Showing posts with label RBI. Show all posts
Showing posts with label RBI. Show all posts

Friday, May 19, 2023

ಚಲಾವಣೆಯಲ್ಲಿರುವ 2,000 ರೂಪಾಯಿ ನೋಟು ವಾಪಸ್:‌ ಆರ್‌ ಬಿಐ

 ಚಲಾವಣೆಯಲ್ಲಿರುವ 2,000 ರೂಪಾಯಿ ನೋಟು ವಾಪಸ್:‌ ಆರ್‌ ಬಿಐ

ನವದೆಹಲಿ: ಚಲಾವಣೆಯಲ್ಲಿ ಇರುವ ಎಲ್ಲ 2000 ರೂಪಾಯಿ ನೋಟುಗಳನ್ನು ತತ್‌ ಕ್ಷಣ ಚಲಾವಣೆಯಿಂದ ಹಿಂಪಡೆಯುವುದಾಗಿ 2023 ಮೇ 19ರ  ಶುಕ್ರವಾರ ಭಾರತೀಯ ರಿಸರ್ವ ಬ್ಯಾಂಕ್‌ (ಆರ್‌ ಬಿಐ) ಘೋಷಿಸಿದೆ. ನೋಟುಗಳು ಸೆಪ್ಟೆಂಬರ್ 30 ರವರೆಗೆ ಕಾನೂನುಬದ್ಧವಾಗಿ ಮುಂದುವರಿಯುತ್ತದೆ.

ನೋಟುಗಳನ್ನು ಬದಲಾಯಿಸಿಕೊಳ್ಳಲು ಸಾರ್ವಜನಿಕ ಸದಸ್ಯರಿಗೆ ಸಾಕಷ್ಟು ಸಮಯವನ್ನು ಒದಗಿಸಲು ಮತ್ತು ನೋಟು ಹಿಂತೆಗೆತದ ಪ್ರಕ್ರಿಯೆಯನ್ನು ಪೂರೈಸಿಕೊಳ್ಳುವ ಸಲುವಾಗಿ ಲ್ಲ ಬ್ಯಾಂಕುಗಳು 2023 ಸೆಪ್ಟೆಂಬರ್ 30 ರವರೆಗೆ ರೂ 2000ದ ಬ್ಯಾಂಕ್‌ ನೋಟುಗಳ ಠೇವಣಿ ಮತ್ತು ವಿನಿಮಯ ಸೌಲಭ್ಯವನ್ನು ಒದಗಿಸುತ್ತವೆ ಎಂದು ಆರ್‌ ಬಿಐ (RBI) ಹೇಳಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಬ್ಯಾಂಕುಗಳಿಗೆ ಪ್ರತ್ಯೇಕ ಮಾರ್ಗಸೂಚಿಗಳನ್ನು ನೀಡಲಾಗಿದೆ. ತಕ್ಷಣವೇ ಜಾರಿಗೆ ಬರುವಂತೆ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ನೀಡುವುದನ್ನು ನಿಲ್ಲಿಸುವಂತೆ ಆರ್‌ಬಿಐ ಬ್ಯಾಂಕ್‌ಗಳಿಗೆ ಸೂಚಿಸಿದೆ.

“2000 ರೂ ಮುಖಬೆಲೆಯ ಬ್ಯಾಂಕ್‌ ನೋಟುಗಳಲ್ಲಿ ಸುಮಾರು 89% ರಷ್ಟನ್ನು ಮಾರ್ಚ್ 2017 ರ ಮೊದಲು ಬಿಡುಗಡೆ ಮಾಡಲಾಗಿತ್ತು. ಅವುಗಳ ಅಂದಾಜು ಜೀವಿತಾವಧಿ 4-5 ವರ್ಷಗಳು.

