Showing posts with label chandrayaan 3. Show all posts
Showing posts with label chandrayaan 3. Show all posts

Saturday, September 2, 2023

ಸೂರ್ಯನೆಡೆಗೆ ʼಆದಿತ್ಯʼಪಯಣ ಯಶಸ್ವೀ ಉಡ್ಡಯನ

 ಸೂರ್ಯನೆಡೆಗೆ ʼಆದಿತ್ಯʼಪಯಣ: ಯಶಸ್ವೀ ಉಡ್ಡಯನ


ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಮೊದಲ ಅಡಿ ಇರಿಸಿದ ಚಂದ್ರಯಾನ-೩ ತ್ರಿವಿಕ್ರಮ ಸಾಧನೆಯ ಬಳಿಕ ಇದೇ ಸೂರ್ಯಶಿಕಾರಿಗೆ ಹೊರಟಿರುವ ಭಾರತದ ಇಸ್ರೋ ಇಂದು ೨೦೨೩ ಸೆಪ್ಟೆಂಬರ್‌ ೨ರ ಶನಿವಾರ ಸೂರ್ಯನ ಅಧ್ಯಯನಕ್ಕಾಗಿ ʼಆದಿತ್ಯ-ಎಲ್-‌೧ ಅಂತರಿಕ್ಷ ವೀಕ್ಷಣಾಲಯವನ್ನು ನಭಕ್ಕೆ ಹಾರಿಸಿತು.

ಬೆಳಗ್ಗೆ ೧೧.೫೦ಕ್ಕೆ ಸರಿಯಾಗಿ ಆಂದ್ರಪ್ರದೇಶದ ಶ್ರೀಹರಿಕೋಟಾದ ಸತೀಶ ಧವನ್ ಉಡ್ಡಯನ ಕೇಂದ್ರದಿಂದ ಪಿಎಸ್‌ ಎಲ್‌ ವಿ ಸಿ -೫೭ ರಾಕೆಟ್‌ ಮೂಲಕ ಗಗನಕ್ಕೆ ಚಿಮ್ಮುವ ಮೂಲಕ ʼಆದಿತ್ಯʼ ಅಂತರಿಕ್ಷ ವೀಕ್ಷಣಾಲಯ ಉಡ್ಡಯನಗೊಂಡಿತು.

ಕೆಳಗೆ ಕ್ಲಿಕ್ಕಿಸುವ ಮೂಲಕ ಸೂರ್ಯಯಾನ ಸೊಬಗು ವೀಕ್ಷಿಸಬಹುದು:


ಯಾನದ ನೇರ ಪ್ರಸಾರಕ್ಕಾಗಿ ಕೆಳಗೆ ಕ್ಲಿಕ್‌ ಮಾಡಿ:

ಸೂರ್ಯನೆಡೆಗೆ ʼಆದಿತ್ಯʼಪಯಣ

 ಸೂರ್ಯನೆಡೆಗೆ ʼಆದಿತ್ಯʼಪಯಣ

ಇಲ್ಲಿಂದ ನೋಡಿ ನೇರವಾಗಿ

ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಮೊದಲ ಅಡಿ ಇರಿಸಿದ ಚಂದ್ರಯಾನ-೩ ತ್ರಿವಿಕ್ರಮ ಸಾಧನೆಯ ಬಳಿಕ ಇದೇ ಸೂರ್ಯಶಿಕಾರಿಗೆ ಹೊರಟಿರುವ ಭಾರತದ ಇಸ್ರೋ ಇಂದು ೨೦೨೩ ಸೆಪ್ಟೆಂಬರ್‌ ೨ರ ಶನಿವಾರ ಸೂರ್ಯನ ಅಧ್ಯಯನಕ್ಕಾಗಿ ʼಆದಿತ್ಯ-ಎಲ್-‌೧ ಅಂತರಿಕ್ಷ ವೀಕ್ಷಣಾಲಯವನ್ನು ನಭಕ್ಕೆ ಹಾರಿಸಲಿದೆ.

ಬೆಳಗ್ಗೆ ೧೧ಕ್ಕೆ ಆಂದ್ರಪ್ರದೇಶದ ಶ್ರೀಹರಿಕೋಟಾದ ಸತೀಶ ಧವನ್ ಉಡ್ಡಯನ ಕೇಂದ್ರದಿಂದ ಪಿಎಸ್‌ ಎಲ್‌ ವಿ ಸಿ -೫೭ ರಾಕೆಟ್‌ ಮೂಲಕ ಗಗನಕ್ಕೆ ಚಿಮ್ಮಲಿರುವ ʼಆದಿತ್ಯʼ ಅಂತರಿಕ್ಷ ವೀಕ್ಷಣಾಲಯದ ಉಡ್ಡಯನವನ್ನು ಈ ಕೆಳಗಿನ ಚಿತ್ರವನ್ನು ಕ್ಲಿಕ್ಕಿಸುವ ಮೂಲಕ ಇಸ್ರೋ ಸೂರ್ಯಯಾನವನ್ನು ನೇರವಾಗಿ ವೀಕ್ಷಿಸಬಹುದು:

Saturday, August 26, 2023

ಚಂದ್ರನಲ್ಲಿ ಇಳಿದ ಹರ್ಷ: ಈ ದಿನದ ನೆನಪು ಇನ್ನು ಪ್ರತಿವರ್ಷ!

ಚಂದ್ರನಲ್ಲಿ ಇಳಿದ ಹರ್ಷ: ಈ ದಿನದ ನೆನಪು ಇನ್ನು ಪ್ರತಿವರ್ಷ!

