Showing posts with label Nobel Award. Show all posts
Showing posts with label Nobel Award. Show all posts

Tuesday, October 4, 2022

2022ರ ಭೌತಶಾಸ್ತ್ರ ನೊಬೆಲ್‌ ಪ್ರಶಸ್ತಿ ಮೂವರು ವಿಜ್ಞಾನಿಗಳಿಗೆ

 2022ರ ಭೌತಶಾಸ್ತ್ರ ನೊಬೆಲ್‌ ಪ್ರಶಸ್ತಿ ಮೂವರು ವಿಜ್ಞಾನಿಗಳಿಗೆ

ಸ್ಟಾಕ್‌ಹೋಮ್‌:  2022ನೇ ಸಾಲಿನ ಭೌತಶಾಸ್ತ್ರ ನೊಬೆಲ್‌ ಪ್ರಶಸ್ತಿಯನ್ನು ಮೂವರು ವಿಜ್ಞಾನಿಗಳಿಗೆ ೨೦೨೨ ಅಕ್ಟೋಬರ್‌ ೪ರ ಮಂಗಳವಾರ ಘೋಷಿಸಲಾಯಿತು.

ಸಂಯೋಜಿತ ಪ್ರೋಟಾನ್‌ ಹಾಗೂ ಕ್ವಾಂಟಮ್‌ಗೆ ಸಂಬಂಧಿಸಿದ ಮಹತ್ವದ ಸಂಶೋಧನೆಗಳಿಗಾಗಿ ಈ ಮೂವರು ವಿಜ್ಞಾನಿಗಳನ್ನು ಭೌತಶಾಸ್ತ್ರ ನೊಬೆಲ್‌ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಿಸಲಾಯಿತು.

ಲೈನ್ ಆಸ್ಪೆಕ್ಟ್ (Alain Aspect),ಜಾನ್ ಎಫ್ ಕ್ಲೌಸರ್ (John F Clauser) ಮತ್ತು ಆಂಟನ್ ಝೈಲಿಂಗರ್ (Anton Zeilinger) ಅವರು ಪ್ರಶಸ್ತಿಗೆ ಅರ್ಹರಾಗಿದ್ದಾರೆ ಎಂದು ದಿ ರಾಯಲ್  ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್‌  ಹೇಳಿತು.

 

ಸ್ವೀಡನ್ನಿನ ಸ್ವಾಂಟೆ ಪಾಬೊಗೆ 2022 ರ ನೊಬೆಲ್‌ ಔಷಧ ಪ್ರಶಸ್ತಿ

 ಸ್ವೀಡನ್ನಿನ ಸ್ವಾಂಟೆ ಪಾಬೊಗೆ 2022ನೊಬೆಲ್‌  ಔಷಧ ಪ್ರಶಸ್ತಿ

ಸ್ಟಾಕ್‌ ಹೋಮ್‌ (ಸ್ವೀಡನ್):‌ ಸ್ವೀಡನ್ನಿನ ಸ್ವಾಂಟೆ ಪಾಬೊ ಅವರಿಗೆ 2022 ರ ಶರೀರಶಾಸ್ತ್ರ ಅಥವಾ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ೨೦೨೨ ಅಕ್ಟೋಬರ್‌ ೨ರ ಸೋಮವಾರ ಘೋಷಿಸಲಾಯಿತು.

ನೊಬೆಲ್ ಸಮಿತಿಯ ಕಾರ್ಯದರ್ಶಿ ಥಾಮಸ್ ಪರ್ಲ್‌ಮನ್ ಸೋಮವಾರ ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿರುವ ಕರೋಲಿನ್ಸ್ಕಾ ಇನ್‌ಸ್ಟಿಟ್ಯೂಟ್‌ನಲ್ಲಿ ಪ್ರಶಸ್ತಿ ವಿಜೇತರ ಹೆಸರನ್ನು ಘೋಷಿಸಿದರು.

