Showing posts with label Vittla. Show all posts
Showing posts with label Vittla. Show all posts

Friday, March 28, 2025

ವಿಟ್ಲ ಶ್ರೀ ಪಂಚಲಿಂಗೇಶ್ವರ- ಬೊಳ್ನಾಡು ಶ್ರೀ ಚೀರುಂಭ ಭಗವತಿ ಭೇಟಿ

 ವಿಟ್ಲ ಶ್ರೀ ಪಂಚಲಿಂಗೇಶ್ವರ- ಬೊಳ್ನಾಡು ಶ್ರೀ ಚೀರುಂಭ ಭಗವತಿ ಭೇಟಿ

ಇದು ೬೦೦ ವರ್ಷಗಳಗೊಮ್ಮೆ ನಡೆಯುವ ಅಪರೂಪದ ಉತ್ಸವ

ದೈವ -ದೇವತೆಗಳ ಬೀಡಾಗಿರುವ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಸಹಸ್ರಾರು ವರ್ಷಗಳ ಇತಿಹಾಸವಿದೆ. ವಿಟ್ಲ ಪಾಂಡವರು ನೆಲೆಸಿದ್ದ ಏಕ ಚಕ್ರನಗರ ಎಂಬ ಪ್ರತೀತಿ ಇದೆ.

ಇದೇ ಬಂಟ್ವಾಳ ತಾಲೂಕಿನ ಬೊಳ್ನಾಡುವಿನ ಚೀರುಂಭ ಭಗವತಿ ದೇವಸ್ಥಾನ ಕೂಡಾ ಹಳೆಯದೇ. ಕೆಲವು ವರ್ಷಗಳ ಹಿಂದೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಆಗಿದ್ದರೆ, ಇತ್ತೀಚೆಗೆ ಬೊಳ್ನಾಡು ಚೀರುಂಭ ಭಗವತಿ ದೇವಸ್ಥಾನದ ಜೀರ್ಣೋದ್ಧಾರ ನಡೆದಿದೆ. ೨೦೨೫ರ ಮಾರ್ಚ್‌ ೨೦ರಿಂದ ೨೭ರವರೆಗೆ ಭಗವತಿ ದೇವಸ್ಥಾನದಲ್ಲಿ ಭರಣಿ ಮಹೋತ್ಸವ ನಡೆದಿದೆ.

ಈ ಸಂದರ್ಭದಲ್ಲಿ ಒಂದು ವಿಶೇಷವಾದ ಘಟನೆ ವಿಟ್ಲದಲ್ಲಿ ನಡೆದಿದೆ. ಮನುಷ್ಯರು ಅದರಲ್ಲೂ ಗಣ್ಯರು ಪರಸ್ಪರ ಭೇಟಿ ಮಾಡುವುದು ನಮಗೆಲ್ಲರಿಗೂ ಗೊತ್ತು. ಆದರೆ ದೇವರು- ದೇವಿ ಭೇಟಿ ಮಾಡುವುದು ಅಪರೂಪದ ಸಂಗತಿ. ಭಗವತಿ ದೇವಸ್ಥಾನದ ಭರಣಿ ಮಹೋತ್ಸವದ ಸಂದರ್ಭದಲ್ಲಿ ಚೀರುಂಭ ಭಗವತಿ, ಸನಿಹದ ಪಂಚಲಿಂಗೇಶ್ವರ ದೇಗುಲಕ್ಕೆ ಆಗಮಿಸಿ ಪಂಚಲಿಂಗೇಶ್ವರನ ದರ್ಶನಗೈದ ಘಟನೆ ನಡೆದಿದೆ.

ಶ್ರೀ ಪಂಚಲಿಂಗೇಶ್ವರ ಮತ್ತು ಚೀರುಂಭ ಭಗವತಿ ಭೇಟಿ ಹೀಗೆ ನಡೆಯುವುದು ೬೦೦ ವರ್ಷಗಳಿಗೆ ಒಮ್ಮೆ ಎಂಬ ಪ್ರತೀತಿ ಇದೆ. ಹೀಗಾಗಿ ಪ್ರಯಾಗದಲ್ಲಿ ನಡೆದ ಮಹಾಕುಂಭ ಮೇಳದಂತೆಯೇ, ಮನುಷ್ಯರ ಜೀವಮಾನದಲ್ಲಿ ಒಮ್ಮೆ ಮಾತ್ರ ಕಾಣಬಹುದಾದ, ಪಾಲ್ಗೊಳ್ಳಬಹುದಾದ ಅಪರೂಪದ ಭೇಟಿ ಇದು.

