Showing posts with label train. Show all posts
Showing posts with label train. Show all posts

Wednesday, October 14, 2020

ಹಬ್ಬಗಳ ಕಾಲದಲ್ಲಿ ೧೯೬ ವಿಶೇಷ ರೈಲುಗಳ ಓಡಾಟ

 ಹಬ್ಬಗಳ ಕಾಲದಲ್ಲಿ ೧೯೬ ವಿಶೇಷ ರೈಲುಗಳ ಓಡಾಟ

ನವದೆಹಲಿ: ಹಬ್ಬಗಳ ಋತುವಿನ ಸಲುವಾಗಿ ಅಕ್ಟೋಬರ್ ೨೦ ಮತ್ತು ನವೆಂಬರ್ ೩೦ ನಡುವೆ ೧೯೬ ಉತ್ಸವ ವಿಶೇಷ ರೈಲುಗಳನ್ನು ಓಡಿಸುವುದಾಗಿ ಭಾರತೀಯ ರೈಲ್ವೆ 2020 ಅಕ್ಟೋಬರ್ 13ರ ಮಂಗಳವಾರ ಪ್ರಕಟಿಸಿತು.

ಮುಂಬರುವ ಹಬ್ಬದ ಅವಧಿಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿರೀಕ್ಷಿಸುತ್ತಿರುವುದರಿಂದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರೈಲ್ವೆ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿತು.

ದುರ್ಗಾ ಪೂಜೆ, ದಸರಾ, ದೀಪಾವಳಿ ಮತ್ತು ಛಾತ್  ಪೂಜೆಯ ಹಿನ್ನೆಲೆಯಲ್ಲಿ ಮುಂದಿನ ರಜಾದಿನಗಳಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕೋಲ್ಕತಾ, ಪಾಟ್ನಾ, ವಾರಣಾಸಿ, ಲಕ್ನೋ ಮುಂತಾದ ಸ್ಥಳಗಳಿಗೆ ವಿಶೇಷ ರೈಲುಗಳನ್ನು ಓಡಿಸಲಾಗುವುದು ಎಂದು ಅದು ಹೇಳಿತು.

" ಸೇವೆಗಳನ್ನು ಸಾಧ್ಯವಾದಷ್ಟು ಕನಿಷ್ಠ ೫೫ ಕಿ.ಮೀ ವೇಗದಲ್ಲಿ ನಿರ್ವಹಿಸಬೇಕು ಇದರಿಂದ ಅವು ಸೂಪರ್ಫಾಸ್ಟ್ ಸೇವೆಗಳಾಗಿವೆ. ಹಬ್ಬದ ವಿಶೇಷ ಸೇವೆಗಳಿಗೆ ಅನ್ವಯವಾಗುವ ಶುಲ್ಕವು ವಿಶೇಷ ರೈಲುಗಳಿಗೆ ಅನ್ವಯವಾಗಲಿದೆ ಎಂದು ಹೇಳಿಕೆ ತಿಳಿಸಿದೆ.

ರೈಲ್ವೆಯು ಪ್ರಸ್ತುತ ಎಲ್ಲಾ ಸಾಮಾನ್ಯ ಪ್ರಯಾಣಿಕ ರೈಲುಗಳನ್ನು ಅನಿರ್ದಿಷ್ಟವಾಗಿ ಸ್ಥಗಿತಗೊಳಿಸಿದೆ. ಮಾರ್ಚ್ ೨೨ ರಿಂದ ನಿಯಮಿತ ರೈಲುಗಳನ್ನು ಸ್ಥಗಿತಗೊಳಿಸಲಾಗಿದೆ.

ಮೇ ೧೨ ರಂದು ದೆಹಲಿಯನ್ನು ದೇಶದ ವಿವಿಧ ಭಾಗಗಳೊಂದಿಗೆ ಸಂಪರ್ಕಿಸುವ ೧೫ ಜೋಡಿ ಪ್ರೀಮಿಯಂ ರಾಜಧಾನಿ ವಿಶೇಷ ರೈಲುಗಳ ಕಾರ್ಯಾಚರಣೆಯನ್ನು ರೈಲ್ವೇ ಇಲಾಖೆ ಪ್ರಾರಂಭಿಸಿತು ಮತ್ತು ಜೂನ್ ರಂದು ೧೦೦ ಜೋಡಿ ದೂರದ-ರೈಲುಗಳನ್ನು ಪ್ರಾರಂಭಿಸಿತು. ಸೆಪ್ಟೆಂಬರ್ ೧೨ರಂದು ಹೆಚ್ಚುವರಿಯಾಗಿ ೮೦ ರೈಲುಗಳನ್ನು ಸಹ ಪ್ರಾರಂಭಿಸಿತ್ತು.

