Showing posts with label NPR. Show all posts
Showing posts with label NPR. Show all posts

Thursday, March 12, 2020

ಎನ್‌ಪಿಆರ್‌ಗೆ ಯಾವ ದಾಖಲೆಯೂ ಬೇಕಿಲ್ಲ: ರಾಜ್ಯಸಭೆಯಲ್ಲಿ ಶಾ ಸ್ಪಷ್ಟನೆ

ಎನ್‌ಪಿಆರ್‌ಗೆ ಯಾವ ದಾಖಲೆಯೂ
ಬೇಕಿಲ್ಲ: ರಾಜ್ಯಸಭೆಯಲ್ಲಿ ಶಾ ಸ್ಪಷ್ಟನೆ
ನವದೆಹಲಿ: ರಾಷ್ಟ್ರೀಯ ಜನಸಂಖ್ಯಾ ನೊಂದಣಿ (ಎನ್‌ಪಿಆರ್) ಪರಿಷ್ಕರಣೆಯ ಸಂದರ್ಭದಲ್ಲಿ ’ಯಾರನ್ನೂ ’ಡಿ ಅಥವಾ ಡೌಟ್ ಫುಲ್ (ಸಂಶಯಾಸ್ಪದ) ಎಂಬುದಾಗಿ ಗುರುತಿಸಲಾಗುವುದಿಲ್ಲ ಮತ್ತು ಯಾರು ಕೂಡಾ ಯಾವುದೇ ದಾಖಲೆಗಳನ್ನು ಸಲ್ಲಿಸಬೇಕಾಗಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿಶ್ ಶಾ 2020 ಮಾರ್ಚ್ 13ರ ಗುರುವಾರ  ರಾಜ್ಯಸಭೆಯಲ್ಲಿ ಸ್ಪಷ್ಟ ಪಡಿಸಿದರು.

ದೆಹಲಿ ಗಲಭೆಗಳಿಗೆ ಸಂಬಂಧಿಸಿದಂತೆ ನಡೆದ ಚರ್ಚೆಯ ವೇಳೆ ವಿರೋಧಿ ನಾಯಕರು ಮಾಡಿದ ಆಪಾದನೆಗಳಿಗೆ ಉತ್ತರ ನೀಡಿದ ಶಾ, ’ಎನ್‌ಪಿಆರ್ ಪರಿಷ್ಕರಣೆ ಪ್ರಕ್ರಿಯೆಯ ವೇಳೆಯಲ್ಲಿ ತಾವು ಬಯಸಿದ ಮಾಹಿತಿಯನ್ನು ಮಾತ್ರ ಎಣಿಕೆದಾರರ ಬಳಿ ಘೋಷಿಸುವ ಹಕ್ಕು ಪ್ರತಿಯೊಬ್ಬ ವ್ಯಕ್ತಿಗೂ ಇದೆ ಎಂದು ನುಡಿದರು.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗೆಗಿನ ಎಲ್ಲ ಸಂಶಯಗಳನ್ನು ಕೂಡಾ ಸ್ಪಷ್ಟ ಪಡಿಸುವ ಕಾಲ ಬಂದಿದೆ ಮತ್ತು ಎಲ್ಲ ಪಕ್ಷಗಳೂ ಈಗ ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಅವರು ಕೋರಿದರು. ೫೨ ಮಂದಿಯನ್ನು ಬಲಿತೆಗೆದುಕೊಂಡ ದೆಹಲಿ ಗಲಭೆಗಳಲ್ಲಿ ಶಾಮೀಲಾದ ೧೯೨೨ ಜನರನ್ನು ಗುರುತಿಸಲಾಗಿದೆ ಎಂದೂ ಅವರು ತಿಳಿಸಿದರು.

Sunday, February 16, 2020

ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೆ ಉದ್ಧವ್ ಅಸ್ತು

ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೆ ಉದ್ಧವ್ ಅಸ್ತು
ಮಹಾಆಘಾಡಿಅಂಗಪಕ್ಷಗಳಲ್ಲಿ ಮತ್ತಷ್ಟು ಬಿರುಕು
 ಮುಂಬೈ: ವಿಭಿನ್ನ ತತ್ವ ಸಿದ್ದಾಂತಗಳ ಒಕ್ಕೂಟವಾಗಿರುವ ಮಹಾರಾಷ್ಟ್ರದ ಆಡಳಿತಾರೂಢಮಹಾರಾಷ್ಟ್ರ ವಿಕಾಸ ಅಘಾಡಿಗೆ ಇನ್ನೊಂದು ಪರೀಕ್ಷೆ ಎದುರಾಗಿದ್ದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರುರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು (ಎನ್ಪಿಆರ್) ರಾಜ್ಯದಲ್ಲಿ ಅನುಷ್ಠಾನಗೊಳಿಸಲು ನಿರ್ಧರಿಸಿದ್ದು, ತನ್ಮೂಲಕ ಮಿತ್ರ ಪಕ್ಷಗಳಾದ ಎನ್ಸಿಪಿ ಮತ್ತು ಕಾಂಗ್ರೆಸ್ಸನ್ನು  ಧಿಕ್ಕರಿಸಿದರು.

ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಮತ್ತು ಕಾಂಗ್ರೆಸ್ ಪಕ್ಷದ ವಿರೋಧದ ಹೊರತಾಗಿಯೂ,  ಮಹಾರಾಷ್ಟ್ರದಲ್ಲಿ ಮೇ ೧ರಿಂದ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು ಅನುಷ್ಠಾನಗೊಳಿಸಲು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಅತ್ಯಾಸಕ್ತರಾಗಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿದವು.

ರಾಷ್ಟ್ರೀಯ ಜನಸಮಖ್ಯಾ ನೋಂದಣಿಯುಮಾರುವೇಶದಲ್ಲಿ ಬಂದಿರುವ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ)’ ಹೊರತು ಬೇರೇನೂ ಅಲ್ಲ ಎಂದು ಕಾಂಗ್ರೆಸ್ ಪಕ್ಷವು ಮೊದಲೇ ಹೇಳಿತ್ತು ಮತ್ತು ರಾಜ್ಯದಲ್ಲಿ ಎನ್ಪಿಆರ್ ಜಾರಿಗೆ ಆಕ್ಷೇಪ ವ್ಯಕ್ತ ಪಡಿಸಿತ್ತು.

ಮಾಧ್ಯಮ ಒಂದರ ಜೊತೆಗೆ ಮಾತನಾಡಿದ ಎನ್ಸಿಪಿಯ ಮಜೀದ್ ಮೆಮನ್ ಅವರುಪಕ್ಷವು ಎನ್ಪಿಆರ್ನ್ನು ಬೆಂಬಲಿಸುವುದಿಲ್ಲ ಎಂಬುದು ಸುಸ್ಪಷ್ಟ. ನಮ್ಮ ಮುಖ್ಯಸ್ಥ ಶರದ್ ಪವಾರ್ ಅವರು ಇದನ್ನು ಸ್ಪಷ್ಟ ಪಡಿಸಿದ್ದಾರೆ. ಅಂತಿಮ ತೀರ್ಮಾನವನ್ನು ಮೂರೂ ಪಕ್ಷಗಳು ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.

ಪ್ರಮುಖ ವಿಷಯಗಳಲ್ಲಿಯೇ ಮೈತ್ರಿಕೂಟದ ಅಂಗ ಪಕ್ಷಗಳು ಭಿನ್ನಮತ ತಾಳಿದ್ದು ಇದೇ ಮೊದಲೇನಲ್ಲ. ಮಹಾರಾಷ್ಟ್ರದಲ್ಲಿ ತಮ್ಮ ಮೈತ್ರಿಕೂಟವು ಅಧಿಕಾರಕ್ಕೆ ಬಂದ ಬಳಿಕ ಶುಕ್ರವಾರ ಮುಖ್ಯಮಂತ್ರಿ ಠಾಕ್ರೆ ವಿರುದ್ಧದ ತಮ್ಮ ಮೊತ್ತ ಮೊದಲ ಟೀಕೆಯಲ್ಲಿ ಎನ್ಸಿಪಿ ನಾಯಕ ಶರದ್ ಪವಾರ್ ಅವರು ಎಲ್ಗರ್ ಪರಿಷದ್ ಪ್ರಕರಣದ ತನಿಖೆಯನ್ನು ರಾಜ್ಯ ಪೊಲೀಸರಿಂದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಹಿಸಿಕೊಳ್ಳಲು ಶಿವಸೇನಾ ಮುಖ್ಯಸ್ಥರು ಅವಕಾಶ ನೀಡಿದ್ದು ತಪ್ಪು ಎಂದು ಹೇಳಿದ್ದರು.

ಪುಣೆ ನ್ಯಾಯಾಲಯವು ಎಲ್ಗರ್ ಪರಿಷದ್ ಪ್ರಕರಣದ ತನಿಖೆಯನ್ನು ಮುಂಬೈಯ ರಾಷ್ಟ್ರೀಯ ತನಿಖಾ ಸಂಸ್ಥೆಯ ನ್ಯಾಯಾಲಯಕ್ಕೆ ವಹಿಸಲು ಅನುಮತಿ ನೀಡಿ ಶುಕ್ರವಾರ ಆದೇಶ ನೀಡಿದ ಬಳಿಕ ಪವಾರ್ ಹೇಳಿಕೆ ನೀಡಿದ್ದರು.

