Showing posts with label Pakistan. Show all posts
Showing posts with label Pakistan. Show all posts

Sunday, March 16, 2025

೨೦೨೩ರ ರಾಜೌರಿ ದಾಳಿಯ ಸೂತ್ರಧಾರಿ ಅಬು ಕತಾಲ್ ಹತ್ಯೆ

 ೨೦೨೩ರ ರಾಜೌರಿ ದಾಳಿಯ ಸೂತ್ರಧಾರಿ ಅಬು ಕತಾಲ್ ಹತ್ಯೆ

ವದೆಹಲಿ: ಲಷ್ಕರ್--ತೈಬಾ ಸಂಘಟನೆಗೆ ಸೇರಿದ ʼಮೋಸ್ಟ್ ವಾಂಟೆಡ್ʼ ಭಯೋತ್ಪಾದಕರಲ್ಲಿ ಒಬ್ಬನಾದ ಅಬು ಕತಾಲ್ ಯಾನೆ ಫೈಸಲ್‌ ನದೀಮ್‌ ೨೦೨೫ ಮಾರ್ಚ್‌ ೧೫ರ ಶನಿವಾರ ರಾತ್ರಿ ಪಾಕಿಸ್ತಾನದಲ್ಲಿ ಹತನಾಗಿದ್ದಾನೆ ಎಂದು ವರದಿಗಳು ತಿಳಿಸಿವೆ.

ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯಲ್ಲಿ ಈತ ಪ್ರಮುಖ ವ್ಯಕ್ತಿಯಾಗಿದ್ದ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ದಾಳಿಗಳನ್ನು ಆಯೋಜಿಸುವ ಜವಾಬ್ದಾರಿಯನ್ನು ಹೊಂದಿದ್ದ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ವರದಿಗಳ ಪ್ರಕಾರ, ಪಾಕಿಸ್ತಾನದ ಝೇಲಂನ ದಿನಾ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯಿಂದ ಕತಾಲ್ ಹತ್ಯೆಗೀಡಾಗಿದ್ದಾನೆ

೨೬/೧೧ ಮುಂಬೈ ದಾಳಿಯ ಸೂತ್ರಧಾರ ಹಫೀಜ್ ಸಯೀದನ ಆಪ್ತ ಸಹಚರನಾಗಿದ್ದ ಅಬು ಕತಾಲ್ ಜೂನ್ 9 ರಂದು ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಶಿವ ಖೋರಿ ದೇವಸ್ಥಾನದಿಂದ ಹಿಂತಿರುಗುತ್ತಿದ್ದ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ನಡೆದ ದಾಳಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ. ಕತಾಲ್ ನೇತೃತ್ವದಲ್ಲಿ ಈ ದಾಳಿಯನ್ನು ಆಯೋಜಿಸಲಾಗಿತ್ತು.

ಜನವರಿ ೧, ೨೦೨೩ ರಂದು, ರಾಜೌರಿಯ ಧಂಗ್ರಿ ಗ್ರಾಮದಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕ ದಾಳಿ ನಡೆಸಲಾಗಿತ್ತು. ದಾಳಿಯ ನಂತರ ಮರುದಿನ ಐಇಡಿ ಸ್ಫೋಟ ಸಂಭವಿಸಿತ್ತು. ಇಬ್ಬರು ಮಕ್ಕಳು ಸೇರಿದಂತೆ ಏಳು ಜನರು ಪ್ರಾಣ ಕಳೆದುಕೊಂಡಿದ್ದರು. ಇತರ ಹಲವರು ತೀವ್ರ ಗಾಯಗೊಂಡಿದ್ದರು.

ಹಫೀಜ್ ಸಯೀದ್ ಅಬು ಕತಾಲ್ ನನ್ನು ಲಷ್ಕರ್--ತೈಬಾದ ಮುಖ್ಯ ಕಾರ್ಯಾಚರಣಾ ಕಮಾಂಡರ್ ಆಗಿ ನೇಮಿಸಿದ್ದ. ಹಫೀಜ್ ಸಯೀದ್ ಅಬು ಕತಾಲ್ ಗೆ ಆದೇಶ ನೀಡುತ್ತಿದ್ದ. ಅದರಂತೆ ಕತಾಲ್ ಕಾಶ್ಮೀರದಲ್ಲಿ ಪ್ರಮುಖ ದಾಳಿಗಳನ್ನು ನಡೆಸುತ್ತಿದ್ದ.

೨೦೨೩ ರ ರಾಜೌರಿ ದಾಳಿಯಲ್ಲಿ ಅಬು ಕತಾಲ್ ಪಾತ್ರಕ್ಕಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನ್ನ ಆರೋಪಪಟ್ಟಿಯಲ್ಲಿ ಅಬು ಕತಾಲ್‌ನನ್ನು ಹೆಸರಿಸಿತ್ತು.

ರಾಜೌರಿ ದಾಳಿಗೆ ಸಂಬಂಧಿಸಿದಂತೆ, ಎನ್‌ಐಎ ಐದು ಆರೋಪಿಗಳ ಮೇಲೆ ಆರೋಪಪಟ್ಟಿ ಸಲ್ಲಿಸಿದೆ, ಅವರಲ್ಲಿ ಮೂವರು ನಿಷೇಧಿತ ಲಷ್ಕರ್- -ತೈಬಾಕ್ಕೆ ಸೇರಿದ ಪಾಕಿಸ್ತಾನೀಯರು.

