Showing posts with label Poems/ Kavana. Show all posts
Showing posts with label Poems/ Kavana. Show all posts

Sunday, June 8, 2008

ನಾನು ವಿಜ್ಞಾನಿಯಾದೆ

ನಾನು ವಿಜ್ಞಾನಿಯಾದೆ

ನನಗೆ ಒಂದು ಕನಸುಬಿತ್ತು
ಆದೆ ನಾನು ದೊಡ್ಡ ವಿಜ್ಞಾನಿ
ಇಳಿದೆ ಮಂಗಳಗ್ರಹದಲ್ಲಿ
ತೆಗೆದ ಅದರ ಚಿತ್ರವನ್ನು
ಮತ್ತೆ ಮರಳಿದೆ ಅಲ್ಲಿಂದ
ನನ್ನ ನೋಡಲು ನೆರೆದರು ಜನರೆಲ್ಲ
ಉಬ್ಬಿದೆ ನಾನು ಹರುಷದಲಿ
ಅಮ್ಮ ಕರೆದರು ರಭಸದಲಿ.


- ಅನುಪ ಕೃಷ್ಣ ಭಟ್ ನೆತ್ರಕೆರೆ

Sunday, May 18, 2008

ನಮ್ಮ ಗಣಪತಿ

ನಮ್ಮ ಗಣಪತಿ

ಎಲೆಯಲ್ಲಿ ಅರಳುವನು ನಮ್ಮ
ಗಣಪತಿ

ಹೂವಿನಲ್ಲಿ ಮೂಡುವನು ನಮ್ಮ
ಗಣಪತಿ

ಮಣ್ಣಿನಲ್ಲಿ ಆಗುವನು ನಮ್ಮ
ಗಣಪತಿ

ಲಗ್ನ ಪತ್ರಿಕೆಯಲ್ಲಿ ಮೂಡುವನು ನಮ್ಮ
ಗಣಪತಿ

ಜೋಗಿಯಾಗಿ ಮೆರೆಯುವನು ನಮ್ಮ
ಗಣಪತಿ

ಪ್ರಥಮ ಪೂಜೆ ಮಾಡಿಸಿಕೊಳ್ಳುವನು ನಮ್ಮ
ಗಣಪತಿ

ಎಲ್ಲದರಲ್ಲಿ ಪ್ರಥಮ ಇವನು ವಿಘ್ನೇಶ್ವರನು.

-ಅನುಪ್ ಕೃಷ್ಣ ಭಟ್ ನೆತ್ರಕೆರೆ

Thursday, May 1, 2008

ಬೇಸಿಗೆ ರಜಾ Summer Holiday (Kavana)

ಬೇಸಿಗೆ ರಜಾ

ಬಂದಿತು ನಮಗೆ ಬೇಸಿಗೆ ರಜಾ
ನಮಗೆ ಆಯಿತು ತುಂಬಾ ಮಜ
ಅಮ್ಮ ಹೇಳಿದರು ಶಿಬಿರಕ್ಕೆ ನಡೆ
ಅಮ್ಮನ ಮಾತಿಗೆ ಮಣಿದು
ನಡೆದೆ ಶಿಬಿರದ ಕೂಟಕ್ಕೆ
ಅಲ್ಲಿ ಮಾಡಿದೆ ಬಹಳ ತಂಟೆ
ಶಿಬಿರದಿ ನುಡಿದರು ನಡೆ ಹೊರಕ್ಕೆ.


-ಅನುಪ ಕೃಷ್ಣ ಭಟ್ ನೆತ್ರಕೆರೆ

Monday, April 28, 2008

ಇಣಚಿ ಮತ್ತು ಪುಟ್ಟ

ಇಣಚಿ ಮತ್ತು ಪುಟ್ಟ

ಬಾಬಾ ಇಣಚಿ,ಬಾಬಾ ಇಣಚಿ
ನಿನಗೆ ನಾನು ಹಣ್ಣು ಕೊಡುವೆ ಬಾಬಾ
ನಿನ್ನನು ನಾನು ಸಾಕಿ ಸಲಹುವೆನು ಬಾಬಾ.


ಅಂಬಟೆ ಮತ್ತು ಉಪ್ಪಿನಕಾಯಿ

ಅಂಬಟೆ ಎರಡು ಬಿದ್ದಿತ್ತು
ಉಪ್ಪಿನಕಾಯಿ ಆಯಿತು
ಮರದಲಿ ಅಂಬಟೆ ಮುಗಿಯತು
ಉಪ್ಪಿನಕಾಯಿ ಮುಗಿಯಿತು.

