Tuesday, December 31, 2019

ಉದ್ಧವ್ ಸಂಪುಟಕ್ಕೆ ಆದಿತ್ಯ ಠಾಕ್ರೆ, ಮತ್ತೆ ಡಿಸಿಎಂ ಆಗಿ ಅಜಿತ್ ಪವಾರ್

ಉದ್ಧವ್ ಸಂಪುಟಕ್ಕೆ ಆದಿತ್ಯ ಠಾಕ್ರೆ, ಮತ್ತೆ ಡಿಸಿಎಂ ಆಗಿ ಅಜಿತ್ ಪವಾರ್
ಮುಂಬೈ: ಮಹಾರಾಷ್ಟ್ರದ ಶಿವಸೇನೆ ನೇತೃತ್ವದ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆಯಾಯಿತು.. ಎನ್ ಸಿಪಿ ನಾಯಕ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ 2019 ಡಿಸೆಂಬರ್ 30ರ ಸೋಮವಾರ  ಪ್ರಮಾಣ ವಚನ ಸ್ವೀಕರಿಸಿದರು.

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಕಾಂಗ್ರೆಸ್
ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್, ದಿಲೀಪ್ ವಾಲ್ಸೆ ಪಾಟೀಲ್, ಧನಂಜಯ್ ಮುಂಡೆ, ವಿಜಯ್ ವಡೆತ್ತಿವಾರ್ ಮುಂತಾದವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಉದ್ಧವ್
ಠಾಕ್ರೆ ನೇತೃತ್ವದ ಶಿವಸೇನಾ- ಎನ್ ಸಿಪಿ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರದ  ಸಚಿವ ಸಂಪುಟಕ್ಕೆ ಈದಿನ  ೩೬ ಶಾಸಕರು ಸಚಿವರಾಗಿ ಸೇರ್ಪಡೆಯಾದರು. (೨೬ ಸಂಪುಟ ದರ್ಜೆ ಮತ್ತು ೧೦ ಮಂದಿ ರಾಜ್ಯ ಸಚಿವರು)

ನವೆಂಬರ್ ನಲ್ಲಿ ನಡೆದ ಧಿಡೀರ್ ರಾಜಕೀಯ ಬೆಳವಣಿಗೆಯಲ್ಲಿ ಅಜಿತ್ ಪವಾರ್ ಬಿಜೆಪಿ ಜೊತೆ ಕೈಜೋಡಿಸಿ ಉಪಮುಖ್ಯಮಂತ್ರಿಯಾಗಿದ್ದರು. ಆದರೆ ಎನ್ ಸಿಪಿ ಬೆಂಬಲ ದೊರೆಯದ ಹಿನ್ನಲೆ ಸರ್ಕಾರ ಪತನಗೊಂಡಿತ್ತು.

No comments:

Advertisement