ನಾಗರಿಕರನ್ನು, ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದ ಅಲ್ಪಸಂಖ್ಯಾತ ಸಮುದಾಯದ ನಾಗರಿಕರನ್ನು ಮತ್ತು ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಲು ಪಾಕಿಸ್ತಾನದಿಂದ ಎಲ್‌ಇಟಿ ಭಯೋತ್ಪಾದಕರ ನೇಮಕಾತಿ ಮತ್ತು ರವಾನೆಯನ್ನು ಈ ಮೂವರು ಸಂಘಟಿಸಿದ್ದರು ಎಂದು ಎನ್‌ಐಎ ತನಿಖೆಗಳು ಬಹಿರಂಗಪಡಿಸಿವೆ.

ಜಮ್ಮು ಮತ್ತು ಕಾಶ್ಮೀರದಾದ್ಯಂತ ಹಲವಾರು ಭಯೋತ್ಪಾದನಾ ಸಂಬಂಧಿತ ಘಟನೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಅಬು ಕತಾಲ್ ಮೇಲೆ ಸೇನೆ ಸೇರಿದಂತೆ ಹಲವಾರು ಭದ್ರತಾ ಸಂಸ್ಥೆಗಳು ನಿಗಾ ಇಟ್ಟಿದ್ದವು.

ಕೆಳಗಿನವುಗಳನ್ನೂ ಓದಿರಿ:

ಬಾನಿನಿಂದ ಬಂತು ಸಾವು: ಅಮೆರಿಕದ ಕ್ಷಿಪಣಿ ದಾಳಿ, ಐಸಿಸ್ ಮುಖ್ಯಸ್ಥ ಖತಂ

ಭಯೋತ್ಪಾದನೆಯ 'ಪೆಡಂಭೂತ': ವಾಸ್ತವದ ಮರೆವು ಮುಳುವಾಯಿತೇ?

Sunday, July 16, 2023

ಪಾಕಿಸ್ತಾನ ವರ್ಸಸ್‌ ಭಾರತ: ಇಲ್ಲಿ ಉಂಟು 'ಆದ್ಯತೆʼ!

 ಪಾಕಿಸ್ತಾನ ವರ್ಸಸ್‌ ಭಾರತ: ಇಲ್ಲಿ ಉಂಟು 'ಆದ್ಯತೆʼ!

ಬೆಂಗಳೂರು:  ಭಾರತವು ನಡೆಸಿರುವ ಚಂದ್ರಯಾನ-3 ರ ಉಡಾವಣೆಯು ರಾಷ್ಟ್ರದಾದ್ಯಂತ ಹೆಮ್ಮೆ ಮತ್ತು ಸಂಭ್ರಮದ ಭಾವನೆಯನ್ನು ಹುಟ್ಟುಹಾಕಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ 2023 ಜುಲೈ 14ರ ಶುಕ್ರವಾರ ಈ ಚಾರಿತ್ರಿಕ ಘಟನೆ ಘಟಿಸಿದ್ದ್ದದು, ಸಹಸ್ರಾರು ಉತ್ಸಾಹಿ ಪ್ರೇಕ್ಷಕರು ಕನಸಿನ ಬಾಹ್ಯಾಕಾಶ ಯಾತ್ರೆಗೆ ಸಾಕ್ಷಿಯಾದರು.

ಮಧ್ಯೆ, ಮಹತ್ವದ ಸಂದರ್ಭವನ್ನು ಸಂಭ್ರಮಿಸಲು ಹಲವಾರು ಮಂದಿ ಆನ್‌ಲೈನ್ ಬಳಕೆದಾರರು ಈ ಘಟನೆಯ ಸಂದೇಶಗಳು, ಚಿತ್ರಗಳು, ವಿಡಿಯೋಗಳನ್ನು ಟ್ವಿಟ್ಟರಿನಲ್ಲಿ ಹಂಚಿಕೊಂಡರು. ಇದೇ ಸಮಯದಲ್ಲಿ ಪಾಕಿಸ್ತಾನಿ ವ್ಯಕ್ತಿಯೊಬ್ಬರು ಪಾಕಿಸ್ತಾನದಿಂದ ತಮ್ಮ ಟ್ವೀಟ್‌ ಪ್ರಕಟಿಸಿದರು. ಇದು ಭಾರತೀಯನ ಟ್ವೀಟ್‌ ಗಿಂತ ಮೇಲ್ಭಾಗದಲ್ಲಿ ಇತ್ತು.

ʼಅಬ್‌ ಆಯೇಗಾ ನ ಮಜಾ.. ಆವಾಜ್‌ ಸುನ್‌ ರಹೇ ಹೋ? ಘೋರ್‌ ಸೇ ಸುನೋ… ಯೇ ಪೂರೀ ದುನಿಯಾ ಕೆ ಕಾಂಪನೇ ಕೀ ಆವಾಜ್‌ ಹೈʼ ಎಂಬುದಾಗಿ ಬರೆದಿದ್ದ ಈ ಟ್ವಿಟ್ಟರ್‌ ಸಂದೇಶ ಪಾಕಿಸ್ತಾನದ ತೋಳ್ಬಲವನ್ನು ಸಾರುವಂತಿತ್ತು. ಇದರ ಕೆಳಗಿದ್ದ ಭಾರತೀಯನ ಟ್ವೀಟಿನಲ್ಲಿ “ಇಂಡಿಯಾ ಇಂಡಿಯಾʼ ಬರಹದೊಂದಿಗೆ ಭಾರತದ ಚಂದ್ರಯಾನ -3 ಚಿತ್ರವಿತ್ತು.