೨೦೨೫ರ ಮಾರ್ಚ್‌ ೨೫ರಂದು ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಉತ್ಸವ ರೂಪದಲ್ಲಿ ಈ ಘಟನೆ ನಡೆಯಿತು. ಬೊಳ್ನಾಡು ಚೀರುಂಭ ಭಗವತಿ ದೇವಸ್ಥಾನದಿಂದ ಕಾಲ್ನಡಿಗೆಯಲ್ಲೇ ಹೊರಟು ವಿಟ್ಲದ ಶ್ರೀ ಪಂಚಲಿಂಗೇಶ್ವರ ಸನ್ನಿಧಾನಕ್ಕೆ ವಾದ್ಯಮೇಳದೊಂದಿಗೆ ಆಗಮಿಸಿದ ಭಗವತಿ ಮಾತೆಯು ಶ್ರೀ ಪಂಚಲಿಂಗೇಶ್ವರನ ದೇವರ ದರ್ಶನ-ಭೇಟಿಯನ್ನು ಮಾಡಿದ ಅಪರೂಪದ ದೃಶ್ಯವನ್ನು ಸಹಸ್ರಾರು ಮಂದಿ ವೀಕ್ಷಿಸಿದರು.


ಈ ಸಂದರ್ಭದ ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿರಿ.

ಈ ಕೆಳಗಿನವುಗಳನ್ನೂ ಓದಿರಿ:

ವಿಟ್ಲ ಪಂಚಲಿಂಗೇಶ್ವರನಿಗೆ ಮರುಹುಟ್ಟು ಸಂಭ್ರಮ

ವಿಟ್ಲ ಪಂಚಲಿಂಗೇಶ್ವರನಿಗೆ ಧರ್ಮಸ್ಥಳದ 'ಮುಗುಳಿ'

ವಿಟ್ಲಾಯನದ ಕೊನೆಯ ದಿನ

Wahl! What Water falls..!

Tuesday, February 7, 2023

ವಾಹ್‌ ಮಹಿಷ... ಎಂತಹ ಪ್ರವೇಶ..!

 ವಾಹ್‌ ಮಹಿಷ... ಎಂತಹ ಪ್ರವೇಶ..!

ಕ್ಷಗಾನದ ದೇವಿ ಮಹಾತ್ಮೆ ಪ್ರಸಂಗ ಎಂತಹ ವ್ಯಕ್ತಿಯಲ್ಲಾದರೂ ರೋಮಗಳನ್ನು ನವಿರೇಳಿಸುವ ಪ್ರಸಂಗ. ದಕ್ಷಿಣ ಕನ್ನಡ ಜಿಲ್ಲೆಯ ಮೂಲೆ ಮೂಲೆಯಲ್ಲೂ ಇದೀಗ ಯಕ್ಷಗಾನದ ಚೆಂಡೆಧ್ವನಿ ಮಾರ್ದನಿಸುತ್ತಿದೆ.

ಅದರಲ್ಲೂ ದೇವಿ ಮಹಾತ್ಮೆಯಲ್ಲಿ ಮಧ್ಯರಾತ್ರಿಯಲ್ಲಿ ಯಾರಾದರೂ ತೂಕಡಿಸಹೊರಟರೆ ಅವರನ್ನು ಬಡಿದೆಬ್ಬಿಸುವ ದೃಶ್ಯ ಮಹಿಷಾಸುರ ಪ್ರವೇಶ. ಹೊರಗಿನಿಂದ ಆರ್ಭಟಿಸುತ್ತಾ ರಂಗಸ್ಥಳಕ್ಕೆ ಪ್ರವೇಶಿಸುವ ರೀತಿಯೇ ಮೈ ನವಿರೇಳಿಸುವಂತಹುದು.
ಯಕ್ಷಗಾನದಲ್ಲಿ ಸಾಮಾನ್ಯವಾಗಿ ಹೀಗೆ ಮಹಿಷಾಸುರನೊಬ್ಬನೇ ರಂಗಪ್ರವೇಶ ಮಾಡುವ ಸಂಪ್ರದಾಯ ಹಿಂದಿನಿಂದಲೇ ನಡೆದು ಬಂದಂತಹುದು.

ಆದರೆ ಮಹಿಷಾಸುರನ ರಂಗ ಪ್ರವೇಶಕ್ಕೆ ಹೊಸ ಸ್ವರೂಪವನ್ನೇ ನೀಡಬಹುದೇ?

ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಮುಡಿಪು ಕೈರಂಗಳದಲ್ಲಿ ನಡೆದ ದೇವಿ ಮಹಾತ್ಮೆ ಯಕ್ಷಗಾನದಲ್ಲಿ ಕಂಡು ಬಂದ ದೃಶ್ಯಗಳು ಅಪೂರ್ವ. 

