Showing posts with label Rafel Deal. Show all posts
Showing posts with label Rafel Deal. Show all posts

Wednesday, November 4, 2020

ಐಎಎಫ್ ರಫೇಲ್ ವಿಮಾನದ ಎರಡನೇ ತಂಡ ಭಾರತಕ್ಕೆ

 ಐಎಎಫ್ ರಫೇಲ್ ವಿಮಾನದ ಎರಡನೇ ತಂಡ ಭಾರತಕ್ಕೆ

ನವದೆಹಲಿ: ಭಾರತೀಯ ವಾಯುಪಡೆಯ ಮೂರು ರಫೇಲ್  ಫೈಟರ್ ಜೆಟ್ಗಳ ಎರಡನೇ ತಂಡವು 2020 ನವೆಂಬರ್ 04ರ ಬುಧವಾರ ಫ್ರಾನ್ಸಿನಿಂದ ನೇರವಾಗಿ ಭಾರತಕ್ಕೆ ಬಂದಿತು.

"ಐಎಎಫ್ # ರಫೇಲ್ ವಿಮಾನದ ಎರಡನೇ ತಂಡವು ಪ್ರಾನ್ಸಿನಿಂದ ತಡೆರಹಿತವಾಗಿ ಹಾರಿದ ನಂತರ ೦೪ ನವೆಂಬರ್ ೨೦ ರಂದು ರಾತ್ರಿ :೧೪ ಕ್ಕೆ ಭಾರತಕ್ಕೆ ಬಂದಿತು" ಎಂದು ಭಾರತೀಯ ವಾಯುಪಡೆಯು ಟ್ವೀಟ್ ಮಾಡಿತು.

‘ಮೂರು ಜೆಟ್ಗಳು ತಮ್ಮ ದಾರಿಯಲ್ಲಿ ನಿಲುಗಡೆ ಹೊಂದಿರುವುದಿಲ್ಲ. ಪ್ರಯಾಣದ ಸಮಯದಲ್ಲಿ ಅವುಗಳಿಗೆ ಫ್ರೆಂಚ್ ಮತ್ತು ಭಾರತೀಯ ಟ್ಯಾಂಕರ್ಗಳು ಇಂಧನ ತುಂಬಿಸಲಿವೆ. ಜಾಮ್ನಗರದಲ್ಲಿ ಒಂದು ದಿನದ ವಿರಾಮದ ನಂತರ ಜೆಟ್ಗಳು ಅಂಬಾಲಾ ತಲುಪುವ ನಿರೀಕ್ಷೆಯಿದೆ’ ಎಂದು ಅಧಿಕಾರಿಗಳು ತಿಳಿಸಿದ್ದರು.

ಭಾರತೀಯ ವಾಯುಪಡೆಯು ಆದೇಶ ನೀಡಿದ್ದ  ೩೬ ರಫೇಲ್ ವಿಮಾನಗಳ ಪೈಕಿ ಐದು ರಫೇಲ್  ಜೆಟ್ಗಳ ಮೊದಲ ತಂಡವು ಜುಲೈ ೨೯ ರಂದು ಅಬುಧಾಬಿ ಬಳಿಯ ಅಲ್ ದಫ್ರಾ ವಾಯುನೆಲೆಯಲ್ಲಿ ನಿಲುಗಡೆ ಮಾಡಿದ ನಂತರ ಅಂಬಾಲಾ ವಾಯುನೆಲೆಗೆ ತಲುಪಿತ್ತು. ಆದರೆ ಸೆಪ್ಟೆಂಬರ್ ೧೦ ರಂದು ಔಪಚಾರಿಕ ಸೇರ್ಪಡೆ ಸಮಾರಂಭ ನಡೆಯಿತು.

Friday, November 15, 2019

ರಫೇಲ್ ಹಗರಣ ತನಿಖೆಗೆ ಮತ್ತೆ ರಾಹುಲ್ ಗಾಂಧಿ ಆಗ್ರಹ

ರಫೇಲ್ ಹಗರಣ ತನಿಖೆಗೆ ಮತ್ತೆ ರಾಹುಲ್ ಗಾಂಧಿ ಆಗ್ರಹ
ನವದೆಹಲಿ:  ರಫೇಲ್ ವ್ಯವಹಾರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಕ್ಲೀನ್ ಚಿಟ್ ನೀಡಿದ ಬೆನ್ನಲ್ಲೇ ವ್ಯವಹಾರದ ಬಗ್ಗೆ ಜಂಟಿ ಸಂಸದೀಯ ತನಿಖೆಗೆ ತತ್ ಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ಆಗ್ರಹಿಸಿದ್ದಾರೆ.

