Showing posts with label Javadekar. Show all posts
Showing posts with label Javadekar. Show all posts

Saturday, January 2, 2021

ಕೊರೋನಾ ಸಮರಕ್ಕೆ ಭಾರತದಲ್ಲಿ 4 ಲಸಿಕೆ: ಜಾವಡೇಕರ್

 ಕೊರೋನಾ ಸಮರಕ್ಕೆ ಭಾರತದಲ್ಲಿ 4 ಲಸಿಕೆ: ಜಾವಡೇಕರ್

ನವದೆಹಲಿ: ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೊರೋನಾವೈರಸ್ ವಿರುದ್ಧಅಣಕು ಚುಚ್ಚುಮದ್ದು ಕಾರ್‍ಯಾಚರಣೆ ಆರಂಭಿಸುತ್ತಿದ್ದಂತೆಯೇಕೋವಿಡ್ ವಿರುದ್ಧ ನಾಲ್ಕು ಲಸಿಕೆಗಳನ್ನು ಸಿದ್ಧ ಪಡಿಸಿರುವ ಏಕೈಕ ದೇಶ ಭಾರತವಾಗಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ 2021 ಜನವರಿ 02ರ ಶನಿವಾರ ಹೇಳಿದರು.

ಇಂಗ್ಲೆಂಡಿನಿಂದ ಫಿಜರ್ ಮತ್ತು ಅಸ್ಟ್ರಾಜೆನೆಕಾ ಲಸಿಕೆಗೆ ಅನುಮತಿ ನೀಡಲಾಗಿದೆ. ಫಿಜರ್‌ನ ತುರ್ತು ಬಳಕೆಯನ್ನು ಅಮೆರಿಕ ಅನುಮೋದಿಸಿದೆ. ಆದರೆ ಭಾರತವು ಈಗಾಗಲೇ ತುರ್ತು ಬಳಕೆ ಅಧಿಕಾರಕ್ಕಾಗಿ ಮೂರು ಅರ್ಜಿಗಳನ್ನು ಪಡೆದಿದ್ದು, ಒಂದಕ್ಕಿಂತ ಹೆಚ್ಚು ಲಸಿಕೆಗಳನ್ನು ಪಡೆಯುವ ಸಾಧ್ಯತೆಯಿದೆ ಎಂದು ಸಚಿವರು ಸೂಚಿಸಿದರು.

ಪ್ರಸ್ತುತ, ಆರು ಕೋವಿಡ್ -೧೯ ಲಸಿಕೆಗಳು ಭಾರತದಲ್ಲಿ ಪ್ರಾಯೋಗಿಕ ಪರೀಕ್ಷೆಗಳಿಗೆ ಒಳಗಾಗುತ್ತಿವೆ, ಇದರಲ್ಲಿ ಮುಂಚೂಣಿಯಲ್ಲಿರುವ ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಸೇರಿವೆ. ಕೋವಿಶೀಲ್ಡ್ ಎಂಬುದು ಆಕ್ಸ್‌ಫರ್ಡ್ ಲಸಿಕೆ, ಇದನ್ನು ಅಸ್ಟ್ರಾಜೆನೆಕಾ ಮತ್ತು ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಹಯೋಗದೊಂದಿಗೆ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸುತ್ತಿರುವ ಕೋವಾಕ್ಸಿನ್ ಸ್ಥಳೀಯವಾಗಿದೆ.

ಎರಡರ ಹೊರತಾಗಿ, ಕೇಂದ್ರದ ಜೈವಿಕ ತಂತ್ರಜ್ಞಾನ ವಿಭಾಗದ ಸಹಯೋಗದೊಂದಿಗೆ ಅಹಮದಾಬಾದಿನ  ಕ್ಯಾಡಿಲಾ ಹೆಲ್ತ್‌ಕೇರ್ ಲಿಮಿಟೆಡ್ ಮತ್ತು ಝೈಕೋವ್-ಡಿಯನ್ನು ಅಭಿವೃದ್ಧಿ ಪಡಿಸಿದೆ ಮತ್ತು ನೋವಾವಾಕ್ಸ್ ಸಹಯೋಗದೊಂದಿಗೆ ಸೀರಮ್ ಸಂಸ್ಥೆ ಅಭಿವೃದ್ಧಿಪಡಿಸುತ್ತಿರುವ ಎನ್‌ವಿಎಕ್ಸ್-ಕೋವಿ ೨೩೭೩ ಕೂಡಾ ಇದೆ.

