Showing posts with label Nation. Show all posts
Showing posts with label Nation. Show all posts

Wednesday, November 27, 2024

ಗೌತಮ್ ಅದಾನಿ, ಸೋದರಳಿಯ ವಿರುದ್ಧ ಯಾವುದೇ ಲಂಚ ಆರೋಪಗಳಿಲ್ಲ

 ಗೌತಮ್ ಅದಾನಿ, ಸೋದರಳಿಯ ವಿರುದ್ಧ ಯಾವುದೇ ಲಂಚ ಆರೋಪಗಳಿಲ್ಲ

US ಆರೋಪಗಳ ಬಗ್ಗೆ ಅದಾನಿ ಸಮೂಹ ಸ್ಪಷ್ಟನೆ

ಯುಎಸ್ ನ್ಯಾಯಾಂಗ ಇಲಾಖೆಯ ಪ್ರಕಾರ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ, ಅವರ ಸೋದರಳಿಯ ಸಾಗರ್ ಅದಾನಿ ಮತ್ತು ಹಿರಿಯ ಕಾರ್ಯನಿರ್ವಾಹಕ ವನೀತ್ ಜೈನ್ ಅವರು ಲಂಚದ ಆರೋಪಗಳಿಂದ ಮುಕ್ತರಾಗಿದ್ದಾರೆ ಎಂದು ಅದಾನಿ ಗ್ರೂಪ್ ಇಂದು  (೨೦೨೪ ನವೆಂಬರ್‌ ೨೭ ಬುಧವಾರ) ಹೇಳಿದೆ.

ಅದಾನಿ ಸಮೂಹದ ಅಡಿಯಲ್ಲಿರುವ ಅದಾನಿ ಗ್ರೀನ್ ಸಂಸ್ಥೆಯು ತನ್ನ ಇತ್ತೀಚಿನ ಸ್ಟಾಕ್ ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ ಈ ಕುರಿತು ವಿವರ ನೀಡಿದ್ದು, ಮಾಧ್ಯಮ ವರದಿಗಳನ್ನು "ತಪ್ಪು" ಎಂದು ಕರೆದಿದೆ.

ಅದಾನಿ ಗ್ರೂಪ್ ವಿರುದ್ಧದ ಆರೋಪಗಳಲ್ಲಿ ರಂಧ್ರಗಳನ್ನು ಎಂದು ಹಿರಿಯ ವಕೀಲ ಮತ್ತು ಭಾರತದ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಗುರುತಿಸಿದ್ದಾರೆ.

ಸಮೂಹದ ಸಂಸ್ಥಾಪಕ ಅಧ್ಯಕ್ಷ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಅವರು US ನಲ್ಲಿ ಲಂಚ ಅಥವಾ ನ್ಯಾಯಕ್ಕೆ ಅಡ್ಡಿಪಡಿಸಿದ ಆರೋಪವನ್ನು ಹೊಂದಿಲ್ಲ. ಯುಎಸ್ ನ್ಯಾಯಾಂಗ ಇಲಾಖೆಯ ದೋಷಾರೋಪಣೆಯ ಕುರಿತ ವರದಿಗಳು ತಪ್ಪಾಗಿವೆ ಎಂದು ರೋಹ್ಟಗಿ ಹೇಳಿದ್ದಾರೆ.

ಮಾಧ್ಯಮಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

"ಮೊದಲಿಗೇ ಹೇಳಿಬಿಡುತ್ತೇನೆ. ಇದು ನನ್ನ ವೈಯಕ್ತಿಕ ಕಾನೂನು ದೃಷ್ಟಿಕೋನ ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ. ನಾನು ಅದಾನಿ ಸಮೂಹದ ವಕ್ತಾರನಲ್ಲ. ನಾನು ವಕೀಲ. ನಾನು ಹಲವಾರು ಪ್ರಕರಣಗಳಲ್ಲಿ ಅದಾನಿ ಸಮೂಹದ ಪರವಾಗಿ ಹಾಜರಾಗಿದ್ದೇನೆ. ದೋಷಾರೋಪಣೆಯನ್ನು ನಾನು ಪರಿಶೀಲಿಸಿದ್ದೇನೆ.

US ನ್ಯಾಯಾಲಯದ ದೋಷಾರೋಪಣೆಯಲ್ಲಿ ಮೊದಲ ಮತ್ತು ೫ನೇ ಆಪಾದನೆ ಇತರವುಗಳಿಗಿಂತ ಹೆಚ್ಚು ಮುಖ್ಯವಾದುದು ಎಂಬುದನ್ನು ಗಮನಿಸುವುದು ಬಹಳ ಮುಖ್ಯ. ದೋಷಾರೋಪ ಪಟ್ಟಿಯು ಕೆಲವು ಅಧಿಕಾರಿಗಳು ಮತ್ತು ವಿದೇಶೀ ವ್ಯಕ್ತಿಯೊಬ್ಬರಿಗೆ ಸಂಬಂಧಿಸಿದೆ. ಅದರಲ್ಲಿ ಅದಾನಿ ಮತ್ತು ಸೋದರಳಿಯನ ಹೆಸರಿಲ್ಲ ಎಂದು ಹಿರಿಯ ವಕೀಲರು ಹೇಳಿದರು.

ಯುಎಸ್‌ ನ್ಯಾಯಾಂಗ ಇಲಾಖೆಯ ದೋಷಾರೋಪಣೆ ಪಟ್ಟಿಯು ಲಂಚಗಳ ಕುರಿತು ನಡೆಸಲಾದ ಚರ್ಚೆಗಳು ಅಥವಾ ಭರವಸೆಗಳ ಪ್ರತಿಪಾದನೆಗಳನ್ನು ಮಾತ್ರ ಆಧರಿಸಿದೆ. ಅದು ಭಾರತ ಸರ್ಕಾರದ ಅಧಿಕಾರಿಗಳು ಅದನಿ ಕಾರ್ಯ ನಿರ್ವಾಹಕರಿಂದ ಪಡೆದ ಲಂಚಕ್ಕೆ ಯಾವುದೇ ಸಾಕ್ಷ್ಯಾಧಾರವನ್ನೂ ನೀಡಿಲ್ಲ ಎಂದು ಸಮೂಹ ಹೇಳಿದೆ.