ರಫೇಲ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಮರುಪರಿಶೀಲನಾ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ ಕೆಲವೇ ಗಂಟೆಗಳಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿಸುಪ್ರೀಂಕೋರ್ಟ್ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಅವರು ರಫೇಲ್ ಯುದ್ಧ ವಿಮಾನ ಖರೀದಿ ಬಗ್ಗೆ ತನಿಖೆಗೆಮಹಾದ್ವಾರವನ್ನುತೆರೆದಿದ್ದಾರೆಎಂದು ಹೇಳಿದ್ದಾರೆ.

ಫ್ರಾನ್ಸಿನ ಡಸಾಲ್ಟ್ ಏವಿಯೇಶನ್ ಕಂಪೆನಿಯಿಂದ ೩೬ ರಫೇಲ್ ಯುದ್ಧ ವಿಮಾನ ಖರೀದಿ ಸಂಬಂಧಿಸಿದ ವಹಿವಾಟಿನ ಬಗ್ಗೆ ತನಿಖೆಗಾಗಿ ಎಫ್ಐಆರ್ ದಾಖಲಿಸುವಂತೆ ಸಿಬಿಐಗೆ ನಿರ್ದೇಶನ ಕೋರಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ ಬಳಿಕ ಕಾಂಗ್ರೆಸ್ ನಾಯಕ ಆಗ್ರಹ ಮಾಡಿದರು.

೩೬ ಯುದ್ಧ ರಫೇಲ್ ವಿಮಾನಗಳ ಖರೀದಿ ಪ್ರಕ್ರಿಯೆಯ ನಿರ್ಣಯಕ್ಕೆ ಸಂಬಂಧಿಸಿಂತೆ ಸಂಶಯ ಪಡುವಂತಹುದೇನೂ ಇಲ್ಲ ಎಂಬುದಾಗಿ ೨೦೧೮ ಡಿಸೆಂಬರ್ ೧೪ರಂದು ನೀಡಿದ್ದ ತನ್ನ ತೀರ್ಪಿನ ಪುನರ್ ಪರಿಶೀಲನೆ ಕೋರಿ ದಾಖಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ ಇದಕ್ಕೆ ಮುನ್ನ ವಜಾಗೊಳಿಸಿತ್ತು.

ಪುನರ್ ಪರಿಶೀಲನೆ ಅರ್ಜಿಗಳಲ್ಲಿ ಯಾವುದೇ ಅರ್ಹತೆ ನಮಗೆ ಕಾಣುತ್ತಿಲ್ಲಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಮತ್ತು ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್ ಹಾಗೂ ಕೆ.ಎಂ. ಜೋಸೆಫ್ ಅವರ ಪೀಠ ಹೇಳಿತ್ತು.

ಆಪಾದನೆಗಳಿಗೆ ಸಂಬಂಧಿಸಿದಂತೆಸಂಚಾರೀ ತನಿಖೆಗೆ ಆದೇಶ ನೀಡಬೇಕಾದ ಅಗತ್ಯವಿಲ್ಲ ಎಂಬ ತೀರ್ಮಾನಕ್ಕೆ ನ್ಯಾಯಮೂರ್ತಿಗಳು ಬಂದಿದ್ದಾರೆ ಎಂದು ತೀರ್ಪನ್ನು ಓದುತ್ತಾ ನ್ಯಾಯಮೂರ್ತಿ ಕೌಲ್ ಹೇಳಿದ್ದರು.

ಪ್ರತ್ಯೇಕ ತೀರ್ಪು ನೀಡಿದ ನ್ಯಾಯಮೂರ್ತಿ ಜೋಸೆಫ್ ಅವರು, ತಾವು ಕಾರಣ ಕೊಟ್ಟಿರುವ ಕೆಲವು ಅಂಶಗಳಿಗೆ ಒಳಪಟ್ಟು ಮುಖ್ಯ ತೀರ್ಪನ್ನು ತಾವು ಒಪ್ಪಿರುವುದಾಗಿ ಹೇಳಿದ್ದರು.

