ಪೌರತ್ವ
ತಿದ್ದುಪಡಿ ಕಾಯ್ದೆ (ಸಿಎಎ) ವಾಪಸಿಗೆ ಸೂಚಿಸಿ
ರಾಷ್ಟ್ರಪತಿಗೆ
ಸೋನಿಯಾ ಗಾಂಧಿ ನೇತೃತ್ವಲ್ಲಿ
೧೨ ವಿಪಕ್ಷಗಳ ಮನವಿ
೧೨ ವಿಪಕ್ಷಗಳ ಮನವಿ
ನವದೆಹಲಿ: ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದೇಶದ ವಿವಿಧೆಗಳಲ್ಲಿ ಹಿಂಸಾತ್ಮಕಗಲಭೆಗಳು ಮುಂದುವರೆದಿರುವಂತೆಯೇ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ೧೨ ವಿರೋಧ ಪಕ್ಷಗಳ
ನಿಯೋಗವೊಂದು 2019 ಡಿಸೆಂಬರ್ 17ರ ಮಂಗಳವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯೆಯನ್ನ್ದು ಹಿಂತೆಗೆದುಕೊಳ್ಳಲು ಸರ್ಕಾರಕ್ಕೆ ಸೂಚಿಸುವಂತೆ ಒತ್ತಾಯಿಸಿತು.
ರಾಷ್ಟ್ರಪತಿಯವನ್ನು
ಭೇಟಿ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಸೋನಿಯಾ ಗಾಂಧಿ ’ಸರ್ಕಾರವು ಜನರ ದನಿಗಳನ್ನು ದಮನಿಸಿ, ಅವರಿಗೆ ಸ್ವೀಕಾರಾರ್ಹವಲ್ಲದ ಶಾಸನಗಳನ್ನು ತರುತ್ತಿದೆ ಎಂದು ಆಪಾದಿಸಿದರು.
ಪೌರತ್ವ
ತಿದ್ದುಪಡಿ ಕಾಯ್ದೆಯ ವಿರುದ್ಧ ಇಡೀ ರಾಷ್ಟ್ರವೇ ಚಳವಳಿ ನಡೆಸುತ್ತಿದೆ. ವಿರೋಧ
ಪಕ್ಷಗಳು ಈಶಾನ್ಯ ಭಾರತ ಮತ್ತು ದೆಹಲಿಯಲ್ಲಿ ಪ್ರತಿಭಟನಕಾರರ ಮೇಲೆ ಪೊಲೀಸರು ನಡೆಸಿರುವ ದಮನ ಕಾರ್ಯಾಚರಣೆ ಬಗ್ಗೆ ಕಳವಳ ವ್ಯಕ್ತ ಪಡಿಸುತ್ತಿವೆ ಎಂದು ಅವರು ನುಡಿದರು.
ಮಂಗಳವಾರ
ಪೊಲೀಸರು ದೆಹಲಿಯ ಸೀಲಂಪುರ ಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟಿಸುತ್ತಿದ್ದ ಗುಂಪಿನ ಮೇಲೆ ಆಶ್ರುವಾಯು ಶೆಲ್ ಪ್ರಯೋಗಿಸಿದ್ದಾರೆ. ಒಂದು ದಿನ ಹಿಂದಷ್ಟೇ ದಕ್ಷಿಣ ದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಆವರಣದಲ್ಲಿ
ಮೆರವಣಿಗೆಕಾರರ ಮೇಲೆ ಪೊಲೀಸರು ಬಲ ಪ್ರಯೋಗಿಸಿದ್ದರು ಎಂದು ವಿಪಕ್ಷ ನಿಯೋಗ ಹೇಳಿತು.
ಮೆರವಣಿಗೆಕಾರರ ಮೇಲೆ ಪೊಲೀಸರು ಬಲ ಪ್ರಯೋಗಿಸಿದ್ದರು ಎಂದು ವಿಪಕ್ಷ ನಿಯೋಗ ಹೇಳಿತು.
ಪರಿಸ್ಥಿತಿ
ಅತ್ಯಂತ ಗಂಭೀರವಾಗಿದೆ. ಪ್ರಜಾತಾಂತ್ರಿಕ
ಹಕ್ಕು ಚಲಾಯಿಸುತ್ತಿರುವ ಶಾಂತಿಯುತ ಪ್ರತಿಭಟನಕಾರರ ಜೊತೆಗೆ ಪೊಲೀಸರು ವ್ಯವಹರಿಸುತ್ತಿರುವ ರೀತಿ ನಮಗೆ ಕಳವಳ ಉಂಟು ಮಾಡಿದೆ ಎಂದು ಸೋನಿಯಾ ಗಾಂಧಿ ಮತ್ತು ಇತರ ವಿರೋಧಿ ನಾಯಕರು ಹೇಳಿದರು.
ಜಾಮಿಯಾ
ಮಿಲ್ಲಿಯಾ ಇಸ್ಲಾಮಿಯಾದ ಮಹಿಳಾ ವಸತಿಗೃಹಗಳಿಗೆ ಪೊಲೀಸ್ ಸಿಬ್ಬಂದಿ ನುಗ್ಗಿದರು ಮತ್ತು ವಿದ್ಯಾರ್ಥಿನಿಯರನ್ನು ಯಾವುದೇ ಕರುಣೆಯೂ ಇಲ್ಲದೆ ಥಳಿಸಿದರು ಎಂದು ಸೋನಿಯಾ ನುಡಿದರು.
’ಪೊಲೀಸರು ಮಹಿಳಾ ವಸತಿ ಗೃಹಕ್ಕೆ ಅತಿಕ್ರಮ ಪ್ರವೇಶ ಮಾಡಿ ವಿದ್ಯಾರ್ಥಿನಿಯರನ್ನು ಹೊರಕ್ಕೆ ಎಳೆದು ಥಳಿಸಿದ್ದಕ್ಕೆ ದೆಹಲಿ ಉದಾಹರಣೆಯಾಗಿದೆ. ಅವರು ವಿದ್ಯಾರ್ಥಿಗಳನ್ನು ಕರುಣೆಯಿಲ್ಲದೆ ಹೊಡೆದಿದ್ದಾರೆ. ಜನರ ದನಿಗಳನ್ನು ದಮನಿಸುವ ವಿಚಾರ ಬಂದಾಗ ಮೋದಿ ಸರ್ಕಾರಕ್ಕೆ ಜನರ ಬಗ್ಗೆ ಯಾವ ಅನುಕಂಪವೂ ಇರುವುದಿಲ್ಲ ಎಂಬುದನ್ನು ನೀವು ಕಂಡಿದ್ದೀರಿ ಎಂದು ಕಾಂಗ್ರೆಸ್ ನಾಯಕಿ ನುಡಿದರು.
’ಪೊಲೀಸರು ಮಹಿಳಾ ವಸತಿ ಗೃಹಕ್ಕೆ ಅತಿಕ್ರಮ ಪ್ರವೇಶ ಮಾಡಿ ವಿದ್ಯಾರ್ಥಿನಿಯರನ್ನು ಹೊರಕ್ಕೆ ಎಳೆದು ಥಳಿಸಿದ್ದಕ್ಕೆ ದೆಹಲಿ ಉದಾಹರಣೆಯಾಗಿದೆ. ಅವರು ವಿದ್ಯಾರ್ಥಿಗಳನ್ನು ಕರುಣೆಯಿಲ್ಲದೆ ಹೊಡೆದಿದ್ದಾರೆ. ಜನರ ದನಿಗಳನ್ನು ದಮನಿಸುವ ವಿಚಾರ ಬಂದಾಗ ಮೋದಿ ಸರ್ಕಾರಕ್ಕೆ ಜನರ ಬಗ್ಗೆ ಯಾವ ಅನುಕಂಪವೂ ಇರುವುದಿಲ್ಲ ಎಂಬುದನ್ನು ನೀವು ಕಂಡಿದ್ದೀರಿ ಎಂದು ಕಾಂಗ್ರೆಸ್ ನಾಯಕಿ ನುಡಿದರು.
ಸೋನಿಯಾ
ಗಾಂಧಿ ಹೊರತಾಗಿ ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಒ’ಬ್ರಿಯನ್, ದ್ರಾವಿಡ ಮುನ್ನೇತ್ರ ಕಳಗಂನ ಟಿಆರ್ ಬಾಲು, ಸಮಾಜವಾದಿ ಪಕ್ಷದ ರಾಮಗೋಪಾಲ್ ಯಾದವ್ ಮತ್ತು ಜಾವೇದ್ ಅಲಿ, ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾಕ್ಸ್ವಾದಿ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಸಿಪಿಐಯ ಡಿ ರಾಜಾ, ರಾಷ್ಟ್ರೀಯ
ಜನತಾದಳದ ಮನೋಜ್
ಝಾ, ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್‌ನ ಇಟಿ ಮೊಹಮ್ಮದ್
ಬಶೀರ್, ನ್ಯಾಷನಲ್ ಕಾನ್ಫರೆನ್ಸಿನ ಹುಸೈನ್ ಮಸೂದಿ ಮತ್ತು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್‌ನ ಸಿರಾಜುದ್ದೀನ್ ಅಜ್ಮಲ್
ನಿಯೋಗದಲ್ಲಿದ್ದರು.
ಲೋಕತಾಂತ್ರಿಕ
ಜನತಾದಳದ ಅಧ್ಯಕ್ಷ ಶರದ್ ಯಾದವ್ ಮತ್ತು ರೆವಲ್ಯೂಷನರಿ ಸೋಶಿಯಲಿಸ್ಟ್ ಪಕ್ಷದ ಶತ್ರುಜೀತ್ ಸಿಂಗ್ ಅವರು ಮನವಿ ಪತ್ರಕ್ಕೆ ಸಹಿಮಾಡಿದ್ದ ಇನ್ನಿಬ್ಬರು ನಾಯಕರು.
ಸೋನಿಯಾ
ಗಾಂಧಿ ಅವರ ಸಹೋದ್ಯೋಗಿಗಳಾದ ಎಕೆ ಆಂಟನಿ, ಅಹ್ಮದ್ ಪಟೇಲ್, ಗುಲಾಂ ನಬಿ ಆಜಾದ್, ಕಪಿಲ್ ಸಿಬಲ್, ಆನಂದ ಶರ್ಮ ಮತ್ತು ಜೈರಾಮ್ ರಮೇಶ್ ಅವರೂ ನಿಯೋಗದಲ್ಲಿ ಇದ್ದರು. ನಾಯಕರು ಸಂಸತ್ ಭವನ ಸಮುಚ್ಚಯದ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಒಟ್ಟು ಸೇರಿ ಅಲ್ಲಿಂದ ರಾಷ್ಟ್ರಪತಿ ಭವನಕ್ಕೆ ತೆರಳಿದರು.
‘ರಾಷ್ಟ್ರದ
ಮುಖ್ಯಸ್ಥರಾಗಿ, ನೀವು ಸಂವಿಧಾನದ ರಕ್ಷಕರಾಗಿದ್ದೀರಿ. ನಾವು, ಈ ಕೆಳಗೆ ಸಹಿ
ಮಾಡಿದವರು ಸಂವಿಧಾನದ ಉಲ್ಲಂಘನೆಯಾಗಂತೆ ರಕ್ಷಿಸಬೇಕು
ಎಂದು ನಿಮಗೆ ಮನವಿ ಮಾಡುತ್ತಿದ್ದೇವೆ. ಈ ವಿಷಯದಲ್ಲಿ ಮಧ್ಯಪ್ರವೇಶ
ಮಾಡಿ ತತ್ ಕ್ಷಣವೇ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹಿಂತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಸಲಹೆ ಮಾಡಬೇಕು ಎಂದು ನಾವು ನಿಮ್ಮನ್ನು ಒತ್ತಾಯಿಸುತ್ತಿದ್ದೇವೆ’ ಎಂದು
ರಾಷ್ಟ್ರಪತಿಯವರಿಗೆ ಸಲ್ಲಿಸಿದ ಮನವಿಪತ್ರದಲ್ಲಿ ವಿರೋಧ ಪಕ್ಷಗಳು ತಿಳಿಸಿವೆ.
ಪೌರತ್ವ
ಮಸೂದೆ: ದಿನದ ಪ್ರಮುಖ ಘಟನಾವಳಿಗಳು
·
ದೆಹಲಿಯ
ಸೀಲಂಪುರ ಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧೀ ಪ್ರತಿಭಟನಕಾರರ ಮೇಲೆ ಪೊಲೀಸರಿಂದ ಆಶ್ರುವಾಯು ಶೆಲ್ ಪ್ರಯೋಗ. ಮಧ್ಯಾಹ್ನ ೨ ಗಂಟೆ ವೇಳಗೆ
ಜಮಾಯಿಸಿದ ೧೦೦೦ ಪ್ರತಿಭಟನಕಾರರು. ಪೊಲೀಸರತ್ತ ಕಲ್ಲು, ಗಾಜಿನ ಬಾಟಲಿ ತೂರಾಟ. ಪ್ರತಿಯಾಗಿ ಪೊಲೀಸರಿಂದ ಆಶ್ರುವಾಯು ಬಳಕೆ.
·
ಜಾಮಿಯಾ,
ಎಎಂಯು ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ವಿಚಾರಣೆಗೆ ಸುಪ್ರೀಂಕೋರ್ಟ್ ನಕಾರ. ಸಂಬಂಧಪಟ್ಟ ಹೈಕೋರ್ಟ್‌ಗಳು ಈ ಬಗ್ಗೆ ಗಮನಿಸುತ್ತವೆ
ಎಂದು ಹೇಳಿ ಅರ್ಜಿಗಳನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್.
·
ಪೌರತ್ವ
ತಿದ್ದುಪಡಿ ಕಾಯ್ದೆಯಲ್ಲಿ ಅಲ್ಪಸಂಖ್ಯಾತರ ವಿರುದ್ಧ ಏನೂ ಇಲ್ಲ: ನಿರಾಶ್ರಿತರು ಭಾರತೀಯರಾಗಿ ಗೌರವದ ಜೀವನ ನಡೆಸುತ್ತಾರೆ. ನೆಹರೂ -ಲಿಯಾಖತ್ ಒಪ್ಪಂದದ ವಿಧಿಗಳಲ್ಲಿ ಇದ್ದ ಅಂಶವನ್ನೇ ಕಾಯ್ದೆ ಮೂಲಕ ಜಾರಿಗೊಳಿಸಲಾಗಿದೆ- ಗೃಹಸಚಿವ ಅಮಿತ್ ಶಾ ಪುನರುಚ್ಚಾರ.
·
ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಪಾಕಿಸ್ತಾನ ಅಂಗೀಕರಿಸಿದ ನಿರ್ಣಯಕ್ಕೆ ಭಾರತದ ವಿದೇಶಾಂಗ
ವ್ಯವಹಾರಗಳ ಸಚಿವಾಲಯದ ತಿರಸ್ಕಾರ.
·
ಚಳವಳಿ
ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದ ದೆಹಲಿ ಮೆಟ್ರೋ ನಿಲ್ದಾಣಗಳು ಪುನಾರಂಭ
·
ಭದ್ರತೆ
ಒದಗಿಸುವಂತೆ ಅಲಿಘಡ ಮುಸ್ಲಿಂ ವಿಶ್ವ ವಿದ್ಯಾಲಯ (ಎಎಂಯು) ಮನವಿ.
·
ಪೌರತ್ವ
ತಿದ್ದುಪಡಿ ಕಾಯ್ದೆಯನ್ನು ಪ್ರತಿಭಟಿಸಿದ್ದಕ್ಕಾಗಿ ಬಂಧಿಸಲ್ಪಟ್ಟ ೧೦ ಮಂದಿಗೆ ನ್ಯಾಯಾಂಗ
ಬಂಧನ.
No comments:
Post a Comment