Showing posts with label whatsApp. Iphone. Show all posts
Showing posts with label whatsApp. Iphone. Show all posts

Sunday, August 23, 2020

ಗಣಪನ ಹಬ್ಬಕ್ಕೆ ವಿಶೇಷ …

 ಗಣಪನ ಹಬ್ಬಕ್ಕೆ ವಿಶೇಷ …


ಗಣಪನ ಹಬ್ಬಕ್ಕೆ  ಇದೊಂದು ವಿಶೇಷ.  ಬೆಳ್ಳಂಬೆಳಗ್ಗೆ ಬೆಂಗಳೂರಿನ  ರಾಮಕೃಷ್ಣ ಹೆಗಡೆ ನಗರದಲ್ಲಿ ಇರುವ ನಮ್ಮ ಬಾಲಾಜಿ ಲೇಔಟಿನ  ವಾಟ್ಸಪ್ ಗ್ರೂಪಿನಲ್ಲಿ ಪ್ರಕಟವಾದ ವಿಡಿಯೋ ಇದು. ಗ್ರೂಪಿಗೆ ಹಾಕಿದವರು ಗೆಳೆಯ ಮ್ಯಾಥ್ಯೂ.

ಗಣಪನ ಹಬ್ಬದ  ಸಡಗರವನ್ನು ಹಂಚಿಕೊಳ್ಳುತ್ತಲೇ  ಕನ್ನಡ ಅಕ್ಷರಗಳನ್ನು ಪೋಣಿಸುತ್ತಾ ಕನ್ನಡ ಪ್ರೇಮವನ್ನು ಮೆರೆದ  ಈ ವಿಡಿಯೋ ನಿಜಕ್ಕೂ ಅಭಿನಂದನಾರ್ಹ.

ವಾಟ್ಸಪ್ ನಲ್ಲಿ ಇದನ್ನು ಸ್ಟೇಟಸ್ ಗೆ ಹಾಕಿದ್ದೇ ತಡ ಭರ್ಜರಿ ಮೆಚ್ಚುಗೆಗಳು ಬಂದವು. ಈ ಮೆಚ್ಚುಗೆಗಳು ಸಲ್ಲಬೇಕಾದ್ದು ಸುಂದರವಾದ ಅಭಿನಯದೊಂದಿಗೆ ಇದನ್ನು ಉಣಬಡಿಸಿದ  ಈ ಹೆಣ್ಮಗಳಿಗೆ..

-ನೆತ್ರಕೆರೆ ಉದಯಶಂಕರ

Tuesday, April 21, 2020

ಕರ್ನಾಟಕ: ಮನೆ ಮನೆಗೆ ದಿನಸಿ ಸರಬರಾಜು: ವಾಟ್ಸಪ್ ಸಹಾಯವಾಣಿ


ಕರ್ನಾಟಕ: ಮನೆ ಮನೆಗೆ ದಿನಸಿ ಸರಬರಾಜು; ವಾಟ್ಸಪ್ ಸಹಾಯವಾಣಿ
ಬೆಂಗಳೂರು: ಕೊರೋನಾವೈರಸ್ ಸಾಂಕ್ರಾಮಿಕದ ಕಾರಣ ಜನರು ಮನೆಗಳ ಒಳಗೇ ಉಳಿಯುವಂತೆ ನೆರವಾಗಲು ಅವರ ಅಗತ್ಯ ವಸ್ತುಗಳು ಮತ್ತು ದಿನಸಿಯನ್ನು  ಮನೆ ಮನೆಗೇ ಸರಬರಾಜು ಮಾಡುವ ಸಲುವಾಗಿ ಅಧಿಕೃತ ಸಹಾಯವಾಣಿ ಸೇವೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ  2020 ಏಪ್ರಿಲ್ 21ರ ಮಂಗಳವಾರ ಚಾಲನೆ ನೀಡಿದರು.

ವಾಟ್ಸಪ್ ಮತ್ತು ಕರೆ ನೀಡುವ ಮೂಲಕ ಸಹಾಯವಾಣಿಯನ್ಜು ಬಳಸಿಕೊಳ್ಳಬಹುದು. ಗ್ರಾಹಕರು ತಮ್ಮ ದಿನಸಿ ಪಟ್ಟಿಯನ್ನು ೦೮೦೬೧೯೧೪೯೬೦ ದೂರವಾಣಿ ಸಂಖ್ಯೆಗೆ ಕಳುಹಿಸಬಹುದು.

