ವಿಟ್ಲ ಪಂಚಲಿಂಗೇಶ್ವರ ಬ್ರಹ್ಮಕಲಶೋತ್ಸವ:
ಇಲ್ಲಿದೆ ’ಚಿತ್ರ ಸಂತರ್ಪಣೆ...’
ವಿಟ್ಲದ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಾರಂಭವು ೨೦೧೩ರ ಜನವರಿ ೨೧ರ ಸೋಮವಾರ ಬೆಳಗ್ಗೆ ಸಂಭ್ರಮೋತ್ಸಾಹದೊಂದಿಗೆ ನೆರವೇರಿತು.ಅದಕ್ಕೂ ಮುನ್ನ ಜನವರಿ ೧೮ರ ಶುಕ್ರವಾರ ಮರು ನಿರ್ಮಾಣಗೊಂಡ ದೇವಸ್ಥಾನದಲ್ಲಿ ಶ್ರೀ ಪಂಚಲಿಂಗೇಶ್ವರನ ಪುನರ್ ಪ್ರತಿಷ್ಠಾ ಕಾರ‍್ಯ ನಡೆಯಿತು.ಜನವರಿ ೯ರಿಂದ ೨೧ರವರೆಗೆ ನಡೆದ ಈ ಕಾರ‍್ಯಕ್ರಮದಲ್ಲಿ ಲಕ್ಷಾಂತರ ಜನ ಪಾಲ್ಗೊಂಡು ಬ್ರಹ್ಮಕಲಶೋತ್ಸವದ ಸಡಗರವನ್ನು ಕಣ್ತುಂಬಿಕೊಂಡರು.
ಪ್ರತಿದಿನ ಪ್ರತಿಹೊತ್ತು ಸುಮಾರು ೨೦ ಸಾಇರದಿಂದ ೩೦ ಸಾವಿರದವರೆಗೆ ಭಕ್ತರು ಯಾವುದೇ ರೀತಿಯ ಗೊಂದಲಗಳಿಲ್ಲದೆ ಅತ್ಯಂತ ಸಾಮರಸ್ಯದೊಂದಿಗೆ ದೇವರ ಪ್ರಸಾದ ಸವಿದರು. ಈ ಅವಧಿಯಲ್ಲಿ ಪ್ರಸಾದ ಉಂಡವರ ಸಂಖ್ಯೆ ಒಟ್ಟು ೩ ಲಕ್ಷವನ್ನೂ ಮೀರಿದೆ ಎಂಬುದು ಸಂಘಟಕರ ಹೇಳಿಕೆ.ಜನವರಿ ೨೧ರಂದು ಬ್ರಹ್ಮಕಲಶೋತ್ಸವ ಹಾಗೂ ಪಂಚಯತಿಗಳ ಆಶೀರ‍್ವಚನದ ಬಳಿಕ ನೂತನ ಧ್ವಜಸ್ಥಂಭದಲ್ಲಿ ಗರುಡನನ್ನು ಏರಿಸುವುದರೊಂದಿಗೆ ಧ್ವಜಾರೋಹಣವಾಗಿ ವರ್ಷಾವಧಿ ಜಾತ್ರೆಯ ಸಂಭ್ರಮ ಆರಂಭವಾಯಿತು.
ಜನವರಿ ೨೮ರಂದು ರಥೋತ್ಸವ ಜರುಗಲಿದ್ದುಜನವರಿ ೩೦ರ ಮುಂಜಾನೆ ಧ್ವಜಾವತರಣದೊಂದಿಗೆ ಜನವರಿ ೯ರಂದು ಆರಂಭಗೊಂಡ ಈ ಸಡಗರ ಮುಕ್ತಾಯಗೊಳ್ಳುವುದು.
ಬ್ರಹ್ಮಕಲಶೋತ್ಸವದ ಇನ್ನೊಂದಷ್ಟು ಚಿತ್ರಗಳು ಇಲ್ಲಿವೆ.
-ನೆತ್ರಕೆರೆಉದಯಶಂಕರ
ಚಿತ್ರಗಳು: ಸದಾಶಿವ ಬನ, ’ಶಿಲ್ಪಿ’ ವಿಟ್ಲ.
No comments:
Post a Comment