Monday, May 11, 2020

ರೈಲು ಪುನಾರಂಭಕ್ಕೆ ೪ ರಾಜ್ಯಗಳ ವಿರೋಧ, ಚೇತರಿಕೆ ಪ್ರಮಾಣ ಹೆಚ್ಚಳ

ರೈಲು ಪುನಾರಂಭಕ್ಕೆ ರಾಜ್ಯಗಳ ವಿರೋಧ,  ಚೇತರಿಕೆ ಪ್ರಮಾಣ ಹೆಚ್ಚಳ
ನವದೆಹಲಿ: ಕೋವಿಡ್ -೧೯ ಪ್ರಸರಣ ತಡೆಯ ಸಲುವಾಗಿ ಸ್ಥಗಿತಗೊಳಿಸಲಾಗಿದ್ದ ರೈಲು ಸೇವೆಯ ಪುನಾರಂಭವನ್ನು ಕನಿಷ್ಠ ನಾಲ್ಕು ರಾಜ್ಯಗಳು ವಿರೋಧಿಸಿದ್ದು, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಛತ್ತೀಸ್ ಗಢ ರಾಜ್ಯಗಳ ಮುಖ್ಯಮಂತ್ರಿಗಳು  2020 ಮೇ 11ರ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗಿನ ವಿಡಿಯೋ ಸಂವಾದದಲ್ಲಿ ರೈಲು ಸೇವೆ ಪುನಾರಂಭಕ್ಕೆ ವಿರೋಧ ವ್ಯಕ್ತ ಪಡಿಸಿದರು.

ರೈಲು ಸೇವೆ ಪುನಾರಂಭದಿಂದ ಶಂಕಿತ ಕೋವಿಡ್-೧೯ ಪ್ರಕರಣಗಳನ್ನು ಪರೀಕ್ಷಿಸಲು, ಪತ್ತೆ ಹಚ್ಚಲು ಮತ್ತು ಪ್ರತ್ಯೇಕಿಸಲು ಅತ್ಯಂತ ಕಠಿಣವಾದೀತು ಮತ್ತು ಇದರ ಪರಿಣಾಮವಾಗಿ ದೇಶದಲ್ಲಿ ಅರಾಜಕತೆ ಸೃಷ್ಟಿಯಾದೀತು ಎಂದು ಎಚ್ಚರಿಸಿದ ಮುಖ್ಯಮಂತ್ರಿಗಳು ರೈಲು ಸೇವೆ ಪುನರಾಂಭದ ನಿರ್ಧಾರದಿಂದ ಹಿಂದೆ ಸರಿಯುವಂತೆ ಆಗ್ರಹಿಸಿದರು.

ಅತ್ಯಂತ ಹೆಚ್ಚು ಕೋವಿಡ್-೧೯ ಪ್ರಕರಣಗಳೂ ಇರುವ ಕೆಂಪು ವಲಯಗಳನ್ನು ಕಿತ್ತಳೆ ವಲಯವಾಗಿ ಮಾರ್ಪಡಿಸುವ ಅಥವಾ ಹಿಸುರ ವಲಯವಾಗಿ ಮಾರ್ಪಡಿಸುವ ಬಗ್ಗೆ ಮತ್ತು ವ್ಯವಸ್ಥಿತ ರೀತಿಯಲ್ಲಿ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುವ ಬಗ್ಗೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸಿನಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದರು.

ಮಂಗಳವಾರದಿಂದ ರೈಲು ಸೇವೆ ಪುನಾರಂಭವನ್ನು ವಿರೋಧಿಸಿದ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಅವರ ನಿಲುವನ್ನು ಬೆಂಬಲಿಸಿದರು. ಉಭಯ ಮುಖ್ಯಮಂತ್ರಿಗಳ ಮಾತನ್ನು ಆಂದ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮತ್ತು ಛತ್ತೀಸ್ ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಕೂಡಾ ಸಮರ್ಥಿಸಿದರು.