ಇದಲ್ಲದೆ ಇತರ ಎರಡು ಲಸಿಕೆಗಳು ಸಿದ್ಧತೆಯ ಹಂತದಲ್ಲಿವೆ. ಒಂದು ಹೈದರಾಬಾದಿನ ಬಯೋಲಾಜಿಕಲ್ ಲಿಮಿಟೆಡ್, ಎಂಐಟಿ, ಅಮೆರಿಕದ ಸಹಯೋಗದೊಂದಿಗೆ ತಯಾರಿಸಲ್ಪಟ್ಟಿದೆ ಮತ್ತು ಇನ್ನೊಂದನ್ನು ಅಮೆರಿಕದ ಎಚ್‌ಡಿಟಿ ಸಹಯೋಗದೊಂದಿಗೆ ಪುಣೆ ಮೂಲದ ಜೆನ್ನೋವಾ ಬಯೋಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಅಭಿವೃದ್ಧಿಪಡಿಸಿದೆ.

ಮತ್ತೊಂದು ಲಸಿಕೆಯನ್ನು ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ ಅಮೆರಿಕದ ಥಾಮಸ್ ಜೆಫರ್ಸನ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಅಭಿವೃದ್ಧಿಪಡಿಸುತ್ತಿದೆ, ಇದು ಕ್ಲಿನಿಕಲ್- ಪೂರ್ವ ಹಂತದಲ್ಲಿದೆ. ರಷ್ಯಾದ ಸ್ಪುಟ್ನಿಕ್ ವಿ ಪ್ರಯೋಗ ಕೂಡಾ ಡಾ. ರೆಡ್ಡಿ ಲ್ಯಾಬ್‌ನಿಂದ ನಡೆಯುತ್ತಿದೆ.

ಭಾರತ್ ಬಯೋಟೆಕ್, ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಫಿಜರ್ (ಇದು ಭಾರತದಲ್ಲಿ ಯಾವುದೇ ಪ್ರಯೋಗವನ್ನು ಹೊಂದಿರಲಿಲ್ಲ) ತುರ್ತು-ಬಳಕೆಯ ದೃಢೀಕರಣಕ್ಕಾಗಿ ಔಷಧ ನಿಯಂತ್ರಕಕ್ಕೆ ಅರ್ಜಿ ಸಲ್ಲಿಸಿವೆ. ಸೀರಮ್‌ನ ಆಕ್ಸ್‌ಫರ್ಡ್ ಲಸಿಕೆಗೆ ತಜ್ಞರ ಸಮಿತಿ ಶುಕ್ರವಾರ ಶಿಫಾರಸು ಮಾಡಿದೆ.

ನಡೆಯುತ್ತಿರುವ ನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕಾಗಿ ಸ್ವಯಂಸೇವಕರ ನೇಮಕಾತಿಯನ್ನು ತ್ವರಿತಗೊಳಿಸಲು ಭಾರತ್ ಬಯೋಟೆಕ್‌ಗೆ ಸೂಚಿಸಲಾಗಿದೆ. ತುರ್ತು ಬಳಕೆಗಾಗಿ ಪರಿಗಣಿಸಲು ಮಧ್ಯಂತರ ಪರಿಣಾಮಕಾರಿತ್ವ ವಿಶ್ಲೇಷಣೆ ನಡೆಸಲು ಸಹ ಕೇಳಲಾಗಿದೆ.

