ಮಹಾರಾಷ್ಟ್ರ:
ಸರ್ಕಾರ ರಚನೆಗೆ ಬಿಜೆಪಿ, ಫಡ್ನವಿಸ್ಗೆ ರಾಜ್ಯಪಾಲ ಕೋಶಿಯಾರಿ ಆಹ್ವಾನ
ಮುಂಬೈ: ರಾಜ್ಯದಲ್ಲಿ ಸರ್ಕಾರ ರಚಿಸುವಂತೆ ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಏಕೈಕ ದೊಡ್ಡ ಪಕ್ಷವಾದ ಭಾರತೀಯ ಜನತಾ ಪಕ್ಷಕ್ಕೆ 2019 ನವೆಂಬರ್ 09ರ ಶನಿವಾರ
ಆಹ್ವಾನ ನೀಡಿದರು.
ಮಹಾರಾಷ್ಟ್ರದಲ್ಲಿ
ಸರ್ಕಾರ ರಚನೆಯ ಇಚ್ಛೆ ಮತ್ತು ಸಾಮರ್ಥ್ಯ ಪಕ್ಷಕ್ಕೆ ಇದೆಯೇ ಎಂದು ತಿಳಿಸುವಂತೆ ರಾಜ್ಯಪಾಲರು ಹೊರಹೋಗುತ್ತಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಸೂಚಿಸಿದರು.
೧೩ನೇ
ವಿಧಾನಸಭೆಯ ಅವಧಿ 2019 ನವೆಂಬರ್ 09ರ ಶನಿವಾರ ಮಧ್ಯರಾತ್ರಿ ವೇಳೆಗೆ ಮುಕ್ತಾಯಗೊಳ್ಳಲಿದ್ದು, ರಾಜ್ಯದಲ್ಲಿನ ರಾಜಕೀಯ ಬಿಕ್ಕಟ್ಟು ಕೊನೆಗೊಳಿಸುವ ಸಲುವಾಗಿ ರಾಜ್ಯಪಾಲರು ಈ ಹೆಜ್ಜೆ ಇರಿಸಿದ್ದಾರೆ.
ಅಧಿಕಾರದ
ಸಮಾನ ಹಂಚಿಕೆ ವಿಷಯದಲ್ಲಿ ಜಗಳಾಡುತ್ತಿರುವ ಮಿತ್ರ ಪಕ್ಷಗಳಾದ ಬಿಜೆಪಿ ಮತ್ತು ಶಿವಸೇನೆ ತಾವು ನೂತನ ಸರ್ಕಾರ ರಚಿಸಲು ಸಿದ್ಧವಿರುವುದಾಗಿ ಹೇಳಿಕೊಂಡಿದ್ದವು.
೨೮೮
ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ಅಕ್ಟೋಬರ್ ೨೧ರಂದು ಚುನಾವಣೆ ನಡೆದು ಅಕ್ಟೋಬರ್ ೨೪ರಂದು ಫಲಿತಾಂಶ ಪ್ರಕಟಗೊಂಡಿತ್ತು. ಆದಾಗ್ಯೂ ಕಳೆದ ೧೫ ದಿನಗಳಿಂದ ಬಿಕ್ಕಟ್ಟು
ಮುಂದುವರೆದಿದ್ದು ಯಾವುದೇ ಒಂದು ಪಕ್ಷ ಅಥವಾ ಪಕ್ಷಗಳ ಮೈತ್ರಿಕೂಟ ಸರ್ಕಾರ ರಚಿಸಲು ಮುಂದೆ ಬಂದಿರಲಿಲ್ಲ.
ಸದನದಲ್ಲಿ
೧೦೫ ಸದಸ್ಯರನ್ನು ಹೊಂದಿರುವ ಬಿಜೆಪಿ ಅತ್ಯಂತ ದೊಡ್ಡ ಪಕ್ಷವಾಗಿದೆ. ಅದರ ಮಿತ್ರಪಕ್ಷವಾದ ಶಿವಸೇನೆ ೫೬ ಸ್ಥಾನಗಳೊಂದಿಗೆ ಸದನದ
ಎರಡನೇ ದೊಡ್ಡ ಪಕ್ಷವಾಗಿದೆ. ವಿರೋಧಿ ಮೈತ್ರಿಕೂಟದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷವು ೫೪ ಸ್ಥಾನಗಳನ್ನು ಹೊಂದಿದ್ದರೆ
ಅದರ ಮಿತ್ರ ಪಕ್ಷ ೪೪ ಸ್ಥಾನಗಳನ್ನು ಹೊಂದಿದೆ.
No comments:
Post a Comment