ಬೆಂಗಳೂರು: ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಭಾರತ ಇಳಿದ ೨೦೨೩ ಆಗಸ್ಟ್‌ ೨೩ರ ದಿನದ ಐತಿಹಾಸಿಕ ಕ್ಷಣವನ್ನು ಸಂಭ್ರಮಿಸಿದವರು ಒಬ್ಬಿಬ್ಬರಲ್ಲ. ತಮ್ಮದೇ ಆದ ರೀತಿಯಲ್ಲಿ ಅದನ್ನು ಮಂದಿ ಸಂಭ್ರಮಿಸಿದ್ದಾರೆ. ಈ ದಿನವನ್ನು ಇನ್ನು ಮುಂದೆ ಪ್ರತಿವರ್ಷ ʼರಾಷ್ಟ್ರೀಯ ಬಾಹ್ಯಾಕಾಶ ದಿನʼ ಎಂಬುದಾಗಿ ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈದಿನ ೨೦೨೩ ಆಗಸ್ಟ್‌ ೧೬ರಂದು ಘೋಷಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಈದಿನ ಬೆಳಗ್ಗೆ ಬೆಂಗಳೂರಿಗೆ ಆಗಮಿಸಿ ಇಸ್ರೋದಲ್ಲಿ ವಿಜ್ಞಾನಿಗಳನ್ನು ಅಭಿನಂದಿಸಿ ಚಂದ್ರಯಾನ-೩ರ ʼವಿಕ್ರಮʼ ಇಳಿದ ಸ್ಥಳವನ್ನು ʼಶಿವಶಕ್ತಿʼ ಎಂಬುದಾಗಿಯೂ, ಚಂದ್ರನಲ್ಲಿ ಇಳಿದ ಆಗಸ್ಟ್‌ ೨೩ರ ದಿನವನ್ನು ʼರಾಷ್ಟ್ರೀಯ ಬಾಹ್ಯಾಕಾಶ ವಿಜ್ಞಾನ ದಿನʼ ಎಂಬುದಾಗಿ ಆಚರಿಸುವುದಾಗಿಯೂ, ಚಂದ್ರಯಾನ -೨ರ ತನ್ನ ಗುರುತನ್ನು ಬಿಟ್ಟಿ ಚಂದ್ರನ ನೆಲವನ್ನು ʼತಿರಂಗʼ ಎಂಬುದಾಗಿ ಹೆಸರಿಸುವುದಾಗಿಯೂ ಪ್ರಕಟಿಸಿದರು.

ಈ ಸಂದರ್ಭದಲ್ಲಿ ಚಂದ್ರಯಾನದ ಯಶಸ್ಸನ್ನು ಸಂಭ್ರಮಿಸಿದ ಹಲವರ ಕಲ್ಪನೆಯ ಕೆಲವು ಚಿತ್ರ, ವಿಡಿಯೋಗಳನ್ನೂ ʼಪರ್ಯಾಯʼ ಇಲ್ಲಿ ಪ್ರಕಟಿಸುತ್ತಿದೆ. ಅದರಲ್ಲಿ ಚಂದ್ರನಲ್ಲಿ ಇಳಿದ ಹರ್ಷವನ್ನು ಹಾಡಿನ ರೂಪದಲ್ಲಿ ಬಣ್ಣಿಸಿದ ಹರ್ಷ ಕಾವೇರಿಪುರ ಅವರ ವಿಡಿಯೋ ಒಂದು. ಇದರ ಸಾಹಿತ್ಯ, ಸಂಗೀತ, ಗಾಯನ ಹಳ್ಳೇರಾವ ಕುಲ್ಕರ್ಣಿ ಕೆಂಭಾವಿ ಅವರದು.
ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ
ʼಹರ್ಷ ಕಾವೇರಿಪುರʼ ಅವರ ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿ:


ಈ ವಿಡಿಯೋ ಕರ್ತೃ ಹರ್ಷ ಅವರ ಬಗ್ಗೆ ತಿಳಿಯಲು ಗೂಗಲ್‌ ಎಂಜಿನ್ನಿನಲ್ಲಿ ಸರ್ಚ್‌ ಮಾಡಿದರೆ ನಿಮಗೆ ಅವರ ಬಗ್ಗೆ ಹೆಚ್ಚಿನ ವಿವರ ಸಿಗುವುದಿಲ್ಲ. ಆದರೆ ಅವರ ಹಲವಾರು ವಿಡಿಯೋ, ರೀಲ್‌ಗಳು ಸಿಗುತ್ತವೆ. ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕೆಂದು ಅನಿಸುವ ವಿಡಿಯೋಗಳು ಇವು. ಆಸಕ್ತರು ಗೂಗಲ್‌ ನಲ್ಲಿ ತಡಕಾಡಿ ʼಹರ್ಷ ಕಾವೇರಿಪುರʼ ಅವರ ವಿಡಿಯೋಗಳ ಸೊಬಗು ಸವಿಯಬಹುದು.

ಆದರೆ ಇಲ್ಲಿ ಹಾಕಿರುವ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ಈ ಹರ್ಷ ಕಾವೇರಿಪುರ ಅವರ ವಿಡಿಯೋ ಮಾತ್ರ ನನಗೆ ಅಲ್ಲಿ ಸಿಗಲಿಲ್ಲ. ನಿಮಗೆ ಸಿಕ್ಕಿದರೆ ಖಂಡಿತ ʼಪರ್ಯಾಯʼಕ್ಕೆ ತಿಳಿಸಿ.

ಮೇಲೆ ತಿಳಿಸಿದಂತೆ ಚಂದ್ರಯಾನ ಯಶಸ್ಸಿನ ಸಂದರ್ಭವನ್ನು ಹಲವಾರು ಮಂದಿ ತಮ್ಮದೇ ಕಲ್ಪನೆ, ತಮಗೆ ಕಂಡಂತೆ ಚಿತ್ರ, ತಮ್ಮಿಷ್ಟದಂತೆ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸಿದ್ದಾರೆ.

ಯಾರೋ ಒಬ್ಬರು ಉಡುಪಿಯ ಕೃಷ್ಣನನ್ನು ಚಂದ್ರನ ಹಿನ್ನೆಲೆ ಇಟ್ಟು ಚಿತ್ರಿಸಿದರೆ, ಇನ್ನೊಬ್ಬರಿಗೆ ಚಂದ್ರನಲ್ಲಿ ಇಳಿದ ʼವಿಕ್ರಮ್ʼ ʼತಿರುಪತಿʼ ತಿಮ್ಮಪ್ಪನಂತೆ ಕಂಡಿದೆ.

ವ್ಯಂಗ್ಯಚಿತ್ರಕಾರ ಪ್ರಕಾಶ್‌ ಶೆಟ್ಟಿಯವರು ತಮ್ಮದೇ ʼಇಮೋಜಿʼ ರಚಿಸಿದ್ದಾರೆ. 

ನಂಜುಂಡಸ್ವಾಮಿ ಅವರ ಕಲ್ಪನೆಯನ್ನೂ ನೀವಿಲ್ಲಿ ನೋಡಬಹುದು.

ಇದರೊಂದಿಗೆ ಇನ್ನೊಂದು ಪುಟ್ಟ ವಿಡಿಯೋ ಇದೆ. ಅದು ಚಂದ್ರಯಾನದ ಸ್ಫೂರ್ತಿಯ ʼಪುಟ್ಟುʼ.

ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿ, ಆನಂದಿಸಿ.








Thursday, August 24, 2023

ಗೂಗಲ್‌ ಡೂಡಲ್‌: ಚಂದ್ರನ ದಕ್ಷಿಣ ಧ್ರುವದಲ್ಲಿ ಮೊದಲ ಲ್ಯಾಂಡಿಂಗ್ ಆಚರಣೆ!