ಪಾವಂಜೆ ಮೇಳದವರು ಪ್ರದರ್ಶಿಸಿದ ಈ ಯಕ್ಷಗಾನ ಬಯಲಾಟದಲ್ಲಿ ಮಹಿಷಾಸುರ ಮಾತ್ರವೇ ಅಲ್ಲ, ಆತನ ಗೆಳೆಯರ ಪಟಾಲಂ ಕೂಡಾ ಮಹಿಷಾಸುರನಂತೆಯೇ ಅಬ್ಬರದೊಂದಿಗೆ ಪ್ರವೇಶ ಮಾಡಿ ಮಹಿಷಾಸುರನನ್ನು ರಂಗಸ್ಥಳಕ್ಕೆ ತಂದು ಬಿಡುವ ದೃಶ್ಯ ಯಕ್ಷಗಾನ ಪ್ರಿಯರು ಕಂಡು ಕೇಳರಿಯದ ದೃಶ್ಯ ಎಂದರೆ ತಪ್ಪಲ್ಲ.

ಅದನ್ನು ನೋಡಲು ಇಲ್ಲಿ ಕ್ಲಿಕ್‌ ಮಾಡಿ.


ದೇವಿಗೆ ದೇವೇಂದ್ರ ಸೇರಿದಂತೆ ದೇವತೆಗಳು ಮನವಿ ಮಾಡಿಕೊಳ್ಳುವ ಇನ್ನೊಂದು ದೃಶ್ಯ ನೋಡಲು ಈ ಕೆಳಗೆ ಕ್ಲಿಕ್‌ ಮಾಡಿ.

ಅಷ್ಟೇ ಅಲ್ಲ, ಈ  ಬಯಲಾಟದಲ್ಲಿ  ರಕ್ತಬೀಜಾಪುರನನ್ನು ವಧಿಸಲು ದೇವಿ ಪ್ರವೇಶಿಸುವ ರೀತಿ ಕೂಡಾ ಕಂಡು ಕೇಳರಿಯದ್ದೇ. 

ಅದನ್ನು ನೋಡಲು ಈ ಕೆಳಗೆ ಕ್ಲಿಕ್‌ ಮಾಡಿ.

ಪ್ರೇಕ್ಷಕರಿಂದ ಶಹಬ್ಬಾಸ್‌ ಗಿರಿ ಪಡೆದುಕೊಂಡ ಈ ಯಕ್ಷಗಾನ ಬಯಲಾಟದ ಈ ವಿಡಿಯೋ ಕ್ಲಿಪ್‌ಗಳು ಈಗ  ವಾಟ್ಸಪ್‌ ಗುಂಪುಗಳಲ್ಲಿ ರೋಮಾಂಚನ ಎಬ್ಬಿಸುತ್ತಾ ವೈರಲ್‌ ಆಗುತ್ತಿದೆ.

ವಿಡಿಯೋ ಕೃಪೆ: ನೆತ್ರಕೆರೆ ಮಠ ವಾಟ್ಸಪ್‌ ಗುಂಪು. 

-ನೆತ್ರಕೆರೆ ಉದಯಶಂಕರ.

Monday, January 23, 2023

ವಿಟ್ಲಾಯನದ ಕೊನೆಯದಿನ: ನೆತ್ರಕೆರೆಯಲ್ಲಿ ಕಟ್ಟೆಪೂಜೆ

 ವಿಟ್ಲಾಯನದ ಕೊನೆಯದಿನ: ನೆತ್ರಕೆರೆಯಲ್ಲಿ ಕಟ್ಟೆಪೂಜೆ


ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೆಯ ಕೊನೆಯ ದಿನ (೨೩ ಜನವರಿ ೨೦೨೩) ದೇವಸ್ಥಾನದ ಓಕುಳಿ ಕಟ್ಟೆಯಲ್ಲಿ ಪೂಜೆಯ ಬಳಿಕ ಕೊಡಂಗಾಯಿಗೆ ಅವಭೃತ ಸ್ನಾನಕ್ಕೆ ಹೋಗುವುದು ಕ್ರಮ.

ಹೀಗೆ  ಹೋಗುವ ದಾರಿಯಲ್ಲಿ  ವಿಟ್ಲ ಪ್ರಾಥಮಿಕ ಶಾಲೆ, ಕೂಡೂರು ಕಟ್ಟೆ, ನೆತ್ರಕೆರೆ ಕಟ್ಟೆಗಳು, ಕಡಂಬು ಕಟ್ಟೆ ಸೇರಿದಂತೆ ವಿವಿಧ ಕಟ್ಟೆಗಳಲ್ಲಿ ಕಟ್ಟೆ ಪೂಜೆ ಸ್ವೀಕರಿಸಿ ಕೊಡಂಗಾಯಿಯಲ್ಲಿ ಅವಭೃತ ಸ್ನಾನ ಪೂರೈಸಿ ಪಂಚಲಿಂಗೇಶ್ವರನು ಸ್ವಸ್ಥಾನಕ್ಕೆ ವಾಪಸಾಗುತ್ತಾನೆ.


