Thursday, December 26, 2019

ಅಟಲ್ ಭೂಜಲ ಯೋಜನೆಗೆ ಪ್ರಧಾನಿ ಮೋದಿ ಚಾಲನೆ

ಅಟಲ್ ಭೂಜಲ ಯೋಜನೆಗೆ ಪ್ರಧಾನಿ ಮೋದಿ ಚಾಲನೆ
೧೫ ಕೋಟಿ ಗ್ರಾಮೀಣ ಮನೆಗಳಿಗೆ ವರ್ಷಗಳಲ್ಲಿ ಪೈಪ್ ನೀರು
ನವದಹಲಿ: ಅಂತರ್ಜಲ ರಕ್ಷಣೆ ಹಾಗೂ ಉತ್ತಮ ನಿರ್ವಹಣೆ ಮತ್ತು ೧೫ ಕೋಟಿ ಗ್ರಾಮೀಣ ಮನೆಗಳಿಗೆ ಕೊಳವೆ ಮೂಲಕ ನೀರು ಒದಗಿಸುವ ಸಲುವಾಗಿ ಸುಮಾರು ೬೦೦೦ ಕೋಟಿ ರೂಪಾಯಿ ವೆಚ್ಚದ ಅಟಲ್ ಭೂಜಲ ಯೋಜನೆಗೆ ಪ್ರಧಾನಿ ನರೇಂದ್ರಮೋದಿ ಅವರು  2019 ಡಿಸೆಂಬರ್ 26ರ ಬುಧವಾರ ವಿಧ್ಯುಕ್ತ ಚಾಲನೆ ನೀಡಿದರು.

ಈಗಾಗಲೇ
ಕೇಂದ್ರ ಸಂಪುಟವು ರಾಷ್ಟ್ರೀಯ ಅಟಲ್ ಭೂ ಜಲ ಯೋಜನೆಗೆ ಅನುಮತಿ ನೀಡಿತ್ತು. ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ೯೫ನೇ ಜನ್ಮ ದಿನಾಚರಣೆ ಅಂಗವಾಗಿ ಯೋಜನೆಗೆ ಪ್ರಧಾನಿ ಮೋದಿ ಚಾಲನೆ ನೀಡಿದರು.

೨೦೨೦ರಿಂದ
೨೦೨೫ರೊಳಗೆ ಮಹತ್ವದ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಕರ್ನಾಟಕ, ಗುಜರಾತ್, ಹರಿಯಣ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಉತ್ತರಪ್ರದೇಶ ಸೇರಿದಂತೆ ಏಳು ರಾಜ್ಯಗಳ ಕೆಲವು ಆದ್ಯತೆಯ ಪ್ರದೇಶಗಳಲ್ಲಿ ಅಂತರ್ಜಲವನ್ನು ಹೆಚ್ಚಿಸುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ ಎಂದು ಪ್ರಧಾನಿ ಹೇಳಿದರು.

ಅಂತರ್ಜಲ ರಕ್ಷಿಸುವ ಯೋಜನೆಯಿಂದ ಏಳು ರಾಜ್ಯಗಳ ೭೮ ಜಿಲ್ಲೆಯ ಸುಮಾರು ,೩೫೦ ಗ್ರಾಮ ಪಂಚಾಯ್ತಿಗಳಿಗೆ ಲಾಭವಾಗುವ ನಿರೀಕ್ಷೆ ಇದೆ.

ಕೃಷಿ ಕ್ಷೇತ್ರ ಸೇರಿದಂತೆ ವಿವಿಧ ರಂಗಗಳಲ್ಲಿ ನೀರಿನ ಪೋಲು ತಡೆಯಲು ನಾವು ತಂತ್ರಜ್ಞಾನವನ್ನು ಬಳಸುವ ಅಗತ್ಯವಿದೆ ಎಂದು ಪಧಾನಿ ಹೇಳಿದರು.

ವಾಜಪೇಯಿ ಅವರ ೯೫ನೇ ಜನ್ಮದಿನದ ಅಂಗವಾಗಿ ಹಿಮಾಚಲ ಪ್ರದೇಶದ ರೋಹ್ತಂಗ್ ಪ್ಯಾಸೇಜ್ ಮಾರ್ಗಕ್ಕೆಅಟಲ್ ಸುರಂಗಎಂಬುದಾಗಿ ಮೋದಿ ಅವರು ನಾಮಕರಣ ಮಾಡಿದರು.

ಕಡಿಮೆ ನೀರು ಬಳಕೆ ಮಾಡುವಂತಹ ಬೆಳೆಗಳನ್ನು ಬೆಳೆಯುವಂತೆ ರೈತರನ್ನು ಆಗ್ರಹಿಸಿದ ಪ್ರಧಾನಿ ದೈನಂದಿನ ಮನೆ ಬಳಕೆಯಲ್ಲಿ ಅಮೂಲ್ಯವಾದ ನೈಸರ್ಗಿಕ ಸಂಪನ್ಮೂಲವಾಗಿರುವ ನೀರನ್ನು ವ್ಯರ್ಥ ಮಾಡಬೇಡಿ ಎಂದು ಜನತೆಗೆ ಸಲಹೆ ಮಾಡಿದರು.

ವಿವಿಧ ಅಗತ್ಯಗಳಿಗೆ ಕಡಿಮೆ ನೀರು ಬಳಕೆ ಖಾತರಿ ನೀಡುವಂತಹ ತಂತ್ರಜ್ಞಾನಗಳನ್ನು ಕಂಡು ಹಿಡಿಯುವಂತೆ ಪ್ರಧಾನಿ ನವೋದ್ಯಮಗಳಿಗೆ (ಸ್ಟಾರ್ಟ್ಪ್) ಕರೆ ನೀಡಿದರು.

ಪ್ರಸ್ತುತ ೧೮ ಕೋಟಿ ಗ್ರಾಮೀಣ ಮನೆಗಳ ಪೈಕಿ ಕೇವಲ ಕೋಟಿ ಮನೆಗಳು ಕೊಳವೆ ಮಾರ್ಗದ ಮೂಲಕ ಬರುವ ಶುದ್ಧ ಜಲವನ್ನು ಬಳಸುತ್ತಿವೆ ಎಂದು ಮೋದಿ ಹೇಳಿದರು.

ಅಟಲ್ ಭೂಜಲ ಯೋಜನೆಯು ಉಳಿದ ೧೫ ಕೋಟಿ ಗಾಮೀಣ ಮನೆಗಳಿಗೆ ಮುಂದಿನ ವರ್ಷಗಳಲ್ಲಿ ಕೊಳವೆ ಮಾರ್ಗದ ಮೂಲಕ ನೀರು ಒದಗಿಸುವ ಯೋಜನೆಯಾಗಿದೆ ಎಂದು ಪ್ರಧಾನಿ ನುಡಿದರು.

No comments:

Advertisement