 ಗೂಗಲ್‌ ಡೂಡಲ್‌: ಚಂದ್ರನ ದಕ್ಷಿಣ ಧ್ರುವದಲ್ಲಿ ಮೊದಲ ಲ್ಯಾಂಡಿಂಗ್ ಆಚರಣೆ!

ಗೂಗಲ್‌ ತನ್ನ ಇಂದಿನ (೨೦೨೩ ಆಗಸ್ಟ್‌ ೨೪) ಡೂಡಲ್ನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಮೊದಲ ಬಾರಿಗೆ ಇಳಿದ ಸಂಭ್ರಮ ಆಚರಣೆಗೆ ಮೀಸಲಿಟ್ಟಿತು.

ತನ್ನ ಡೂಡಲ್ ನಲ್ಲಿ ಚಂದ್ರಯಾನ ೩ರ ಚಂದ್ರನ ದಕ್ಷಿಣ ಧ್ರುವದ ಮೇಲಿನ ಲ್ಯಾಂಡಿಗ್‌ ಬಗೆ ಗೂಗಲ್‌ ಇದನ್ನು ಬರೆದಿದೆ: ಡೂಡಲ್‌ ಏನು ಬರೆದಿದೆ? ಇಲ್ಲಿ ಓದಿ:

ಆಗಸ್ಟ್ 24, 2023

ಚಂದ್ರನ ದಕ್ಷಿಣ ಧ್ರುವದಲ್ಲಿ ಮೊದಲ ಲ್ಯಾಂಡಿಂಗ್ ಆಚರಣೆ!

ʼಇಂದಿನ ಡೂಡಲ್‌ ಚಂದ್ರನ ದಕ್ಷಿಣ ಧ್ರುವದಲ್ಲಿನ ಮೊದಲ ಲ್ಯಾಂಡಿಂಗ್‌ ನ್ನು ಆಚರಿಸುತ್ತಿದೆ. ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಜುಲೈ 14, 2023 ರಂದು ಭಾರತದ ಆಂಧ್ರಪ್ರದೇಶದ ಶ್ರೀಹರಿಕೋಟಾ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಯಿತು ಮತ್ತು ಆಗಸ್ಟ್ 23, 2023 ರಂದು ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಬಳಿ ಯಶಸ್ವಿಯಾಗಿ ಮುಟ್ಟಿ ಇಳಿಯಿತು. ಚಂದ್ರನ ಇಳಿಯುವಿಕೆ ಸುಲಭದ ಸಾಧನೆಯಲ್ಲ. ಹಿಂದೆ, ಯುನೈಟೆಡ್ ಸ್ಟೇಟ್ಸ್, ಚೀನಾ ಮತ್ತು ಹಿಂದಿನ ಸೋವಿಯತ್ ಒಕ್ಕೂಟಗಳು ಮಾತ್ರ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಸಾಧಿಸಿವೆ - ಆದರೆ ಈ ಮೊದಲು ಯಾವುದೇ ದೇಶವು ದಕ್ಷಿಣ ಧ್ರುವ ಪ್ರದೇಶಕ್ಕೆ ಬಂದಿಳಿದಿಲ್ಲ.

ಚಂದ್ರನ ದಕ್ಷಿಣ ಧ್ರುವವು ಬಾಹ್ಯಾಕಾಶ ಸಂಶೋಧಕರಿಗೆ ಹೆಚ್ಚಿನ ಆಸಕ್ತಿಯ ಕ್ಷೇತ್ರ. ಏಕೆಂದರೆ ಅವರು ಶಾಶ್ವತವಾಗಿ ನೆರಳಿನ ಕುಳಿಗಳೊಳಗೆ ಮಂಜುಗಡ್ಡೆ ನಿಕ್ಷೇಪಗಳ ಅಸ್ತಿತ್ವದ ಬಗ್ಗೆ ಶಂಕಿಸಿದ್ದಾರೆ. ಚಂದ್ರಯಾನ-3 ಈಗ ಈ ಭವಿಷ್ಯವನ್ನು ನಿಜವೆಂದು ಖಚಿತಪಡಿಸಿದೆ! ಈ ಮಂಜುಗಡ್ಡೆಯು ಭವಿಷ್ಯದ ಗಗನಯಾತ್ರಿಗಳಿಗೆ ಗಾಳಿ, ನೀರು ಮತ್ತು ಹೈಡ್ರೋಜನ್ ರಾಕೆಟ್ ಇಂಧನದಂತಹ ನಿರ್ಣಾಯಕ ಸಂಪನ್ಮೂಲಗಳ ಸಾಮರ್ಥ್ಯವನ್ನು ನೀಡುತ್ತದೆ.

ಈ ಐತಿಹಾಸಿಕ ಸಾಧನೆಯನ್ನು ಸಾಧಿಸಿದ ನಂತರ ಚಂದ್ರಯಾನ-3 ರ ಮೊದಲ ಆಲೋಚನೆಗಳು ಏನು?

 "ಭಾರತ, ನಾನು ನನ್ನ ಗಮ್ಯಸ್ಥಾನವನ್ನು ತಲುಪಿದ್ದೇನೆ ಮತ್ತು ನೀವೂ ಕೂಡಾ!" ಇತ್ತ ಭೂಮಿಯಲ್ಲಿ  ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳನ್ನು ಅಭಿನಂದಿಸಿದರು: "ಯಶಸ್ಸು ಸಂಪೂರ್ಣ ಮಾನವೀಯತೆಗೆ ಸೇರಿದೆ.. ಇದು ಭವಿಷ್ಯದಲ್ಲಿ ಇತರ ಎಲ್ಲ ದೇಶಗಳ ಚಂದ್ರಯಾನ ಯೋಜನೆಗಳಿಗೆ ಸಹಾಯ ಮಾಡುತ್ತದೆ.ಎಂದು ನನಗೆ ವಿಶ್ವಾಸವಿದೆ. ಜಗತ್ತಿನಲ್ಲಿ ಎಲ್ಲರೂ ಚಂದ್ರ ಮತ್ತು ಅದರಾಚೆಗೆ ಹಾತೊರೆಯಬಹುದು, ಆಕಾಶವು ಮಿತಿಯಲ್ಲ!”.