Wednesday, December 23, 2020

ಡಿಟಿಎಚ್ ಮಾರ್ಗಸೂಚಿ ಪರಿಷ್ಕರಣೆ, 20 ವರ್ಷಕ್ಕೆ ಲೈಸೆನ್ಸ್

 ಡಿಟಿಎಚ್ ಮಾರ್ಗಸೂಚಿ ಪರಿಷ್ಕರಣೆ, 20 ವರ್ಷಕ್ಕೆ ಲೈಸೆನ್ಸ್

ನವದೆಹಲಿ: ದೇಶದಲ್ಲಿ ನೇರ ಮನೆಗೆ ಟೆಲಿವಿಷನ್ (ಡೈರೆಕ್ಟ್-ಟು-ಹೋಮ್ ಟೆಲಿವಿಷನ್ -ಡಿಟಿಎಚ್) ಸೇವೆಗಳನ್ನು ಒದಗಿಸುವ ಮಾರ್ಗಸೂಚಿಗಳಲ್ಲಿ ಪರಿಷ್ಕರಣೆ ಮಾಡಲು ಕೇಂದ್ರ ಸಚಿವ ಸಂಪುಟವು ನಿರ್ಧರಿಸಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ( ಮತ್ತು ಬಿ) ಸಚಿವ ಪ್ರಕಾಶ ಜಾವಡೇಕರ್ 2020 ಡಿಸೆಂಬರ್ 23ರ ಬುಧವಾರ ಹೇಳಿದರು.

ಸಂಪುಟ ಸಭೆಯ ಬಳಿಕ, ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜಾವಡೇಕರ್, ಡಿಟಿಎಚ್‌ಗೆ ೨೦ ವರ್ಷಗಳವರೆಗೆ ಪರವಾನಗಿ ನೀಡಲಾಗುವುದು ಮತ್ತು ತ್ರೈಮಾಸಿಕ ಆಧಾರದ ಮೇಲೆ ಪರವಾನಗಿ ಶುಲ್ಕವನ್ನು ಸಂಗ್ರಹಿಸಲಾಗುವುದು ಎಂದು ಹೇಳಿದರು.

ಹಿಂದೆ, ಎಲ್ಲಾ ಸೇವಾ ಪೂರೈಕೆದಾರರಿಗೆ ೧೦ ವರ್ಷಗಳ ಅವಧಿಗೆ ಪರವಾನಗಿ ನೀಡಲಾಗಿತ್ತು ಎಂದು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ತಿಳಿಸಿದೆ.

ದೇಶದಲ್ಲಿ ಡಿಟಿಎಚ್ ಸೇವೆಗಳನ್ನು ಒದಗಿಸುವ ಮಾರ್ಗಸೂಚಿಗಳಲ್ಲಿ ಪರಿಷ್ಕರಣೆ ಅನುಮೋದಿಸಲು ಸಚಿವ ಸಂಪುಟವು ಬುಧವಾರ ನಿರ್ಧರಿಸಿದೆ. ಈಗ, ಡಿಟಿಎಚ್ ಪರವಾನಗಿಯನ್ನು ೨೦ ವರ್ಷಗಳವರೆಗೆ ನೀಡಲಾಗುವುದು, ಪರವಾನಗಿ ಶುಲ್ಕವನ್ನು ತ್ರೈಮಾಸಿಕವಾಗಿ ಸಂಗ್ರಹಿಸಲಾಗುವುದು ಎಂದು ಕೇಂದ್ರ ಸಚಿವರು ವಿವರಿಸಿದರು.

ಇದಕ್ಕೂ ಮೊದಲು, ಡಿಟಿಎಚ್ ಸೇವೆಗಳಿಗೆ ಶಿಫಾರಸು ಮಾಡಲಾದ ನಿಯಂತ್ರಕ ಚೌಕಟ್ಟಿನ ಬಗ್ಗೆ ಅಭಿಪ್ರಾಯ/ ಟಿಪ್ಪಣಿಗಳನ್ನು ಕೋರಿ ಡಿಸೆಂಬರ್ ರಂದು ಸಮಾಲೋಚನಾ ಪತ್ರವನ್ನು ಬಿಡುಗಡೆ ಮಾಡಿತ್ತು. ಸಮಾಲೋಚನಾ ಪತ್ರದಲ್ಲಿ ಡಿಸೆಂಬರ್ ೧೪ ಮತ್ತು ಡಿಸೆಂಬರ್ ೧೯ ನಡುವಣ ಅವಧಿಯಲ್ಲಿ ಪಾಲುದಾರರಿಗೆ ಲಿಖಿತ ಪ್ರತಿಕ್ರಿಯೆ ಪಡೆಯಲಾಯಿತು.