-ಮಧು ಭಟ್ ಪೂರ್ಲುಪ್ಪಾಡಿ
10ನೇ ತರಗತಿ.
ಶ್ರೀ ವಿವೇಕ ಬಾಲ ಮಂದಿರ.

Friday, April 25, 2008

Vachana ವಚನ (ಹೇಳಲಿಚ್ಛಿಸುವನು ವೀರಹನುಮನು)

ಹೇಳಲಿಚ್ಛಿಸುವನು ವೀರಹನುಮನು...

ನಾನು ನಾನು ಎನ್ನಬೇಡ
ನೀನು ಎಂದು ಕುಗ್ಗಬೇಡ
ನಿನಗೆ ನೀನು ಬಯ್ಯಬೇಡ
ಬೇರೆಯವರ ತಪ್ಪು ನೋಡಬೇಡ
ಹೊಗಳಕೆಗೆ ಉಬ್ಬಬೇಡ
ತೆಗಳಿಕೆಗೆ ಕುಗ್ಗಬೇಡ
ದುಷ್ಟರೊಡನೆ ಬೆರೆಯಬೇಡ
ಎಂದು ಹೇಳಲಿಚ್ಛಿಸುವನು ನಮ್ಮ
ವೀರಹನುಮನು.


-ಅನುಪ ಕೃಷ್ಣ ಭಟ್ ನೆತ್ರಕೆರೆ

Thursday, April 10, 2008

ಮೊಬ್ಯೆಲ್ ಮಹಿಮೆ

Paryaya presents another poem written by Anupakrishna Bhat Nethrakere on Mobile. Enjoy it.


ಮೊಬ್ಯೆಲ್ ಮಹಿಮೆ

ಅನುಪ ಕೃಷ್ಣ ಭಟ್ ನೆತ್ರಕೆರೆ.

ಬೆಳ್ಳಂಬೆಳಗ್ಗೆ ಬೇಗನೆ ಎದ್ದು
ಗಟಗಟನೆ ಕಪ್ ಕಾಫಿಯ ಕುಡಿದು
ಮೂರ್ಖನಾಗಲಾರೆ ಇಂದು
ಎ0ದು ಅಂದುಕೊಂಡೆನು.

ಪಾರ್ಕಿನಲ್ಲಿ ನಡೆಯುತಿರಲು
ನಗುವ ಶಬ್ಧ ಕೇಳಿ ಬರಲು
ಮನದ ಒಳಗೇ ಹೆದರಿಕೊಂಡು
ಓಡಿ ಮನೆಗೆ ಬಂದೆನು.

ಹೆದರಿಕೊಂಡು ಬೆದರಿಕೊಂಡು
ಮನೆಗೆ ಬಂದು ವಿಷಯವನ್ನು
ದಡಬಡನೆ ಹೇಳುತಿರಲು
ಪತ್ನಿ ನಗುತಲಿದ್ದಳು,
ಎದ್ದುಬಿದ್ದು ನಕ್ಕಳು!

ಮಂಕನಂತೆ ಏನು ಕಥೆ
ಎಂದು ಪ್ರಶ್ನೆ ಕೇಳುತಿರಲು,
ನಗುತ ನಗುತ ಉಲಿದಳು
'ರಿಂಗಣವದು ರಿಂಗಣ'
ನಿಮ್ಮ ಮೊಬೈಲು ರಿಂಗಣ..!

ಇದನು ಕೇಳಿ ಎಲ್ಲ ನಗಲು
ಮೂರ್ಖನಾದೆ ಎಂದುಕೊಂಡು
'ಜಂಗಮ'ಕ್ಕೆ ಬ್ಯೆದುಕೊಂಡು
ಮತ್ತೆ ಹೊರಟೆ ಪಾರ್ಕಿಗೆ
ಮೂರ್ಖನಾಗಿ ಪಾರ್ಕಿಗೆ..!

Friday, March 28, 2008

ಬಂದಿತು ಮಳೆ..! Rain Hevoc

Here is a small poem written by Anup Krishna Bhat Nethrakere on rain and its havoc. People blame rain for its havoc but forget what disturb they did to its path! This poem tried to explain it. Please enjoy it.

ಬಂದಿತು ಮಳೆ..!

