Showing posts with label kamalnath. Show all posts
Showing posts with label kamalnath. Show all posts

Saturday, October 31, 2020

‘ತಾರಾ ಪ್ರಚಾರಕ’ ಸ್ಥಾನಮಾನ ರದ್ದು: ಸುಪ್ರೀಂಗೆ ಕಮಲನಾಥ್

 ‘ತಾರಾ ಪ್ರಚಾರಕ ಸ್ಥಾನಮಾನ ರದ್ದು: ಸುಪ್ರೀಂಗೆ ಕಮಲನಾಥ್

ನವದೆಹಲಿ: ಚುನಾವಣಾ ಆಯೋಗವು ತಮ್ಮ ತಾರಾ ಪ್ರಚಾರಕ ಸ್ಥಾನಮಾನ ರದ್ದು ಪಡಿಸಿದ್ದನ್ನು ಪ್ರಶ್ನಿಸಿ, ಕಾಂಗ್ರೆಸ್ ನಾಯಕ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್ 2020 ಅಕ್ಟೋಬರ್ 31ರ ಶನಿವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದರು.

ಇತ್ತೀಚೆಗೆ ನಡೆದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ರಾಜಕೀಯ ಪ್ರತಿಸ್ಪರ್ಧಿ ವಿರುದ್ಧ ಕಮಲನಾಥ್ ಅವರು "ಮಾಫಿಯಾ" ಮತ್ತು "ಮಿಲಾವತ್ ಖೋರ್ ಪದಗಳನ್ನು ಬಳಸಿದ್ದರು. ಕಳೆದ ವಾರ, ಪ್ರಚಾರದಲ್ಲಿ ಬಿಜೆಪಿ ಅಭ್ಯರ್ಥಿ ಸಚಿವೆ ಇಮಾರ್ತಿ ದೇವಿ ವಿರುದ್ಧ "ಐಟಂ ಪದ ಬಳಸಿದ್ದರು.

ಇಂತಹ ಪದಗಳನ್ನು ಬಳಸಬೇಡಿ ಎಂದು ಚುನಾವಣಾ ಆಯೋಗ ಕಮಲನಾಥ್ ಅವರಿಗೆ ಸೂಚಿಸಿತ್ತು.

ಆದರೂ ಕಮಲನಾಥ್ ವರಸೆ ಬದಲಾಗಿರಲಿಲ್ಲ.  ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು, ಮಾದರಿ ನೀತಿ ಸಂಹಿತೆಯನ್ನು ಪದೇ ಪದೇ ಉಲ್ಲಂಘಿಸಿದ್ದಕ್ಕಾಗಿ ಮತ್ತು ನೀಡಲಾದ ಸಲಹೆಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಕ್ಕಾಗಿ, ಕಮಲನಾಥ್ ಅವರ ತಾರಾ ಪ್ರಚಾರಕ (ಸ್ಟಾರ್ ಕ್ಯಾಂಪೇನರ್) ಸ್ಥಾನಮಾನವನ್ನು ರದ್ದುಪಡಿಸಿ ಆದೇಶ ಹೊರಡಿಸಿತ್ತು.

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್ ಅವರ ತಾರಾ ಪ್ರಚಾರಕ (ಸ್ಟಾರ್ ಕ್ಯಾಂಪೇನರ್) ಸ್ಥಾನಮಾನವನ್ನು ತತ್ ಕ್ಷಣದಿಂದ ರದ್ದು ಪಡಿಸಲಾಗಿದೆ. ಇಂದಿನಿಂದ ಯಾವುದೇ ಪ್ರಚಾರ ಅಭಿಯಾನವನ್ನು ಕಮಲನಾಥ್ ಕೈಗೊಂಡರೆ, ಅವರ ಪಯಣ, ವಾಸ್ತವ್ಯ ಮತ್ತು ಭೇಟಿಗೆ ಸಂಬಂಧಿಸಿದ ಸಂಪೂರ್ಣ ವೆಚ್ಚವನ್ನು ಆಯಾ ಕ್ಷೇತ್ರದ ಅಭ್ಯರ್ಥಿಯು ಭರಿಸಬೇಕಾಗುತ್ತದೆ ಎಂದು ಚುನಾವಣಾ ಆಯೋಗ ತನ್ನ ಆದೇಶದಲ್ಲಿ ತಿಳಿಸಿತ್ತು.