ನಿಯಂತ್ರಕ ಪ್ರಾಧಿಕಾರವು ೨೦೧೪ ರಲ್ಲಿ ಡಿಟಿಎಚ್ ಮತ್ತು ಮಲ್ಟಿ-ಸಿಸ್ಟಮ್ ಆಪರೇಟರ್ಸ್ (ಎಂಎಸ್‌ಒ) ಸೇವೆಗಳಿಗಾಗಿಪ್ಲಾಟ್‌ಫಾರ್ಮ್ ಸೇವೆಗಳಿಗಾಗಿ ನಿಯಂತ್ರಕ ಫ್ರೇಮ್‌ವರ್ಕ್ ಕುರಿತು ಶಿಫಾರಸುಗಳನ್ನು ಬಿಡುಗಡೆ ಮಾಡಿತು, ಇವುಗಳನ್ನು ೨೦೨೦ರ ಅಕ್ಟೋಬರಿನಲ್ಲಿ ಪ್ರಸಾರ ಸಚಿವಾಲಯವು ಉಲ್ಲೇಖಿಸಿತು. ತನ್ನ ಚಂದಾದಾರರಿಗೆ ಕೇಬಲ್ ಟಿವಿ ಸೇವೆಗಳನ್ನು ಒದಗಿಸುವ ಎಂಎಸ್‌ಒವನ್ನು ಅಧಿಕೃತ ಸೇವಾ ಪೂರೈಕೆದಾರ ಎಂದು ವ್ಯಾಖ್ಯಾನಿಸಲಾಗಿದೆ.

ಚಲನಚಿತ್ರ ವಿಭಾಗ, ಚಲನಚಿತ್ರೋತ್ಸವಗಳ ನಿರ್ದೇಶನಾಲಯ, ಭಾರತದ ರಾಷ್ಟ್ರೀಯ ಚಲನಚಿತ್ರ ಸಂಗ್ರಹಗಳು ಮತ್ತು ಭಾರತದ ಮಕ್ಕಳ ಚಲನಚಿತ್ರ ಸೊಸೈಟಿಯನ್ನು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದೊಂದಿಗೆ ವಿಲೀನಗೊಳಿಸಲು ಸಂಪುಟ ಅನುಮೋದನೆ ನೀಡಿದೆ ಎಂದು ಜಾವಡೇಕರ್ ಹೇಳಿದರು.

ಏತನ್ಮಧ್ಯೆ, ಐದು ವರ್ಷಗಳಲ್ಲಿ ಕೋಟಿ ಪರಿಶಿಷ್ಟ ಜಾತಿ (ಎಸ್‌ಸಿ) ವಿದ್ಯಾರ್ಥಿಗಳಿಗೆ ೫೯,೦೦೦ ಕೋಟಿ ರೂ.ಗಳ ಮೌಲ ಮೆಟ್ರಿಕ್ ಬಳಿಕದ ವಿದ್ಯಾರ್ಥಿವೇತನ ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ ಎಂದು ಪತ್ರಿಕಾಗೋಷ್ಠಿಯಲ್ಲಿದ್ದ ಕೇಂದ್ರ ಸಚಿವ ತಾವರ್ ಚಂದ್ರ ಗೆಹ್ಲೋಟ್ ಹೇಳಿದರು.

ಕೇಂದ್ರವು ೩೫,೫೩೪ ರೂಗಳನ್ನು ಇದಕ್ಕಾಗಿ ಖರ್ಚು ಮಾಡುತ್ತದೆ ಮತ್ತು ಉಳಿದ ಹಣವನ್ನು ರಾಜ್ಯ ಸರ್ಕಾರಗಳು ಖರ್ಚು ಮಾಡುತ್ತವೆ ಎಂದು ಅವರು ಹೇಳಿದರು.

Wednesday, October 21, 2020

ಕೇಂದ್ರ ನೌಕರರಿಗೆ ದಸರಾ ಕೊಡುಗೆ, 3737 ಕೋಟಿ ರೂ. ಬೋನಸ್

 ಕೇಂದ್ರ ನೌಕರರಿಗೆ ದಸರಾ ಕೊಡುಗೆ, 3737 ಕೋಟಿ ರೂ. ಬೋನಸ್

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ವಿಜಯದಶಮಿಗೆ ಮುನ್ನವೇ ದಸರಾ ಉಡುಗೊರೆಯಾಗಿ ೨೦೧೯-೨೦೨೦ನೇ ಸಾಲಿನ ಬೋನಸ್‌ನ್ನು ಕೇಂದ್ರ ಸರ್ಕಾರ 2020 ಅಕ್ಟೋಬರ್ 21ರ ಬುಧವಾರ ಘೋಷಿಸಿದೆ. ಗೆಜೆಟೆಡ್ ಅಲ್ಲದ ೩೦.೬೭ ಲಕ್ಷ ಮಂದಿ ನೌಕರರಿಗೆ ಇದರ ಲಾಭ ಸಿಗಲಿದ್ದು, ಸರ್ಕಾರ ಇದಕ್ಕಾಗಿ ,೭೩೭ ಕೋಟಿ ರೂಪಾಯಿಗಳನ್ನು ವ್ಯಯಿಸಲಿದೆ.