ನ್ಯಾಯಮೂರ್ತಿ ಜೋಸೆಫ್ ಅವರು ರಫೇಲ್ ಹಗರಣದ ತನಿಖೆಗೆ ಮಹಾದ್ವಾರವನ್ನೇ ತೆರೆದಿದ್ದಾರೆ. ಈಗ ಆದಷ್ಟೂ ಬೇಗ ತನಿಖೆ ಆರಂಭವಾಗಲೇಬೇಕು. ಹಗರಣದ ತನಿಖೆಗಾಗಿ ಜಂಟಿ ತನಿಖಾ ಸಮಿತಿಯನ್ನೂ ರಚಿಸಬೇಕುಎಂದು ರಾಹುಲ್ ಗಾಂಧಿಯವರುಬಿಜೆಪಿ ಲೈಸ್ ಆನ್ ರಫೇಲ್ಹ್ಯಾಷ್ ಟ್ಯಾಗ್ ಹಾಕಿ ಟ್ವೀಟ್ ಮಾಡಿದರು. ಅದಕ್ಕೆ ನ್ಯಾಯಮೂರ್ತಿ ಜೋಸೆಫ್ ಅವರ ಪ್ರತ್ಯೇಕ ತೀರ್ಪಿನ ಆಯ್ದ ಭಾಗಗಳನ್ನೂ ರಾಹುಲ್ ಜೋಡಿಸಿದರು.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ಸಿನ ಮುಖ್ಯ ವಕ್ತಾರ ರಣದೀಪ್ ಸುರ್ಜೆವಾಲ ಅವರು, ’ಬಿಜೆಪಿಯು ಸಂಭ್ರಮಾಚರಣೆಯನ್ನು ನಿಲ್ಲಿಸಬೇಕು ಮತ್ತು ಕೋರ್ಟ್ ನಿರ್ಣಯವು ರಫೇಲ್ ವ್ಯವಹಾರದ ತನಿಖೆಗೆ ದಾರಿ ಮಾಡಿರುವುದರಿಂದ ತನಿಖೆ ನಡೆಸುವತ್ತ ಗಮನ ಹರಿಸಬೇಕುಎಂದು ಆಗ್ರಹಿಸಿದರು.

ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಅವರು ಹೇಳಿದರು.

ರಾಹುಲ್ ಗಾಂಧಿಗೆ ಎಚ್ಚರಿಕೆ, ನ್ಯಾಯಾಂಗ ನಿಂದನೆ ಖಟ್ಲೆ ರದ್ದು

ರಾಹುಲ್ ಗಾಂಧಿಗೆ ಎಚ್ಚರಿಕೆ, ನ್ಯಾಯಾಂಗ ನಿಂದನೆ ಖಟ್ಲೆ ರದ್ದು
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ, ’ಚೌಕೀದಾರ್‌ಚೋರ್ ಹೈ ಎಂದು ನ್ಯಾಯಾಲಯವನ್ನೇ ಉಲ್ಲೇಖಿಸಿ ಮಾತನಾಡಿದ್ದ ರಾಹುಲ್ ಗಾಂದಿ ಅವರಿಗೆ, ಭವಿಷ್ಯದಲ್ಲಿಎಚ್ಚರಿಕೆಯಿಂದ ಮಾತನಾಡುವಂತೆ ಪೀಠವು ಎಚ್ಚರಿಕೆ ನೀಡಿ ಅವರ ವಿರುದ್ಧ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಖಟ್ಲೆಯನ್ನೂ ಕೂಡಾ ಸುಪ್ರೀಂಕೋರ್ಟ್  2019 ನವೆಂಬರ್ 14ರ ಗುರುವಾರ ರದ್ದು ಪಡಿಸಿತು.

ರಫೇಲ್‌ಯುದ್ಧ ವಿಮಾನಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ’ಚೌಕೀದಾರ್‌ಚೋರ್ ಹೈ ಎಂಬುದಾಗಿ ಸುಪ್ರೀಂಕೋರ್ಟ್ ಹೇಳಿದೆ ಎಂಬ ಕಾಂಗ್ರೆಸ್ ಹಿಂದಿನ ಅಧ್ಯಕ್ಷ ರಾಹುಲ್ ಗಾಂಧಿ ಅವರ ಹೇಳಿಕೆ ವಿರುದ್ಧ ಸಲ್ಲಿಕೆಯಾಗಿದ್ದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರು ಸಲ್ಲಿಸಿದ್ದ ಕ್ಷಮೆಯಾಚನೆಯನ್ನು ಅಂಗೀಕರಿಸಿದ ಪೀಠ ನ್ಯಾಯಾಂಗ ನಿಂದನೆ ಪ್ರಕರಣಕೈ ಬಿಟ್ಟಿರುವುದಾಗಿ ತೀರ್ಪು ನೀಡಿತು.