ಅವಭೃತ ಸ್ನಾನಕ್ಕಾಗಿ ಪಂಚಲಿಂಗೇಶ್ವರನು ಸವಾರಿ ನಡೆಸುವ ದೃಶ್ಯ ಮತ್ತು ನೆತ್ರಕೆರೆ ಕಟ್ಟೆಗಳಲ್ಲಿ ಪೂಜೆ ಸ್ವೀಕರಿಸುವ ಸಂಭ್ರಮದ ವಿಡಿಯೋ ಇಲ್ಲಿದೆ. (ವಿಡಿಯೋ, ಚಿತ್ರಗಳು: ಎನ್.‌ ಶ್ಯಾಮ್‌, ಎನ್‌.ಟಿ. ಗಣೇಶ್)



೨೦೨೩ರ ವಿಟ್ಲ ಜಾತ್ರೋತ್ಸವವನ್ನು ಮತ್ತೊಮ್ಮೆ ಮೆಲುಕು ಹಾಕುವಿರಾದರೆ ಕೆಳಗೆ ಕ್ಲಿಕ್‌ ಮಾಡಿರಿ:

ವಿಟ್ಲಾಯನದ ಕೊನೆಯ ದಿನ

 ವಿಟ್ಲ ರಥೋತ್ಸವ ಸಂಭ್ರಮ

ವಿಟ್ಲ ಜಾತ್ರೆ ಬಯ್ಯದ ಬಲಿ

 ವಿಟ್ಲಾಯನ ವೈಭವ

ವಿಟ್ಲ ಜಾತ್ರೋತ್ಸವ ಸಂಭ್ರಮ

Sunday, January 22, 2023

ವಿಟ್ಲಾಯನದ ಕೊನೆಯ ದಿನ

ವಿಟ್ಲಾಯನದ ಕೊನೆಯ ದಿನ

೨೦೨೩ ಜನವರಿ ೨೨ ಭಾನುವಾರ. ಇಂದು ದಕ್ಷಿಣ ಕನ್ನಡ ಜಿಲ್ಲೆ ವಿಟ್ಲದ ಶ್ರೀ ಪಂಚಲಿಂಗೇಶ್ವರನ ಜಾತ್ರೋತ್ಸವದ ಕೊನೆಯ ದಿನ. 

ಶನಿವಾರ ʼಬೆಡಿʼಯ ಮಧ್ಯೆ ಮಹಾರಥೋತ್ಸವದ ಬಳಿಕ ಬೀದಿ ಮೆರವಣಿಗೆ ಶಯನೋತ್ಸವ ನಡೆದು ವಿಶ್ರಾಂತಿ ಪಡೆಯುವ ದೇವರನ್ನು ಭಾನುವಾರ ಈದಿನ ಬೆಳಗ್ಗೆ ಎಬ್ಬಿಸಿ ಕವಟೋದ್ಘಾಟನೆ , ಬಳಿಕ ಮಹಾಪೂಜೆ ನಡೆಯುತ್ತದೆ. ಈ ವೇಳೆಯಲ್ಲಿ ಬಟ್ಲು ಕಾಣಿಕೆ, ತುಲಾಭಾರ ಸೇವೆ ನಡೆಯುತ್ತದೆ. 

ಓಕುಳಿಕಟ್ಟೆಯಲ್ಲಿ ಕಟ್ಟೆ ಪೂಜೆಗಾಗಿ ದೇವಾಲಯದ ಒಳಗಿನಿಂದ ಹೊರ ಬರುತ್ತಿರುವ ದೃಶ್ಯದ ವಿಡಿಯೋ ಇಲ್ಲಿದೆ:


ರಾತ್ರಿ ದೇವಸ್ಥಾನದ ಒಳಗಿನ ಬಲಿಯ ಬಳಿಕ ಹೊರಗೆ ಓಕುಳಿ ಕಟ್ಟೆಯಲ್ಲಿ ಕಟ್ಟೆ ಪೂಜೆ. ಕಟ್ಟೆ ಪೂಜೆಯ ಬಳಿಕ ಶ್ರೀವರಿಗೆ ಅಷ್ಟಾವಧಾನ ಸೇವೆ. ಅಲ್ಲಿಂದ ಕೊಡಂಗಾಯಿಗೆ ಅವಭೃತ ಸ್ನಾನಕ್ಕೆ ಸವಾರಿ,