ಚಲಾವಣೆಯಲ್ಲಿರುವ ಈ ಬ್ಯಾಂಕ್‌ ನೋಟುಗಳ ಒಟ್ಟು ಮೌಲ್ಯವು ಮಾರ್ಚ್ 31, 2018 ರ ಪ್ರಕಾರ ಗರಿಷ್ಠ 6.73 ಲಕ್ಷ ಕೋಟಿಗಳಿಂದ (ಚಲಾವಣೆಯಲ್ಲಿರುವ ನೋಟುಗಳ 37.3%) ರೂ 3.62 ಲಕ್ಷ ಕೋಟಿಗೆ ಇಳಿದಿದೆ. ಇದು ಮಾರ್ಚ್ 31, 2023 ರಂದು ಚಲಾವಣೆಯಲ್ಲಿರುವ ನೋಟುಗಳ ಕೇವಲ 10.8% ರಷ್ಟಿದೆ. ಇವುಗಳನ್ನು ಸಾಮಾನ್ಯವಾಗಿ ವಹಿವಾಟುಗಳಿಗೆ ಬಳಸಲಾಗುವುದಿಲ್ಲ ಎಂಬುದನ್ನು ಸಹ ಗಮನಿಸಲಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್‌ನ “ಕ್ಲೀನ್ ನೋಟ್ ಪಾಲಿಸಿ”ಗೆ ಅನುಗುಣವಾಗಿ ಚಲಾವಣೆಯಿಂದ ರೂ 2000 ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ನಿರ್ಧರಿಸಲಾಗಿದೆ. 2000 ರೂಪಾಯಿ ಮುಖಬೆಲೆಯ ನೋಟುಗಳು ಕಾನೂನುಬದ್ಧವಾಗಿ ಸೆಪ್ಟೆಂಬರ್‌ 30 ರವರೆಗೆ ಮುಂದುವರಿಯಲಿವೆ ಎಂದು ಆರ್‌ಬಿಐ ಪತ್ರಿಕಾ ಪ್ರಕಟಣೆ ತಿಳಿಸಿದೆ.

Saturday, October 10, 2020

ಸಾಲ ಸ್ಥಗಿತ ಅವಧಿ ವಿಸ್ತರಣೆ, ಹೆಚ್ಚಿನ ಪರಿಹಾರ ಅಸಾಧ್ಯ: ಆರ್ ಬಿಐ

 ಸಾಲ ಸ್ಥಗಿತ ಅವಧಿ ವಿಸ್ತರಣೆ, ಹೆಚ್ಚಿನ ಪರಿಹಾರ
ಅಸಾಧ್ಯ: ಆರ್ ಬಿಐ

ನವದೆಹಲಿ: ಸಾಲ ಶಿಸ್ತಿನ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಸಾಲ ಸ್ಥಗಿತದ ಅವಧಿಯನ್ನು ವಿಸ್ತರಿಸಲು ಅಥವಾ ಈಗಾಗಲೇ ತಿಳಿಸಿರುವುದಕ್ಕಿಂತ ಹೆಚ್ಚಿನ ಪರಿಹಾರವನ್ನು ಒದಗಿಸಲು ಸಾಧ್ಯವಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 2020 ಅಕ್ಟೋಬರ್ 10 ಶನಿವಾರ ಸುಪ್ರೀಂಕೋರ್ಟಿಗೆ ತಿಳಿಸಿತು.

ಸುಪ್ರೀಂಕೋರ್ಟಿಗೆ ಹೊಸ ಪ್ರಮಾಣಪತ್ರ (ಅಫಿಡವಿಟ್) ಸಲ್ಲಿಸಿರುವ ಆರ್‌ಬಿಐ, ಕೊರೋನಾವೈರಸ್ ಸಾಂಕ್ರಾಮಿಕ ಪೀಡಿತ ವಲಯಕ್ಕೆ ಹೆಚ್ಚಿನ ಪರಿಹಾರ ನೀಡಲು ಸಾಧ್ಯವಿಲ್ಲ. ಸಾಲ ಸ್ಥಗಿತ ಅವಧಿಯನ್ನು ಆರು ತಿಂಗಳು ಮೀರಿ ವಿಸ್ತರಿಸಲಾಗದು ಎಂದು ಹೇಳಿದೆ.