ಹಬ್ಬದ ಅವಧಿಯಲ್ಲಿ ಖರ್ಚನ್ನು ಉತ್ತೇಜಿಸುವ ಉದ್ದೇಶದಿಂದ ೨೦೧೯-೨೦೨೦ರ ಸಾಲಿನ ಬೋನಸ್ ನೀಡುವ ನಿರ್ಣಯಕ್ಕೆ ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿದ ವಿಷಯವನ್ನು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ ಜಾವಡೇಕರ್ ಅವರು ಸಚಿವ ಸಂಪುಟ ಸಭೆಯ ಬಳಿಕ ಪ್ರಕಟಿಸಿದರು.

ಉತ್ಪಾದಕತೆ ಸಂಬಂಧಿತ ಬೋನಸ್ ಮತ್ತು ಉತ್ಪಾದಕತೆ ಸಂಬಂಧಿತವಲ್ಲದ ಬೋನಸ್ ನೀಡಲು ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಜಾವಡೇಕರ್ ಹೇಳಿದರು.

ಕೋವಿಡ್ -೧೯ ಸಾಂಕ್ರಾಮಿಕ ರೋಗದಿಂದಾಗಿ ವರ್ಷ ಬೋನಸ್ ಘೋಷಣೆಯ ಬಗೆಗಿನ ಅನಿಶ್ಚಿತತೆಯಿಂದ ಚಿಂತಿತರಾಗಿದ್ದ ಸರ್ಕಾರಿ ನೌಕರರಲ್ಲಿ ಕೇಂದ್ರ ಸರ್ಕಾರದ ಪ್ರಕಟಣೆಯು ಹೊಸ ಉತ್ಸಾಹವನ್ನು ತುಂಬಿಸುತ್ತದೆ.

ಬೋನಸ್‌ಗಳನ್ನು ಸಾಮಾನ್ಯವಾಗಿ ಪ್ರತಿ ವರ್ಷ ದಸರಾ ಹಬ್ಬಕ್ಕೆ ಮುಂಚಿತವಾಗಿ ಘೋಷಿಸಲಾಗುತ್ತದೆ. ಆದರೆ ವರ್ಷ ಬುಧವಾರದವರೆಗೂ ಯಾವುದೇ ಪ್ರಕಟಣೆ ಬಾರದೇ ಇದ್ದುದರಿಂದ ಬಾರಿ ಬೋನಸ್ ಸಿಗು ಸಾಧ್ಯತೆಗಳಿಲ್ಲ ಎಂದು ಸರ್ಕಾರಿ ನೌಕರರು ನಿರಾಶೆಗೊಂಡಿದ್ದರು.

ಬೋನಸ್ಸನ್ನು ಒಂದೇ ಕಂತಿನಲ್ಲಿ ವಿಜಯ ದಶಮಿಗೆ ಮುಂಚಿತವಾಗಿ ನೇರ ಲಾಭ ವರ್ಗಾವಣೆಯ ಮೂಲಕ ವಿತರಿಸಲಾಗುವುದು ಎಂದು ಕೇಂದ್ರ ಸಚಿವರು ತಿಳಿಸಿದರು.

ರೈಲ್ವೇ, ಅಂಚೆ ಕಚೇರಿ, ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ), ಇಎಸ್‌ಐಸಿ ಮುಂತಾದ ವಾಣಿಜ್ಯ ಸಂಸ್ಥೆಗಳ  ೧೭ ಲಕ್ಷ ಗೆಜೆಟೆಡ್ ಅಲ್ಲದ ನೌಕರರು ತಮ್ಮ ಉತ್ಪಾದಕತೆ-ಸಂಬಂಧಿತ ಬೋನಸ್ ಪಡೆಯುತ್ತಾರೆ ಮತ್ತು ಇತರ ೧೩ ಲಕ್ಷ ಸರ್ಕಾರಿ ನೌಕರರು ತಮ್ಮ ಉತ್ಪಾದಕತೆ-ಸಂಬಂಧಿತವಲ್ಲದ ಬೋನಸ್ ಪಡೆಯುತ್ತಾರೆ.