ಸುಪ್ರೀಂಕೋರ್ಟ್ ಸಿಜೆಐ ರಂಜನ್ ಗೋಗೊಯಿ ನೇತೃತ್ವದ ತ್ರಿಸದಸ್ಯ ಪೀಠವು, ’ಚೌಕೀದಾರ್‌ಚೋರ್ ಹೈ ಎಂಬ ಹೇಳಿಕೆ ಕುರಿತು ರಾಹುಲ್‌ಗಾಂಧಿ ಸಲ್ಲಿಸಿದ್ದ ಕ್ಷಮೆಯಾಚನೆ ಪ್ರಮಾಣ ಪತ್ರವನ್ನು  ಸ್ವೀಕರಿಸಿ, ಮುಂದಕ್ಕೆ ಎಚ್ಚರಿಕೆಯಿಂದ ಹೇಳಿಕೆ ನೀಡುವಂತೆ ನಿರ್ದೇಶಿಸಿ ಮೊಕದ್ದಮೆಯನ್ನು ಕೈಬಿಟ್ಟಿರುವುದಾಗಿ ಹೇಳಿತು.

ರಫೇಲ್‌ಯುದ್ಧ ವಿಮಾ ಖರೀದಿ ವಿಚಾರದಲ್ಲಿ ಚೌಕೀದಾರ್ ಚೋರ್ ಹೈ ಎಂಬ ತನ್ನ ಹೇಳಿಕೆಯನ್ನು ಸುಪ್ರೀಂಕೋರ್ಟ್ ಒಪ್ಪಿದೆ ಎಂಬುದಾಗಿ ರಾಹುಲ್ ಗಾಂಧಿ ಹೇಳಿದ್ದರು. ಈ ಹೇಳಿಕೆ ವಿರುದ್ಧ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ನ್ಯಾಯಾಂಗ ನಿಂದನೆ ಖಟ್ಲೆ ದಾಖಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ್ದ ಸಿಜೆಐ ರಂಜನ್ ಗೋಗೊಯಿ ನೇತೃತ್ವದ ತ್ರಿಸದಸ್ಯ ಪೀಠ, ಈ ಬಗ್ಗೆ ಒಂದೋ ಕ್ಷಮೆ ಕೇಳಿ, ಇಲ್ಲವೇ ವಿಚಾರಣೆ ಎದುರಿಸಿ ಎಂದು ರಾಹುಲ್ ಗಾಂಧಿಗೆ ಸೂಚಿಸಿತ್ತು. ಬಳಿಕ ರಾಹುಲ್ ಗಾಂದಿ ತಮ್ಮ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರು. ಅಲ್ಲದೇ ಸುಪ್ರೀಂಕೋರ್ಟಿಗೆ ಪ್ರಮಾಣಪತ್ರವನ್ನೂ ಸಲ್ಲಿಸಿದ್ದರು.

Thursday, November 14, 2019

ರಫೇಲ್ ಯುದ್ಧ ವಿಮಾನ ಖರೀದಿ ಪ್ರಕರಣ; ಪುನರ್ ಪರಿಶೀಲನಾ ಅರ್ಜಿ ವಜಾ

ರಫೇಲ್ ಯುದ್ಧ ವಿಮಾನ ಖರೀದಿ ಪ್ರಕರಣ: ಪುನರ್ ಪರಿಶೀಲನಾ ಅರ್ಜಿ ವಜಾ

ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿ ತಾನು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ 2019 ನವೆಂಬರ್ 14ರ ಗುರುವಾರ ವಜಾಗೊಳಿಸಿತು. ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಭಾರೀ ನಿರಾಳತೆ ಲಭಿಸಿತು.

ಫ್ರಾನ್ಸ್ ಜೊತೆಗಿನ ರಫೇಲ್ ಯುದ್ಧ ವಿಮಾನ ಖರೀದಿ ಸಮರ್ಪಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಕ್ಲೀನ್ ಚಿಟ್ ನೀಡಿತ್ತು. ಆದರೆ ಈ ತೀರ್ಪಿನ ವಿರುದ್ಧ ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹ, ಅರುಣ್ ಶೌರಿ, ವಕೀಲ ಪ್ರಶಾಂತ್ ಭೂಷಣ್ ಮತ್ತು ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಪುನರ್ ಪರಿಶೀಲನಾ ಅರ್ಜಿ ದಾಖಲಿಸಿದ್ದರು.