ಆರು ತಿಂಗಳುಗಳನ್ನು ಮೀರಿದ ದೀರ್ಘಾವಧಿಯ ಸಾಲ ಸ್ಥಗಿತವು "ಒಟ್ಟಾರೆ ಸಾಲ ಶಿಸ್ತನ್ನು ದುರ್ಬಲಗೊಳಿಸಲು ಕಾರಣವಾಗಬಹುದು, ಇದು ಆರ್ಥಿಕತೆಯಲ್ಲಿ ಸಾಲ ಸೃಷ್ಟಿಯ ಪ್ರಕ್ರಿಯೆಯನ್ನು ದುರ್ಬಲಗೊಳಿಸುವ ಪರಿಣಾಮವನ್ನು ಬೀರುತ್ತದೆ" ಎಂದು ಆರ್‌ಬಿಐ ಹೇಳಿದೆ. ಕ್ರಮವು "ನಿಗದಿತ ಪಾವತಿಗಳ ಪುನಾರಂಭದ ನಂತರದ ಅಪರಾಧಗಳ ಅಪಾಯಗಳನ್ನು ಹೆಚ್ಚಿಸುತ್ತದೆ ಮತ್ತು "ಸಾಲಗಾರರಿಗೆ ಮರುಪಾವತಿ ಒತ್ತಡವನ್ನು ಹೆಚ್ಚಿಸುತ್ತದೆ" ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.

ಕೇಂದ್ರೀಯ ಬ್ಯಾಂಕ್ ಮುನ್ನ ಸಲ್ಲಿಸಿದ ಪ್ರಮಾಣಪತ್ರಕ್ಕೆ ಸೋಮವಾರ ಪ್ರತಿಕ್ರಿಯಿಸಿದ್ದ ಸುಪ್ರೀಂಕೋರ್ಟ್ ಪ್ರಮಾಣ ಪತ್ರವು "ಅಗತ್ಯ ವಿವರಗಳನ್ನು" ಹೊಂದಿಲ್ಲ ಎಂದು ಸರ್ಕಾರಕ್ಕೆ ತಿಳಿಸಿತ್ತು ಮತ್ತು ವಿವಿಧ ಕ್ಷೇತ್ರಗಳ ಮೇಲಿನ ಕೋವಿಡ್ -೧೯ ಸಂಬಂಧಿತ ಒತ್ತಡವನ್ನು ಗಮನದಲ್ಲಿಟ್ಟುಕೊಂಡು ಸಾಲ ಪುನರ್ರಚನೆ ಕುರಿತು ಕೆವಿ ಕಾಮತ್ ಸಮಿತಿಯ ಸಲ್ಲಿಸಿದ ಶಿಫಾರಸು, ಸಾಲದ ನಿಷೇಧದ ಕುರಿತು ಇಲ್ಲಿಯವರೆಗೆ ನೀಡಲಾದ ಅಧಿಸೂಚನೆಗಳು ಮತ್ತು ಸುತ್ತೋಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಕೇಂದ್ರ ಸರ್ಕಾರ ಮತ್ತು ಆರ್‌ಬಿಐಗೆ ಸೂಚಿಸಿತ್ತು.

ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಘೋಷಿಸಲಾದ ಆರು ತಿಂಗಳ ಸಾಲ ನಿಷೇಧದ ಅವಧಿಯಲ್ಲಿ ವೈಯಕ್ತಿಕ ಸಾಲಗಾರರು ಮತ್ತು ಮಧ್ಯಮ ಮತ್ತು ಸಣ್ಣ ಕೈಗಾರಿಕೆU ಎರಡು ಕೋಟಿ ರೂ.ಗಳವರೆಗಿನ ಸಾಲಕ್ಕೆ ವಿಧಿಸಲಾಗುವ ಚಕ್ರಬಡ್ಡಿಯನ್ನು (ಬಡ್ಡಿ ಮೇಲಿನ ಬಡ್ಡಿ) ಮನ್ನಾ ಮಾಡಲು ನಿರ್ಧರಿಸಲಾಗಿದೆ ಎಂದು ಹಣಕಾಸು ಸಚಿವಾಲಯವು ಅಕ್ಟೋಬರ್ ರಂದು ಅಫಿಡವಿಟ್ ಸಲ್ಲಿಸಿದ ನಂತರ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು.