ಸುಮಾರು ೫೦೦೦ ಮಂದಿ ವಿತರಣಾ ಏಜೆಂಟರನ್ನು ವಿವಿಧ ಸಂಸ್ಥೆಗಳಿಂದ ಸೇವೆಗಾಗಿ ಬಳಸಿಕೊಳ್ಳಲಾಗಿದೆ. ಇವರು ಮನೆ ಮನೆಗೆ ದಿನಸಿ ಮತ್ತು ಅಗತ್ಯವಸ್ತು ವಿತರಣೆಗೆ ನೆರವಾಗುವರು ಎಂದು ಮುಖ್ಯಮಂತ್ರಿ ನುಡಿದರು.

ಉಪಕ್ರಮದಿಂದಾಗಿ ಕಡಿಮೆ ಜನರು ಮನೆಯಿಂದ ಹೊರಬರುವಂತಾಗುತ್ತದೆ ಎಂದು ನಾವು ಹಾರೈಸುತ್ತೇವೆ. ಜನರಿಗೆ ಮನೆಯಲ್ಲೇ ಉಳಿಯುವಂತೆ ಮತ್ತು ರಸ್ತೆಗಳಿಗೆ ಇಳಿಯುವುದನ್ನು ನಿವಾರಿಸುವಂತೆ ನಾವು ಆಗ್ರಹಿಸುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.

ಸೇವೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ರೂಪಿಸಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸದಸ್ಯ ತೇಜಸ್ವಿ ಸೂರ್ ಅವರು ತಮ್ಮ ಕ್ಷೇತ್ರದಲ್ಲಿ ಸೇವೆಯು ಹೇಗೆ ಜನರಿಗೆ ನೆರವಾಗಿದೆ ಎಂದು ವಿವರಿಸಿದರು.

ಸಹಾಯವಾಣಿ ಬಳಸಿಕೊಂಡು ಅಗತ್ಯವಸ್ತು/ ದಿನಸಿಗಳಿಗೆ ಆದೇಶ ನೀಡುವ ಬಗೆ ಹೇಗೆ ಎಂದು ಬಿಬಿಎಂಪಿ ಆಯುಕ್ತರು ವಿವರಿಸಿದರು.

ವಾಟ್ಸಪ್ ಮೂಲಕ ಆದೇಶ ನೀಡಲು ಹೆಜ್ಜೆಗಳು:
·         ನಿಮ್ಮ ಮೊಬೈಲಿನಲ್ಲಿ ೦೮೦೬೧೯೧೪೯೬೦ ಸಂಖ್ಯೆಯನ್ನು ದಾಖಲಿಸಿಕೊಳ್ಳಿ.
·         ಹಿ (ಎಚ್) ಸಂದೇಶವನ್ನು ಸಂಖ್ಯೆಗೆ ಕಳುಹಿಸಿ.
·         ನಿಮ್ಮ ಲೊಕೇಷನ್/ ವಿಳಾಸವನ್ನು ಹಂಚಿಕೊಳ್ಳಿ.
·         ನಿಮಗೆ ಸೂಚನೆಗಳನ್ನು ಅನುಸರಿಸಲು ಹೇಳಲಾಗುತ್ತದೆ- ದಿನಸಿ ಮತ್ತು ತರಕಾರಿ ಬೇಕಿದ್ದರೆ ಯನ್ನು ಅಥವಾ ಔಷಧ ಬೇಕಿದ್ದರೆಬಿಯನ್ನು ಟೈಪ್ ಮಾಡಿ.
·         ನಿಮಗೆ ಬೇಕಾದ ವಸ್ತುಗಳನ್ನು ಟೈಪ್ ಮಾಡಿ ಅಥವಾ ನಿಮ್ಮ ದಿನಸಿ ಪಟ್ಟಿಯ ಚಿತ್ರವನ್ನು ಕಳುಹಿಸಿ.
·         ಪಟ್ಟಿ ಕಳುಹಿಸಿದ ಬಳಿಕ ನಿಮ್ಮ ಆರ್ಡರ್ ದಾಖಲಾಗುತ್ತದೆ.
·         ನಿಮ್ಮ ಆರ್ಡರ್ ತಲುಪಿದ್ದಕ್ಕೆ ಉತ್ತರವಾಗಿ ನಿಮಗೆ ಒಂದು ಎಸ್ ಎಂಎಸ್ ಬರುತ್ತದೆ ಅದರ ಜೊತೆಗೆ ನಿಮಗೆ ಟ್ರಾನ್ಸಾಕ್ಷನ್ ಐಡಿಯೂ ಬರುತ್ತದೆ.
·         ಸೂಚಿತ ಸಮಯದಲ್ಲಿ ಡೆಲಿವರಿ ಪಾರ್ಟ್ನರ್ ನಿಮ್ಮ ಮನೆಗೆ ನಿಮ್ಮ ಆದೇಶ ಪ್ರಕಾರ ವಸ್ತುಗಳನ್ನು ತಲುಪಿಸುತ್ತಾರೆ.
·         ಆರ್ಡರ್ ಮಾಡಿದ ವಸ್ತುಗಳಿಗೆ ಹಣವನ್ನು ಪಾವತಿ ಮಾಡಿ ಜೊತೆಗೆ ೧೦ ರೂಪಾಯಿಗಳ ಹೆಚ್ಚುವರಿ ಡೆಲಿವರಿ ಶುಲ್ಕವನ್ನೂ ಪಾವತಿ ಮಾಡಿ.