ಅನುಪಕೃಷ್ಣ ಭಟ್ ನೆತ್ರಕೆರೆ

ಬಂದಿತು ಮಳೆಯು
ತುಂಬಿತು ಮೋರಿಯು
ಒಡೆಯಿತು ಕಟ್ಟೆಯು ರಭಸದಲಿ
ಜನರ ಕೋಪವು ಉಕ್ಕಿ ಹರಿಯಿತು
ಪಾಪದ ಆ ಮಳೆ ರಾಯನಲಿ..!

ಮನೆಯೊಳಗೆಲ್ಲ ಕೊಳೆಯು ಬಂದಿತು,
ಕಸ-ಕಡ್ಡಿ, ಹಾವು ಚೇಳುಗಳು!
ಗ್ರಾನೈಟ್ ನೆಲದಲಿ ಜರಭರ ಜಾರುತ
ಮುರಿದವು ಹಲವರ ಕೈಕಾಲುಗಳು!

ಟಿ.ವಿ, ಕಂಪ್ಯೂಟರ್ ಹಾಳಾಗಿ ಹೋಯಿತು
ಕಷ್ಟದ ಜೊತೆಗೇ ಬಲುನಷ್ಟ..!
ಜನರ ಚಿಂತೆ ನೆತ್ತಿಗೆ ಏರಿ
ಬಿದ್ದವು ಚಿಣ್ಣರಿಗೇಟುಗಳು.!
ಜೊತೆಗೇ ಬೈಗುಳ ಸರಮಾಲೆಗಳು..!

ಒಂದೇ ಮಳೆಗೆ ತತ್ತರಿಸಿದರು
ನಮ್ಮ ನಾಡಿನ ಜನರೆಲ್ಲ..
ಗಡ ಗಡ ನಡುಗುತ, ಶಾಪವ ಹಾಕುತ
ಜರೆದರು.. 'ಇದು ಮಳೆಯಲ್ಲ'..!
ಅಬ್ಬಾಬ್ಬಾ ಇದು ಮಳೆಯಲ್ಲ!!

ಇಷ್ಟೆಲ್ಲಾದರೂ ಸ್ವಾರ್ಥ ಬುದ್ಧಿಯ
ಜನರಿಗೆ ಅರಿವು ಬರಲಿಲ್ಲ,
ಕೆರೆ ಸೈಟಿನಲಿ ಮನೆಯನು ಕಟ್ಟುವ
ವ್ಯಾಮೋಹವನು ಬಿಡಲಿಲ್ಲ.!
ಮೋರಿಯ ಒಳಗೆ ಕಸವನು ತುಂಬುವ
ಹುಚ್ಚಾಟಕೆ ಕೊನೆ ಮೊದಲಿಲ್ಲ..!

ಈ ಹುಚ್ಚಾಟವು ಮುಂದುವರೆದರೆ
ಭೂಮಿಗೆ ಖಂಡಿತ ಅಪಾಯವು
ಇದನ್ನು ಅರಿತು ಬಾಳಿರಿ ಚಿಣ್ಣರೆ
ನೀರಿಗೆ ನೀಡುತ ದಾರಿಯನು.
ಮಳೆ ನೀರಿಗೆ ನೀಡುತ ದಾರಿಯನು..!

Monday, March 24, 2008

Mysore Pak ಮೈಸೂರು ಪಾಕ್

Here is a small poem written by Anup Krishna Bhat Nethrakere. How you felt? You too can write poems or articles. PARYAYA will give scope to you and publish them here. Will you try?


ಅನುಪಕೃಷ್ಣ ಭಟ್

ನೆತ್ರಕೆರೆ



ಮೈಸೂರು ಪಾಕ್


ಅಪ್ಪ ತಂದರು ಮೈಸೂರು ಪಾಕ್
ತಿಂದೆನು ನಾನು ಸ್ಟಾಕ್ ಸ್ಟಾಕ್
ಅದರ ರುಚಿ ಇನ್ನೂ ಬೇಕು
ಆದರೆ ಆಯಿತು ಹೊಟ್ಟೆಯಲ್ಲಿ
ಸ್ಟ್ರಕ್
ತಿನ್ನದಾದೆ ಮತ್ತೊಂದು ಪ್ಯಾಕ್
ಮೈಸೂರು ಪಾಕ್.

ಆಸೆ ಆಸೆ

ಆಸೆ ಆಸೆ ನನಗೆ ಆಸೆ
ಕ್ರಿಕೆಟ್ ಆಡಲು ಬಹಳ ಆಸೆ
4 ಹೊಡೆಯಲು ಇನ್ನೂ ಆಸೆ
ವಿಕೆಟ್ ಹಾರಿದಾಗ ಆಯಿತು
ನಿರಾಸೆ.

Advertisement