Showing posts with label Muslim. Show all posts
Showing posts with label Muslim. Show all posts

Friday, October 30, 2020

ಪ್ರಾನ್ಸ್ ವಿರುದ್ಧ ಮುಸ್ಲಿಂ ಜಗತ್ತಿನಲ್ಲಿ ಪ್ರತಿಭಟನೆ

 ಪ್ರಾನ್ಸ್ ವಿರುದ್ಧ ಮುಸ್ಲಿಂ ಜಗತ್ತಿನಲ್ಲಿ ಪ್ರತಿಭಟನೆ

ದುಬೈ: ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ವ್ಯಂಗ್ಯಚಿತ್ರದ ಹಕ್ಕನ್ನು ರಕ್ಷಿಸುವುದಾಗಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ಮಾಡಿರುವ ಪ್ರತಿಜ್ಞೆಗೆ ಮುಸ್ಲಿಂ ಜಗತ್ತಿನಲ್ಲಿ ವ್ಯಾಪಕ ಪ್ರತಿರೋಧ ವ್ಯಕ್ತವಾಗಿದ್ದು, 2020 ಅಕ್ಟೋಬರ್ 30 ಶುಕ್ರವಾರ ಪ್ರಾರ್ಥನೆಯ ಬಳಿಕ ಸಹಸ್ರಾರು ಮಂದಿ ರಸ್ತೆಗಳಿಗೆ ಇಳಿದು ಫ್ರಾನ್ಸ್ ವಿರುದ್ಧ ಪ್ರತಿಭಟನೆ ನಡೆಸಿದರು.

ಪ್ರವಾದಿ ಮಹಮ್ಮದ್ ಅವರ ಜನ್ಮದಿನವಾದ ಮಾವ್ಲಿದ್ ಆಚರಿಸುವ ಅಂದಾಜು ,೦೦೦ ಆರಾಧಕರು ಪಾಕಿಸ್ತಾನದ ಪೂರ್ವ ನಗರವಾದ ಲಾಹೋರಿನಲ್ಲಿ ಬೀದಿಗಿಳಿದರು. ಇಸ್ಲಾಮಿಕ್ ಪಕ್ಷಗಳ ನೇತೃತ್ವದ ಜನಸಮೂಹವು ಫ್ರಾನ್ಸ್ ವಿರೋಧಿ ಘೋಷಣೆಗಳನ್ನು ಕೂಗಿತು, ಬ್ಯಾನರ್ಗಳನ್ನು ಪ್ರದರ್ಶಿಸಿತು ಮತ್ತು ಸೂಫಿ ಪ್ರಾರ್ಥನಾಮಂದಿರಕ್ಕೆ ಹೋಗುವ ಮಾರ್ಗದಲ್ಲಿ ಪ್ರಮುಖ ರಸ್ತೆಗಳನ್ನು ಮುಚ್ಚಿಹಾಕಿತು.

ಡಜನ್ಗಟ್ಟಲೆ ಜನರು ಕೋಪದಿಂದ ಫ್ರೆಂಚ್ ಧ್ವಜಗನ್ನು ತುಳಿಯುತ್ತಾ ಹೆಜ್ಜೆ ಹಾಕಿದರು ಮತ್ತು ಫ್ರೆಂಚ್ ಉತ್ಪನ್ನಗಳ ಬಹಿಷ್ಕಾರಕ್ಕಾಗಿ ಒತ್ತಾಯಿಸಿದರು.

ಪಾಕಿಸ್ತಾನದ ಪೂರ್ವ ಪಂಜಾಬ್ ಪ್ರಾಂತ್ಯದ ಮುಲ್ತಾನ್ನಲ್ಲಿ, ಸಾವಿರಾರು ಜನರು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಪ್ರತಿಮೆಯನ್ನು ಸುಟ್ಟುಹಾಕಿದರು ಮತ್ತು ಪಾಕಿಸ್ತಾನವು ಫ್ರಾನ್ಸಿನೊಂದಿಗೆ ಸಂಬಂಧವನ್ನು ಕಡಿದುಕೊಳ್ಳಬೇಕೆಂದು ಒತ್ತಾಯಿಸಿದರು.

