Showing posts with label NCP. Show all posts
Showing posts with label NCP. Show all posts

Sunday, December 27, 2020

ಯುಪಿಎ ಅಧ್ಯಕ್ಷರಾಗಲು ಆಸಕ್ತಿ ಇಲ್ಲ: ಪವಾರ್

 ಯುಪಿಎ ಅಧ್ಯಕ್ಷರಾಗಲು ಆಸಕ್ತಿ ಇಲ್ಲ: ಪವಾರ್

ಮುಂಬೈ: ಯುನೈಟೆಡ್ ಪ್ರೊಗ್ರೆಸ್ಸಿವ್ ಅಲಯನ್ಸ್ (ಯುಪಿಎ) ಅಧ್ಯಕ್ಷರಾಗುವ ಯಾವುದೇ ಯಾವುದೇ ಆಸಕ್ತಿ ತಮಗೆ ಇಲ್ಲ ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ್ 2020 ಡಿಸೆಂಬರ್ 27ರ ಭಾನುವಾರ ಸ್ಪಷ್ಟ ಪಡಿಸಿದರು.

ಶರದ್ ಪವಾರ್ ಅವರು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ ಸ್ಥಾನವನ್ನು ವಹಿಸಿಕೊಳ್ಳಬಹುದು ಎಂಬ ಊಹಾಪೋಹಗಳನ್ನು ಎನ್ಸಿಪಿ ನಾಯಕ ಖಂಡತುಂಡವಾಗಿ ತಳ್ಳಿಹಾಕಿದರು.

ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ರೈತರ ಆಂದೋಲನದ ಕುರಿತು ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡಲು ದೆಹಲಿಗೆ ತೆರಳುವ ಒಂದು ದಿನ ಮುಂಚಿತವಾಗಿ ಪವಾರ್ ಅವರು ಸುದ್ದಿ ಸಂಸ್ಥೆ ಒಂದಕ್ಕೆ ವಿಚಾರವನ್ನು ತಿಳಿಸಿದರು.

ಯುಪಿಎ ಅಧ್ಯಕ್ಷರಾಗಲು ನನಗೆ ಸಮಯ ಅಥವಾ ಒಲವು ಇಲ್ಲ. ಅಂತಹ ಯಾವುದೇ ಪ್ರಸ್ತಾಪದ ಬಗ್ಗೆ ಯಾವುದೇ ಪ್ರಶ್ನೆಯೂ ಇಲ್ಲಎಂದು ಪವಾರ್ ಹೇಳಿದರು.

ಸೋನಿಯಾ ಗಾಂಧಿಯಿಂದ ಯುಪಿಎ ಆಡಳಿತವನ್ನು ಪವಾರ್ ವಹಿಸಿಕೊಳ್ಳಬಹುದೆಂಬ ಮಾಧ್ಯಮಗಳ ಊಹಾಪೋಹಗಳನ್ನು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಹಿಂದೆ ತಳ್ಳಿಹಾಕಿತ್ತು.

"ಅಂತಹ ಯಾವುದೇ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಯುಪಿಎ ಪಾಲುದಾರರಲ್ಲಿ ಯಾವುದೇ ಚರ್ಚೆಯಿಲ್ಲ ಎಂದು ಸ್ಪಷ್ಟಪಡಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ಬಯಸಿದೆಎಂದು ಮುಖ್ಯ ವಕ್ತಾರ ಮಹೇಶ್ ತಪಾಸೆ ಹೇಳಿದ್ದರು. "ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವ ವರದಿಗಳು, ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ರೈತರ ಆಂದೋಲನದಿಂದ ಗಮನವನ್ನು ಬೇರೆಡೆ ಸೆಳೆಯಲು ಪಟ್ಟಭದ್ರ ಹಿತಾಸಕ್ತಿಗಳು ನಡೆಸಿರುವ ಕಸರತ್ತಿನಂತೆ ಕಾಣುತ್ತಿದೆಎಂದು ಅವರು ಹೇಳಿದರು.

