್ಕ ಹೊಂದಿದ್ದ ವ್ಯಕ್ತಿಗಳ ಸಾವು ಮುಂಬೈ ಮತ್ತು ಕರ್ನಾಟಕದಲ್ಲಿ ಮಂಗಳವಾರ ಸಂಭವಿಸಿತ್ತು. ವೇಳೆಗೆ ಸಮಾವೇಶದಿಂದ ಆಗಿರಬಹುದಾದ ಅನಾಹುತದ ಸ್ಪಷ್ಟ ಚಿತ್ರ ಇನ್ನೂ ಮೂಡಿರಲಿಲ್ಲ.

ಮಾರ್ಚ್ ೨೨ರಂದು ಮುಂಬೈಯಲ್ಲಿ ಕೋವಿಡ್ -೧೯ಕ್ಕೆ ಬಲಿಯಾದ ೬೫ರ ಹರೆಯದ  ಫಿಲಿಪ್ಪೈನ್ಸ್ ಪ್ರಜೆ ಇತರ ೧೦ ಮಂದಿಯ ತಂಡದೊಂದಿಗೆ ಸಮಾವೇಶದಲ್ಲಿ ಪಾಲ್ಗೊಂಡಿದ್ದು, ಗುಂಪಿನ ಮೂವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಗುಂಪು ನವೀ ಮುಂಬೈ ಮಸೀದಿಯಲ್ಲೂ ವಾಸ್ತವ್ಯ ಹೂಡಿದ್ದು ಮಸೀದಿಯ ಮೌಲಾನಾಗೂ ಸೋಂಕು ತಗುಲಿದೆ. ಜೊತೆಗೆ ಆತನ ಪುತ್ರ, ಮೊಮ್ಮಗ ಮತ್ತು ಕೆಲಸದ ವ್ಯಕ್ತಿಗೂ ಸೋಂಕು ಬಾಧಿಸಿದೆ. ಮೌಲಾನಾ ಜೊತೆಗೆ ಸಂಪರ್ಕಕ್ಕೆ ಬಂದಿದ್ದ ಹಲವರನ್ನು ಏಕಾಂತವಾಸಕ್ಕೆ ಗುರಿಪಡಿಸಲಾಯಿತು.
ಕರ್ನಾಟಕದ ತುಮಕೂರಿನಲ್ಲಿ ಸಾವನ್ನಪ್ಪಿದ ೬೦ರ ಹರೆಯದ ವ್ಯಕ್ತಿ ಮಾರ್ಚ್ ೧೩ರಂದು ರೈಲು ಮೂಲಕ ದೆಹಲಿಗೆ ಪ್ರಯಾಣ ಮಾಡಿದ್ದು, ಮಾರ್ಚ್ ೨೭ರಂದು ತುಮಕೂರಿನ ಕೋವಿಡ್ ರೋಗಿಗಳಿಗಾಗಿಯೇ ಮೀಸಲಾಗಿರುವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಆತನ ಪುತ್ರನಿಗೂ ಸೋಂಕು ತಗುಲಿದೆ.

ಸಮಾವೇಶದ ವ್ಯಕ್ತಿಗಳ ಜೊತೆ ಮೂಲ ಸಂಪರ್ಕ ಹೊಂದಿದ್ದ ೨೪ ಮಂದಿಯನ್ನು ಅಧಿಕಾರಿಗಳು ಗುರುತಿಸಿದ್ದು ಅವರ ಪೈಕಿ ೧೩ ಮಂದಿಯನ್ನು ಕೋವಿಡ್ ಆಸ್ಪತ್ರೆಯಲ್ಲಿ ಏಕಾಂತವಾಸಕ್ಕೆ ಗುರಿಪಡಿಸಲಾಗಿದೆ. ಅವರಲ್ಲಿ ಮಂದಿಗೆ ನೆಗೆಟಿವ್ ವರದಿ ಬಂದಿದ್ದು, ಮೂವರು ಆರೋಗ್ಯ ಕಾಳಜಿ ವೃತ್ತಿ ನಿರತರನ್ನು ಹೋಮ್ ಕ್ವಾರಂಟೈನ್ ಗೆ  ಒಳಪಡಿಸಲಾಗಿದೆ.