ಪಾಕಿಸ್ತಾನದಲ್ಲಿ ರಾಜಧಾನಿ ಇಸ್ಲಾಮಾಬಾದ್ ಸೇರಿದಂತೆ ಹೆಚ್ಚಿನ ಸಭೆಗಳನ್ನು ಶುಕ್ರವಾರ ಯೋಜಿಸಲಾಗಿತ್ತು, ಫ್ರೆಂಚ್ ರಾಯಭಾರ ಕಚೇರಿಯ ಹೊರಗೆ ಸಂಭವನೀಯ ಪ್ರದರ್ಶನಗಳನ್ನು ತಡೆಯಲು ಪೊಲೀಸರನ್ನು ಭಾರೀ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು. ರಸ್ತೆಗಳನ್ನು ನಿರ್ಬಂಧಿಸಲು ಪೊಲೀಸರು ಶಿಪ್ಪಿಂಗ್ ಕಂಟೇನರ್ಗಳನ್ನು ಇರಿಸಿದ್ದರಿಂದ ವಾತಾವರಣ ಉದ್ವಿಗ್ನವಾಗಿತ್ತು.

ಇಸ್ಲಾಮ್ವಾದಿಗಳು ಆಯೋಜಿಸಿದ ಇತರ ಪ್ರತಿಭಟನೆಗಳು ಲೆಬನಾನ್ ಮತ್ತು ಗಾಜಾ ಪಟ್ಟಿಯನ್ನೂ ಒಳಗೊಂಡಂತೆ ಹಲವಾರು ಪ್ರದೇಶಗಳಲ್ಲಿ ನಡೆದವು.

ಅಫ್ಘಾನಿಸ್ತಾನದಲ್ಲಿ, ಇಸ್ಲಾಮೀ ಪಕ್ಷವಾದ ಹಿಜ್ಬ್--ಇಸ್ಲಾಮಿ ಸದಸ್ಯರು ಫ್ರೆಂಚ್ ಧ್ವಜಕ್ಕೆ ಬೆಂಕಿ ಹಚ್ಚಿದರು. ಅದರ ನಾಯಕ ಗುಲ್ಬುದ್ದೀನ್ ಹೆಕ್ಮತ್ಯಾರ್, ಮ್ಯಾಕ್ರೋನ್ ಅವರು "ಪರಿಸ್ಥಿತಿಯನ್ನು ನಿಯಂತ್ರಿಸದಿದ್ದರೆ, ನಾವು ಮೂರನೇ ಮಹಾಯುದ್ಧಕ್ಕೆ ಹೋಗುತ್ತಿದ್ದೇವೆ ಮತ್ತು ಯುರೋಪ್ ಇದಕ್ಕೆ ಹೊಣೆಯಾಗಲಿದೆ ಎಂದು ಎಚ್ಚರಿಸಿದರು.

ಫ್ರಾನ್ಸ್ ಮತ್ತು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಪ್ರತಿಭಟನೆಗಳು ನಡೆದವು. ತಿಂಗಳ ಆರಂಭದಲ್ಲಿ ತರಗತಿಯಲ್ಲಿ ಪ್ರವಾದಿ ಮಹಮ್ಮದ್ ಅವರ ವ್ಯಂಗ್ಯ ಚಿತ್ರಗಳನ್ನು ತೋರಿಸಿದ್ದಕ್ಕಾಗಿ ಯುವ ಮುಸ್ಲಿಮನೊಬ್ಬ ಫ್ರೆಂಚ್ ಶಾಲಾ ಶಿಕ್ಷಕನ ಶಿರಚ್ಛೇದ ಮಾಡಿದ್ದ. ಇದರ ವಿರುದ್ಧ ಫ್ರಾನ್ಸಿನಲ್ಲಿ ಪ್ರತಿಭಟನೆಗಳು ಆರಂಭವಾಗಿದ್ದವು.