ಕೇಂದ್ರೀಯ ಸಂಸ್ಥೆಯ ತನಿಖೆಯನ್ನು ಅಕ್ರಮ ಎಂದಾಗಲೀ ಅಸಮಪರ್ಕಎಂದಾಗಲೀ ಹೇಳಲು ಸಾಧ್ಯವಿಲ್ಲ ಎಂದು ಕೂಡಾ ನ್ಯಾಯಾಲಯ ಹೇಳಿತ್ತು.

ಎನ್ಸಿಪಿ ನಾಯಕ, ರಾಜ್ಯದ ಗೃಹ ಸಚಿವ ಅನಿಲ್ ದೇಶಮುಖ್ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಯವರು ತಮ್ಮನ್ನು ನಿರ್ಲಕ್ಷಿಸಿದ್ದಾರೆ ಎಂದು ಹೇಳಿದ್ದರು.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳ ಬಳಿಕ ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿದಂತೆ, ತನ್ನ ದೀರ್ಘಕಾಲದ ಮಿತ್ರಪಕ್ಷವಾದ ಬಿಜೆಪಿಯ ಜೊತೆಗಿನ ಶಿವಸೇನೆಯ ಕಹಿ ವೈಮನಸ್ಯದ ಬಳಿಕ ಪರಸ್ಪರ ವಿರುದ್ಧ ಸಿದ್ಧಾಂತಗಳ ಮೂರೂ ಪಕ್ಷಗಳು ಒಂದಾಗಿ ಸರ್ಕಾರ ರಚಿಸಿದ್ದವು. ಆದಾಗ್ಯೂ, ವಿಭಿನ್ನ ಸಿದ್ಧಾಂತಗಳ ಮೈತ್ರಿಕೂಟವು ದೀರ್ಘಕಾಲ ಬಾಳುವ ಬಗ್ಗೆ ಟೀಕಾಕಾರು ಅನುಮಾನಗಳನ್ನು ವ್ಯಕ್ತ ಪಡಿಸಿದ್ದರು.

Saturday, December 28, 2019

ರಾಹುಲ್ ಗಾಂಧಿ ೨೦೧೯ರ ಸಾಲಿನ 'ವರ್ಷದ ಸುಳ್ಳುಗಾರ’

ರಾಹುಲ್ ಗಾಂಧಿ ೨೦೧೯ರ ಸಾಲಿನ 'ವರ್ಷದ ಸುಳ್ಳುಗಾರ
ಎನ್ಪಿಆರ್, ಸಿಎಎ ಕುರಿತ ಟೀಕೆಗಾಗಿ ಬಿಜೆಪಿ ತರಾಟೆ
ನವದೆಹಲಿ: ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಮತ್ತು ಪೌರತ್ವ (ತಿದ್ದುಪಡಿ) ಕಾಯ್ದೆಬಡವರ ಮೇಲಿನ ಹೊರೆ (ಟ್ಯಾಕ್ಸ್)’ ಎಂಬುದಾಗಿ ಆಪಾದಿಸಿದ್ದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು 2019 ಡಿಸೆಂಬರ್ 27ರ ಶುಕ್ರವಾರ ಪ್ರಬಲವಾಗಿ ತರಾಟೆಗೆ ತೆಗೆದುಕೊಂಡ ಬಿಜೆಪಿರಾಹುಲ್ ಗಾಂಧಿಯವರು ೨೦೧೯ರ ಸಾಲಿನ ವರ್ಷದ ಸುಳ್ಳುಗಾರಎಂದು ಜರೆಯಿತು.

ರಾಹುಲ್ ಗಾಂಧಿಯವರು ತಮ್ಮ ಸುಳ್ಳುಗಳಿಂದ ಜನರನ್ನು ಮುಜುಗರಕ್ಕೆ ಈಡು ಮಾಡಿದ್ದಲ್ಲದೆ ತಮ್ಮ ಪಕ್ಷವನ್ನು ಕೂಡಾ ಮುಜುಗರಗೊಳ್ಳುವಂತೆ ಮಾಡಿದ್ದಾರೆಎಂದು ಬಿಜೆಪಿ ಹೇಳಿತು.

ಕಾಂಗ್ರೆಸ್ ಪಕ್ಷವು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಜನರನ್ನು ದಾರಿತಪ್ಪಿಸುತ್ತಾ ರಾಷ್ಟ್ರದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ಭುಗಿಲೇಳುವಂತೆ ಮಾಡಿದೆ. ಆದರೆ ನೂತನ ಪೌರತ್ವ ಕಾಯ್ದೆ ಮತ್ತು ಎನ್ಪಿಆರ್ಗೆ ಸಂಬಂಧಿಸಿದಂತೆ ಜನರು ಸರ್ಕಾರದ ಜೊತೆ ಇದ್ದಾರೆಎಂದು ಹಿರಿಯ ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ಒತ್ತಿ ಹೇಳಿದರು.

ಪ್ರಕ್ರಿಯೆಗಳಿಗೆ ಯಾವುದೇ ಹಣಕಾಸಿನ ಅಥವಾ ಆರ್ಥಿಕ ವರ್ಗಾವಣೆಯ ಅಗತ್ಯವಿಲ್ಲ ಮತ್ತು ಎನ್ಪಿಆರ್ ಮಾಹಿತಿಯನ್ನು ಕಲ್ಯಾಣ ಕಾರ್ಯಕ್ರಮಗಳಿಗೆ ಫಲಾನುಭವಿಗಳನ್ನು ಗುರುತಿಸಲು ಬಳಸಲಾಗುತ್ತದೆಎಂದು ಜಾವಡೇಕರ್ ಹೇಳಿದರು.

ತೆರಿಗೆಸಂಗ್ರಹಿಸುವುದು ವಿರೋಧ ಪಕ್ಷದ ಸಂಸ್ಕೃತಿ. ’ಜಯಂತಿ ತೆರಿಗೆಇರಬಹುದು,’೨ಜಿ ತೆರಿಗೆಇರಬಹುದು, ’ಕಲ್ಲಿದ್ದಲು ತೆರಿಗೆಇರಬಹುದುಎಂದು ಕಾಂಗೆಸ್ ಪಕ್ಷಕ್ಕೆ ಸಚಿವರು ಎದಿರೇಟು ನೀಡಿದರು.

ರಾಷ್ಟ್ರೀಯ ಜನಸಂಖ್ಯಾ ನೋಂದಣಿಯು (ಎನ್ಪಿಆರ್) ೨೦೧೦ರಲ್ಲೂ ನಡೆದಿತ್ತು ಎಂದೂ ಅವರು ಬೊಟ್ಟು ಮಾಡಿದರು.

ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ ಅವರು ಏನು ಬೇಕಾದರೂ ಹೇಳುತ್ತಿದ್ದರು ಮತ್ತು ಎಲ್ಲ ಕಾಲದಲ್ಲೂ ಸುಳ್ಳು ಹೇಳುತ್ತಿದ್ದರು. ಈಗ ಅವರು ಪಕ್ಷದ ಅಧ್ಯಕ್ಷರಲ್ಲ, ಆದರೆ ಸುಳ್ಳು ಹೇಳುವುದನ್ನು ಮುಂದುವರೆಸಿದ್ದಾರೆ. ವರ್ಷದ ಸುಳ್ಳುಗಾರ ಎಂಬುದೊಂದು ವರ್ಗ ಇದ್ದರೆ, ಅವರು ಅದರಲ್ಲಿ ಇರುತ್ತಿದ್ದರು. ಅವರ ಟೀಕೆಗಳು ಅವರ ಕುಟುಂಬವನ್ನೇ ಮುಜುಗರಗೊಳ್ಳುವಂತೆ ಮಾಡುತ್ತಿದ್ದವು. ಅವರ ಸುಳ್ಳುಗಳು ಈಗ ಅವರ ಪಕ್ಷ ಮತ್ತು ಇಡೀ ರಾಷ್ಟ್ರವೇ ಮುಜುಗರಗೊಳ್ಳುವಂತೆ ಮಾಡಿವೆಎಂದು ಜಾವಡೇಕರ್ ನುಡಿದರು.

ಇದಕ್ಕೆ ಪ್ರತ್ಯುತ್ತರ ನೀಡಿರುವ ಕಾಂಗ್ರೆಸ್ಆರ್ಥಿಕ ಸ್ಥಿತಿ ಅಥವಾ ಮಹಿಳಾ ಸುರಕ್ಷತೆಯಂತಹ ರಾಹುಲ್ ಗಾಂಧಿಯವರ ಕಠಿಣ ಪ್ರಶ್ನೆಗಳಿಗೆ ಉತ್ತರ ಸಿಗದೇ ಹೋದಾಗ ಆಡಳಿತ ಪಕ್ಷವು ದೂಷಣೆ ಮತ್ತು ವೈಯಕಿಕ ದಾಳಿಗಳಿಗೆ ಇಳಿಯುತ್ತಿದೆಎಂದು ಟೀಕಿಸಿತು.