ಪ್ರಕರಣಗಳಲ್ಲದೆ ಮಂದಿ ಸಹಾಯಕರು ಮತ್ತು  ಮತ್ತು ಅವರ ಪೈಕಿ ಒಬ್ಬನ ಪತ್ನಿಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಪರೀಕ್ಷೆ ನಡೆಸಿದಾಗ ಕೊರೋನಾ ಸೋಂಕು ಪಾಸಿಟಿವ್ ವರದಿ ಬಂದಿದೆ. ಇದರೊಂದಿಗೆ ಇಲ್ಲಿನ ಪ್ರಕರಣಗಳ ಸಂಖ್ಯೆ ೧೦ಕ್ಕೆ ಏರಿದೆ. ಉತ್ತರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಸೋಂಕು ತಗುಲಿದ ಮಂದಿಗೂ ಸಮಾವೇಶದ ಜೊತೆಗೆ ಸಂಬಂಧ ಇದ್ದುದು ಬೆಳಕಿಗೆ ಬಂದಿದೆ.

ದಕ್ಷಿಣ ಕೊರಿಯಾ ಮಾದರಿ ಕಣ್ಗಾವಲಿಗೆ ಚಿಂತನೆ
ದಕ್ಷಿಣ ಕೊರಿಯಾದಲ್ಲಿ ಸಂಭವಿಸಿದ್ದಂತಹ ಪರಿಸ್ಥಿತಿ ಜೊತೆಗೆ ಇಲ್ಲಿನ ಪರಿಸ್ಥಿತಿಗೂ ಹೋಲಿಕೆ ಇರುವುದರಿಂದ ಅಲ್ಲಿನಂತಹದೇ ಸಾಮೂಹಿಕ ಕಣ್ಗಾವಲು ಮತ್ತು ಪರೀಕ್ಷೆಗಳನ್ನು ವೈರಸ್ ಹರಡದಂತೆ ತಡೆಯುವ ಸಲುವಾಗಿ ಭಾರತದಲ್ಲೂ ಆರಂಭಿಸಲು ಸರ್ಕಾರ ಚಿಂತಿಸಿದೆ.
ಕೊರಿಯಾದಲ್ಲಿ
ನಿಗೂಢ ಶಿಂಚೆಯೊಂಜಿ ಚರ್ಚ್ ಆಫ್ ಜೇಸಸ್‌ನ ಪ್ರಾರ್ಥನಾ ಸಮೂಹದ ಮೂಲಕ ಸೋಂಕು ಹರಡಿದ್ದರೆ, ಭಾರತದಲ್ಲಿ ಧಾರ್ಮಿಕ ಸಮಾವೇಶದ ಮೂಲಕ ಸೋಂಕು ಹರಡಿದೆ.

ಕೊರಿಯಾದಲ್ಲಿ ಆದದ್ದೇನು?
ರೋಗಿ ನಂಬರ್ ೩೧ ಎಂಬುದಾಗಿ ಗುರುತಿಸಲಾದ ಸೂಪರ್ ಪ್ರಸಾರಕ ಶಿಂಚೆಯೊಂಜಿ ಹೆಸರಿನ ಚರ್ಚಿನಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಳ್ಳುವ ಮೂಲಕ ದಕ್ಷಿಣ ಕೊರಿಯಾದಲ್ಲಿ ಕೊರೋನಾವೈರಸ್ ಸೋಂಕುಗಳು ಕ್ಷಿಪ್ರವಾಗಿ ಹರಡಲು ದಾರಿ ಮಾಡಿಕೊಟ್ಟಿದ್ದ. ದೇಶದ ಆಗ್ನೇಯ ಭಾಗದ . ಮಿಲಿಯನ್ (೨೫ ಲಕ್ಷ) ಜನಸಂಖ್ಯೆ ಇರುವ ದಾಯೆಗು ನಗರದಲ್ಲಿ ವ್ಯಕ್ತಿಯ ಮೂಲಕ ಸೋಂಕು ವ್ಯಾಪಕವಾಗಿ ಹರಡಿತ್ತು.

ಕೊರಿಯಾದಲ್ಲಿ ದೃಢಪಟ್ಟ ಪ್ರಕರಣಗಳಲ್ಲಿ ಶೇಕಡಾ ೬೦ರಷ್ಟು ಪ್ರಕರಣಗಳು ಶಿಂಚೆಯೊಂಜಿ ಚರ್ಚ್ ಸಮಾವೇಶದ ಸಂಪರ್ಕ ಹೊಂದಿದ್ದವು ಎಂದು ಕೊರಿಯಾದ ರೋಗ ನಿಯಂತ್ರಣ ಕೇಂದ್ರ ಹೇಳಿತ್ತು.