ರೈಲು ಸೇವೆ ಪುನಾರಂಭದಿಂದ ಸೋಂಕಿತರ ಪರೀಕ್ಷೆ, ಕ್ವಾರಂಟೈನ್ ಗೊಂದಲಮಯವಾಗಲಿದೆ ಎಂದು ಕೆಸಿಆರ್ ಹೇಳಿದರು. ಎಲ್ಲ ರಾಜ್ಯಗಳೂ ವ್ಯಾಪಕ ಹಣಕಸು ಸಂಕಷ್ಟದಲ್ಲಿವೆ. ಯಾವ ರಾಜ್ಯವೂ ಕೇಂದ್ರದ ಸಾಲವನ್ನು ತೀರಿಸಲು ಸಮರ್ಥವಾಗಿಲ್ಲ ಎಂದು ನುಡಿದ ತೆಲಂಗಾಣ ಮುಖ್ಯಮಂತ್ರಿ ರಾಜ್ಯಗಳು ಮರುಪಾವತಿ ಮಾಡಬೇಕಾದ ಸಾಲದ ಮರುಪಾವತಿಯನ್ನು ಮುಂದೂಡಬೇಕು ಎಂದು ಮನವಿ ಮಾಡಿದರು.

೬೭,೦೦೦ಕ್ಕೆ ಏರಿದ ಸೋಂಕು, ಚೇತರಿಕೆ ಪ್ರಮಾಣ ಶೇಕಡಾ ೩೧.೧೫
ಭಾರತದಲ್ಲಿ ಕೋವಿಡ್-೧೯ ಸೋಂಕಿನ ಪ್ರಕರಣಗಳು ಸೋಮವಾರ ೬೭,೧೫೨ಕ್ಕೆ ಏರಿದೆ. ಪೈಕಿ ೨೦,೯೧೭ಮಂದಿ ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ೪೪,೦೨೯ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ಹೇಳಿದರು.

ಕಳೆದ ೨೪ ಗಂಟೆಗಳ ಅವಧಿಯಲ್ಲಿ ,೨೧೩ ಹೊಸ ಸೋಂಕಿನ ಪ್ರಕರಣಗಳು ದಾಖಲಾಗಿದ್ದು, ಇದೇ ವೇಳೆಯಲ್ಲಿ ,೫೫೯ ಮಂದಿ ಗುಣಮುಖರಾಗಿದ್ದಾರೆ. ಹೀಗಾಗಿ ಚೇತರಿಕೆಯ ಪ್ರಮಾಣ ಶೇಕಡಾ ೩೧.೧೫ಕ್ಕೆ ಏರಿದೆ ಎಂದು ಅವರು ನುಡಿದರು.

ಕಳೆದ ೨೪ ಗಂಟೆಗಳ ಅವಧಿಯಲ್ಲಿ ೯೭ ಸಾವುಗಳು ವರದಿಯಾಗಿವೆ.

ಆರೋಗ್ಯ ಸೇತು ಆಪ್ ಬಳಕೆಯ ಮೂಲಕ ಕಳೆದ ಕೆಲವು ದಿನಗಳಲಿ ,೪೦,೦೦೦ ಸೋಂಕಿನ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. . ಕೋಟಿ ಸ್ಮಾರ್ಟ್ ಫೋನುಗಳಲ್ಲಿ ಆರೋಗ್ಯ ಸೇತು ಅಪ್ಲಿಕೇಷನ್ ಡೌನ್ ಲೋಡ್ ಮಾಡಲಾಗಿದ್ದು, ಮಂಗಳವಾರದಿಂದ ಆಪ್ ಜಿಯೋ ಸ್ಮಾರ್ಟ್ ಫೋನುಗಳಲ್ಲಿಯೂ ಲಭಿಸಲಿದೆ ಎಂದು ಎಂಪವರ್ಡ್ ಗ್ರೂಪ್ ೯ರ ಅಧ್ಯಕ್ಷ ಅಜಯ್ ಸಾಹ್ನಿ ಹೇಳಿದರು.

ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿvರು ೪೨,೧೮,೪೯೬, ಸಾವು ,೮೪,೭೬೫
ಚೇತರಿಸಿಕೊಂಡವರು- ೧೫,೦೬,೭೪೩
ಅಮೆರಿಕ ಸೋಂಕಿತರು ೧೩,೭೦,೪೩೩, ಸಾವು ೮೦,೮೬೨
ಸ್ಪೇನ್ ಸೋಂಕಿತರು ,೬೮,೧೪೩, ಸಾವು ೨೬,೭೪೪
ಇಟಲಿ ಸೋಂಕಿತರು ,೧೯,೦೭೦,  ಸಾವು ೩೦,೫೬೦
ಜರ್ಮನಿ ಸೋಂಕಿತರು ,೭೧,೯೯೯, ಸಾವು ,೫೬೯
ಚೀನಾ ಸೋಂಕಿತರು ೮೨,೯೧೮, ಸಾವು ,೬೩೩
ಇಂಗ್ಲೆಂಡ್ ಸೋಂಕಿತರು ,೨೩,೦೬೦, ಸಾವು ೩೨,೦೬೫

ಅಮೆರಿಕದಲ್ಲಿ ೭೫, ಇರಾನಿನಲ್ಲಿ ೪೫, ಬೆಲ್ಜಿಯಂನಲ್ಲಿ ೫೧, ಸ್ಪೇನಿನಲ್ಲಿ ೧೨೩, ನೆದರ್ ಲ್ಯಾಂಡ್ಸ್ನಲ್ಲಿ ೧೬, ರಶ್ಯಾದಲ್ಲಿ ೯೪, ಸ್ವೀಡನ್ನಲ್ಲಿ ೩೧, ಮೆಕ್ಸಿಕೋದಲ್ಲಿ ೧೧೨, ಇಂಗ್ಲೆಂಡಿನಲ್ಲಿ ೨೧೦ ಒಟ್ಟಾರೆ ವಿಶ್ವಾದ್ಯಂತ ,೦೩೧ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.

ಇಂದಿನಿಂದ ಹಲವಡೆಗಳಿಗೆ ರೈಲು ಸಂಚಾರ ಪುನಾರಂಭ

ಇಂದಿನಿಂದ ಹಲವಡೆಗಳಿಗೆ ರೈಲು ಸಂಚಾರ ಪುನಾರಂಭ
ನವದೆಹಲಿ: ಕೊರೋನಾವೈರಸ್ ಪ್ರಸರಣ ತಡೆಯುವ ಸಲುವಾಗಿ ಸ್ಥಗಿತಗೊಳಿಸಲಾಗಿದ್ದ ರೈಲು ಸಂಚಾರವನ್ನು   ಭಾರತೀಯ ರೈಲ್ವೆಯು ಒಂದೂವರೆ ತಿಂಗಳ ಬಳಿಕ  2020 ಮೇ ೧೨ರ ಮಂಗಳವಾರ ಪುನಾರಂಭ ಮಾಡಲಿದೆ. ಮೇ ೧೭ರಂದು ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ಅಂತ್ಯಗೊಳ್ಳಲಿದ್ದು, ಅದಕ್ಕೂ ಮುನ್ನವೇ ರೈಲು ಸೇವೆ ಪುನಾರಂಭಕ್ಕೆ ರೈಲ್ವೇ ಇಲಾಖೆ ನಿರ್ಧರಿಸಿತು.
ಕೊರೋನಾವೈರಸ್ ಸೋಂಕು ಪ್ರಸರಣ ತಡೆಯುವ ಸಲುವಾಗಿ ಮಾರ್ಚ್ ಮಾಸಾಂತ್ಯದಲ್ಲಿ ರಾಷ್ಟ್ರವ್ಯಾಪಿ ದಿಗ್ಬಂಧನ ಘೋಷಿಸಲಾಗಿತ್ತು. ಮಾರ್ಚ್ ೨೨ರಿಂದ ಎಲ್ಲಾ ಪ್ರಯಾಣಿಕ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.