ಈ ಸವಾರಿಯಲ್ಲಿ ಪ್ರಾಥಮಿಕ ಶಾಲೆ, ಕೂಡೂರು ಕಟ್ಟೆ, ನೆತ್ರಕೆರೆ ಕಟ್ಟೆಗಳು, ಕಡಂಬು ಕಟ್ಟೆ ಸೇರಿದಂತೆ ವಿವಿಧ ಕಟ್ಟೆಗಳಲ್ಲಿ ಕಟ್ಟೆ ಪೂಜೆಗಳು ನಡೆಯುತ್ತದೆ. ಇಲ್ಲಿನ ಭಕ್ತಾದಿಗಳು ತಮ್ಮ ತಮ್ಮ ಪ್ರದೇಶದ ಕಟ್ಟೆಗೆ ಬರುವ ದೇವರನ್ನು ಸಂಭ್ರಮೋತ್ಸಾಹದೊಂದಿಗೆ ಸ್ವಾಗತಿಸಿ, ಪೂಜೆ ನೀಡಿ ಬೀಳ್ಕೊಡುತ್ತಾರೆ.

ಕೊಡಂಗಾಯಿಯಲ್ಲಿ ಅವಭೃತ ಸ್ನಾನದ ಬಳಿಕ ಮರಳಿ ದೇವಸ್ಥಾನಕ್ಕೆ ವಾಪಸ್.‌ ಬರುವಾಗ ಪುನಃ ಭಕ್ತಾದಿಗಳಿಂದ ಅಲ್ಲಲ್ಲಿ ಪೂಜೆ ಮಂಗಳಾರತಿ. ಕೊನೆಗೆ ಧ್ವಜಾವರೋಹಣ, ಸಂಪ್ರೋಕ್ಷಣೆಯೊಂದಿಗೆ ವಿಟ್ಲ ಜಾತ್ರೆಗೆ ತೆರೆ.


ಇಲ್ಲಿ ಶನಿವಾರದ ಮಹಾರಥೋತ್ಸವದ ಚಿತ್ರ ಹಾಗೂ ʼಬೆಡಿʼ ಸಂಭ್ರಮದ ವಿಡಿಯೋವನ್ನು ನೋಡಬಹುದು. (ಚಿತ್ರ, ವಿಡಿಯೋ ಕೃಪೆ: ವಿಟ್ಲ ಸುದ್ದಿಗಳು ವಾಟ್ಸಪ್‌ ಗ್ರೂಪ್).

ವಿಟ್ಲ ಜಾತ್ರೆಯ ಹಿಂದಿನ ಸುದ್ದಿಗಳನ್ನು ಕೆಳಗೆ ಕ್ಲಿಕ್‌ ಮಾಡಿರಿ:

 ವಿಟ್ಲ ರಥೋತ್ಸವ ಸಂಭ್ರಮ

ವಿಟ್ಲ ಜಾತ್ರೆ ಬಯ್ಯದ ಬಲಿ

 ವಿಟ್ಲಾಯನ ವೈಭವ

ವಿಟ್ಲ ಜಾತ್ರೋತ್ಸವ ಸಂಭ್ರಮ

Saturday, January 21, 2023

ವಿಟ್ಲ ರಥೋತ್ಸವ ಸಂಭ್ರಮ

 ವಿಟ್ಲ ರಥೋತ್ಸವ ಸಂಭ್ರಮ


ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ರಥೋತ್ಸವ ೨೦೨೩ ಜನವರಿ ೨೧ರ ಶನಿವಾರ ವಿಜೃಂಭಣೆಯಿಂದ ನಡೆಯುತ್ತಿದೆ. 

ರಥೋತ್ಸವದ ದಿನ ಇಡೀ ಊರ ಮಂದಿಯ ಕೊಡುಗೆಯೊಂದಿಗೆ ನಡೆಯುವ ʼಬೆಡಿʼ - ಪಟಾಕಿಯ ಸಂಭ್ರಮದ ಎಲ್ಲರ ಕಣ್ಮನ ಸೆಳೆಯುತ್ತದೆ.

ಅದಕ್ಕೂ ಮುನ್ನ ಈವರೆಗೆ ನಡೆದ ಬಯ್ಯದ ಬಲಿ, ಕೆರೆ ಆಯನ, ಹೂ ತೇರು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ವಿಡಿಯೋಗಳು ಇಲ್ಲಿವೆ. ವಿಡಿಯೋ, ಚಿತ್ರ ಕೃಪೆ: ವಿಟ್ಲ ಸುದ್ದಿಗಳು ವಾಟ್ಸಪ್‌ ಗ್ರೂಪ್, ಸದಾಶಿವ ಶಿಲ್ಪಿ ಸ್ಟುಡಿಯೋ, ನಮ್ಮ ನ್ಯೂಸ್‌ ಇತ್ಯಾದಿ.  

