Showing posts with label vijaya mallya. Show all posts
Showing posts with label vijaya mallya. Show all posts

Monday, July 11, 2022

ನ್ಯಾಯಾಂಗ ನಿಂದನೆ: ವಿಜಯ ಮಲ್ಯಗೆ ಜೈಲು: ಸುಪ್ರೀಂ ಆದೇಶ

 ನ್ಯಾಯಾಂಗ ನಿಂದನೆ: ವಿಜಯ ಮಲ್ಯಗೆ ಜೈಲು: ಸುಪ್ರೀಂ ಆದೇಶ

ನವದೆಹಲಿ: ಉದ್ಯಮಿ ವಿಜ ಮಲ್ಯ ಅವರಿಗೆ ನ್ಯಾಯಾಂಗ ನಿಂದನೆ ಆರೋಪದಡಿ ನಾಲ್ಕು ತಿಂಗಳ ಜೈಲು ಶಿಕ್ಷೆ ಹಾಗೂ ₹2000 ದಂಡ ವಿಧಿಸಿ ಸುಪ್ರೀಂ ಕೋರ್ಟ್ 2022 ಜುಲೈ 11ಸೋಮವಾರ ತೀರ್ಪು ನೀಡಿತು. "ಸಾಕಷ್ಟು ಶಿಕ್ಷೆ ಅತ್ಯಗತ್ಯ. ಮಲ್ಯ ಯಾವುದೇ ಪಶ್ಚಾತ್ತಾಪ ತೋರಿಸಲಿಲ್ಲ" ಎಂದು ಉನ್ನತ ನ್ಯಾಯಾಲಯದ ಪೀಠ ಹೇಳಿತು.

ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ಮಲ್ಯ ಅವರ ಕುಟುಂಬ ಸದಸ್ಯರಿಗೆ ವರ್ಗಾಯಿಸಲಾದ 40 ದಶಲಕ್ಷ ಡಾಲರುಗಳನ್ನು ಹಿಂದಿರುಗಿಸುವಂತೆಯೂ ಸುಪ್ರೀಂ ಕೋರ್ಟ್ ಆದೇಶಿಸಿತು.

ನ್ಯಾಯಮೂರ್ತಿಗಳಾದ ಯು.ಯು.ಲಲಿತ್, ಎಸ್.ರವೀಂದ್ರ ಭಟ್ ಮತ್ತು ಪಿ.ಎಸ್.ನರಸಿಂಹ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಮಾರ್ಚ್ 10 ರಂದು ಮದ್ಯದ ದೊರೆ ವಿರುದ್ಧದ ವಿಚಾರಣೆಯ ಬಳಿಕ ತನ್ನ ಆದೇಶವನ್ನು ಕಾಯ್ದಿರಿಸಿತ್ತು.

ವಿವಿಧ ಅಂಶಗಳ ಕುರಿತು ಹಿರಿಯ ವಕೀಲ ಮತ್ತು ಅಮಿಕಸ್ ಕ್ಯೂರಿ ಜೈದೀಪ್ ಗುಪ್ತಾ ಅವರನ್ನು ಆಲಿಸಿದ ನಂತರ, ಮಾರ್ಚ್ 15 ರೊಳಗೆ ಲಿಖಿತ ಸಲ್ಲಿಕೆಗಳನ್ನು ಸಲ್ಲಿಸಲು ಮಲ್ಯ ಅವರನ್ನು ಪ್ರತಿನಿಧಿಸುತ್ತಿದ್ದ ವಕೀಲರಿಗೆ ಅನುಮತಿ ನೀಡಲು ಸುಪ್ರೀಂ ಕೋರ್ಟ್ ನಿರ್ಧರಿಸಿತು.

ಇಂಗ್ಲೆಂಡಿನಲ್ಲಿ ಇರುವ
ತಮ್ಮ ಕಕ್ಷಿದಾರರಿಂದ ಯಾವುದೇ ಸೂಚನೆ ತಮಗೆ ಲಭಿಸಿಲ್ಲ. ಹೀಗಾಗಿ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ನೀಡಲಾಗುವ ಶಿಕ್ಷೆಯ ಪ್ರಮಾಣ ಬಗ್ಗೆ ವಾದಿಸಲು ಸಾಧ್ಯವಾಗುವುದಿಲ್ಲ ಎಂದು ಮಲ್ಯ ಅವರ ವಕೀಲರು ಮಾರ್ಚ್ 10 ರಂದು ಪೀಠಕ್ಕೆ ತಿಳಿಸಿದ್ದರು.