ಆದಾಗ್ಯೂ, ಡಿಸೆಂಬರ್ ೧೨ ರಂದು ಪವಾರ್ ಅವರ ೮೦ ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಮಾತನಾಡಿದ್ದ ಎನ್ಸಿಪಿ ನಾಯಕ ಪ್ರಫುಲ್ ಪಟೇಲ್ ಮಹಾರಾಷ್ಟ್ರ ಮಿತ್ರ ಪಕ್ಷ ಕಾಂಗ್ರೆಸ್ಸಿನ ಕಾಲೆಳೆದು, ಪಕ್ಷದದರ್ಬಾರ್ ಕೂಟದಿಂದಾಗಿ  ೧೯೯೦ ದಶಕದಲ್ಲಿ ಪ್ರಬಲ ಮರಾಠಾ ವ್ಯಕ್ತಿ ಪ್ರಧಾನಿಯಾಗಲು ಸಾಧ್ಯವಾಗಲಿಲ್ಲಎಂದು ಹೇಳಿದ್ದರು.

"ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು" ಎಂಬುದಾಗಿ ಶಿವಸೇನೆ ನಾಯಕ ಸಂಜಯ್ ರೌತ್ ಅವರು ನೀಡಿದ ನಿಗೂಢ ಪ್ರತಿಕ್ರಿಯೆಯಿಂದ ಊಹಾಪೋಹಗಳಿಗೆ ನೀರೆರೆದಿತ್ತು.

ಡಿಸೆಂಬರ್ ೧೨ ರಂದು ೮೦ ನೇ ವರ್ಷಕ್ಕೆ ಕಾಲಿಟ್ಟ ಮಾಜಿ ಕೇಂದ್ರ ಸಚಿವರು ದೊಡ್ಡ ರಾಷ್ಟ್ರೀಯ ಪಾತ್ರ ವಹಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಮಹಾರಾಷ್ಟ್ರದ ಆಡಳಿತಾರೂಢ ಮೈತ್ರಿಕೂಟದ ಅಂಗಪಕ್ಷಗಳಾದ ಶಿವಸೇನಾ, ಎನ್ಸಿಪಿ ಮತ್ತು ಕಾಂಗ್ರೆಸ್ ವಿಶ್ವಾಸ ವ್ಯಕ್ತಪಡಿಸಿದ್ದವು.

"ರಾಜಕೀಯವು ಅನಿರೀಕ್ಷಿತವಾಗಿದೆ, ಮುಂದೆ ಏನಾಗಲಿದೆ ಎಂಬುದು ನಿಮಗೆ ಎಂದಿಗೂ ತಿಳಿಯುವುದಿಲ್ಲಎಂದು ಶಿವಸೇನಾ ಸಂಸದ ರೌತ್ ಹೇಳಿದ್ದರು.

Saturday, December 5, 2020

ಸರ್ಕಾರದ ಸ್ಥಿರತೆಗಾಗಿ ನಮ್ಮ ನಾಯಕತ್ವದ ಟೀಕೆ ನಿಲ್ಲಿಸಿ: ಕಾಂಗ್ರೆಸ್

 ಸರ್ಕಾರದ ಸ್ಥಿರತೆಗಾಗಿ ನಮ್ಮ ನಾಯಕತ್ವದ ಟೀಕೆ ನಿಲ್ಲಿಸಿ: ಕಾಂಗ್ರೆಸ್

ಮುಂಬೈ: ರಾಜ್ಯದಲ್ಲಿ "ಸ್ಥಿರ" ಸರ್ಕಾರವನ್ನು ಬಯಸುವುದಾದರೆ ಪಕ್ಷದ ನಾಯಕತ್ವದ ಬಗ್ಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಬೇಕು ಎಂದು ಕಾಂಗ್ರೆಸ್ ಪಕ್ಷವು 2020 ಡಿಸೆಂಬರ್ 05ರ ಶನಿವಾರ ಶಿವಸೇನೆ ನೇತೃತ್ವದ ಆಡಳಿತಾರೂಢ ಮಹಾರಾಷ್ಟ್ರ ವಿಕಾಸ್ ಅಘಾಡಿಯಲ್ಲಿನ (ಎಂವಿಎ) ತನ್ನ ಮಿತ್ರಪಕ್ಷಗಳಿಗೆ ಮನವಿ ಮಾಡಿತು.

