ಕರ್ತಾರಪುರ ಉದ್ಘಾಟನೆ:
ಸಿಧು ಪಯಣಕ್ಕೆ ಕೇಂದ್ರ ಅಸ್ತು
ನವದೆಹಲಿ: 2019 ನವೆಂಬರ್ ೯ರ ಶನಿವಾರ ಪಾಕಿಸ್ತಾನದಲ್ಲಿ ನಡೆಯಲಿರುವ ಕರ್ತಾರಪುರ
ಕಾರಿಡಾರ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಪಂಜಾಬಿನ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ
ನವಜೋತ್ ಸಿಂಗ್ ಸಿಧು ಅವರಿಗೆ ಭಾರತ ಸರ್ಕಾರವು 2019 ನವೆಂಬರ್ 7ರ ಗುರುವಾರ ಒಪ್ಪಿಗೆ ನೀಡಿತು.
ಮಾಜಿ ಕ್ರಿಕೆಟಿಗ ಕೇಂದ್ರ
ಸರ್ಕಾರಕ್ಕೆ ಮೂರನೇ ಪತ್ರ ಬರೆದ ಕೆಲವೇ ಗಂಟೆಗಳಲ್ಲಿ ಸಮಾರಂಭದಲ್ಲಿ ಪಾಲ್ಗೊಳ್ಳಲು ಕೇಂದ್ರವು ಅವರಿಗೆ
ಅನುಮತಿ ನೀಡಿತು.
ಅನುಮತಿ ನೀಡದೇ ಇದ್ದಲ್ಲಿ ಸಾಮಾನ್ಯ
ಯಾತ್ರಿಯಂತೆ ಕರ್ತಾರಪುರಕ್ಕೆ ತೆರಳುವೆ ಎಂದು ಸಿಧು ಇದಕ್ಕೆ ಮುನ್ನ ಹೇಳಿದ್ದರು.
No comments:
Post a Comment