ದೆಹಲಿಯ ನಿಜಾಮುದ್ದೀನ್ ಮಸೀದಿಯ ಸಮಾವೇಶದಲ್ಲಿ ಪಾಲ್ಗೊಂಡಿದ್ದವರಲ್ಲಿ ೩೦೦ಕ್ಕೂ ಹೆಚ್ಚು ಮಂದಿ ವಿದೇಶೀಯರಾಗಿದ್ದು ಅವರಲ್ಲಿ ೭೨ ಮಂದಿ ಇಂಡೋನೇಶ್ಯಾ, ೭೧ ಮಂದಿ ಥಾಯ್ಲೆಂಡ್, ೧೯ ಮಂದಿ ನೇಪಾಳ, ೨೦ ಮಂದಿ ಮಲೇಶ್ಯಾ, ೩೩ ಮಂದಿ ಮ್ಯಾನ್ಮಾರ್, ೩೪ ಮಂದಿ ಶ್ರೀಲಂಕಾ, ೧೯ ಮಂದಿ ಬಾಂಗ್ಲಾದೇಶ ಮತ್ತು ೨೮ ಮಂದಿ ಕಿರ್ಗಿಸ್ಥಾನದವರಾಗಿದ್ದರು.

ಅಂಡಮಾನ್, ತೆಲಂಗಾಣ, ತಮಿಳುನಾಡು ಮತ್ತು ಕಾಶ್ಮೀರದ ಸೋಂಕಿತರ ಪ್ರವಾಸ ಚರಿತ್ರೆಯ ಅಧ್ಯಯನದೊಂದಿಗೆ ಕಳೆದ ವಾರ ಸೋಂಕಿಗೂ ನಿಜಾಮುದ್ದೀನ್ ಮಸೀದಿಯ ಸಮಾವೇಶಕ್ಕೂ ಸಂಪರ್ಕ ಇದ್ದ ಬಗೆಗಿನ ಸುಳಿವುಗಳು ಲಭಿಸಿದ್ದವು.

ಈವರೆಗೆ ಭಾರತದಲ್ಲಿ ರಾಜಸ್ಥಾನದ ಭಿಲ್ವಾರ, ಮಹಾರಾಷ್ಟ್ರದ ಸಾಂಗ್ಲಿ ಮತ್ತು ಪಂಜಾಬಿನ ಬಂಗಾದಲ್ಲಿ ಸ್ಥಳೀಯ ಸಮೂಹಗಳಲ್ಲಿ ರೋಗ ಹರಡಿದ ಗಂಭೀರ ಪ್ರಕರಣಗಳು ಕಂಡು ಬಂದಿವೆ. ದೆಹಲಿ ಮಸೀದಿಯ ಜೊತೆಗೆ ಸಂಪರ್ಕ ಹೊಂದಿದ್ದ ವ್ಯಕ್ತಿಗಳು ದೇಶಾದ್ಯಂತ ವ್ಯಾಪಿಸಿದ್ದು, ಸ್ಥಳೀಯರಿಗೆ ರೋಗ ಅಂಟಿದ ಘಟನೆಗಳು ಸಮುದಾಯ ವರ್ಗಾವಣೆ ಆಗುತ್ತಿದೆಯೇ ಎಂಬ ಶಂಕೆಯನ್ನು ಮೂಡಿಸಿವೆ.