'ಅಳಿವಿನಂಚಿನಲ್ಲಿರುವ ಹೋಮಿನಿನ್‌ಗಳು ಮತ್ತು ಮಾನವ ವಿಕಾಸದ ಜೀನೋಮ್‌ಗಳಿಗೆ ಸಂಬಂಧಿಸಿದ ಆವಿಷ್ಕಾರಗಳಿಗಾಗಿ' ಈ ಪ್ರಶಸ್ತಿಗೆ ಪಾಬೋ ಅವರನ್ನು ಆಯ್ಕೆ ಮಾಡಲಾಗಿದೆ.  ಅವರ ಕೆಲಸವು ನಾವು, ಮನುಷ್ಯರು ಹೇಗೆ ವಿಕಸನಗೊಂಡಿದ್ದೇವೆ ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡಿದೆ ಎಂದು ಪರ್ಲ್‌ ಮನ್‌ ಹೇಳಿದರು..

ನೊಬೆಲ್ ಪ್ರಶಸ್ತಿ ಘೋಷಣೆಯ ಒಂದು ವಾರದ ಅವಧಿಯ ಪ್ರಾರಂಭದಲ್ಲಿ ವೈದ್ಯಕೀಯ ಪ್ರಶಸ್ತಿಯನ್ನು ಮೊದಲು ಈದಿನ ಘೋಷಿಸಲಾಯಿತು. ಮಂಗಳವಾರ, ಭೌತಶಾಸ್ತ್ರ ಕ್ಷೇತ್ರದಲ್ಲಿನ ಸಾಧನೆಗಳಿಗಾಗಿ, ಬುಧವಾರ  ರಸಾಯನಶಾಸ್ತ್ರ, ಗುರುವಾರ ಸಾಹಿತ್ಯ, ಶುಕ್ರವಾರ ನೊಬೆಲ್‌ ಶಾಂತಿ ಪ್ರಶಸ್ತಿ ಹಾಗೂ ಅಕ್ಟೋಬರ್‌ 10೦ರಂದು ಅರ್ಥಶಾಸ್ತ್ರಕ್ಕೆ ಕೊಡುಗೆ ನೀಡಿದ್ದಕ್ಕಾಗಿ ನೊಬೆಲ್ ಪ್ರಶಸ್ತಿ ವಿಜೇತರನ್ನು ಘೋಷಿಸಲಾಗುವುದು.

 2021 ರಲ್ಲಿ ಡೇವಿಡ್ ಜೂಲಿಯಸ್ ಮತ್ತು ಆರ್ಡೆಮ್ ಪಟಪೌಟಿಯನ್ ಅವರಿಗೆ ವೈದ್ಯಕೀಯ ಕ್ಷೇತ್ರದ ಕೊಡುಗೆಗಾಗಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿತ್ತು. ಮಾನವ ದೇಹವು ತಾಪಮಾನ ಮತ್ತು ಸ್ಪರ್ಶವನ್ನು ಹೇಗೆ ಗ್ರಹಿಸುತ್ತದೆ ಎಂಬುದರ ಸಂಶೋಧನೆಗಳಿಗಾಗಿ ಅವರಿಗೆ ಈ ಪ್ರಶಸ್ತಿ ಲಭಿಸಿತ್ತು.

Monday, October 12, 2020

ಅಮೆರಿಕದ ಪಾಲ್, ರಾಬರ್ಟ್‌ಗೆ ಅರ್ಥಶಾಸ್ತ್ರ ನೊಬೆಲ್

 ಅಮೆರಿಕದ ಪಾಲ್, ರಾಬರ್ಟ್‌ಗೆ ಅರ್ಥಶಾಸ್ತ್ರ ನೊಬೆಲ್

ಸ್ಟಾಕ್ ಹೋಮ್: ಹರಾಜು ಸಿದ್ಧಾಂತದ ಸುಧಾರಣೆ ಮತ್ತು ಹೊಸ ಹರಾಜು ಸ್ವರೂಪಗಳ ಆವಿಷ್ಕಾರಗಳಿಗಾಗಿ ೨೦೨೦ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಗೆ ಅರ್ಥಶಾಸ್ತ್ರಜ್ಞರಾದ ಪಾಲ್ ಆರ್.ಮಿಲ್ಗ್ರೋಮ್ ಮತ್ತು ರಾಬರ್ಟ್ ಬಿ.ವಿಲ್ಸನ್ ಅವರು ಭಾಜನರಾಗಿದ್ದಾರೆ.