ರಾಹುಲ್ ಗಾಂಧಿಯವರ ನಾಯಕತ್ವವು "ಸ್ಥಿರತೆಯನ್ನು ಹೊಂದಿಲ್ಲ ಎಂಬುದಾಗಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ್ ಹೇಳಿದ ನಂತರ ಕಾಂಗ್ರೆಸ್ ರಾಜ್ಯ ಕಾರ್ಯಕಾರಿಣಿ ಅಧ್ಯಕ್ಷೆ ಯಶೋಮತಿ ಠಾಕೂರ್ ಅವರು ಮನವಿಯನ್ನು ಮಾಡಿದರು.

ಯಶೋಮತಿ ಅವರು ಲೋಕಮತ ಮರಾಠಿ ದಿನಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಪವಾರ್ ಅವರ ಕುರಿತಾದ  ಹೇಳಿಕೆಗಳು ಬಂದವು.

ಇಂಗ್ಲಿಷ್ ಮತ್ತು ಮರಾಠಿ ಭಾಷೆಯ ಸರಣಿ ಟ್ವೀಟ್ಗಳಲ್ಲಿ ಠಾಕೂರ್ ಅವರು ಎಂವಿಎ ನಾಯಕರ ಸಂದರ್ಶನಗಳು ಮತ್ತು ಲೇಖನಗಳನ್ನು ಉಲ್ಲೇಖಿಸಿದರು.

ನೀವು ಮಹಾರಾಷ್ಟ್ರದಲ್ಲಿ ಸ್ಥಿರ ಸರ್ಕಾರವನ್ನು ಬಯಸಿದರೆ ನಾನು ಎಂವಿಎ ಸಹೋದ್ಯೋಗಿಗಳಿಗೆ ಕಾಂಗ್ರೆಸ್ ನಾಯಕತ್ವದ ಬಗ್ಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿ ಎಂಬುದಾಗಿ ನಾನು ಎಂವಿಎ ನಾಯಕರಿಗೆ ಮನವಿ ಮಾಡಬೇಕಾಗಿದೆಎಂದು ಅವರು ಟ್ವೀಟ್ ಮಾಡಿದರು.

ಎಲ್ಲರೂ ಒಕ್ಕೂಟದ ಮೂಲ ನಿಯಮಗಳನ್ನು ಪಾಲಿಸಬೇಕು. ನಮ್ಮ ನಾಯಕತ್ವವು ತುಂಬಾ ಪ್ರಬಲವಾಗಿದೆ ಮತ್ತು ಸ್ಥಿರವಾಗಿದೆಎಂದು ಠಾಕೂರ್ ಬರೆದರು.

"ಎಂವಿಎ ರಚನೆಯು ಪ್ರಜಾಪ್ರಭುತ್ವ ಮೌಲ್ಯಗಳಲ್ಲಿನ ನಮ್ಮ ಬಲವಾದ ನಂಬಿಕೆಯ ಫಲಿತಾಂಶವಾಗಿದೆಎಂದೂ ಯಶೋಮತಿ ಹೇಳಿದರು.

ಏನಿದ್ದರೂ ಎನ್ಸಿಪಿ ಮತ್ತು ಶಿವಸೇನೆ ನಾಯಕರು ಪವಾರ್ ಹೇಳಿಕೆಯನ್ನು ನಿರ್ಲಕ್ಷಿಸಿದ್ದಾರೆ. ಮೂರು ಪಕ್ಷಗಳನ್ನು ಒಳಗೊಂಡ ಮೈತ್ರಿಕೂಟ ನೇತೃತ್ವದ ರಾಜ್ಯ ಸರ್ಕಾರದ ಸ್ಥಿರತೆಗೂ ಪವಾರ್ ಹೇಳಿಕೆಗೂ ಯಾವುದೇ ಸಂಬಂಧವಿಲ್ಲಎಂದು ಎನ್ಸಿಪಿ, ಶಿವಸೇನಾ ನಾಯಕರು ಹೇಳಿದರು.