ಆಂಧ್ರಪ್ರದೇಶದಲ್ಲಿ
ಮಧ್ಯೆ ಆಂಧ್ರಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ ಸರ್ಕಾರವು ದಿಗ್ಬಂಧನ ಅವಧಿಯಲ್ಲಿ ಮನೆ ಮನೆಗೆ ದಿನಸಿ, ತಾಜಾ ಹಣ್ಣು, ತರಕಾರಿ ತಲುಪಿಲು ಆಹಾರ ವಿತರಣಾ ಕಂಪೆನಿ ಸ್ವಿಗ್ಗಿ ಜೊತೆಗೆ ಸಹಯೋಗ ಒಪ್ಪಂದ ಮಾಡಿಕೊಂಡಿದೆ.

Saturday, February 22, 2020

ಮಹಾ ಮೃತ್ಯುಂಜಯ ಮಂತ್ರ: ಏನಿದರ ಅರ್ಥ?

ಮಹಾ ಮೃತ್ಯುಂಜಯ ಮಂತ್ರ: ಏನಿದರ ಅರ್ಥ?
ಶಿವರಾತ್ರಿಗೆ ಒಂದು ಜಿಜ್ಞಾಸೆ
2020 ಫೆಬ್ರುವರಿ 21ರ ಶುಕ್ರವಾರದ ಈದಿನ ಮಹಾಶಿವರಾತ್ರಿ.  ಶಿವನ ಆರಾಧನೆ ಮಾಡುತ್ತಾ ಜಾಗರಣೆ ಮಾಡುವ ದಿನ. ಬಹುತೇಕರು  ಈ ಸಂದರ್ಭದಲ್ಲಿ ಮೃತ್ಯುಂಜಯ ಮಹಾ ಮಂತ್ರವೂ ಸೇರಿದಂತೆ ವಿವಿಧ ಮಂತ್ರ, ಸ್ತ್ರೋತ್ರಗಳ ಸಹಿತವಾಗಿ ಶಿವನ ಜಪ ಮಾಡುತ್ತಾ ಇಡೀ ರಾತ್ರಿ ಕಳೆಯುತ್ತಾರೆ.

ಇಂತಹ ಸಂದರ್ಭದಲ್ಲಿ ವಾಟ್ಸಪ್ಪಿನಲ್ಲಿ ಮಹಾಮೃತ್ಯುಂಜಯ ಮಂತ್ರದ ಬಗ್ಗೆ  ವಿ.ಎಸ್. ಮಣಿ ಎಂಬವರು ಆಸಕ್ತಿದಾಯಕವಾದ ಬರಹವೊಂದನ್ನು ಬರೆದುದು ಗಮನ ಸೆಳೆಯಿತು.