"ಈ ಪ್ರಕರಣದಲ್ಲಿ ತನಿಖೆ ನಡೆಸಲು ಆದೇಶ ಹೊರಡಿಸುವ ಪೂರಕ ಅಂಶಗಳಿಲ್ಲ. ಹೀಗಾಗಿ ಅರ್ಜಿಯನ್ನು ವಜಾ ಮಾಡುತ್ತಿದೇವೆ" ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ತ್ರಿಸದಸ್ಯ ಸುಪ್ರೀಂಕೋರ್ಟ್  ಪೀಠ ಹೇಳಿತು. ಈಗ ಎಫ್‌ಐಆರ್ ದಾಖಲಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತು.

ರಫೇಲ್‌ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಕ್ಲೀನ್ ಚಿಟ್ ನೀಡಿತ್ತು. ಈ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿದ್ದ ಪುನರ್ ಪರಿಶೀಲನಾ ಅರ್ಜಿಯ ವಿಚಾರಣೆಯನ್ನು ೨೦೧೯ರ ಮೇ ೧೦ರಂದು ಪೂರ್ಣಗೊಳಿಸಿದ್ದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು.

ಸಿಜೆಐ ರಂಜನ್ ಗೊಗೋಯಿ ಮತ್ತು ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್, ಕೆ.ಎಂ. ಜೋಸೆಫ್ ಅವರಿದ್ದ ನ್ಯಾಯಪೀಠ  ಪುನರ್ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿತು.

ಈ ಮುನ್ನ, ರಫೇಲ್‌ಖರೀದಿ ಒಪ್ಪಂದದಲ್ಲಿ ಅಕ್ರಮ ನಡೆದಿದ್ದು, ತನಿಖೆಗೆ ಆದೇಶಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ ೨೦೧೮ರ ಡಿಸೆಂಬರ್ ೧೪ರಂದು ಸಾಕ್ಷ್ಯಾಧಾರಗಳಿಲ್ಲ ಎಂಬ ಕಾರಣಕ್ಕೆ ವಜಾಗೊಳಿಸಿತ್ತು.

ಪುನರ್ ಪರಿಶೀಲನಾ ಅರ್ಜಿ ವಜಾಗೊಳಿಸಿದ್ದು ಏಕೆ?
ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ತಾನು ನೀಡಿದ್ದ ತೀರ್ಪಿನ ವಿರುದ್ಧ ದಾಖಲಾದ ಪುನರ್ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದ್ದು ಏಕೆ ಎಂಬುದಾಗಿ ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ವಿವರವಾಗಿ ತಿಳಿಸಿದೆ.

ಸುಪ್ರೀಂಕೋರ್ಟ್ ವಕೀಲ ಪ್ರಶಾಂತ ಭೂಷಣ್, ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹ ಮತ್ತು ಅರುಣ್ ಶೌರಿ ಅವರು ಸಲ್ಲಿಸಿದ್ದ ಪುನರ್‌ಪರಿಶೀಲನಾ ಅರ್ಜಿಯ ಮೂಲಭೂತ ಮನವಿ ೩೬ ರಫೇಲ್ ಯುದ್ಧ ವಿಮಾನಗನ್ನು ಫ್ರಾನ್ಸಿನ ಡಸಾಲ್ಟ್ ಏವಿಯೇಶನ್ ಸಂಸ್ಥೆಯಿಂದ ಖರೀದಿಸಿದ್ದಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಲು ಪ್ರಥಮ ಮಾಹಿತಿ ವರದಿ (ಎಫ್ ಐಆರ್) ದಾಖಲಿಸಲು ನಿರ್ದೇಶನ ನೀಡಬೇಕು ಎಂಬುದಾಗಿತ್ತು.

ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದ ಇಂತಹುದೇ ವಿಷಯದ ಕುರಿತು ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ನೀಡಿದ್ದ ತನ್ನ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ತಳೆದಿದ್ದ ನಿಲುವನ್ನೇ  ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಪೀಠವು ಗುರುವಾರ ನೀಡಿದ ತನ್ನ ತೀರ್ಪಿನಲ್ಲೂ ಪುನರುಚ್ಚರಿಸಿದೆ. ವ್ಯವಹಾರಕ್ಕೆ ಸಂಬಂಧಿಸಿದಂತೆ ’ಸಂಚಾರ ಮತ್ತು ಮೀನಿಗಾಗಿ ಗಾಳಹಾಕುವ ತನಿಖೆ ನಡೆಸುವ ಅಗತ್ಯ ತನಗೆ ಕಾಣುತ್ತಿಲ್ಲ ಎಂದು ಪೀಠ ತನ್ನ ಹಿಂದಿನ ತೀರ್ಪಿನಲ್ಲಿ ಹೇಳಿತ್ತು.