ಪಾಕಿಸ್ತಾನ ಮತ್ತು ಭಾರತದ ʼಆದ್ಯತೆʼಗಳನ್ನು ಸಾರುವಂತೆ ಕಾಣುತ್ತಿದ್ದ ಈ ಟ್ವೀಟ್‌ ಸರಣಿಯ ಸ್ಕೀನ್‌ ಶಾಟ್‌ ತೆಗೆದುಕೊಂಡ ಇನ್ನೊಬ್ಬ ಪಾಕಿಸ್ತಾನಿ ಇದನ್ನು ತನ್ನ ಟ್ವಿಟ್ಟರ್‌ ಸಂದೇಶದಲ್ಲಿ ಪ್ರಕಟಿಸಿ ತನ್ನ ಪ್ರತಿಕ್ರಿಯೆಯಾಗಿ ʼನೋವಿನೊಂದಿಗೆ ನಗುತ್ತಿರುವ ʼಎಮೋಜಿʼಯನ್ನೂ ಹಾಕಿದರು. ಉಭಯ ದೇಶಗಳ ವ್ಯತಿರಿಕ್ತ ಆದ್ಯತೆಗಳನ್ನು ಇದು ಎತ್ತಿ ತೋರಿಸುತ್ತಿತ್ತು.

ಟ್ವಿಟರ್ ಬಳಕೆದಾರ ಅಲಿ ಶಾನ್ ಮೊಮಿನ್ ಹಂಚಿಕೊಂಡಿರುವ  ಸ್ಕ್ರೀನ್‌ಶಾಟ್, ಲಾಹೋರಿನಲ್ಲಿ 500 ಅಡಿ ಎತ್ತರದ ಧ್ವಜವನ್ನು ಹಾರಿಸುವ ಪಾಕಿಸ್ತಾನದ ಯೋಜನೆಯನ್ನು ಚರ್ಚಿಸುವ ಪಾಕಿಸ್ತಾನಿ ಬಳಕೆದಾರರ ಟ್ವೀಟನ್ನು ಪ್ರಮುಖವಾಗಿ ಪ್ರದರ್ಶಿಸುತ್ತದೆ. ಇದು ಈ ಪ್ರದೇಶದಲ್ಲಿ ಅತಿ ಎತ್ತರದ ಧ್ವಜ ಎನಿಸಿಕೊಳ್ಳಲು ಸಿದ್ಧವಾಗಿದೆ. 2023 ರಲ್ಲಿ ಪಾಕಿಸ್ತಾನದ ಸ್ವಾತಂತ್ರ್ಯ ದಿನದಂದು ನಡೆಯಲಿರುವ ಈ ಧ್ವಜಾರೋಹಣ ಸಮಾರಂಭಕ್ಕೆ 400 ದಶಲಕ್ಷ ರೂಪಾಯಿ (400 ಮಿಲಿಯನ್ ರೂ) ನಿಗದಿಪಡಿಸಲಾಗಿದೆ. ಈ ಧ್ವಜಕ್ಕೆ ಧ್ವನಿ ವರ್ಧಕ ವ್ಯವಸ್ಥೆ ಅಳವಡಿಸಲಾಗಿದ್ದು ಬಹುದೂರದವರೆಗೆ ಇದರ ಸದ್ದು ಕೇಳಲಿದೆಯಂತೆ.

ಇದಕ್ಕೆ ತದ್ವಿರುದ್ಧವಾಗಿ, ಈ ಟ್ವೀಟ್‌ನ ಕೆಳಗಿನ ಟ್ವೀಟ್‌  ಚಂದ್ರಯಾನ-3 ಸಾಧನೆಯೊಂದಿಗೆ ಭಾರತದ ವಿಜಯೋತ್ಸವ ಸಂದರ್ಭದ  ಭಾರತೀಯರ ಸಂಭ್ರಮವನ್ನು ಅಭಿವ್ಯಕ್ತಿಸಿದೆ..

ಭಾರತವು ಬಾಹ್ಯಾಕಾಶ ಪರಿಶೋಧನೆಯಲ್ಲಿ ತನ್ನ ಗಮನಾರ್ಹ ಸಾಧನೆಯನ್ನು ಆಚರಿಸಿದರೆ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ತನ್ನ ಪ್ರಗತಿಯನ್ನು ಪ್ರದರ್ಶಿಸುತ್ತಿದೆ. ನೆರೆಯ ಪಾಕಿಸ್ತಾನಿಯನ ಟ್ವೀಟ್‌ ವಿಭಿನ್ನ ರಾಷ್ಟ್ರೀಯ ಕಾಳಜಿಯನ್ನು ಪ್ರತಿಬಿಂಬಿಸುತ್ತದೆ., ಇದು ಎತ್ತರದ ಧ್ವಜವನ್ನು ಸ್ಥಾಪಿಸುವ ಮೂಲಕ ಭಾರತವನ್ನು ಮೀರಿಸಲು ಬಯಸುತ್ತಿದೆ ಎಂಬುದನ್ನು ತೋರಿಸುತ್ತಿದೆ.

ಸ್ಕ್ರೀನ್‌ಶಾಟ್‌ನೊಂದಿಗೆ ಸರಳವಾದ 'ನೋವಿನ ಮೂಲಕ ನಗುತ್ತಿರುವ' ಎಮೋಜಿಯು ಎರಡು ದೇಶಗಳ ವಿಭಿನ್ನ 'ಆದ್ಯತೆಗಳನ್ನು' ಬಹಿರಂಗಪಡಿಸುವಾಗ ಪೋಸ್ಟ್‌ನ ಸಾರವನ್ನು ಸೆರೆಹಿಡಿಯುತ್ತದೆ.