೨೦೨೦ ಅಕ್ಟೋಬರ್ ೧೨ ರ ಸೋಮವಾರ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ರಧಾನ ಕಾರ್ಯದರ್ಶಿ ಪ್ರೊಫೆಸರ್ ಗೋರನ್ ಕೆ. ಹ್ಯಾನ್ಸನ್ ಅವರು ಅರ್ಥಶಾಸ್ತ್ರ ಪ್ರಶಸ್ತಿಯನ್ನು ಘೋಷಿಸಿದ್ದು, ಅದನ್ನು ಟ್ವಿಟ್ಟರಿನಲ್ಲಿ ಪ್ರಕಟಿಸಲಾಯಿತು.

ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ ವಿಜೇತರನ್ನು ಟ್ವಿಟ್ಟರಿನಲ್ಲಿ ಘೋಷಿಸಿರುವ ನೊಬೆಲ್ ಪ್ರಶಸ್ತಿ ಸಮಿತಿಯು, ಆಲ್ಫ್ರೆಡ್ ನೊಬೆಲ್ ಅವರ ಸ್ಮರಣಾರ್ಥ ನೀಡಲಾಗುವ ೨೦೨೦ನೇ ಅರ್ಥಶಾಸ್ತ್ರದ ಸ್ವೆರಿಜಸ್ ರಿಕ್ಸ್ ಬ್ಯಾಂಕ್ ಪ್ರಶಸ್ತಿಗೆ ಪಾಲ್ ಆರ್. ಮಿಲ್ಗ್ರೋಮ್ ಮತ್ತು ರಾಬರ್ಟ್ ಬಿ.ವಿಲ್ಸನ್ ಅವರು ಪಾತ್ರರಾಗಿದ್ದಾರೆ ಎಂದು ಹೇಳಿತು.

ನಮ್ಮ ಅನುದಿನದ ಜೀವನದಲ್ಲಿ ಹರಾಜು ಒಂದು ಭಾಗವಾಗಿದೆ. ಹರಾಜು ಸಿದ್ಧಾಂತವನ್ನು ಸುಧಾರಿಸಿರುವ ಮತ್ತು ಹೊಸ ಹರಾಜು ಮಾದರಿಗಳನ್ನು ಅನ್ವೇಷಿಸಿರುವ ಅರ್ಥಶಾಸ್ತ್ರಜ್ಞರಾದ ಪಾಲ್ ಮಿಲ್ಗ್ರೋಮ್ ಮತ್ತು ರಾಬರ್ಟ್ ವಿಲ್ಸನ್ ಅವರು ಸಾಧನೆಗಾಗಿ ನೊಬೆಲ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ ಎಂದು ನೊಬೆಲ್ ಸಮಿತಿ ಹೇಳಿತು.

ಇಬ್ಬರು ಅರ್ಥಶಾಸ್ತ್ರಜ್ಞರು ಅನ್ವೇಷಿಸಿರು ಹೊಸ ಹರಾಜು ಮಾದರಿUಳು ವಿಶ್ವಾದ್ಯಂತ ಮಾರಾಟಗಾರರು, ಕೊಳ್ಳುವವರು ಮತ್ತು ತೆರಿಗೆ ಪಾವತಿದಾರರಿಗೆ ಅನುಕೂಲ ಮಾಡಿಕೊಟ್ಟಿವೆ ಎಂದು ಪ್ರಶಸ್ತಿ ಸಮಿತಿ ಹೇಳಿದೆ.

೧೯೬೯ರಿಂದ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಇದುವರೆಗೂ ೫೧ ಬಾರಿ ಪ್ರಶಸ್ತಿಯನ್ನು ಅರ್ಥಶಾಸ್ತ್ರ ವಿಭಾಗದಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗಿದೆ.

ರಾಬರ್ಟ್ ವಿಲ್ಸನ್, ತರ್ಕಬದ್ಧ ಬಿಡ್ದಾರರು ಸಾಮಾನ್ಯ ಮೌಲ್ಯದ ತಮ್ಮದೇ ಆದ ಅತ್ಯುತ್ತಮ ಅಂದಾಜಿಗಿಂತ ಕಡಿಮೆ ಏಕೆ ಬಿಡ್ ಮಾಡುತ್ತಾರೆ ಎಂಬುದನ್ನು ತೋರಿಸಿದ್ದಾರೆ. ಇನ್ನು, ಪಾಲ್ ಮಿಲ್ಗ್ರೋಮ್ ಹರಾಜಿಗೆ ಸಂಬಂಧಪಟ್ಟಂತೆ ಸಾಮಾನ್ಯ ಸಿದ್ಧಾಂತ ರೂಪಿಸಿದ್ದಾರೆ ಎಂದು ಪ್ರಶಸ್ತಿ ಸಮಿತಿ ಹೇಳಿದೆ.