ದೋಷಾರೋಪ ಪಟ್ಟಿಯಲ್ಲಿ ಯಾರಿಗೆ ಲಂಚ ನೀಡಲಾಗಿದೆ ಎಂಬ ಯಾವುದೇ ವಿವರ ಕೂಡಾ ಇಲ್ಲ ಎಂದು ವಕೀಲ ರೋಹ್ಟಗಿ ನುಡಿದರು.

ವೀಕ್ಷಿಸಿ: https://youtu.be/wE_dvjPG1NE

ಕಾಂಗ್ರೆಸಿನಿಂದ ʼಅತಿರಂಜಿತʼ

ಈ ಮಧ್ಯೆ, ಹಿರಿಯ ವಕೀಲ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಮಹೇಶ ಜೇಠ್ಮಲಾನಿ ಅವರು ʼಅಮೆರಿಕದಲ್ಲಿ ಅದನಿ ಸಮೂಹದ ವಿರುದ್ಧ ಮಾಡಲಾಗಿರುವ ದೋಷಾರೋಪ ಪಟ್ಟಿಯ ವಿಷಯವನ್ನು ಸ್ಪಷ್ಟವಾದ ರಾಜಕೀಯ ಕಾರಣಗಳಿಗಾಗಿ ಕಾಂಗ್ರೆಸ್‌ ʼಅತಿರಂಜಿತʼಗೊಳಿಸುತ್ತಿದೆ ಎಂದು ಹೇಳಿದ್ದಾರೆ.

ಸಂಸದೀಯ ತನಿಖೆಗಾಗಿ ಒತ್ತಾಯಿಸುವ ಮುನ್ನ ವಿರೋಧ ಪಕ್ಷವು ವಿಶ್ವಾಸಾರ್ಹ ಸಾಕ್ಷ್ಯವನ್ನುನೀಡಲೇಬೇಕು ಎಂದು ಅವರು ಹೇಳಿದ್ದಾರೆ.

ಭಾರತದ ಆರ್ಥಿಕ ಉನ್ನತಿಯನ್ನು ಅಸ್ಥಿರಗೊಳಿಸಲು ಅಮೆರಿಕದ ನ್ಯಾಯಾಲಯಗಳನ್ನು “ಆಳವಾದ ಪ್ರಜಾಪ್ರಭುತ್ವ ರಾಷ್ಟ್ರʼ    ಶಸ್ತ್ರವನ್ನಾಗಿ  ಬಳಸಿಕೊಳ್ಳುತ್ತಿದೆ ಎಂದೂ ಅವರ ಟೀಕಿಸಿದ್ದಾರೆ.

ಮಹೇಶ ಜೇಠ್ಮಲಾನಿ ಅವರು ಪಿಟಿಐಗೆ ನೀಡಿದ ಅಭಿಪ್ರಾಯ ಟ್ವಿಟ್ಟರಿನಲ್ಲಿ  (ಹಿಂದಿನ ಎಕ್ಸ್)‌ ಪ್ರಕಟವಾಗಿದೆ.

ಮಹೇಶ ಜೇಠ್ಮಲಾನಿ ಅಭಿಪ್ರಾಯ ಕೇಳಲು ಈ ಕೊಂಡಿಯನ್ನು ಕ್ಲಿಕ್‌ ಮಾಡಿ:

 https://twitter.com/i/status/1861660163272282118

Monday, July 11, 2022

ನ್ಯಾಯಾಂಗ ನಿಂದನೆ: ವಿಜಯ ಮಲ್ಯಗೆ ಜೈಲು: ಸುಪ್ರೀಂ ಆದೇಶ

 ನ್ಯಾಯಾಂಗ ನಿಂದನೆ: ವಿಜಯ ಮಲ್ಯಗೆ ಜೈಲು: ಸುಪ್ರೀಂ ಆದೇಶ

ನವದೆಹಲಿ: ಉದ್ಯಮಿ ವಿಜ ಮಲ್ಯ ಅವರಿಗೆ ನ್ಯಾಯಾಂಗ ನಿಂದನೆ ಆರೋಪದಡಿ ನಾಲ್ಕು ತಿಂಗಳ ಜೈಲು ಶಿಕ್ಷೆ ಹಾಗೂ ₹2000 ದಂಡ ವಿಧಿಸಿ ಸುಪ್ರೀಂ ಕೋರ್ಟ್ 2022 ಜುಲೈ 11ಸೋಮವಾರ ತೀರ್ಪು ನೀಡಿತು. "ಸಾಕಷ್ಟು ಶಿಕ್ಷೆ ಅತ್ಯಗತ್ಯ. ಮಲ್ಯ ಯಾವುದೇ ಪಶ್ಚಾತ್ತಾಪ ತೋರಿಸಲಿಲ್ಲ" ಎಂದು ಉನ್ನತ ನ್ಯಾಯಾಲಯದ ಪೀಠ ಹೇಳಿತು.

ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ಮಲ್ಯ ಅವರ ಕುಟುಂಬ ಸದಸ್ಯರಿಗೆ ವರ್ಗಾಯಿಸಲಾದ 40 ದಶಲಕ್ಷ ಡಾಲರುಗಳನ್ನು ಹಿಂದಿರುಗಿಸುವಂತೆಯೂ ಸುಪ್ರೀಂ ಕೋರ್ಟ್ ಆದೇಶಿಸಿತು.

ನ್ಯಾಯಮೂರ್ತಿಗಳಾದ ಯು.ಯು.ಲಲಿತ್, ಎಸ್.ರವೀಂದ್ರ ಭಟ್ ಮತ್ತು ಪಿ.ಎಸ್.ನರಸಿಂಹ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಮಾರ್ಚ್ 10 ರಂದು ಮದ್ಯದ ದೊರೆ ವಿರುದ್ಧದ ವಿಚಾರಣೆಯ ಬಳಿಕ ತನ್ನ ಆದೇಶವನ್ನು ಕಾಯ್ದಿರಿಸಿತ್ತು.

