Showing posts with label Prince Charles. Show all posts
Showing posts with label Prince Charles. Show all posts

Wednesday, March 25, 2020

ಇಂಗ್ಲೆಂಡ್ ರಾಜಕುಮಾರ ಚಾರ್ಲ್ಸ್ ಗೂ ಕೋವಿಡ್ ೧೯ ಸೋಂಕು

ಇಂಗ್ಲೆಂಡ್ ರಾಜಕುಮಾರ  ಚಾರ್ಲ್ಸ್ ಗೂ ಕೋವಿಡ್ ೧೯ ಸೋಂಕು
ಲಂಡನ್:  ವಿಶ್ವವ್ಯಾಪಿ  ಕೋವಿಡ್ ೧೯ ವೈರಸ್ ಮಹಾಮಾರಿ ಲಂಡನ್ ಅರಮನೆಗೂ ಕಾಲಿಟ್ಟಿತು.  71ರ ಹರೆಯದ ರಾಜಕುಮಾರ  ಚಾರ್ಲ್ಸ್ ಅವರಲ್ಲಿ ವೈರಸ್ ಸೋಂಕಿನ ಲಕ್ಷಣಗಳು ದೃಢಪಟ್ಟಿವೆ ಎಂದು ಅರಮನೆಯ ಮೂಲಗಳು  2020 ಮಾರ್ಚ್ 25ರ ಬುಧವಾರ  ತಿಳಿಸಿದವು.

ಸ್ಕಾಟ್ ಲ್ಯಾಂಡ್ ನಲ್ಲಿ ಸೋಂಕು ಪತ್ತೆ ಪರೀಕ್ಷೆಗೆ ಒಳಗಾಗಿದ್ದ ರಾಜಕುಮಾರ  ಚಾರ್ಲ್ಸ್ ಅವರ ಪರೀಕ್ಷಾ ವರದಿಗಳು ಸೋಂಕು ತಗುಲಿದ್ದನ್ನು ಖಚಿತ ಪಡಿಸಿವೆ.  ಏನಿದ್ದರೂ  ಚಾರ್ಲ್ಸ್ ಅವರ ಜೊತೆಯಲ್ಲಿಯೇ ಪರೀಕ್ಷೆಗೊಳಗಾಗಿದ್ದ ಅವರ ಪತ್ನಿ ಕಾರ್ನ್ ವಾಲ್ ಡ್ಯೂಕ್ ಕ್ಯಾಮಿಲ್ಲ ಅವರಲ್ಲಿ ವೈರಸ್ ಸೋಂಕಿನ ಲಕ್ಷಣ  ಕಂಡು ಬಂದಿಲ್ಲ ಎಂದು ವರದಿ ಹೇಳಿತು.

ಇದೀಗ ರಾಜಕುಮಾರ  ಚಾರ್ಲ್ಸ್ ಅವರು ಏಕಾಂಗಿವಾಸಕ್ಕೆ ( ಐಸೊಲೇಷನ್ ) ಒಳಗಾಗಿದ್ದಾರೆ ಎಂದು ವರದಿ ತಿಳಿಸಿತು.  ಚಾರ್ಲ್ಸ್  ಅವರ ದೇಹದಲ್ಲಿ ಕೋವಿಡ್ ೧೯ ವೈರಸ್ಸಿನ ಲ್ಪ ಪ್ರಮಾಣದ ಲಕ್ಷಣಗಳು ಕಾಣಿಸಿಕೊಂಡಿರುವುದು ಹೊರತುಪಡಿಸಿದರೆ ಉಳಿದಂತೆ ಅವರ ಆರೋಗ್ಯ ಸ್ಥಿರವಾಗಿದೆ ಹಾಗೂ ಕಳೆದ ವಾರ ಪೂರ್ತಿ ಅವರು ಮನೆಯಲ್ಲಿದ್ದು ತಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದರು ಎಂದು ವರದಿ ಹೇಳಿತು.

ಸ್ಪೇನಿನಲ್ಲಿ ಗಂಭೀರ ಸ್ಥಿತಿ:  ಈಮಧ್ಯೆ ಸ್ಪೇನಿನಲ್ಲಿ  ಕೊರೋನಾ ಸೋಂಕಿಗೆ  ಬಲಿಯಾದವರ ಸಂಖ್ಯೆ  ಇಟಲಿ ಮತ್ತು ಚೀನಾವನ್ನೇ ಮೀರಿಸಿತು. . ಕಳೆದ ೨೪ಗಂಟೆಗಳ ಅವಧಿಯಲ್ಲಿ ಸ್ಪೇನಿನಲ್ಲಿ  ೭೩೮ ಜನ ಸಾವನ್ನಪ್ಪಿದ್ದು ಒಟ್ಟಾರೆ ಸಾವಿನ ಸಂಖ್ಯೆ ,೪೩೪ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿತು.

ಕೋವಿಡ್ -೧೯ ಸಾಂಕ್ರಾಮಿಕ ರೋಗವನ್ನು ನಿಗ್ರಹಿಸುವ  ಸಲುವಾಗಿ ಸ್ಪೇನಿನಲ್ಲೂ ಸ್ತಬ್ಧ ಸ್ಥಿತಿ (ಲಾಕ್ ಡೌನ್) ಘೋಷಿಸಲಾಗಿದೆ. ಆದರೆ,  ಲಾಕ್ ಡೌನ್ ಮಧ್ಯೆಯೂ ಕೊರೋನಾ ದಾಂಧಲೆ ಮುಂದುವರೆಯುತ್ತಲೇ  ಇದೆ. ಸ್ಪೇನಿನಲ್ಲಿ ಪ್ರಸ್ತುತ  ೪೭,೬೧೦ ಜನರಿಗೆ ಮಾರಣಾಂತಿಕ ಸೋಂಕು ತಗುಲಿದೆ ಎಂದು  ಆರೋಗ್ಯ ಸಚಿವಾಲಯ ತಿಳಿಸಿತು.

ಕೊರೋನಾ ಸೋಂಕಿನಿಂದಾಗಿ ಚೀನಾದಲ್ಲಿ ,೪೦೦ ಜನ ಮೃತರಾಗಿದ್ದರೆ,  ಇಟಲಿಯಲ್ಲಿ ಸಾವಿನ ಸಂಖ್ಯೆ ,೦೦೦ ಮೀರುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ. ಮಧ್ಯೆ ಸ್ಪೇನಿನಲ್ಲೂ ಸಾವಿನ ಸಂಖ್ಯೆ ದಿನೇ ದಿನೇ ಏರುತ್ತಿರುವುದು  ಎಲ್ಲರಲ್ಲೂ ಆತಂಕ ಮೂಡಿಸಿದೆ.

Advertisement