ಆರೋಪ ನಿರಾಕರಿಸಿದ ಮಸೀದಿ: ಮದ್ಯೆ, ನಿಜಾಮುದ್ದೀನ್ ಮಸೀದಿಯ ಆಡಳಿತವು ತನ್ನಿಂದ ಏಕಾಂತವಾಸದ ನಿಯಮಾವಳಿಗಳ ಉಲ್ಲಂಘನೆಯಾಗಿದೆ ಎಂಬ ವರದಿಗಳನ್ನು ನಿರಾಕರಿಸಿದೆ. ತಾನು ದಿಗ್ಬಂಧನ ನಿಯಮಗಳನ್ನು ಪಾಲಿಸಲು ಯತ್ನಿಸಿದ್ದರೂ, ಸರ್ಕಾರವು ರೈಲು ಸಂಚಾರವನ್ನು ದೇಶಾದ್ಯಂತ ಅಮಾನತುಗೊಳಿಸಿದ್ದರಿಂದ ಹಲವಾರು ಅತಿಥಿಗಳು ಗುಂಪು ಮರ್ಕಜ್‌ನಲ್ಲಿ (ಕೇಂದ್ರ) ಸಿಕ್ಕಿಹಾಕಿಕೊಂಡರು ಎಂದು ಮಸೀದಿಯ ಹೇಳಿಕೆ ತಿಳಿಸಿತು.

ಸಂಬಂಧಪಟ್ಟ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಅವರಿಗೆ ಸಿಕ್ಕಿಹಾಕಿಕೊಂಡ ಅತಿಥಿಗಳು ತಮ್ಮ ಹುಟ್ಟೂರುಗಳಿಗೆ ವಾಪಸಾಗಲು ಸಾಧ್ಯವಾಗುವಂತೆ ವಾಹನ ಪಾಸ್ ಗಳನ್ನು ನೀಡುವಂತೆ ಕೇಳಿಕೊಳ್ಳಲಾಗಿದ್ದು ಇನ್ನೂ ಅನುಮತಿ ಲಭಿಸಿಲ್ಲ ಎಂದು ಹೇಳಿಕೆ ತಿಳಿಸಿದೆ.

ತಬ್ಲಿಘಿ ಜಮಾತ್ ಕಟ್ಟಡವು ssಸಂಚಾರಿ ಮುಸ್ಲಿಂ ಪಂಗಡಕ್ಕೆ ಸೇರಿದ ಕಟ್ಟಡವಾಗಿದ್ದು, ಅದು ತಿಂಗಳಲ್ಲಿ ತನ್ನ ವಾರ್ಷಿಕ ಸಮಾವೇಶವನ್ನು ಸಂಘಟಿಸಿತ್ತು. ೨೧ ವಿದೇಶಗಳು ಮತ್ತು ದೇಶದ ಬಹುತೇಕ ಎಲ್ಲ ರಾಜ್ಯಗಳ ಪ್ರತಿನಿಧಿಗಳು ಸೇರಿದಂತೆ ಸುಮಾರು ೨೦೦೦ ಮಂದಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ. ೨೧ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನ ಘೋಷಣೆಯಾದ ಬಳಿಕವೂ ಸುಮಾರು ೧೦೦೦ಕ್ಕೂ ಹೆಚ್ಚು ಮಂದಿ ತಬ್ಲಿಘಿ ಜಮಾತ್ ಮರ್ಕೆಜ್‌ನಲ್ಲಿ ವಾಸ್ತವ್ಯ ಮುಂದುವರೆಸಿದ್ದರು.

ವಿದೇಶಯಾನದ ಹಿನ್ನೆಲೆಯುಳ್ಳ ಯಾರೇ ವ್ಯಕ್ತಿ ೧೪ ದಿನಗಳ ಕಾಲ ಮನೆಯಲ್ಲೇ ಏಕಾಂತವಾಸದಲ್ಲಿ ಇರಬೇಕು ಮತ್ತು ೨೦೦ಕ್ಕಿಂತ ಹೆಚ್ಚು ಜನರ ಸಮಾವೇಶ ನಡೆಸುವಂತಿಲ್ಲ ಎಂದು ದೆಹಲಿ ಸರ್ಕಾರ ಮಾರ್ಚ್ ೧೩ರಂದೇ ಆದೇಶ ನೀಡಿತ್ತು. ಬಳಿಕ ೫೦ಕ್ಕಿಂತ ಹೆಚ್ಚು ಜನರ ಸಮಾವೇಶವನ್ನು ಮಾರ್ಚ್ ೧೬ರಂದು ನಿಷೇಧಿಸಲಾಗಿತ್ತು. ಆದರೆ ಮಸೀದಿ ಇದನ್ನು ಅನುಸರಿಸಿಲ್ಲ ಎಂದು ದೆಹಲಿ ಸರ್ಕಾರ ದೂರಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ ೨೨ರಂದು ಜನತಾ ಕರ್ಫ್ಯೂ ಕರೆ ಕೊಟ್ಟ ಬಳಿಕ ಸಮಾವೇಶವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ರೈಲು ಸಂಚಾರ ಸ್ಥಗಿತಗೊಂಡದ್ದರಿಂದ ಅತಿಥಿಗಳನ್ನು ಮಸೀದಿಯಲ್ಲಿ ಉಳಿಸಿಕೊಳ್ಳಬೇಕಾಗಿ ಬಂತು ಎಂದು ಮಸೀದಿ ಆಡಳಿತ ಹೇಳಿದೆ.
ಮಧ್ಯೆ, ಸಮಾವೇಶದಲ್ಲಿ ಪಾಲ್ಗೊಂಡಿದ್ದ ವಿದೇಶೀಯರು ಪ್ರವಾಸೀ ವೀಸಾಗಳನ್ನು ಹೊಂದಿದ್ದು, ಧಾರ್ಮಿಕ ಪ್ರಸಾರ ಕಾರ್‍ಯದಲ್ಲಿ ಪಾಲ್ಗೊಳ್ಳುವ ಮೂಲಕ ವೀಸಾ ನಿಯಮಗಳನ್ನೂ ಉಲ್ಲಂಘಿಸಿದ್ದಾರೆ ಎಂದು ವರದಿಗಳು ಹೇಳಿವೆ.

