Saturday, November 9, 2019

ಕರ್ತಾರಪುರ: ಭಿಂದ್ರನ್‌ವಾಲೆ ಪೋಸ್ಟರ್ ಆಯಿತು, ಈಗ ’ಭಾರತದ ಬಾಂಬ್’ ಪ್ರದರ್ಶನ

ಕರ್ತಾರಪುರ: ಭಿಂದ್ರನ್ವಾಲೆ ಪೋಸ್ಟರ್ ಆಯಿತು,
ಈಗ 'ಭಾರತದ ಬಾಂಬ್ಪ್ರದರ್ಶನ
ನವದೆಹಲಿ: ಸಿಖ್ ಪಂಥದ ಸ್ಥಾಪಕ ಗುರು ನಾನಕ್ ಅವರು ತಮ್ಮ ಜೀವನದ ಅಂತಿಮ ವರ್ಷಗಳನ್ನು ಕಳೆದಿದ್ದ, ಪ್ರಸ್ತುತ ಪಾಕಿಸ್ತಾನದಲ್ಲಿ ಇರುವ ಕರ್ತಾರಪುರದ ಗುರುದ್ವಾರಕ್ಕೆ ಭಾರತೀಯ ಯಾತ್ರಿಕರಿಗೆ ವೀಸಾಮುಕ್ತ ಪಯಣಕ್ಕೆ ಅವಕಾಶ ಕಲ್ಪಿಸಿರುವ ಕರ್ತಾರಪುರ ಕಾರಿಡಾರಿನ ಉದ್ಘಾಟನೆಗೆ ಒಂದು ದಿನ ಮುಂಚಿತವಾಗಿ 2019 ನವೆಂಬರ್ 08ರ ಶುಕ್ರವಾರ ಪಾಕಿಸ್ತಾನಿ ಅಧಿಕಾರಿಗಳು ಇನ್ನೊಂದು ವಿವಾದವನ್ನು ಹುಟ್ಟು ಹಾಕಿದರು.
ಕರ್ತಾರಪುರದಲ್ಲಿರುವ ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿದ ಖಾಸಗಿ ಗುಂಪೊಂದರಲ್ಲಿ ಇದ್ದ ಕೆಲವು ಭಾರತೀಯರ ಪ್ರಕಾರ, ಪಾಕಿಸ್ತಾನಿ ಅಧಿಕಾರಿಗಳು ಗುರುದ್ವಾರದಲ್ಲಿ ಸಣ್ಣ ಸ್ಥಂಭವೊಂದರ ಮೇಲೆ ಪುಟ್ಟ ಬಾಂಬ್ ಒಂದನ್ನು ಪ್ರದರ್ಶನಕ್ಕೆ ಇರಿಸಿ ಅದರ ಬಳಿ ಇದು ಗುರುದ್ವಾರದ ಮೇಲೆ ಭಾರತೀಯ ವಾಯುಪಡೆ ೧೯೭೧ರ ಸಮರಕಾಲದಲ್ಲಿ ಎಸೆದ ಬಾಂಬ್ ಎಂಬ ಅಡಿಟಪ್ಪಣಿಯನ್ನು ಬರೆದಿಟ್ಟಿದ್ದಾರೆ.

ಸಣ್ಣ ಸ್ಥಂಭವೊಂದರ ತುದಿಯಲ್ಲಿ ಗಾಜಿನ ಪೆಟ್ಟಿಗೆಯೊಳಗೆ ಬಾಂಬನ್ನು ಇರಿಸಲಾಗಿದ್ದು ಸ್ಥಂಭವನ್ನು ಸಿಖ್ ಪಂಥವನ್ನು ಪ್ರತಿನಿಧಿಸುವಖಂಡಲಾಂಛನದಿಂದ ಅಲಂಕರಿಸಲಾಗಿದೆ.
ಸ್ಥಂಭದ ಬಳಿ ಇರಿಸಲಾಗಿರುವ ಟಿಪ್ಪಣಿಯಲ್ಲಿಮಿರಾಕಲ್ ಆಫ್ ವಹೆಗುರುಜಿಎಂಬ ವಾಕ್ಯವನ್ನು ಬರೆಯಲಾಗಿದೆ.

ಭಾರತೀಯ ವಾಯುಪಡೆಯು ಬಾಂಬನ್ನು ೧೯೭೧ರಲ್ಲಿ ಶ್ರೀ ಕರ್ತಾರಪುರ ಸಾಹಿಬ್ ಗುರುದ್ವಾರ ದರ್ಬಾರ್ ಸಾಹಿಬ್ ಮೇಲೆ ಅದನ್ನು ನಾಶ ಪಡಿಸುವ ಉದ್ದೇಶದೊಂದಿಗೆ ಉದುರಿಸಿತ್ತು. ಆದಾಗ್ಯೂ ಕೆಟ್ಟ ಕಾರ್ಯವು ವಹೆಗುರುಜಿ (ಸರ್ವಶಕ್ತ ಅಲ್ಲಾಹ್) ಆಶೀರ್ವಾದದಿಂದ ಫಲಿಸಲಿಲ್ಲ ಮತ್ತು ಸದರಿ ಬಾಂಬ್ ಖೂ ಸಾಹಿಬ್ (ಪವಿತ್ರ ಬಾವಿ) ಒಳಕ್ಕೆ ಬಿತ್ತು ಮತ್ತು ದರ್ಬಾರ್ ಸಾಹಿಬ್ ಹಾನಿರಹಿತವಾಗಿ ಉಳಿಯಿತು. ಬಾಂಬ್ ಬಿದ್ದ ಇದೇ ಪವಿತ್ರ ಬಾವಿಯಿಂದ ಶ್ರೀ ಗುರುನಾನಕ್ ದೇವ್ ಜಿ ಅವರು ತಮ್ಮ ಹೊಲಗಳಿಗೆ ನೀರಾವರಿಗಾಗಿ ನೀರು ತರುತ್ತಿದ್ದರು ಹೇಳುವುದು ಇಲ್ಲಿ ಯಥೋಚಿತವಾಗುತ್ತದೆಎಂದೂ ಟಿಪ್ಪಣಿಯಲ್ಲಿ ಬರೆಯಲಾಗಿದೆ.