ಜಾಗತಿಕ ಮಟ್ಟದಲ್ಲಿ ಬಡತನ ಹೋಗಲಾಡಿಸಲು ನಡೆಸಿದ ಸಂಶೋಧನೆಗಾಗಿ ಕಳೆದ ವರ್ಷವೂ ಮೂವರು ಅಮೆರಿಕದ ಅರ್ಥಶಾಸಜ್ಞರಿಗೆ ಅರ್ಥಶಾಸದ ನೊಬೆಲ್ ಪ್ರಶಸ್ತಿ ದೊರಕಿತ್ತು.

೧೯೪೮ರಲ್ಲಿ ಅಮೆರಿಕದ ಡೆಟ್ರಾಯಿಟ್‌ನಲ್ಲಿ ಜನಿಸಿದ ಪಾಲ್ ಆರ್. ಮಿಲ್ಗ್ರೋಮ್, ೧೯೭೯ರಲ್ಲಿ ಅಮೇರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದರು. ಅವರು ಅಮೇರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯzಲ್ಲಿ ಮಾನವಿಕ ಮತ್ತು ವಿಜ್ಞಾನ ಪ್ರಾಧ್ಯಾಪಕರಾಗಿದ್ದಾರೆ.

ಅಮೆರಿಕದ ಜಿನೀವಾದಲ್ಲಿ ೧೯೩೭ರಲ್ಲಿ ಜನಿಸಿದ ರಾಬರ್ಟ್ ಬಿ. ವಿಲ್ಸನ್ ೧೯೬೩ರಲ್ಲಿ ಅಮೇರಿಕದ ಕೇಂಬಿಜ್‌ನ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಡಿ.ಬಿ.. ಪಡೆದರು. ಅಮೆರಿಕದ ಸ್ಟ್ಯಾನ್ಫೋರ್ಡ್ ವಿಶ್ವ ವಿದ್ಯಾಲಯದಲ್ಲಿ ಮ್ಯಾನೇಜ್ ಮೆಂಟ್ ಪ್ರಾಧ್ಯಾಪಕರಾಗಿದ್ದಾರೆ.

ಪ್ರಶಸ್ತಿ ಮೊತ್ತ ೧೦ ಮಿಲಿಯನ್ ಸ್ವೀಡಿಷ್ ಕ್ರೋನರ್‌ನ್ನು ಪ್ರಶಸ್ತಿ ವಿಜೇತರು ಹಂಚಿಕೊಳ್ಳಲಿದ್ದು, ಪ್ರಶಸ್ತಿಯು ನಗದು ಹಾಗೂ ಚಿನ್ನದ ಫಲಕವನ್ನು ಒಳಗೊಂಡಿದೆ. ಅರ್ಥಶಾಸ್ತ್ರದ ನೊಬೆಲ್ ಘೋಷಣೆಯೊಂದಿಗೆ ಸಾಲಿನ ನೊಬೆಲ್ ಪುರಸ್ಕಾರಗಳ ಸರಣಿ ಅಂತ್ಯಗೊಂಡಿದೆ.



ಜಿನೋಮ್ ಎಡಿಟಿಂಗ್: ಇಬ್ಬರು ಮಹಿಳಾ ವಿಜ್ಞಾನಿಗಳಿಗೆ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿ

ಕಪ್ಪು ಕುಳಿಗಳ ಬಗ್ಗೆ ಅರಿವು: 3 ವಿಜ್ಞಾನಿಗಳಿಗೆ
ಭೌತಶಾಸ್ತ್ರ ನೊಬೆಲ್ ಪ್ರಶಸ್ತಿ


ವೈದ್ಯಕೀಯ ನೊಬೆಲ್ ಪ್ರಶಸ್ತಿ ಅಮೆರಿಕ, ಬ್ರಿಟನ್ ವಿಜ್ಞಾನಿಗಳಿಗೆ

Friday, October 9, 2020

ವಿಶ್ವ ಆಹಾರ ಯೋಜನೆಗೆ ೨೦೨೦ರ ನೊಬೆಲ್ ಶಾಂತಿ ಪ್ರಶಸ್ತಿ

 ವಿಶ್ವ ಆಹಾರ ಯೋಜನೆಗೆ ೨೦೨೦ರ ನೊಬೆಲ್ ಶಾಂತಿ ಪ್ರಶಸ್ತಿ

ಸ್ಟಾಕ್ ಹೋಮ್: ೨೦೨೦ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಗೆ ವಿಶ್ವ ಸಂಸ್ಥೆಯ ಭಾಗವಾಗಿರುವ ವಿಶ್ವ ಆಹಾರ ಯೋಜನೆಯನ್ನು (ಡಬ್ಲ್ಯುಎಫ್ಪಿ) 2020 ಅಕ್ಟೋಬರ್ 09ರ ಶುಕ್ರವಾರ ಆಯ್ಕೆ ಮಾಡಲಾಯಿತು.

ಹಸಿವು ನೀಗಿಸುವ ನಿಟ್ಟಿನಲ್ಲಿ ಡಬ್ಲ್ಯುಎಫ್ಪಿ ನಡೆಸಿರುವ ಕಾರ್ಯಕ್ರಮಗಳು, ಪ್ರಯತ್ನಗಳನ್ನು ಪರಿಗಣಿಸಿ ನೊಬೆಲ್ ಸಮಿತಿಯು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಘರ್ಷಣೆ ಪೀಡಿತ ಪ್ರದೇಶಗಳಲ್ಲಿ ಶಾಂತಿ ಸ್ಥಾಪನೆಗೆ ಸಂಸ್ಥೆ ಶ್ರಮಿಸಿದೆ ಹಾಗೂ ಹಸಿವನ್ನು ಯುದ್ಧಕ್ಕೆ ಅಸ್ತ್ರವಾಗಿ ಬಳಸುವುದನ್ನು ತಪ್ಪಿಸುವ ಪ್ರಯತ್ನಗಳನ್ನು ಮಾಡಿದೆ.

ಬಾರಿ ನೊಬೆಲ್ ಶಾಂತಿ ಪ್ರಶಸ್ತಿಗೆ ೨೧೧ ವ್ಯಕ್ತಿಗಳು ಹಾಗೂ ೧೦೭ ಸಂಸ್ಥೆಗಳು ನಾಮನಿರ್ದೇಶನವಾಗಿದ್ದವು.

ಪ್ರಶಸ್ತಿಯು ೧೦ ಮಿಲಿಯನ್ ಕ್ರೋನಾ (ಅಂದಾಜು ಕೋಟಿ ರೂಪಾಯಿ) ನಗದು ಬಹುಮಾನ ಮತ್ತು ಚಿನ್ನದ ಪದವನ್ನು ಒಳಗೊಂಡಿರಲಿದೆ. ಡಿಸೆಂಬರ್ ೧೦ರಂದು ನಾರ್ವೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

Thursday, October 8, 2020

ನೊಬೆಲ್ ಸಾಹಿತ್ಯ ಪ್ರಶಸ್ತಿ ಅಮೆರಿಕದ ಕವಿ ಲೂಯಿ ಗ್ಲಕ್‌ಗೆ

 ನೊಬೆಲ್ ಸಾಹಿತ್ಯ ಪ್ರಶಸ್ತಿ ಅಮೆರಿಕದ ಕವಿ ಲೂಯಿ ಗ್ಲಕ್ಗೆ

ನವದೆಹಲಿ: ಅಮೆರಿಕದ ಕವಿ ಲೂಯಿ ಎಲಿಸಬೆತ್ ಗ್ಲಕ್ ಅವರು 2020 ಅಕ್ಟೋಬರ್ 08ರ ಗುರುವಾರ ೨೦೨೦ ಸಾಲಿನ ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ಗೆದ್ದುಕೊಂಡರು.

೧೯೪೩ರ ಏಪ್ರಿಲ್ ೨೨ರಂದು ಜನಿಸಿದ ಗ್ಲಕ್ ಒಬ್ಬ ಅಮೇರಿಕನ್ ಕವಿ ಮತ್ತು ಪ್ರಬಂಧಕಾರ್ತಿಯಾಗಿದ್ದು, "ಸ್ನಿಗ್ಧ್ಧ ಸೌಂದರ್ಯದೊಂದಿಗೆ ವೈಯಕ್ತಿಕ ಅಸ್ತಿತ್ವವನ್ನು ಸಾರ್ವತ್ರಿಕವಾಗಿಸುವ ಸ್ಪಷ್ಟವಾದ ಕಾವ್ಯಾತ್ಮಕ ಧ್ವನಿಗಾಗಿ ೨೦೨೦ರ ಸಾಲಿನ ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ಅವರಿಗೆ ಪ್ರಕಟಿಸಲಾಯಿತು.