ಹೇಳಿತ್ತು.

ಕಮಲನಾಥ್ ಅವರ ೧೫ ತಿಂಗಳುಗಳ ಸರ್ಕಾರ ೨೦೨೦ರ ಮಾರ್ಚ್ ತಿಂಗಳಲ್ಲಿ ಪತನಗೊಂಡು, ಬಿಜೆಪಿಗೆ ಮತ್ತೆ ಅಧಿಕಾರಕ್ಕೆ ಮರಳಲು ಮಾರ್ಗ ಸುಗಮಗೊಂಡಿತ್ತು.

ರಾಜ್ಯದ ಮತದಾರರು ಸರಳ, ನಿಷ್ಕಪಟ ಮತ್ತು ಬಡವರು, ಆದರೆ ಅವರು ಬುದ್ಧಿವಂತರಾಗಿದ್ದಾರೆ. ಮುಂಬರುವ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಮತ್ತೆ ಅಧಿಕಾರಕ್ಕೆ ತರುತ್ತಾರೆ ಎಂದು ಕಮಲನಾಥ್ ಹೇಳಿದರು. ನವೆಂಬರ್ ರಂದು ರಾಜ್ಯದ ೨೮ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.

೨೩೦ ಸದಸ್ಯ ಬಲದ ರಾಜ್ಯ ವಿಧಾನಸಭೆಯ ೨೮ ಸ್ಥಾನಗಳಿಗೆ ಉಪಚುನಾವಣೆ ನಡೆಯುತ್ತಿದ್ದು, ಅಧಿಕಾರಕ್ಕೆ ಮರಳಲು ಕಾಂಗ್ರೆಸ್ ಎಲ್ಲ ೨೮ ಸ್ಥಾನಗಳನ್ನು ಗೆಲ್ಲಬೇಕಾಗಿದೆ, ಆಡಳಿತಾರೂಢ ಬಿಜೆಪಿಗೆ ಕೇವಲ ಬಹುಮತದ ಮಾಂತ್ರಿಕ ಸಂಖ್ಯೆಯಾದ ೧೧೬ನ್ನು ತಲುಪಲು ಕೇವಲ ಒಂಬತ್ತು ಸ್ಥಾನಗಳು ಬೇಕಾಗುತ್ತವೆ.

"ರಾಜ್ಯದ ಜನರು ವಿಶೇಷವಾಗಿ ೨೮ ಕ್ಷೇತ್ರಗಳ ಮತದಾರರ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ,

ಜನರ ಆದೇಶವನ್ನು ವ್ಯಾಪಾರ ಮಾಡುವ ಮೂಲಕ ಅಧಿಕಾರಕ್ಕೆ ಬಂದ (ಬಿಜೆಪಿ) ಸರ್ಕಾರವು ಕಳೆದ ಏಳು ತಿಂಗಳಲ್ಲಿ ಏನನ್ನೂ ಬದಲಾಯಿಸಲು ಸಾಧ್ಯವಾಗಲಿಲ್ಲ ಎಂಬುದು ಅವರಿಗೆ ತಿಳಿದಿದೆ. ರೈತರ ಸ್ಥಿತಿ ಹದಗೆಟ್ಟಿದೆ ಮತ್ತು ನಿರುದ್ಯೋಗ ಹೆಚ್ಚಾಗಿದೆ. ಜನರು ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತಾರೆ ಎಂದು ಕಮಲನಾಥ್ ಹೇಳಿದರು.

Wednesday, October 21, 2020

ಬಿಜೆಪಿ ನಾಯಕಿಗೆ ’ಐಟಂ’ ಪದ ಬಳಕೆ: ಕಮಲನಾಥ್ ಗೆ ನೋಟಿಸ್

 ಬಿಜೆಪಿ ನಾಯಕಿಗೆಐಟಂ ಪದ ಬಳಕೆ: ಕಮಲನಾಥ್ ಗೆ ನೋಟಿಸ್

ನವದೆಹಲಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕಿ, ಸಚಿವೆ ಇಮಾರ್ತಿ ದೇವಿ ವಿರುದ್ಧದಐಟಂ ಟೀಕೆಗಾಗಿ ಚುನಾವಣಾ ಆಯೋಗವು 2020 ಅಕ್ಟೋಬರ್ 21ರ ಬುಧವಾರ ಕಾಂಗ್ರೆಸ್ ಮುಖಂಡ ಕಮಲನಾಥ್ ಅವರಿಗೆ ನೋಟಿಸ್ ಜಾರಿ ಮಾಡಿತು.