Wednesday, August 24, 2022

ಭಾರತೀಯ ಸೇನೆ ಮೇಲೆ ದಾಳಿಗೆ ಪಾಕ್‌ ಕರ್ನಲ್‌ ನಿಂದ ರೂ. 30,000 ರೂಪಾಯಿ

 ಭಾರತೀಯ ಸೇನೆ ಮೇಲೆ ದಾಳಿಗೆ ಪಾಕ್‌ ಕಾಸು
ಕರ್ನಲ್‌ ನಿಂದ ರೂ. 30,000 ರೂಪಾಯಿ

ನವದೆಹಲಿ:  ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ನೌಶೇರಾ ಸೆಕ್ಟರಿನ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಆಗಸ್ಟ್ 21 ರಂದು ಭಾರತೀಯ ಸೇನೆ ಸೆರೆ ಹಿಡಿದ ಪಾಕ್‌ ಆಕ್ರಮಿತ ಕಾಶ್ಮೀರದ (ಪಿಒಕೆ) 'ಫಿದಾಯೀನ್' (ಆತ್ಮಹತ್ಯಾ) ದಾಳಿಕೋರ, ಪಾಕ್‌ ಕರ್ನಲ್‌ ಸೂಚನೆ ಮೇರೆಗೆ ತಾನು ಭಾರತೀಯ ಸೇನೆ ಮೇಲೆ ದಾಳಿ ನಡೆಸುವ ಕೃತ್ಯಕ್ಕೆ ಇಳಿದುದಾಗಿ 2022 ಆಗಸ್ಟ್‌ 24ರ ಬುಧವಾರ ಒಪ್ಪಿಕೊಂಡಿದ್ದಾನೆ.

ಭಾರತೀಯ ಸೈನಿಕರ ಮೇಲೆ ದಾಳಿ ಮಾಡುವ ಯೋಜನೆ ಕಾರ್ಯಗತಗೊಳಿಸಲು ಪಾಕಿಸ್ತಾನಿ ಸೇನೆಯ ಪಾಕಿಸ್ತಾನಿ ಕರ್ನಲ್ ಯೂನಸ್ ಚೌಧರಿ ತನಗೆ ಸುಮಾರು 30,000 ರೂ. ನೀಡಿರುವುದಾಗಿ ತಬಾರಕ್ ಹುಸೇನ್ ಎಂಬುದಾಗಿ ಗುರುತಿಸಲಾಗಿರುವ ದ ಭಯೋತ್ಪಾದಕ ಹೇಳಿದ್ದಾನೆ.

ಒಳನುಸುಳುವಿಕೆ ಪ್ರಯತ್ನದ ಸಮಯದಲ್ಲಿ ಗಾಯಗೊಂಡು ಕಾಶ್ಮೀರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹುಸೇನ್ ಎಎನ್‌ ಐ ಸುದ್ದಿ ಸಂಸ್ಥೆ ಜೊತೆಗೆ ಮಾತನಾಡುತ್ತಾ ತಾನು ನಾಲ್ಕೈದು ಮಂದಿಯೊಂದಿಗೆ ಭಾರತೀಯ ಪ್ರದೇಶಕ್ಕೆ ನುಸುಳಲು ಯತ್ನಿಸಿದ್ದಾಗಿ ಹೇಳಿದ್ದಾನೆ.

ಎಎನ್‌ ಐ ಸುದ್ದಿ ಸಂಸ್ಥೆಯು ಟ್ವಿಟ್ಟರಿನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಹುಸೇನ್, ಇತರ ಭಯೋತ್ಪಾದಕರ ಜೊತೆಗೆ ಸೂಕ್ತ ಸಮಯದಲ್ಲಿ ಭಾರತೀಯ ಸೈನಿಕರನ್ನು ಗುರಿಯಾಗಿಸಿ ದಾಳಿ ನಡೆಸುವ ಉದ್ದೇಶದಿಂದ ಭಾರತದ ಮುಂಚೂಣಿ ಗಡಿ ಠಾಣೆಗಳ ಮೇಲೆ ಆತ್ಮಾಹುತಿ ದಾಳಿ ನಡೆಸಲು ಎರಡು-ಮೂರು ಬಾರಿ ಯತ್ನಿಸಿದ್ದಾಗಿ ಒಪ್ಪಿಕೊಂಡಿದ್ದಾನೆ.

ಹುಸೇನ್ ಪಾಕ್ ಆಕ್ರಮಿತ ಕಾಶ್ಮೀರದ ಕೋಟಿಯ ಸಬ್‌ಕೋಟ್ ಗ್ರಾಮದ ನಿವಾಸಿಯಾಗಿದ್ದಾನೆ.

ಹುಸೇನ್ ಭಯೋತ್ಪಾದಕರೊಂದಿಗೆ ಒಳನುಸುಳಲು ಪ್ರಯತ್ನಿಸುತ್ತಿದ್ದಾಗ ಭಾರತೀಯ ಸೇನೆಯು ಆತನನ್ನು ವಶಕ್ಕೆ ತೆಗೆದುಕೊಂಡಿತು. “ನಾನು ಇತರ ನಾಲ್ಕೈದು ಜನರೊಂದಿಗೆ ಆತ್ಮಹತ್ಯಾ ಕಾರ್ಯಾಚರಣೆಗಾಗಿ ಇಲ್ಲಿಗೆ ಬಂದಿದ್ದೆ. ನಮ್ಮನ್ನು ಪಾಕಿಸ್ತಾನ ಸೇನೆಯ ಕರ್ನಲ್ ಯೂನಸ್ ಕಳುಹಿಸಿದ್ದು, ಅವರು ಭಾರತೀಯ ಸೇನೆಯನ್ನು ಗುರಿಯಾಗಿಸಲು 30,000 ರೂ. ನೀಡಿದ್ದರು” ಎಂದು ಭಯೋತ್ಪಾದಕ ಹೇಳಿದ.