ವಿವಿಧ ಅಂಶಗಳ ಕುರಿತು ಹಿರಿಯ ವಕೀಲ ಮತ್ತು ಅಮಿಕಸ್ ಕ್ಯೂರಿ ಜೈದೀಪ್ ಗುಪ್ತಾ ಅವರನ್ನು ಆಲಿಸಿದ ನಂತರ, ಮಾರ್ಚ್ 15 ರೊಳಗೆ ಲಿಖಿತ ಸಲ್ಲಿಕೆಗಳನ್ನು ಸಲ್ಲಿಸಲು ಮಲ್ಯ ಅವರನ್ನು ಪ್ರತಿನಿಧಿಸುತ್ತಿದ್ದ ವಕೀಲರಿಗೆ ಅನುಮತಿ ನೀಡಲು ಸುಪ್ರೀಂ ಕೋರ್ಟ್ ನಿರ್ಧರಿಸಿತು.

ಇಂಗ್ಲೆಂಡಿನಲ್ಲಿ ಇರುವ
ತಮ್ಮ ಕಕ್ಷಿದಾರರಿಂದ ಯಾವುದೇ ಸೂಚನೆ ತಮಗೆ ಲಭಿಸಿಲ್ಲ. ಹೀಗಾಗಿ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ನೀಡಲಾಗುವ ಶಿಕ್ಷೆಯ ಪ್ರಮಾಣ ಬಗ್ಗೆ ವಾದಿಸಲು ಸಾಧ್ಯವಾಗುವುದಿಲ್ಲ ಎಂದು ಮಲ್ಯ ಅವರ ವಕೀಲರು ಮಾರ್ಚ್ 10 ರಂದು ಪೀಠಕ್ಕೆ ತಿಳಿಸಿದ್ದರು.

ವೈಯಕ್ತಿಕವಾಗಿ ಅಥವಾ ವಕೀಲರ ಮೂಲಕ ಹಾಜರಾಗಲು ಮಲ್ಯ ಅವರಿಗೆ ಹಲವು ಅವಕಾಶಗಳನ್ನು ನೀಡಲಾಗಿದೆ ಮತ್ತು ಕಳೆದ ವರ್ಷ ನವೆಂಬರ್ 30 ರಂದು ನಿರ್ದಿಷ್ಟ ನಿರ್ದೇಶನಗಳನ್ನು ನೀಡಿತ್ತು ಎಂದು ಪೀಠವು ಹೇಳಿತು.

 ₹9,000 ಕೋಟಿಗೂ ಅಧಿಕ ಮೊತ್ತದ ಸಾಲ ಮರುಪಾವತಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶವನ್ನು ಮಲ್ಯ ಪಾಲಿಸುತ್ತಿಲ್ಲ ಎಂದು ಆರೋಪಿಸಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಮಲ್ಯ ಅವರು ಆಸ್ತಿಯನ್ನು ಬಹಿರಂಗಪಡಿಸುತ್ತಿಲ್ಲ ಮತ್ತು ನಿರ್ಬಂಧದ ಆದೇಶಗಳನ್ನು ಉಲ್ಲಂಘಿಸಿ ತಮ್ಮ ಮಕ್ಕಳಿಗೆ ವರ್ಗಾಯಿಸುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು.

2017 ರಲ್ಲಿ ಮಲ್ಯ ಅವರನ್ನು ನ್ಯಾಯಾಂಗ ನಿಂದನೆ ಅಪರಾಧಿ ಎಂದು ಪರಿಗಣಿಸಲಾಗಿತ್ತು ಮತ್ತು ನಂತರ ಅವರಿಗೆ ನೀಡಲಾಗುವ ಉದ್ದೇಶಿತ ಶಿಕ್ಷೆಯ ಕುರಿತು ಅವರನ್ನು ಕೇಳಲು ವಿಷಯವನ್ನು ಪಟ್ಟಿ ಮಾಡಲಾಗಿತ್ತು.

ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ತನ್ನ ಮಕ್ಕಳಿಗೆ 40 ದಶಲಕ್ಷ ಅಮೆರಿಕನ್‌ ಡಾಲರುಗಳನ್ನು ವರ್ಗಾವಣೆ ಮಾಡಿದ್ದರ ಸಂಬಂಧ ಸುಪ್ರೀಂಕೋರ್ಟ್‌ ನೀಡಿದ್ದ  2017ರ ತೀರ್ಪನ್ನು ನಿಂದಿಸಿದ ಮಲ್ಯ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿದ್ದರ ವಿರುದ್ಧ ಮಲ್ಯ ಸಲ್ಲಿಸಿದ್ದ ಮನವಿಯನ್ನು 2020 ರಲ್ಲಿ ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.

ಮಲ್ಯ ಅವರು ಮಾರ್ಚ್ 2016 ರಿಂದ ಇಂಗ್ಲೆಂಡಿನಲ್ಲಿದ್ದಾರೆ. ಅವರು 2017ರಂ ಏಪ್ರಿಲ್ 18 ರಂದು ಸ್ಕಾಟ್ಲೆಂಡ್ ಯಾರ್ಡ್ ಜಾರಿಗೊಳಿಸಿದ ಹಸ್ತಾಂತರ ವಾರಂಟ್ ಪ್ರಕರಣದಲ್ಲಿ ಜಾಮೀನಿನ ಮೇಲೆ ಇದ್ದಾರೆ.

Sunday, September 5, 2021

ನ್ಯಾಯಾಲಯಕ್ಕೆ ಸಾಧ್ಯವಾಗದ್ದು, ಪಂಚಾಯತಿಗೆ ಸಾಧ್ಯವಾಯಿತು..!

 ಈ ಗ್ರಾಮ ಪಂಚಾಯತಿಯಲ್ಲಿ ‘ಸರ್’  ‘ಮ್ಯಾಡಮ್’ ಪದ ಬಳಸುವಂತಿಲ್ಲ..