ವಿಷಯಕ್ಕೆ ಸಂಬಂಧಿಸಿದಂತೆ ಭಾರತೀಯ ಅಧಿಕಾರಿಗಳಿಂದ ಈವರೆಗೆ ಯಾವುದೆ ಪ್ರತಿಕ್ರಿಯೆ ಬಂದಿಲ್ಲ.
ಕಾರಿಡಾರ್ ಉದ್ಘಾಟನೆಗೆ ಸಂಬಂಧಿಸಿದ ವ್ಯಕ್ತಿಗಳ ಪ್ರಕಾರ, ಭಾರತದ ಪಂಜಾಬ್ ರಾಜ್ಯದಲ್ಲಿ ಪ್ರತ್ಯೇಕತಾವಾದಿ ಭಾವನೆಗಳನ್ನು ಪ್ರಚೋದಿಸುವ ಸಲುವಾಗಿ ಮತ್ತು ಸಿಕ್ಖರು ಮತ್ತು ಇತರ ಸಮುದಾಯಗಳ ಜೊತೆಗೆ ದೇಶದಲ್ಲಿ (ಪಾಕಿಸ್ತಾನ) ಬಾಂಧವ್ಯ ವೃದ್ಧಿಯ ಸಲುವಾಗಿ ಪ್ರಯತ್ನವನ್ನು ಪಾಕಿಸ್ತಾನಿ ಅಧಿಕಾರಿಗಳು ನಡೆಸಿದ್ದಾರೆ ಎಂದು ಹೇಳಲಾಗಿದೆ.

ವಾರಾರಂಭದಲ್ಲಿ ಪಾಕಿಸ್ತಾನವು ಕಾರಿಡಾರ್ ಉದ್ಘಾಟನೆ ಸಲುವಾಗಿ ಬಿಡುಗಡೆ ಮಾಡಿದ ಹಾಡಿನ ವಿಡಿಯೋದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕರ ಭಿತ್ತಿ ಚಿತ್ರಗಳನ್ನು (ಪೋಸ್ಟರ್) ಪ್ರದರ್ಶಿಸುವ ಮೂಲಕ ವಿವಾದ ಹುಟ್ಟು ಹಾಕಿತ್ತು. ಭಾರತವು ಇದಕ್ಕೆ ಪ್ರಬಲ ಪ್ರತಿಭಟನೆಯನ್ನು ವ್ಯಕ್ತ ಪಡಿಸಿತ್ತು.

ಸಿಖ್ ಪಂಥದ ಸ್ಥಾಪಕ ಗುರುನಾನಕ್ ಅವರ ೫೫೦ನೇ ಜನ್ಮದಿನದ ಅಂಗವಾಗಿ ಕರ್ತಾರಪುರ ಕಾರಿಡಾರ್ ತೆರೆಯುವ ಸಂದರ್ಭವನ್ನು ಪಾಕಿಸ್ತಾನದಲ್ಲಿನ ಖಲಿಸ್ತಾನಪರ ಶಕ್ತಿಗಳನ್ನು ಪ್ರಚೋದಿಸುವ ಸಲುವಾಗಿ ಬಳಸಿಕೊಳ್ಳಲು ಪಾಕಿಸ್ತಾನ ಯತ್ನಿಸಿದೆ ಎಂದು ಸರ್ಕಾರಿ ಅಧಿಕಾರಿಗಳು ಹಿಂದೆ ಹೇಳಿದ್ದರು.

ದರ್ಬಾರ್ ಸಾಹಿಬ್ ಜೀರ್ಣೋದ್ಧಾರ ಮತ್ತು ವಿಸ್ತರಣಾ ಕಾರ್ಯವನ್ನು ಪಾಕಿಸ್ತಾನಿ ಸೇನೆಯ ಎಂಜಿನಿಯರಿಂಗ್ ಘಟಕವಾದ ಫ್ರಾಂಟಿಯರ್ ವರ್ಕ್ಸ್ ಆರ್ಗನೈಸೇಷನ್ ನಡೆಸಿದೆ. ಮೇಲೆ ತಿಳಿಸಿದ ಪ್ರದರ್ಶನವು ಮಿಲಿಟರಿಯ ಕೃತ್ಯವಾಗಿರಬಹುದು ಎಂದು ವರದಿ ಹೇಳಿದೆ.

No comments:

Advertisement