2 ದಶಕಗಳ ಬಳಿಕ ಮತ್ತೆ ತಮಿಳು ಚಿತ್ರರಂಗಕ್ಕೆ ಶ್ರೀದೇವಿ
ಮುಂಬೈ: ಖ್ಯಾತ ಬಾಲಿವುಡ್ ನಟಿ ಶ್ರೀದೇವಿ ಅವರು ಎರಡು ದಶಕಗಳ ಬಳಿಕ ವಿಜಯ್ ಅವರ 'ಪುಲಿ' ಚಿತ್ರದ ಮೂಲಕ ಮತ್ತೆ ತಮಿಳು ಚಿತ್ರರಂಗಕ್ಕೆ ವಾಪಸ್ ಬರುತ್ತಿದ್ದಾರೆ.
51ರ ಹರೆಯದ ಶ್ರೀದೇವಿ 'ಪುಲಿ' ಶೂಟಿಂಗ್ ವೇಳಾಪಟ್ಟಿ ಖುಷಿ ಕೊಟ್ಟಿದೆ ಎಂದು ಹೇಳಿದ್ದಾರೆ. 'ಇಂಗ್ಲಿಷ್ ವಿಂಗ್ಲಿಷ್' ಶ್ರೀದೇವಿ ಅವರ ಕೊನೆಯ ಚಿತ್ರವಾಗಿತ್ತು.
'ನನ್ನ ಹೊಸ ಚಿತ್ರ 'ಪುಲಿ' ಹೆಸರನ್ನು ಪ್ರಕಟಿಸಲು ನನಗೆ ಅಮಿತಾನಂದವಾಗುತ್ತಿದೆ. ಚಿತ್ರದ ನಟನಾ ವರ್ಗ ಮತ್ತು ಸಿಬ್ಬಂದಿ ಜೊತೆಗೆ ಕೆಲಸ ಮಾಡುವುದು ಅದ್ಭುತ ಅನುಭವವಾಗಿದೆ' ಎಂದು ಅವರು ಟ್ವಿಟ್ಟರ್ ಸಂದೇಶದಲ್ಲಿ ಈದಿನ 04 ಜನವರಿ 2015ರಂದು ತಿಳಿಸಿದರು.
ಹಂಸಿಕಾ ಮೊತ್ವಾನಿ ಅವರ ತಾಯಿಯ ಪಾತ್ರವನ್ನು ಈ ಚಿತ್ರದಲ್ಲಿ ಶ್ರೀದೇವಿ ಅವರು ಮಾಡಲಿದ್ದಾರೆ. ಶ್ರುತಿಹಾಸನ್ ಮತ್ತು ಸುದೀಪ್ ಅವರೂ ತಾರಾಗಣದಲ್ಲಿದ್ದಾರೆ. ಬೋನಿ ಕಪೂರ್ ಅವರ ಪತ್ನಿಯಾಗಿರುವ ಶ್ರೀದೇವಿ, ಬಾಲನಟಿಯಾಗಿದ್ದು, ಎಂಎ ತಿರುಮುಘಮ್ಅವರ ಥುನೈವಾನ್ ಭಕ್ತಿ ಚಿತ್ರದಲ್ಲಿ ತಮ್ಮ ನಾಲ್ಕನೇ ವಯಸ್ಸಿನಲ್ಲೇ ನಟಿಸಿದ್ದರು.
ಮುಂದೆ ತಮಿಳು, ತೆಲುಗು, ಮಲಯಾಳ ಮತ್ತು ಕನ್ನಡ ಚಲನಚಿತ್ರಗಳಲ್ಲೂ ಅವರು ಬಾಲನಟಿಯಾಗಿ ನಟನೆ ಮುಂದುವರೆಸಿದ್ದರು.
1975ರಲ್ಲಿ 'ಜೂಲೀ' ಚಿತ್ರದ ಮೂಲಕ ಅವರು ಬಾಲಿವುಡ್ಗೆ ಬಾಲನಟಿಯಾಗಿ ಪದಾರ್ಪಣೆ ಮಾಡಿದ್ದರು. ತಮ್ಮ 13ನೇ ವಯಸ್ಸಿನಲ್ಲಿ 'ಮೂಂಡ್ರು ಮುಡಿಚ್ಚು' ಚಿತ್ರದಲ್ಲಿ ತಮ್ಮ ವಯಸ್ಕ ನಟನೆ ಮಾಡಿದ್ದರು.
SRIDEVI comes back to Tamil Film
after 2 decades
after 2 decades
Mumbai: Bollywood actress Sridevi is all set to make her Tamil film comeback with Vijay's fantasy drama Puli after a gap of more than two decades.
Sridevi, 51, whose last cinema outing was English Vinglish, said she is enjoying her shooting schedules.
It gives me immense happiness to announce the title of my new Tamil film PULI. Its been a wonderful experience working with the cast & crew, Sridevi tweeted in her Twitter Account today, 04th January 2015.
Sridevi will features as actress Hansika Motwani's mother in the film, which also stars Shruti Haasan and Sudip.
Wife of producer Boney Kapoor, the actress started her career as a child artist in MA Thirumugham's devotional film Thunaivan at the age of four, and continued to act as a child artiste in Tamil, Telugu, Malayalam and Kannada films.
She made her Bollywood debut as a child artiste in the hit 1975 film Julie and played her first adult role at age of 13 in Tamil film Moondru Mudichu.
No comments:
Post a Comment