ವಿಕ್ರಮ್‌ ಲ್ಯಾಂಡರಿನಿಂದ ಹೊರಬಂದ ರೋವರ್‌

ಈ ಮಧ್ಯೆ, ವಿಕ್ರಮ್‌ ಲ್ಯಾಂಡರಿನಿಂದ ರೋವರ್‌ ಹೊರಬಂದು ಚಂದ್ರ ನೆಲದಲ್ಲಿ ಸುತ್ತಾಟಕ್ಕೆ ಅಣಿಯಾಗಿದೆ ಎಂದು ಇಸ್ರೋ ಈದಿನ ಆಗಸ್ಟ್‌ ೨೪ರ ಶುಕ್ರವಾರ ಪ್ರಕಟಿಸಿದೆ.

ಪ್ರಜ್ಞಾನ್‌ ರೋವರ್‌ ವಿಕ್ರಮ್‌ ಲ್ಯಾಂಡರಿನಿಂದ ಹೊರಬಂದು ಚಂದ್ರನ ಮೇಲ್ಮೈಯಲ್ಲಿ ಚಲಿಸಲು ಆರಂಭಿಸಿದೆ ಎಂದು ಇಸ್ರೋ ಟ್ವೀಟ್‌ ತಿಳಿಸಿತು.

Wednesday, August 23, 2023

ಹೌದು.. ಭಾರತ ಇದೀಗ ಚಂದ್ರನ ಮೇಲೆ!

 ಹೌದು.. ಭಾರತ ಇದೀಗ ಚಂದ್ರನ ಮೇಲೆ!

ಬೆಂಗಳೂರು: ಹೌದು. ಭಾರತ ಅದನ್ನು ಸಾಧಿಸಿತು. ಚಂದ್ರನ ಬಳಿಗೆ ಈವರೆಗೆ ಭೂಮಿಯ ಯಾವದೇ ದೇಶ ಸಾಗದ ಜಾಗಕ್ಕೆ ಸಾಗುವ ಸಾಧನೆಯನ್ನು ಈದಿನ ೨೦೨೩ರ ಆಗಸ್ಟ್‌ ೨೩ರ ಬುಧವಾರ ಸಾಧಿಸಿತು.

ಅತ್ಯಂತ ಸುರಕ್ಷಿತವಾಗಿ, ಭಾರತದ ಚಂದ್ರಯಾನ-೩ ಬಾಹ್ಯಾಕಾಶ ನೌಕೆಯಿಂದ ಬೇರ್ಪಟ್ಟ ʼವಿಕ್ರಮ್‌ʼ ಲ್ಯಾಂಡರ್‌ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಸಂಜೆ ೬ ಗಂಟೆಯ ನಿಗದಿತ ವೇಳೆಯಲ್ಲಿ ಯಶಸ್ವಿಯಾಗಿ ʼಹಗುರʼವಾಗಿ ಇಳಿಯಿತು.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶಾದ್ಯಂತ ಕರತಾಡನ ಹರ್ಷೋದ್ಘಾರದೊಂದಿಗೆ ಇಸ್ರೋ ವಿಜ್ಞಾನಿಗಳು ಆನಂದ ತುಂದಿಲರಾದರು.

ಈ ಸಂದರ್ಭದಲ್ಲಿ  ಪ್ರಧಾನಿ ನರೇಂದ್ರ ಮೋದಿ ಅವರು ವಿಜ್ಞಾನಿಗಳ ಸಮೂಹ ಮತ್ತು ದೇಶದ ಜನತೆಯನ್ನು ಅಭಿನಂದಿಸಿದರು. 

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್ಕಿಸಿ:


ಇವುಗಳನ್ನೂ ಓದಿ:

ಚಂದ್ರನತ್ತ ಪಯಣ: ಭಾರತದ ದಾಪುಗಾಲು,  ʼಚಂದಮಾಮʼ ಸ್ಪರ್ಶಕ್ಕೆ ತ್ರಿ ʼವಿಕ್ರಮʼ ಹೆಜ್ಜೆ

ಚಂದ್ರನತ್ತ ಪಯಣ: ಭಾರತದ ದಾಪುಗಾಲು

 ʼಚಂದಮಾಮʼ ಸ್ಪರ್ಶಕ್ಕೆ ತ್ರಿ ʼವಿಕ್ರಮʼ ಹೆಜ್ಜೆ

ಚಂದ್ರನತ್ತ ಪಯಣ: ಭಾರತದ ದಾಪುಗಾಲು

ಚಂದ್ರಯಾನ ೧
೨೦೦೩ ಆಗಸ್ಟ್‌ ೧೫: ಆಗಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರಿಂದ ಚಂದ್ರಯಾನ ಕಾರ್ಯಕ್ರಮದ ಘೋಷಣೆ

೨೦೦೮ ಆಕ್ಟೋಬರ್‌ ೨೦೦೮: ಆಂದ್ರಪ್ರದೇಶದ ಶ್ರೀಹರಿಕೋಟಾದ ಸತೀಶ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-೧ ಉಡ್ಡಯನ

೨೦೦೮ ನವೆಂಬರ್‌ ೦೮: ಚಂದ್ರಯಾನ ೧ರಿಂದ ಚಂದ್ರನ ವರ್ಗಾವಣೆ ಪಥ ಪಯಣ ಪ್ರಾರಂಭ.

೨೦೦೮ ನವೆಂಬರ್‌ ೧೪: ಚಂದ್ರಯಾನ ೧ರ ಮೊದಲ ಮೂನ್‌ ಇಂಪ್ಯಾಕ್ಟ್‌ ಪ್ರೋಬ್‌ ಹೊರ ಹಾರಿತು ಮತ್ತು ಚಂದ್ರನ ಮೇಲ್ಮೈಗೆ ಸಮೀಪ ಅಪ್ಪಳಿಸಿತು. ಚಂದ್ರನ ಮೇಲ್ಮೈಯಲ್ಲಿ ನೀರಿನ ಕಣಗಳ ಅಸ್ತಿತ್ವ ದೃಢಪಟ್ಟಿತು.

೨೦೦೯ ಆಗಸ್ಟ್‌ ೨೮: ಇಸ್ರೋ ಪ್ರಕಾರ ಚಂದ್ರಯಾನ ೧ ಕಾರ್ಯಕ್ರಮ ಕೊನೆಗೊಂಡಿತು.

ಚಂದ್ರಯಾನ ೨

೨೦೧೯ ಜುಲೈ ೨೨: ಶ್ರೀಹರಿಕೋಟಾದ ಸತೀಶ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-೨ ಉಡಾವಣೆ

೨೦೧೯ ಆಗಸ್ಟ್‌ ೨೦: ಚಂದ್ರಯಾನ -೨ ಬಾಹ್ಯಾಕಾಶ ನೌಕೆ ಚಂದ್ರಕಕ್ಷೆಯನ್ನು ಪ್ರವೇಶಿಸಿತು.

