Showing posts with label West Bengal. Show all posts
Showing posts with label West Bengal. Show all posts

Thursday, December 24, 2020

ಪಶ್ಚಿಮ ಬಂಗಾಳ: ಎಡ ಪಕ್ಷಗಳ ಜೊತೆ ಕಾಂಗ್ರೆಸ್ ಮೈತ್ರಿ

 ಪಶ್ಚಿಮ ಬಂಗಾಳ: ಎಡ ಪಕ್ಷಗಳ ಜೊತೆ ಕಾಂಗ್ರೆಸ್ ಮೈತ್ರಿ

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ೨೦೨೧ರಲ್ಲಿ ನಡೆಯಲಿರುವ ಮುಂದಿನ ವಿಧಾನಸಭಾ ಚುನಾವಣೆಗೆ ಎಡಪಕ್ಷಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವುದಾಗಿ ಕಾಂಗ್ರೆಸ್  2020 ಡಿಸೆಂಬರ್ 24ರ ಗುರುವಾರ  ಔಪಚಾರಿಕವಾಗಿ ಪ್ರಕಟಿಸಿತು.

ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಅವರು ಘೋಷಣೆಯನ್ನು ಟ್ವೀಟ್ ಮಾಡಿದರು.

"ಕಾಂಗ್ರೆಸ್ ವರಿಷ್ಠ ಮಂಡಳಿಯು (ಹೈಕಮಾಂಡ್) ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಎಡಪಕ್ಷಗಳೊಂದಿಗಿನ ಚುನಾವಣಾ ಮೈತ್ರಿಯನ್ನು ಔಪಚಾರಿಕವಾಗಿ ಇಂದು ಅನುಮೋದಿಸಿದೆಎಂದು ಚೌಧರಿ ಟ್ವೀಟ್ ಮಾಡಿದರು.

ಪಶ್ಚಿಮ ಬಂಗಾಳವು ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿ ಜೊತೆಗೆ ಮುಂದಿನ ವರ್ಷ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಚುನಾವಣೆಗೆ ಹೋಗಲಿದೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೇರಿದಂತೆ ಎಲ್ಲ ಜಾತ್ಯತೀತ ಪಕ್ಷಗಳೊಂದಿಗೆ ಚುನಾವಣಾ ತಿಳುವಳಿಕೆಯನ್ನು ಹೊಂದುವ ಪಶ್ಚಿಮ ಬಂಗಾಳ ಘಟಕದ ನಿರ್ಧಾರವನ್ನು ಭಾರತದ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಕೇಂದ್ರ ಸಮಿತಿಯು ಅಕ್ಟೋಬರ್ ತಿಂಗಳಲ್ಲಿ ಅಂಗೀಕರಿಸಿತ್ತು.

ಸಿಪಿಐ (ಎಂ) ರಾಜಕೀಯ ಬ್ಯೂರೋ ಕ್ರಮಕ್ಕೆ ಮುಂದಾಗಿತ್ತು ಆದರೆ ಅಂತಿಮ ತೀರ್ಮಾನವನ್ನು ಕೇಂದ್ರ ಸಮಿತಿಗೆ ಬಿಟ್ಟಿತ್ತು.

೨೦೧೬ ಚುನಾವಣೆಯಲ್ಲಿ, ಸಿಪಿಐನ (ಎಂ) ಕೇಂದ್ರ ಸಮಿತಿಯು ಯುದ್ದ ತಂತ್ರವಾಗಿ ಕಾಂಗ್ರೆಸ್ ಜೊತೆಗೆ ಸ್ಥಾನ ಹಂಚಿಕೊಳ್ಳುವ ಪಶ್ಚಿಮ ಬಂಗಾಳ ಘಟಕದ ನಿರ್ಧಾರವನ್ನು ತಿರಸ್ಕರಿಸಿತ್ತು. ನಂತರದ ಚುನಾವಣೆಗಳಲ್ಲಿ ಕಾಂಗ್ರೆಸ್ ೪೪ ಸ್ಥಾನಗಳನ್ನು ಗೆದ್ದಿತು ಮತ್ತು ಎಡರಂಗವು ಕೇವಲ ೩೨ ಸ್ಥಾನಗಳಿಗೆ ತೃಪಿ ಪಡಬೇಕಾಗಿ ಬಂದಿತ್ತು.

