Showing posts with label Ram Mandir. Show all posts
Showing posts with label Ram Mandir. Show all posts

Tuesday, December 29, 2020

ರಾಮ ಮಂದಿರಕ್ಕಾಗಿ ಜನವರಿ ೧೫ರಿಂದ ನಿಧಿ ಸಂಗ್ರಹ ಅಭಿಯಾನ: ವಿಎಚ್‌ಪಿ

 ರಾಮ ಮಂದಿರಕ್ಕಾಗಿ ಜನವರಿ ೧೫ರಿಂದ ನಿಧಿ ಸಂಗ್ರಹ ಅಭಿಯಾನ: ವಿಎಚ್‌ಪಿ

ನವದೆಹಲಿ: ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕಾಗಿ ಜನವರಿ ೧೫ ರಿಂದ ರಾಷ್ಟ್ರವ್ಯಾಪಿ ನಿಧಿ ಸಂಗ್ರಹ ಅಭಿಯಾನವನ್ನು ನಡೆಸಲಾಗುವುದು ಎಂದು ವಿಶ್ವ ಹಿಂದು ಪರಿತ್ 2020 ಡಿಸೆಂಬರ್ 2020ರ ಮಂಗಳವಾರ ಪ್ರಕಟಿಸಿತು.

ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಜನವರಿ ೧೫ ರಂದು ಅಯೋಧ್ಯೆಯ ರಾಮಮಂದಿರಕ್ಕಾಗಿ ನಿಧಿ ಸಂಗ್ರಹ ಅಭಿಯಾನವನ್ನು ಪ್ರಾರಂಭಿಸಲಿದ್ದು, ೨೦,೦೦೦ ರೂಪಾಯಿಗಳಿಗಿಂತ ಹೆಚ್ಚಿನ ದೇಣಿಗೆಯನ್ನು ಚೆಕ್ ಮೂಲಕ ಪಾವತಿ ಮಾಡಬಹುದಾಗಿದೆ.

ವಿಎಚ್‌ಪಿಯ ಅಂತಾರಾಷ್ಟ್ರೀಯ ಕಾರ್‍ಯಾಧ್ಯಕ್ಷ ಅಲೋಕ್ ಕುಮಾರ್ ಅವರುದೇಶಾದ್ಯಂತ ,೨೫,೦೦೦ ಹಳ್ಳಿಗಲ್ಲಿ ರಾಮಮಂದಿನ ನಿಧಿ ಸಂಗ್ರಹ ಅಭಿಯಾನ ನಡೆಯಲಿದೆ ಎಂದು ಹೇಳಿದರು.

ಹಣವನ್ನು ಪಾರದರ್ಶಕ ರೀತಿಯಲ್ಲಿ ಸಂಗ್ರಹಿಸಲಾಗುವುದು. ಹಣವನ್ನು ಸಂಗ್ರಹಿಸಲು ನಿಯೋಜಿಸಲಾದ ತಂಡಗಳು ಹಣವನ್ನು ೪೮ ಗಂಟೆಗಳ ಒಳಗೆ ಗೊತ್ತುಪಡಿಸಿದ ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡಬೇಕಾಗುತ್ತದೆ. ಬ್ಯಾಂಕ್ ಆಫ್ ಬರೋಡಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಗಳಲ್ಲಿ ಠೇವಣಿ ಇಡಲಾಗುವುದು ಎಂದು ಅವರು ಹೇಳಿದರು.

ಐದು ಜನರ ತಂಡಗಳು ಜನವರಿ ೧೫ ರಿಂದ ಫೆಬ್ರವರಿ ೨೭ ರವರೆಗೆ ನಿಧಿ ಸಂಗ್ರಹ ಅಭಿಯಾನ ನಡೆಸಲಿವೆ.