ಇದಕ್ಕೆ ಮುನ್ನ, ಜಮ್ಮು ಪ್ರದೇಶದಲ್ಲಿ 48 ಗಂಟೆಗಳ ಅವಧಿಯಲ್ಲಿ ನೌಶೇರಾ ಸೆಕ್ಟರ್‌ನ ಎಲ್‌ಒಸಿ ಉದ್ದಕ್ಕೂ ಭಯೋತ್ಪಾದಕರು ನಡೆಸಿದ ಎರಡು ಒಳನುಸುಳುವಿಕೆ ಪ್ರಯತ್ನಗಳನ್ನು ಯಶಸ್ವಿಯಾಗಿ ನಿಗ್ರಹಿಸುವ ಮೂಲಕ ಶಾಂತಿ ಕದಡುವ ಪಾಕಿಸ್ತಾನದ "ಕೆಟ್ಟ ಪ್ರಯತ್ನ" ವನ್ನು ವಿಫಲಗೊಳಿಸಲಾಗಿದೆ ಎಂದು ಭಾರತೀಯ ಸೇನೆ ಹೇಳಿತ್ತು.

ಆಗಸ್ಟ್ 21 ಮತ್ತು 22 ರಂದು ಝಂಗಾರ್ ಮತ್ತು ಲ್ಯಾಮ್ ಪ್ರದೇಶಗಳಲ್ಲಿ ಒಳನುಸುಳುವಿಕೆ ಯತ್ನಗಳು, ಇಬ್ಬರು ಭಯೋತ್ಪಾದಕರ ಸಾವಿಗೆ ಕಾರಣವಾದವು ಮತ್ತು ಕುಖ್ಯಾತ ಭಯೋತ್ಪಾದಕ ಮಾರ್ಗದರ್ಶಿಯನ್ನು ಬಂಧಿಸಲಾಯಿತು, ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಭಾರತದ ಕಡೆಗೆ ಒಂದು ಗುಂಪನ್ನು ನುಗ್ಗಿಸುವ ಕಾರ್ಯಾಚರಣೆಗೆ ಇಳಿದಿದ್ದರು. ಅವರಿಂದ ಸೇನಾ ಪೋಸ್ಟ್ ಮೇಲೆ ದಾಳಿ ನಡೆದಿದೆ ಎಂದು ಸೇನೆಯ 80 ಪದಾತಿ ದಳದ ಕಮಾಂಡರ್ ಬ್ರಿಗೇಡಿಯರ್ ಕಪಿಲ್ ರಾಣಾ ತಿಳಿಸಿದ್ದರು.

ಎಎನ್‌ ಐ ಸುದ್ದಿ ಸಂಸ್ಥೆಯು ಟ್ವಿಟ್ಟರಿನಲ್ಲಿ ಪ್ರಕಟಿಸಿದ ಫಿದಾಯೀನ್‌ ದಾಳಿಕೋರನ ತಪ್ಪೊಪ್ಪಿಗೆಯ ವಿಡಿಯೋ ಕೆಳಗಿದೆ:


Saturday, January 2, 2021

ಪಾಕಿಸ್ತಾನದಲ್ಲಿ ಜಾಕಿ-ಉರ್-ರಹಮಾನ್ ಲಖ್ವಿ ಬಂಧನ

 ಪಾಕಿಸ್ತಾನದಲ್ಲಿ  ಜಾಕಿ-ಉರ್-ರಹಮಾನ್ ಲಖ್ವಿ ಬಂಧನ

ನವದೆಹಲಿ: ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಮತ್ತು ಲಷ್ಕರ್--ತೈಬಾ (ಎಲ್‌ಇಟಿ) ಕಾರ್ಯಾಚರಣೆಯ ಕಮಾಂಡರ್ ಜಾಕಿ-ಉರ್-ರೆಹಮಾನ್ ಲಖ್ವಿಯನ್ನು ಭಯೋತ್ಪಾದಕ ಹಣಕಾಸು ಆರೋಪದ ಮೇಲೆ ಪಾಕಿಸ್ತಾನದಲ್ಲಿ 2021 ಜನವರಿ 02ರ ಶನಿವಾರ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಮುಂಬೈ ದಾಳಿ ಪ್ರಕರಣದಲ್ಲಿ ೨೦೧೫ ರಿಂದ ಜಾಮೀನಿನಲ್ಲಿದ್ದ ಲಖ್ವಿಯನ್ನು ಪಂಜಾಬ್ ಪ್ರಾಂತ್ಯದ ಭಯೋತ್ಪಾದನಾ ನಿಗ್ರಹ ಇಲಾಖೆ (ಸಿಟಿಡಿ) ಬಂಧಿಸಿದೆ.

ಆದರೆ, ಆತನ ಬಂಧನದ ಸ್ಥಳವನ್ನು ಸಿಟಿಡಿ ಬಹಿರಂಗಪಡಿಸಿಲ್ಲ.

"ಸಿಟಿಡಿ ಪಂಜಾಬ್ ನಡೆಸಿದ ಗುಪ್ತಚರ ಸುಳಿವು ಆಧರಿತ ಕಾರ್ಯಾಚರಣೆಯ ನಂತರ, ನಿಷೇಧಿತ ಸಂಸ್ಥೆ ಎಲ್‌ಇಟಿ ನಾಯಕ ಜಾಕಿ-ಉರ್-ರೆಹಮಾನ್ ಲಖ್ವಿಯನ್ನು ಭಯೋತ್ಪಾದನೆ ಹಣಕಾಸು ಆರೋಪದ ಮೇಲೆ ಬಂಧಿಸಲಾಯಿತು" ಎಂದು ಸಿಟಿಡಿ ಹೇಳಿತು.