ಎನ್ಸಿಪಿ ವಕ್ತಾರ ಉಮೇಶ್ ಪಾಟೀಲ್ ಅವರು, ಪವಾರ್ ಅವರ ಹೇಳಿಕೆಯನ್ನು ಅವರ ವಯಸ್ಸು ಮತ್ತು ಅನುಭವದ ಹಿನ್ನೆಲೆಯಲ್ಲಿ ಸಕಾರಾತ್ಮಕವಾಗಿ ನೋಡಬೇಕು. ಸರ್ಕಾರದ ಸ್ಥಿರತೆಯ ಬಗ್ಗೆ ಠಾಕೂರ್ ಅವರ ಅಭಿಪ್ರಾಯ ಅನಗತ್ಯ. ಎಂವಿಎ ಒಳಗೆ ಉತ್ತಮ ಸಮನ್ವಯವಿದೆ. ಇತ್ತೀಚೆಗಷ್ಟೇ, [ಸರ್ಕಾರದ] ಮೊದಲ ವಾರ್ಷಿಕೋತ್ಸವದಂದು ನಾವು ಆಚರಣೆಗಳನ್ನು ನೋಡಿದ್ದೇವೆ. [ಶುಕ್ರವಾರ] [ಶಾಸಕಾಂಗ] ಕೌನ್ಸಿಲ್ ಚುನಾವಣೆಗಳಲ್ಲಿ ಮೈತ್ರಿ ಗೆಲುವು ದಾಖಲಿಸಿದೆಎಂದು ಹೇಳಿದರು.

ರಾಹುಲ್ ಗಾಂಧಿಯವರ ಬಗ್ಗೆ ಪವಾರ್ ಏನು ಹೇಳಿದರೂ ಅದಕ್ಕೂ ಎಂವಿಎ ಸರ್ಕಾರದ ಸ್ಥಿರತೆಗೂ ಯಾವುದೇ ಸಂಬಂಧವಿಲ್ಲ ಎಂದು ಶಿವಸೇನೆ ಮುಖಂಡ ಸಂಜಯ್ ರೌತ್ ಹೇಳಿದರು.

"ರಾಹುಲ್ ಗಾಂಧಿ ಅವರ ನಾಯಕತ್ವಕ್ಕೆ ಧಕ್ಕೆ ಉಂಟಾದಾಗಲೆಲ್ಲ ನಾನು ಯಾವಾಗಲೂ ಅವರ ಹಿಂದೆ ನಿಂತಿದ್ದೇನೆ. ಶರದ್ ಪವಾರ್ ಎತ್ತರದ ನಾಯಕ. ದೇಶದ ವಿರೋಧ ಪಕ್ಷಗಳು ಪವಾರ್ ಅವರನ್ನು ತಮ್ಮ ನಾಯಕ ಎಂದು ಪರಿಗಣಿಸುತ್ತವೆ. ಅವರಂತಹ ಅನುಭವಿ ನಾಯಕ ಏನನ್ನಾದರೂ ಹೇಳಿದಾಗ, ಅದನ್ನು ನಿರ್ದೇಶನಗಳಾಗಿ ನೋಡಬೇಕುಎಂದು ರೌತ್ ನುಡಿದರು.

Wednesday, October 21, 2020

ಮಹಾರಾಷ್ಟ್ರ: ಎನ್‌ಸಿಪಿ ಸೇರಲು ಬಿಜೆಪಿ ತ್ಯಜಿಸಿದ ಏಕನಾಥ ಖಡ್ಸೆ

 ಮಹಾರಾಷ್ಟ್ರ: ಎನ್‌ಸಿಪಿ ಸೇರಲು ಬಿಜೆಪಿ ತ್ಯಜಿಸಿದ ಏಕನಾಥ ಖಡ್ಸೆ

ಮುಂಬೈ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡ ಏಕನಾಥ್ ಖಡ್ಸೆ ಅವರು 2020 ಅಕ್ಟೋಬರ್ 21ರ ಬುಧವಾರ ಪಕ್ಷವನ್ನು ತೊರೆದಿದ್ದು,  ಅಕ್ಟೋಬರ್ 23ರ ಶುಕ್ರವಾರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷಕ್ಕೆ (ಎನ್‌ಸಿಪಿ) ಸೇರಲಿದ್ದಾರೆ. ರಾಜ್ಯ ಎನ್‌ಸಿಪಿ ಮುಖ್ಯಸ್ಥ ಜಯಂತ್ ಪಾಟೀಲ್ ಘೋಷಣೆ ಮಾಡಿದರು.

