Tuesday, December 31, 2019

ಪ್ರಧಾನಿ ಮೋದಿ ನಿವಾಸದ ಬಳಿ ಬೆಂಕಿ ಆಕಸ್ಮಿಕ

 ಪ್ರಧಾನಿ ಮೋದಿ ನಿವಾಸದ ಬಳಿ ಬೆಂಕಿ ಆಕಸ್ಮಿಕ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನಂ., ಲೋಕಕಲ್ಯಾಣ ಮಾರ್ಗ್ ನಿವಾಸದ ಬಳಿ 2019 ಡಿಸೆಂಬರ್ 30ರ ಸೋಮವಾರ ಸಂಜೆ ಬೆಂಕಿ ದುರಂತ ಅಪಾಯದ ಗಂಟೆ ಮೊಳಗಿದಾಗ ೧೭ ಅಗ್ನಿಶಾಮಕ ವಾಹನಗಳು ಅಲ್ಲಿಗೆ ಧಾವಿಸಿದವು.

ಅಗ್ನಿ ಆಕಸ್ಮಿಕದ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

ಸಂಜೆ
.೨೫ರ ಸುಮಾರಿಗೆ ಅವಘಡ ಸಂಭವಿಸಿತು. ಏನಿದ್ದರೂ ಇದೊಂದು ಸಣ್ಣ ಅಗ್ನಿ ಪ್ರಮಾದವಾಗಿತ್ತು. ಶಾರ್ಟ್ ಸರ್ಕ್ಯೂಟ್ ಇದಕ್ಕೆ ಕಾರಣ ಎಂದು ಹೇಳಲಾಯಿತು.

ಎಸ್ ಪಿಜಿ ಸ್ವಾಗತ ಪ್ರದೇಶದಲ್ಲಿ ಸಣ್ಣ ಪ್ರಮಾಣದ ಅಗ್ನಿ ಅನಾಹುತ ಸಂಭವಿಸಿದ್ದು, ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದರು.

No comments:

Advertisement