ಲಾಹೋರಿನ ಪೊಲೀಸ್ ಠಾಣೆಯಲ್ಲಿ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಪ್ರಕರಣವನ್ನು ೬೧ ವರ್ಷದ ಲಖ್ವಿ ವಿರುದ್ಧ ದಾಖಲಿಸಲಾಗಿದೆ ಎಂದು ಅದು ತಿಳಿಸಿದೆ.

"ಲಖ್ವಿ ಔಷಧಾಲಯವನ್ನು ನಡೆಸುತ್ತಿದ್ದು, ಇಲ್ಲಿನ ಹಣವನ್ನು ಭಯೋತ್ಪಾದನೆಗೆ ಹಣಕಾಸು ನೆರವಿಗಾಗಿ ಬಳಸಿದ್ದಾನೆ ಎಂದು ಆಪಾದಿಸಲಾಗಿದೆ. ಲಖ್ವಿ ಜೊತೆಗೆ ಇತರರು ಸಹ ಔಷಧಾಲಯದಿಂದ ಹಣವನ್ನು ಸಂಗ್ರಹಿಸಿದರು ಅದನ್ನು ಮತ್ತಷ್ಟು ಭಯೋತ್ಪಾದಗೆ ಹಣಕಾಸು ನೆರವು ಒದಗಿಸಲು ಬಳಸಿದ್ದಾರೆ. ಅವರು ಹಣವನ್ನು ವೈಯಕ್ತಿಕ ಖರ್ಚುಗಳಿಗೂ ಬಳಸಿದ್ದಾರೆ ಎಂದು ಸಿಟಿಡಿ ಹೇಳಿದೆ.

ಲಖ್ವಿಯು ನಿಷೇಧಿತ ಸಂಸ್ಥೆ ಎಲ್‌ಇಟಿಗೆ ಸೇರಿರುವುದಲ್ಲದೆ, ವಿಶ್ವ ಸಂಸ್ಥೆಯು ಭಯೋತ್ಪಾದಕ ಎಂಬುದಾಗಿ ಘೋಷಿಸಿದ ವ್ಯಕ್ತಿ ಕೂಡಾ ಆಗಿದ್ದಾನೆ ಎಂದು ಸಿಟಿಡಿ ಹೇಳಿದೆ.

"ಲಖ್ವಿ ವಿಚಾರಣೆಯನ್ನು ಲಾಹೋರಿನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದ ಮುಂದೆ ನಡೆಸಲಾಗುವುದು ಎಂದೂ ಸಿಟಿಡಿ ಹೇಳಿದೆ.

Friday, January 1, 2021

ದೇವಾಲಯ ಪುನರ್ ನಿರ್ಮಾಣಕ್ಕೆ ಪಾಕ್ ಪ್ರಾದೇಶಿಕ ಸರ್ಕಾರದ ನೆರವು

 ದೇವಾಲಯ ಪುನರ್ ನಿರ್ಮಾಣಕ್ಕೆ ಪಾಕ್  ಪ್ರಾದೇಶಿಕ ಸರ್ಕಾರದ ನೆರವು

ಇಸ್ಲಾಮಾಬಾದ್: ವಾಯವ್ಯ ಪಾಕಿಸ್ತಾನದಲ್ಲಿನ ಖೈಬರ್ ಪಖ್ತೂನ್ ಕ್ವಾದಲ್ಲಿ ಮುಸ್ಲಿಂ ಜನಸಮೂಹದಿಂದ ನಾಶವಾದ ಹಿಂದೂ ದೇವಾಲಯವನ್ನು ಪ್ರಾಂತೀಯ ಸರ್ಕಾರದ ಹಣವನ್ನು ಬಳಸಿಕೊಂಡು ಪುನರ್ನಿರ್ಮಿಸಲಾಗುವುದು ಪ್ರಾದೇಶಿಕ ಸರ್ಕಾರದ ಮಾಹಿತಿ ಸಚಿವರು 2021ರ ಜನವರಿ 01ರ ಶುಕ್ರವಾರ ತಿಳಿಸಿರುವುದಾಗಿಅಲ್ ಜಜೀರಾ ಪತ್ರಿಕೆ ವರದಿ ಮಾಡಿದೆ.

ಪ್ರಾಂತೀಯ ರಾಜಧಾನಿ ಪೇಶಾವರದಿಂದ ಆಗ್ನೇಯಕ್ಕೆ ಸುಮಾರು ೧೦೦ ಕಿ.ಮೀ (೬೨ ಮೈಲಿ) ದೂರದಲ್ಲಿರುವ ಕರಕ್ ಪಟ್ಟಣದ ಶ್ರೀ ಪರಮಹಂಸ ಜಿ ಮಹಾರಾಜ್ ಸಮಾಧಿ ಮತ್ತು  ದೇವಾಲಯದ ಮೇಲೆ ಬುಧವಾರ ನಡೆದ ದಾಳಿಯಲ್ಲಿ ಭಾಗಿಯಾಗಿದ್ದಕ್ಕಾಗಿ ಸ್ಥಳೀಯ ಮುಸ್ಲಿಂ ನಾಯಕ ಸೇರಿದಂತೆ ಸುಮಾರು ಎರಡು ಡಜನ್ ಜನರನ್ನು ಪೊಲೀಸರು ಬಂಧಿಸಿದ್ದಾರೆ.