ಮುಂದಿನ ೪೮ ಗಂಟೆಗಳಲ್ಲಿ ತಮ್ಮ ಉತ್ತರ ನೀಡುವಂತೆ ಆಯೋಗವು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಗೆ ಸೂಚಿಸಿತು.

ಮಧ್ಯಪ್ರದೇಶದ ಉಪಚುನಾವಣೆಗಳಿಂದಾಗಿ ಜಾರಿಯಲ್ಲಿರುವ ಮಾದರಿ ನೀತಿ ಸಂಹಿತೆ, ಯಾವುದೇ ಪಕ್ಷವು ಅಸ್ತಿತ್ವದಲ್ಲಿರುವ ಯಾವುದೇ ಭಿನ್ನಾಭಿಪ್ರಾಯಗಳನ್ನು ಉಲ್ಬಣಗೊಳಿಸುವ, ಪರಸ್ಪರ ದ್ವೇಷ ಮೂಡಿಸುವ ಅಥವಾ ವಿವಿಧ ಜಾತಿಗಳು ಹಾಗೂ ಸಮುದಾಯಗಳ ನಡುವೆ ಉದ್ವಿಗ್ನತೆ ಉಂಟು ಮಾಡುವ ಯಾವುದೇ ಹೇಳಿಕೆ ನೀಡಬಾರದು ಎಂದು ಹೇಳುತ್ತದೆ ಎಂದು ಕಮಲನಾಥ್ ಅವರಿಗೆ ಕಳುಹಿಸಿದ ನೋಟಿಸಿನಲ್ಲಿ ಅವರ ಟೀಕೆಗೆ ಆಕ್ಷೇಪ ಸೂಚಿಸಿದ ಚುನಾವಣಾ ಆಯೋಗ ತಿಳಿಸಿದೆ.

ಬಿಜೆಪಿಯ ಇಮಾರ್ತಿ ದೇವಿ ಅವರನ್ನು ಕಣಕ್ಕಿಳಿಸಿರುವ ಗ್ವಾಲಿಯರ್‌ನ ದಬ್ರಾ ಪಟ್ಟಣದಲ್ಲಿ ನವೆಂಬರ್ ಉಪಚುನಾವಣೆಗೆ ಭಾನುವಾರ ನಡೆದ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಕಮಲನಾಥ್, ಕಾಂಗ್ರೆಸ್ ಅಭ್ಯರ್ಥಿಸರಳ ವ್ಯಕ್ತಿ ಎದುರಾಳಿಐಟಂನಂತೆ ಅಲ್ಲ ಎಂದು ಹೇಳಿದ್ದರು.

ಹೇಳಿಕೆಗಾಗಿ  ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವzಲ್ಲಿ ಬಿಜೆಪಿ ಕಮಲ್ ನಾಥ್ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ.

ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕಮಲನಾಥ್ ಅವರ ಹೇಳಿಕೆಯನ್ನು ಮಂಗಳವಾರ ನಿರಾಕರಿಸಿದ್ದರು, ಇದುದುರದೃಷ್ಟಕರ ಎಂದು ಹೇಳಿದ್ದರು.

ರಾಷ್ಟ್ರೀಯ ಮಹಿಳಾ ಆಯೋಗವು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯವರ ಹೇಳಿಕೆಗೆ ವಿವರಣೆಯನ್ನು ಕೇಳಿದೆ.

ಚೌಹಾಣ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ gದು, ಕಮಲನಾಥ್ ಅವರ ಟೀಕೆಗಳನ್ನು ಖಂಡಿಸಿ, ಅವರನ್ನು ಪಕ್ಷದ ಎಲ್ಲಾ ಹುದ್ದೆಗಳಿಂದ ಕಿತ್ತು ಹಾಕುವಂತೆ ಆಗ್ರಹಿಸಿದ್ದಾರೆ.

ಕಮಲ್ ನಾಥ್ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ ಮತ್ತು ಅಗೌರಯುತವಾಗಿ ಏನನ್ನೂ ಹೇಳಲಿಲ್ಲ ಎಂದು ಪ್ರತಿಪಾದಿಸಿದ್ದಾರೆ.