ನ್ಯಾಯಾಲಯಕ್ಕೆ ಸಾಧ್ಯವಾಗದ್ದು, ಪಂಚಾಯತಿಗೆ ಸಾಧ್ಯವಾಯಿತು..!

ಆರು ತಿಂಗಳ ಹಿಂದೆ ಸುಪ್ರೀಂಕೋರ್ಟಿನಲ್ಲಿ  ಭಾರತದ ಮುಖ್ಯ ನ್ಯಾಯಮೂರ್ತಿ  ಎಸ್ ಎ ಬೋಬಡೆ ಅವರು ಯುವ ವಕೀಲರೊಬ್ಬರು ತಮ್ಮನ್ನು ‘ಯುವರ್ ಆನರ್’ ಎಂಬುದಾಗಿ ಸಂಬೋಧಿಸಿದಾಗ ಸಿಟ್ಟಿಗೆದ್ದಿದ್ದರು.

‘ನಿಮ್ಮ ಮನಸ್ಸಿನಲ್ಲಿ ಏನಿದೆ? ನೀವು ಅಮೆರಿಕದ ಸುಪ್ರೀಂಕೋರ್ಟಿನಲ್ಲಿ ಇದ್ದೇನೆ ಅಂದುಕೊಂಡಿದ್ದೀರೋ ಅಥವಾ ಅಲ್ಲಿನ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಇದ್ದೇನೆ ಅಂದುಕೊಂಡಿದ್ದೀರೋ?’

ತತ್ ಕ್ಷಣವೇ ಕಾನೂನು ವಿದ್ಯಾರ್ಥಿಯಾಗಿದ್ದ ಯುವ ವಕೀಲರು  ನಾಲಿಗೆ ಕಚ್ಚಿಕೊಂಡರು. ‘ತಪ್ಪಾಯಿತು, ಕ್ಷಮಿಸಿ’ ಎಂದು ಕೇಳಿಕೊಂಡು ಯುವ ವಕೀಲರು ‘ಇನ್ನು ಮುಂದೆ  ‘ಮೈ ಲಾರ್ಡ್ಸ್ ಪದ ಬಳಸುತ್ತೇನೆ’ ಎಂದು ಉತ್ತರಿಸಿದರು.

‘ಏನಾದರೂ ಸರಿ. ನೀವು ಯಾವ ಪದ ಬಳಸುತ್ತೀರಿ ಎಂದೇ ನಾವು ಗಮನಿಸುತ್ತಿರುವುದಿಲ್ಲ, ಆದರೆ ತಪ್ಪು ಪದಗಳನ್ನು ಬಳಸಬೇಡಿ’ ಎಂದರು ಸಿಜೆಐ.

ಹಿಂದೆ, 2020ರ ಆಗಸ್ಟ್ ತಿಂಗಳಲ್ಲಿ ಕೂಡಾ ಇದೇ ರೀತಿ ನ್ಯಾಯಮೂರ್ತಿಗಳನ್ನು ಉದ್ದೇಶಿಸಿ ‘ಯುವರ್ ಆನರ್’ ಪದ ಬಳಸಿದಾಗ  ಸಿಜೆಐ ಬೋಬ್ಡೆ ಸಿಡಿಮಿಡಿಗೊಂಡಿದ್ದರು. ಆಗ ಕೂಡಾ  ‘ನೀವೇನು ಅಮೆರಿಕದ ಸುಪ್ರೀಂಕೋರ್ಟಿನ ಮುಂದೆ ಇದ್ದೀರೋ?’ ಎಂಬುದಾಗಿ ಅವರು ವಕೀಲರನ್ನು ಗದರಿದ್ದರು.

ಉನ್ನತ  ನ್ಯಾಯಾಲಯಗಳಲ್ಲಿ ಸಾಮಾನ್ಯವಾಗಿ ಬಳಸುವ  ‘ಮೈ ಲಾರ್ಡ್’, ‘ಯುವರ್ ಲಾರ್ಡ್ ಶಿಪ್’ ಮುಂತಾದ ಶಿಷ್ಟಾಚಾರದ ಪದಗಳು ನಮ್ಮ ದೇಶಕ್ಕೆ ಬ್ರಿಟಿಷ್ ಆಡಳಿತದ ಬಳುವಳಿಗಳು. ಈ ಪದಗಳ ಬಳಕೆಯನ್ನು ನಿಲ್ಲಿಸಬೇಕು ಎಂದು ಹಲವಾರು ವರ್ಷಗಳಿಂದಲೇ ಪ್ರಯತ್ನಗಳು ನಡೆಯುತ್ತಲೇ ಬಂದಿವೆ.

ಭಾರತದ ವಕೀಲರ ಸಂಘವಾದ ಬಾರ್ ಕೌನ್ಸಿಲ್ ಆಫ್ ಇಂಡಿಯಾಕ್ಕೆ  ಇಂತಹ ಪದಗಳ ಬಳಕೆ ಬಗ್ಗೆ ನಿಯಮಗಳನ್ನು ರೂಪಿಸಲು 1961ರ ವಕೀಲರ ಕಾಯ್ದೆಯ ಸೆಕ್ಷನ್ 49 (1)(ಸಿ) ಅಧಿಕಾರ ನೀಡಿದೆ.  2006ರಲ್ಲೇ  ಬಾರ್ ಕೌನ್ಸಿಲ್ ಆಫ್ ಇಂಡಿಯಾ , ‘ಮೈಲಾರ್ಡ್’ ‘ಯುವರ್ ಲಾರ್ಡ್ ಶಿಪ್’ ನಂತಹ ಪದಗಳನ್ನು  ಬಳಸಲು ಉತ್ತೇಜನ ನೀಡಬಾರದು ಎಂದು ನಿರ್ಣಯ ಕೈಗೊಂಡಿತ್ತು.