ವೈಯಕ್ತಿಕವಾಗಿ ಅಥವಾ ವಕೀಲರ ಮೂಲಕ ಹಾಜರಾಗಲು ಮಲ್ಯ ಅವರಿಗೆ ಹಲವು ಅವಕಾಶಗಳನ್ನು ನೀಡಲಾಗಿದೆ ಮತ್ತು ಕಳೆದ ವರ್ಷ ನವೆಂಬರ್ 30 ರಂದು ನಿರ್ದಿಷ್ಟ ನಿರ್ದೇಶನಗಳನ್ನು ನೀಡಿತ್ತು ಎಂದು ಪೀಠವು ಹೇಳಿತು.

 ₹9,000 ಕೋಟಿಗೂ ಅಧಿಕ ಮೊತ್ತದ ಸಾಲ ಮರುಪಾವತಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶವನ್ನು ಮಲ್ಯ ಪಾಲಿಸುತ್ತಿಲ್ಲ ಎಂದು ಆರೋಪಿಸಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಮಲ್ಯ ಅವರು ಆಸ್ತಿಯನ್ನು ಬಹಿರಂಗಪಡಿಸುತ್ತಿಲ್ಲ ಮತ್ತು ನಿರ್ಬಂಧದ ಆದೇಶಗಳನ್ನು ಉಲ್ಲಂಘಿಸಿ ತಮ್ಮ ಮಕ್ಕಳಿಗೆ ವರ್ಗಾಯಿಸುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು.

2017 ರಲ್ಲಿ ಮಲ್ಯ ಅವರನ್ನು ನ್ಯಾಯಾಂಗ ನಿಂದನೆ ಅಪರಾಧಿ ಎಂದು ಪರಿಗಣಿಸಲಾಗಿತ್ತು ಮತ್ತು ನಂತರ ಅವರಿಗೆ ನೀಡಲಾಗುವ ಉದ್ದೇಶಿತ ಶಿಕ್ಷೆಯ ಕುರಿತು ಅವರನ್ನು ಕೇಳಲು ವಿಷಯವನ್ನು ಪಟ್ಟಿ ಮಾಡಲಾಗಿತ್ತು.

ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ತನ್ನ ಮಕ್ಕಳಿಗೆ 40 ದಶಲಕ್ಷ ಅಮೆರಿಕನ್‌ ಡಾಲರುಗಳನ್ನು ವರ್ಗಾವಣೆ ಮಾಡಿದ್ದರ ಸಂಬಂಧ ಸುಪ್ರೀಂಕೋರ್ಟ್‌ ನೀಡಿದ್ದ  2017ರ ತೀರ್ಪನ್ನು ನಿಂದಿಸಿದ ಮಲ್ಯ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿದ್ದರ ವಿರುದ್ಧ ಮಲ್ಯ ಸಲ್ಲಿಸಿದ್ದ ಮನವಿಯನ್ನು 2020 ರಲ್ಲಿ ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.

ಮಲ್ಯ ಅವರು ಮಾರ್ಚ್ 2016 ರಿಂದ ಇಂಗ್ಲೆಂಡಿನಲ್ಲಿದ್ದಾರೆ. ಅವರು 2017ರಂ ಏಪ್ರಿಲ್ 18 ರಂದು ಸ್ಕಾಟ್ಲೆಂಡ್ ಯಾರ್ಡ್ ಜಾರಿಗೊಳಿಸಿದ ಹಸ್ತಾಂತರ ವಾರಂಟ್ ಪ್ರಕರಣದಲ್ಲಿ ಜಾಮೀನಿನ ಮೇಲೆ ಇದ್ದಾರೆ.