Sunday, March 22, 2020

ಮಧ್ಯಪ್ರದೇಶ: ೨೨ ಬಂಡಾಯ ಕಾಂಗ್ರೆಸ್ ಶಾಸಕರೂ ಬಿಜೆಪಿಗೆ

ಮಧ್ಯಪ್ರದೇಶ: ೨೨ ಬಂಡಾಯ ಕಾಂಗ್ರೆಸ್ ಶಾಸಕರೂ ಬಿಜೆಪಿಗೆ
ನವದೆಹಲಿ: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ಸಿನ ಹಿರಿಯ ನಾಯಕರಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರು ರಾಜೀನಾಮೆ ನೀಡಿದ ಬಳಿಕ ರಾಜ್ಯ ವಿಧಾನಸಭೆಗೆ ರಾಜೀನಾಮೆ ಸಲ್ಲಿಸಿ ಕಮಲನಾಥ್ ಸರ್ಕಾರದ ಪತನಕ್ಕೆ ಕಾರಣರಾದ ೨೨ ಮಂದಿ ಮಾಜಿ ಕಾಂಗ್ರೆಸ್ ಶಾಸಕರು  2020 ಮಾರ್ಚ್ 21ರ ಶನಿವಾರ  ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಶಾಸಕರ ರಾಜೀನಾಮೆಯು ಮಧ್ಯಪ್ರದೇಶದಲ್ಲಿ ಹಲವಾರು ವರ್ಷಗಳ ಬಳಿಕ ಅಧಿಕಾರಕ್ಕೆ ಬಂದಿದ್ದ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪತನದಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು.


ಮಧ್ಯಪ್ರದೇಶದ ಅಭಿವೃದ್ಧಿ ಮತ್ತು ಪ್ರಗತಿಯ ಪ್ರತಿಜ್ಞೆಯೊಂದಿಗೆ, ೨೨ ಮಾಜಿ ಶಾಸಕರು ಮತ್ತು ಕಾಂಗ್ರೆಸ್ ಪಕ್ಷದ ನನ್ನ ಮಾಜಿ ಸಹೋದ್ಯೋಗಿಗಳು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು  2020 ಮಾರ್ಚ್ 21ರ ಶನಿವಾರ  ಭೇಟಿ ಮಾಡಿದ್ದಾರೆ ಮತ್ತು ಪಕ್ಷವನ್ನು ಸೇರಿದ್ದಾರೆಎಂದು ಜ್ಯೋತಿರಾದಿತ್ಯ ಸಿಂಧಿಯಾ ಹಿಂದಿಯಲ್ಲಿ ಟ್ವೀಟ್ ಮಾಡಿದರು.

ಮಧ್ಯಪ್ರದೇಶದ ಮಾಜಿ ಕಾಂಗ್ರೆಸ್ ನಾಯಕ ಹಾಗೂ ರಾಜಕುಟುಂಬದ ಕುಡಿ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ನಿಷ್ಠರಾದ ೨೨ ಶಾಸಕರು ಮಾರ್ಚ್ ೯ರಂದು ಪಕ್ಷಕ್ಕೆ ರಾಜೀನಾಮೆ ನೀಡಿ ಕಮಲನಾಥ್ ಸರ್ಕಾರವನ್ನು ಪತನದ ಅಂಚಿಗೆ ತಂದಿದ್ದರು.

ಆದಾಗ್ಯೂ, ರಾಜೀನಾಮೆಗಳನ್ನು ವಿಧಾನಸಭಾಧ್ಯಕ್ಷ ಎನ್ ಪಿ ಪ್ರಜಾಪತಿ ಅವರು ತತ್ ಕ್ಷಣವೇ ಅಂಗೀಕರಿಸಿರಲಿಲ್ಲ.

ಕುದುರೆವ್ಯಾಪಾರದ ಸಾಧ್ಯತೆಯನ್ನು ನಿವಾರಿಸುವುದಕ್ಕಾಗಿ ರಾಜೀನಾಮೆ ನೀಡಿದ್ದ ಎಲ್ಲ ಶಾಸಕರನ್ನೂ ಬಳಿಕ ಬೆಂಗಳೂರಿಗೆ ರೆಸಾಟ್ವಾಸಕ್ಕೆ ಕರೆದೊಯ್ಯಲಾಗಿತ್ತು.