ಮಹಾಮೃತ್ಯುಂಜಯ ಮಂತ್ರವನ್ನು ಪ್ರತಿದಿನ ಪಠನೆ ಮಾಡುವ ಅಭ್ಯಾಸವನ್ನು ಹಲವರು  ರೂಢಿಸಿಕೊಂಡಿದ್ದಾರೆ. ಅದನ್ನು ಬೆಳಗಿನ ಜಾವ ಅಥವ ರಾತ್ರಿ ಮಲಗುವ ಮೊದಲು ಕನಿಷ್ಠ ಹನ್ನೊಂದು ಬಾರಿ ಪಠನೆ ಮಾಡುವುದು ಸಾಮಾನ್ಯ ಕ್ರಮ.

ಮಂತ್ರವನ್ನು ಪಠನ ಮಾಡುವುದು ಒಂದು ಭಾಗವಾದರೆ ಅದರ ಅರ್ಥ ತಿಳಿದು ಪಠನೆ ಮಾಡುವುದು ಮತ್ತೊಂದು ಭಾಗ, ಇದರಿಂದ ಮನಸ್ಸಿಗೆ ಹೆಚ್ಚು ನೆಮ್ಮದಿ ಮತ್ತು ಫಲವೂ ಅಧಿಕ ಎನ್ನಲಾಗುತ್ತದೆ.

ಅದರ ಅರ್ಥ ಏನು ಎಂಬುದನ್ನು ಬರಹದಲ್ಲಿ  ಮಣಿಯವರು ವಿವರಿಸಿದ್ದಾರೆ. ಅದು ಅರ್ಥಪೂರ್ಣ ಎನಿಸಿದ್ದರಿಂದ ಇಲ್ಲಿ ಅದನ್ನು ಪುನರಾವರ್ತನೆ ಮಾಡಲಾಗಿದೆ.

ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿ ವರ್ಧನಂ|
ಊರ್ವಾರು ಕಮಿವ ಬಂಧನಾತ್ಮೃತ್ಯೋಮೃಕ್ಷೀಯ ಮಾಮೃತಾತ್‌||

||ಮೃತ್ಯುಂಜಯ ಮಂತ್ರದಲ್ಲಿ ಬರುವ 'ಉರ್ವಾರು' (ಸೌತೆಕಾಯಿಯ) ಸಂಬಂಧ  ಹೇಗೆ ಎಂಬುದನ್ನು ತಿಳಿಯೋಣ.||

ಓಂ = ಪ್ರಣವ 🕉
ತ್ರಯಂಬಕಂ = ಮೂರು ಕಣ್ಣಿನ ಪರಮೇಶ್ವರನೇ...
ಯಜಾಮಹೇ = ಪೂಜನೀಯನೇ....
ಸುಗಂಧಿಂ = ಸುಗಂಧದಿಂದ ಕೂಡಿದ,
ಪುಷ್ಟಿ ವರ್ಧನಂ = ಇಷ್ಟ ಕಾಮ್ಯ, ಆರೋಗ್ಯವು ವೃದ್ಧಿಯಾಗಲಿ
ಊರ್ವಾರು+ಕಮಿವ+ ಬಂಧನಾತ್ = (ಊರ್ವಾರುಕಮಿವ ಬಂಧನಾತ್)  =  ಹೇಗೆ ಸೌತೆಕಾಯಿಯ ತೊಟ್ಟು ತನ್ನ ಬಳ್ಳಿಯೊಂದಿಗೆ ಬಹಳ ಸೂಕ್ಷ್ಮವಾಗಿ ಅಂಟಿಕೊಂಡಿರುತ್ತದೆಯೋ ರೀತಿಯಲ್ಲಿ.....
ಇಲ್ಲಿ ಸ್ವಲ್ಪ ಹೆಚ್ಚಿನ ವಿವರಣೆಯು ಅಗತ್ಯವಿದೆ. ವಿವರಣೆಯಂತು ಅದ್ಭುತ.

ಪರಶಿವನೇ......
ಜಗತ್ತಿನೊಂದಿಗೆ ನಮ್ಮ ಬಂಧನವು ಹೇಗಿರಬೇಕು ಎಂದರೆ, ಸೌತೆಕಾಯಿಯು ತನ್ನ ಬಳ್ಳಿಯೊಂದಿಗೆ ಎಷ್ಟು ಸೂಕ್ಷ್ಮವಾಗಿ ಅಂಟಿಕೊಂಡಿರುತ್ತದೆಯೋ, ಅದೇ ರೀತಿಯಲ್ಲಿ ಲೌಕಿಕ ಜಗತ್ತಿನೊಂದಿಗಿನ ಬಂಧನವು ಸಾಕು ಎಂಬ ಅಧ್ಬುತ  ಅರ್ಥ ಇಲ್ಲಿದೆ.
| ಅದು ಹೇಗೆಂಬುದನ್ನು ನೋಡೋಣ |

ನಾವು ಇಲ್ಲಿ ಗಮನಿಸಬೇಕಾದದ್ದು, ಗಿಡದ ಬಳ್ಳಿಯಿಂದ ಬೆಳೆಯುವ ಕುಂಬಳಕಾಯಿ, ಸೋರೇಕಾಯಿ, ಹೀರೇಕಾಯಿ ಮುಂತಾದವುಗಳಿಗೂ ಮತ್ತು ಅದೇರೀತಿ ಬಳ್ಳಿಯಿಂದ ಬೆಳೆಯುವ  ಸೌತೆಕಾಯಿಗೂ  ಕಾಣುವ ವ್ಯತ್ಯಾಸ ಬಗ್ಗೆ ಅದೂ ಸೂಕ್ಷ್ಮವಾಗಿ ಗಮನಿಸಿದಾಗ......!

ಸೌತೆಕಾಯಿಯನ್ನು ಗಿಡದ ಬಳ್ಳಿಯಿಂದ ಬೇರ್ಪಡಿಸುವಾಗ, ಕಾಯಿಯ ಜೊತೆ ಬಳ್ಳಿಯ ತೊಟ್ಟು ಬರುವುದಿಲ್ಲ, ಅದು ಗಿಡ(ಬಳ್ಳಿ)ಯೊಂದಿಗೆ ಗಿಡದಲ್ಲೇ ಉಳಿಯುತ್ತದೆ. ಆದರೆ, ಬಳ್ಳಿಯಿಂದ ಬೆಳೆಯುವ ಕುಂಬಳಕಾಯಿ, ಸೋರೇಕಾಯಿ, ಹೀರೇಕಾಯಿ ಮುಂತಾದವುಗಳು ಬಳ್ಳಿಯ ತೊಟ್ಟು ಕಾಯಿಯೊಂದಿಗೆ ಗಟ್ಟಿಯಾಗಿ ಅಂಟಿಕೊಂಡಿವುದನ್ನು ನಾವು ಗಮನಿಸಿದ್ದೇವೆ. ಗಿಡದ ಬಳ್ಳಿಯಿಂದ ಉತ್ಪತ್ತಿಯಾದ ತರಕಾರಿಗಳನ್ನು ಮಾರುಕಟ್ಟೆಯಿಂದ ತರುವಾಗ ಕುಂಬಳಕಾಯಿ, ಹೀರೇಕಾಯಿ, ಸೋರೇಕಾಯಿ ಮುಂತಾದವುಗಳು ತೊಟ್ಟಿನ ಸಮೇತ ಕೊಳ್ಳುತ್ತೇವೆ. ಆದರೆ ತೊಟ್ಟಿನೊಂದಿಗೆ ಇರುವ ಸೌತೆಕಾಯಿ ಮಾರುಕಟ್ಟೆಯಲ್ಲಿ ದೊರೆಯುವುದು ಅತಿ ವಿರಳ..!