ಅಮೆರಿಕದಲ್ಲಿ ರಾಷ್ಟ್ರೀಯ ಮಾನವಿಕ ಪದಕ, ಪುಲಿಟ್ಜರ್ ಪ್ರಶಸ್ತಿ, ರಾಷ್ಟ್ರೀಯ ಪುಸ್ತಕ ಪ್ರಶಸ್ತಿ, ರಾಷ್ಟ್ರೀಯ ಪುಸ್ತಕ ವಿಮರ್ಶಕರ ವಲಯ ಪ್ರಶಸ್ತಿ, ಮತ್ತು ಬೊಲ್ಲಿಂಗನ್ ಪ್ರಶಸ್ತಿ ಸೇದಂತೆ ಅನೇಕ ಪ್ರಮುಖ ಸಾಹಿತ್ಯ ಪ್ರಶಸ್ತಿಗಳನ್ನು ಗ್ಲಕ್ ಅವರು ಗೆದ್ದಿದ್ದಾರೆ.

ಅಮೆರಿಕದ ಕವಿ ಪ್ರಶಸ್ತಿ ವಿಜೇತರಾದ ಗ್ಲಕ್ ಅವರನ್ನಆತ್ಮಚರಿತ್ರೆಯ ಕವಿ ಎಂದು ಬಣ್ಣಿಸಲಾಗುತ್ತದೆ. ಪುರಾಣ, ಇತಿಹಾಸ ಅಥವಾ ಪ್ರಕೃತಿಯನ್ನು ಮತ್ತು ವೈಯಕ್ತಿಕ ಅನುಭವಗಳನ್ನು ನೀಡುವ ಅವರ ಕೃತಿಗಳು ಭಾವನಾತ್ಮಕ ತೀವ್ರತೆಗೆ ಹೆಸರುವಾಸಿಯಾಗಿವೆ.

ಗ್ಲಕ್ ನ್ಯೂಯಾರ್ಕ್ ನಗರದಲ್ಲಿ ಜನಿಸಿ, ನ್ಯೂಯಾರ್ಕ್ನ ಲಾಂಗ್ ಐಲ್ಯಾಂಡಿನಲ್ಲಿ ಬೆಳೆದರು. ಪ್ರೌಢಶಾಲೆಯಲ್ಲಿದ್ದಾಗ ಅವರು ಅನೋರೆಕ್ಸಿಯಾ ನರ್ವೋಸಾದಿಂದ ಬಳಲುತ್ತಿದ್ದರು. ಮುಂದೆ ಸಾರಾ ಲಾರೆನ್ಸ್ ಕಾಲೇಜು ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ತರಗತಿಗಳನ್ನು ತೆಗೆದುಕೊಂಡರು ಆದರೆ ಪದವಿ ಪಡೆಯಲಿಲ್ಲ. ಲೇಖಕಿಯಾಗಿ ಅವರ ವೃತ್ತಿಜೀವನದ ಜೊತೆಗೆ, ಅವರು ಹಲವಾರು ಸಂಸ್ಥೆಗಳಲ್ಲಿ ಕವನ ಶಿಕ್ಷಕರಾಗಿ ಅಕಾಡೆಮಿಕ್ ವೃತ್ತಿಜೀವನವನ್ನು ನಡೆಸಿದ್ದಾರೆ.

ಗ್ಲಕ್ ಅವರು ತಮ್ಮ ಕೃತಿಯಲ್ಲಿ, ಆಘಾತ, ಬಯಕೆ ಮತ್ತು ಪ್ರಕೃತಿಯ ಪ್ರಕಾಶಿಸುವ ಅಂಶಗಳನ್ನು ಕೇಂದ್ರೀಕರಿಸಿದ್ದಾರೆ. ವಿಶಾಲ ವಿಷಯಗಳನ್ನು ಅನ್ವೇಷಿಸುವಲ್ಲಿ, ಅವರ ಕಾವ್ಯವು ದುಃಖ ಮತ್ತು ಪ್ರತ್ಯೇಕತೆಯ ಸ್ಪಷ್ಟ ಅಭಿವ್ಯಕ್ತಿಗಳಿಗೆ ಹೆಸರುವಾಸಿಯಾಗಿದೆ. ಅವರ ಕವಿತೆಗಳಲ್ಲಿ, ಆತ್ಮಚರಿತ್ರೆ ಮತ್ತು ಶಾಸ್ತ್ರೀಯ ಪುರಾಣಗಳ ನಡುವಿನ ಕಾವ್ಯಾತ್ಮಕ ವ್ಯಕ್ತಿತ್ವ ಮತ್ತು ಸಂಬಂಧವನ್ನು ವಿದ್ವಾಂಸರು ಗುರುತಿಸಿದ್ದಾರೆ.