ಬಿಜೆಪಿಯ ಉನ್ನತ ನಾಯಕತ್ವದಲ್ಲಿ  ಸ್ಟಾರ್ ವಾರ್ ನಡೆಯುತ್ತಿದೆ. ಸಂಸತ್ತಿನಲ್ಲಿ ಒಬ್ಬರು ಒಂದು ಹೇಳುತ್ತಾರೆ, ಮತ್ತು ರಾಮಲೀಲಾ ಮೈದಾನದಲ್ಲಿ ಇನ್ನೊಬ್ಬರು ಇನ್ನೊಂದು ಹೇಳುತ್ತಾರೆ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರು ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಮಾತುಗಳನ್ನು ಉಲ್ಲೇಖಿಸಿ ಚಾಟಿ ಬೀಸಿದರು.

ರಾಹುಲ್
ಗಾಂಧಿಯವರು ಪ್ರತಿಯೊಂದು ವೇದಿಕೆಯಿಂದಲೂ ಕಠಿಣ ಪ್ರಶ್ನೆಗಳನ್ನು ಕೇಳುತ್ತಾರೆ, ಸರ್ಕಾರ ಅವುಗಳಿಗೆ ಉದ್ದಟತನದ ಉತ್ತರ ಕೊಡುತ್ತದೆ. ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಸರ್ಕಾರ ಈರೀತಿ ವೈಯಕ್ತಿಕ ದಾಳಿಗೆ ಇಳಿಯುತ್ತದೆಎಂದು ಅವರು ಹೇಳಿದರು.

Wednesday, December 25, 2019

ಎನ್ ಪಿ ಆರ್ ಗೆ ಕೇಂದ್ರದ ಹಸಿರು ನಿಶಾನೆ, ದಾಖಲೆ, ಬಯೋಮೆಟ್ರಿಕ್ಸ್ ಸಂಗ್ರಹ ಇಲ್ಲ

ಯುಪಿಎ ಆರಂಭಿಸಿದ್ದ ಎನ್ಪಿಆರ್ ಯೋಜನೆ, ಜನಗಣತಿಗೆ ರೂ.೧೩,೦೦೦ ಕೋಟಿ
ಎನ್ ಪಿ ಆರ್ ಗೆ ಕೇಂದ್ರದ ಹಸಿರು ನಿಶಾನೆ, ದಾಖಲೆ, ಬಯೋಮೆಟ್ರಿಕ್ಸ್ ಸಂಗ್ರಹ ಇಲ್ಲ
ನವದೆಹಲಿ: ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಗತಿಪರ ಮೈತ್ರಿಕೂಟ (ಯುಪಿಎ) ಸರ್ಕಾರವು ತನ್ನ ಎರಡನೇ ಅವಧಿಯಲ್ಲಿ ಚಾಲನೆ ನೀಡಿದ್ದ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಯೋಜನೆ ಮತ್ತು ಜನಗಣತಿಗೆ ಕೇಂದ್ರ ಸಚಿವ ಸಂಪುಟವು 2019 ಡಿಸೆಂಬರ್ 24ರ ಮಂಗಳವಾರ ಒಟ್ಟು ೧೩,೦೦೦  ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿತು.
ಪ್ರಧಾನಿ
ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಜನಗಣತಿಗೆ ಮುಂಚಿತವಾಗಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು ನವೀಕರಿಸುವ ನಿರ್ಧಾರಕ್ಕೆ ತನ್ನ ಒಪ್ಪಿಗೆ ನೀಡಿತು.

ರಾಷ್ಟ್ರೀಯ ಜನಸಂಖ್ಯಾ ನೋಂದಣಿ ನವೀಕರಣದ ಪ್ರಕ್ರಿಯೆ ಕಾಲದಲ್ಲಿ ಯಾವುದೇ ದಾಖಲೆಗಳು ಅಥವಾ ಬಯೋಮೆಟ್ರಿಕ್ಸ್ ಪಡೆಯಲಾಗುವುದಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ ಜಾವಡೇಕರ್ ಅವರು ಕೇಂದ್ರ ಸಚಿವ ಸಂಪುಟ ನಿರ್ಧಾರವನ್ನು ಪ್ರಕಟಿಸುತ್ತಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ವಿವಾದಾತ್ಮಕ ರಾಷ್ಟ್ರೀಯ ಪೌರ ನೋಂದಣಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಗೆ ರಾಷ್ಟ್ರವ್ಯಾಪಿ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮಾತನಾಡಿದ ಸಚಿವರುಮುಂಬರುವ ಎನ್ಪಿಆರ್, ೨೦೧೦ರಲ್ಲಿ ಯುಪಿಎ ಸರ್ಕಾರ ನಡೆಸಿದ್ದ ಎನ್ಪಿಆರ್ ಗಿಂತ ಯಾವುದೇ ರೀತಿಯಲ್ಲೂ ಭಿನ್ನವಾಗಿರುವುದಿಲ್ಲಎಂದು ಹೇಳಿದರು.