Monday, December 21, 2020

ಸುವೇಂದು ಅಧಿಕಾರಿ ರಾಜೀನಾಮೆಗೆ ಸ್ಪೀಕರ್ ಅಸ್ತು

 ಸುವೇಂದು ಅಧಿಕಾರಿ ರಾಜೀನಾಮೆಗೆ ಸ್ಪೀಕರ್ ಅಸ್ತು

ಕೋಲ್ಕತ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕ ಸ್ಥಾನವನ್ನು ಇತ್ತೀಚೆಗೆ ತ್ಯಜಿಸಿದ ಸುವೇಂದು ಅಧಿಕಾರಿ ಶಾಸಕ ಸ್ಥಾನಕ್ಕೆ ತಾವು ನೀಡಿದ ರಾಜೀನಾಮೆಯನ್ನು ವಿಧಾನಸಭಾಧ್ಯಕ್ಷ ಬಿಮನ್ ಬ್ಯಾನರ್ಜಿ ಅವರು ಅಂಗೀಕರಿಸಿದ್ದಾರೆ ಎಂದು 2020 ಡಿಸೆಂಬರ್ 21ರ ಸೋಮವಾರ ಹೇಳಿದರು.

ತಮ್ಮ ಮುಂದೆ ಸೋಮವಾರ ಹಾಜರಾಗುವಂತೆ ಅಧಿಕಾರಿ ಅವರಿಗೆ ವಿಧಾನಸಭಾಧ್ಯಕ್ಷರು ಸೂಚಿಸಿದ್ದರು.

ಸದನದ ಶಾಸಕ ಸ್ಥಾನಕ್ಕೆ ನೀಡಿದ ನನ್ನ ರಾಜೀನಾಮೆಗೆ ಸಂಬಂಧಿಸಿದಂತೆ ವಿಧಾನಸಭೆ ಸಭಾಧ್ಯಕ್ಷರು ನನ್ನನ್ನು ಕರೆದಿದ್ದರು. ಇಂದು, ನಾನು ಅವರನ್ನು ಭೇಟಿ ಮಾಡಿದೆ.... ನನ್ನ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಎಂದು ನನಗೆ ತಿಳಿಸಲಾಯಿತು ಎಂದು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಹೊಸದಾಗಿ ಸೇರ್ಪಡೆಯಾದ ಅಧಿಕಾರಿ ಹೇಳಿದರು.

"ಸುವೇಂದು ಅಧಿಕಾರಿ ಅವರು ಈದಿನ ನನ್ನ ಮುಂದೆ ಹಾಜರಾಗಿದ್ದರು ಮತ್ತು ಬೇರೆಯವರ ಪ್ರಭಾವಕ್ಕೆ ಒಳಗಾಗದೆ ರಾಜೀನಾಮೆ ನೀಡಿರುವುದಾಗಿ ಖಚಿತ ಪಡಿಸಿದರು. ಅವರ ರಾಜೀನಾಮೆ ಸ್ವಯಂಪ್ರೇರಿತ ಮತ್ತು ನಿಜವಾದದ್ದು ಎಂದು ನನಗೆ ಮನವರಿಕೆಯಾಗಿದೆ. ಅವರ ರಾಜೀನಾಮೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಂಗೀಕರಿಸಿದ್ದೇನೆ ಎಂದು ಸಭಾಧ್ಯಕ್ಷರು ಹೇಳಿದರು.

ಮಾಜಿ ಟಿಎಂಸಿ ಸಚಿವರು ಮತ್ತು ಶಾಸಕರಾದ ಅಧಿಕಾರಿ ಅವರು ಪಕ್ಷದ ಎಲ್ಲ್ಲ ಹುದ್ದೆಗಳನ್ನು ತ್ಯಜಿಸಿ ಕಳೆದ ವಾರ ಕೇಸರಿ ಶಿಬಿರವನ್ನು ಸೇರಿದ್ದರು. ಅವರು ಡಿಸೆಂಬರ್ ೧೬ ರಂದು ವಿಧಾನಸಭಾ ಕಾರ್ಯದರ್ಶಿಯವರಿಗೆ ತಮ್ಮ ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ಸಲ್ಲಿಸಿದ್ದರು. ಸಮಯದಲ್ಲಿ ಸಭಾಧ್ಯಕ್ಷರು ಸದನದಲ್ಲಿ ಇರಲಿಲ್ಲ.