‘ಈ ವಿಮಾನಗಳ ಅಗತ್ಯವು ಎಂದೂ ವಿವಾದವಾಗಿರಲಿಲ್ಲ. ನಾವು ೩೪ನೇ ಪ್ಯಾರಾದಲ್ಲಿ ಮೇಲೆ ತಿಳಿಸಿದ ಮೂರು ಅಂಶಗಳನ್ನು ಹೊರತು ಪಡಿಸಿ, ಅದೂ ಸೀಮಿತ ವ್ಯಾಪ್ತಿಗಾಗಿ, ಪರ್‍ಯಟನೆ ಮತ್ತು ಮೀನಿಗಾಗಿ ಗಾಳಹಾಕುವ ತನಿಖೆಯ ಯತ್ನದ ಅಗತ್ಯವಿದೆ ಎಂದು ಈ ನ್ಯಾಯಾಲಯ ಪರಿಗಣಿಸುವುದಿಲ್ಲ ಎಂದು ಸುಪ್ರೀಂಕೋರ್ಟ್ ತನ್ನ ಗುರುವಾರದ ತೀರ್ಪಿನಲ್ಲಿ ತಿಳಿಸಿದೆ.
‘ಇದಲ್ಲದೆ, ದಾಖಲೆಯಲ್ಲಿ ಎದ್ದು ಕಾಣುವಂತಹ ಲೋಪ ಇಲ್ಲದ ಹೊರತು, ಈ ಮರುಪರಿಶೀಲನಾ ಅರ್ಜಿಗಳನ್ನು ಅಂಗೀಕರಿಸಬೇಕಾದ ಅಗತ್ಯವಿಲ್ಲ ಎಂಬ ವಾಸ್ತವಾಂಶವನ್ನೂ ನಾವು ಗಮನಿಸದಿರಲು ಸಾಧ್ಯವಿಲ್ಲ ಎಂದೂ ಪೀಠ ಹೇಳಿದೆ.

ಬೆಲೆ ನಿಗದಿಗೆ ಸಂಬಂಧಿಸಿದಂತೆ, ಒದಗಿಸಲಾದ ಮಾಹಿತಿ ತನಗೆ ತೃಪ್ತಿ ನೀಡಿದೆ ಎಂದು ಪೀಠ ಹೇಳಿದೆ.
ಅರ್ಜಿದಾರರು ತಮ್ಮ ಮನವಿಯಲ್ಲಿ ಎತ್ತಿ ಹಿಡಿದಿದ್ದ ಯುದ್ಧ ವಿಮಾನ ಖರೀದಿಗೆ ಕಾರಣವಾದ ನಿರ್ಣಯದ ಮೇಲಿನ ಅಭಿಪ್ರಾಯದಲ್ಲಿನ ಲೋಪದೋಷಗಳ ವಿಷಯವನ್ನೂ ಸಿಜೆಐ ನೇತೃತ್ವದ ಪೀಠವು ಗಣನೆಗೆ ತೆಗೆದುಕೊಂಡಿದೆ.

‘ಒಪ್ಪಂದದ ಪ್ರತಿಯೊಂದು ಅಂಶವನ್ನು ನಿರ್ಧರಿಸಲು ಅರ್ಜಿದಾರರು ತಮ್ಮನ್ನು ತಾವೇ ಮೇಲ್ಮನವಿ ಪ್ರಾಧಿಕಾರ ಎಂಬುದಾಗಿ ಬಿಂಬಿಸಿಕೊಳ್ಳಲು ಯತ್ನಿಸಿದಂತೆ ಕಾಣುತ್ತಿದೆ ಮತ್ತು ಅದನ್ನೇ ಮಾಡುವಂತೆ ನ್ಯಾಯಾಲಯಕ್ಕೂ ಹೇಳಿದ್ದಾರೆ ಎಂದು ಹೇಳಿದ ಕೋರ್ಟ್, ’ಇದು ಚಲಾಯಿಸಬೇಕಾದ ವ್ಯಾಪ್ತಿ ಎಂದು ನಾವು ನಂಬುವುದಿಲ್ಲ ಎಂದು ಹೇಳಿದೆ.