ಪ್ರಕಟಣೆಯ ವಿರುದ್ಧದ ೨೦೧೫ ಮಾರಣಾಂತಿಕ ದಾಳಿಯ ವಿಚಾರಣೆಯ ಪ್ರಾರಂಭವನ್ನು ಗುರುತಿಸಲು ವಿಡಂಬನಾತ್ಮಕ ನಿಯತಕಾಲಿಕ ಚಾರ್ಲಿ ಹೆಬ್ಡೊ ಮಹಮ್ಮದ್ ಅವರ ವ್ಯಂಗ್ಯ ಚಿತ್ರಗಳನ್ನು ಮರುಪ್ರಕಟಿಸಿದ್ದು ವಿಶ್ವಾದ್ಯಂತ ಮುಸ್ಲಿಮರನ್ನು ಕೆರಳಿಸುತು. ಮುಸ್ಲಿಮರು ವರ್ತನೆಯನ್ನು ಧರ್ಮನಿಂದೆ ಎಂಬುದಾಗಿ ಪರಿಗಣಿಸಿ ಪ್ರತಿಭಟನೆಗಳಿಗೆ ಇಳಿದರು.

ಫ್ರಾನ್ಸಿನಲ್ಲಿ ಹಲವಾರು ಸರಣಿ ದಾಳಿಗಳು ನಡೆದವು. ಫ್ರೆಂಚ್ ಅಧಿಕಾರಿಗಳು ಇದನ್ನು ಮುಸ್ಲಿಂ ಭಯೋತ್ಪಾದನೆ ಎಂದು ಕರೆದರು. ಗುರುವಾರ, ಖುರಾನ್ ಪ್ರತಿಯೊಂದನ್ನು ಹಿಡಿದ ಚಾಕುಧಾರಿ ಟುನೀಷಿಯಾದ ವ್ಯಕ್ತಿಯೊಬ್ಬ  ಮೆಡಿಟರೇನಿಯನ್ ನಗರ ನೈಸ್ ಇಗರ್ಜಿಯಲ್ಲಿ (ಚರ್ಚ್) ಮೂರು ಜನರನ್ನು ಕೊಂದರು. ಅದೇ ದಿನ, ಸೌದಿ ವ್ಯಕ್ತಿಯೊಬ್ಬರು ಸೌದಿ ಅರೇಬಿಯಾದ ಜೆಡ್ಡಾದಲ್ಲಿರುವ ಫ್ರೆಂಚ್ ದೂತಾವಾಸದಲ್ಲಿ ಭದ್ರತಾ ಸಿಬ್ಬಂದಿಯನ್ನು ಇರಿದು ಲಘುವಾಗಿ ಗಾಯಗೊಳಿಸಿದರು. ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಫ್ರಾನ್ಸ್ ತನ್ನ ನಾಗರಿಕರಿಗೆ ಕರೆ ನೀಡಿತು.

ಕಳೆದ ವಾರದಲ್ಲಿ, ಫ್ರೆಂಚ್ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಆಗ್ರಹಿಸಿ ಪ್ರತಿಭಟನೆಗಳು ಮತ್ತು ಕರೆಗಳು ಬಾಂಗ್ಲಾದೇಶದಿಂದ ಪಾಕಿಸ್ತಾನ, ಕುವೈತ್ವರೆಗೂ ತ್ವರಿತವಾಗಿ ಹರಡಿವೆ. ಫ್ರಾನ್ಸ್ ವಿರೋಧಿ ಹ್ಯಾಶ್ಟ್ಯಾಗ್ಗಳೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲೂ ಬರವಣಿಗೆಗಳು ಪ್ರಕಟಗೊಂಡಿವೆ.

ಮುಸ್ಲಿಂ ನಾಯಕರು, ನಿರ್ದಿಷ್ಟವಾಗಿ ಟರ್ಕಿಶ್ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ಅವರು ಈಮಧ್ಯೆ, ಫ್ರಾನ್ಸ್ ಸರ್ಕಾರವು ಮುಸ್ಲಿಂ ವಿರೋಧಿ ಪ್ರಚೋದನೆ ಮಾಡುತ್ತಿದೆ ಎಂದು ಖಾರವಾಗಿ ಟೀಕಿಸಿದರು.