2014ರಲ್ಲಿ ಶಿವಸಾಗರ್ ತಿವಾರಿ ಎಂಬ ವಕೀಲರೊಬ್ಬರು, ಇಂತಹ ಪದಗಳು ದೇಶದ ಘನತೆಗೆ ಧಕ್ಕೆ ತರುತ್ತವೆ ಮತ್ತು ಇವು ಗುಲಾಮಿತನದ ಸಂಕೇತವಾದ್ದರಿಂದ ಅವುಗಳ ಬಳಕೆಯನ್ನು  ನಿಷೇಧಿಸಬೇಕು’ ಎಂದು ಸುಪ್ರೀಂಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಆದರೆ ಆದರೆ ನ್ಯಾಯಮೂರ್ತಿಗಳಾದ ಎಚ್.ಎಲ್. ದತ್ತು ಮತ್ತು ಬೋಬ್ಡೆ ಅವರ ಪೀಠವು ‘ಈ ಪದಗಳ ಬಳಕೆ ಎಂದಿಗೂ ಕಡ್ಡಾಯವಾಗಿಲ್ಲ’ ಎಂಬುದಾಗಿ ಹೇಳಿ ಅರ್ಜಿಯನ್ನು ತಿರಸ್ಕರಿಸಿತ್ತು.

‘ನ್ಯಾಯಾಲಯವನ್ನು ಗೌರವಯುತವಾಗಿ ಸಂಬೋಧಿಸಿ ಅಷ್ಟೆ. ನೀವು ‘ಸರ್’ ಎಂದರೂ ಒಪ್ಪುತ್ತೇವೆ, ‘ಯುವರ್ ಆನರ್’ ಎಂದರೂ  ಒಪ್ಪುತ್ತೇವೆ, ‘ಲಾರ್ಡ್ ಶಿಪ್’ ಎಂದು ಕರೆದರೂ ಒಪ್ಪುತ್ತೇವೆ.’ ಎಂದು ಪೀಠ ಹೇಳಿತ್ತು.

ಆದರೆ, 2019ರಲ್ಲಿ ರಾಜಸ್ಥಾನ ಹೈಕೋರ್ಟ್ ‘ಮೈಲಾರ್ಡ್’  ‘ಯುವರ್ ಲಾರ್ಡ್ ಶಿಪ್’ ಪದಗಳ ಬಳಕೆಯನ್ನು ನಿಷೇಧಿಸಿತ್ತು. ಸಂವಿಧಾನವು ಸಮಾನತೆಯನ್ನು ಪ್ರತಿಪಾದಿಸಿರುವಾಗ  ಇಂತಹ ಪದಗಳ ಬಳಕೆ ಸರಿಯಲ್ಲ ಎಂದು ರಾಜಸ್ಥಾನ ಹೈಕೋರ್ಟ್ ಸಾರಿತ್ತು.

ಆದರೂ ನ್ಯಾಯಾಲಯಗಳಲ್ಲಿ ಇಂತಹ ಪದಗಳ ಬಳಕೆ ನಿರಂತರವಾಗಿ ನಡೆಯುತ್ತಲೇ ಇದೆ.

ಬ್ರಿಟಿಷ್ ವಸಾಹತಿನ ಬಳುವಳಿ ಪದಗಳನ್ನು ನಿಷೇಧಿಸುವ ಬಗ್ಗೆ ನ್ಯಾಯಾಲಯಗಳೇ ಹೀಗೆ ದ್ವಂದ್ವದಲ್ಲಿ ಇರುವ ಹೊತ್ತಿನಲ್ಲಿ  ಕೇರಳದ ಪುಟ್ಟ ಗ್ರಾಮ ಪಂಚಾಯತಿಯೊಂದು ‘ಸರ್ ಮತ್ತು  ಮ್ಯಾಡಮ್’ ನಂತಹ ಬ್ರಿಟಿಷ್ ವಸಾಹತುಶಾಹಿಯ ಪದಗಳ ಬಳಕೆಯನ್ನು ನಿಷೇಧಿಸುವ ಮೂಲಕ  ಇಂತಹ ಪದಗಳ ಬಳಕೆಯನ್ನು ನಿಷೇಧಿಸಿದ ದೇಶದ ಮೊತ್ತ ಮೊದಲ ಗ್ರಾಮ ಪಂಚಾಯತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕೇರಳದ ಪಾಲಕ್ಕಾಡ್ ಜಿಲ್ಲೆಯ ಮಾಥುರ್ ಗ್ರಾಮ ಪಂಚಾಯತಿಯು 2021ರ ಆಗಸ್ಟ್ 31ರ ಮಂಗಳವಾರ  ‘ಸರ್ ಮತ್ತು ಮ್ಯಾಡಮ್’  ಪದಗಳ ಬಳಕೆಯನ್ನು ನಿಷೇಧಿಸುವ  ಚಾರಿತ್ರಿಕ ನಿರ್ಣಯವನ್ನು ಕೈಗೊಂಡು ಇತಿಹಾಸ  ಬರೆದಿದೆ.

16 ಸದಸ್ಯರ ಕಾಂಗ್ರೆಸ್ ಆಡಳಿತದ ಗ್ರಾಮ ಪಂಚಾಯಿತಿಯು ಈ ವಾರದ ಆರಂಭದಲ್ಲಿ ಅಂಗೀಕರಿಸಿದ ಸರ್ವಾನುಮತದ ನಿರ್ಣಯಕ್ಕೆ ಏಳು ಸಿಪಿಐ (ಎಂ) ನಾಮನಿರ್ದೇಶಿತರು ಮತ್ತು ಒಬ್ಬ ಬಿಜೆಪಿ ಸದಸ್ಯರ ಬೆಂಬಲ ಲಭಿಸಿದೆ. ಈ ವಿಚಾರದಲ್ಲಿ ಪಕ್ಷಗಳು ಯಾವುದೇ ರಾಜಕೀಯವನ್ನೂ ಎಳೆದುತರಲಿಲ್ಲ ಎಂಬುದೇ ವಿಶೇಷ.