೨೦೧೯ ಸೆಪ್ಟೆಂಬರ್‌ ೦೨: ಚಂದ್ರಧ್ರುವ ಕಕ್ಷೆಯಲ್ಲಿ ೧೦೦ ಕಿಮೀ ಎತ್ತರದಲ್ಲಿದ್ದಾಗ ಚಂದ್ರಯಾನದಿಂದ ವಿಕ್ರಮ್‌ ಲ್ಯಾಂಡರನ್ನು ಬೇರ್ಪಡಿಸಲಾಯಿತು. ವಿಕ್ರಮ್‌ ಲ್ಯಾಂಡರ್‌  ಚಂದ್ರನ ಮೇಲ್ಮೈಯಿಂದ ೨.೧ ಕಿಮೀ ಎತ್ತದಲ್ಲಿದ್ದಾಗ ಭೂ ಕೇಂದ್ರದ ಸಂಪರ್ಕ ಕಡಿದುಹೋಯಿತು.

ಚಂದ್ರಯಾನ ೩

೨೦೨೩ ಜುಲೈ ೧೪: ಚಂದ್ರಯಾನ -೩ ಬಾಹ್ಯಾಕಾಶ ನೌಕೆಯನ್ನು ಶ್ರೀಹರಿಕೋಟಾದ ಸತೀಶ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಯಿತು.

ಚಂದ್ರಯಾನ ೩ರ ಎಲ್ಲ ಪರೀಕ್ಷೆಗಳೂ ಸಫಲವಾಗಿದ್ದು, ಚಂದ್ರಕಕ್ಷೆಯಲ್ಲಿ ಚಂದ್ರನಿಗೆ ಅತ್ಯಂತ ಸಮೀಪಕ್ಕೆ ತಲುಪಿದೆ. ಬಾಹ್ಯಾಕಾಶ ನೌಕೆಯನ್ನು ನಿಧಾನವಾಗಿ ವೇಗ ತಗ್ಗಿಸುತ್ತಾ ಚಂದ್ರ ನೆಲದ ಸಮೀಪಕ್ಕೆ ಒಯ್ಯಲಾಗಿದೆ.

೨೦೨೩ ಆಗಸ್ಟ್‌ ೨೩: ಚಂದ್ರಯಾನ -೩ ವಿಕ್ರಮ್‌ ಲ್ಯಾಂಡರ್‌ ಮತ್ತು ರೋವರ್‌ ಚಂದ್ರನೆಲದ ಮೇಲೆ ʼಹಗುರ ಸ್ಪರ್ಶʼಕ್ಕೆ ಸಜ್ಜಾಗಿದೆ. ಕೊನೆಯ ಕ್ಷಣಗಳಲ್ಲಿ ಏನಾದರೂ ಅನಿರೀಕ್ಷಿತ ಸಮಸ್ಯೆ ಕಂಡು ಬಂದರೆ ಚಂದ್ರ ಸ್ಪರ್ಶ ಕಾರ್ಯಕ್ರಮವನ್ನು ಆಗಸ್ಟ್‌ ೨೭ರವರೆಗೆ ವಿಳಂಬಿಸಬಹುದು ಎಂದು ವಿಜ್ಞಾನಿಯೊಬ್ಬರು ಹೇಳಿದ್ದಾರೆ.

ಆದರೆ ಇಸ್ರೋದ ಎಲ್ಲ ವಿಜ್ಞಾನಿಗಳೂ ಈದಿನ ಯಶಸ್ವೀ ಚಂದ್ರ ಸ್ಪರ್ಶ ಖಚಿತ ಎಂಬ ವಿಶ್ವಾಸದಲ್ಲಿದ್ದಾರೆ.

ಚಂದ್ರ ಸ್ಪರ್ಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಸಂಜೆ ೬ ಗಂಟೆ ಸುಮಾರಿಗೆ ಚಂದ್ರಸ್ಪರ್ಶಕ್ಕೆ ಸಮಯ ನಿಗದಿ ಪಡಿಸಲಾಗಿದೆ. ಈ ಸಾಧನೆಯೊಂದಿಗೆ ಚಂದ್ರನೆಲವನ್ನು ಈವರೆಗೆ ಯಾರೂ ಸ್ಪರ್ಶಿಸದ ಭಾಗವನ್ನು ತಲುಪಿದ ಪ್ರಪ್ರಥಮ ದೇಶ ಭಾರತ ಎಂಬ ಹೆಗ್ಗಳಿಕೆ ಭಾರತದ್ದಾಗಲಿದೆ.

ಈ ಕೌತುಕದ ಕ್ಷಣವನ್ನು ನೇರವಾಗಿ ವೀಕ್ಷಿಸಲು ಕೆಳಗಿನ ಚಿತ್ರವನ್ನು ಕ್ಲಿಕ್ಕಿಸಿ: 


 ಇವುಗಳನ್ನೂ ಓದಿ: 

Zanda Ooncha Rahe Hamara.. Vijyaee Chandra Tiranga Pyara.!


 

Sunday, July 16, 2023

ಪಾಕಿಸ್ತಾನ ವರ್ಸಸ್‌ ಭಾರತ: ಇಲ್ಲಿ ಉಂಟು 'ಆದ್ಯತೆʼ!

 ಪಾಕಿಸ್ತಾನ ವರ್ಸಸ್‌ ಭಾರತ: ಇಲ್ಲಿ ಉಂಟು 'ಆದ್ಯತೆʼ!

ಬೆಂಗಳೂರು:  ಭಾರತವು ನಡೆಸಿರುವ ಚಂದ್ರಯಾನ-3 ರ ಉಡಾವಣೆಯು ರಾಷ್ಟ್ರದಾದ್ಯಂತ ಹೆಮ್ಮೆ ಮತ್ತು ಸಂಭ್ರಮದ ಭಾವನೆಯನ್ನು ಹುಟ್ಟುಹಾಕಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ 2023 ಜುಲೈ 14ರ ಶುಕ್ರವಾರ ಈ ಚಾರಿತ್ರಿಕ ಘಟನೆ ಘಟಿಸಿದ್ದ್ದದು, ಸಹಸ್ರಾರು ಉತ್ಸಾಹಿ ಪ್ರೇಕ್ಷಕರು ಕನಸಿನ ಬಾಹ್ಯಾಕಾಶ ಯಾತ್ರೆಗೆ ಸಾಕ್ಷಿಯಾದರು.

