ಕಣ್ಣಿಗೆ ಪಟ್ಟಿ ಬಿಗಿದುಕೊಂಡು ಸ್ಕೇಟಿಂಗ್
‘ವಿಶ್ವದಾಖಲೆ’ ನಿರ್ಮಿಸಿದ ಬಾಲಕಿ
‘ವಿಶ್ವದಾಖಲೆ’ ನಿರ್ಮಿಸಿದ ಬಾಲಕಿ
ಹುಬ್ಬಳ್ಳಿ: ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಸ್ಕೇಟಿಂಗ್ ಮಾಡುತ್ತಾ ೫೧.೨೫ ಸೆಕೆಂಡ್ ಗಳಲ್ಲಿ
೪೦೦ ಮೀಟರ್ಕ್ರಮಿಸುವ ಮೂಲಕ ಹುಬ್ಬಳ್ಳಿಯ ಓಜಲ್ ನಲವಡೆ (೧೪) ಮೊದಲ ಪ್ರಯತ್ನದಲ್ಲೇ ’ಗಿನ್ನೆಸ್ ವಿಶ್ವದಾಖಲೆ’ ಬರೆದರು.
ಪ್ರಪಂಚದಲ್ಲೇ
ಸ್ಕೇಟಿಂಗ್ನಲ್ಲಿ ದಾಖಲಾದ ಮೊತ್ತ ಮೊದಲ ’ಗಿನ್ನೆಸ್ ವಿಶ್ವದಾಖಲೆ’ ಇದು
ಎಂಬ ಹೆಗ್ಗಳಿಕೆಗೂ ಈ ಸಾಧನೆ ಪಾತ್ರವಾಯಿತು.
ಬಾಲಕಿ
ಓಜಲ್ ನಲವಡೆ ಅವರು ಸುನಿಲ್ ನಲವಡೆ ಮತ್ತು ದೀಪಾ ನಲವಡೆ ದಂಪತಿಯ ಪುತ್ರಿ. ಹುಬ್ಬಳ್ಳಿಯ ಮಂಜುನಾಥೇಶ್ವರ ಕೇಂದ್ರೀಯ ಶಾಲೆಯಲ್ಲಿ ೭ ನೇ ತರಗತಿ
ಓದುತ್ತಿದ್ದಾರೆ. ಕಳೆದ ಎಂಟು ತಿಂಗಳಿಂದ ಈ ದಾಖಲೆಗಾಗಿ ಸತತ
ಅಭ್ಯಾಸ ನಡೆಸಿದ್ದರು.
ಶಿರೂರ
ಪಾರ್ಕ್ಟೆಂಡರ್ ಶ್ಯೂರ್ ರಸ್ತೆಯಲ್ಲಿ ಈ ವಿಶ್ವದಾಖಲೆ ಸ್ಪರ್ಧೆ
ನಡೆಯಿತು. ಬ್ರಿನ್ನಿನಿಂದ
ಆಗಮಿಸಿದ್ದ ತೀರ್ಪುಗಾರ ವಿಕ್ಟರ್ ಫೆನಿಸ್ ಸಮಯ ಘೋಷಣೆ ಮಾಡಿದ್ದು ಬಾಲಕಿ ಓಜಲ್ ಮೂರನೇ
ಪ್ರಯತ್ನದಲ್ಲಿ ೫೧. ೨೫ ಸೆಕೆಂಡುಗಳಲ್ಲಿ ೪೦೦
ಮೀಟರ್ ಕ್ರಮಿಸಿದರು. ಒಟ್ಟು ಮೂರು ಪ್ರಯತ್ನ ನಡೆದಿತ್ತು.
ಮೊದಲ ಪ್ರಯತ್ನ ೪೮ ಸೆಕೆಂಡ್ ಮತ್ತು
ಎರಡನೇ ಪ್ರಯತ್ನ ತಾಂತ್ರಿಕ ಕಾರಣದಿಂದಾಗಿ ರದ್ದಾಗಿತ್ತು. ಹೀಗಾಗಿ ೫೧.೨೫ ಸೆಕೆಂಡ್
ಗಿನ್ನೆಸ್ ವಿಶ್ವದಾಖಲೆಗೆ ಸೇರ್ಪಡೆಯಾಯಿತು.
ಹುಬ್ಬಳ್ಳಿಯ
ಜನತೆ ಪುಟ್ಟ ಬಾಲಕಿಯ ಅಪೂರ್ವ ದಾಖಲೆಗೆ ಸಾಕ್ಷಿಯಾದರು.
No comments:
Post a Comment