ಪ್ರಸ್ತುತ, ಗ್ಲಕ್ ಅವರು ಯೇಲ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದು, ಮೆಸಾಚ್ಯುಸೆಟ್ಸ್ ಕೇಂಬ್ರಿಜ್ನಲ್ಲಿ ವಾಸವಾಗಿದ್ದಾರೆ.

ಹಲವು ವರ್ಷಗಳ ವಿವಾದ ಮತ್ತು ಹಗರಣದ ನಂತರ ವರ್ಷ ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

ಲೈಂಗಿಕ ದೌರ್ಜನ್ಯ ಆರೋಪಗಳು ವಿಜೇತರನ್ನು ಆಯ್ಕೆ ಮಾಡುವ ರಹಸ್ಯ ಸಂಸ್ಥೆಯಾದ ಸ್ವೀಡಿಷ್ ಅಕಾಡೆಮಿಯನ್ನು ಬೆಚ್ಚಿಬೀಳಿಸಿದ ನಂತರ ೨೦೧೮ ರಲ್ಲಿ ಪ್ರಶಸ್ತಿಯನ್ನು ಮುಂದೂಡಲಾಗಿತ್ತು. ಮತ್ತು ಇದು ಸದಸ್ಯರ ಸಾಮೂಹಿಕ ನಿರ್ಗಮನಕ್ಕೆ ನಾಂದಿ ಹಾಡಿತ್ತು.

ಕಳೆದ ವರ್ಷದ ಆಸ್ಟ್ರಿಯಾದ ಕಾದಂಬರಿಕಾರ ಪೀಟರ್ ಹ್ಯಾಂಡ್ಕೆ ಅವರ ಟೀಕೆಗಳ ಮಹಾಪೂರವನ್ನೇ ಹರಿಯಬಿಟ್ಟಿದ್ದರು. ಬಾಲ್ಕನ್ ಯುದ್ಧಗಳಲ್ಲಿ ಸರ್ಬಿಯಾದ ನಾಯಕ ಸ್ಲೊಬೊಡಾನ್ ಮಿಲೋಸೆವಿಕ್ ಅವರನ್ನು ಬೆಂಬಲಿಸಿದ ಮತ್ತು ಮತ್ತು ಆತನ ಸೇನೆಯ ದೌರ್ಜನ್ಯವನ್ನು ಗೌಣಗೊಳಿಸುವಲ್ಲಿ ಹೆಸರುವಾಸಿಯಾದ ಬರಹಗಾರನಿಗೆ ಹೇಗೆ ಪ್ರಶಸ್ತಿ ನೀಡಲಾಯಿತು ಎಂದು ಹಲವರು ಅಚ್ಚರಿ ಪಟ್ಟಿದ್ದರು.

ಆದರೆ, ಅಕಾಡೆಮಿ ಹ್ಯಾಂಡ್ಕೆ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ ತನ್ನ ಕ್ರಮವನ್ನು ಸಮರ್ಥಿಸಿ, ಕೇವಲ ಸಾಹಿತ್ಯಿಕ ಅರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ ಎಂದು ಪ್ರತಿಪಾದಿಸಿತ್ತು.

ಶಾಂತಿ ಮತ್ತು ಅರ್ಥಶಾಸ್ತ್ರ ಕ್ಷೇತ್ರಗಳಲ್ಲಿನ ಮಹೋನ್ನತ ಕೆಲಸಕ್ಕಾಗಿ ವರ್ಷದ ನೊಬೆಲ್ ಪ್ರಶಸ್ತಿಗಳು ಇನ್ನೂ ಬರಬೇಕಾಗಿವೆ.

Advertisement