ಮಧ್ಯೆ, ಮಹತ್ವದ ಸಂದರ್ಭವನ್ನು ಸಂಭ್ರಮಿಸಲು ಹಲವಾರು ಮಂದಿ ಆನ್‌ಲೈನ್ ಬಳಕೆದಾರರು ಈ ಘಟನೆಯ ಸಂದೇಶಗಳು, ಚಿತ್ರಗಳು, ವಿಡಿಯೋಗಳನ್ನು ಟ್ವಿಟ್ಟರಿನಲ್ಲಿ ಹಂಚಿಕೊಂಡರು. ಇದೇ ಸಮಯದಲ್ಲಿ ಪಾಕಿಸ್ತಾನಿ ವ್ಯಕ್ತಿಯೊಬ್ಬರು ಪಾಕಿಸ್ತಾನದಿಂದ ತಮ್ಮ ಟ್ವೀಟ್‌ ಪ್ರಕಟಿಸಿದರು. ಇದು ಭಾರತೀಯನ ಟ್ವೀಟ್‌ ಗಿಂತ ಮೇಲ್ಭಾಗದಲ್ಲಿ ಇತ್ತು.

ʼಅಬ್‌ ಆಯೇಗಾ ನ ಮಜಾ.. ಆವಾಜ್‌ ಸುನ್‌ ರಹೇ ಹೋ? ಘೋರ್‌ ಸೇ ಸುನೋ… ಯೇ ಪೂರೀ ದುನಿಯಾ ಕೆ ಕಾಂಪನೇ ಕೀ ಆವಾಜ್‌ ಹೈʼ ಎಂಬುದಾಗಿ ಬರೆದಿದ್ದ ಈ ಟ್ವಿಟ್ಟರ್‌ ಸಂದೇಶ ಪಾಕಿಸ್ತಾನದ ತೋಳ್ಬಲವನ್ನು ಸಾರುವಂತಿತ್ತು. ಇದರ ಕೆಳಗಿದ್ದ ಭಾರತೀಯನ ಟ್ವೀಟಿನಲ್ಲಿ “ಇಂಡಿಯಾ ಇಂಡಿಯಾʼ ಬರಹದೊಂದಿಗೆ ಭಾರತದ ಚಂದ್ರಯಾನ -3 ಚಿತ್ರವಿತ್ತು.

ಪಾಕಿಸ್ತಾನ ಮತ್ತು ಭಾರತದ ʼಆದ್ಯತೆʼಗಳನ್ನು ಸಾರುವಂತೆ ಕಾಣುತ್ತಿದ್ದ ಈ ಟ್ವೀಟ್‌ ಸರಣಿಯ ಸ್ಕೀನ್‌ ಶಾಟ್‌ ತೆಗೆದುಕೊಂಡ ಇನ್ನೊಬ್ಬ ಪಾಕಿಸ್ತಾನಿ ಇದನ್ನು ತನ್ನ ಟ್ವಿಟ್ಟರ್‌ ಸಂದೇಶದಲ್ಲಿ ಪ್ರಕಟಿಸಿ ತನ್ನ ಪ್ರತಿಕ್ರಿಯೆಯಾಗಿ ʼನೋವಿನೊಂದಿಗೆ ನಗುತ್ತಿರುವ ʼಎಮೋಜಿʼಯನ್ನೂ ಹಾಕಿದರು. ಉಭಯ ದೇಶಗಳ ವ್ಯತಿರಿಕ್ತ ಆದ್ಯತೆಗಳನ್ನು ಇದು ಎತ್ತಿ ತೋರಿಸುತ್ತಿತ್ತು.

ಟ್ವಿಟರ್ ಬಳಕೆದಾರ ಅಲಿ ಶಾನ್ ಮೊಮಿನ್ ಹಂಚಿಕೊಂಡಿರುವ  ಸ್ಕ್ರೀನ್‌ಶಾಟ್, ಲಾಹೋರಿನಲ್ಲಿ 500 ಅಡಿ ಎತ್ತರದ ಧ್ವಜವನ್ನು ಹಾರಿಸುವ ಪಾಕಿಸ್ತಾನದ ಯೋಜನೆಯನ್ನು ಚರ್ಚಿಸುವ ಪಾಕಿಸ್ತಾನಿ ಬಳಕೆದಾರರ ಟ್ವೀಟನ್ನು ಪ್ರಮುಖವಾಗಿ ಪ್ರದರ್ಶಿಸುತ್ತದೆ. ಇದು ಈ ಪ್ರದೇಶದಲ್ಲಿ ಅತಿ ಎತ್ತರದ ಧ್ವಜ ಎನಿಸಿಕೊಳ್ಳಲು ಸಿದ್ಧವಾಗಿದೆ. 2023 ರಲ್ಲಿ ಪಾಕಿಸ್ತಾನದ ಸ್ವಾತಂತ್ರ್ಯ ದಿನದಂದು ನಡೆಯಲಿರುವ ಈ ಧ್ವಜಾರೋಹಣ ಸಮಾರಂಭಕ್ಕೆ 400 ದಶಲಕ್ಷ ರೂಪಾಯಿ (400 ಮಿಲಿಯನ್ ರೂ) ನಿಗದಿಪಡಿಸಲಾಗಿದೆ. ಈ ಧ್ವಜಕ್ಕೆ ಧ್ವನಿ ವರ್ಧಕ ವ್ಯವಸ್ಥೆ ಅಳವಡಿಸಲಾಗಿದ್ದು ಬಹುದೂರದವರೆಗೆ ಇದರ ಸದ್ದು ಕೇಳಲಿದೆಯಂತೆ.

ಇದಕ್ಕೆ ತದ್ವಿರುದ್ಧವಾಗಿ, ಈ ಟ್ವೀಟ್‌ನ ಕೆಳಗಿನ ಟ್ವೀಟ್‌  ಚಂದ್ರಯಾನ-3 ಸಾಧನೆಯೊಂದಿಗೆ ಭಾರತದ ವಿಜಯೋತ್ಸವ ಸಂದರ್ಭದ  ಭಾರತೀಯರ ಸಂಭ್ರಮವನ್ನು ಅಭಿವ್ಯಕ್ತಿಸಿದೆ..

ಭಾರತವು ಬಾಹ್ಯಾಕಾಶ ಪರಿಶೋಧನೆಯಲ್ಲಿ ತನ್ನ ಗಮನಾರ್ಹ ಸಾಧನೆಯನ್ನು ಆಚರಿಸಿದರೆ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ತನ್ನ ಪ್ರಗತಿಯನ್ನು ಪ್ರದರ್ಶಿಸುತ್ತಿದೆ. ನೆರೆಯ ಪಾಕಿಸ್ತಾನಿಯನ ಟ್ವೀಟ್‌ ವಿಭಿನ್ನ ರಾಷ್ಟ್ರೀಯ ಕಾಳಜಿಯನ್ನು ಪ್ರತಿಬಿಂಬಿಸುತ್ತದೆ., ಇದು ಎತ್ತರದ ಧ್ವಜವನ್ನು ಸ್ಥಾಪಿಸುವ ಮೂಲಕ ಭಾರತವನ್ನು ಮೀರಿಸಲು ಬಯಸುತ್ತಿದೆ ಎಂಬುದನ್ನು ತೋರಿಸುತ್ತಿದೆ.