ಬಿಜೆಪಿಯನ್ನು ತೊರೆಯಲು ನಿರ್ಧರಿಸಿರುವುದಾಗಿ ಖಡ್ಸೆ ಅವರು ತಮಗೆ "ಸ್ವಲ್ಪ ಸಮಯದ ಹಿಂದೆ" ತಿಳಿಸಿರುವುದಾಗಿ ಪಾಟೀಲ್ ಪ್ರಕಟಿಸಿದರು.

ಮಹಾರಾಷ್ಟ್ರದಲ್ಲಿ ಬಿಜೆಪಿಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ಹಿರಿಯ ಬಿಜೆಪಿ ನಾಯಕ ಏಕನಾಥ್ ಖಡ್ಸೆ ತಮ್ಮ ಪಕ್ಷವನ್ನು ತೊರೆಯಲು ನಿರ್ಧರಿಸಿದ್ದಾರೆ. ಸ್ವಲ್ಪ ಸಮಯದ ಹಿಂದೆ ಅವರು ತಮ್ಮ ನಿರ್ಧಾರದ ಬಗ್ಗೆ ನನಗೆ ಮಾಹಿತಿ ನೀಡಿದ್ದಾರೆ. ಇದು ಎನ್‌ಸಿಪಿಗೆ ಅವರ ಪ್ರವೇಶಕ್ಕೆ ದಾರಿ ಮಾಡಿಕೊಟ್ಟಿದೆ. ಶುಕ್ರವಾರ ಮಧ್ಯಾಹ್ನ ಖಡ್ಸೆ ಔಪಚಾರಿಕವಾಗಿ ಪಕ್ಷವನ್ನು ಸೇರುತ್ತಾರೆ ಎಂದು ಪಾಟೀಲ್ ಹೇಳಿದರು.

ಖಡ್ಸೆ ಅವರು ಬುಧವಾರ ರಾಜೀನಾಮೆ ನೀಡಿದ ನಂತರ, ತಮ್ಮ ಪಕ್ಷ ತೊರೆಯುವ ನಿರ್ಧಾರಕ್ಕೆ  ಮಾಜಿ ಮುಖ್ಯಮಂತ್ರಿ ಮತ್ತು ಪ್ರತಿಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಅವರನ್ನು ಹೊಣೆಗಾರರನ್ನಾಗಿ ಮಾಡಿದರು.  ತಮ್ಮ ಸೊಸೆ ಮತ್ತು ಪಕ್ಷದ ಸಂಸದ ರಕ್ಷಾ ಖಡ್ಸೆ ಅವರು ಬಿಜೆಪಿಗೆ ಕೆಲಸ ಮಾಡುವುದನ್ನು ಮುಂದುವರೆಸಲಿದ್ದಾರೆ ಮತ್ತು ಬೇರೆ ಯಾವುದೇ ಪಕ್ಷದ ಶಾಸಕರು ಅಥವಾ ಸಂಸದರು ತಮ್ಮೊಂದಿಗೆ ಎನ್‌ಸಿಪಿ ಸೇರ್ಪಡೆ ಆಗುತ್ತಿಲ್ಲ ಎಂದೂ ಅವರು ನುಡಿದರು.

ಖಡ್ಸೆ ಅವರ ಆಪ್ತ ಸಹಾಯಕರ ಪ್ರಕಾರ, ಅವರು ರಾಜ್ಯಪಾಲರ ಕೋಟಾ ಮೂಲಕ ವಿಧಾನಪರಿಷತ್ ಸ್ಥಾನವನ್ನು ಪಡೆಯುವ ನಿರೀಕ್ಷೆಯಿದೆ. ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ನೇತೃತ್ವದ ಮಹಾರಾಷ್ಟ್ರ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವು ವಿಧಾನ ಪರಿಷತ್ತಿನ ೧೨ ಸದಸ್ಯರ ನೇಮಕಕ್ಕೆ ರಾಜ್ಯಪಾಲ ಭಗತ್ ಸಿಂಗ್ ಕೊಶಾರಿ ಅವರಿಗೆ ಇನ್ನೂ ಹೆಸರುಗಳನ್ನು ಶಿಫಾರಸು ಮಾಡಿಲ್ಲ.