"ದಾಳಿಯಿಂದ ಉಂಟಾದ ಹಾನಿಗೆ ನಾವು ವಿಷಾದಿಸುತ್ತೇವೆ" ಎಂದು ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ ತೆಹ್ರೀಕ್--ಇನ್ಸಾಫ್ (ಪಿಟಿಐ) ಪಕ್ಷಕ್ಕೆ ಸೇರಿದ ಪ್ರಾಂತೀಯ ಮಾಹಿತಿ ಸಚಿವ ಕಮ್ರಾನ್ ಬಂಗಾಶ್ ಹೇಳಿದ್ದಾರೆ.

"ದೇವಾಲಯ ಮತ್ತು ಪಕ್ಕದ ಮನೆಯ ಪುನರ್ನಿರ್ಮಾಣಕ್ಕೆ ಮುಖ್ಯಮಂತ್ರಿ ಆದೇಶಿಸಿದ್ದಾರೆ" ಎಂದು ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಹಿಂದೂ ಗುಂಪಿನ ಒಡೆತನದ ಪಕ್ಕದ ಕಟ್ಟಡವೊಂದನ್ನು ನವೀಕರಣವನ್ನು ವಿರೋಧಿಸಿ ಸುಮಾರು ,೫೦೦ ಜನರು ದೂರದ ಹಳ್ಳಿಯ ದೇವಸ್ಥಾನದ ಮೇಲೆ ದಾಳಿ ನಡೆಸಿದ್ದರು. ಕಟ್ಟqಕ್ಕೆ ಕಿಚ್ಚಿಡುವ ಮುನ್ನ ಗೋಡೆಗಳನ್ನು ಒಡೆಯಲು ಅವರು ಸುತ್ತಿಗೆಗಳನ್ನು ಬಳಸಿದ್ದರು ಎಂದು ವರದಿ ಹೇಳಿದೆ.

ಹಿಂದೂ ಸಮುದಾಯದ ಬೆಂಬಲದೊಂದಿಗೆ ಆದಷ್ಟು ಬೇಗ ನಿರ್ಮಾಣ ಪ್ರಾರಂಭವಾಗಲಿದ್ದು, ಸ್ಥಳದಲ್ಲಿ ಭದ್ರತೆ ಒದಗಿಸಲಾಗುವುದು ಎಂದು ಬಂಗಾಶ್ ಹೇಳಿದರು.

ಘಟನೆಗೆ ಸಂಬಂಧಿಸಿದಂತೆ ಸುಮಾರು ೪೫ ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಇರ್ಫಾನುಲ್ಲಾ ಖಾನ್ ತಿಳಿಸಿದ್ದಾರೆ. ಸ್ಥಳೀಯ ಮುಸ್ಲಿಂ ಮುಖಂಡ ಮುಲ್ಲಾ ಷರೀಫ್ ಮತ್ತಿತರರು ಜನಸಮೂಹವನ್ನು ಪ್ರಚೋದಿಸಿದರೆಂಬ ಆರೋಪ ಇರುವುದಾಗಿ ಪತ್ರಿಕೆ ವರದಿ ಮಾಡಿದೆ.

ಪಾಕಿಸ್ತಾನದ ಅತಿದೊಡ್ಡ ಇಸ್ಲಾಮಿಕ್ ಪಕ್ಷಗಳಲ್ಲಿ ಒಂದಾದ ಜಾಮಿಯತ್ ಉಲೆಮಾ--ಇಸ್ಲಾಂ (ಜೆಯುಐ-ಎಫ್) ಜಿಲ್ಲಾ ನಾಯಕ ಮುಲ್ಲಾ ಮಿರ್ಜಾ ಅಕೀಮ್ ಅವರನ್ನು ಪೊಲೀಸರು ಹುಡುಕುತ್ತಿದ್ದಾರೆ ಎಂದು ಇರ್ಫಾನುಲ್ಲಾ ಖಾನ್ ಹೇಳಿದರು.

ಸುಪ್ರೀಂಕೋರ್ಟ್ ಆದೇಶ: ದೇವಾಲಯದ ವಿನಾಶದ ಬಗ್ಗೆ ವರದಿಯನ್ನು ಸಲ್ಲಿಸುವಂತೆ ಗುರುವಾರ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಅಧಿಕಾರಿಗಳಿಗೆ ಆದೇಶಿಸಿದೆ. ದೇಗುಲ ಧ್ವಂಸ ಘಟನೆಯು ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಅಲ್ಪಸಂಖ್ಯಾತ ಹಿಂದೂ ಸಮುದಾಯದಿಂದ ಖಂಡನೆಗೆ ಗುರಿಯಾಯಿತು.

ಸಿಂಧ್ ಪ್ರಾಂತ್ಯದ ರಾಜಧಾನಿ ಮತ್ತು ದೇಶದ ಹೆಚ್ಚಿನ ಹಿಂದೂಗಳು ವಾಸಿಸುವ ಕರಾಚಿಯಲ್ಲಿ ೨೦೦ ಕ್ಕೂ ಹೆಚ್ಚು ಜನರು ನ್ಯಾಯಕ್ಕಾಗಿ ಒತ್ತಾಯಿಸಿ ಸುಪ್ರೀಂ ಕೋರ್ಟಿನ ಹೊರಗೆ ಪ್ರತಿಭಟನೆ ನಡೆಸಿದರು.

ನೀವು ಇತರ ಜನರ ಧರ್ಮವನ್ನು ಗೌರವಿಸಬೇಕು. ನಾವು ಪಾಕಿಸ್ತಾನಿಗಳು, ಮತ್ತು ದೇವರ ಸಲುವಾಗಿ ಯಾರೂ ನಮಗೆ ನಿಷ್ಠೆಯ ಪ್ರಮಾಣಪತ್ರವನ್ನು ನೀಡುವ ಅಗತ್ಯವಿಲ್ಲ ಎಂದು ಸಿಂಧ್ ಪ್ರಾಂತೀಯ ಸಭೆಯ ಹಿಂದೂ ಸದಸ್ಯ ಮಂಗ್ಲಾ ಶರ್ಮಾ ಹೇಳಿದರು.