ಬೋನಸ್ಸನ್ನು ತತ್ ಕ್ಷಣ ವಿತರಿಸುವಂತೆ ಒತ್ತಾಯಿಸಿ ರೈಲ್ವೇ ಸಿಬ್ಬಂದಿ ಒಕ್ಕೂಟವಾದ ಆಲ್ ಇಂಡಿಯಾ ರೈಲ್ವೆ ಫೆಡರೇಶನ್ ಅಕ್ಟೋಬರ್ ೨೨ ರಂದು ಎರಡು ಗಂಟೆಗಳ ರಾಷ್ಟ್ರವ್ಯಾಪಿ ಮುಷ್ಕರ ನಡೆಸಲು ಕರೆ ನೀಡಿತ್ತು. ವರ್ಷದ ಸಾಂಕ್ರಾಮಿಕ ರೋಗವನ್ನು ಉಲ್ಲೇಖಿಸಿ ೨೦೧೯-೨೦ಕ್ಕೆ ಸಂಬಂಧಿಸಿದ ಬೋನಸ್ಸನ್ನು ಸರ್ಕಾರ ನಿರಾಕರಿಸಬಾರದು ಎಂದು ಒಕ್ಕೂಟ ಹೇಳಿತ್ತು.

"ಹಬ್ಬದ ಋತುವಿನಲ್ಲಿ ಮಧ್ಯಮ ವರ್ಗದ ಜನರು ತಮ್ಮ ಕೈಯಲ್ಲಿ ಹಣವನ್ನು ಹೊಂದಿದ್ದರೆ, ಬೇಡಿಕೆಗಳು ಹೆಚ್ಚಾಗುತ್ತವೆ ಎಂದು ಸಚಿವರು ಸಚಿವ ಸಂಪುಟದ ನಿರ್ಧಾರವನ್ನು ಪ್ರಕಟಿಸುತ್ತಾ ವಿವರಿಸಿದರು.

"ಕೇಂದ್ರ ಕ್ಯಾಬಿನೆಟ್ ೨೦೧೯-೨೦೨೦ರಲ್ಲಿ ಉತ್ಪಾದಕತೆ-ಸಂಬಂಧಿತ ಬೋನಸ್ ಮತ್ತು ಉತ್ಪಾದಕತೆ ಸಂಬಂಧಿತವಲ್ಲದ ಬೋಸ್ಸನ್ನು ಅನುಮೋದಿಸಿದೆ. ಬೋನಸ್ ಪ್ರಕಟಣೆಯಿಂದ ೩೦ ಲಕ್ಷಕ್ಕೂ ಹೆಚ್ಚು ಗೆಜೆಟೆಡ್ ಅಲ್ಲದ ಉದ್ಯೋಗಿಗಳಿಗೆ ಲಾಭವಾಗಲಿದೆ ಮತ್ತು ಒಟ್ಟು ಬೊಕ್ಕಸದ ಮೇಲೆ ,೭೩೭ ಕೋಟಿ ರೂ.ಹೊರೆ ಬೀಳಲಿದೆ ಎಂದು ಅವರು ನುಡಿದರು.

ತಿಂಗಳ ಆರಂಭದಲ್ಲಿ, ಹಣಕಾಸು ಸಚಿವರು ಮುಂಬರುವ ಹಬ್ಬದ ಋತುವಿನಲ್ಲಿ ಸರ್ಕಾರಿ ನೌಕರರನ್ನು ಖರ್ಚು ಮಾಡಲು ಪ್ರೇರೇಪಿಸುವ ಹಲವಾರು ಕ್ರಮಗಳನ್ನು ಘೋಷಿಸಿದ್ದರು, ಇದರಲ್ಲಿಎಲ್‌ಟಿಸಿ ನಗದು ಚೀಟಿ ಯೋಜನೆ ಮತ್ತುವಿಶೇಷ ಉತ್ಸವ ಮುಂಗಡ ಯೋಜನೆ ಸೇರಿದ್ದವು.

Advertisement