Showing posts with label Sukha Dev. Show all posts
Showing posts with label Sukha Dev. Show all posts

Sunday, March 23, 2025

ಬಲಿದಾನ ದಿನ: ಹುತಾತ್ಮ ಭಗತ್‌ ಸಿಂಗ್‌, ಸುಖದೇವ್‌, ರಾಜಗುರು ನೆನಪು

 ಬಲಿದಾನ ದಿನ: ಹುತಾತ್ಮ ಭಗತ್‌ ಸಿಂಗ್‌, ಸುಖದೇವ್‌, ರಾಜಗುರು ನೆನಪು

ಭಾರತದ  ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣಗಳನ್ನೇ ಬಲಿದಾನ ಮಾಡಿದ ಹುತಾತ್ಮ ಭಗತ್‌ ಸಿಂಗ್‌, ಸುಖದೇವ್‌ ಮತ್ತು ರಾಜಗುರು ಅವರ ಬಲಿದಾನದ ದಿನ ಮಾರ್ಚ್‌ ೨೩ರ ಈದಿನ. ೧೯೩೧ರ ಮಾರ್ಚ್‌ ೨೩ರಂದು ಬ್ರಿಟಿಷರು ಈ ಮೂರೂ ಮಂದಿ ದೇಶಭಕ್ತರನ್ನು ಗಲ್ಲಿಗೇರಿಸಿದ್ದರು.

ಬ್ರಿಟಿಷರನ್ನು ದುಃಸ್ವಪ್ನವಾಗಿ ಕಾಡಿದ್ದ ಈ ಮೂವರು ದೇಶಭಕ್ತರು ದೆಹಲಿಯ ಸೆಂಟ್ರಲ್‌ ಅಸೆಂಬ್ಲಿಯಲ್ಲಿ ಬಾಂಬ್‌ ಎಸೆದು ಬ್ರಿಟಿಷರ ಎದೆಯನ್ನೇ ನಡುಗಿಸಿದ್ದರು. ಅವರನ್ನು ೧೯೩೧ರ ಮಾರ್ಚ್‌ ೨೪ರಂದು ಗಲ್ಲಿಗೇರಿಸುವುದಾಗಿ ಪ್ರಕಟಿಸಿದ್ದರೂ ಒಂದು ದಿನ ಮುಂಚಿತವಾಗಿಯೇ ಅವರನ್ನು ಗಲ್ಲಿಗೇರಿಸಲಾಗಿತ್ತು.

ಈ ಹುತಾತ್ಮರ ಗೌರವಾರ್ಥವಾಗಿ ದೇಶದಲ್ಲಿ ಈದಿನವನ್ನು ʼಬಲಿದಾನ ದಿವಸʼವಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳನ್ನು ಹಂಚಿಕೊಳ್ಳುವ ಮೂಲಕ ಈ ಮೂವರಿಗೂ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ʼಇಂದು ನಮ್ಮ ದೇಶವು ಭಗತ್‌ ಸಿಂಗ್‌, ಸುಖದೇವ್‌ ಮತ್ತು ರಾಜಗುರು ಅವರ ಅಪ್ರತಿಮ ಹೋರಾಟ, ಪರಾಕ್ರಮ ಮತ್ತು ತ್ಯಾಗವನ್ನು ಸ್ಮರಿಸಿಕೊಳ್ಳುತ್ತದೆ. ಸ್ವಾತಂತ್ರ್ಯ ಮತ್ತು ನ್ಯಾಯಕ್ಕಾಗಿ ಅವರು ನಡೆಸಿದ ನಿರ್ಭೀತ ಹೋರಾಟ ನಮಗೆಲ್ಲರಿಗೂ ಸ್ಫೂರ್ತಿದಾಯಕʼ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದರ ಸಹಿತವಾಗಿ ತಮ್ಮ ಸಂದೇಶದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.

ಪ್ರಧಾನಿ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ (ಎಕ್ಸ್)‌ ಹಂಚಿಕೊಂಡ ವಿಡಿಯೋ ಇಲ್ಲಿದೆ:

ಇವುಗಳನ್ನೂ ಓದಿ:

Let us pay tribute to Great Patriots

Advertisement