ಭ್ರಷ್ಟಾಚಾರದ ಆರೋಪ ಎದುರಿಸಿದ ನಂತರ ೨೦೧೬ ಜೂನ್‌ನಲ್ಲಿ ಕಂದಾಯ ಸಚಿವ ಸ್ಥಾನ ಮತ್ತು ಇತರ ೧೧ ಇಲಾಖೆಗಳಿಗೆ ರಾಜೀನಾಮೆ ನೀಡಿದ್ದ ಖಡ್ಸೆ, ನಾಲ್ಕು ದಶಕಗಳ ಕಾಲ ಪಕ್ಷದಲ್ಲಿ ಕೆಲಸ ಮಾಡಿದ ಬಳಿಕ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಅವರು ವಿಧಾನಸಭೆಯಲ್ಲಿ ಜಲಗಾಂವ್ ಜಿಲ್ಲೆಯ ಮುಖೈನಗರ ಕ್ಷೇತ್ರವನ್ನು ಹಲವಾರು ಬಾರಿ ಪ್ರತಿನಿಧಿಸಿದ್ದರು.

ಫಡ್ನವಿಸ್ ಹೊರತುಪಡಿಸಿ ಬೇರೆ ಯಾವುದೇ ಪಕ್ಷದ ಮುಖಂಡರೊಂದಿಗೆ ತಮಗೆ ಅಸಮಾಧಾನ ಇಲ್ಲ್ಲ ಎಂದು ಖಡ್ಸೆ ಜಲಗಾಂವ್‌ನಲ್ಲಿ ಹೇಳಿದರು.

ರಾಷ್ಟ್ರೀಯ ಅಥವಾ ರಾಜ್ಯ ನಾಯಕತ್ವದ ಬೇರೆ ಯಾವುದೇ ನಾಯಕರ ವಿರುದ್ಧ ನನಗೆ ಯಾವುದೇ ದೂರುಗಳಿಲ್ಲ. ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಬಗ್ಗೆ ನನಗೆ ಬಗ್ಗೆ ಅಸಮಾಧಾನವಿದೆ, ಅವರು ಪೊಲೀಸರ ಮೂಲಕ ನನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿದರು. ಆಗಿನ ಮುಖ್ಯಮಂತ್ರಿ ಮತ್ತು ಗೃಹ ಸಚಿವರಾಗಿದ್ದ ಫಡ್ನವೀಸ್ ಅವರ ಆದೇಶದ ಮೇರೆಗೆ ಮಹಿಳೆಯೊಬ್ಬರ ಜೊತೆ ಅಸಭ್ಯತೆ ಪ್ರದರ್ಶಿಸಿದ ಪ್ರಕರಣ ನನ್ನ ವಿರುದ್ಧ ದಾಖಲಾಗಿದೆ. ಹಾಗೆಯೇ ಭೋಸ್ರಿ ಭೂ ವ್ಯವಹಾರದಲ್ಲಿನ ಭ್ರಷ್ಟಾಚಾರ ಪ್ರಕರಣಗಳು ನನ್ನ ವಿರುದ್ಧ ದಾಖಲಾಗಿವೆ, ಆದರೂ ಅವುಗಳಿಂದ ಯಾವುದೇ ಅಂಶವೂ ಹೊರಬಂದಿಲ್ಲ. ಶಿಕ್ಷೆಗೆ ಕಾರಣಗಳನ್ನು ನೀಡುವಂತೆ ನನ್ನ ಪಕ್ಷದ ನಾಯಕತ್ವ ಮತ್ತು ಫಡ್ನವೀಸ್ ಅವರನ್ನು ವಿವಿಧ ವೇದಿಕೆಗಳಲ್ಲಿ ಒತ್ತಾಯಿಸಿದ್ದೇನೆ, ಆದರೆ ನನಗೆ ಯಾವತ್ತೂ ಉತ್ತರ ಸಿಕ್ಕಿಲ್ಲ ಎಂದೂ ಅವರು ಹೇಳಿದರು.

ಕಳೆದ ವರ್ಷ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಖಡ್ಸೆ ಅವರಿಗೆ ಚುನಾವಣಾ ಟಿಕೆಟ್ ನಿರಾಕರಿಸಲಾಗಿತ್ತು.

Advertisement