ನಿರ್ಣಯ ಕೈಗೊಳ್ಳುವ ಪ್ರಕ್ರಿಯೆಯ ಮಾರ್ಗದಲ್ಲಿ ಅಭಿಪ್ರಾಯಗಳನ್ನು ನೀಡಿರುವುದನ್ನು ನಾವು ನಿಸ್ಸಂಶಯವಾಗಿ ಗಮನಿಸಿದ್ದೇವೆ. ಇವು ನಿರ್ಣಯಕ್ಕಿಂತ ಭಿನ್ನವಾಗಿರಬಹುದು, ಆದರೆ ಯಾವುದೇ ನಿರ್ಣಯ ಕೈಗೊಳ್ಳುವ ಪ್ರಕ್ರಿಯೆಯು ಚರ್ಚೆಗಳು ಮತ್ತು ತಜ್ಞರ ಅಭಿಪ್ರಾಯವನ್ನು ಎದುರುನೋಡುತ್ತದೆ ಮತ್ತು ಸಮರ್ಥ ಪ್ರಾಧಿಕಾರದ ಜೊತೆಗೆ ಅಂತಿಮ ಚರ್ಚೆ ನಡೆಸುತ್ತದೆ ಎಂದು ಪೀಠ ಹೇಳಿದೆ.

‘ಹಲವಾರು ಅಭಿಪ್ರಾಯಗಳು ದಾಖಲೆಯಲ್ಲಿ ಕಂಡು ಬರದೇ ಇರಲು ಸಾಧ್ಯವಿಲ್ಲ, ಈ ಎಲ್ಲ ಅಭಿಪ್ರಾಯಗಳನ್ನೂ  ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಪಾಲಿಸಬೇಕೆಂದು ಹೇಳಲು ಸಾಧ್ಯವಿಲ್ಲ. ಹಾಗೆ ಮಾಡುವುದು ನಿರ್ಣಯ ಕೈಗೊಳ್ಳುವ ಪ್ರಕ್ರಿಯೆಯಲ್ಲಿನ ಚರ್ಚೆಯ ಉದ್ದೇಶವನ್ನೇ ಪರಾಭವಗೊಳಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

‘ಪುನರ್ ಪರಿಶೀಲನಾ ಮನವಿಯಲ್ಲಿ ಅರ್ಜಿದಾರರು ಸೋರಿಕೆಯಾದ ದಾಖಲೆಗಳನ್ನು ಉಲ್ಲೇಖಿಸಿದ್ದಾರೆ. ರಕ್ಷಣಾ ಇಲಾಖೆಯು ೨೦೧೫ರಲ್ಲಿ ಪ್ರಧಾನ ಮಂತ್ರಿಯ ಸಚಿವಾಲಯವು ಫ್ರಾನ್ಸ್ ಜೊತೆಗೆ ನಡೆಸಿದ ’ಪರ್‍ಯಾಯ ಮಾತುಕತೆಗಳನ್ನು ಆಕ್ಷೇಪಿಸಿತ್ತು ಎಂಬುದಾಗಿ ಈ ದಾಖಲೆಗಳು ಸೂಚಿಸಿವೆ. ಏಳು ಸದಸ್ಯರು ಭಾರತೀಯ ಮಾತುಕತೆ ತಂಡದ ತಜ್ಞರಾಗಿದ್ದ ರಕ್ಷಣಾ ಸಚಿವಾಲಯದ ಮೂವರು ಹಿರಿಯ ಅಧಿಕಾರಿಗಳು ಬರೆದ ಭಿನ್ನ ಟಿಪ್ಪಣಿಯನ್ನೂ ಪುನರ್ ಪರಿಶೀಲನಾ ಮನವಿ ಉಲ್ಲೇಖಿಸಿದೆ ಎಂದು ತೀರ್ಪು ಹೇಳಿದೆ.

ಪುನರ್ ಪರಿಶೀಲನಾ ಅರ್ಜಿಗಳು ಯಾವುದೇ ಅರ್ಹತೆಯನ್ನೂ ಹೊಂದಿಲ್ಲ ಮತ್ತು ಈ ಕಾರಣಕ್ಕಾಗಿ ಅವುಗಳನ್ನು ವಜಾಗೊಳಿಸಲಾಗಿದೆ. ಮತ್ತೊಮ್ಮೆ, ಭಾರತೀಯ ಸಂವಿಧಾನದ ೩೨ನೇ ಪರಿಚ್ಛೇದದ ವಾಪ್ತಿಯನ್ನು ಆಧರಿಸಿ, ನಮ್ಮ ಮೂಲ ನಿರ್ಣಯವನ್ನು ನಾವು ಪುನರುಚ್ಚರಿಸುತ್ತಿದ್ದೇವೆ ಎಂದು ಪೀಠವು ತನ್ನ ತೀರ್ಪನ್ನು ಸಮಾಪ್ತಿಗೊಳಿಸಿದೆ.