೨೦೨೧ರ ಫೆಬ್ರುವರಿಯಲ್ಲಿ ಆರಂಭವಾಗಲಿರುವ ಜನಗಣತಿಗೆ ಮುನ್ನ ೨೦೨೦ರ ಏಪ್ರಿಲ್ ಮತ್ತು ಸೆಪ್ಟೆಂಬರ್ ನಡುವಣ ಅವಧಿಯಲ್ಲಿ ಎನ್ಪಿಆರ್ ನವೀಕರಣ ಪ್ರಕ್ರಿಯೆಯು ನಡೆಯಲಿದೆ.

ಸರ್ಕಾರವು
ಎನ್ಪಿಆರ್ ಮತ್ತು ಜನಗಣತಿಗೆ ಒಟ್ಟು ೧೩,೦೦೦ ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಿದೆ. ಪೈಕಿ ,೭೫೪ ಕೋಟಿ ರೂಪಾಯಿಗಳು ಜನಗಣತಿಗೆ ಮತ್ತು ೩೯೪೧ ಕೋಟಿ ರೂಪಾಯಿಗಳು ಎನ್ಪಿಆರ್ಗೆ ಎಂದು ಜಾವಡೇಕರ್ ಹೇಳಿದರು.

ಎಲ್ಲ ರಾಜ್ಯಗಳೂ ಈಗಾಗಲೇ ಎನ್ಪಿಆರ್ ನವೀಕರಣ ಪ್ರಕ್ರಿಯೆ ನಡೆಸಲು ಒಪ್ಪಿದ್ದು, ಅವರ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ಸಚಿವರು ನುಡಿದರು.

ಎನ್ಪಿಆರ್ ನವೀಕರಣ ಪ್ರಕ್ರಿಯೆ ವೇಳೆಯಲ್ಲಿ ಯಾವುದೇ ದಾಖಲೆ ಅಥವಾ ಬಯೋಮೆಟ್ರಿಕ್ ಸಂಗ್ರಹಿಸಲಾಗುವುದಿಲ್ಲ ಎಂದು ಜಾವಡೇಕರ್ ಭರವಸೆ ನೀಡಿದರು.  ’ಜನರು ಏನು ಹೇಳುತ್ತಾರೋ ಅದನ್ನು ಅಂಗೀಕರಿಸಲಾಗುವುದುಎಂದು ಅವರು ಹೇಳಿದರು.

ಏನಿದು ಎನ್ಪಿಆರ್?
ರಾಷ್ಟೀಯ ಜನಸಂಖ್ಯಾ ನೋಂದಣಿ ಅಥವಾ ಎನ್ಪಿಆರ್ ದೇಶದಸಾಮಾನ್ಯ ನಿವಾಸಿಗಳಪಟ್ಟಿಯಾಗಿದೆ. ಎನ್ಪಿಆರ್ ಉದ್ದೇಶಕ್ಕಾಗಿ ಸಾಮಾನ್ಯ ನಿವಾಸಿ ಅಂದರೆ ನಿರ್ದಿಷ್ಟ ಪ್ರದೇಶದಲ್ಲಿ ಹಿಂದಿನ ಆರು ತಿಂಗಳ ಕಾಲ ಅಥವಾ ಅದಕ್ಕಿಂತ ಹೆಚ್ಚು ಕಾಲ ವಾಸವಾಗಿರುವ ಅಥವಾ ಅದೇ ಪ್ರದೇಶದಲ್ಲಿ ಮುಂದಿನ ಆರು ತಿಂಗಳ ಕಾಲ ಅಥವಾ ಅದಕ್ಕೂ ಹೆಚ್ಚು ಕಾಲ ವಾಸವಾಗಿರಲು ಉದ್ದೇಶಿಸಿರುವ ವ್ಯಕ್ತಿ.

ರಾಷ್ಟ್ರೀಯ
ಜನಸಂಖ್ಯಾ ನೋಂದಣಿಗೆ ೨೦೧೦ರಲ್ಲಿ ಮಾಹಿತಿ ಸಂಗ್ರಹಿಸಲಾಗಿತ್ತು. ೨೦೧೧ರಲ್ಲಿ ಜನಗಣತಿಯ ಹಂತದಲ್ಲಿ ಮನೆಗಳ ಪಟ್ಟಿ ಮಾಡಲಾಗಿತ್ತು.