ಸಾಮಾನ್ಯ ಜನರು, ಜನಪ್ರತಿನಿಧಿಗಳು ಮತ್ತು ನಾಗರಿಕ ಸಂಸ್ಥೆಯ ಅಧಿಕಾರಿಗಳ ನಡುವಣ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ  ಇಂತಹ ಕ್ರಮ ಕೈಗೊಂಡಿರುವ ಮಾಥುರ್ ಗ್ರಾಮ ಪಂಚಾಯತಿ ಇದನ್ನು ಪಂಚಾಯತಿಯ ಪ್ರಕಟಣಾ ಫಲಕದಲ್ಲಿ ಅಂಟಿಸುವ ಮೂಲಕ ಜಾರಿಗೂ ತಂದಿದೆ.

ಜನರು, ಪಂಚಾಯತಿನ ಯಾವುದೇ ಅಧಿಕಾರಿಯನ್ನು ಉದ್ದೇಶಿಸಿ ‘ಸರ್’ ಅಥವಾ ‘ಮ್ಯಾಡಮ್’ ಎಂಬುದಾಗಿ ಸಂಬೋಧಿಸಬೇಕಾಗಿಲ್ಲ.  ಅಧಿಕಾರಿಯ ಹುದ್ದೆ ಅಥವಾ ಹೆಸರಿನಿಂದಲೇ ಸಂಬೋಧಿಸಬಹುದು. ಅಧಿಕಾರಿಗಳು ವಯಸ್ಸಾದವರೋ  ಹಿರಿಯರೋ ಆಗಿದ್ದರೆ ಮಲಯಾಳಂನಲ್ಲಿ ‘ಚೇತಾ’/ ‘ಚೇತನ್’ (ಅಣ್ಣ) ಅಥವಾ ‘ಚೇಚಿ’ (ಅಕ್ಕ) ಇಂತಹ ಸ್ನೇಹಪರ ಪದಗಳನ್ನು ಬಳಸಬಹುದು.

‘ಸರ್’ ಅಥವಾ ‘ಮ್ಯಾಡಮ್’ ಪದ ಬಳಸದ್ದಕ್ಕಾಗಿ ಸೇವೆ ನೀಡಲು ಯಾರಾದರೂ ನಿರಾಕರಿಸಿದರೆ ಜನರು ಪಂಚಾಯತ್ ಅಧ್ಯಕ್ಷರು ಅಥವಾ ಕಾರ್ಯದರ್ಶಿಗೆ ದೂರು ನೀಡಬಹುದು.

ಪಂಚಾಯತಿ ನಿರ್ಣಯದ ಪರಿಣಾಮವಾಗಿ ಈಗ ಅಲ್ಲಿನ  ಅಧಿಕಾರಿಗಳು ತಮ್ಮ ಮೇಜಿನ ಮೇಲೆ ತಮ್ಮ ಹೆಸರು, ಹುದ್ದೆಗಳ ಫಲಕಗಳನ್ನೂ ಇಡುತ್ತಿದ್ದಾರೆ.

'ಸರ್' ಮತ್ತು 'ಮೇಡಂ' ಗೆ ಪರ್ಯಾಯ ಪದಗಳನ್ನು ನೀಡುವಂತೆ ಪಂಚಾಯತಿಯು ಅಧಿಕೃತ ಭಾಷಾ ಇಲಾಖೆಯನ್ನು  ಕೂಡಾ  ಕೋರಿದೆ.

ಪ್ರಜಾಪ್ರಭುತ್ವದಲ್ಲಿ ನಾಗರಿಕರೇ ಪ್ರಭುಗಳು. ನಾವೆಲ್ಲರೂ ಅವರಿಗೆ ಸೇವೆ ಒದಗಿಸುವ ಸೇವಕರು. ನಮ್ಮ ಸೇವೆ ಪಡೆಯಲು ಜನರು ನಮ್ಮನ್ನು ಅಂಗಲಾಚುವಂತೆ ಆಗಬಾರದು. ಇದಕ್ಕಾಗಿ, ಪಂಚಾಯತ್ ಪ್ರಸ್ತುತ 'ಅಪೇಕ್ಷಾ ನಮೂನೆ' (ಅರ್ಜಿ ನಮೂನೆ) ಯನ್ನು 'ಅವಕಾಶ ಪತ್ರಿಕೆ' (ಹಕ್ಕು ಪ್ರಮಾಣಪತ್ರ) ಆಗಿ ಬದಲಾಯಿಸಲೂ ಪಂಚಾಯತಿಯು ತೀರ್ಮಾನಿಸಿದೆ ಎಂದೂ ಪಂಚಾಯತಿಯ ಉಪಾಧ್ಯಕ್ಷರು ತಿಳಿಸಿದ್ದಾರೆ.

ಎಂತಹ ಅನುಕರಣೀಯ ಗ್ರಾಮ ಪಂಚಾಯತಿ ಇದು ಅಲ್ಲವೇ?

ವಿಡಿಯೋ ನೋಡಲು ಕೆಳಗೆ ಕ್ಲಿಕ್ ಮಾಡಿರಿ:


 -ನೆತ್ರಕೆರೆ ಉದಯಶಂಕರ


Friday, February 5, 2021

ರೈತ ಪ್ರತಿಭಟನೆಯ ‘ಟೂಲ್ ಕಿಟ್’ ಹಿಂದೆ ಖಲಿಸ್ತಾನಿ.. !

 ರೈತ ಪ್ರತಿಭಟನೆಯ ‘ಟೂಲ್ ಕಿಟ್’ ಹಿಂದೆ ಖಲಿಸ್ತಾನಿ.. !

