ತಬಲಾ ನಿಲ್ಲಿಸಿದ ʼಮಾಂತ್ರಿಕʼ
ನವದೆಹಲಿ: ಮೂರು ʼಪದ್ಮʼ ಪ್ರಶಸ್ತಿಗಳು ಮತ್ತು ನಾಲ್ಕು ಗ್ರ್ಯಾಮಿ ಪ್ರಶಸ್ತಿಗಳನ್ನು ತಮ್ಮ ಮುಡಿಗೆ ಏರಿಸಿಕೊಂಡಿದ್ದ ವಿಶ್ವ ವಿಖ್ಯಾತ ತಬಲಾ ಮಾಂತ್ರಿಕ ಜಾಕೀರ್ ಹುಸೇನ್ ಅವರು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಯಲ್ಲಿ ಸೋಮವಾರ (16.12.2024) ನಸುಕಿನಲ್ಲಿ ನಿಧನರಾಗಿದ್ದಾರೆ.
ನಿಧನಕಾಲಕ್ಕೆ ಅವರಿಗೆ
73 ವರ್ಷವಾಗಿತ್ತು. ಹೃದಯ ಸಂಬಂಧಿ ಕಾಯಿಲೆಗಳಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಕುಟುಂಬದ ಹೇಳಿಕೆ
ತಿಳಿಸಿದೆ.
ಎರಡುವಾರಗಳಿಂದ ಆಸ್ಪತ್ರೆಯಲ್ಲಿದ್ದ
ಅವರ ಸ್ಥಿತಿ ಹದಗೆಟ್ಟ ಬಳಿಕ ತೀವ್ರ ನಿಗಾ ಘಟಕಕ್ಕೆ (ಐಸಿಯು) ಸ್ಥಳಾಂತರಿಸಲಾಗಿತ್ತು.
ಸ್ಯಾನ್ ಫ್ರಾನ್ಸಿಸ್ಕೋದ
ಸಮಯ ನಸುಕಿನ ೪ ಘಂಟೆಗೆ ಅಂದರೆ ಭಾರತೀಯ ಕಾಲಮಾನ ಬೆಳಗಿನ 5.30 ಘಂಟೆಗೆ ಅವರು ಕೊನೆಯುಸಿರು ಎಳೆದರು
ಎಂದು ಅವರ ಸಹೋದರಿ ಖುರ್ಷಿದ್ ಔಲಿಯಾ ತಿಳಿಸಿದರು.
ತಮ್ಮ ಪೀಳಿಗೆಯ ಶ್ರೇಷ್ಠ ತಬಲಾ ವಾದಕ ಎಂದು ಪರಿಗಣಿಸಲ್ಪಟ್ಟ ಝಾಕಿರ್ ಹುಸೇನ್ ಅವರು ಪತ್ನಿ ಆಂಟೋನಿಯಾ ಮಿನ್ನೆಕೋಲಾ ಮತ್ತು ಪುತ್ರಿಯರಾದ ಅನಿಸಾ
ಖುರೇಷಿ ಮತ್ತು ಇಸಾಬೆಲ್ಲಾ ಖುರೇಷಿ ಅವರನ್ನು ಅಗಲಿದ್ದಾರೆ.
ಮಾರ್ಚ್ 9,
1951 ರಂದು ಜನಿಸಿದ
ಅವರು ಪ್ರಸಿದ್ಧ ತಬಲಾ ಮಾಸ್ಟರ್ ಉಸ್ತಾದ್ ಅಲ್ಲಾ ರಖಾ ಅವರ ಪುತ್ರ.
ಜಾಕಿರ್
ಹುಸೇನ್ ಅವರು ಈ ವರ್ಷದ ಆರಂಭದಲ್ಲಿ ನಡೆದ
66ನೇ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಡೆದ ಮೂರು ಪ್ರಶಸ್ತಿಗಳು ಸೇರಿದಂತೆ ನಾಲ್ಕು
ಗ್ರ್ಯಾಮಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಭಾರತದ ಅತ್ಯಂತ ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರರಲ್ಲಿ ಒಬ್ಬರಾದ ಅವರು ತಾಳವಾದ್ಯಕ್ಕಾಗಿ 1988 ರಲ್ಲಿ ಪದ್ಮಶ್ರೀ, 2002 ರಲ್ಲಿ ಪದ್ಮಭೂಷಣ ಮತ್ತು 2023 ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ವಿಡಿಯೋ ನೋಡಲು ಈ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ: