Monday, December 30, 2019

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುತ್ತಿರುವವರು ದಲಿತ ವಿರೋಧಿಗಳು: ಜೆ.ಪಿ. ನಡ್ಡಾ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುತ್ತಿರುವವರು ದಲಿತ ವಿರೋಧಿಗಳು: ಜೆ.ಪಿ. ನಡ್ಡಾ
ನವದೆಹಲಿ: ತಿದ್ದುಪಡಿಗೊಂಡ ಪೌರತ್ವ ಕಾಯ್ದೆಯನ್ನು ವಿರೋಧಿಸುತ್ತಿರುವ ವಿರೋಧ ಪಕ್ಷಗಳುದಲಿತ ವಿರೋಧಿಗಳುಎಂದು 2019 ಡಿಸೆಂಬರ್ 29ರ ಭಾನುವಾರ ಟೀಕಿಸಿದ ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಅವರುಪೌರತ್ವ ಕಾಯ್ದೆಯಿಂದ ಅನುಕೂಲ ಪಡೆಯಲಿರುವ ಶೇಕಡಾ ೭೦-೮೦ ಮಂದಿ ದಲಿತ ಸಮುದಾಯದವರುಎಂದು ಹೇಳಿದರು.

ಕಾಯ್ದೆಯನ್ನು ವಿರೋಧಿಸುತ್ತಿರುವ ದಲಿತ ನಾಯಕರನ್ನು ಬಯಲಿಗೆಳೆಯಬೇಕುಎಂದು ನುಡಿದ ನಡ್ಡಾ, ’ಪ್ರಧಾನಿ ನರೇಂದ್ರ ಮೋದಿ ಅವರು ದಲಿತ ಸಮುದಾಯದ ಅತ್ಯಂತ ದೊಡ್ಡ ಸಂರಕ್ಷಕಎಂದು ಪ್ರತಿಪಾದಿಸಿದರು.

ದಲಿತ
ಸಮೂಹವೊಂದು ಸಂಘಟಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ನಡ್ಡಾ ಅವರುಕಾಂಗ್ರೆಸ್ ಪಕ್ಷವು ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಅಲ್ಪಸಂಖ್ಯಾತರನ್ನು ದಾರಿತಪ್ಪಿಸುತ್ತಿರುವ ಅಭಿಯಾನದ ನೇತೃತ್ವವನ್ನು ಕಾಂಗ್ರೆಸ್ ವಹಿಸಿದೆಎಂದು ಆಪಾದಿಸಿದರು.

ನೂತನ ಕಾಯ್ದೆಯು ನೆರೆಯ ರಾಷ್ಟ್ರಗಳ ಅಲ್ಪಸಂಖ್ಯತರಿಗೆ ಪೌರತ್ವ ನೀಡುವುದಕ್ಕೆ ಸಂಬಂಧಿಸಿದ್ದೇ ಹೊರತು ಯಾವುದೇ ವ್ಯಕ್ತಿಯ ಪೌರತ್ವ ಕಿತ್ತುಕೊಳ್ಳುವುದಕ್ಕೆ ಸಂಬಂಧಿಸಿದ್ದಲ್ಲ ಎಂದು ನಡ್ಡಾ ನುಡಿದರು.

ಪಾಕಿಸ್ತಾನ, ಆಫ್ಘಾನಿಸ್ಥಾನ ಮತ್ತು ಬಾಂಗ್ಲಾದೇಶದಿಂದ ಧಾರ್ಮಿಕ ಕಿರುಕುಳಕ್ಕೆ ಗುರಿಯಾಗಿ ಭಾರತಕ್ಕೆ ವಲಸೆ ಬಂದಿರುವ ನಿರಾಶ್ರಿತರಿಗೆ ಪೌರತ್ವ ಒದಗಿಸಲು ಧರ್ಮವನ್ನು ಮಾನದಂಡವನ್ನಾಗಿ ಮಾಡಿದ್ದಕ್ಕಾಗಿ ಬಹುತೇಕ ವಿರೋಧ ಪಕ್ಷಗಳು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಿದ್ದು, ರಾಷ್ಟ್ರಗಳಲ್ಲಿ ತಮ್ಮ ಹಕ್ಕುಗಳಿಂದ ವಂಚಿತರಾಗಿ ದಮನಕ್ಕೆ ಒಳಗಾಗಿರುವ ಜನರಿಗೆನ್ಯಾಯಒದಗಿಸುವ ಕೆಲಸವನ್ನು ತಿದ್ದುಪಡಿಗೊಂಡಿರುವ ಕಾಯ್ದೆ ಮಾಡಿದೆ ಎಂದು ನಡ್ಡಾ ಹೇಳಿದರು.

ಕಾಂಗ್ರೆಸ್ ಬಿಟ್ಟು ಹೋಗಿರುವ ಗಾಯಗಳನ್ನು ಗುಣಪಡಿಸುವಮುಲಾಮುಆಗಿ ಕಾಯ್ದೆ ಕೆಲಸ ಮಾಡುತ್ತದೆ ಎಂದು ಬಿಜೆಪಿ ನಾಯಕ ಹೇಳಿದರು.

ತಿದ್ದುಪಡಿಗೊಂಡಿರುವ
ಕಾಯ್ದೆಯ ಫಲಾನುಭವಿಗಳ ಪಟ್ಟಿಯಲ್ಲಿನ ಜನರ ವಿವಿಧ ಜಾತಿಗಳನ್ನು ಉಲ್ಲೇಖಿಸಿದ ನಡ್ಡಾ, ಪೈಕಿ ಶೇಕಡಾ ೭೦ರಿಂದ ೭೦ರಷ್ಟು ಮಂದಿ ದಲಿತರು ಎಂದು ವಿವರಿಸಿದರು.