ಮುಂಬೈಯಲ್ಲಿ ಫ್ರಾನ್ಸ್ ವಿರೋಧಿ ಪ್ರತಿಭಟನೆ

 ಮುಂಬೈಯಲ್ಲಿ  ಫ್ರಾನ್ಸ್ ವಿರೋಧಿ ಪ್ರತಿಭಟನೆ

ನವದೆಹಲಿ: ಶಿಕ್ಷಕನೊಬ್ಬನ ಶಿರಚ್ಛೇದ ಘಟನೆಯ ಬಳಿಕ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರ ಮೇಲೆ ವೈಯಕ್ತಿಕ ದಾಳಿಗಳು ನಡೆದುದನ್ನು ಅನುಸರಿಸಿ ಭಾರತವು ಫ್ರಾನ್ಸ್ ಜೊತೆ ಒಗ್ಗಟ್ಟು ವ್ಯಕ್ತ ಪಡಿಸಿದ ಒಂದು ದಿನದ ಬಳಿಕ ಮುಂಬೈ ಮತ್ತು ಭೋಪಾಲ್ನಲ್ಲಿ ಪ್ರತಿಭಟನೆಗಳು ನಡೆದಿದ್ದು, ಪ್ರತಿಭಟನಕಾರರ ತುಳಿತಕ್ಕೆ ಒಳಗಾಗಿದ್ದ ಮ್ಯಾಕ್ರೋನ್ ಪೋಸ್ಟರುಗಳನ್ನು ಪೊಲೀಸರು 2020 ಅಕ್ಟೋಬರ್ 30 ಶುಕ್ರವಾರ ರಸ್ತೆಗಳಿಂದ ತೆಗೆದುಹಾಕಿದರು.

ಮ್ಯಾಕ್ರೋನ್ ಪೋಸ್ಟರುಗಳ ಮೇಲೆ ಜನರು ವಾಕಿಂಗ್ ಮಾಡುವ, ವಾಹನಗಳು ಸಂಚರಿಸುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಪ್ರತಿಭಟನೆಯ ಹಿಂದೆ ರಝಾ ಅಕಾಡೆಮಿ ಮುಸ್ಲಿಂ ಸಂಘಟನೆ ಇದೆ ಎಂದು ವರದಿಗಳು ತಿಳಿಸಿದವು.

ಫ್ರೆಂಚ್ ಶಿಕ್ಷಕನ ಹತ್ಯೆ ಮತ್ತು ಮ್ಯಾಕ್ರೋನ್ ಮೇಲೆ ವೈಯಕ್ತಿಕ ದಾಳಿಯನ್ನು ಖಂಡಿಸಿ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, "ಅಂತಾರಾಷ್ಟ್ರೀಯ ಭಾಷಣದ ಅತ್ಯಂತ ಮೂಲಭೂತ ಮಾನದಂಡಗಳನ್ನು ಉಲ್ಲಂಘಿಸಿ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರ ಮೇಲೆ ಸ್ವೀಕಾರಾರ್ಹವಲ್ಲದ ಭಾಷೆಯಲ್ಲಿ ನಡೆದಿರುವ ವೈಯಕ್ತಿಕ ದಾಳಿಯನ್ನು ನಾವು ಬಲವಾಗಿ ವಿವರಿಸುತ್ತೇವೆ ಎಂದು ಹೇಳಿದೆ.

"ಫ್ರೆಂಚ್ ಶಿಕ್ಷಕನ ಪ್ರಾಣವನ್ನು ಭಯಂಕರ ರೀತಿಯಲ್ಲಿ ತೆಗೆದ ಕ್ರೂರ ಭಯೋತ್ಪಾದಕ ದಾಳಿಯನ್ನು ನಾವು ಖಂಡಿಸುತ್ತೇವೆ, ಅದು ಜಗತ್ತನ್ನು ಬೆಚ್ಚಿಬೀಳಿಸಿದೆ. ಯಾವುದೇ ಕಾರಣಕ್ಕೂ ಅಥವಾ ಯಾವುದೇ ಸಂದರ್ಭದಲ್ಲೂ ಭಯೋತ್ಪಾದನೆಗೆ ಯಾವುದೇ ಸಮರ್ಥನೆ ಇಲ್ಲ ಎಂದು ಹೇಳಿಕೆ ತಿಳಿಸಿದೆ.