ರಿಯಲ್ ಎಸ್ಟೇಟ್‌ನಂತಹ ಇತರ ಹಲವು ಕ್ಷೇತ್ರಗಳ ಮನವಿಯ ಮೇರೆಗೆ, ಸರ್ಕಾರವು ಈಗಾಗಲೇ ಘೋಷಿಸಿದ್ದನ್ನು ಹೊರತುಪಡಿಸಿ ಹೆಚ್ಚುವರಿ ಪರಿಹಾರವನ್ನು ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟಿಗೆ ಆರ್ ಬಿಐ ತಿಳಿಸಿತು.

ರಿಯಲ್ ಎಸ್ಟೇಟ್ ಮತ್ತು ವಿದ್ಯುತ್ ಕ್ಷೇತ್ರಗಳಂತಹ ವಲಯಗಳು ವಿವಿಧ ಕಾರಣಗಳಿಗಾಗಿ ಸಾಂಕ್ರಾಮಿಕ ರೋಗಕ್ಕೆ ಮುನ್ನವೇ ಒತ್ತಡಕ್ಕೆ ಒಳಗಾಗಿದ್ದವು. ಬ್ಯಾಂಕಿಗ್ ನಿಯಮಾವಳಿಗಳ ಮೂಲಕ ವಲಯಗಳಿಗೆ ಪರಿಹಾರ ಒದಗಿಸಲು ಸಾಧ್ಯವಿಲ್ಲ. ನೈಜ ವಲಯಗಳ ತೊಂದರೆಗಳನ್ನು ಬ್ಯಾಂಕಿಂಗ್ ನಿಯಮಗಳ ಮೂಲಕ ಪರಿಹರಿಸಲು ಸಾಧ್ಯವಿಲ್ಲ ಎಂದೂ ಆರ್‌ಬಿಐ ಸುಪ್ರೀಂಕೋರ್ಟಿಗೆ ತಿಳಿಸಿದೆ.

ನಿಷೇಧಾಜ್ಞೆಯ ಸುತ್ತೋಲೆಗಳ ವಿರುದ್ಧ ವಿವಿಧ ಅರ್ಜಿದಾರರು ಎತ್ತಿದ ಇತರ ಪ್ರಮುಖ ಆಕ್ಷೇಪವೇನೆಂದರೆ ಸುತ್ತೋಲೆಗಳು ಎಲ್ಲ ಸಾಲಗಾರರಿಗೆ ಸ್ವಯಂಚಾಲಿತವಾಗಿ ಲಭಿಸುತ್ತಿಲ್ಲ, ಸಾಲಗಾರರ ವಿವೇಚನೆಗೆ ಅನುಗುಣವಾಗಿ ಇವೆ ಎಂಬುದು. ಇದಕ್ಕೆ  ಆರ್‌ಬಿಐ, ‘ ಸಂದರ್ಭದಲ್ಲಿ, ಸಾಲದ ಒಪ್ಪಂದದ ನಿಯಮಗಳನ್ನು ನಿಯಂತ್ರಕ ಉದ್ದೇಶಗಳಿಗಾಗಿ ಪುನರ್ರಚಿಸುವಂತೆಯೇ ಪರಿಗಣಿಸದೆ, ರಿಸರ್ವ್ ಬ್ಯಾಂಕ್ ಸಾಲದಾತರಿಗೆ ನಿಷೇಧವನ್ನು ಅನುಮತಿಸುವ ವ್ಯವಸ್ಥೆಯನ್ನು ಮಾತ್ರ ಒದಗಿಸಿದೆ ಎಂದು ಹೇಳಿದೆ.