ಮಂಗಳವಾರದಿಂದ ಪ್ರತಿದಿನ ೧೫ ರೈಲುಗಳು ಸಂಚಾರ ನಡೆಸಲಿವೆ. ವಿಶೇಷ ರೈಲುಗಳು ನವದೆಹಲಿಯಿಂದ ದಿಬ್ರುಗಢ, ಅಗರ್ತಲ, ಹೌರಾ, ಪಾಟ್ನಾ, ಬಿಲಾಸಪುರ, ರಾಂಚಿ, ಭುವನೇಶ್ವರ, ಸಿಕಂದರಾಬಾದ್, ಬೆಂಗಳೂರು, ಚೆನ್ನೈ, ತಿರುವನಂತಪುರಂ, ಮಡಗಾಂವ್, ಮುಂಬೈ ಸೆಂಟ್ರಲ್, ಅಹಮದಾಬಾದ್ ಮತ್ತು ಜಮ್ಮು-ತಾವಿಗೆ  ಸಂಚರಿಸಲಿದೆ. ರೈಲುಗಳು ಕೆಲವು ಕಡೆ ಮಾತ್ರ ನಿಲುಗಡೆಯಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದರು.

ವಾರದಲ್ಲಿ ಹವಾನಿಯಂತ್ರಿತ ರೈಲು ಸೇವೆ ಆರಂಭವಾಗಲಿದೆ. ಟಿಕೆಟ್ ದರ ರಾಜಧಾನಿ ಎಕ್ಸ್ ಪ್ರೆಸ್ ದರಕ್ಕೆ ಸಮಾನಾಂತರವಾಗಿರಲಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ಸೋಮವಾರ ಸಂಜೆ ೪ಗಂಟೆಯಿಂದ ರೈಲ್ವೆ ಟಿಕೆಟ್ ಬುಕ್ಕಿಂಗ್ ಆರಂಭ ಎಂದು ವರದಿ ಹೇಳಿತು.

ಪ್ರಯಾಣಿಕರು ಐಆರ್ಸಿಟಿಸಿ ವೆಬ್ ಸೈಟ್ ಅಥವಾ ಐಆರ್ಸಿಟಿಸಿ ಮೊಬೈಲ್ ಆಪ್ ಮೂಲಕ ಮಾತ್ರ ಟಿಕೆಟ್ ಖರೀದಿಸಬೇಕು. ರೈಲ್ವೆ ನಿಲ್ದಾಣಗಳಲ್ಲಿನ ಟಿಕೆಟ್ ಬುಕ್ಕಿಂಗ್ ಕೌಂಟರ್ ಬಂದ್ ಮುಂದುವರೆದಿದೆ. ಅಲ್ಲದೇ ತತ್ಕಾಲ್ ಮತ್ತು ಪ್ರೀಮಿಯಂ ತತ್ಕಾಲ್ ಟಿಕೆಟ್ ಬುಕ್ ಮಾಡುವ ಅವಕಾಶ ಇಲ್ಲ ಎಂದು ಅಧಿಕಾರಿಗಳು ತಿಳಿಸಿದರು.

ಟಿಕೆಟ್ ಕನ್ ಫರ್ಮ್ ಆದ ಪ್ರಯಾಣಿಕರನ್ನು ಮಾತ್ರ ರೈಲ್ವೆ ನಿಲ್ದಾಣದೊಳಕ್ಕೆ ಬಿಡಲಾಗುವುದು. ಫ್ಲ್ಯಾಟ್ ಫಾರಂ ಟಿಕೆಟ್ ಕೊಡುವುದಿಲ್ಲ. ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ ಮುಖಗವಸು (ಮಾಸ್ಕ್) ಧರಿಸಬೇಕು, ನಿಲ್ದಾಣದಲ್ಲಿ ಟೆಂಪರೇಚರ್ ಸ್ಕ್ರೀನಿಂಗ್ ಕಡ್ಡಾಯ. ರೈಲ್ವೆ ನಿಲ್ದಾಣಕ್ಕೆ ಒಂದು ಗಂಟೆ ಮುನ್ನ ಆಗಮಿಸಬೇಕು ಎಂದು ಅಧಿಕಾರಿಗಳು ವಿವರಿಸಿದರು.

