ಫಾರ್ಚೂನ್ ವರ್ಷದ ಉದ್ಯಮಿ : ಸತ್ಯಾ ನಾಡೆಲ್ಲಾ ನಂ.1
ನ್ಯೂಯಾರ್ಕ್: ಮೈಕ್ರೋಸಾಫ್ಟ್ ಸಿಇಒ, ಅನಿವಾಸಿ ಭಾರತೀಯ ಸತ್ಯಾ ನಾಡೆಲ್ಲಾ ಫಾರ್ಚೂನ್ ಬ್ಯುಸಿನೆಸ್ ಪರ್ಸನ್ (ಫಾರ್ಚೂನ್ ವರ್ಷದ ಉದ್ಯಮಿ) 2019ರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದರು.
ಟಾಪ್ 20 ಪಟ್ಟಿಯಲ್ಲಿ ಭಾರತೀಯ ಮೂಲದ ಮಾಸ್ಟರ್ಕಾರ್ಡ್ ಸಿಇಒ ಅಜಯ್ ಬಂಗಾ (8ನೇ ಶ್ರೇಯಾಂಕ) ಹಾಗೂ ಅರಿಸ್ತಾ ಸಂಸ್ಥೆ ಮುಖ್ಯಸ್ಥೆ ಜಯಶ್ರೀ ಉಳ್ಳಾಲ್ (18ನೇ ಶ್ರೇಯಾಂಕ) ಕೂಡ ಸ್ಥಾನ ಪಡೆದರು.
ಟಾಪ್ 20 ಪಟ್ಟಿಯಲ್ಲಿ ಭಾರತೀಯ ಮೂಲದ ಮಾಸ್ಟರ್ಕಾರ್ಡ್ ಸಿಇಒ ಅಜಯ್ ಬಂಗಾ (8ನೇ ಶ್ರೇಯಾಂಕ) ಹಾಗೂ ಅರಿಸ್ತಾ ಸಂಸ್ಥೆ ಮುಖ್ಯಸ್ಥೆ ಜಯಶ್ರೀ ಉಳ್ಳಾಲ್ (18ನೇ ಶ್ರೇಯಾಂಕ) ಕೂಡ ಸ್ಥಾನ ಪಡೆದರು.
ಫಾರ್ಚೂನ್ ಬ್ಯುಸಿನೆಸ್ ಪರ್ಸನ್ ವಾರ್ಷಿಕ 20 ಭವಿಷ್ಯದ ಬ್ಯುಸಿನೆಸ್ ನಾಯಕರ ಪಟ್ಟಿಯನ್ನು ತಯಾರಿಸುತ್ತದೆ. ಗುರಿ ಮುಟ್ಟುವ ಕೌಶಲ್ಯ, ಕ್ರಿಯಾತ್ಮಕ ಪರಿಹಾರ, ಅಸಾಧ್ಯವಾದುದನ್ನು ಸಾಧಿಸುವ ಕಲೆಗಳನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.
No comments:
Post a Comment