ನವದೆಹಲಿ: ಹದಿಹರೆಯದ ಸ್ವೀಡಿಷ್ ಪರಿಸರ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್ ಅವರು ಟ್ವೀಟ್ ಮಾಡಿ ನಂತರ ಅಳಿಸಿರುವ ರೈತರ ಪ್ರತಿಭಟನೆಯ ವಿವಾದಾತ್ಮಕ ಟೂಲ್ಕಿಟ್ ನ ಸೃಷ್ಟಿಕರ್ತನನ್ನು ಮೊ ಧಲಿವಾಲ್ ಎಂದು ಗುರುತಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಮೂಲಗಳ ಪ್ರಕಾರ, ಧಲಿವಾಲ್ ಸ್ಥಾಪಿಸಿದ ಪೊಯೆಟಿಕ್ ಜಸ್ಟೀಸ್ ಫೌಂಡೇಶನ್, ಗ್ರೇಟಾ ಥನ್ಬರ್ಗ್ಗಾಗಿ ರೈತರ ಪ್ರತಿಭಟನೆಯ ಕುರಿತು ಟೂಲ್ಕಿಟ್ ರಚಿಸಿತ್ತು.

ಮೊ ಧಲಿವಾಲ್, ಸ್ಕೈರಾಕೆಟ್ ಎಂಬ ವ್ಯಾಂಕೋವರ್ ಮೂಲದ ಡಿಜಿಟಲ್ ಬ್ರ್ಯಾಂಡಿಂಗ್ ಸೃಜನಶೀಲ ಏಜೆನ್ಸಿಯ ಕಾರ್ಯತಂತ್ರದ ಸ್ಥಾಪಕ ಮತ್ತು ನಿರ್ದೇಶಕ. ಅವರ ಸಾಮಾಜಿಕ ಮಾಧ್ಯಮ ಪ್ರೊಫೈಲ್ಗಳ ಪ್ರಕಾರ, ಅವರು ಬ್ರಿಟಿಷ್ ಕೊಲಂಬಿಯಾದ ಫ್ರೇಸರ್ ವ್ಯಾಲಿ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿದ್ದು, ಅಲ್ಲಿಂದ ತಮ್ಮ ಎರಡು ವರ್ಷಗಳ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಡಿಪ್ಲೊಮಾ ಕೋರ್ಸ್ ಮಾಡಿದ್ದರು.

ವಾರದ ಆರಂಭದಲ್ಲಿ ಗ್ರೇಟಾ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡ ವಿವಾದಾತ್ಮಕಟೂಲ್ಕಿಟ್ನ್ನು ರಚಿಸಿದ ಆರೋಪಕ್ಕೆ ಗುರಿಯಾಗಿರುವ  ಪೊಯೆಟಿಕ್ ಜಸ್ಟೀಸ್ ಫೌಂಡೇಶನ್ನಿನ  ಸಹ-ಸಂಸ್ಥಾಪಕ ಧಲಿವಾಲ್.

ಧಲಿವಾಲ್ ಈ ರೀತಿ ಸುದ್ದಿಯಾಗಿರುವುದು ಇದೇ ಮೊದಲಲ್ಲ. ಜಗ್ಮೀತ್ ಸಿಂಗ್ ಅವರ ೨೦೧೭ ಹೊಸ ಡೆಮಾಕ್ರಟಿಕ್ ಪಕ್ಷದ ನಾಯಕತ್ವ ಅಭಿಯಾನಕ್ಕಾಗಿಪ್ರೀತಿ ಮತ್ತು ಧೈರ್ಯಎಂಬ ಘೋಷಣೆಯೊಂದಿಗೆ ಬಂದಾಗ ಕೆನಡಾದಲ್ಲಿ ಧಲಿವಾಲ್ ಹೆಸರು ಅದರ ಹಿಂದೆ ಕೇಳಿ ಬಂದಿತ್ತು.

ಇದಕ್ಕೂ ಮುನ್ನ ೨೦೨೦ ಸೆಪ್ಟೆಂಬರಿನಲ್ಲಿ ಧಲಿವಾಲ್ ತಮ್ಮ ಫೇಸ್ಬುಕ್ ಖಾತೆಯಲ್ಲಿ  ‘ನಾನು ಖಲಿಸ್ತಾನಿ. ನನ್ನ ಬಗ್ಗೆ ಇದು ನಿಮಗೆ ತಿಳಿಯದಿರಬಹುದು.  ಏಕೆಂದರೆ ಖಲಿಸ್ತಾನ್ ಒಂದು ಕಲ್ಪನೆ. ಖಲಿಸ್ತಾನ್ ಒಂದು ಜೀವಂತ, ಉಸಿರಿರುವ ಚಳುವಳಿಯಾಗಿದೆಎಂದು ಬರೆದಿದ್ದರು.೨೦೨೦ ಸೆಪ್ಟೆಂಬರ್ ೧೭ ರಂದು ಒಟ್ಟಾವಾ ಮೂಲದ ಸಾರ್ವಜನಿಕ ನೀತಿ ಥಿಂಕ್-ಟ್ಯಾಂಕ್ ಮ್ಯಾಕ್ಡೊನಾಲ್ಡ್-ಲಾರಿಯರ್ ಇನ್ಸ್ಟಿಟ್ಯೂಟ್ ವಿರುದ್ಧಖಲಿಸ್ತಾನ್:ಪಾಕಿಸ್ತಾನಕ್ಕಾಗಿ ಒಂದು ಯೋಜನೆ’(ಖಲಿಸ್ತಾನ್; ಎ ಪ್ರೊಜೆಕ್ಟ್ ಫಾರ್ ಪಾಕಿಸ್ತಾನ್’ ಎಂಬ ಶೀರ್ಷಿಕೆಯ ವರದಿಯನ್ನು ಪ್ರಕಟಿಸಲು ಅರ್ಜಿಗೆ ಸಹಿ ಹಾಕುವಂತೆ ಜನರನ್ನು ಒತ್ತಾಯಿಸಿದ್ದ ಮೊ ಧಲಿವಾಲ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದ ಮಾತುಗಳು ಮೇಲಿನವು ಎಂದು ವರದಿ ತಿಳಿಸಿದೆ.