ಬಂಗಾಳ ಚುನಾವಣೆ: ಬಿಜೆಪಿಗೆ ಪ್ರಶಾಂತ್ ಕಿಶೋರ್ ಸವಾಲು

 ಬಂಗಾಳ ಚುನಾವಣೆ: ಬಿಜೆಪಿಗೆ ಪ್ರಶಾಂತ್ ಕಿಶೋರ್ ಸವಾಲು

ಕೋಲ್ಕತ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಾರಾಂತ್ಯದಲ್ಲಿ ರಾಜ್ಯಕ್ಕೆ ನೀಡಿದ ಎರಡು ದಿನಗಳ ಭೇಟಿಯ ಸಂದರ್ಭದಲ್ಲಿ ತೃಣಮೂಲ ನಾಯಕರನ್ನು ಸೆಳೆದುಕೊಂಡ ನಂತರಬಂಗಾಳ ಚುನಾವಣೆಯಲ್ಲಿ ಎರಡಂಕಿ ದಾಟಿ ಎಂದು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್  2020 ಡಿಸೆಂಬರ್ 21ರ ಸೋಮವಾರ ಬಿಜೆಪಿಗೆ ಸವಾಲು ಹಾಕಿದರು.

ಕಳೆದ ವರ್ಷ ಬಂಗಾಳ ಅಭಿಯಾನಕ್ಕಾಗಿ ಮಮತಾ ಬ್ಯಾನರ್ಜಿ ಅವರಿಂದ ಸೆಳೆಯಲ್ಪಟ್ಟ ಪ್ರಶಾಂತ ಕಿಶೋರ್ ಅವರುಬಿಜೆಪಿಯು ಎರಡು ಅಂಕಿಗಳನ್ನು ದಾಟಲು ಹೆಣಗಾಡಲಿದೆ ಎಂದು ಹೇಳಿದರು. ಬಿಜೆಪಿಯು ತಮ್ಮ ಊಹೆಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಜಾಗವನ್ನು (ಸ್ಪೇಸ್)’ ತೊರೆಯುವೆ ಎಂದು ಅವರು ಹೇಳಿದರು.

ದಯವಿಟ್ಟು ಟ್ವೀಟನ್ನು ಸಂರಕ್ಷಿಸಿ ಇಟ್ಟುಕೊಳ್ಳಿ. ಬಿಜೆಪಿ ಏನಾದರೂ ಉತ್ತಮ ಸಾಧನೆ ತೋರಿದರೆ, ನಾನು ಜಾಗ (ಸ್ಪೇಸ್) ಬಿಡಬೇಕಾಗುತ್ತದೆ ಎಂದು ಪ್ರಶಾಂತ್ ಟ್ವೀಟ್ ಮಾಡಿದರು.

ಪ್ರಶಾಂತ ಕಿಶೋರ್ ಅವರು ಬಳಸಿದಸ್ಪೇಸ್ ಪದದ ಅರ್ಥವೇನು ಎಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಚರ್ಚೆಗಳು ನಡೆದವು.

ಕಿಶೋರ್ ಅವರುಸ್ಪೇಸ್ ಪದದ ಅರ್ಥವನ್ನು ಸ್ಪಷ್ಟಪಡಿಸದ ಕಾರಣ ಇದು ಅಸ್ಪಷ್ಟವಾಗಿದೆ ಎಂದು ಬಿಜೆಪಿ ನಾಯಕರು ಪ್ರಶಾಂತ ಕಿಶೋರ್ ಟ್ವೀಟನ್ನು ಲೇವಡಿ ಮಾಡಿದರು.