Friday, December 4, 2020

ಫ್ರಾನ್ಸಿನಲ್ಲಿ ವಿಜಯ್ ಮಲ್ಯ ಆಸ್ತಿ ಇಡಿ ವಶಕ್ಕೆ

 ಫ್ರಾನ್ಸಿನಲ್ಲಿ ವಿಜಯ್ ಮಲ್ಯ ಆಸ್ತಿ ಇಡಿ ವಶಕ್ಕೆ

ನವದೆಹಲಿ: ಫ್ರಾನ್ಸಿನಲ್ಲಿ ಉದ್ಯಮಿ ವಿಜಯ ಮಲ್ಯ ಅವರಿಗೆ ಸೇರಿದ ೧೬ ಲಕ್ಷ (. ದಶಲಕ್ಷ) ಯೂರೋ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) 2020 ಡಿಸೆಂಬರ್ 04ರ ಶುಕ್ರವಾರ ವಶಪಡಿಸಿಕೊಂಡಿತು. ಜಾರಿ ನಿರ್ದೇಶನಾಲಯದ ಕೋರಿಕೆಯ ಮೇರೆಗೆ ಫ್ರೆಂಚ್ ಅಧಿಕಾರಿಗಳು ಹಣ ವರ್ಗಾವಣೆ ವಿರೋಧಿ ಕಾನೂನಿನಡಿಯಲ್ಲಿ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ.

ಫ್ರೆಂಚ್ ಅಧಿಕಾರಿಗಳು "ಜಾರಿ ನಿರ್ದೇಶನಾಲಯದ ಕೋರಿಕೆಯ ಮೇರೆಗೆ" ಕ್ರಮವನ್ನು ಕೈಗೊಂಡಿದ್ದಾರೆ ಮತ್ತು ಆಸ್ತಿ ಫ್ರಾನ್ಸಿನ ೩೨ ಅವೆನ್ಯೂ ಫೋಚ್ನಲ್ಲಿದೆ ಎಂದು ಕೇಂದ್ರ ತನಿಖಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಭಾರತೀಯ ಕರೆನ್ಸಿಯಲ್ಲಿ, ವಶಪಡಿಸಿಕೊಂಡ ಆಸ್ತಿಯ ಮೌಲ್ಯ ಸುಮಾರು ೧೪ ಕೋಟಿ ರೂ. ಆಗುತ್ತದೆ.

ಪ್ರಸ್ತುತ ಸ್ಥಗಿತಗೊಂಡಿರುವ ಕಿಂಗ್ ಫಿಶರ್ ಏರ್ ಲೈನ್ಸ್ ವಿಮಾನಯಾನ ಸಂಸ್ಥೆಯು ಸರ್ಕಾರಿ ಸ್ವಾಮ್ಯದ ಭಾರತೀಯ ಬ್ಯಾಂಕುಗಳಿಂದ ತೆಗೆದುಕೊಂಡ ಸಾಲಗಳಿಗೆ ಸಂಬಂಧಿಸಿದಂತೆ ವಂಚನೆ ಮತ್ತು ಹಣ ವರ್ಗಾವಣೆ ಆರೋಕ್ಕೆ ಸಂಬಂಧಿಸಿದಂತೆ ಮಾಜಿ ಮದ್ಯ ಉದ್ಯಮಿ ವಿಜಯ ಮಲ್ಯ ಅವರು ಭಾರತಕ್ಕೆ ಬೇಕಾಗಿದ್ದಾರೆ. ಬ್ಯಾಂಕುಗಳ ಪ್ರತಿಪಾದನೆ ಪ್ರಕಾರ, ಮಲ್ಯ ಅವರು ಭಾರತದ ಬ್ಯಾಂಕುಗಳಿಗೆ ,೦೦೦ ಕೋಟಿ ರೂ.ಪಾವತಿಸಬೇಕಾಗಿದೆ.

ಭಾರತ ಸರ್ಕಾರವು ಪ್ರಸ್ತುತ ಮಲ್ಯ ಅವರನ್ನು ಇಂಗ್ಲೆಂಡಿನಿಂದ ಹಸ್ತಾಂತರಿಸಿಕೊಳ್ಳಲು ಪ್ರಯತ್ನಿಸುತ್ತಿದೆ, ಅಲ್ಲಿ ಅವರು ೨೦೧೬ರ ಮಾರ್ಚ್ನಿಂದ ವಾಸವಾಗಿದ್ದಾರೆ. ಗೌಪ್ಯ ಕಾನೂನು ಹಿನ್ನೆಲೆಯಲ್ಲಿ ಅವರನ್ನು ಹಸ್ತಾಂತರಿಸಲು ಬ್ರಿಟಿಷ್ ನ್ಯಾಯಾಲಯ ವಿಳಂಬ ಮಾಡಿದ್ದು, ಅವರು ಜಾಮೀನಿನಲ್ಲಿ ಇದ್ದಾರೆ.