ಸ್ಕ್ರೀನ್‌ಶಾಟ್‌ನೊಂದಿಗೆ ಸರಳವಾದ 'ನೋವಿನ ಮೂಲಕ ನಗುತ್ತಿರುವ' ಎಮೋಜಿಯು ಎರಡು ದೇಶಗಳ ವಿಭಿನ್ನ 'ಆದ್ಯತೆಗಳನ್ನು' ಬಹಿರಂಗಪಡಿಸುವಾಗ ಪೋಸ್ಟ್‌ನ ಸಾರವನ್ನು ಸೆರೆಹಿಡಿಯುತ್ತದೆ.

Wednesday, March 4, 2020

೨೦೨೧ರಲ್ಲಿ ಚಂದ್ರಯಾನ-೩

೨೦೨೧ರಲ್ಲಿ ಚಂದ್ರಯಾನ-
ನವದೆಹಲಿ: ೨೦೨೧ರ ಪೂರ್ವಾರ್ಧದಲ್ಲಿ ಚಂದ್ರಯಾನ- ಉಡಾವಣೆ ನಡೆಯಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು 2020 ಮಾರ್ಚ್  04ರ ಬುಧವಾರ ತಿಳಿಸಿದರು. ಮೂರನೇ ಚಂದ್ರಯಾನ ಯೋಜನೆಯಲ್ಲಿ ಸ್ವಲ್ವ ವಿಳಂಬವಾಗಬಹುದು ಎಂಬ ಸೂಚನೆಯನ್ನು ಅವರು ಮೂಲಕ ನೀಡಿದರು.

ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಪ್ರಧಾನ ಮಂತ್ರಿಗಳ ಕಾರ್ಯಾಲಯದ ಸಹಾಯಕ ಸಚಿವ ಜಿತೇಂದ್ರ ಸಿಂಗ್ ವಿಷಯವನ್ನು ತಿಳಿಸಿದರು.

ಭಾರತದ ಮಾನವ ಸಹಿತ ಬಾಹ್ಯಾಕಾಶ ಯಾನವಾದ ಗಗನಯಾನ ಯೋಜನೆಯ ಸಂದರ್ಭದಲ್ಲಿ  ಸೂಕ್ಷ್ಮ ಗುರುತ್ವಾಕರ್ಷಣೆಗೆ (ಮೈಕ್ರೋ ಗ್ರಾವಿಟಿ) ಸಂಬಂಧಿಸಿದಂತೆ ಜೈವಿಕ ಮತ್ತು ಭೌತ ವಿಜ್ಞಾನದ ಒಟ್ಟು ಪ್ರಯೋಗಗಳನ್ನು ನಡೆಸಲಾಗುವುದು ಎಂದು ಅವರು ನುಡಿದರು.

Thursday, January 2, 2020

೨೦೨೦: ಚಂದ್ರಯಾನ- ೩, ಗಗನಯಾನ ವರ್ಷ: ಇಸ್ರೋ ಮುಖ್ಯಸ್ಥ ಕೆ ಶಿವನ್ ಘೋಷಣೆ

೨೦೨೦: ಚಂದ್ರಯಾನ- , ಗಗನಯಾನ ವರ್ಷ: ಇಸ್ರೋ ಮುಖ್ಯಸ್ಥ ಕೆ ಶಿವನ್ ಘೋಷಣೆ
ಬಾಹ್ಯಾಕಾಶ ಯಾನ ತರಬೇತಿಗೆ ವಾಯುಪಡೆ ಸಿಬ್ಬಂದಿ ಆಯ್ಕೆ
ಬೆಂಗಳೂರು:  ೨೦೨೦ನೇ ಇಸವಿಯು ಭಾರತದ ಗಗನಯಾನ ಮತ್ತು ಚಂದ್ರಯಾನ-೩ರ ವರ್ಷ ಎಂಬುದಾಗಿ 2020 ಜನವರಿ 01ರ ಬುಧವಾರ ಇಲ್ಲಿ ಘೋಷಿಸಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥ ಕೆ.ಶಿವನ್ ಅವರು ಭಾರತದ ಚೊಚ್ಚಲ ಮಾನವ ಸಹಿತ ಗಗನಯಾನ ಯೋಜನೆಯ ತರಬೇತಿ ಪಡೆಯಲು ಭಾರತೀಯ ವಾಯುಪಡೆಯ ನಾಲ್ವರು ಸಿಬ್ಬಂದಿಯನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಿಸಿದರು.

ಇಸ್ರೋ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿವನ್ ಅವರು ನಾಲ್ವರು ಗಗನಯಾನಿಗಳು ಜನವರಿ ೩ನೇ ವಾರದಿಂದ ರಷ್ಯಾದಲ್ಲಿ ತರಬೇತಿ ಪಡೆಯಲಿದ್ದಾರೆ ಎಂದು ಹೇಳಿದರು. ಆದರೆ ಅವರ ಹೆಸರುಗಳನ್ನು ಇಸ್ರೋ ಅಧ್ಯಕ್ಷರು ಬಹಿರಂಗ ಪಡಿಸಲಿಲ್ಲ.

ಗಗನಯಾನಕ್ಕೆ ಮುನ್ನ ಪ್ರೊಪಲ್ಷನ್ ಮಾಡ್ಯೂಲ್ಗಳ ಮಾನವ ರೇಟಿಂಗ್ ಮತ್ತು ಸಿಬ್ಬಂದಿ ತಪ್ಪಿಸಿಕೊಳ್ಳುವ ವ್ಯವಸ್ಥೆ ಸೇರಿದಂತೆ ಅನೇಕ ವ್ಯವಸ್ಥೆಗಳನ್ನು ಪರೀಕ್ಷಿಸಲಾಗುವುದುಎಂದು ಶಿವನ್ ಹೇಳಿದರು.

ಚಂದ್ರನ ದಕ್ಷಿಣ ಧ್ರುವ ಪ್ರದೇಶಕ್ಕೇ ಚಂದ್ರಯಾನ- ಸಾಗಲಿದೆ. ಇದಕ್ಕಾಗಿ ಅಂದಾಜು ೬೦೦ ಕೋಟಿ ರೂಪಾಯಿ ವೆಚ್ಚವಾಗುವ ನಿರೀಕ್ಷೆ ಇದೆ ಎಂದು ಶಿವನ್ ಅಧಿಕೃತವಾಗಿ ಪ್ರಕಟಿಸಿದರು.

