ರಾಹುಲ್
ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ
ಬಿಜೆಪಿ ದೂರು
ಬಿಜೆಪಿ ದೂರು
ನವದೆಹಲಿ: ಜಾರ್ಖಂಡ್ ಚುನಾವಣಾ ಪ್ರಚಾರ ಸಭೆಯಲ್ಲಿ ಗುರುವಾರ ಮಾಡಿರುವ ’ರೇಪ್ ಇನ್ ಇಂಡಿಯಾ’ ಹೇಳಿಕೆಗಾಗಿ ಕಾಂಗ್ರೆಸ್ ಸಂಸತ್ ಸದಸ್ಯ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಸಂಸತ್ ಸದಸ್ಯೆ ಸ್ಮೃತಿ ಇರಾನಿ ಅವರು 2019 ಡಿಸೆಂಬರ್ 13ರ ಶುಕ್ರವಾರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದರು.
‘ರಾಹುಲ್ ಗಾಂಧಿಯವರು ಅತ್ಯಾಚಾರವನ್ನು ರಾಜಕೀಯ ಸಾಧನವಾಗಿ ಮಾಡುವ ದಾರ್ಷ್ಟ್ಯ ಮೆರೆದಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾವು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೇವೆ’ ಎಂದು ಇರಾನಿ ಇಲ್ಲಿ ಹೇಳಿದರು.
‘ರಾಹುಲ್ ಗಾಂಧಿಯವರು ಅತ್ಯಾಚಾರವನ್ನು ರಾಜಕೀಯ ಸಾಧನವಾಗಿ ಮಾಡುವ ದಾರ್ಷ್ಟ್ಯ ಮೆರೆದಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾವು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೇವೆ’ ಎಂದು ಇರಾನಿ ಇಲ್ಲಿ ಹೇಳಿದರು.
ರಾಹುಲ್
ಗಾಂಧಿ ಹೇಳಿಕೆ ವಿರುದ್ಧ ಸಂಸತ್ತಿನಲ್ಲಿ ಬಿಜೆಪಿ ಸದಸ್ಯರು ಭಾರೀ ಪ್ರತಿಭಟನೆ ನಡೆಸಿದ ಕೆಲವು ಗಂಟೆಗಳ ಬಳಿಕ ಚುನಾವಣಾ ಆಯೋಗಕ್ಕೆ ಸ್ಮೃತಿ ಇರಾನಿ ದೂರು ನೀಡಿದರು.
‘ಇದೇ
ಮೊದಲ ಬಾರಿಗೆ ರಾಜಕೀಯ ನಾಯಕರೊಬ್ಬರು ’ರೇಪ್’ ನ್ನು (ಅತ್ಯಾಚಾರ) ರಾಜಕೀಯ ಲೇವಡಿಗೆ ಬಳಸಿದ್ದಾರೆ. ರಾಜಕೀಯ ಅಸ್ತ್ರವಾಗಿ ’ಅತ್ಯಾಚಾರ’ವನ್ನು (ರೇಪ್) ಬಳಸುವ ರಾಜಕಾರಣಿಗಳನ್ನು ಅತ್ಯಂತ ಕಠಿಣ ಶಿಕ್ಷೆಯೊಂದಿಗೆ ಖಂಡಿಸುವ ಅಗತ್ಯವಿದೆ. ಎಲ್ಲ ಪುರುಷರು ಅತ್ಯಾಚಾರಿಗಳು (ರೇಪಿಸ್ಟ್) ಎಂದು ಅವರು ಹೇಳುತ್ತಾರೆ. ಜನರು ಸಿಟ್ಟಿಗೆದ್ದಿಲ್ಲವೇ? ಅವರು ಭಾರತದಲ್ಲಿ ಮಹಿಳೆಯರ ಮೇಲೆ ರೇಪ್ ಮಾಡಬೇಕು ಎಂದು ಹೇಳುತ್ತಾರೆ. ನಾವು ಮೇಕ್ ಇನ್ ಇಂಡಿಯಾ ಎಂದು ಹೇಳುತ್ತೇವೆ. ಅವರು ರೇಪ್ ಇನ್ ಇಂಡಿಯಾ ಎಂದು ಹೇಳುತ್ತಾರೆ. ಇದು ಸರಿಯೇ ಎಂದು ನಾನು ಜನರನ್ನು ಕೇಳಬಯಸುತ್ತೇನೆ. ಅವರಿಗೆ ಶಿಕ್ಷೆ ವಿಧಿಸುವ ಬಗ್ಗೆ ತೀರ್ಮಾನಿಸಲು ನಾನು ಇದನ್ನು ಜನರಿಗೆ ಬಿಟ್ಟು ಬಿಡುತ್ತೇನೆ’ ಎಂದು
ಇರಾನಿ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.
No comments:
Post a Comment