ಇತರ ವರ್ಗದ ಸಾಲಗಾರರಿಗೆ ಪರಿಹಾರ ನೀಡಲು ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಸರ್ಕಾರವನ್ನು ಕೇಳಿದ ನಂತರ  ಆರ್‌ಬಿಐ ಪ್ರತಿಕ್ರಿಯೆ ಬಂದಿದೆ. ಮುಂದಿನ ವಾರ ನ್ಯಾಯಾಲಯ ವಿಷಯಗಳನ್ನು ಆಲಿಸುವ ನಿರೀಕ್ಷೆಯಿದೆ.

Friday, October 9, 2020

ಜಿಡಿಪಿ ಕುಸಿತ ಶೇಕಡ ೯.೫ರಷ್ಟು : ರಿಸರ್ವ್ ಬ್ಯಾಂಕ್

 ಜಿಡಿಪಿ ಕುಸಿತ ಶೇಕಡ .೫ರಷ್ಟು : ರಿಸರ್ವ್ ಬ್ಯಾಂಕ್

ಮುಂಬೈ: ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ದೇಶದ ಸಮಗ್ರ ಆಂತರಿಕ ಉತ್ಪನ್ನ ದರವು (ಜಿಡಿಪಿ) ಶೇಕಡ .೫ರಷ್ಟು ಕುಸಿತಗೊಳ್ಳಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಅಂದಾಜು ಮಾಡಿದೆ.

ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ (ಏಪ್ರಿಲ್,ಮೇ, ಜೂನ್) ಆರ್ಥಿಕ ವೃದ್ಧಿ ದರ ಋಣಾತ್ಮಕವಾಗಿ ಶೇಕಡ ೨೩.೯ರಷ್ಟು ಕುಸಿದಿತ್ತು.

2020 ಅಕ್ಟೋಬರ್ 09ರ ಶುಕ್ರವಾರ ನಡೆದ ಆರ್ಬಿಐ ಹಣಕಾಸು ನೀತಿ ಸಮಿತಿ ಸಭೆಯ ಬಳಿಕ ವಿವರ ನೀಡಿದ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ಕೊರೊನಾ ವೈರಸ್ ವಿರೋಧಿ ಹೋರಾಟದಲ್ಲಿ ಭಾರತದ ಆರ್ಥಿಕತೆ ನಿರ್ಣಾಯಕ ಹಂತವನ್ನು ಪ್ರವೇಶಿಸಿದೆ ಎಂದು ಹೇಳಿದರು.

ಹಣದುಬ್ಬರ ದರವು ಪ್ರಸಕ್ತ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಕಡಿಮೆಯಾಗಬಹುದು ಎಂದು ಅವರು ಅಂದಾಜಿಸಿದರು. ಹಣದುಬ್ಬರ ದರವನ್ನು ಶೇಕಡ ೪ರಷ್ಟು ಇರುವಂತೆ ಕ್ರಮಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರ ಆರ್ಬಿಐಗೆ ಸೂಚಿಸಿದೆ.

ಬಡ್ಡಿ ದರ ಬದಲಾವಣೆ ಇಲ್ಲ:

ನಿರೀಕ್ಷೆಯಂತೆ ಪ್ರಮುಖವಾದ ಬಡ್ಡಿ ದರಗಳನ್ನು ಬದಲಾವಣೆ ಮಾಡದಿರಲು ಆರ್ಬಿಐ ಹಣಕಾಸು ನೀತಿ ಸಮಿತಿ ಸಭೆ ನಿರ್ಧರಿಸಿತು.

ಕೊರೊನಾ ವೈರಸ್ಸಿನಿಂದ ಕುಂಠಿತವಾಗಿರುವ ಆರ್ಥಿಕ ಚಟುವಟಿಕೆಗಳಿಗೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗಿದೆ ಎಂದು ವಿಶ್ಲೇಷಿಸಲಾಗಿದೆ.

ರೆಪೊ ದರವನ್ನು ಮತ್ತೆ ಶೇಕಡ ೪ರಲ್ಲೇ ಉಳಿಸಲಾಗಿದೆ. ಡಿಸೆಂಬರ್ ತಿಂಗಳಿಂದ ಆರ್ಟಿಜಿಎಸ್ ವ್ಯವಸ್ಥೆ ದಿನದ ೨೪ಗಂಟೆಯೂ ಲಭ್ಯವಾಗುವಂತೆ ಕ್ರಮಕೈಗೊಳ್ಳಲು ನಿರ್ಧರಿಸಲಾಗಿದೆ.

