ಪೆಟ್ಟು
ತಿಂದದ್ದು ಪೊಲೀಸ್ ನಾಗರಿಕ
ಅಲ್ಲ..!
ಜಾಮಿಯಾ:
ವೈರಲ್ ಫೋಟೋ ಹಿಂದಿನ ಸತ್ಯ
ನವದೆಹಲಿ: ಜಾಮಿಯಾ ನಗರದಲ್ಲಿ ಪೊಲೀಸ್ ದಮನ ಕಾರ್ಯಾಚರಣೆಯ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಹರಡುತ್ತಿರುವ ಹಲವಾರು ವದಂತಿಗಳು ನಾಗರಿಕ ಉಡುಪು ಧರಿಸಿದ್ದ ವ್ಯಕ್ತಿಯೊಬ್ಬ ಪ್ರತಿಭಟನಕಾರನಿಗೆ ಬೆತ್ತದಿಂದ ಥಳಿಸುತ್ತಿದ್ದ ಹಾಗೂ ಕೆಲವು ಮಹಿಳೆಯರು ಪೆಟ್ಟು ತಿನ್ನುತ್ತಿದ್ದ ವ್ಯಕ್ತಿಯ ರಕ್ಷಣೆಗೆ ಯತ್ನಿಸುತ್ತಿದ್ದುದನ್ನು ತೋರಿಸುತ್ತಿದ್ದ ಫೊಟೋ ಒಂದಕ್ಕೆ ಸಂಬಂಧಿಸಿದುದಾಗಿದ್ದು, ಫೊಟೋದಲ್ಲಿ ಪೆಟ್ಟಿನ ಸುರಿಮಳೆ ಎದುರಿಸುತ್ತಿದ್ದ ವ್ಯಕ್ತಿ ಒಬ್ಬ ನಾಗರಿಕ ಎಂದು ಹಲವರು ಪ್ರತಿಪಾದಿಸಿದ್ದರು.
ಆದರೆ,
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ವದಂತಿಯನ್ನು ನಿರಾಕರಿಸಿದ್ದು,
ಪೆಟ್ಟಿನ ಸುರಿಮಳೆ ಎದುರಿಸುತ್ತಿದ್ದ ವ್ಯಕ್ತಿ ನಾಗರಿಕನಲ್ಲ, ಪೊಲೀಸ್ ಕಾನ್ಸ್ಟೇಬಲ್ ಎಂದು ಸ್ಪಷ್ಟ 2019 ಡಿಸೆಂಬರ್
17ರ ಮಂಗಳವಾರ ಪಡಿಸಿದರು. ಪೆಟ್ಟು ತಿಂದ ವ್ಯಕ್ತಿ ಆಗ್ನೇಯ ಜಿಲ್ಲಾ ಪೊಲೀಸ್ ಕಾನ್ಸ್ಟೇಬಲ್ ಎಂಬುದಾಗಿ ಗುರುತಿಸಲಾಗಿದ್ದು, ಲಾಠಿಯಿಂದ ಹೊಡೆಯುತ್ತಿದ್ದ ವ್ಯಕ್ತಿ ರಾಜಕೀಯ ಸಂಘಟನೆಯೊಂದರ ವಿದ್ಯಾರ್ಥಿ ವಿಭಾಗದ ಕಾರ್ಯಕರ್ತ ಎಂಬುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಹಲವರು ಗುರುತಿಸಿದರು.
ಜಿಲ್ಲೆಯ
ಆಟೋ ಕಳವು ನಿಗ್ರಹ ದಳ ಅಥವಾ ಎಎಟಿಎಸ್
ತಂಡದ ಸದಸ್ಯರು ಪತ್ತೆ ತಂಡದ ಸದಸ್ಯರಾಗಿರುವುದರಿಂದ ಈ ಪೊಲೀಸ್ ಕಾನ್ಸ್ಟೇಬಲ್ಗಳು ಸಮವಸ್ತ್ರ ಧರಿಸಿರುವುದಿಲ್ಲ ಎಂದು ಆಗ್ನೇಯ ಜಿಲ್ಲಾ ಪೊಲೀಸ್ ಉಪ ಕಮೀಷನರ್ ಚಿನ್ಮಯ್
ಬಿಸ್ವಾಲ್ ಹೇಳಿದರು.