ನಡು ದೀಪೋತ್ಕೆಸವ ಕೆರೆ ಆಯನ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮ ನೋಡಲು ಕೆಳಗೆ ಕ್ಲಿಕ್‌ ಮಾಡಿರಿ:


ಪಂಚಲಿಂಗೇಶ್ವರ ದೇವರು ʼಹೂ ತೇರುʼ ಏರು ಮುನ್ನ....



ಜಾತ್ರಾ ಸಂಭ್ರಮದ ಇನ್ನೊಂದು ದೃಶ್ಯ.


ಬಯ್ಯದ ಬಲಿ ಸಂದರ್ಭದಲ್ಲಿ ದೇವರ ಸಮೀಪ ದೃಶ್ಯಗಳನ್ನು ನೋಡಿ:

Thursday, January 19, 2023

ವಿಟ್ಲ ಜಾತ್ರೆ ಬಯ್ಯದ ಬಲಿ

ವಿಟ್ಲ ಜಾತ್ರೆ ಬಯ್ಯದ ಬಲಿ


ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಐದನೇ ದಿನ ವಿಶೇಷ. ಇಲ್ಲಿಯವರೆ ಸಣ್ಣ ತೇರಿನಲ್ಲಿ ದೇವರ ಉತ್ಸವ ನಡೆದರೆ ʼಬಯ್ಯದ ಬಲಿʼ ಎಂಬುದಾಗಿ ಕರೆಯಲಾಗುವ ಐದನೇ ದಿನ ದೇವರು ದೊಡ್ಡ ರಥವನ್ನು ಏರಿ ಸವಾರಿ ಮಾಡುವುದು ವಿಶೇಷ. ಈ ದಿನದ ಸಂಭ್ರಮ ಕೂಡಾ ಹಿಂದಿನ ನಾಲ್ಕು ದಿನಗಳ ಸಂಭ್ರಮಕ್ಕಿಂತ ಹೆಚ್ಚು.

ಈದಿನ ವಿಟ್ಲ ಸಮೀಪದ ಕೇಪುವಿನಿಂದ ಶ್ರೀ ಮಲರಾಯ ದೈವದ ಭಂಡಾರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಬರುತ್ತದೆ. ವಿಟ್ಲದ ʼಬಯ್ಯದ ಬಲಿʼ ಉತ್ಸವ ಸಂಭ್ರಮ ಶ್ರೀ ಮಲರಾಯ ದೈವದ ಭಂಡಾರ ಆಗಮನದೊಂದಿಗೆ ಶುರುವಾಗುತ್ತದೆ.

ʼಬಯ್ಯದ  ಬಲಿʼ ಸಂಭ್ರಮವನ್ನು ಈ ಕೆಳಗಿನ ವಿಡಿಯೋಗಳಲ್ಲಿ ನೋಡಿ. ಚಿತ್ರ ವಿಡಿಯೋ ಕೃಪೆ: ವಿಟ್ಲ ಸುದ್ದಿಗಳು ವಾಟ್ಸಪ್‌ ಗ್ರೂಪ್‌, ವಿಟಿವಿ. 

ಕೇಪುವಿನಿಂದ ಶ್ರೀ ಮಲರಾಯ ದೈವದ ಭಂಡಾರ ಆಗಮನ ಮತ್ತು ಜಾತ್ರಾ ವೈಭವದ ವೀಕ್ಷಣೆಗೆ ಕೆಳಗಿನ ಚಿತ್ರ ಕ್ಲಿಕ್‌ ಮಾಡಿ.

ಜಾತ್ರೆಯ ಮೊದಲ ದಿನ ಅಂದರೆ ಲಕ್ಷ ದೀಪೋತ್ಸವದ ದಿನ ನಡೆದ ರುದ್ರಯಾಗ ಮತ್ತು ಜಾತ್ರೆಯ ವೈಭವದ ಇನ್ನೊಂದು ವಿಡಿಯೋ ಇಲ್ಲಿದೆ. ಕೃಪೆ: ನಮ್ಮ ನ್ಯೂಸ್

Sunday, January 15, 2023

ವಿಟ್ಲಾಯನ ವೈಭವ

 ವಿಟ್ಲಾಯನ ವೈಭವ


ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಯ ಎರಡನೇ ದಿನವಾದ ೨೦೨೩ ಜನವರಿ ೧೫ರ ಭಾನುವಾರ ಸಂಜೆ ಪಂಚಲಿಂಗೇಶ್ವರನ ನಿತ್ಯೋತ್ಸವ -ರಥೋತ್ಸವ ಜರುಗಿತು. 