ಆರ್ಥಿಕ ಚಟುವಟಿಕೆ ಕ್ರಮೇಣ ಸಹಜ ಸ್ಥಿತಿಗೆ ಮರಳುತ್ತಿದೆ. ಕಾರ್ಖಾನೆಗಳು ಸಹ ಪುನಾರಂಭಗೊಂಡಿವೆ. ಜತೆಗೆ, ಬಾರಿ  ದಾಖಲೆಯ ಪ್ರಮಾಣದಲ್ಲಿ ಆಹಾರ ಉತ್ಪಾದನೆಯಾಗುವ ಸಾಧ್ಯತೆ ಇದೆ. ಸಂಕಷ್ಟದ ನಡುವೆಯೂ ಆರ್ಥಿಕತೆಗೆ ಪುಃಶ್ವೇತನ ದೊರೆಯುವ ನಿರೀಕ್ಷೆ ಇದೆ ಎಂದು ಶಕ್ತಿಕಾಂತ್ ದಾಸ್ ಹೇಳಿದರು.

ಗೃಹ ಸಾಲಕ್ಕೆ ಉತ್ತೇಜನ:

ಗೃಹ ಸಾಲಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಕ್ರಮಕೈಗೊಂಡಿದೆ. ಬ್ಯಾಂಕುಗಳು ಮಂಜೂರು ಮಾಡಿದ ಗೃಹ ಸಾಲದ ಸುಸ್ತಿಗೆ ತೆಗೆದಿರಿಸಬಹುದಾದ ಮೊತ್ತವನ್ನು ಕಡಿಮೆ ಮಾಡಲಾಗಿದೆ. ಇದರಿಂದ ರಿಯಲ್ ಎಸ್ಟೇಟ್ ವಲಯಕ್ಕೆ ಸಾಲದ ನೆರವು ಹೆಚ್ಚಲಿದೆ. ರಿಸರ್ವ್ ಬ್ಯಾಂಕಿನ ನಿರ್ಧಾರದಿಂದ ಬ್ಯಾಂಕುಗಳು ಮತ್ತು  ಮತ್ತು ಸಾಲಗಾರರಿಗೆ ಪ್ರಯೋಜನವಾಗಲಿದೆ ಎಂದು ಎನ್ನಲಾಗಿದೆ.

ರಿಯಲ್ ಎಸ್ಟೇಟ್ ವಲಯದಲ್ಲಿ ಉದ್ಯೋಗ ಸೃಷ್ಟಿ ಸೇರಿದಂತೆ ವಿವಿಧ ವಲಯಗಳಿಗೂ ಅನುಕೂಲವಾಗಲಿವೆ. ಜತೆಗೆ, ಗೃಹ ಸಾಲಕ್ಕೆ ಹೆಚ್ಚು ಮೊತ್ತ ದೊರೆಯಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟರು.

ಬಡ್ಡಿ ದರ ಕುರಿತು ನಿರೀಕ್ಷೆಯಂತೆ ನಿರ್ಧಾರ ಕೈಗೊಳ್ಳಲಾಗಿದೆ. ಈಗಾಗಲೇ ಹಣದುಬ್ಬರ ಹೆಚ್ಚಾಗಿರುವುದರಿಂದ ಕ್ರಮಕೈಗೊಳ್ಳಲಾಗಿದೆ. ಡಿಸೆಂಬರ್ ಹೊತ್ತಿಗೆ ಹಣದುಬ್ಬರ ಕಡಿಮೆಯಾಗಬಹುದು. ಮುಂದಿನ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಬಡ್ಡಿ ದರಗಳನ್ನು ಕಡಿಮೆ ಮಾಡಬಹುದು ಎಂದು ಆರ್ಥಿಕ ತಜ್ಞ ಸುಜನ್ ಹಜ್ರಾ ಹೇಳಿದರು.

Advertisement