ಕಿಶೋರ್ ಅವರ-ಪ್ಯಾಕ್ ಕಂಪೆನಿಯ ಉನ್ನತ ಕಾರ್ಯನಿರ್ವಾಹಕರೊಬ್ಬರುಚುನಾವಣಾ ತಂತ್ರಜ್ಞನಾಗಿ ತನ್ನ ಕೆಲಸವನ್ನು ತೊರೆಯುವೆ ಎಂಬುದು ಟ್ವೀಟಿನ ಅರ್ಥ ಎಂದು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದರು.

"ಅವರು ಹೇಳಿದ್ದು ಸಾಕಷ್ಟು ಸ್ಪಷ್ಟವಾಗಿದೆ. ಬಂಗಾಳದಲ್ಲಿ ೯೯ ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆದ್ದರೆ ಅವರು ತಮ್ಮ ಕೆಲಸವನ್ನು ತೊರೆಯುತ್ತಾರೆ. ಇದನ್ನು ಪ್ರಶ್ನಿಸುವ ಬಿಜೆಪಿ ಮಂದಿ, ಕಿಶೋರ್ ಹೇಳಿಕೆ ಸರಿಯಾದರೆ ತಾವು ರಾಜಕೀಯ ತ್ಯಜಿಸುತ್ತಾರೆಯೇ?’ ಎಂದು ಹೆಸರು ಹೇಳಲು ಇಚ್ಛಿಸದ ಕಿಶೋರ್‌ಗೆ ಆಪ್ತರಾಗಿರುವ ಕಾರ್ಯನಿರ್ವಾಹಕ ಪ್ರಶ್ನಿಸಿದರು.

ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿಯ ಮಾಜಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಮ್ಮ ಪಕ್ಷವು ೨೦೦ ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ತೃಣಮೂಲ ಸರ್ಕಾರವನ್ನು ಉಚ್ಚಾಟಿಸುವುದಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ ಹೇಳಿಕೆ ಮಹತ್ವ ಡೆದಿದೆ.

ಎರಡು ದಿನಗಳ ಪ್ರವಾಸದ ನಂತರ ಭಾನುವಾರ ಸಂಜೆ ಶಾ ದೆಹಲಿಗೆ ಮರಳಿದರು. ಅಮಿತ್ ಶಾ ಅವರ ಬಂಗಾಳ ಭೇಟಿಯ ಪ್ರಮುಖ ಅಂಶವೆಂದರೆ ಮಾಜಿ ಸಚಿವರು ಹಾಗೂ ಟಿಎಂಸಿಯ ಮುಂಚೂಣಿ ನಾಯಕರಾಗಿದ್ದ ಸುವೇಂದು ಅಧಿಕಾರಿ, ಎಡಪಕ್ಷ ಮತ್ತು ಕಾಂಗ್ರೆಸ್ಸಿನ ಮೂವರು ಶಾಸಕರು, ಟಿಎಂಸಿ ಲೋಕಸಭಾ ಸದಸ್ಯ ಮತ್ತು ಆಡಳಿತ ಪಕ್ಷದ ಹಲವಾರು ಜಿಲ್ಲಾ ನಾಯಕರೊಂದಿಗೆ ಏಳು ಮಂದಿ ಟಿಎಂಸಿ ಶಾಸಕರು ಬಿಜೆಪಿಗೆ ಪಕ್ಷಾಂತರಗೊಂಡಿದ್ದಾರೆ.

ಬಾಡಿಗೆ ಸೈನಿಕ ಎಂಬುದಾಗಿ ಕರೆಯುವ ಮೂಲಕ ಬಿಜೆಪಿಯು ಪ್ರಶಾಂತ ಕಿಶೋರ್ ಅವರಿಗೆ ಎದಿರೇಟು ನೀಡಿತು.