ಇತರ ಹೊಸ ಮಾರ್ಗಗಳಲ್ಲಿಯೂ ವಿಶೇಷ ರೈಲು ಸಂಚಾರ ಕೂಡಲೇ ಆರಂಭಿಸಲಾಗುವುದು. ಕೋವಿಡ್ ೧೯ ಕೇರ್ ಸೆಂಟರಿಗಾಗಿ ೨೦ ಸಾವಿರ ಬೋಗಿಗಳನ್ನು ಬಳಸಿಕೊಳ್ಳಲಾಗಿದೆ. ಹಿನ್ನೆಲೆಯಲ್ಲಿ ಪ್ರತಿದಿನ ೩೦೦ ರೈಲುಗಳು ಮಾತ್ರ ಕಾರ್ಯಾಚರಿಸಲು ಸಾಧ್ಯತೆ ಇದೆ ಎಂದು ವರದಿ ತಿಳಿಸಿತು.

ಕರ್ನಾಟಕ ವಿದ್ಯಾರ್ಥಿಗಳಿಗೆ ‘ಶ್ರಮಿಕ’ ವಿಶೇಷ ರೈಲು

ಕರ್ನಾಟಕ ವಿದ್ಯಾರ್ಥಿಗಳಿಗೆ  ಶ್ರಮಿಕ’  ವಿಶೇಷ  ರೈಲು
ನವದೆಹಲಿ: ರಾಷ್ಟ್ರವ್ಯಾಪಿ ದಿಗ್ಬಂಧನದ ಸಂದರ್ಭದಲ್ಲಿ ದೆಹಲಿ, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ ಮತ್ತಿತರ ರಾಜ್ಯಗಳಲ್ಲಿ ಸಿಲುಕಿರುವ ಕರ್ನಾಟಕದ ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ವಲಸೆ ಕಾರ್ಮಿಕರನ್ನುಶ್ರಮಿಕ ವಿಶೇಷರೈಲಿನ ಮೂಲಕ ಕರ್ನಾಟಕಕ್ಕೆ ಕರೆದೊಯ್ಯಲು ರಾಜ್ಯ ಸರ್ಕಾರ ನಿರ್ಧರಿಸಿತು.
ಈಗಾಗಲೇಸೇವಾ ಸಿಂಧುಸಹಾಯವಾಣಿಯಲ್ಲಿ ನೋಂದಣಿ ಮಾಡಿಸಿರುವವರನ್ನು ರೈಲಿನ ಮೂಲಕ ಉಚಿತವಾಗಿ ಕರೆದೊಯ್ಯಲು ಕ್ರಮ ಕೈಗೊಳ್ಳಲಾಗಿದೆ. ರೈಲು ಹೊರಡುವ ಸಮಯ ಮತ್ತು ದಿನಾಂಕವನ್ನು ಮುಂದಕ್ಕೆ ತಿಳಿಸಲಾಗುವುದು ಎಂದು ಕರ್ನಾಟಕ ಭವನದ ಮೂಲಗಳು 2020 ಮೇ 11ರ ಸೋಮವಾರ ತಿಳಿಸಿದವು.
ಒಟ್ಟು ೯೫೬ ಜನ ನೋಂದಣಿ ಮಾಡಿಸಿದ್ದು, ಪೈಕಿ ಅಂದಾಜು ೮೦೦ ಜನರಿಗೆ ಅವರವರ ಮೂಲ ಜಿಲ್ಲೆಗಳಲ್ಲಿನ ಜಿಲ್ಲಾಧಿಕಾರಿಗಳಿಂದ ಕರೆಸಿಕೊಳ್ಳಲು ಒಪ್ಪಿಗೆ ದೊರೆತಿದೆ. ಇನ್ನಿತರರಿಗೆ ಅನ್ಯ ಕಾರಣಗಳಿಂದ ಪ್ರಯಾಣಕ್ಕೆ ಅವಕಾಶ ದೊರೆಯುವುದು ಬಾಕಿ ಇದೆ. ಎಲ್ಲರನ್ನೂ ಮೊದಲು ದೆಹಲಿ ಸರ್ಕಾರದ ವೈದ್ಯಕೀಯ ಸಿಬ್ಬಂದಿ ಮೂಲಕ ಅಗತ್ಯ ಆರೋಗ್ಯ ತಪಾಸಣೆಗೆ ಒಳಪಡಿಸಿ, ಕೊರೊನಾ ಸೋಂಕಿನಿಂದ ಮುಕ್ತರಾಗಿದ್ದಲ್ಲಿ ಮಾತ್ರ ಕರೆದೊಯ್ಯಲಾಗುತ್ತದೆ ಎಂದು ಮೂಲಗಳು ಹೇಳಿದವು.