ವರ್ಷದ ಅಕ್ಟೋಬರಿನಲ್ಲಿ ಇಂಗ್ಲೆಂಡ್ ಸರ್ಕಾರವು ಮಲ್ಯ ಅವರನ್ನು ಶೀಘ್ರದಲ್ಲಿಯೇ ಭಾರತಕ್ಕೆ ಹಸ್ತಾಂತರಿಸುವ ಸಾಧ್ಯತೆಯಿಲ್ಲ ಎಂದು ಸೂಚಿಸಿತ್ತು, ಕಾನೂನು ಹಸ್ತಕ್ಷೇಪ ಇದ್ದು, ಅದನ್ನು ಹಸ್ತಾಂತರದ ವ್ಯವಸ್ಥೆ ಮಾಡುವುದಕ್ಕೆ ಮುನ್ನ ಪರಿಹರಿಸಬೇಕಾಗಿದೆ.

ಮಲ್ಯ ಎಲ್ಲಾ ಕಾನೂನು ಪರಿಹಾರಗಳನ್ನು ಪಡೆಯಲು ಯತ್ನಿಸಿ ಸೋತ ನಂತರ ಹಸ್ತಾಂತರಕ್ಕೆ ಬ್ರಿಟಿಷ್ ನ್ಯಾಯಾಲಯ ಆದೇಶಿಸಿದೆ.

Tuesday, November 10, 2020

ವಿಜಯ್ ಮಲ್ಯ ಹಸ್ತಾಂತರ: ತ್ವರಿತ ಇತ್ಯರ್ಥಕ್ಕೆ ಇಂಗ್ಲೆಂಡ್ ಯತ್ನ

 ವಿಜಯ್ ಮಲ್ಯ ಹಸ್ತಾಂತರ: ತ್ವರಿತ ಇತ್ಯರ್ಥಕ್ಕೆ ಇಂಗ್ಲೆಂಡ್ ಯತ್ನ

ನವದೆಹಲಿ: ಪರಾರಿಯಾದ ಉದ್ಯಮಿ ಹಾಗೂ ಮಾಜಿ ಸಂಸತ್ ಸದಸ್ಯ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಇರುವ "ಗೌಪ್ಯ" ಕಾನೂನು ಸಮಸ್ಯೆಯನ್ನು ಸಾಧ್ಯವಾದಷ್ಟು ಬೇಗ ಪರಿಹರಿಸಲು ಇಂಗ್ಲೆಂಡ್ ಪ್ರಯತ್ನಿಸುತ್ತಿದೆ ಎಂದು ಬ್ರಿಟನ್ನಿನ ಕಾರ್ಯಕಾರಿ ಹೈ ಕಮಿಷನರ್ ಜಾನ್ ಥಾಂಪ್ಸನ್ 2020 ನವೆಂಬರ್ 11ರ ಮಂಗಳವಾರ ಹೇಳಿದರು.

ಮಲ್ಯ ಅವರನ್ನು ಭಾರತಕ್ಕೆ ವಾಪಸ್ ಕಳುಹಿಸುವ ಕ್ರಮದ ವಿರುದ್ಧ ಬ್ರಿಟನ್ ಸುಪ್ರೀಂ ಕೋರ್ಟ್ನ್ನು ಸಂಪರ್ಕಿಸಲು ಅನುಮತಿ ಕೋರಿ ಮದ್ಯ ಉದ್ಯಮಿ ಸಲ್ಲಿಸದ್ದ ಮನವಿಯನ್ನು ಇಂಗ್ಲೆಂಡ್ ಹೈಕೋರ್ಟ್ ತಿರಸ್ಕರಿಸಿದ ನಂತರ ಮೇ ತಿಂಗಳಲ್ಲಿ ಹಸ್ತಾಂತರ ಪ್ರಕ್ರಿಯೆಗಳು ಮುಕ್ತಾಯಗೊಂಡಿದ್ದವು. ಆದರೆ ರಹಸ್ಯ ಪ್ರಕ್ರಿಯೆಗಳು ಅವರ ನಿರ್ಗಮನವನ್ನು ತಡೆಹಿಡಿದಿವೆ.

ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ವಿಷಯದ ಬಗ್ಗೆ ಕೇಳಿದಾಗ, ಮಲ್ಯ ಹಸ್ತಾಂತರಕ್ಕೆ ನಿಖರವಾದ ಸಮಯವನ್ನು ಒದಗಿಸಲು ಸಾಧ್ಯವಿಲ್ಲ ಎಂದು ಥಾಂಪ್ಸನ್ ಹೇಳಿದರು.

"ನೀವು ಬಹುಶಃ ಇದನ್ನು ತಿಳಿದಿರಬಹುದೆಂದು ನಾನು ಭಾವಿಸುತ್ತೇನೆ, ಏಕೆಂದರೆ ನಾವು ಇದನ್ನು ಹಲವಾರು ಬಾರಿ ಹೇಳಿದ್ದೇವೆ. ಮಲ್ಯ ಅವರನ್ನು ಹಸ್ತಾಂತರಿಸುವ ಮೊದಲು ಇನ್ನೂ ಹಲವು ಕಾನೂನು ಸಮಸ್ಯೆಗಳನ್ನು  ಬಗೆಹರಿಯಬೇಕಾಗಿದೆ ಎಂದು ಅವರು ನುಡಿದರು.

ಹಸ್ತಾಂತರಕ್ಕೆ ಕೆಲ ಸಮಯದ ಹಿಂದೆ ಆದೇಶಿಸಲಾಗಿದೆ. ಆದರೆ ಕಾನೂನು ವಿಷಯವಾಗಿರುವುದರಿಂದ ಇದಕ್ಕೆ ಕಾನೂನುಬದ್ಧವಾಗಿ ಪ್ರತಿಕ್ರಿಯಿಸುವುದು ನನಗೆ ಕಷ್ಟಕರವಾಗಿದೆ ಎಂದು ಅವರು ಹೇಳಿದರು.

ಆದರೆ ನಿರ್ದಿಷ್ಟ ಕಾನೂನು ಸಮಸ್ಯೆಯನ್ನು ಬಗೆಹರಿಸುವವರೆಗೆ ಹಸ್ತಾಂತರ ನಡೆಯಲು ಸಾಧ್ಯವಿಲ್ಲ. ಇದು ಗೌಪ್ಯ ಸಮಸ್ಯೆಯಾಗಿದೆ, ಇದರ ಬಗ್ಗೆ ನಾನು ಹೆಚ್ಚೇನೂ ಹೇಳಲಾರೆ. ಪರಿಹರಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ನಾನು ಅಂದಾಜು ಮಾಡಲು ಸಾಧ್ಯವಿಲ್ಲ, ಆದರೆ ನಾವು ಸಾಧ್ಯವಾದಷ್ಟು ಬೇಗ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಥಾಂಪ್ಸನ್ ಹೇಳಿದರು.

ಮಲ್ಯ ಹಸ್ತಾಂತರವನ್ನು ಹಿಡಿದಿಟ್ಟುಕೊಂಡಿರುವ ಇಂಗ್ಲೆಂಡಿನರಹಸ್ಯ ಕಾನೂನು ವಿಷಯದಲ್ಲಿ ತಾನು ಕಕ್ಷಿದಾರ/ಪಾಲುದಾರನಲ್ಲ ಎಂದು ಭಾರತ ಈಗಾಗಲೇ ಹೇಳಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಅವರು ಅಕ್ಟೋಬರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ರಹಸ್ಯ ಕಾನೂನು ವಿಷಯವನ್ನುಇನ್ನೂ ಬಗೆಹರಿಸಲಾಗಿಲ್ಲ ಮತ್ತು ಅದನ್ನು ನಿರ್ಣಯಿಸದೆ ಅವರನ್ನು ಹಸ್ತಾಂತರಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

"ನಾವು ವಿಷಯದಲ್ಲಿ ಕಕ್ಷಿದಾರರಲ್ಲ ಮತ್ತು ನಾವು ಇಂಗ್ಲೆಂಡ್ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ  ಎಂದು ಶ್ರೀವಾಸ್ತವ ಸಮಯದಲ್ಲಿ ಹೇಳಿದ್ದರು.