Monday, January 25, 2021

ಡಾ. ಬಿಎಂ ಹೆಗ್ಡೆ, ಎಸ್ ಪಿಬಿ, ಶಿಂಜೋ ಅಬೆ, ಕಂಬಾರ: ಪದ್ಮ ಗೌರವ

 ಡಾ. ಬಿಎಂ ಹೆಗ್ಡೆ, ಎಸ್ ಪಿಬಿ, ಶಿಂಜೋ ಅಬೆ, ಕಂಬಾರ: ಪದ್ಮ ಗೌರವ


ನವದೆಹಲಿ: ೨೦೨೧ನೇ ಸಾಲಿನ ಪದ್ಮ ಪ್ರಶಸ್ತಿಗಳಿಗೆ ಡಾ. ಬಿಎಂ ಹೆಗ್ಡೆ, ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ, ಜಪಾನ್  ಪ್ರಧಾನಿ ಶಿಂಜೋ ಅಬೆ, ಸಾಹಿತಿ ಚಂದ್ರ ಶೇಖರ ಕಂಬಾರ ಸೇರಿದಂತೆ ಒಟ್ಟು 119 ಮಂದಿ 2021ರ ಸಾಲಿನ ‘ಪದ್ಮ’ ಗೌರವಕ್ಕೆ ಆಯ್ಕೆಯಾಗಿದ್ದಾರೆ.

2021 ಜನವರಿ 25ರ ಸೋಮವಾರ ‘ಪದ್ಮ’ ಪುರಸ್ಕೃತರ ಪಟ್ಟಿ ಬಿಡುಗಡೆಯಾಗಿದ್ದು ಏಳು ಜನರಿಗೆ ಪದ್ಮವಿಭೂಣ, ೧೦ ಜನರಿಗೆ ಪದ್ಮಭೂಷಣ ಹಾಗೂ ೧೦೨ ಜನರಿಗೆ ಪದ್ಮಶ್ರೀ ಪ್ರಶಸ್ತಿಯ ಗೌರವ ಲಭಿಸಿದೆ.

ಪದ್ಮವಿಭೂಷಣ ಪ್ರಶಸ್ತಿ

* ಜಪಾನಿನ ಮಾಜಿ ಪ್ರಧಾನಿ ಶಿಂಜೊ ಅಬೆ

* ವೈದ್ಯಕೀಯ ಕ್ಷೇತ್ರದಲ್ಲಿ ಕರ್ನಾಟಕದ ಡಾ.ಬಿ.ಎಂ.ಹೆಗ್ಡೆ (ಡಾ.ಬೆಳ್ಳೆ ಮೋನಪ್ಪ ಹೆಗ್ಡೆ)

* ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ (ಮರಣೋತ್ತರ)

* ವಿಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರದಲ್ಲಿ ನರಿಂದರ್ ಸಿಂಗ್ ಕಪಾನಿ (ಮರಣೋತ್ತರ)-ಅಮೆರಿಕ

* ಆಧ್ಯಾತ್ಮ: ಮೌಲಾನಾ ವಹೀದುದ್ದೀನ್ ಖಾನ್-ದೆಹಲಿ

* ಪುರಾತತ್ವ ಶಾಸ್ತ್ರ: ಬಿ.ಬಿ.ಲಾಲ್-ದೆಹಲಿ

* ಕಲೆ: ಸುದರ್ಶನ್ ಸಾಹೋ-ಒಡಿಶಾ

ಪದ್ಮಭೂಷಣ ಪ್ರಶಸ್ತಿ

* ಕಲೆ: ಕೃಷ್ಣನ್ ನಾಯರ್ ಶಾಂತಾಕುಮಾರಿ ಚಿತ್ರಾ-ಕೇರಳ

* ಸಾರ್ವಜನಿಕ ಕ್ಷೇತ್ರ: ತರುಣ್ ಗೊಗೊಯ್ (ಮರಣೋತ್ತರ)-ಅಸ್ಸಾಂ

* ಸಾಹಿತ್ಯ ಮತ್ತು ಶಿಕ್ಷಣ: ಚಂದ್ರಶೇಖರ ಕಂಬಾರ- ಕರ್ನಾಟಕ

* ಸಾರ್ವಜನಿಕ ಕ್ಷೇತ್ರ: ಸುಮಿತ್ರಾ ಮಹಾಜನ್-ಮಧ್ಯಪ್ರದೇಶ

* ನಾಗರಿಕ ಸೇವೆ: ನೃಪೇಂದ್ರ ಮಿಶ್ರಾ-ಉತ್ತರ ಪ್ರದೇಶ

* ಸಾರ್ವಜನಿಕ ಕ್ಷೇತ್ರ: ರಾಮ್ ವಿಲಾಸ್ ಪಾಸ್ವಾನ್(ಮರಣೋತ್ತರ)- ಬಿಹಾರ

* ಸಾರ್ವಜನಿಕ ಕ್ಷೇತ್ರ: ಕೇಶುಭಾಯ್ ಪಟೇಲ್(ಮರಣೋತ್ತರ)-ಗುಜರಾತ್

* ಆಧ್ಯಾತ್ಮ: ಕಲ್ಬೆ ಸಾದಿಕ್(ಮರಣೋತ್ತರ)-ಉತ್ತರ ಪ್ರದೇಶ

* ವಾಣಿಜ್ಯ ಮತ್ತು ಕೈಗಾರಿಕೆ: ರಜನಿಕಾಂತ್ ದೇವಿದಾಸ್ ಶ್ರಾಫ್- ಮಹಾರಾಷ್ಟ್ರ

* ಸಾರ್ವಜನಿಕ ಕ್ಷೇತ್ರ: ತರ್ಲೋಚನ್ ಸಿಂಗ್- ಹರಿಯಾಣ

ಪದ್ಮಶ್ರೀ ಪ್ರಶಸ್ತಿ ಪಡೆದ ಕರ್ನಾಟಕದವರು

* ಮಾತಾ ಬಿ.ಮಂಜಮ್ಮ ಜೋಗತಿ- ಕಲೆ

* ರಂಗಸ್ವಾಮಿ ಲಕ್ಷ್ಮಿನಾರಾಯಣ ಕಶ್ಯಪ್- ಸಾಹಿತ್ಯ ಮತ್ತು ಶಿಕ್ಷಣ

* ಕೆ. ವೈ. ವೆಂಕಟೇಶ್- ಕ್ರೀಡೆ

Advertisement