"ಅವರು ಟ್ವೀಟ್ ಮಾಡಿರುವುದು ಬಿಜೆಪಿಯನ್ನು ಗುರಿಯಾಗಿಸಲು ಅಲ್ಲ, ಬದಲಿಗೆ ತಮ್ಮ ಉದ್ಯೋಗದಾತರನ್ನು ಸಮಾಧಾನಪಡಿಸಲು. ಅವರು ಕೈತುಂಬಾ ಸಂಬಳ ಪಡೆಯುವುದರಿಂದ ಅವರ ವೃತ್ತಿಪರ ಸಾಮರ್ಥ್ಯದ ಬಗ್ಗೆ ಎದ್ದಿರುವ ಅನುಮಾನಗಳನ್ನು ನಿವಾರಿಸಲು ಅವರು ಇದನ್ನು ಬರೆದಿದ್ದಾರೆ ಎಂದು ಬಿಜೆಪಿ ರಾಜ್ಯದ ಉಪಾಧ್ಯಕ್ಷ ಜೇ ಪ್ರಕಾಶ್ ಮಜುಂದಾರ್ ತಿಳಿಸಿದರು.

ನಿಮ್ಮ  ಪಕ್ಷವು ೯೯ ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ವಿಫಲವಾದರೆ ನೀವು -ಪ್ಯಾಕ್‌ನ ಸವಾಲನ್ನು ಸ್ವೀಕರಿಸಿ ರಾಜಕೀಯವನ್ನು ತೊರೆಯುತ್ತೀರಾ?’ ಎಂದು ಕೇಳಿದಾಗ, ಮಜುಂದಾರ್, ‘ಯಾವುದೇ ರಾಜಕೀಯ ಪಕ್ಷವು ಅಂತಹ ಬದ್ಧತೆಗಳನ್ನು ಮಾಡುವುದಿಲ್ಲ. ನಾವು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಉತ್ತರಿಸಿದರು.

ಮಾಧ್ಯಮವನ್ನು ದಾರಿ ತಪ್ಪಿಸುವ ಮತ್ತು ತಮ್ಮ ಕಂಪೆನಿ ಮಾಡಿದ ಕಾರ್ಯಗಳ ಬಗ್ಗೆ ಪ್ರತಿಕ್ರಿಯಿಸದ ಕಿಶೋರ್ ಅವರ ಮೊದಲ ಹೇಳಿಕೆ ಇದಾಗಿದೆ, ಇದನ್ನು ತೃಣಮೂಲದಲ್ಲಿನ ಭಿನ್ನಮತೀಯರು ಮಾತ್ರವಲ್ಲದೆ ಬಿಜೆಪಿ ನಾಯಕರು ಕೂಡ ಗುರಿಯಾಗಿಸಿಕೊಂಡಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ನಾಯಕರಾದ ಶಾ ಅವರನ್ನು "ಹೊರಗಿನವರು" ಎಂಬುದಾಗಿ ಬ್ರಾಂಡ್ ಮಾಡುವ ತೃಣಮೂಲ ತಂತ್ರವನ್ನು ಪ್ರತಿರೋಧಿಸಿದ, ಕೇಸರಿ ಶಿಬಿರವುಚುನಾವಣೆಯಲ್ಲಿ ಗೆಲ್ಲಲು ಬಿಹಾರದಿಂದ ಕಿಶೋರ್‌ರಂತಹ ಒಬ್ಬ ವ್ಯಕ್ತಿ ಬೇಕಾಯಿತು ಎಂದು ಮುಖ್ಯಮಂತ್ರಿಯನ್ನು ಗುರಿಯಾಗಿಸಿ ಟೀಕಿಸಿತು.

ಕಿಶೋರ್ ಹಿಂದೆ ಬಿಜೆಪಿ, ಆಮ್ ಆದ್ಮಿ ಪಕ್ಷ ಮತ್ತು ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಗೆಲ್ಲಲು ಸಹಾಯ ಮಾಡಿದ್ದರು. ಅವರು ಕಾಂಗ್ರೆಸ್ ಜೊತೆಗೂಡಿಯೂ ಕೆಲಸ ಮಾಡಿದ್ದರು. ಆದರೆ ಕಾಂಗ್ರೆಸ್ಸಿಗೆ ಚುನಾವಣೆ ಗೆಲ್ಲಲು ಸಹಾಯ ಮಾಡಲು ಪ್ರಶಾಂತ ಕಿಶೋರ್ ಅವರಿಗೆ ಸಾಧ್ಯವಾಗಿರಲಿಲ್ಲ.

Advertisement