ಕಾರಣ....!  ಸೌತೆಕಾಯಿ ಮತ್ತು ಅದರ ಗಿಡದ ಬಳ್ಳಿಯ  ಸಂಬಂಧ  ಬಹಳ ಸೂಕ್ಷ್ಮ. ಸೌತೆಕಾಯಿಯನ್ನು ಗಿಡದ ಬಳ್ಳಿಯಿಂದ ಬೇರ್ಪಡಿಸು ಸಮಯದಲ್ಲಿ, ಕಾಯಿಯೊಂದಿಗೆ  ಅಂಟಿಕೊಂಡಿದ್ದ ಅದರ ತೊಟ್ಟು ಬಳ್ಳಿಯಲ್ಲೇ ಉಳಿಯುತ್ತದೆ ಎನ್ನುವ ಅಧ್ಬುತವಾದ ವಿವರಣೆ.
ಮೃತ್ಯುಂಜಯ ಮಂತ್ರವನ್ನು ಪ್ರತಿದಿನವೂ ಹೇಳುವುದು ಮೃತ್ಯುವನ್ನು ಜಯಿಸುವ ಕಾರಣಕ್ಕಾಗಿ ಅಲ್ಲ. ಮೃತ್ಯುವು ಸುಲಭವಾಗಿ, ರೋಗ ರುಜಿನಗಳಿಲ್ಲದೆ ಅನಾಯಾಸವಾಗಿ ಬರಲಿ ಎಂಬ ಕಾರಣಕ್ಕಾಗಿ ಎಂಬುದು ಇದರ ಅರ್ಥ.

ಇದನ್ನೇ ಗುರು ದ್ರೋಣಾಚಾರ್ಯರೂ ಸಹಾ....
"ಅನಾಯಾಸೇನ ಮರಣಂ, ವಿನಾ ದೈನ್ಯೇನ ಜೀವನಂ, ದೇಹಿ ಮೇ ಕೃಪಯಾ ಶಂಭೋ ತ್ವಯಿ ಭಕ್ತಿಮಚಲಂ "  ಎಂದು ತಿಳಿಸಿದ್ದು.

ಮಾನವರಾಗಿ ಜನಿಸಿದ ನಾವು ಲೌಕಿಕ ಜಗತ್ತಿನೊಂದಿಗೆ ಅತಿ ಸೂಕ್ಷ್ಮವಾದ, ಕನಿಷ್ಠ ಮೋಹದ ಬದುಕನ್ನು ಆಯ್ಕೆ ಮಾಡಿಕೊಳ್ಳಬೇಕು. ಗಟ್ಟಿಯಾದ ಬಂಧನಗಳಿಗೆ ಅಂಟಿಕೊಂಡಾಗ, ಅನುಭವಿಸುವ ನೋವೇ ಹೆಚ್ಚು,

The less attached YOU are, the more peaceful YOU are ಎನ್ನುವುದನ್ನು  ಮಹಾ ಮೃತ್ಯುಂಜಯ ಮಂತ್ರವು ಅತ್ಯಂತ ಸರಳವಾಗಿ ವಿವರಿಸಿದೆ.
ಇಂದು ಮಹಾಶಿವರಾತ್ರಿ, ಪರಶಿವನನ್ನು ನೆನೆಯಲು ಸೂಕ್ತವಾದ ದಿನ..

"ಹರ ಹರ ಮಹಾದೇವ, ಶಂಭೋ ಶಂಕರ."

ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು

Monday, September 30, 2019

WhatsApp Will Stop Working on These Phones From February Next Year !

WhatsApp Will Stop Working on These Phones
From February Next Year !
New Delhi: iPhone users who have not upgraded to a new version of the operating system for long, there is one more reason to do so. If WhatsApp is currently active on your iOS 8 device, you will be able to use it only until February 1, 2020, according to an update from the instant messaging platform.
WhatsApp said that users of Android versions 2.3.7 and older will no longer be able to create new accounts, nor reverify existing accounts. However, they will be able to continue using WhatsApp until February 1, 2020."On iOS 8, you can no longer create new accounts or reverify existing accounts," said the update. So iPhone users will need iOS 9 or later to run WhatsApp.
 "For the best experience, we recommend you use the latest version of iOS available for your phone," WhatsApp said. "We don't explicitly restrict the use of jailbroken or unlocked devices.

However, because these modifications might affect the functionality of your device, we can't provide support for devices using modified versions of the iPhone's operating system," it added.

Advertisement