ಚಂದ್ರಯಾನ
- ಯೋಜನೆಯಲ್ಲಿ ಲ್ಯಾಂಡರ್ ಮತ್ತು ರೋವರ್ನ್ನು ಮಾತ್ರ ಹೊಸದಾಗಿ ಬಳಸಲಾಗುವುದು. ಚಾಂದ್ರಕಕ್ಷೆಯಲ್ಲಿ ಸುತ್ತುತ್ತಿರುವ ಚಂದ್ರಯಾನ - ಆರ್ಬಿಟರ್ ನ್ನೇ ಯೋಜನೆಯಲ್ಲಿ ಬಳಸಿಕೊಳ್ಳಲಾಗುವುದು. ಯೋಜನೆಗೆ ಕೇಂದ್ರ ಸರ್ಕಾರದ ಒಪ್ಪಿಗೆ ಲಭಿಸಿದ್ದು, ಸಿದ್ಧತೆ ಆರಂಭಿಸಲಾಗಿದೆ ಎಂದು ಶಿವನ್ ಹೇಳಿದರು.

ಚಂದ್ರಯಾನ - ಚಂದ್ರನ ಅಂಗಳದಲ್ಲಿ ಇಳಿಯುವ ಭಾರತದ ಚೊಚ್ಚಲ ಯತ್ನವಾಗಿತ್ತು. ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ವಿಕ್ರಮ್ ಲ್ಯಾಂಡರನ್ನು ಇಳಿಸಲು ಇಸ್ರೋ ಯೋಜಿಸಿತ್ತು.

ಆದರೆ ಕೊನೆ ಗಳಿಗೆಯಲ್ಲಿ ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳಕ್ಕೆ ಅಪ್ಪಳಿಸಿತ್ತು. ಇಡೀ ದೇಶವೇ ಯೋಜನೆಯ ಯಶಸ್ವಿಯಾಗುತ್ತಿದೆ ಎಂಬ ಸಂಭ್ರಮದಲ್ಲಿ ಇದ್ದಾಗ, ಸಂಭವಿಸಿದ ದುರಂತದಿಂದ ಬಾಹ್ಯಾಕಾಶ ಸಂಸ್ಥೆಗೆ ದಿಗ್ಭ್ರಮೆಯಾಗಿತ್ತು. ಆದರೆ ಯೋಜನೆಯಲ್ಲಿ ಒಯ್ಯಲಾಗಿದ್ದ ಚಂದ್ರಯಾನ ಆರ್ಬಿಟರ್ ಇನ್ನೂ ಕಕ್ಷೆಯಲ್ಲಿ ಯಶಸ್ವಿಯಾಗಿ ಸುತ್ತುತ್ತಾ ಕಾರ್ ನಿರ್ವಹಿಸುತ್ತಿದೆ ಎಂಬುದು ವಿಜ್ಞಾನಿಗಳಿಗೆ ಸಾಂತ್ವನ ನೀಡಿದ ಅಂಶವಾಗಿತ್ತು.

ಚಂದ್ರನ ನೆಲದಲ್ಲಿ ಇಳಿಯಲಾಗದೇ ಇದ್ದರೂ, ಚಂದ್ರಯಾನ-೨ರಲ್ಲಿ ನಾವು ಉತ್ತಮ ಪ್ರಗತಿ ಸಾಧಿಸಿದ್ದೇವೆ. ಚಾಂದ್ರ ಕಕ್ಷೆಯಲ್ಲಿ ಸುತ್ತುತ್ತಿರುವ ಆರ್ಬಿಟರ್ ಇನ್ನೂ ವರ್ಷಗಳ ಕಾಲ ಮಾಹಿತಿ ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆಎಂದು ಶಿವನ್ ನುಡಿದರು.

ಎರಡನೇ ಬಾಹ್ಯಾಕಾಶ ಬಂದರು ಸ್ಥಾಪನೆಗೆ ಇಸ್ರೋ ಕಾರ್ಯಮಗ್ನವಾಗಿದ್ದು, ಅದಕ್ಕಾಗಿ ತಮಿಳುನಾಡಿನ ತೂತುಕುಡಿಯಲ್ಲಿ ೨೫೦೦ ಎಕರೆ ಜಾಗವನ್ನು ಗುರುತಿಸಿದೆ ಎಂದೂ ಇಸ್ರೋ ಹೇಳಿತು.

೨೦೧೯ ಇಸ್ರೋ ಪಾಲಿಗೆ ಮಹತ್ವದ ವರ್ಷವಾಗಿದ್ದು, ಅದು ಬಾಹ್ಯಾಕಾಶಕ್ಕೆ ಒಯ್ದ ವಿದೇಶೀ ಉಪಗ್ರಹಗಳ ಸಂಖ್ಯೆ ೩೧೯ಕ್ಕೆ ಏರಿದೆ. ಚಂದ್ರನ ಅಂಗಳದಲ್ಲಿ ಇಳಿಯುವ ಚಂದ್ರಯಾನ - ಯೋಜನೆಗೆ ಸಿದ್ಧತೆ, ಮಾನವ ಸಹಿತ ಬಾಹ್ಯಾಕಾಶ ಯಾನ ಕೇಂದ್ರದ ಸ್ಥಾಪನೆ, ಯುವ ವಿಜ್ಞಾನಿ ಕಾರ್ಯಕ್ರಮಗಳ ಆರಂಭ, ರಾಷ್ಟ್ರದ ಚೊಚ್ಚಲ ಮಾನವ ಸಹಿತ ಬಾಹ್ಯಾಕಾಶ ಯಾನ ತರಬೇತಿಗಾಗಿ ಭಾರತೀಯ ಗಗನಯಾನಿಗಳ ಆಯ್ಕೆಗೆ ಭಾರತೀಯ ವಾಯುಪಡೆ (ಐಎಎಫ್ ) ಜೊತೆಗೆ ಒಪ್ಪಂದಕ್ಕೆ ಸಹಿ ಕೂಡಾ ಇದೇ ವರ್ಷದಲ್ಲಿ ಸಾಧ್ಯವಾಗಿದೆ. ಆದಾಗ್ಯೂ  ೨೦೧೯ರ ಸಾಲಿನ ಏಕೈಕ ಹಿನ್ನಡೆ ಚಂದ್ರನ ಅಂಗಳದಲ್ಲಿ ವಿಕ್ರಮ್ ಲ್ಯಾಂಡರ್ ಅಪ್ಪಳಿಸಿ ಪತನಗೊಂಡದ್ದು.

Advertisement