ಕೆಲವು ವಾರಗಳ ರಾಜಕೀಯ ಪ್ರಹಸನದ ನಂತರ ಎಲ್ಲ ಶಾಸಕರ ರಾಜೀನಾಮೆಗಳನ್ನು, ಸುಪ್ರೀಂಕೋಟ್ ಬಲಾಬಲ ಪರೀಕ್ಷೆಗೆ ಗಡುವು ವಿಧಿಸಿದ ಬಳಿಕ ಗುರುವಾರ ವಿಧಾನಸಭಾಧ್ಯಕ್ಷರು ಅಂಗೀಕರಿಸಿದ್ದರು. ಮುಖ್ಯಮಂತ್ರಿ ಕಮಲನಾಥ್ ಅವರು ಶುಕ್ರವಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಶಾಸಕರ ರಾಜೀನಾಮೆಯಿಂದಾಗಿ ವಿಧಾನಸಭೆಯ ಒಟ್ಟು ಬಲ ೨೦೬ಕ್ಕೆ ಇಳಿಯಿತು. ಸದನದಲ್ಲಿ ಕಾಂಗ್ರೆಸ್ಸಿನ ಸಂಖ್ಯಾಬಲ ಕೂಡಾ ೧೧೪ರಿಂದ  ೯೨ಕ್ಕೆ ಕುಸಿಯಿತು. ೧೦೫ ಶಾಸಕರನ್ನು ಹೊಂದಿರುವ ಬಿಜೆಪಿ ಬಹುಮತ ಗಳಿಸಿತು.

ಶಾಸಕರ ರಾಜೀನಾಮೆ ಮತ್ತು ಬಳಿಕದ ಅವರ ಬೆಂಗಳೂರು ಪಯಣವನ್ನು ಆಡಳಿತಾರೂಢ ಕಾಂಗ್ರೆಸ್ಅಪಹರಣಎಂಬುದಾಗಿ ಬಣ್ಣಿಸಿತು.

ಶಾಸಕರ ಫೋನುಗಳನ್ನು ಕಿತ್ತುಕೊಳ್ಳಲಾಗಿದ್ದು ಯಾರೊಂದಿಗೂ ಮಾತನಾಡಲು ಬಿಡಲಾಗುತ್ತಿಲ್ಲ ಎಂದು ದಿಗ್ವಿಜಯ್ ಸಿಂಗ್ ಅವರಂತಹ ಪಕ್ಷದ ನಾಯಕರು ಆಪಾದಿಸಿದ್ದರು.

ಏನಿದ್ದರೂ, ಬಂಡಾಯ ಶಾಸಕರು ಕಾಂಗ್ರೆಸ್ ಆಪಾದನೆಯನ್ನು ನಿರಾಕರಿಸಿ ನಿರಂತರವಾಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿ ತಾವು ಬೆಂಗಳೂರಿನಲ್ಲಿ ಸ್ವಂತ ಇಚ್ಛೆಯ ಮೇರೆಗೆ ವಾಸ್ತವ್ಯ ಹೂಡಿರುವುದಾಗಿಯೂ ಕಾಂಗ್ರೆಸ್ ಜೊತೆಗೆ ಯಾವುದೇ ಹೆಚ್ಚಿನ ಮಾತುಕತೆಯನ್ನು ಬಯಸುವುದಿಲ್ಲ ಎಂದೂ ಪ್ರತಿಪಾದಿಸಿದರು.

ಸಭಾಧ್ಯಕ್ಷರ ಸೂಚನೆಯಂತೆ ಭೋಪಾಲ್ಗೆ ಹಿಂದಿರುಗಬೇಕಿದ್ದರೆ ತಮಗೆ ರಕ್ಷಣೆ ಒದಗಿಸಬೇಕು ಎಂದೂ ಆಗ್ರಹಿಸಿದ ಶಾಸಕರು, ’ನಮ್ಮ ಜೀವಗಳಿಗೆ ಕಾಂಗ್ರೆಸ್ ನಾಯಕರಿಂದ ಅಪಾಯವಿದೆಎಂದು ಹೇಳಿದ್ದರು.

Advertisement