೧೯೯೭ ರಲ್ಲಿ ಇದೇ ರೀತಿಯ ಪರಿಸ್ಥಿತಿಯಲ್ಲಿ ನಾಶವಾದ ದೇವಾಲಯವನ್ನು ೨೦೧೫ ರಲ್ಲಿ ಉನ್ನತ ನ್ಯಾಯಾಲಯದ ನಿರ್ದೇಶನದ ಮೇರೆಗೆ ಪುನರ್ನಿರ್ಮಿಸಲಾಯಿತು.

ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆ

ಪ್ರದೇಶದಲ್ಲಿ ಯಾವುದೇ ಹಿಂದೂಗಳು ವಾಸಿಸುತ್ತಿಲ್ಲವಾದರೂ, ಭಕ್ತರು ಆಗಾಗ್ಗೆ ದೇವಾಲಯ ಮತ್ತು ಅದರ ಸಮಾಧಿಗೆ ಭೇಟಿ ನೀಡಿ ಹಿಂದೂ ಸಂತ ಶ್ರೀ ಪರಮಹಂಸರಿಗೆ ಗೌರವ ಸಲ್ಲಿಸುತ್ತಾರೆ, ಅವರು ಪಾಕಿಸ್ತಾನ ೧೯೪೭ರಲ್ಲಿ ಜನ್ಮ ತಳೆಯುವುದಕ್ಕೆ ಕಾರಣವಾದ ಭಾರತ ವಿಭಜನೆಗೆ ಮುನ್ನ ಅಲ್ಲಿಯೇ ವಿಧಿವಶರಾಗಿದ್ದರು.

ಪಾಕಿಸ್ತಾನದಲ್ಲಿ ಮುಸ್ಲಿಮರು ಮತ್ತು ಹಿಂದೂಗಳು ಸಾಮಾನ್ಯವಾಗಿ ಒಟ್ಟಿಗೆ ಶಾಂತಿಯುತವಾಗಿ ವಾಸಿಸುತ್ತಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಹಿಂದೂ ದೇವಾಲಯಗಳ ಮೇಲೆ ಇತg ದಾಳಿಗಳು ಹೆಚ್ಚಿವೆ.

ಕಳೆದ ವರ್ಷ, ಅಮೆರಿಕವು ಪಾಕಿಸ್ತಾನವನ್ನು ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆಗಾಗಿ "ನಿರ್ದಿಷ್ಟ ಕಳವಳಕಾರಿ ದೇಶಗಳ" ಪಟ್ಟಿಯಲ್ಲಿ ಇರಿಸಿತು.

ದೇಶದ ಧಾರ್ಮಿಕ ವ್ಯವಹಾರಗಳ ಸಚಿವ ನೂರುಲ್ ಹಕ್ ಖಾದ್ರಿ ದಾಳಿಯನ್ನು "ಪಂಥೀಯ ಸಾಮರಸ್ಯದ ವಿರುದ್ಧದ ಪಿತೂರಿ" ಎಂದು ಕರೆದರು.

ಪಾಕಿಸ್ತಾನದ ಮಾನವ ಹಕ್ಕುಗಳ ಸಚಿವ ಶಿರೀನ್ ಮಜಾರಿ, "ನಮ್ಮ ಎಲ್ಲ ನಾಗರಿಕರ ಮತ್ತು ಅವರ ಪೂಜಾ ಸ್ಥಳಗಳ ಸುರಕ್ಷತೆ ಮತ್ತು ಸುರಕ್ಷತೆಯನ್ನು ಖಾತರಿಪಡಿಸುವ" ಜವಾಬ್ದಾರಿಯನ್ನು ಸರ್ಕಾರ ಹೊಂದಿದೆ ಎಂದು ಹೇಳಿದರು.

ಪ್ರಧಾನಿ ಖಾನ್ ಪಾಕಿಸ್ತಾನದ ಅಲ್ಪಸಂಖ್ಯಾತರಿಗೆ ಅವರ ಸುರಕ್ಷತೆಯ ಬಗ್ಗೆ ಭರವಸೆ ನೀಡಿದ್ದಾರೆ ಎಂದು ಪತ್ರಿಕಾ ವರದಿ ತಿಳಿಸಿದೆ.

"ಪಾಕಿಸ್ತಾನದಲ್ಲಿ ನಮ್ಮ ಮುಸ್ಲಿಮೇತರ ನಾಗರಿಕರನ್ನು ಅಥವಾ ಅವರ ಪೂಜಾ ಸ್ಥಳಗಳನ್ನು ಗುರಿಯಾಗಿಸಿಕೊಂಡು ಕಟ್ಟುನಿಟ್ಟಾಗಿ ವ್ಯವಹರಿಸಲಾಗುವುದು ಎಂದು ನಾನು ನಮ್ಮ ಜನರಿಗೆ ಎಚ್ಚರಿಕೆ ನೀಡಲು ಬಯಸುತ್ತೇನೆ. ನಮ್ಮ ಅಲ್ಪಸಂಖ್ಯಾತರು ದೇಶದ ಸಮಾನ ನಾಗರಿಕರುಎಂದು ಖಾನ್ ಫೆಬ್ರವರಿಯಲ್ಲಿ ಟ್ವೀಟ್ ಮಾಡಿದ್ದರು.

Advertisement