ಇಂಗ್ಲೆಂಡಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ೨೦೧೮ ಡಿಸೆಂಬರ್ ೧೦ರಂದು ಮಲ್ಯ ಅವರನ್ನು ಹಸ್ತಾಂತರಿಸುವಂತೆ ಶಿಫಾರಸು ಮಾಡಿತ್ತು. ಆದೇಶದ ವಿರುದ್ಧ ಮಲ್ಯ ಅವರ ಮನವಿಯನ್ನು ಇಂಗ್ಲೆಂಡ್ ಹೈಕೋರ್ಟ್ ವರ್ಷ ಏಪ್ರಿಲ್ ೨೦ ರಂದು ವಜಾಗೊಳಿಸಿತ್ತು.

ನಂತರ ಮಲ್ಯ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ಕೋರಿ ಇಂಗ್ಲೆಂಡ್ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ಮೇ ೧೪ ರಂದು ತಿರಸ್ಕರಿಸಲಾಗಿತ್ತು. ಇದರೊಂದಿಗೆ ಮೇಲ್ಮನವಿ ಸಲ್ಲಿಕೆಯ ಅವರ ಎಲ್ಲ ಮಾರ್ಗಗಳೂ ಮುಚ್ಚಿ ಹೋಗಿವೆ.

ಮಲ್ಯ ಹಸ್ತಾಂತರಕ್ಕೆ ಅಡ್ಡಿಯಾಗಿರುವ ಮುಖ್ಯ ಕಾರಣ ಅವರು ಆಶ್ರಯ ಕೋರಿ ಸಲ್ಲಿಸಿರುವ ಅರ್ಜಿಯಾಗಿದೆ ಎಂದು ಲಂಡನ್ನಿನಲ್ಲಿ ಊಹಾಪೋಹಗಳಿವೆ. ಪ್ರಕ್ರಿಯೆಗೆ ಸಂಬಂಧಿಸಿದ ನೀತಿ ಮತ್ತು ಕಟ್ಟುನಿಟ್ಟಾದ ದತ್ತಾಂಶ ಸಂರಕ್ಷಣಾ ಕಾನೂನುಗಳ ವಿಷಯವಾಗಿ ವೈಯಕ್ತಿಕ ಪ್ರಕರಣಗಳ ಬಗ್ಗೆ ಬ್ರಿಟಿಷ್ ಅಧಿಕಾರಿಗಳು ಸಾರ್ವಜನಿಕವಾಗಿ ಪ್ರತಿಕ್ರಿಯಿಸುವುದಿಲ್ಲ.

ತಮ್ಮ ನಿಷ್ಕ್ರಿಯ ಕಿಂಗ್ಫಿಶರ್ ಏರ್ಲೈನ್ಸ್ಗೆ ನೀಡಲಾದ ಸಾಲ ಹಾಗೂ ಅದರ ಮೇಲಿನ ಬಡ್ಡಿಯಾಗಿ ಭಾರತೀಯ ಬ್ಯಾಂಕುಗಳ ಒಕ್ಕೂಟಕ್ಕೆ ಪಾವತಿ ಮಾಡಬೇಕಾಗಿದ್ದ ೯೦೦೦ ಕೋಟಿ ರೂಪಾಯಿಗಳ ವಸೂಲಿಗಾಗಿ ಬ್ಯಾಂಕುಗಳ ಒಕ್ಕೂಟ ಕ್ರಮ ಕೈಗೊಂಡಾಗ ೨೦೧೬ರಲ್ಲಿ ಮಲ್ಯ ಅವರು ಇಂಗ್ಲೆಂಡಿಗೆ ಹಾರಿದ್ದರು. ತರುವಾಯ ಅವರನ್ನು ಭಾರತದಲ್ಲಿ ಉದ್ದೇಶಪೂರ್ವಕ ಸುಸ್ತಿದಾರ ಎಂದು ಘೋಷಿಸಲಾಗಿತ್ತು.

Advertisement