ರಾಮ ಮಂದಿರ ಚಳವಳಿಯ ಮುಂಚೂಣಿಯಲ್ಲಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂಗಸಂಸ್ಥೆಯಾದ ವಿಶ್ವ ಹಿಂದೂ ಪರಿಷತ್, ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸಲು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟಿನಿಂದ ಅಧಿಕಾರ ಪಡೆದಿದೆ.

ಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ಮಾರ್ಗ ಸುಗಮಗೊಳಿಸಿದ ಬಳಿಕ ದೇವಾಲಯದ ನಿರ್ಮಾಣದ ಮೇಲ್ವಿಚಾರಣೆ ನಡೆಸಲು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟನ್ನು ರಚಿಸಲಾಗಿತ್ತು.

ಭಾರತೀಯರು ಸುಪ್ರೀಂ ಕೋರ್ಟ್ ತೀರ್ಪನ್ನು ಶಾಂತಿಯುತವಾಗಿ ಸ್ವೀಕರಿಸಿದ್ದಾರೆ. ರಾಮ ಯಾರ ವಿರುದ್ಧವೂ ಇರಲಿಲ್ಲ ಆದ್ದರಿಂದ ನಾನು ನಮ್ಮ ಕಾರ್‍ಯಕರ್ತರು ಮತ್ತು ಇತರರಿಗೆ ಶಾಂತಿಯುತವಾಗಿರಲು ಮನವಿ ಮಾಡುತ್ತೇನೆ. ದೇವಾಲಯ ಮತ್ತು ಮಸೀದಿ ಎರಡನ್ನೂ ನಿರ್ಮಿಸಲಾಗುತ್ತಿದೆ ಮತ್ತು ಕೆಲಸವನ್ನು ಶಾಂತಿಯುತವಾಗಿ ಕೈಗೊಳ್ಳಬೇಕು ಎಂದು ಕುಮಾರ್ ಹೇಳಿದರು.

Thursday, August 20, 2020

ಅಯೋಧ್ಯಾ ರಾಮ ಮಂದಿರ ಕಾಮಗಾರಿ ಆರಂಭ

 ಅಯೋಧ್ಯಾ ರಾಮ ಮಂದಿರ ಕಾಮಗಾರಿ ಆರಂಭ

ಅಯೋಧ್ಯೆ: ಅಯೋಧ್ಯಾ ರಾಮ ಮಂದಿರ ನಿರ್ಮಾಣ ಕಾಮಗಾರಿಯು ಆರಂಭವಾಗಿದ್ದು, ೩೬-೪೦ ತಿಂಗಳಲ್ಲಿ ಮಂದಿರ ಪೂರ್ಣಗೊಳ್ಳಲಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್2020 ಆಗಸ್ಟ್ 20ರ ಗುರುವಾರ ತಿಳಿಸಿತು.

ಟ್ರಸ್ಟಿನ ಅಧಿಕೃತ ಟ್ವಿಟರ್ ಖಾತೆಯೂ ದೇಗುಲ ನಿರ್ಮಾಣ ಆರಂಭದ ಕುರಿತು ಮಾಹಿತಿ ನೀಡಿತು.

ರಾಮ ಜನ್ಮಭೂಮಿ ಮಂದಿರ ನಿರ್ಮಾಣ ಪ್ರಾರಂಭವಾಗಿದೆ. ಉತ್ತರಾಖಂಡದ ರೂರ್ಕಿಯಲ್ಲಿರುವ ಕೇಂದ್ರ ಕಟ್ಟಡ ಅಧ್ಯಯನ ಸಂಸ್ಥೆ (ಸಿಬಿಆರ್), ಚೆನ್ನೈಯ ಐಐಟಿ ಮತ್ತು ಎಲ್ ಅಂಡ್ ಟಿ (ಲಾರ್ಸೆನ್ ಮತ್ತು ಟೂಬ್ರೊ) ಎಂಜಿನಿಯರುಗಳು ಮಂದಿರದ ಸ್ಥಳದಲ್ಲಿ ಮಣ್ಣು ಪರೀಕ್ಷೆಯಲ್ಲಿ ತೊಡಗಿದ್ದಾರೆ. ನಿರ್ಮಾಣ ಕಾರ್ಯವು ೩೬-೪೦ ತಿಂಗಳಲ್ಲಿ ಮುಗಿಯುವ ನಿರೀಕ್ಷೆಯಿದೆ, ಎಂದು ಟ್ವೀಟ್ ತಿಳಿಸಿತು.