ಇಲ್ಲಿಂದ ತೆರಳುವ ಪ್ರತಿಯೊಬ್ಬರನ್ನೂ ಕಡ್ಡಾಯವಾಗಿ ಬೆಂಗಳೂರಿನಲ್ಲಿ ಮತ್ತೆ ತಪಾಸಣೆಗೆ ಒಳಪಡಿಸಿ ಅವರವರ ಜಿಲ್ಲಾ ಕೇಂದ್ರಕ್ಕೆ ಕರೆದೊಯ್ದು, ಸರ್ಕಾರ ಏರ್ಪಾಡು ಮಾಡಿದ ಸ್ಥಳಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತದೆ. ೧೪ ದಿನಗಳ ನಂತರ ಮತ್ತೊಮ್ಮೆ ತಪಾಸಣೆಗೆ ಒಳಪಡಿಸಿನೆಗೆಟಿವ್ವರದಿ ಬಂದವರನ್ನು ಮನೆಗೆ  ಕಳುಹಿಸಿಕೊಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿ ಸರ್ಕಾರ ಈಗಾಗಲೇ ವಿಶೇಷ ರೈಲಿಗೆ ಅನುಮತಿ ನೀಡಿದ್ದು, ಪ್ರಯಾಣದ ಸಂಪೂರ್ಣ ವೆಚ್ಚವನ್ನು ಕರ್ನಾಟಕ ಸರ್ಕಾರ ಭರಿಸಲಿದೆ. ಇನ್ನಷ್ಟು ಮಾಹಿತಿಗಳನ್ನು ಮತ್ತೆ ಹಂಚಿಕೊಳ್ಳಲಾಗುತ್ತದೆ. ರೈಲು ಹೊರಡುವ ಸಮಯದ ಕುರಿತು ವಿವರಿಸಲಾಗುತ್ತದೆ. ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಅಧಿಕಾರಿಗಐu  ನೋಂದಾಯಿತರಿಗೆ ಕರೆ ಮಾಡಿ ಸ್ಪಷ್ಟಪಡಿಸಿದ್ದಾರೆ.

ನೋಂದಣಿ ಮಾಡಿಸದವರಿಗೆ ೧೪ರಂದು ರೈಲು
ಸೇವಾ ಸಿಂಧುಸಹಾಯವಾಣಿ ಅಡಿ ನೋಂದಣಿ ಮಾಡಿಕೊಳ್ಳದ ಸಾರ್ವಜನಿಕರಿಗೆ ಮತ್ತೊಂದು ಹವಾನಿಯಂತ್ರತ ಬೋಗಿಗಳ (.ಸಿ) ರೈಲು ಇಲ್ಲಿಂದ ಮೇ ೧೪ರಂದು ಬೆಂಗಳೂರಿಗೆ ತೆರಳಲಿದೆ.

ರೈಲಿನ ಮೂಲಕ ತೆರಳಲು ಬಯಸುವವರು ಆನ್ ಲೈನಿನಲ್ಲಿ ಐಆರ್sಸಿಟಿಸಿ ಆಪ್ ಮೂಲಕ ಟಿಕೆಟ್ ಕಾದಿರಿಸುವುದು ಕಡ್ಡಾಯ. ರೈಲಿನ ಮೂಲಕ ಪ್ರಯಾಣ ಮಾಡಲು ಬಯಸುವವರಿಗಾಗಿ  ಸೋಮವಾರ ಸಂಜೆ ೪ರಿಂದ ಅನ್ ಲೈನ್ ಟಿಕೆಟ್ ಬುಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಯಾವುದೇ ಏಜೆನ್ಸಿಗಳಿಗೆ ಟಿಕೆಟ್ ಹಂಚಿಕೆಗೆ ಅನುಮತಿ ನೀಡಲಾಗಿಲ್ಲ ಎಂದು ಪ್ರಕಟಣೆ ತಿಳಿಸಿತು.

Advertisement