ಪುಟ್ಟ ತೇರಿನಲ್ಲಿ ರಥೋತ್ಸವ ಮುಗಿದ ಬಳಿಕ ದೇವಾಲಯದ ಹೊರಾವರಣ ಕಟ್ಟೆಯಲ್ಲಿ ದೇವರ ಪೂಜೆ ನೆರವೇರಿತು.

ಈ ಸಂದರ್ಭದ ದೃಶ್ಯಗಳು ವಿಡಿಯೋದಲ್ಲಿ ಮೂಡಿಬಂದದ್ದು ಹೀಗೆ: ವಿಡಿಯೋ ಕೃಪೆ: ವಿಟ್ಲ ಸುದ್ದಿಗಳು ವಾಟ್ಸಪ್‌ ಗ್ರೂಪ್. ವಿಡಿಯೋ ಕ್ಲಿಕ್ಲಿಸಿದವರು: ನೆತ್ರಕೆರೆ ಶ್ಯಾಮ್‌ .

ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿರಿ:




ವಿಟ್ಲ ಜಾತ್ರೋತ್ಸವ ಸಂಭ್ರಮ

 ವಿಟ್ಲ ಜಾತ್ರೋತ್ಸವ ಸಂಭ್ರಮ


ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ಸಹಸ್ರಾರು ವರ್ಷಗಳಷ್ಟು ಪುರಾತನವಾದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಸಂಭ್ರಮ ೨೦೨೩ ಜನವರಿ ೧೪ರ ಶನಿವಾರ ಮಕರ ಸಂಕ್ರಾಂತಿಯೊಂದಿಗೆ ಆರಂಭವಾಗಿದೆ.

ʼವಿಟ್ಲಾಯನʼ ಎಂಬುದಾಗಿಯೇ ಖ್ಯಾತವಾಗಿರುವ  ವಿಟ್ಲ ಜಾತ್ರೆಯ ಮೊದಲ ದಿನದ ಧ್ವಜಾರೋಹಣ, ಲಕ್ಷದೀಪೋತ್ಸವ  ಸಂಭ್ರಮದ ಕೆಲವು ದೃಶ್ಯಗಳು ಇಲ್ಲಿವೆ. ಚಿತ್ರ ಹಾಗೂ  ವಿಡಿಯೋ ಕೃಪೆ: ವಿಟ್ಲ ಸುದ್ದಿಗಳು ವಾಟ್ಸಪ್‌ ಗ್ರೂಪಿನ ಶ್ಯಾಮ್‌ ನೆತ್ರಕೆರೆ, ಸದಾಶಿವ "ಶಿಲ್ಪಿʼ ವಿಟ್ಲ.









 ಸಂಜೆ ಭಜನಾ ತಂಡಗಳ ಜೊತೆಗೆ ನಡೆದ ಉಲ್ಪೆ ಮೆರವಣಿಗೆ ಮತ್ತು ಹಸಿರುವಾಣಿ ಮೆರವಣಿಗೆ ಸಂಭ್ರಮದ  ವಿಡಿಯೋ  l ಇಲ್ಲಿದೆ.  ಕೃಪೆ : ವಿಟಿವಿ, ವಿಟ್ಲ. ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ:

Saturday, August 13, 2022

ನೇತ್ರದಾನ ಮೂಲಕ ಸಾರ್ಥಕತೆ ಪಡೆದ ಮನುಭಟ್‌

 ನೇತ್ರದಾನ ಮೂಲಕ ಸಾರ್ಥಕತೆ ಪಡೆದ ಮನುಭಟ್‌

2022 ಆಗಸ್ಟ್‌ 13ರ ಶನಿವಾರ. ಅಂತಾರಾಷ್ಟ್ರೀಯ ಅಂಗಾಂಗದಾನದ ದಿನ. ಅಂಗಾಂಗ ದಾನಕ್ಕೆ ಪ್ರೇರೇಪಣೆ ಮೂಡಿಸಲೆಂದೇ ಇರುವ ದಿನ.

ಈ ಹೊತ್ತಿನಲ್ಲಿ ಈ ಹುಡುಗನನ್ನು ನೆನಪಿಸಿಕೊಳ್ಳಬೇಕು.