ಭಾರತದ ಪ್ರಾಚೀನ ಮತ್ತು ಸಾಂಪ್ರದಾಯಿಕ ಶೈಲಿಯನ್ನು ಅನುಸರಿಸಿ ಮಂದಿರದ ನಿರ್ಮಾಣ ಮಾಡಲಾಗುವುದು. ಭೂಕಂಪ, ಬಿರುಗಾಳಿ ಮತ್ತು ಇತರ ನೈಸರ್ಗಿಕ ವಿಕೋಪಗಳನ್ನು ತಾಳಿಕೊಳ್ಳುವಂತೆ ದೇಗುಲವನ್ನು ನಿರ್ಮಿಸಲಾಗುತ್ತಿದೆ. ಮಂದಿರ ನಿರ್ಮಾಣದಲ್ಲಿ ಕಬ್ಬಿಣವನ್ನು ಬಳಸದೇ ಇರಲು ನಿರ್ಧರಿಸಲಾಗಿದೆ, ಎಂದು ಟ್ರಸ್ಟ್ ಹೇಳಿತು.

ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ, ವಿಶ್ವ ಹಿಂದೂ ಪರಿಷತ್ತಿನ ಹಿರಿಯ ಕಾರ್ಯವಾಹಕ ಚಂಪತ್ ರಾಯ್ ಅವರು ಸುದ್ದಿಗಾರರ ಜೊತೆ ಮಾತನಾಡಿ, ಅಯೋಧ್ಯಾ ರಾಮ ಮಂದಿರ ನಿರ್ಮಿಸಲು ಕಲ್ಲುಗಳನ್ನು ಮಾತ್ರ ಬಳಸಲಾಗುತ್ತದೆ. ದೇಗುಲವು ,೦೦೦ ವರ್ಷಗಳಿಗೂ ಹೆಚ್ಚು ಕಾಲ ಅನಿರ್ಭಾಧಿತವಾಗಿ ಉಳಿಯಲಿದೆ, ಎಂದು ಹೇಳಿದರು.

ದೇವಾಲಯದ ನಿರ್ಮಾಣದ ಉಸ್ತುವಾರಿಯನ್ನು ಎಲ್ ಅಂಡ್ ಟಿನೋಡಿಕೊಳ್ಳುತ್ತಿದೆ. ಚೆನ್ನೈಯ ಐಐಟಿಯು ಮಣ್ಣಿನ ಬಲವನ್ನು ಪರೀಕ್ಷಿಸುತ್ತಿದೆ. ಕಟ್ಟಡದ ಭೂಕಂಪ ನಿರೋಧಕಕತೆಯನ್ನು ಖಚಿತಪಡಿಸಿಕೊಳ್ಳಲು ಸಿಬಿಆರ್ ಸೇವೆ ಪಡೆದುಕೊಳ್ಳಲಾಗಿದೆಎಂದು ಅವರು ತಿಳಿಸಿದರು.

