ನಿಗೂಢ: ಇಂತಹ ವ್ಯಕ್ತಿ ಇರಲೇ ಇಲ್ಲ..!
ಪ್ರತಿ ವರ್ಷ 500,000 ಕ್ಕೂ ಹೆಚ್ಚು ಜನರು ಯಾವುದೇ ಕುರುಹು ಇಲ್ಲದೆ ಕಣ್ಮರೆಯಾಗುತ್ತಾರೆ.
2009 ರಲ್ಲಿ ನಿಗೂಢ ಘಟನೆಯೊಂದು ಸಂಭವಿಸಿತು.
ಒಬ್ಬ ವ್ಯಕ್ತಿ ಕಾಣಿಸಿಕೊಂಡ. ಆತನ ಗುರುತು ಇಲ್ಲ. ಭೂತಕಾಲದ ವಿವರವಿಲ್ಲ. ಅವನು ಎಲ್ಲಿಂದ ಬಂದ ಎಂಬುದರ ದಾಖಲೆ ಇಲ್ಲ. ಆತ ಹೇಳಿಕೊಂಡ ಪ್ರಕಾರ ಆತನ ಹೆಸರು ಪೀಟರ್ ಬರ್ಗ್‌ಮನ್. ಆದರೆ ಇಂತಹ ವ್ಯಕ್ತಿ ಅಸ್ತಿತ್ವದಲ್ಲೇ ಇಲ್ಲ ಎಂಬುದು ದಾಖಲೆಗಳು ಬಹಿರಂಗ ಪಡಿಸಿದ ಸತ್ಯ. ಹೀಗಾಗಿ ಇದು ಸಾರ್ವಕಾಲಿಕ ಅಂತರ್ಜಾಲ ರಹಸ್ಯಗಳಲ್ಲಿ ಒಂದೆಂದು ಪರಿಗಣಿತವಾಗಿದೆ.
ಹಾಗಿದ್ದರೆ ಈ ಘಟನೆ ಏನು?
ಅದು ಜೂನ್ 2009. ತನ್ನನ್ನು ಪೀಟರ್ ಬರ್ಗ್‌ಮನ್ ಎಂದು ಕರೆದುಕೊಂಡ ವ್ಯಕ್ತಿಯೊಬ್ಬ ಐರ್ಲೆಂಡಿನ ಸ್ಲಿಗೊ ಪಟ್ಟಣಕ್ಕೆ ಬಂದ. ಆತ ಒಂದು ಸಣ್ಣ ಹೋಟೆಲ್‌ಗೆ ಭೇಟಿ ನೀಡಿ, ನಗದು ಪಾವತಿಸಿ ಕೊಠಡಿಯೊಂದನ್ನು ಪಡೆದ. ಆತನ ಬಳಿ ಸವೆದ ಒಂದೇ ಒಂದು ಹಳೆಯ ಚೀಲವಿತ್ತು.
(ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ ಅಥವಾ ನಿಗೂಢ ಪುಟ ನೋಡಿ)