ಮಾಹಿತಿಯನ್ನು ಮನೆ ಮನೆ ಸಮೀಕ್ಷೆ ನಡೆಸುವ ಮೂಲಕ ೨೦೧೫ರಲ್ಲಿ ನವೀಕರಿಸಲಾಗಿತ್ತು. ನವೀಕೃತ ಮಾಹಿತಿಯ ಡಿಜಿಟಲೀಕರಣ ಪ್ರಕ್ರಿಯೆ ಕೂಡಾ ಪೂರ್ಣಗೊಂಡಿದೆ.

ಈಗ ೨೦೨೧ರ ಜನಗಣತಿಗಾಗಿ ಮನೆಗಳ ಪಟ್ಟಿ ಜೊತೆಗೇ ರಾಷ್ಟೀಯ ಜನಸಂಖ್ಯಾ ನೋಂದಣಿಯನ್ನೂ ೨೦೨೦ರ ಏಪ್ರಿಲ್ - ಸೆಪ್ಟೆಂಬರ್ ನಡುವಣ ಅವಧಿಯಲ್ಲಿ ನವೀಕರಿಸಲು ನಿರ್ಧರಿಸಲಾಗಿದೆ. ಅಸ್ಸಾಮ್ ರಾಜ್ಯವನ್ನು ಹೊರತು ಪಡಿಸಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎನ್ಪಿಆರ್ ನವೀಕರಣ ಪ್ರಕ್ರಿಯೆ ನಡೆಯಲಿದೆ ಎಂದು ಜನಗಣತಿ ಆಯುಕ್ತರು ಮತ್ತು ರಿಜಿಸ್ಟ್ರಾರ್ ಜನರಲ್ ಅವರ ಕಚೇರಿಯ ವೆಬ್ ಸೈಟ್ ತಿಳಿಸಿದೆ.

ವಿಷಯಕ್ಕೆ ಸಂಬಂಧಿಸಿದಂತೆ ವರ್ಷ ಆಗಸ್ಟ್ ತಿಂಗಳಲ್ಲಿ ಗಜೆಟ್ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಸ್ಥಳೀಯ
(ಗ್ರಾಮ/ಉಪ-ಪಟ್ಟಣ), ಉಪ-ಜಿಲ್ಲೆ, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ೧೯೫೫ರ ಪೌರತ್ವ ಕಾಯ್ದೆಯ ವಿಧಿಗಳು ಮತ್ತು ೨೦೦೩ರ ಪೌರತ್ವ (ಪೌರರ ನೋಂದಣಿ ಮತ್ತು ರಾಷ್ಟ್ರೀಯ ಗುರುತು ಚೀಟಿ ವಿತರಣೆ) ನಿಯಮಾವಳಿಗಳಿಗೆ ಅನುಗುಣವಾಗಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ನವೀಕರಣವನ್ನು ನಡೆಸಲಾಗುವುದು.

ಭಾರತದ ಪ್ರತಿಯೊಬ್ಬ ಸಾಮಾನ್ಯ ನಿವಾಸಿಯೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಲ್ಲಿ (ಎನ್ಪಿಆರ್) ಹೆಸರು ನೋಂದಾಯಿಸುವುದು ಕಡ್ಡಾಯವಾಗಿದೆ. ಸರ್ಕಾರದ ಪ್ರಕಾರ ಎನ್ಪಿಆರ್ ಉದ್ದೇಶ ದೇಶದಲ್ಲಿನ ಪ್ರತಿಯೊಬ್ಬ ಸಾಮಾನ್ಯ ನಿವಾಸಿಯ ಸಮಗ್ರ ಗುರುತು ಮಾಹಿತಿನೆಲೆಯನ್ನು ಸೃಷ್ಟಿಸುವುದಾಗಿದೆ.

ಹಿಂದಿನ ಯುಪಿಎ ಸರ್ಕಾರವು ಚಾಲನೆ ನೀಡಿದ್ದ ಎನ್ಪಿಆರ್, ಬಳಿಕ ಪೌರ ನೋಂದಣಿ ಪ್ರಕ್ರಿಯೆಗೆ ಮೊದಲ ಹೆಜ್ಜೆಯಾಗುತ್ತಿದೆ ಎಂಬ ಕಾರಣಕ್ಕಾಗಿ ವಿವಾದ ಎದ್ದಿತ್ತು.