ದೇವಾಲಯವನ್ನು ನಿರ್ಮಿಸಲು ಸುಮಾರು ೧೦,೦೦೦ ತಾಮ್ರದ ಸರಳುಗಳು ಬೇಕಾಗುತ್ತವೆ. ಜನರು ನಿರ್ಮಾಣ ಪ್ರಕ್ರಿಯೆಯ ಭಾಗವಾಗಲು ಬಯಸಿದರೆ, ಅವರು ತಾಮ್ರವನ್ನು ದಾನ ಮಾಡುವ ಮೂಲಕ ಪಾಲ್ಗೊಳ್ಳಬಹುದು. ಕೇವಲ ಕಲ್ಲುಗಳನ್ನು ಬಳಸಿ ದೇವಾಲಯವನ್ನು ನಿರ್ಮಿಸುತ್ತಿರುವುದರಿಂದ ಗಾಳಿ, ಬಿಸಿಲು, ನೀರಿನಿಂದ ಯಾವುದೇ ತೊಂದರೆಯಾಗುವುದಿಲ್ಲ. ಹೀಗಾಗಿ ದೇವಾಲಯವು ಕನಿಷ್ಠ ,೦೦೦ ವರ್ಷಗಳವರೆಗೆ ಇರುತ್ತದೆಎಂದು ಚಂಪತ್ ರಾಯ್ ನುಡಿದರು.

ಆಗಸ್ಟ್ ೫ರಂದು ಪ್ರಧಾನಿ ನರೇಂದ್ರ ಮೋದಿ ಭವ್ಯ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು.

Thursday, August 13, 2020

ಮಹಂತ ನೃತ್ಯ ಗೋಪಾಲದಾಸ್‌ಗೆ ಕೊರೋನಾ ಸೋಂಕು

 ಮಹಂತ ನೃತ್ಯ ಗೋಪಾಲದಾಸ್ಗೆ ಕೊರೋನಾ ಸೋಂಕು

ನವದೆಹಲಿ: ರಾಮ ಜನ್ಮಭೂಮಿ ಟ್ರಸ್ಟ್ ಮುಖ್ಯಸ್ಥ ಮಹಂತ ನೃತ್ಯ ಗೋಪಾಲ ದಾಸ್ ಅವರಿಗೆ 2020 ಆಗಸ್ಟ್ 13ರ ಗುರುವಾರ ಕೊರೋನಾ ಸೋಂಕು ತಗುಲಿದ್ದು, ಅವರನ್ನು ಗುಡಗಾಂವದ ಮೇದಂತ ಆಸ್ಪತ್ರೆಗೆ ಸೇರಿಸಲಾಗುತ್ತಿದೆ ಎಂದು ವರದಿಗಳು ತಿಳಿಸಿದವು.

ಪ್ರಸ್ತುತ ಮಥುರಾದಲ್ಲಿರುವ ದಾಸ್ ಉಸಿರಾಟದ ತೊಂದರೆ ಅನುಭವಿಸುತ್ತಿದ್ದು, ಅವರಿಗೆ ಚಿಕಿತ್ಸೆ ನೀಡಲು ವೈದ್ಯರನ್ನು ಕರೆಸಲಾಗಿದೆ ಎಂದು ಸುದ್ದಿ ಮೂಲಗಳು ತಿಳಿಸಿದವು.

ಕೃಷ್ಣ ಜನ್ಮಾಷ್ಟಮಿ ಆಚರಣೆಯನ್ನು ಆಯೋಜಿಸುವ ಸಲುವಾಗಿ ೮೦ರ ಹರೆಯದ ದಾಸ್ ಮಥುರಾಕ್ಕೆ ಹೋಗಿದ್ದರು.

ಆಗಸ್ಟ್ ರಂದು ಅಯೋಧ್ಯೆಯಲ್ಲಿ ನಡೆದ ರಾಮಮಂದಿರ ಶಿಲಾನ್ಯಾಸ ಸಮಾರಂಭದಲ್ಲಿ ಭೂಮಿ ಪೂಜೆ ನೆರವೇರಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರ ಟ್ರಸ್ಟ್ ಮುಖ್ಯಸ್ಥರೊಂದಿಗೆ ವೇದಿಕೆ ಹಂಚಿಕೊಂಡಿದ್ದರು. ವೇದಿಕೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆನಂದಿಬೆನ್ ಪಟೇಲ್ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ ಭಾಗವತ್ ಉಪಸ್ಥಿತರಿದ್ದರು.