ನೈಸ್ನಲ್ಲಿ ಗುರುವಾರ ನಡೆದ ಭಯೋತ್ಪಾದಕ ಕೃತ್ಯದಲ್ಲಿ ಮಹಿಳೆಯ ಶಿರಚ್ಛೇದ ನಡೆದಿದ್ದು ಇದೇ ವೇಳೆಗೆ ಇನ್ನಿಬ್ಬರು ಚೂರಿ ಇರಿತದಿಂದ ಸಾವನ್ನಪ್ಪಿದ್ದಾರೆ. ಪ್ರತ್ಯೇಕ ಘಟನೆಯೊಂದರಲ್ಲಿ, ಫ್ರೆಂಚ್ ನಗರ ಅವಿಗ್ನಾನ್ನಲ್ಲಿ ಬಂದೂಕು ಚಲಾಯಿಸುವ ವ್ಯಕ್ತಿಯನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ದಾಳಿಯನ್ನು ಖಂಡಿಸಿದ್ದು, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಫ್ರಾನ್ಸಿಗೆ ಭಾರತದ ಬೆಂಬಲವನ್ನು ಪ್ರತಿಪಾದಿಸಿದರು.

ನೈಸ್ ನಗರದ ಚರ್ಚ್ನೊಳಗೆ ನಡೆದ ಭೀಕರ ದಾಳಿ ಸೇರಿದಂತೆ ಫ್ರಾನ್ಸ್ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ, ದಾಳಿ ಸಂತ್ರಸ್ತರ ಕುಟುಂಬಗಳಿಗೆ ಮತ್ತು ಫ್ರಾನ್ಸ್ ಜನರಿಗೆ ನಮ್ಮ ಆಳವಾದ ಮತ್ತು ಹೃತ್ಪೂರ್ವಕ ಸಂತಾಪಗಳು. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ ಫ್ರಾನ್ಸ್ ಜೊತೆ ನಿಂತಿದೆ ಎಂದು ಪ್ರಧಾನಿ ಮೋದಿ ಗುರುವಾರ ಟ್ವೀಟ್ ಮಾಡಿದ್ದರು.

ಅಕ್ಟೋಬರ್ ೧೬ ರಂದು, ಫ್ರೆಂಚ್ ಶಿಕ್ಷಕ ಸ್ಯಾಮ್ಯುಯೆಲ್ ಪ್ಯಾಟಿ ತಮ್ಮ ತರಗತಿಯಲ್ಲಿ ಪ್ರವಾದಿಯ ವ್ಯಂಗ್ಯಚಿತ್ರವನ್ನು ತೋರಿಸಿದ ಆರೋಪದ ಮೇಲೆ ಅವರ ಶಿರಚ್ಛೇದನ ಮಾಡಲಾಯಿತು. ಶೋಕಾಚರಣೆಯಲ್ಲಿ ಪಾಲ್ಗೊಂಡ ಮ್ಯಾಕ್ರೋನ್ , ಫ್ರಾನ್ಸ್ ವ್ಯಂಗ್ಯಚಿತ್ರಗ ಹಕ್ಕುಗಳನ್ನು ಬಿಟ್ಟುಕೊಡುವುದಿಲ್ಲ ಎಂಬುದಾಗಿ ಹೇಳಿದ್ದು, ಪಾಕಿಸ್ತಾನ ಸೇರಿದಂತೆ ವಿಶ್ವನಾಯಕರ ವಿಭಜನೆಗೆ ಕಾರಣವಾಗಿದೆ. ಟರ್ಕಿಯು ಮ್ಯಾಕ್ರೋನ್ ಅವರನ್ನು ತೀವ್ರವಾಗಿ ಖಂಡಿಸಿದೆ.

Advertisement