ಅಪರಾಧಗಳ
ಪತ್ತೆಗಾಗಿ ಪತ್ತೇದಾರಿಕೆ ಕಾರ್ಯ ನಿರ್ವಹಿಸುವುದರಿಂದ ಎಎಟಿಎಸ್ ಸದಸ್ಯರು
ಸಾಮಾನ್ಯವಾಗಿ ನಾಗರಿಕ ದುಸ್ತಿನಲ್ಲಿಯೇ ಇರುತ್ತಾರೆ ಎಂದು ಬಿಸ್ವಾಲ್ ನುಡಿದರು.
ಪೆಟ್ಟು
ತಿಂದ ಪೊಲೀಸ್ ಕಾನ್ಸ್ಟೇಬಲ್ ೩೦ರ ಹರೆಯದಲ್ಲಿದ್ದು, ಭದ್ರತಾ ಕಾರಣಗಳನ್ನು ನೀಡಿ ಆತನ ಗುರುತು ಬಹಿರಂಗಗೊಳಿಸಲು ಪೊಲೀಸ್ ಅಧಿಕಾರಿ ನಿರಾಕರಿಸಿದರು.
ಕಾನ್
ಸ್ಟೇಬಲ್ ಮತ್ತು ತಮ್ಮ ತಂಡದ ಇತರ ಸದಸ್ಯರಿಗೆ ದಿಢೀರ್ ಪ್ರತಿಭಟನೆ ಮತ್ತು ಹಿಂಸಾಚಾರದ ಹಿನ್ನೆಲೆಯಲ್ಲಿ ಕಾನೂನು ನಿಯಂತ್ರಣದ ಹೊಣೆ ವಹಿಸಲು ಸಮನ್ಸ್ ಬಂದಿತ್ತು ಎಂದು ಎಎಟಿಎಸ್ ಇನ್ ಸ್ಪೆಕ್ಟರರ ಲೊವ್ ಆಟ್ರೇ ಹೇಳಿದರು.
‘ನಮ್ಮ
ತಂಡದ ಸುಮಾರು ಒಂದು ಡಜನ್ ಸಿಬ್ಬಂದಿ, ಸಮವಸ್ತ್ರ ಧರಿಸದೆಯೇ ಸ್ಥಳಕ್ಕೆ ಧಾವಿಸಿದ್ದೆವು. ಸ್ಥಳದಲ್ಲಿ ಗುಂಪಿನ ಜೊತೆಗೆ ವ್ಯವಹರಿಸುವ ಮುನ್ನ ನಾವು ದಂಗೆ ನಿರೋಧಿ ಜಾಕೆಟ್ ಧರಿಸಿದ್ದೆವು ಮತ್ತು ನಮ್ಮ ಮೋಟಾರ್ ಸೈಕಲ್ ಹೆಲ್ಮೆಟ್ ಗಳನ್ನು ಧರಿಸಿದ್ದೆವು’ ಎಂದು
ಆಟ್ರೆ ನುಡಿದರು.
ಏನಿದ್ದರೂ,
ಹಿಂಸಾಚಾರದ ಮಧ್ಯೆ ಸಿಲುಕಿ ಪೆಟ್ಟು ತಿಂದ ಸಿಬ್ಬಂದಿ, ಹೆಚ್ಚು ಗಾಯಗೊಳ್ಳಲದೆ ಪಾರಾದರುಎಂದು ಅವರು ಹೇಳಿದರು.
No comments:
Post a Comment