೧೧ ರಾಜ್ಯಗಳು ಈವರೆಗೆ ತಾವು ರಾಷ್ಟ್ರೀಯ ಪೌರ ನೋಂದಣಿಯನ್ನು ಅನುಷ್ಠಾನಗೊಳಿಸುವುದಿಲ್ಲ ಎಂದು  ಘೋಷಿಸಿವೆ. ಆದರೆ ಸಂಸತ್ತಿನ ಬೇರೆ ಯಾವ ಅನುಮೋದನೆಯ ಅಗತ್ಯವೂ ಇಲ್ಲದ ಪೌರ ನೋಂದಣಿಯನ್ನು ರಾಜ್ಯಗಳು ಹೇಗೆ ತಡೆ ಹಿಡಿಯುತ್ತವೆ ಎಂಬುದಕ್ಕೆ ಯಾವುದೇ ಸ್ಪಷ್ಟತೆಯೂ ಇಲ್ಲ.

ಮಾಹಿತಿ ಸಂಗ್ರಾಹಕರು ಎಲ್ಲ ಮನೆಗಳ ಪಟ್ಟಿ ಮಾಡಲು ಮನೆ ಮನೆಗೆ ತೆರಳುವಾಗ ಎನ್ಪಿಆರ್ ಎರಡನೇ ಫಾರಂನ್ನೂ ತಮ್ಮ ಜೊತೆಗೆ ಒಯ್ಯಲಿದ್ದಾರೆ.

ಮನೆ ಮತ್ತು ಅಲ್ಲಿ ವಾಸವಾಗಿರುವ ಜನರ ಆಸ್ತಿಪಾಸ್ತಿ ವಿವರವನ್ನು ಮನೆ ಪಟ್ಟಿ ಫಾರಂ ಭರ್ತಿ ಮಾಡಿದ ಬಳಿಕ ಮಾಹಿತಿ ಸಂಗ್ರಾಹಕರು ಜನರಿಂದ ೧೪-೨೦ ಪ್ರಶ್ನೆಗಳಿಗೆ ಉತ್ತರ ಸಂಗ್ರಹಿಸಲಿದ್ದಾರೆ.
ಜನಸಂಖ್ಯಾ ನೋಂದಣಿ ಪ್ರಶ್ನಾವಳಿಗಳನ್ನು ಉತ್ತರಿಸುವುದು ಜನರಿಗೆ ಕಾನೂನಿನ ಪ್ರಕಾರ ಕಡ್ಡಾಯವಾಗಿದೆ.

ಪಶ್ಚಿಮ
ಬಂಗಾಳ ಮತ್ತು ಕೇರಳವನ್ನು ಹೊರತುಪಡಿಸಿ, ಹಲವಾರು ರಾಜ್ಯಗಳು ಗಜೆಟ್ ಪ್ರಕಟಣೆಯ ಬಳಿಕ ಎನ್ಪಿಆರ್  ನವೀಕರಣ ಪ್ರಕ್ರಿಯೆಯನ್ನು ಆರಂಭವಿಸಿವೆ. ಪಶ್ಚಿಮಬಂಗಾಳ ಮತ್ತು ಕೇರಳ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಇತ್ತೀಚಿನ ಭಾರೀ ಪ್ರತಿಭಟನೆಯ ಬಳಿಕ ನವೀಕರಣ ಪ್ರಕಿಯೆಯನ್ನು ಸ್ಥಗಿತಗೊಳಿಸಿವೆ.

ಪಶ್ಚಿಮ ಬಂಗಾಳ ಸರ್ಕಾರವು ತನ್ನ ಆದೇಶದಲ್ಲಿ ೨೦೨೧ರ ಜನಗಣತಿ ಪ್ರಕ್ರಿಯೆ ಮತ್ತು ಎನ್ಪಿಆರ್ಗೆ ಯಾವ ಸಂಬಂಧವೂ ಇಲ್ಲ ಎಂದು ತಿಳಿಸಿದ್ದರೆ, ಕೇರಳ ಸರ್ಕಾರವು ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯ ಹಿನ್ನೆಲೆಯಲ್ಲಿ ಎನ್ಪಿಆರ್ ನವೀಕರಣವು ವಿವಾದಾತ್ಮಕ ಎನ್ಆರ್ಸಿಗೆ ದಾರಿ ಮಾಡಿಕೊಡಬಹುದು ಎಂಬುದಾಗಿ ವ್ಯಕ್ತವಾದ ಸಾರ್ವಜನಿಕ ಭೀತಿಗಳನ್ನು ಅನುಸರಿಸಿ ಎನ್ಪಿಆರ್ ನವೀಕರಣ ಕೆಲಸವನ್ನು ಸ್ಥಗಿತಗೊಳಿಸಿರುವುದಾಗಿ ಹೇಳಿದೆ.

Advertisement