ರಫೇಲ್ ವ್ಯವಹಾರ, ಮರುಪರಿಶಿಲನಾ ಅರ್ಜಿ: ಗುರುವಾರ ‘ಸುಪ್ರೀಂ’ ತೀರ್ಪು

ರಫೇಲ್  ವ್ಯವಹಾರ, ಮರುಪರಿಶಿಲನಾ ಅರ್ಜಿ:
  
ಗುರುವಾರ  ಸುಪ್ರೀಂ ತೀರ್ಪು
ನವದೆಹಲಿ: ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರಕ್ಕೆ ಕ್ಲೀನ್ಚಿಟ್
ನೀಡಿರುವ ಬಗ್ಗೆ ಸಲ್ಲಿಕೆಯಾಗಿರುವ ಮರುಪರಿಶೀಲನಾ ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್ 2019 ನವೆಂಬರ್ 14ರ ಗುರುವಾರ ಪ್ರಕಟಿಸಲಿದೆ.


ಮರುಪರಿಶೀಲನಾ ಅರ್ಜಿಯ ವಿಚಾರಣೆಯನ್ನು ಮೇ 10ರಂದು ಪೂರ್ಣಗೊಳಿಸಿದ್ದ ಸರ್ವೋಚ್ಚ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು.

ಸರ್ಕಾರಕ್ಕೆ ಕ್ಲೀನ್ಚಿಟ್ ನೀಡಿರುವುದನ್ನು ಮರುಪರಿಶೀಲಿಸಬೇಕು ಎಂದು ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾ, ಅರುಣ್ ಶೌರಿ ಮತ್ತು ವಕೀಲ ಪ್ರಶಾಂತ್ ಭೂಷಣ್ ಅರ್ಜಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಮತ್ತು ನ್ಯಾಯಮೂರ್ತಿಗಳಾದ ಎಸ್‌.ಕೆ.ಕೌಲ್, ಕೆ.ಎಂ.ಜೋಸೆಫ್ ಅವರಿದ್ದ ನ್ಯಾಯಪೀಠವು ತೀರ್ಪು ನೀಡಲಿದೆ.

ರಫೇಲ್ ಖರೀದಿ ಒಪ್ಪಂದದಲ್ಲಿ ಅಕ್ರಮ ನಡೆದಿದ್ದು, ತನಿಖೆಗೆ ಆದೇಶಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ 2018 ಡಿಸೆಂಬರ್ 14ರಂದು ವಜಾಗೊಳಿಸಿತ್ತು.

Tuesday, December 18, 2018

Rafale jets a must-buy: IAF chief Letter to Govt


Rafale jets a must-buy: IAF chief  Letter to Govt

New Delhi: In the first week of November, an apprehensive Indian Air Force (IAF) wrote to defence minister Nirmala Sitharaman to underline that the political controversy around the Rafale deal should not endanger the purchase of the fighters from France, a senior defence ministry official aware of the development said on Tuesday, 18th December 2018,  requesting anonymity.


A spokesperson for IAF declined comment on the issue. The Supreme Court was at the time hearing a Public Interest Litigation (PIL) on the purchase of 36 Rafale fighters from France. The PIL was dismissed by the court last Friday, 14th December 2018.


Air Chief Marshal Brinder Singh Dhanoa in his letter to Sitharaman drew the government’s attention to the depleting strength of fighter squadrons of IAF, the official said. IAF needs a minimum of 42 fighter squadrons (each squadron has between 14-16 fighters) to maintain a credible deterrence along the Western and Northern Borders but has only 31 fighter squadrons. It will lose more fighter squadrons in the coming months.


Dhanoa told the government that 36 fighters were essential for IAF and any uncertainty over the acquisition would severely affect its fighting and deterrence capabilities, a second senior defence ministry official who didn’t want to be named said. In addition, Dhanoa also advised the government against revealing the pricing details.


“The IAF advised against revealing the detailed price break-up of types of equipment and weapons of the fighter and went on to underline that fighters would also double-up as a strategic platform. The IAF was of the view that revealing price of components would give away the capability of Rafale fighters,” the second official added.

Advertisement