ಕಾಯ್ದೆಯನ್ನು ವಿರೋಧಿಸುತ್ತಿರುವವರು ದಲಿತ-ವಿರೋಧಿಗಳು. ನಾವು ಇದನ್ನು ಅರ್ಥ ಮಾಡಿಕೊಳ್ಳಬೇಕುಎಂದು ಹೇಳಿದ ಬಿಜೆಪಿ ನಾಯಕ ಸಮುದಾಯದ ಸದಸ್ಯರನ್ನು ಸಂಪರ್ಕಿಸಿ ವಿಚಾರವನ್ನು ತಿಳಿಸುವಂತೆ ಸೂಚಿಸಿದರು.

ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳುವೋಟ್ ಬ್ಯಾಂಕ್ ಮತ್ತು ತುಷ್ಟೀಕರಣ ರಾಜಕೀಯವನ್ನು ಬಳಸುತ್ತಿರುವುದಕ್ಕಾಗಿ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳನ್ನು ದೂಷಿಸಿದ ನಡ್ಡಾ, ಇವರು ದೇಶಕ್ಕಿಂತ ಮುಂಚಿತವಾಗಿ ವೋಟುಗಳನ್ನು ಗಮನಿಸುತ್ತಾರೆ ಎಂದು ಟೀಕಿಸಿದರು.

ನಮ್ಮ ವಿರೋಧಿಗಳು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಮೊದಲು ಸಂಸತ್ತಿನಲ್ಲಿ ವಿರೋಧಿಸಿದರು ಈಗ ಬೇರೊಂದು ಮಾರ್ಗದಲ್ಲಿ ವಿರೋಧಿಸುತ್ತಿದ್ದಾರೆ. ಸಾರ್ವಜನಿಕರನ್ನು ದಾರಿತಪ್ಪಿಸಲಾಗುತ್ತಿದೆ. ಭಾರತದ ವಿಭಜನೆಯಾದಾಗ ಅದರ ಹಿಂದೆ ಕಾಂಗ್ರೆಸ್ ಇತ್ತು ಮತ್ತು ಧರ್ಮವು ವಿಭಜನೆಗೆ ಆಧಾರವಾಗಿತ್ತು. ಕೆಲವು ಹಿಂದುಗಳು ಅಲ್ಲಿಗೆ ಹೋದರೆ ಮುಸ್ಲಿಮರು ಇಲ್ಲಿಗೆ ಬಂದರುಎಂದು ನಡ್ಡಾ ಅವರು ಇಲ್ಲಿನ ತಲ್ಕಟೋರಾ  ಕ್ರೀಡಾಂಗಣದಲ್ಲಿ ಅಟಲ್ ಬಿಹಾರಿ ವಾಜಪೇಯಿ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು.

ಇಲ್ಲಿ ವಾಸವಾಗಿರುವ ಅವರ ಜನರ ಕಾಳಜಿಯನ್ನು ಭಾರತ ನೋಡಿಕೊಳ್ಳುವುದು ಎಂಬುದಾಗಿ ನೆಹರು ಅವರು ಒಪ್ಪಂದಕ್ಕೆ ಸಹಿ ಮಾಡಿದರು. ಅದೇ ರೀತಿ ಅಲ್ಪಸಂಖ್ಯಾತರ ಕಾಳಜಿ ವಹಿಸುವುದಾಗಿ ದೇಶ ಒಪ್ಪಂದಕ್ಕೆ ಸಹಿ ಮಾಡಿತು.’

ಜಾತ್ಯತೀತ
ರಾಷ್ಟ್ರವಾದ ಭಾರತ ತನ್ನ ಮಾತನ್ನು ಉಳಿಸಿಕೊಂಡಿತು. ಆದರೆ ಇಸ್ಲಾಮಿಕ್ ರಾಷ್ಟ್ರ ಎಂಬುದಾಗಿ ಘೋಷಿಸಿಕೊಂಡ ಪಾಕಿಸ್ತಾನ ಮತ್ತು ಬಳಿಕ ಬಾಂಗ್ಲಾದೇಶವಾದ ಪೂರ್ವ ಪಾಕಿಸ್ತಾನ ಮಾತು ಉಳಿಸಿಕೊಳ್ಳಲಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆಯ ಮೂಲಕ ನಾವು ಅಲ್ಲಿ ದೌರ್ಜನ್ಯಕ್ಕೆ ಒಳಗಾಗಿರುವ ನಮ್ಮ ಹಿಂದು, ಸಿಖ್, ಕ್ರೈಸ್ತ ಮತ್ತು ಇತರ ಸಹೋದರರನ್ನು ತಮ್ಮದೇ ದೇಶದ ಭಾಗವಾಗುವಂತೆ ಮಾಡಿದ್ದೇವೆಎಂದು ನಡ್ಡಾ ಹೇಳಿದರು.

ಭಾರತಕ್ಕೆ ನಿರಾಶ್ರಿತರಾಗಿ ಬಂದಿರುವ ಮಂದಿಯಲ್ಲಿ ಬಹುತೇಕರು ದಲಿತರು ಮತ್ತು ಹರಿಜನರಾಗಿದ್ದಾರೆ ಎಂದು ನುಡಿದ ನಡ್ಡಾ  ದಲಿತ ನಾಯಕರೇ ನೂತನ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆಎಂದು ಟೀಕಿಸಿದರು.

No comments:

Advertisement