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿರಾಮ ಜನ್ಮಭೂಮಿ ಟ್ರಸ್ಟ್ ಮುಖ್ಯಸ್ಥರಿಗೆ ಕೊರೋನಾವೈರಸ್ ಸೋಂಕು ತಗುಲಿದ ಸುದ್ದಿ ಬಂದಿದೆ ಎಂದು ತಿಳಿಸಿದರು.

ಆದಿತ್ಯನಾಥ್ ಅವರು ಮೇದಂತ ಆಸ್ಪತ್ರೆಯ ಡಾ.ನರೇಶ್ ಟ್ರಹಾನ್ ಅವರೊಂದಿಗೆ ಮಾತನಾಡಿ, ದಾಸ್ ಅವರಿಗೆ ತತ್ಕ್ಷಣ ವೈದ್ಯಕೀಯ ಚಿಕಿತ್ಸೆ ವ್ಯವಸ್ಥೆ ಮಾಡಲು ವಿನಂತಿಸಿದರು.

ಮುಖ್ಯಮಂತ್ರಿಯವರು ಮಥುರಾ ಜಿಲ್ಲಾ ಮ್ಯಾಜಿಸ್ಟ್ರೇಟ್, ಗೋಪಾಲ ದಾಸ್ ಅವರ ಅನುಯಾಯಿಗಳು ಮತ್ತು ಮೇದಾಂತ ಆಸ್ಪತ್ರೆಯ ಮುಖ್ಯಸ್ಥರ ಜೊತೆಗೂ ಮಾತನಾಡಿ ದಾಸ್ ಅವರಿಗೆ ತ್ವರಿತ ಚಿಕಿತ್ಸಾ ವ್ಯವಸ್ಥೆ ಮಾಡುವಂತೆ ಕೋರಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿಯ ಹೇಳಿಕೆ ತಿಳಿಸಿತು.

ರೋಗಿಗೆ ಸಾಧ್ಯವಿರುವ ಎಲ್ಲ ಬೆಂಬಲ ಮತ್ತು ವೈದ್ಯಕೀಯ ನೆರವು ನೀಡುವಂತೆ ಅವರು ಮಥುರಾ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ ಎಂದು ಹೇಳಿಕೆ ಹೇಳಿತು.

ಫೆಬ್ರವರಿ ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ ರಚನೆಯನ್ನು ಘೋಷಿಸಿದ ಬಳಿಕ, ದಾಸ್ ಅವರನ್ನು ಅದರ ಮುಖ್ಯಸ್ಥರನ್ನಾಗಿ ಮಾಡಲಾಗಿತ್ತು. ಸುಪ್ರೀಂಕೋರ್ಟ್ ತೀರ್ಪಿಗೆ ಅನುಗುಣವಾಗಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಮೇಲ್ವಿಚಾರಣೆಗೆ ಇದನ್ನು ಸ್ಥಾಪಿಸಲಾಗಿತ್ತು.

ಕಳೆದ ವಾರ, ಪ್ರಧಾನಿ ಮೋದಿ ಅವರು ಮಂದಿರ ಶಿಲಾನ್ಯಾಸದ ಸಲುವಾಗಿ ಬೆಳ್ಳಿಯ ಇಟ್ಟಿಗೆಗಳಿಗೆ ಭೂಮಿ ಪೂಜೆ ನೆರವೇರಿಸಿದ್ದರು.

ಶ್ರೀರಾಮನ ಜನ್ಮಸ್ಥಾನ ಎಂಬುದಾಗಿ ನಂಬಲಾದ ಸ್ಥಳದಲ್ಲಿ ವಿವಾದಾತ್ಮಕ ಬಾಬರಿ ಮಸೀದಿ ಕಟ್ಟಡವಿದ್ದ ಸ್ಥಳದಲ್ಲೇ ರಾಮಮಂದಿರವನ್ನು ನಿರ್ಮಿಸಲಾಗುತ್ತಿದೆ.

 

Advertisement