ಈತ ವಿಟ್ಲದ  ಮನು ಭಟ್‌ ಪೂರ್ಲುಪಾಡಿ. ವಯಸ್ಸು 27 ವರ್ಷ. ಆದರೆ ಬುದ್ದಿ ಕೇವಲ ಒಂದೂ ಮುಕ್ಕಾಲು ವರ್ಷದ ಮಗುವಿನದ್ದು. ಹೀಗಾಗಿ ಈತ ಪುಟ್ಟ ಬಾಲಕನೂ ಹೌದು, ಯುವಕನೂ ಹೌದು.

ಚಿಕ್ಕವನಾಗಿದ್ದಾಗ ಬಂದಿದ್ದ ಮಿದುಳು ಜ್ವರ ಈತನ ಬುದ್ದಿಯ ಬೆಳವಣಿಗೆಯನ್ನೇ ಸ್ಥಗಿತಗೊಳಿಸಿತ್ತು. ಆತನ ಚಿಕಿತ್ಸೆಗಾಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಆದರೆ ಅದ್ಯಾವುದೂ ಪ್ರಯೋಜನವಾಗಲಿಲ್ಲ.

ಬದುಕಿ ಬಾಳಿದ ಅಷ್ಟೂ ಕಾಲ ನಿರಂತರವಾಗಿ ಅಮ್ಮ, ದೊಡ್ಡಮ್ಮ, ಅಜ್ಜಿ, ಚಿಕ್ಕಮ್ಮ, ಅಕ್ಕ, ಅಣ್ಣಂದಿರ ಕೈಕೂಸಾಗಿಯೇ ಬದುಕಿದ.

ಯಾರು ಬಂದರೂ ಸರಿ ಮುಗ್ಧ ನಗುವಿನಿಂದ ಗಮನ ಸೆಳೆಯುತ್ತಿದ್ದ ಈತ ಆಸುಪಾಸಿನ ಮಕ್ಕಳಿಗೆಲ್ಲ ಅಚ್ಚುಮೆಚ್ಚು. ಪ್ರತಿವರ್ಷವೂ ಹುಟ್ಟು ಹಬ್ಬ ಬಂದರೆ ಸಾಕು ಈ ಓರಗೆಯ ಮಕ್ಕಳೆಲ್ಲ ಒಂದಾಗಿ ಆತನ ಹುಟ್ಟು ಹಬ್ಬ ಆಚರಿಸುತ್ತಿದ್ದರು. ಸಂಭ್ರಮಿಸುತ್ತಿದ್ದರು. (ವಿಡಿಯೋ ನೋಡಿ)

1994ರ ಏಪ್ರಿಲ್‌ 24ರಂದು ಜನಿಸಿದ್ದ ಈತ 2022ರ ಜುಲೈ 18ರಂದು ಇಹಲೋಕ ತ್ಯಜಿಸಿದ. ನಾಲ್ಕು ವರ್ಷಗಳ ಹಿಂದೆ ಹೆಚ್ಚು ಕಡಿಮೆ ತನ್ನಷ್ಟೇ ವಯಸ್ಸಿನಲ್ಲಿ ದೇವರ ಜೊತೆ ಸೇರಿಕೊಂಡ ಪ್ರೀತಿಯ ಅಣ್ಣ ಅನುಪಕೃಷ್ಣನ ಜೊತೆ ಸೇರಿಕೊಂಡ. ನಾಲ್ಕು ವರ್ಷಗಳ ಹಿಂದೆ ಈತನ ಅಣ್ಣನೂ ಜುಲೈ ತಿಂಗಳ 5ರಂದು ಭಗವಂತನ ಮಡಿಲು ಸೇರಿದ್ದ.

ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ದೇಹ ತ್ಯಾಗ ಮಾಡಿದ ಮನುವಿನ ಕಣ್ಣುಗಳು ಕುಟುಂಬ ಸದಸ್ಯರ ಆಶಯದಂತೆ ಬೇರೊಬ್ಬರ ಬಾಳಿಗೆ ಬೆಳಕಾಗುವ ಸಲುವಾಗಿ ವೈದ್ಯರ ಬಳಿ ಸೇರಿದವು.

ನೇತ್ರ ದಾನದ ಮೂಲಕ ಮನುಭಟ್‌ ಜೀವನ ಸಾರ್ಥಕತೆ ಪಡೆಯಿತು.

ಅಂಗಾಂಗದಾನದ ಈದಿನ ಮನುವಿನ ಆತ್ಮಕ್ಕೆ ಶಾಂತಿ ಕೋರುವುದರ ಜೊತೆಗೆ ಆತನ ಜೀವನ ಸಾರ್ಥಕವಾದುದಕ್ಕಾಗಿ ಗೌರವ ಸಲ್ಲಿಸೋಣ.

Advertisement