ಜನತಾ ಕರ್ಫ್ಯೂ ಆಚರಣೆಯಾದ ಮಾರ್ಚ್ ೨೨ರಂದು ಪೊಲೀಸರು  ಮಸೀದಿಯ ಹೊರಗಡೆ ನಿಂತು ಜನರು ಜಮಾವಣೆಯಾಗುವುದನ್ನು ನಿಲ್ಲಿಸಿದ್ದರು. ಮಾರ್ಚ್ ೨೨ರ ವರೆಗೂ ವಿದೇಶಗಳಿಂದ ಹಾಗೂ ಇತರೆ ರಾಜ್ಯಗಳಿಂದ ಜನರು ಮಸೀದಿಗೆ ಭೇಟಿ ನೀಡುವುದು ಮುಂದುವರಿದಿತ್ತು ಎಂದು ಪೊಲೀಸರು ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ದೆಹಲಿಯ ನಿಜಾಮುದ್ದೀನ್ ಕಟ್ಟಡದಿಂದ
ತೆರವುಗೊಳಿಸಲಾದ ಜನರ ಸಂಖ್ಯೆ
ತಮಿಳುನಾಡು- ೫೧೦
ಅಂತಾರಾಷ್ಟ್ರೀಯ -೨೮೧
ಅಸ್ಸಾಂ- ೨೧೬
ಉತ್ತರ ಪ್ರದೇಶ - ೧೫೬
ಮಹಾರಾಷ್ಟ್ರ -೧೦೯
ಮಧ್ಯಪ್ರದೇಶ-೧೦೭
ಬಿಹಾರ-೮೬
ಪಶ್ಚಿಮ ಬಂಗಾಳ- ೭೩
ತೆಲಂಗಾಣ-೫೫
ಜಾರ್ಖಂಡ್- ೪೬
ಕರ್ನಾಟಕ -೪೫
ಉತ್ತರಾಖಂಡ -೩೪
ಹರಿಯಾಣ-೨೨
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು-೨೧
ರಾಜಸ್ಥಾನ-೧೯
ಹಿಮಾಚಲ ಪ್ರದೇಶ-೧೫
ಕೇರಳ-೧೫
ಒಡಿಶಾ- ೧೫
ಪಂಜಾಬ್-
ಮೇಘಾಲಯ-
ಸಂಖ್ಯೆ ಪ್ರಸ್ತತ ಕಟ್ಟಡದಲ್ಲಿ ಇದ್ದವರದ್ದು ಮಾತ್ರ. ಸಮಾವೇಶದಲ್ಲಿ ಪಾಲ್ಗೊಂಡವರದ್ದಲ್ಲ. ತೆಲಂಗಾಂಣ ಸರ್ಕಾರದ ಪ್ರಕಾರ ಕೇವಲ ತೆಲಂಗಾಣ ರಾಜ್ಯದಿಂದಲೇ ೧೦೦೦ ಮಂದಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಲಾಗುತ್ತಿದೆ.

Advertisement